Tag: Lal Salaam

  • ತಲೈವ ಪಾತ್ರಕ್ಕೆ ಧ್ವನಿ ಕೊಟ್ಟ ಸಾಯಿಕುಮಾರ್

    ತಲೈವ ಪಾತ್ರಕ್ಕೆ ಧ್ವನಿ ಕೊಟ್ಟ ಸಾಯಿಕುಮಾರ್

    ಶ್ವರ್ಯ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಮ್’ (Lal Salaam) ಸಿನಿಮಾ ಇದೇ ಫೆ.9ರಂದು ರಿಲೀಸ್ ಆಗಲಿದೆ. ಮಗಳ ಸಿನಿಮಾದಲ್ಲಿ ತಲೈವ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ರಿಲೀಸ್‌ಗೆ ಸಜ್ಜಾಗಿರೋ ವೇಳೆ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ನಟ ಸಾಯಿಕುಮಾರ್ (Saikumar) ಅವರು ರಜನಿಕಾಂತ್ (Rajanikanth) ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

    ‘ಲಾಲ್ ಸಲಾಮ್’ ಅಪ್ಪಟ ತಮಿಳು ಸಿನಿಮಾ. ತಮಿಳಿನ ಜೊತೆಗೆ ತೆಲುಗಿನಲ್ಲೂ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ತೆಲುಗು ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿದೆ. ತೆಲುಗು ವರ್ಷನ್‌ನಲ್ಲಿ ರಜನಿಕಾಂತ್ (Rajanikanth) ಪಾತ್ರಕ್ಕೆ ಸಾಯಿಕುಮಾರ್ ಧ್ವನಿ ನೀಡಿದ್ದಾರೆ. ಅವರ ಖಡಕ್ ವಾಯ್ಸ್ ಪಾತ್ರದ ತೂಕವನ್ನು ಹೆಚ್ಚಿಸಿದೆ. ಇದನ್ನೂ ಓದಿ:‘ಮಂಡ್ಯ ಹೈದ’ನ ಜೊತೆ ಪ್ರತಿಭಾನ್ವಿತ ನಿರ್ದೇಶಕ ವಿ. ಶ್ರೀಕಾಂತ್ ಆಗಮನ

    ಇಷ್ಟು ವರ್ಷಗಳ ಕಾಲ ರಜನಿಕಾಂತ್ (Rajanikanth) ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಅವರ ಪಾತ್ರಕ್ಕೆ ಗಾಯಕ ಮನೋ ಅವರು ಧ್ವನಿ ನೀಡುತ್ತಿದ್ದರು. ಅವರ ವಾಯ್ಸ್‌ಗೆ ಅಲ್ಲಿನ ಫ್ಯಾನ್ಸ್ ಅಡ್ಜಸ್ಟ್ ಆಗಿದ್ದರು. ಈಗ ಆ ಜಾಗಕ್ಕೆ ಸಾಯಿಕುಮಾರ್ ಅವರನ್ನು ತಂದಿದ್ದು ಕೆಲವರಿಗೆ ಬೇಸರ ಇದೆ. ಆದರೆ ಇನ್ನೂ ಕೆಲವರಿಗೆ ಸಾಯಿ ಕುಮಾರ್ ಅವರ ಖಡಕ್ ವಾಯ್ಸ್‌ನಲ್ಲಿ ಡೈಲಾಗ್ ಕೇಳಿ ಖುಷಿ ಆಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    ‘ಲಾಲ್ ಸಲಾಮ್‌’ ಸಿನಿಮಾ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ಹೇಳಲಿದೆ. ಈ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ನೀಡಲಾಗಿದೆ. ಎಲ್ಲ ದೇವರೂ ಒಂದೇ ಎನ್ನುವ ಡೈಲಾಗ್ ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಇದೆ. ತಲೈವ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

    ‘ಲಾಲ್ ಸಲಾಮ್‌’ ಚಿತ್ರದಲ್ಲಿ ತಲೈವಾ ಅತಿಥಿಯಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  • ಮಾಜಿ ಪತ್ನಿ ಮರೆತು ಸಿನಿಮಾಗೆ ವಿಶ್ ಮಾಡಿದ ಧನುಷ್‌

    ಮಾಜಿ ಪತ್ನಿ ಮರೆತು ಸಿನಿಮಾಗೆ ವಿಶ್ ಮಾಡಿದ ಧನುಷ್‌

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯಾ (Aishwarya) ಮತ್ತು ನಟ ಧನುಷ್ (Actor Dhanush) ಜೋಡಿ ಕಳೆದ ವರ್ಷ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದೀಗ ಮಾಜಿ ಪತ್ನಿ ಐಶ್ವರ್ಯಾ ಸಿನಿಮಾಗೆ ಶುಭಹಾರೈಸುವ ಮೂಲಕ ಧನುಷ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ವಿಜಯ್ ರಾಜಕಾರಣಕ್ಕೆ ಎಂಟ್ರಿ: ಅಭಿನಂದನೆ ಸಲ್ಲಿಸಿದ ತಲೈವ

    ತಂಡಕ್ಕೆ ನನ್ನ ಶುಭ ಹಾರೈಕೆ. ಒಳ್ಳೆಯದಾಗಲಿ ಧನುಷ್ ಹಾರೈಸಿದ್ದಾರೆ. ‘ಸೂಪರ್‌ಸ್ಟಾರ್’ ಹ್ಯಾಶ್‌ಟ್ಯಾಗ್ ಹಾಕಿದ್ದಾರೆ. ಆದರೆ, ಅವರು ಎಲ್ಲಿಯೂ ಮಾಜಿ ಪತ್ನಿ ಐಶ್ವರ್ಯಾ ಹೆಸರನ್ನು ಉಲ್ಲೇಖ ಮಾಡಿಲ್ಲ. ಅವರನ್ನು ಟ್ಯಾಗ್ ಕೂಡ ಮಾಡಿಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಪತ್ನಿ ಚಿತ್ರಕ್ಕೆ ಶುಭಕೋರಿದ ಮೇಲೆ ಅವರ ಪತ್ನಿಯ ಹೆಸರನ್ನು ಉಲ್ಲೇಖ ಮಾಡಲು ಏನು ಸಮಸ್ಯೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ‘ಲಾಲ್ ಸಲಾಂ’ (Lal Salaam) ಸಿನಿಮಾ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ಹೇಳಲಿದೆ. ಈ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ನೀಡಲಾಗಿದೆ. ಎಲ್ಲ ದೇವರೂ ಒಂದೇ ಎನ್ನುವ ಡೈಲಾಗ್ ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಇದೆ. ತಲೈವಾ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಮಗಳ ನಿರ್ದೇಶನದ ಸಿನಿಮಾಗೆ ರಜನಿಕಾಂತ್ ಸಾಥ್ ನೀಡಿದ್ದಾರೆ.

    ‘ಲಾಲ್ ಸಲಾಂ’ ಚಿತ್ರದಲ್ಲಿ ತಲೈವಾ ಅತಿಥಿಯಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಫೆ.9ರಂದು ಈ ಚಿತ್ರ ರಿಲೀಸ್ ಆಗಲಿದೆ. ಟ್ರೈಲರ್‌ನಲ್ಲಿ ತಲೈವಾ ಎಂಟ್ರಿ ನೋಡಿ ಫಿದಾ ಆಗಿರೋ ಅಭಿಮಾನಿಗಳು ‘ಲಾಲ್ ಸಲಾಂ’ ಚಿತ್ರ ನೋಡಲು ಕಾಯ್ತಿದ್ದಾರೆ.

  • ‘ಲಾಲ್ ಸಲಾಂ’ನಲ್ಲಿ ರಜನಿ ಸ್ಟೈಲೀಶ್ ಲುಕ್

    ‘ಲಾಲ್ ಸಲಾಂ’ನಲ್ಲಿ ರಜನಿ ಸ್ಟೈಲೀಶ್ ಲುಕ್

    ವಾರ ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೈಲರ್ ರಿಲೀಸ್ (Release) ಆಗಿದ್ದು, ರಜನಿ ಸಖತ್ ಸ್ಟೈಲೀಶ್ ಆಗಿ ಕಂಡಿದ್ದಾರೆ. ಖಡಕ್ ಡೈಲಾಗ್ ಹೊಡೆದಿದ್ದಾರೆ. ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದಾರೆ ನಿರ್ದೇಶಕ ಐಶ್ವರ್ಯ ರಜನಿಕಾಂತ್.

    ಜೈಲರ್’ ಅಭೂತಪೂರ್ವ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಲಾಂ’ (Lal Salaam) ರಿಲೀಸ್ ಆಗುತ್ತಿರುವುದಕ್ಕೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ನಿರ್ದೇಶಿಸುತ್ತಿದ್ದಾರೆ. ಕಳೆದ ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ತರುವುದಾಗಿ ಈ ಹಿಂದೆ ಚಿತ್ರತಂಡ ಘೋಷಣೆ ಮಾಡಿತ್ತು. ನಂತರ ಪೋಸ್ಟ್ ಪೋನ್ ಆಗಿತ್ತು.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿ ಹಬ್ಬಕ್ಕೆ ತಲೈವಾ ಸಿನಿಮಾ ಎಂಟ್ರಿ ಕೊಡಬೇಕಿತ್ತು. ಅಂದು ಧನುಷ್ ಸಿನಿಮಾ ರಿಲೀಸ್ ಆದ ಕಾರಣದಿಂದಾಗಿ ಫೆಬ್ರವರಿ 9ರಂದು ಲಾಲ್ ಸಲಾಂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಸ್ಪೋರ್ಟ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಘ್ನೇಶ್, ಲಿವಿಂಗ್ಸ್ಟನ್, ಸೆಂಥಿಲ್, ಜೀವಿತಾ, ಕೆ.ಎಸ್. ರವಿಕುಮಾರ್ ಮತ್ತು ತಂಬಿ ರಾಮಯ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

    ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಲಾಲ್ ಸಲಾಂ ಸಿನಿಮಾದ ಭಾಗವಾಗಿದ್ದಾರೆ. 2022 ನವೆಂಬರ್ ನಲ್ಲಿ ಟೈಟಲ್ ರಿವೀಲ್ ಮಾಡಲಾಯಿತು. ಆ ನಂತರ 2023ರ ಮಾರ್ಚ್ ನಲ್ಲಿ ಶೂಟಿಂಗ್ ಆರಂಭ ಮಾಡಲಾಯಿತು. ಆಗಸ್ಟ್ 2023ರಲ್ಲಿ ಚಿತ್ರೀಕರಣ ಮುಕ್ತಾಯವಾಗಿತು. ಲಾಲ್ ಸಲಾಂ ಸಿನಿಮಾಗೆ ಮಾಂತ್ರಿಕ ಎ. ಆರ್. ರೆಹಮಾನ್  ಸಂಗೀತ ಸಂಯೋಜನೆ, ವಿಷ್ಣು ರಂಗಸಾಮಿ ಛಾಯಾಗ್ರಹಣ ಮತ್ತು ಬಿ. ಪ್ರವೀಣ್ ಭಾಸ್ಕರ್ ಸಂಕಲನ ಒಳಗೊಂಡಿದೆ.

    ಲಾಲ್‌ ಸಲಾಂ ಚಿತ್ರವನ್ನು ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್‌ ನಿರ್ಮಿಸಿದ್ದು, ತಮಿಳುನಾಡಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಹಕ್ಕನ್ನು ರೆಡ್ ಜೈಂಟ್ ಸಂಸ್ಥೆ ಪಡೆದುಕೊಂಡಿದೆ. ಕನ್ನಡ, ತೆಲುಗು, ಹಿಂದಿ ಜತೆಗೆ ಮಲಯಾಳಂನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೇ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಇದು 3ನೇ ಸಿನಿಮಾ.

  • ಅಂದುಕೊಂಡ ದಿನದಂದು ರಜನಿ ‘ಲಾಲ್ ಸಲಾಂ’ ರಿಲೀಸ್ ಆಗಲ್ಲವಾ?

    ಅಂದುಕೊಂಡ ದಿನದಂದು ರಜನಿ ‘ಲಾಲ್ ಸಲಾಂ’ ರಿಲೀಸ್ ಆಗಲ್ಲವಾ?

    ಜನಿಕಾಂತ್ ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ಲಾಲ್ ಸಲಾಂ (Lal Salaam) ಸಿನಿಮಾ ಜನವರಿ 14ರ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಸಿನಿಮಾ ದಿನಾಂಕವನ್ನು ಮುಂದೂಡಲು ಚಿತ್ರತಂಡ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಅಂದು ಅನೇಕ ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಇಂಥದ್ದೊಂದು ತೀರ್ಮಾನ ತಗೆದುಕೊಳ್ಳಲಾಗುತ್ತಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಆದರೆ, ಅಧಿಕೃತವಾಗಿ ಈವರೆಗೂ ಈ ಕುರಿತು ಚಿತ್ರತಂಡ ಹೇಳಿಕೊಂಡಿಲ್ಲ.

    ಲಾಲ್ ಸಲಾಂ ರಜನಿಕಾಂತ್ ಮಗಳು ಐಶ್ವರ್ಯ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡ್ತಿದ್ದಾರೆ ರಜನಿಕಾಂತ್. ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಕೂಡ ಆಗಿದ್ದು, ಅಚ್ಚರಿ ಎನ್ನುವಂತೆ ಅವರು ಕಾಣಿಸಿಕೊಂಡಿದ್ದಾರೆ.

    ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜಿನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಸಿನಿಮಾದ ಪೋಸ್ಟರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

  • ‘ಲಾಲ್ ಸಲಾಂ’ ತಂಡಕ್ಕೆ ಹಾರ್ಡ್ ಡಿಸ್ಕ್ ಸಂಕಷ್ಟ: ರಜನಿ ಮಗಳಿಗೆ ಶಾಕ್

    ‘ಲಾಲ್ ಸಲಾಂ’ ತಂಡಕ್ಕೆ ಹಾರ್ಡ್ ಡಿಸ್ಕ್ ಸಂಕಷ್ಟ: ರಜನಿ ಮಗಳಿಗೆ ಶಾಕ್

    ಜನಿಕಾಂತ್ ಪುತ್ರಿ ಐಶ್ವರ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಲಾಲ್ ಸಲಾಂ’ ಸಿನಿಮಾದಲ್ಲಿ ರಜನಿ ಕೂಡ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ರಜನಿ ನಟನೆಯ ದೃಶ್ಯಗಳಿದ್ದ ವಿಡಿಯೋ ಕಾಣೆಯಾಗಿದೆ ಎಂದು ವರದಿಯಾಗಿದೆ. ಒಂದು ಕಡೆ ಹಾರ್ಡ್ ಡಿಸ್ಕ್ (Hard Disk) ಕಾಣಿಯಾಗಿದೆ ಎನ್ನುವ ಸುದ್ದಿ ಇದ್ದರೆ, ಇನ್ನೊಂದು ಕಡೆ ರಜನಿ ನಟನೆಯ ದೃಶ್ಯಗಳು ಡಿಲಿಟ್ ಆಗಿವೆ ಎಂದು ಹೇಳಲಾಗುತ್ತಿದೆ. ಎರಡರಲ್ಲಿ ಯಾವುದು ಸತ್ಯ ಎಂದು ಚಿತ್ರತಂಡ ಸ್ಪಷ್ಟ ಪಡಿಸದೇ ಇದ್ದರೂ, ಎರಡರಲ್ಲಿ ಒಂದಾದರೂ ಘಟನೆ ನಡೆದಿದ್ದರೆ ನಿಜಕ್ಕೂ ಅದು ಶಾಕ್ ಸಂಗತಿ.

    ತಲೈವಾ ಹುಟ್ಟು ಹಬ್ಬಕ್ಕೆ ಟೀಸರ್

    ಭಾರತೀಯ ಸಿನಿಮಾ ರಂಗದ ಖ್ಯಾತ ನಟ ರಜನಿಕಾಂತ್ ಅವರ ಹುಟ್ಟು ಹಬ್ಬಕ್ಕೆ ಲಾಲ್ ಸಲಾಂ ಸಿನಿಮಾದ ಟೀಸರ್ ರಿಲೀಸ್ (Teaser) ಮಾಡಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಡಿಸೆಂಬರ್ 12ರಂದು ತಲೈವಾ ಹುಟ್ಟು ಹಬ್ಬ. ಅಂದೇ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajinikanth) ನಿರ್ದೇಶನದ ಲಾಲ್ ಸಲಾಂ ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

    ರಜನಿಕಾಂತ್ (Rajanikanth) ಸದ್ಯ ‘ಜೈಲರ್’ ಸಿನಿಮಾದ ಗೆಲುವಿನಲ್ಲಿದ್ದಾರೆ. ಇದರ ಜೊತೆ ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ (Lal Salam) ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಆಗಿತ್ತು.

    ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಭರ್ಜರಿಯಾಗಿ ನಡೆದಿದೆ. ಸದ್ಯ ಸಿನಿಮಾದ ಪೋಸ್ಟರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

    ದಾಂಪತ್ಯ ಜೀವನದಲ್ಲಿ ಸೋತಿರೋ ಐಶ್ವರ್ಯಗೆ ಈ ಸಿನಿಮಾದಿಂದ ಬಿಗ್ ಬ್ರೇಕ್ ಬೇಕಾಗಿದೆ. ರಜನಿಕಾಂತ್ ಚಿತ್ರದಲ್ಲಿ ನಟಿಸುತ್ತಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ರಿಲೀಸ್ ಬಳಿಕ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗಲಿದೆ ಕಾದುನೋಡಬೇಕಿದೆ.

  • ಡಿಸೆಂಬರ್ 12ಕ್ಕೆ ರಜನಿ ಹುಟ್ಟು ಹಬ್ಬ: ಲಾಲ್ ಸಲಾಂ ಟೀಸರ್ ರಿಲೀಸ್

    ಡಿಸೆಂಬರ್ 12ಕ್ಕೆ ರಜನಿ ಹುಟ್ಟು ಹಬ್ಬ: ಲಾಲ್ ಸಲಾಂ ಟೀಸರ್ ರಿಲೀಸ್

  • ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ರಜನಿಕಾಂತ್

    ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ರಜನಿಕಾಂತ್

    ಮಿಳು ಚಿತ್ರದ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮಿಳು ನಾಡಿನ (Tamil Nadu)  ಸುಪ್ರಸಿದ್ಧ ಅಣ್ಣಾಮಲೈಯಾರ್ (Annamalaiyar) ದೇವಸ್ಥಾನಕ್ಕೆ ಭೇಟಿ ನೀಡಿದರು. ಸದ್ಯ ರಜನಿ ಲಾಲ್ ಸಲಾಮ್  (Lal Salaam)ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ನಡುವೆ ಕೊಂಚ ಸಮಯ ಮಾಡಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಯಾವುದೇ ಭಾಗದಲ್ಲಿ ಚಿತ್ರೀಕರಣ ಆಗುತ್ತಿರಲಿ, ಆ ಭಾಗದಲ್ಲಿರುವ ಸುಪ್ರಸಿದ್ಧ ದೇವಸ್ಥಾನಗಳಿಗೆ (Temple) ಭೇಟಿ ನೀಡಿ ಪೂಜೆ ಸಲ್ಲಿಸುವುದು ರಜನಿ ವಾಡಿಕೆ. ಅದರಂತೆ ಲಾಲ್ ಸಲಾಮ್ ಚಿತ್ರೀಕರಣ ಸಮಯದಲ್ಲೇ ಪೂಜೆ ಸಲ್ಲಿಸಿ ಸ್ವಲ್ಪ ಹೊತ್ತು ದೇವಸ್ಥಾನದಲ್ಲೇ ಕಳೆದಿದ್ದಾರೆ. ರಜನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ಅವರ ಅಭಿಮಾನಿಗಳು ಜಾತ್ರೆ ರೀತಿಯಲ್ಲಿ ಸೇರಿದ್ದರು. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ತೀರಾ ಸರಳ ಉಡುಪಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ರಜನಿ, ಟೀ ಶರ್ಟ್ ಮತ್ತು ಬಿಳಿ ಪಂಚಿಯಲ್ಲಿ ಇದ್ದರು. ರಜನಿಯನ್ನು ಸರಳವಾಗಿ ನೋಡಿದ ಅಭಿಮಾನಿಗಳು ಘೋಷಣೆ ಕೂಗಿ ಶುಭ ಹಾರೈಸಿದರು. ಅಲ್ಲದೇ ಸೆಲ್ಫಿಗಾಗಿ ಮುಗಿ ಬಿದ್ದರು. ಅವರನ್ನು ದೇವಸ್ಥಾನದಿಂದ ಕಾರ್ ಹತ್ತಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

    ಸದ್ಯ ರಜನಿ (Rajinikanth) ಜೈಲರ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಲಾಲ್ ಸಲಾಮ್ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಸದ್ಯ ಲಾಲ್ ಸಲಾಮ್ ಸಿನಿಮಾದ ಶೂಟಿಂಗ್ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪನಿಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ರಜನಿಕಾಂತ್ ಪುತ್ರಿ ಐಶ್ವರ್ಯ: ಲಾಲ್ ಸಲಾಮ್ ಚಿತ್ರದಲ್ಲಿ ರಜನಿ

    ಅಪ್ಪನಿಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ರಜನಿಕಾಂತ್ ಪುತ್ರಿ ಐಶ್ವರ್ಯ: ಲಾಲ್ ಸಲಾಮ್ ಚಿತ್ರದಲ್ಲಿ ರಜನಿ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajinikanth) ಇದೀಗ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಲಾಲ್ ಸಲಾಮ್ (Lal Salaam) ಹೆಸರಿನಲ್ಲಿ ಇವರು ಚಿತ್ರ ಮಾಡುತ್ತಿದ್ದು, ಈ ಸಿನಿಮಾದಲ್ಲಿ ರಜನಿಕಾಂತ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸಿನಿಮಾದ ನಿರ್ಮಾಪಕರೇ ಘೋಷಿಸಿದ್ದಾರೆ. ಲೈಕಾ ಪ್ರೊಡಕ್ಷನ್ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

    ಲಾಲ್ ಸಲಾಮ್ ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿ ನಟಿಸುತ್ತಿದ್ದು, ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶ್ರೀಧರ್ ಪಿಲ್ಲೈ ಅವರು ಚಿತ್ರಕ್ಕೆ ಹಣ ಹೂಡಿದ್ದಾರೆ. ಅವರೇ ಟ್ವಿಟ್ ಮೂಲಕ ತಮ್ಮ ಸಿನಿಮಾದಲ್ಲಿ ರಜನಿಕಾಂತ್ (Rajinikanth) ವಿಶೇಷ ಪಾತ್ರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ

    ಇದೊಂದು ಕ್ರಿಕೆಟ್ ಹಿನ್ನೆಲೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಕ್ರಿಕೆಟ್ ಬಲ್ಲಂತಹ ನಟರಾದ ವಿಕ್ರಾಂತ್ (Vikrant) ಮತ್ತು ವಿಷ್ಣು ವಿಶಾಲ್ (Vishnu Vishal) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಇಬ್ಬರೂ ಕಲಾವಿದರು ಉತ್ತಮ ಕ್ರಿಕೆಟ್ ಪಟುಗಳು ಎನ್ನುವುದು ವಿಶೇಷ. ಈ ಸಿನಿಮಾದಲ್ಲಿ ಇನ್ನೂ ಹಲವು ಅಚ್ಚರಿಯ ವಿಷಯಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಹೇಳುವುದಾಗಿಯೂ ನಿರ್ಮಾಣ ಸಂಸ್ಥೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]