Tag: Lal Singh Chadda

  • `ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಅಮೀರ್ ಖಾನ್

    `ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬೆನ್ನಲ್ಲೇ ಕ್ಷಮೆಯಾಚಿಸಿದ ಅಮೀರ್ ಖಾನ್

    ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ಇದೇ ಆಗಸ್ಟ್ 11ಕ್ಕೆ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ.ಆಮೀರ್ ಮತ್ತು ಕರೀನಾ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಅಮೀರ್ ಆಡಿದ್ದರು ಎನ್ನಲಾದ ಮಾತಿನಿಂದಾಗಿ ಈ ಚಿತ್ರವನ್ನ ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಶುರು ಮಾಡಿದ್ದರು. ಈಗ ರಿಲೀಸ್ ಬೆನ್ನಲ್ಲೇ ಅಮೀರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    ಈ ದೇಶದಲ್ಲಿ ಅಸಹಿಷ್ಣತೆ ಇದೆ. ಹಾಗಾಗಿ ನನ್ನ ಪತ್ನಿ ದೇಶ ತೊರೆಯುವಂತಹ ಮಾತುಗಳನ್ನು ಆಡಿದ್ದಳು ಎಂದು ಅಮೀರ್ ಈ ಹಿಂದೆ ಹೇಳಿದ್ದರು. ಇದೇ ಮಾತನ್ನು ಇಟ್ಟುಕೊಂಡು ಇವತ್ತು ಬಾಯ್ ಕಾಟ್ ಮಾತುಗಳನ್ನು ಆಡಲಾಗುತ್ತಿದೆ. ದೇಶ ದ್ರೋಹದಂತಹ ಹೇಳಿಕೆಯನ್ನು ಕೊಟ್ಟಿರುವ ಅಮೀರ್ ಖಾನ್ ಸಿನಿಮಾವನ್ನು ನೋಡಬೇಡಿ ಎಂದು ಹಲವರು ಪೋಸ್ಟ್ ಮಾಡಿದ್ದರು. ಈಗ ಸಿನಿಮಾ ರಿಲೀಸ್‌ಗೂ ಮುನ್ನವೇ ಅಮೀರ್ ಖಾನ್ ಕ್ಷಮೆ ಕೇಳಿದ್ದಾರೆ.

    ಕೆಲ ವರ್ಷಗಳ ಹಿಂದೆ ಅಮೀರ್ ಹೇಳಿಕೆ ಈಗ ಕಂಗಟ್ಟಾಗಿದೆ. ರಿಲೀಸ್ ಮುನ್ನ ಮಾತನಾಡಿರುವ ಅಮೀರ್, ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ, ನಾನು ವಿಷಾದಿಸುತ್ತೇನೆ, ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ, ಯಾರಾದರೂ ಚಲನಚಿತ್ರವನ್ನು ವೀಕ್ಷಿಸಲು ಬಯಸದಿದ್ದರೆ, ನಾನು ಅವರ ಭಾವನೆಯನ್ನು ಗೌರವಿಸುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಪತಿ ಮಾಡಿದ ಎಡವಟ್ಟು: ನಯನತಾರಾ ಆಸ್ಪತ್ರೆಗೆ ದಾಖಲು

    ಚಿತ್ರದ ಬಗ್ಗೆ ಬಾಯ್ ಕಾಟ್ ಟ್ರೆಂಡ್ ಆಗುತ್ತಿದ್ದರು ಕೂಡ ಈಗಾಗಲೇ ಚಿತ್ರದ ಬುಕ್ಕಿಂಗ್ ವಿಚಾರದಲ್ಲಿ ಕೋಟಿ ಕೋಟಿ ಕಲೆಕ್ಷನ್ ಆಗಿದೆ. ಬಾಯ್ ಕಾಟ್ ವಿವಾದದ ಮಧ್ಯೆ ಎಷ್ಟರ ಮಟ್ಟಿಗೆ ಈ ಸಿನಿಮಾ ಸೌಂಡ್ ಮಾಡುತ್ತೆ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಕೊನೆಗೂ ಮೌನ ಮುರಿದ ನಾಗಚೈತನ್ಯ

    ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಕೊನೆಗೂ ಮೌನ ಮುರಿದ ನಾಗಚೈತನ್ಯ

    ಮಂತಾ ಜೊತೆಗಿನ ಸಂಬಂಧಕ್ಕೆ ನಾಗಚೈತನ್ಯ ಫುಲ್ ಸ್ಟಾಪ್ ಇಟ್ಟ ಮೇಲೆ ನಟಿ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ನಾಗಚೈತನ್ಯಗೆ ಶೋಭಿತಾ ಕುರಿತ ಪ್ರಶ್ನೆ ಎದುರಾಗಿದೆ. ಈ ಕುರಿತು ನಟ ನೀಡಿರುವ ಉತ್ತರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

    ನಾಗಚೈತನ್ಯ ಮತ್ತು ಸಮಂತಾ ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಬಳಿಕ ಶೋಭಿತಾ ಮತ್ತು ನಾಗಚೈತನ್ಯ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಕೂಡ ಆಗುತ್ತಿದೆ. ಈ ಬೆನ್ನಲ್ಲೇ `ಲಾಲ್ ಸಿಂಗ್ ಚಡ್ಡಾ’ ಸಂದರ್ಶನದಲ್ಲಿ ನಾಗಚೈತನ್ಯಗೆ ಶೋಭಿತಾ ಕುರಿತು ಪ್ರಶ್ನೆ ಎದುರಾಗಿದೆ. ನಿರೂಪಕಿ ಶೋಭಿತಾ ಜತೆಗಿನ ಒಡನಾಟದ ಬಗ್ಗೆ ಕೇಳಿದ್ದಾರೆ.‌ ಇದನ್ನೂ ಓದಿ:ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    ನಿರೂಪಕಿಯ ಪ್ರಶ್ನೆಗೆ ನಾಗಚೈತನ್ಯ ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. ನಾನು ಕಿರುನಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಿತಾ ಜತೆಗಿನ ಡೇಟಿಂಗ್ ವಿಚಾರ ನಿಜ ಎಂಬುದನ್ನ ಬಹುತೇಕ ಖಚಿತಪಡಿಸಿದ್ದಾರೆ. ಇನ್ನು ಮೂಲಗಳ ಪ್ರಕಾರ ಈ ಹಿಂದೆ ನಾಗಚೈತನ್ಯ ಹೊಸ ಮನೆಯಲ್ಲಿ ಶೋಭಿತಾ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಈ ಜೋಡಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ನಾಗಚೈತನ್ಯ ಶೋಭಿತಾ ಜತೆಯಾಗುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?

    ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?

    `ಲವ್‌ಸ್ಟೋರಿ’ ಚಿತ್ರದ ಸಕ್ಸಸ್ ನಂತರ ನಾಗಚೈತನ್ಯಗೆ ಹಲವು ಬಗೆಯ ಪಾತ್ರಗಳು ಅರಸಿ ಬರುತ್ತಿದೆ. ಸದ್ಯ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಇದೀಗ ಸಂದರ್ಶನವೊಂದರಲ್ಲಿ ತಮಗೆ ಹಿಂದಿ ಸಿನಿಮಾ ಅವಕಾಶ ಬಂದಾಗ ನಿರಾಕರಿಸಿದ್ದು, ಯಾಕೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ.

    ಸದ್ಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರ ಕಾರ್ಯಗಳು ನಿಧಾನಕ್ಕೆ ಶುರುವಾಗಿದೆ. ಬಾಲಿವುಡ್‌ನ ಡೆಬ್ಯೂ ಚಿತ್ರದ ಬಗ್ಗೆ ಮಾತನಾಡುವಾಗ ತಾವು ಯಾಕೆ ಹಿಂದಿ ಚಿತ್ರದಿಂದ ದೂರ ಸರಿಯುತ್ತಿದ್ದರು ಅಂತಾ ಮಾತನಾಡಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ಹಿಂದಿ ಸಿನಿಮಾಗಳಿಂದ ದೂರವಿದ್ದೆ ಅಂತಾ ನಾಗಚೈತನ್ಯ ಹೇಳಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸುವ ಕಾರಣ ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು ಕಷ್ಟ ಎಂದರು. ಇದನ್ನೂ ಓದಿ:ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

     

    View this post on Instagram

     

    A post shared by Chay Akkineni (@chayakkineni)

    `ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಮೊದಲು ನಿರಾಕರಿಸಿದ್ದೆ, ಆದರೆ ಆಮೀರ್ ಖಾನ್ ಅವರೇ ಪಾತ್ರದ ಬಗ್ಗೆ ಜತೆಗೆ ಹೈದರಾಬಾದ್‌ನಿಂದ ಬರುವ ಹುಡುಗನ ಕಥೆಯಾಗಿದರಿಂದ ನನಗೆ ನಟಿಸಲು ಸುಲಭವಾಯಿತು ಎಂದು ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

    ಕಾಲಿವುಡ್‌ನ ಸ್ಟಾರ್ ನಟ ಧನುಷ್ ಈಗ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಹಾಲಿವುಡ್‌ನ `ದಿ ಗ್ರೇ ಮ್ಯಾನ್’ ಚಿತ್ರದ ಮೂಲಕ ಸೌಂಡ್ ಮಾಡುತ್ತಿದ್ದಾರೆ. ಈಗ ಆಮೀರ್ ಖಾನ್ ಮನೆಯಲ್ಲಿ ಔತಣ ಕೂಟದಲ್ಲಿ ಧನುಷ್ ಜತೆ ಹಾಲಿವುಡ್ ಚಿತ್ರತಂಡ ಭಾಗವಹಿಸಿದ್ದಾರೆ.

     

    View this post on Instagram

     

    A post shared by Dhanush (@dhanushkraja)

    ಧನುಷ್ `ದಿ ಗ್ರೇ ಮ್ಯಾನ್’ ಚಿತ್ರದ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಈ ಚಿತ್ರದ ಪ್ರಿಮೀಯರ್ ಶೋವನ್ನ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಬಾಲಿವುಡ್ ಸ್ಟಾರ್ ಕಲಾವಿದರಿಗೆ ಆಹ್ವಾನ ನೀಡಿತ್ತು ಚಿತ್ರತಂಡ. ಜತೆಗೆ ಸ್ಟಾರ್ ನಟ ಆಮೀರ್ ಖಾನ್‌ಗೂ ಧನುಷ್ ಟೀಂ ಆಹ್ವಾನ ನೀಡಿತ್ತು. ಆದರೆ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಕಾರಣದಿಂದ ಚಿತ್ರದ ಪ್ರೀಮಿಯರ್‌ಗೆ ಆಮೀರ್ ಗೈರಾಗಿದ್ದರು. ಬಳಿಕ ಆಮೀರ್ ಮನೆಯಲ್ಲಿ ಚಿತ್ರತಂಡಕ್ಕೆ ಔತಣ ಕೂಟಕ್ಕೆ ಆಹ್ವಾನ ನೀಡಿ, ಉಪಚರಿಸಲಾಯಿತು. ಈಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಟ್ರೋಲ್ ಮಾಡುವವರಿಗೆ ಡೋಂಟ್ ಕೇರ್: ಹೊಸ ಫೋಟೋ ಶೇರ್ ಮಾಡಿ ಟಾಂಗ್ ಕೊಟ್ಟ ಸುಶ್ಮಿತಾ ಸೇನ್

    `ದಿ ಗ್ರೇ ಮ್ಯಾನ್’ ಚಿತ್ರದ ನಿರ್ದೇಶಕ ರುಸ್ಸೋ ಬ್ರದರ್ಸ್‌ ಜೊತೆ ಧನುಷ್ ಕೂಡ ಆಮೀರ್ ಖಾನ್ ಮನೆಯಲ್ಲಿ ಹಾಜರಿದ್ದರು.ಜತೆಗೆ ಆಮೀರ್ ಮಾಜಿ ಪತ್ನಿ ಕಿರಣ್ ರಾವ್ ಕೂಡ ಭಾಗಿಯಾಗಿದ್ದರು. ಈ ವೇಳೆ ಗುಜರಾತಿ ಶೈಲಿಯ ಭಿನ್ನ ಅಡುಗೆಯನ್ನ ಮಾಡಿಸಲಾಗಿದ್ದು, ಸೂರತ್‌ನಿಂದ ಪ್ರಸಿದ್ಧ ಬಾಣಿಸಿಗರನ್ನ ಕರೆಸಿ ಗುಜರಾತಿ ಖಾದ್ಯವನ್ನು ಮಾಡಿಸಿದ್ದಾರೆ. ಆಮೀರ್ ಆತಿಥ್ಯ ನೋಡಿ ಚಿತ್ರತಂಡ ಕೂಡ ಖುಷಿಪಟ್ಟಿದ್ದಾರೆ. ಸದ್ಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್  ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ಬಾಲಿವುಡ್ ಅಂಗಳದಲ್ಲಿ ಬಿಗ್ ಫೈಟ್ ಗೆ ವೇದಿಕೆ ಸಜ್ಜಾಗುತ್ತಿದೆ. ಬಿಟೌನ್ ನ ಇಬ್ಬರು ಸೂಪರ್ ಸ್ಟಾರ್ ಗಳ ಚಿತ್ರಗಳು ಆಗಸ್ಟ್ 11ಕ್ಕೆ ಬಿಡುಗಡೆ ಆಗುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ. ಕೇವಲ ಸಿನಿಮಾದಿಂದ ಮಾತ್ರವಲ್ಲ, ಇತರ ವಿಷಯಗಳಿಂದಾಗಿಯೂ ಸಿನಿಮಾದ ಸೋಲು ಗೆಲುವಿನ ಚರ್ಚೆಗಳು ನಡೆದಿವೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಇದ್ದರೂ, ಈಗಿನಿಂದಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ನಡೆದಿದೆ.

    ಬಾಲಿವುಡ್ ಇಬ್ಬರು ಖ್ಯಾತ ನಟರಾದ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಟನೆಯ ಚಿತ್ರಗಳು ಆಗಸ್ಟ್ 11 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿವೆ. ಅಕ್ಷಯ್ ನಟನೆಯ ರಕ್ಷಾ ಬಂಧನ್ ಮತ್ತು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಏಕಕಾಲಕ್ಕೆ ತೆರೆ ಕಾಣುತ್ತಿವೆ. ಎರಡೂ ನಿರೀಕ್ಷಿತ ಚಿತ್ರಗಳು ಆಗಿದ್ದರಿಂದ, ಪ್ರೇಕ್ಷಕನ ಒಲವು ಯಾರ ಕಡೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಎರಡೂ ಸಿನಿಮಾಗಳು ತಮ್ಮದೇ ಆದ ಕಾರಣಗಳಿಂದಾಗಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿವೆ. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಈಗಾಗಲೇ ಲಾಲ್ ಸಿಂಗ್ ಚಡ್ಡಾ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಆಮೀರ್ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಅದ್ಧೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಟ್ರೇಲರ್ ಕೂಡ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಅದು ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಎರಡೂ ಚಿತ್ರಗಳು ಕೂಡ ಭರವಸೆ ಮೂಡಿಸಿರುವುದರಿಂದ ದೊಡ್ಡ ಮಟ್ಟದಲ್ಲಿ ಫೈಟ್ ಎದುರಾಗಲಿದೆ.

    ಈ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಎರಡು ದೊಡ್ಡ ಸಿನಿಮಾಗಳು ಬಂದಾಗ ಈ ರೀತಿ ಗೊಂದಲ ಆಗುವುದು ಸಹಜ. ಹಾಗಂತ ನಾನು ಇದನ್ನು ಕ್ಲ್ಯಾಶ್ ಎಂದು ಕರೆಯುವುದಿಲ್ಲ. ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿವೆ ಎಂದಷ್ಟೇ ಹೇಳುವ. ಎರಡೂ ಚಿತ್ರಗಳು ಚೆನ್ನಾಗಿ ಕಲೆಕ್ಷನ್ ಮಾಡಲಿವೆ ಎಂಬ  ನಂಬಿಕೆ ನನ್ನದು’ ಅಂತಾರೆ ಅಕ್ಷಯ್ ಕುಮಾರ್.

    Live Tv

  • ನಾಗಚೈತನ್ಯ -ಸಮಂತಾ ಮತ್ತೆ ಮುಖಾಮುಖಿ : ಮಾಜಿ ಪತಿ ಚಿತ್ರಕ್ಕೆ ಯಶೋದ ಫೈಟ್

    ನಾಗಚೈತನ್ಯ -ಸಮಂತಾ ಮತ್ತೆ ಮುಖಾಮುಖಿ : ಮಾಜಿ ಪತಿ ಚಿತ್ರಕ್ಕೆ ಯಶೋದ ಫೈಟ್

    ಟಿ ಸಮಂತಾ, ಮಾಜಿ ಪತಿ ನಾಗಚೈತನ್ಯ ಜತೆಗಿನ ಸಂಬಂಧಕ್ಕೆ ಈಗಾಗಲೇ ಫುಲ್ ಸ್ಟಾಪ್ ಇಟ್ಟಾಗಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿದ್ದ ಪತಿ ಜತೆಗಿನ ಅಷ್ಟು ಫೋಟೋಗಳನ್ನ ಕೂಡ ಡಿಲೀಟ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ದೂರ ದೂರ ಆಗಿದ್ದ ಈ ಜೋಡಿ ಇದೀಗ ಮತ್ತೆ ಸಮಂತಾ ಮಾಜಿ ಪತಿಗೆ ಎದುರಾಳಿಯಾಗಿ ನಿಂತಿದ್ದಾರೆ.

    ವಯಕ್ತಿಕ ಬದುಕಿನ ಏಲ್ಲಾ ಕಹಿ ಘಟನೆಗಳನ್ನ ಮರೆತು ಸಿನಿಮಾಗಳ ಮುಖ ಮಾಡಿರೋ ಈ ಇಬ್ಬರು ತಾರೆಯರು. ಇದೀಗ ಒಬ್ಬರನೊಬ್ಬರು ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ಒಂದೇ ಕ್ಷೇತ್ರದಲ್ಲಿ ಇರುವುದರಿಂದ ಮುಖಾಮುಖಿ ಆಗೋದು ಅನಿವಾರ್ಯವಾಗಿದೆ. ಚಿತ್ರರಂಗದಲ್ಲಿ ನಾಗಚೈತನ್ಯ ಸಿನಿಮಾಗೆ ಫೈಟ್ ಕೊಡೊದಕ್ಕೆ ಸಮಂತಾ ಸಜ್ಜಾಗಿದ್ದಾರೆ.

    ತಮ್ಮ ಸಿನಿಮಾಗಳ ಮೂಲಕ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಮುಖಾಮುಖಿಯಾಗಿದ್ದಾರೆ. ಒಂದು ದಿನದ ಅಂತರದಲ್ಲಿ ಮಾಜಿ ಪತಿ ಪತ್ನಿಯ ಸಿನಿಮಾ ರಿಲೀಸ್ ಆಗ್ರಿದೆ. ನಾಗಚೈತನ್ಯ ನಟನೆಯ `ಲಾಲ್‌ಸಿಂಗ್ ಚಡ್ಡಾ’ ಮತ್ತು ಸಮಂತಾ ನಟನೆಯ `ಯಶೋದ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಫೈಟ್ ಮಾಡಲು ರೆಡಿಯಾಗಿದ್ದಾರೆ.

    ಆಮೀರ್ ಖಾನ್ ನಟನೆಯ `ಲಾಲ್‌ಸಿಂಗ್ ಚಡ್ಡಾ’ ಮೇ 11ರಂದು ರಿಲೀಸ್ ಆದರೆ ಇತ್ತ ಸಮಂತಾ ನಟನೆಯ `ಯಶೋದ’ ಮೇ 12ರಂದು ತೆರೆಗೆ ಬರುತ್ತಿದೆ. ಆಮೀರ್ ಖಾನ್ ನಟನೆಯ ಈ ಚಿತ್ರದಲ್ಲಿ ನಾಗಚೈತನ್ಯ ಅತಿಥಿ ಪಾತ್ರ ನಿರ್ವಹಿಸಿದ್ರು ಕೂಡ ಆ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಚಿತ್ರದಲ್ಲಿ ಮೇಜರ್ ರೋಲ್ ಪ್ಲೇ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಆಗ್ತಿರೋ `ಯಶೋದ’ ಚಿತ್ರದ ಗ್ಲೀಂಪ್ಸ್ ಈಗಾಗಲೇ ಫಿದಾ ಆಗಿರೋ ಅಭಿಮಾನಿಗಳಿಗೆ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ. ಇದನ್ನೂ ಓದಿ: ಯಶ್ ನಟನೆಯ `ಕೆಜಿಎಫ್ 2′ ಚಿತ್ರ ನೋಡಲಿರುವ ಸೆಂಚ್ಯೂರಿ ಸ್ಟಾರ್ ಶಿವಣ್ಣ

     

    View this post on Instagram

     

    A post shared by Samantha (@samantharuthprabhuoffl)

    ರಿಲೀಸ್‌ಗೂ ಮುಂಚೆನೇ ಹೈಪ್ ಕ್ರಿಯೇಟ್ ಮಾಡಿರೋ ಈ ಎರಡು ಚಿತ್ರಗಳಲ್ಲಿ ಪ್ರೇಕ್ಷಕಪ್ರಭುಗಳು ಯಾವ ಸಿನಿಮಾಗೆ ಸಾಥ್ ನೀಡ್ತಾರೆ ಅಂತಾ ಕಾದು ನೋಡಬೇಕಿದೆ.

  • ಕರೀನಾ ಕಪೂರ್- ಆಮೀರ್ ಖಾನ್ ಫನ್ನಿ ವಿಡಿಯೋ ವೈರಲ್

    ಕರೀನಾ ಕಪೂರ್- ಆಮೀರ್ ಖಾನ್ ಫನ್ನಿ ವಿಡಿಯೋ ವೈರಲ್

    ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಕರೀನಾ ಕಪೂರ್ ಮತ್ತು ಆಮೀರ್ ಖಾನ್ ಜೋಡಿ ಮೋಡಿ ಮಾಡಿದ್ದಾರೆ. ʻಲಾಲ್ ಸಿಂಗ್ ಚಡ್ಡಾʼ ಸಿನಿಮಾಗಾಗಿ ಮತ್ತೆ ಒಂದಾಗಿರೋ ಈ ಜೋಡಿ, ಫನ್ನಿ ವಿಡಿಯೋ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

    ಹಲವಾರು ವಿಚಾರಗಳಿಂದ ಅಟ್ರಾಕ್ಟ್ ಮಾಡ್ತಿರೋ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಇದೇ ಆಗಸ್ಟ್ 11ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರೋ ಕರೀನಾ ಕಪೂರ್ ಮತ್ತು ಆಮೀರ್ ಖಾನ್ ಜೋಡಿ ಈಗ ಡಿಫಪರೆಂಟ್ ಆಗಿ ಸಿನಿಮಾ ಪ್ರಚಾರ ಮಾಡ್ತಿದ್ದಾರೆ. ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫಿಲ್ಟರ್‌ನ್ನು ಕೂಡ ಪರಿಚಯ ಮಾಡಲಾಗಿದೆ. ಅದಕ್ಕಾಗಿ ʻಲಾಲ್ ಸಿಂಗ್ ಚಡ್ಡಾʼ ಜೋಡಿ ಒಟ್ಟಿಗೆ ವಿಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ.

    ಕರೀನಾ ಮತ್ತು ಆಮೀರ್ ಹೊಸ ಫಿಲ್ಟರ್‌ನಲ್ಲಿ ಫನ್ನಿಯಾಗಿ ವಿಡಿಯೋ ಮಾಡಿ ಸಿನಿರಸಿಕರ ಗಮನ ಸೆಳೆದಿದ್ದಾರೆ. ನನ್ನ ಹೀರೋ ಜತೆ ಫೆದರ್ ಚಾಲೆಂಜ್ ಎಂದು ಕ್ಯಾಪ್ಷನ್ ಕೊಟ್ಟು ಕರೀನಾ ಫನ್ನಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅನೇಕ ಸೆಲೆಬ್ರೆಟಿಗಳು ಈ ಹೊಸ ಫಿಲ್ಟರ್‌ನ್ನು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ʻಲಾಲ್ ಸಿಂಗ್ ಚಡ್ಡಾʼ ಪ್ರಚಾರ ಶುರುವಾಗಿದೆ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಹಾಲಿವುಡ್‌ನ ಫಾರೆಸ್ಟ್ ಗಂಪ್ ಚಿತ್ರದ ಹಿಂದಿ ರಿಮೇಕ್ ಆಗಿ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೂಡಿ ಬಂದಿದೆ. ಆಮೀರ್ ಖಾನ್ ನಾಯಕಿಯಾಗಿ ಕರೀನಾ ನಟಿಸಿದ್ದಾರೆ. ಚಿತ್ರದ ಸ್ಪೆಷಲ್ ರೋಲ್‌ನಲ್ಲಿ ಟಾಲಿವುಡ್ ನಟ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ. ಇನ್ನು ಆಗಸ್ಟ್ 11ಕ್ಕೆ ಸಿನಿಮಾ ತೆರೆಕಾಣಲಿದೆ. ಚಿತ್ರವನ್ನ ಪ್ರೇಕ್ಷಕ ಪ್ರಭುಗಳು ಅಪ್ಪಿ ಒಪ್ಪಿಕೊಳ್ತಾರಾ ಅಂತಾ ಕಾದುನೋಡಬೇಕಿದೆ.

  • ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

    ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಅವರ ಸ್ನೇಹಿತೆ ಅಮೃತಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬ್ರಾಹನ್‍ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಿದೆ.

    ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇಬ್ಬರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇಬ್ಬರು ನಟಿಯರ ಸಂಪರ್ಕಕ್ಕೆ ಬಂದವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಬಿಎಂಸಿ ಆದೇಶಿಸಿದೆ. ಇದನ್ನೂ ಓದಿ: ‘ಕಭಿ ಖುಷಿ ಕಭಿ ಗಮ್’ ಸೀನ್ ರೀ ಕ್ರಿಯೇಟ್ ಮಾಡಿದ ಆಲಿಯಾ-ರಣವೀರ್

    ಕರೀನಾ ಮತ್ತು ಅಮೃತಾ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಅಮೃತಾ ಮತ್ತು ಕರೀನಾ ಇಬ್ಬರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

    ಕರೀನಾ ಮತ್ತು ಅಮೃತಾ ಇತ್ತೀಚೆಗೆ ಮುಂಬೈನಲ್ಲಿರುವ ರಿಯಾ ಕಪೂರ್ ಅವರ ಮನೆಯಲ್ಲಿ ಪಾರ್ಟಿಯನ್ನು ಮಾಡಿದ್ದರು. ಈ ವೇಳೆ ಈ ನಟಿಯರು ಕ್ಯಾಮೆರಾಗೆ ಪೋಸ್ ಸಹ ನೀಡಿದ್ದರು. ಅವರೊಂದಿಗೆ ಮಲೈಕಾ ಅರೋರಾ, ಪೂನಂ ದಮಾನಿಯಾ ಮತ್ತು ಮಸಾಬಾ ಗುಪ್ತಾ ಸಹ ಇದ್ದರು.

    ಪ್ರಸ್ತುತ ಕರೀನಾ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದು, ಅಮೀರ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಅದವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

  • ಥಿಯೇಟರ್‌ಗಳಲ್ಲಿ ನಾವು ರಾಜಿಯಾಗಲ್ಲ: ಅಮೀರ್‌ಗೆ ಯಶ್ ಉತ್ತರ

    ಥಿಯೇಟರ್‌ಗಳಲ್ಲಿ ನಾವು ರಾಜಿಯಾಗಲ್ಲ: ಅಮೀರ್‌ಗೆ ಯಶ್ ಉತ್ತರ

    ಬೆಂಗಳೂರು: ಥಿಯೇಟರ್‌ಗಳಲ್ಲಿ ನಾವು ರಾಜೀಯಾಗುವುದಿಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ ನಟ ಅಮೀರ್ ಖಾನ್ ಗೆ ಉತ್ತರಿಸಿದ್ದಾರೆ.

    ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನವೇ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ಅಮೀರ್ ಖಾನ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಯಶ್ ಅವರನ್ನು ಟೆಕ್ಸ್ಟ್ ಮೆಸೇಜ್ ನಲ್ಲಿ ಕ್ಷಮೆ ಕೇಳಿಕೊಂಡಿದ್ದರು.

    ಅದಕ್ಕೆ ಪ್ರತಿಕ್ರಿಯಿಸಿದ ಯಶ್, ಅಮೀರ್ ಜೀ ನಿಮ್ಮ ಅನಿವಾರ್ಯತೆ ನಮಗೆ ಅರ್ಥವಾಗುತ್ತೆ. ಪರವಾಗಿಲ್ಲ ನೀವೂ ಅಂದೇ ಸಿನಿಮಾವನ್ನು ರಿಲೀಸ್ ಮಾಡಬಹುದು. ನೀವು ಬಾಲಿವುಡ್‍ಗೆ ಹಿರಿಯರು. ನಿಮ್ಮ ಕೋರಿಕೆಯನ್ನು ತಿರಸ್ಕರಿಸಲಾಗದು. ಆದರೆ ಥಿಯೇಟರ್‍ಗಳಲ್ಲಿ ನಾವು ರಾಜಿಯಾಗುವುದಿಲ್ಲ. ನಮ್ಮ ನಿರ್ಮಾಪಕರಿಗೂ ಕಷ್ಟವಾಗಬಾರದಲ್ಲವೇ? ನಮ್ಮ ಹಂಚಿಕೆದಾರರ ಜೊತೆ ಈ ಬಗ್ಗೆ ಒಂದು ಸಲ ಮಾತನಾಡುತ್ತೇನೆ. ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ. ನೀವು ಸಹಕರಿಸಿ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಮೀರ್ ನಾನು ಬೇರೆಯವರನ್ನು ಅತಿಕ್ರಮಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸೃಷ್ಟಿ ಆಗುವುದನ್ನು ದ್ವೇಷಿಸ್ತೇನೆ. ಆದರೆ ನಾನು ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಏಪ್ರಿಲ್ 14ರಂದು ಬೈಸಾಖಿ ದಿನ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎಂದು ಭಾವಿಸಿದ್ದೆ. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕ, ನಿರ್ದೇಶಕ ಮತ್ತು ಯಶ್ ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದಿದ್ದರು.

    ಬೈಸಾಖಿ ದಿನ ನನ್ನ ಸಿನಿಮಾ ಬಿಡುಗಡೆಯಾದರೆ ಸೂಕ್ತ ಎಂದು ಅವರಿಗೆ ತಿಳಿಸಿದೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರ ಸಿನಿಮಾ ರಿಲೀಸ್ ಇದ್ದರೂ ಅದೇ ನೀವು ಸಿನಿಮಾ ಬಿಡುಗಡೆ ಮಾಡಿ ಎಂದು ನನಗೆ ಹೇಳಿದರು. ಅವರ ಸ್ಪಂದನೆ ನನಗೆ ಇಷ್ಟ ಆಯಿತು. ನನ್ನ ಯೋಚನೆಗೆ ಯಶ್ ತುಂಬಾನೇ ಬೆಂಬಲವಾಗಿ ನಿಂತರು ಎಂದು ಅಮೀರ್ ಹೇಳಿಕೊಂಡಿದ್ದರು. ಇದನ್ನೂ ಓದಿ:  ಅಭಿಮಾನಿಯಿಂದ ಅಪ್ಪುಗೆ ಅಯ್ಯಪ್ಪನ ದರ್ಶನ

  • ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

    ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

    ಚೆನ್ನೈ: ಟಾಲಿವುಡ್ ನಟ ನಾಗಚೈತನ್ಯ ಓಟಿಟಿ ಕ್ಷೇತ್ರವನ್ನು ಪ್ರವೇಶಿಸಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ನಾಗಚೈತನ್ಯ ಓಟಿಟಿಯ ವೆಬ್ ಸರಣಿಯಾದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದು, ಈ ವೆಬ್ ಸರಣಿಗೆ ವಿಕ್ರಮ್ ಕೆ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ನಾಗ ಚೈತನ್ಯ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಓಟಿಟಿಯಲ್ಲಿ ಇದು ನಾಗಚೈತನ್ಯ ಚೊಚ್ಚಲ ಸಿನಿಮಾವಾಗಿದೆ.

    ಈ ಸರಣಿಯು ಥ್ರಿಲ್ಲರ್ ಆಗಿದ್ದು, ನಾಗಾಚೈತನ್ಯಗೆ ಜೋಡಿಯಾಗಿ ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ದಕ್ಷಿಣದ ಹಲವಾರು ಪ್ರಮುಖ ನಟರು ಸಹ ನಟಿಸಲಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ನಾಗಾರ್ಜುನ ಅಕ್ಕಿನೇನಿ ಮತ್ತು ಅವರ ಮಗ ನಾಗ ಚೈತನ್ಯ ಮುಂಬರುವ ‘ಬಂಗಾರರಾಜು’ ಚಿತ್ರದಲ್ಲಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ನಾಗಾರ್ಜುನ ಅವರ ಬ್ಲಾಕ್‍ಬಸ್ಟರ್ ಚಿತ್ರ ‘ಸೊಗ್ಗಾಡೆ ಚಿನ್ನಿ ನಯನ’ದ ಮುಂದುವರಿದ ಭಾಗವಾಗಿ ಈ ಚಿತ್ರವನ್ನು ಮಾಡುತ್ತಿದ್ದು, ಕಲ್ಯಾಣ್ ಕೃಷ್ಣ ನಿರ್ದೇಶಿಸಿದ್ದಾರೆ. ‘ಝೀ ಸ್ಟುಡಿಯೋಸ್’ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ.

    ನಾಗಾರ್ಜುನ ಅವರ ಜೊತೆ ಹಿರಿಯ ನಟಿ ರಮ್ಯಾ ಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ‘ಉಪ್ಪೇನ’ ಖ್ಯಾತಿಯ ಕೃತಿ ಶೆಟ್ಟಿ ಈ ಸಿನಿಮಾದಲ್ಲಿ ನಾಗ ಚೈತನ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಮತ್ತು ನಾಗ ಚೈತನ್ಯ ಮನಂ, ಪ್ರೇಮಂ ಚಿತ್ರಗಳ ನಂತರ ‘ಬಂಗಾರರಾಜು’ ಸಿನಿಮಾ ಮೂಲಕ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದು, ಅಕ್ಕಿನೇನಿ ಅಭಿಮಾನಿಗಳ ಪಾಲಿಗೆ ಇದು ವಿಶೇಷ ಸಿನಿಮಾವಾಗಿದೆ. ಈ ಚಿತ್ರಕ್ಕಾಗಿ ಇವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ