Tag: Lal Singh Chadda

  • 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಮುಂಬೈ: ಪ್ರೇಮಿಗಳ ದಿನದಂದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್ ಮಾಡುವುದಾಗಿ ಎಂದು ಅಮೀರ್ ಖಾನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

    ಅಮೀರ್ ಖಾನ್ ಪ್ರೊಡಕ್ಷನ್ಸ್ ಇನ್‍ಸ್ಟಾಗ್ರಾಮ್ ನಲ್ಲಿ, ಅಕ್ಟೋಬರ್ 22 ರಿಂದ ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಆಡಳಿತವು ಅವಕಾಶ ನೀಡಿದೆ. ಈ ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ನಮ್ಮ ಸಿನಿಮಾ ರಿಲೀಸ್ ಮಾಡಲು ವಿಳಂಬವಾಗಿದೆ. ನಮ್ಮ ‘ಲಾಲ್ ಸಿಂಗ್ ಚಡ್ಡಾ’ ಈ ಕ್ರಿಸ್‍ಮಸ್‍ನಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. 2022ರ ಫೆ.14 ರಂದು ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತೆ ಎಂದು ಬರೆದು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಬಾಕ್ಸ್ ಆಫೀಸ್‍ನಲ್ಲಿ ಬಿಗ್ ಫೈಟ್ – ಒಂದೇ ದಿನ ಸ್ಯಾಂಡಲ್‍ವುಡ್‍ನ 2 ಸಿನಿಮಾ ರಿಲೀಸ್

    ಅಮೀರ್ ಖಾನ್ ಪ್ರೊಡಕ್ಷನ್ಸ್ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ರಣವೀರ್ ಸಿಂಗ್ ಇನ್‍ಸ್ಟಾಗ್ರಾಮ್ ನಲ್ಲಿ, ’83’ ಸಿನಿಮಾ ಈ ಕ್ರಿಸ್‍ಮಸ್‍ನಲ್ಲಿ ಚಿತ್ರಮಂದಿರಕ್ಕೆ ಬರಲಿದೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಇವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

    ರಣವೀರ್ ನಟನೆಯ ’83’ ಸಿನಿಮಾ ಈ ಜೂನ್‍ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ತಡವಾಗಿತ್ತು. ಅದು ಅಲ್ಲದೇ ದೊಡ್ಡ ಬಾಲಿವುಡ್ ಎಷ್ಟೋ ಸಿನಿಮಾಗಳು ಓಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಬಿಡುಗಡೆಯಾಯಿತು. ಅದರಲ್ಲಿ ’83’ ಸಿನಿಮಾ ಸಹ ಒಂದಾಗಬೇಕಿತ್ತು. ಆದರೆ ಚಿತ್ರತಂಡ ಲಾಕ್‍ಡೌನ್ ನಂತರ ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ತಯಾರಕರು ಅಧಿಕೃತವಾಗಿ ಘೋಷಿಸಿದ್ದರು. ಇಂದು ಆ ಮಾತಿನಂತೆ ಬಿಡುಗಡೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಹೆಬ್ಬುಲಿ ಬೆಡಗಿ

     

    View this post on Instagram

     

    A post shared by Ranveer Singh (@ranveersingh)

    ’83’ ಸಿನಿಮಾಗೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳುತ್ತಿದ್ದು, ಕ್ರಿಕೆಟರ್ ಕಪಿಲ್ ದೇವ್ ದಂತ ಕಥೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದು, ಇದು 1983 ರ ಭಾರತದ ಐತಿಹಾಸಿಕ ವಿಶ್ವಕಪ್ ಗೆಲುವಿನ ಕಥೆಯನ್ನು ಆಧರಿಸಿದೆ. ಕಪಿಲ್ ದೇವ್ ಅವರ ಪತ್ನಿ ರೋಮಿ ಪಾತ್ರದಲ್ಲಿ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

  • ಅಮೀರ್‌ಗಾಗಿ ‘ಬಚ್ಚನ್ ಪಾಂಡೆ’ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್

    ಅಮೀರ್‌ಗಾಗಿ ‘ಬಚ್ಚನ್ ಪಾಂಡೆ’ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್

    ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ಆಳುತ್ತಿದ್ದ ಖಾನ್‍ಗಳಲ್ಲಿ ಅಮೀರ್ ಖಾನ್ ಕೂಡ ಒಬ್ಬರು. ಹಿಂದೆ ಯಾವುದೇ ಪ್ರಚಾರವಿಲ್ಲದಿದ್ದರೂ ಬಿಟೌನ್‍ನಲ್ಲಿ ಖಾನ್‍ಗಳ ಸಿನಿಮಾಗಳು ಓಡುತ್ತಿದ್ದವು. ಆದ್ರೆ ಈಗ ಬಿಟೌನ್‍ನಲ್ಲಿ ಖಾನ್‍ಗಳ ಹವಾ ಕೊಂಚ ಕಡಿಮೆಯಾಗಿದ್ದು, ಸಿನಿಮಾ ಯಶಸ್ಸಿಗಾಗಿ ಬೇರೆ ನಟರ ಸಹಾಯ ಕೇಳುವಂತಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅಮೀರ್ ಖಾನ್ ಮನವಿ ಮಾಡಿದಕ್ಕೆ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನೇ ಮುಂದೂಡಿದ್ದಾರೆ.

    ಹೌದು, ಇತ್ತೀಚೆಗೆ ಬಾಲಿವುಡ್‍ನಲ್ಲಿ ಹೆಚ್ಚಾಗುತ್ತಿರುವ ಸ್ಪರ್ಧೆಗೆ ಅಮೀರ್ ತಲೆಕೆಡಿಸಿಕೊಂಡಿದ್ದಾರೆ. ಹೊಸ ವಿಷಯ, ಕ್ರಿಯೇಟಿವ್ ಎಲಿಮೆಂಟ್ ಇರುವ ಸಿನಿಮಾಗಳು ಸದ್ಯ ಬಿಟೌನ್ ಅಂಗಳದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲೂ ಅಕ್ಷಯ್ ಕುಮಾರ್ ಅವರು ಆರಿಸಿಕೊಳ್ಳುತ್ತಿರುವ ಹೊಸ ಪಾತ್ರಗಳು, ಸಿನಿಮಾ ವಿಷಯ ಎಲ್ಲರ ಮನ ಗೆಲ್ಲುತ್ತಿದೆ. ಹೀಗಾಗಿ ಅಕ್ಷಯ್ ಅವರ ಬಳಿ ಅಮೀರ್ ಒಂದು ಮನವಿ ಮಾಡಿಕೊಂಡಿದ್ದರು. ಈ ವರ್ಷದ ಕ್ರಿಸ್ಮಸ್‍ನಲ್ಲಿ ಅಮೀರ್ ಖಾನ್‍ರ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ಮಾಡಲು ಸಿನಿಮಾ ತಂಡ ತಯಾರಿ ನಡೆಸುತ್ತಿದೆ. ಆದ್ರೆ ಅದೇ ಸಮಯಕ್ಕೆ ಅಕ್ಷಯ್ ಅವರ ‘ಬಚ್ಚನ್ ಪಾಂಡೆ’ ಸಿನಿಮಾದ ಬಿಡುಗಡೆ ದಿನಾಂಕ ಕೂಡ ನಿಗದಿಯಾಗಿತ್ತು.

    https://www.instagram.com/p/B70Ce7LH0Ye/

    ಅಕ್ಷಯ್ ಅವರ ಸಿನಿಮಾ ಬಿಡುಗಡೆಯಾದರೆ ಎಲ್ಲಿ ತಮ್ಮ ಸಿನಿಮಾ ಓಡುವುದಿಲ್ಲವೋ ಎಂದು ಅಮೀರ್ ತಲೆಕೆಡಿಸಿಕೊಂಡಿದ್ದರು. ಹೀಗಾಗಿ ‘ಬಚ್ಚನ್ ಪಾಂಡೆ’ ಸಿನಿಮಾ ಬಿಡುಗಡೆ ಬಗ್ಗೆ ಅಕ್ಷಯ್ ಹಾಗೂ ನಿರ್ದೇಶಕ ಸಾಜಿದ್ ನಾಡಿಯಾದ್‍ವಾಲಾ ಅವರೊಂದಿಗೆ ಅಮೀರ್ ಮಾತನಾಡಿದ್ದರು. ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು. ಅಮೀರ್ ಅವರ ಮನವಿಯನ್ನು ಗೌರವಿಸಿರುವ ಅಕ್ಷಯ್ ತಮ್ಮ ಸಿನಿಮಾದ ಹೊಸ ಲುಕ್ ಬಿಡುಗಡೆ ಮಾಡಿ ಬಚ್ಚನ್ ಪಾಂಡೆ ಯಾವಾಗ ಬಿಡುಗಡೆ ಆಗುತ್ತೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

    ಈ ಸಿನಿರಂಗದಲ್ಲಿ ಎಲ್ಲರೂ ಸ್ನೇಹಿತರು ಎಂದು ಹೊಸ ಲುಕ್ ಹಾಗೂ ‘ಬಚ್ಚನ್ ಪಾಂಡೆ’ ಸಿನಿಮಾ ಬಿಡುಗಡೆ ದಿನಾಂಕವನ್ನು ಅಕ್ಷಯ್ ಪ್ರಕಟಿಸಿದ್ದಾರೆ. ‘ಬಚ್ಚನ್ ಪಾಂಡೆ’ ಸಿನಿಮಾ ಈ ವರ್ಷಾಂತ್ಯದ ಬದಲು 2021 ಜನವರಿ 22ಕ್ಕೆ ತೆರೆ ಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಅಕ್ಷಯ್‍ರ ರಗಡ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಈ ಟ್ವೀಟ್ ನೋಡಿದ ಬಳಿಕ ಅಮೀರ್ ಅಕ್ಷಯ್ ಹಾಗೂ ಸಾಜಿದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಲವೊಮ್ಮೆ ಒಂದೇ ಒಂದು ಮಾತುಕತೆ ಸಾಕು, ಎಲ್ಲ ಸರಿಹೋಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಅಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಇದೇ ವರ್ಷ ಡಿಸೆಂಬರ್‌ನಲ್ಲಿ ಕ್ರಿಸ್ಮಸ್‍ಗೆ ಬಿಡುಗಡೆ ಆಗಲಿದೆ. ಹಾಲಿವುಡ್‍ನಲ್ಲಿ ಟಾಮ್ ಹ್ಯಾಂಕ್ಸ್ ಅಭಿನಯದ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಇದಾಗಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.