Tag: Lakshya Sen

  • Paris Olympics 2024: ಲಕ್ಷ್ಯ ಸೇನ್‌ಗೆ ಸೋಲು – ಕಂಚು ಗೆಲ್ಲುವ ಕನಸು ಭಗ್ನ; ಭಾರತಕ್ಕೆ ಮತ್ತೆ ನಿರಾಸೆ!

    Paris Olympics 2024: ಲಕ್ಷ್ಯ ಸೇನ್‌ಗೆ ಸೋಲು – ಕಂಚು ಗೆಲ್ಲುವ ಕನಸು ಭಗ್ನ; ಭಾರತಕ್ಕೆ ಮತ್ತೆ ನಿರಾಸೆ!

    ಪ್ಯಾರಿಸ್‌: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ (Lakshya Sen) ಕಂಚಿನ ಪದಕಕ್ಕಾಗಿ (Bronze Medal) ಸೋಮವಾರ (ಆ.5) ನಡೆದ ಪಂದ್ಯದಲ್ಲಿ ಮಲೇಶಿಯಾದ ಝೀ ಜಿಯಾ ಲೀ ವಿರುದ್ಧ ಸೋತು ಹೊರನಡೆದಿದ್ದಾರೆ.

    ಮೂರು ಸೆಟ್‌ಗಳಿಗೆ ನಡೆದ ಪಂದ್ಯದಲ್ಲಿ ಸೇನ್‌ ಹೋರಾಡಿ ಸೋತಿದ್ದಾರೆ. 21-13 ರಿಂದ ಮೊದಲ ಸೆಟ್‌ನಲ್ಲಿ ಗೆದ್ದಿದ್ದ ಲಕ್ಷ್ಯ ಸೇನ್‌ ಮುಂದಿನ 2 ಸೆಟ್‌ಗಳಲ್ಲಿ ಅಂಕಗಳಿಸಲು ವಿಫಲರಾಗಿ ಸೋಲೊಪ್ಪಿಕೊಂಡರು. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

    ಲಕ್ಷ್ಯ ಸೇನ್‌ ಅವರ ಮೊಣಕೈ ಗಾಯವು ಅವರ ಹೊಡೆತಗಳಿಗೆ ಬ್ರೇಕ್ ನೀಡಿತು. ಆದ್ರೆ ಮೊದಲ ಸೆಟ್‌ನಲ್ಲಿ ಸೋತಿದ್ದ ಝಿ ಜಿಯಾ ಲೀ (Zii Jia Lee)ಉಳಿದ ಎರಡು ಸೆಟ್‌ಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಗೆಲುವು ಕಂಡರು. ಸೇನ್‌ ವಿರುದ್ಧ ಜಿಯಾ ಲೀ 16-21, 11-21 ಅಂಕಳಿಂದ 2 ಸೆಟ್‌ಗಳಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: ಒಲಿಂಪಿಕ್ಸ್‌ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್‌ – ಬ್ರ್ಯಾಂಡ್‌ ಮೌಲ್ಯ 6 ಪಟ್ಟು ಹೆಚ್ಚಳ

    ಕೊನೇ ಸುತ್ತಿನಲ್ಲಿ ಲಕ್ಷ್ಯ ಸೇನ್‌ ಪೈಪೋಟಿ:
    ಮೊಣಕೈ ಗಾಯಕ್ಕೆ ತುತ್ತಾದ ಲಕ್ಷ್ಯ ಸೇನ್‌ ಕೊನೇ ಸುತ್ತಿನಲ್ಲಿ ಉತ್ತಮ ಪೈಪೋಟಿ ನೀಡಿದ್ದರು. ಜಿಯಾ ಲೀ 9 ಪಾಯಿಂಟ್‌ ಇದ್ದಾಗ 3 ಅಂಕ ಗಳಿಸಿದ್ದ ಲಕ್ಷ್ಯ ಸೇನ್‌ ಸತತ ಪಾಯಿಂಟ್ಸ್‌ ನೊಂದಿಗೆ 6-10 ಅಂಕಗಳ ವರೆಗೆ ಪೈಪೋಟಿ ನೀಡಿದ್ದರು. ಆದ್ರೆ ಮಿಂಚಿನ ಆಟವಾಡಿದ ಜಿಯಾ ಲೀ, ಸೇನ್‌ಗೆ ಕೊಂಚ ನಿರಾಳವೂ ಕೊಡದೇ ಬ್ಯಾಕ್‌ ಟು ಬ್ಯಾಕ್‌ ಅಂಕ ಗಳಿಸುತ್ತಲೇ ಹೋದರು. ಇದರಿಂದ ಲಕ್ಷ್ಯ ಸೇನ್‌ಗೆ ಸೋಲು ಎದುರಾಯಿತು.

  • Olympics Badminton: ಸೆಮಿಯಲ್ಲಿ ಮುಗ್ಗರಿಸಿದ ಸೇನ್ – ಕಂಚು ಗೆಲ್ಲಲು ಇದೆ ಅವಕಾಶ

    Olympics Badminton: ಸೆಮಿಯಲ್ಲಿ ಮುಗ್ಗರಿಸಿದ ಸೇನ್ – ಕಂಚು ಗೆಲ್ಲಲು ಇದೆ ಅವಕಾಶ

    ಪ್ಯಾರಿಸ್: ಬ್ಯಾಡ್ಮಿಂಟನ್‌ನಲ್ಲಿ ಮೊಟ್ಟಮೊದಲ ಒಲಿಂಪಿಕ್‌ ಚಿನ್ನದ ಪದಕ ಜಯಿಸುವ ಭಾರತದ ಕನಸು ಲಕ್ಷ್ಯ ಸೇನ್‌ (Lakshya Sen) ಸೋಲಿನೊಂದಿಗೆ ನುಚ್ಚು ನೂರಾಯಿತು.

    ಭಾನುವಾರ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics 2024) ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ವಿಕ್ಟರ್‌ ಅಕ್ಸೆಲ್‌ಸೆನ್‌ ವಿರುದ್ಧ ಲಕ್ಷ್ಯ ಸೇನ್‌ ನೇರ ಗೋಮ್‌ನಲ್ಲಿ ಸೋಲನುಭವಿಸಿದರು. ಇದನ್ನೂ ಓದಿ: Paris Olympics: ಹಾಕಿಯಲ್ಲಿ ಗ್ರೇಟ್‌ ಬ್ರಿಟನ್‌ ಮಣಿಸಿ ಸೆಮಿಫೈನಲ್‌ಗೆ ಭಾರತ ಲಗ್ಗೆ

    ಕಂಚಿನ ಪದಕ ಗೆಲ್ಲಲು ಸೇನ್‌ಗೆ ಮತ್ತೊಂದು ಅವಕಾಶ ಇದೆ. ಪ್ಲೇಆಫ್‌ನಲ್ಲಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೆಣಸಲಿದ್ದಾರೆ. ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಆಗಲು ಸೇನ್‌ಗೆ ಅವಕಾಶವೊಂದಿದೆ.

    54 ನಿಮಿಷಗಳ ಸೆಮಿಫೈನಲ್‌ ಹಣಾಗಣಿಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌ ಅಕ್ಸೆಲ್‌ಸೆನ್ ವಿರುದ್ಧ ಸೇನ್‌ 20-22, 14-21 ನೇರ ಸೆಟ್‌ಗಳ ಸೋಲು ಅನುಭವಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

    ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಬೆಳ್ಳಿ ಮತ್ತು ಕಂಚು ಹಾಗೂ ಲಂಡನ್ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದಾರೆ. ಆದರೆ ಭಾರತವು ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಇದುವರೆಗೂ ಗೆದ್ದಿಲ್ಲ.

  • ಮೊದಲ ಪಂದ್ಯ ಗೆದ್ದ ಲಕ್ಷ್ಯಗೆ ಶಾಕ್‌ – ಗೆದ್ದರೂ ಪಂದ್ಯ ಡಿಲೀಟ್‌

    ಮೊದಲ ಪಂದ್ಯ ಗೆದ್ದ ಲಕ್ಷ್ಯಗೆ ಶಾಕ್‌ – ಗೆದ್ದರೂ ಪಂದ್ಯ ಡಿಲೀಟ್‌

    ಪ್ಯಾರಿಸ್‌: ಒಲಿಂಪಿಕ್ಸ್‌ನ (Paris Olympics) ಬ್ಯಾಡ್ಮಿಂಟನ್‌ (Badminton) ಸಿಂಗಲ್ಸ್‌ನ ಗುಂಪು ಹಂತದ ಪಂದ್ಯದಲ್ಲಿ ಲಕ್ಷ್ಯ ಸೇನ್‌ (Lakshya Sen) ಶುಭಾರಂಭ ಮಾಡಿದ್ದರೂ ಆ ಗೆಲುವನ್ನು ‘ಡಿಲೀಟ್‌’ ಮಾಡಲಾಗಿದೆ.

    ಶನಿವಾರ ಗ್ವಾಟೆಮಾಲಾದ ಆಟಗಾರ ಕಾರ್ಡನ್ ಕೆವಿನ್ ಅವರನ್ನು ಲಕ್ಷ್ಯ ಸೆನ್‌ ನೇರ ಸೆಟ್‌ಗಳಿಂದ ಸೋಲಿಸಿದ್ದರು. ಮೊದಲ ಸೆಟ್ ಅನ್ನು 21-8 ರಿಂದ ಸುಲಭವಾಗಿ ಗೆದ್ದುಕೊಂಡ ಸೇನ್ ಎರಡನೇ ಸೆಟ್ ನಲ್ಲಿ ಕಠಿಣ ಹೋರಾಟ ಮಾಡಿ ಅಂತಿಮವಾಗಿ 22-20 ರಿಂದ ಗೆದ್ದು ಬೀಗಿದ್ದರು.

     

     

    ಈ ಪಂದ್ಯವನ್ನು ಗೆದ್ದರೂ ಲಕ್ಷ್ಯ ಸೇನ್‌ ಗೆಲುವನ್ನು ಟೂರ್ನಿಯಿಂದ ಡಿಲೀಟ್‌ ಮಾಡಲಾಗಿದೆ. ಎಡ ಮೊಣಕೈ ಗಾಯದಿಂದಾಗಿ ಕಾರ್ಡನ್ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿದ್ದರಿಂದ ಬಿಡಬ್ಲ್ಯೂಎಫ್ (BWF) ನಿಯಮಗಳಿಗೆ ಅನುಸಾರವಾಗಿ, ಲಕ್ಷ್ಯ ಮತ್ತು ಕಾರ್ಡನ್ ನಡುವಿನ ಪಂದ್ಯವನ್ನು ಡಿಲೀಟ್ ಮಾಡಲಾಗಿದೆ.

    ಲಕ್ಷ್ಯ ಅವರ ಶ್ರೇಯಾಂಕವು ಗುಂಪು L ಪಂದ್ಯಗಳ ಫಲಿತಾಂಶಗಳನ್ನು ಆಧರಿಸಿ ನಿರ್ಧಾರವಾಗಲಿದೆ.  ಇಂದು ಜೂಲಿಯನ್ ಕಾರ್ರಾಗಿ ವಿರುದ್ಧ ಲಕ್ಷ್ಯ ಸೆನ್‌ ಆಡಲಿದ್ದಾರೆ.

    ಡಿಲೀಟ್‌ ಮಾಡಿದ್ದು ಯಾಕೆ?
    ಬಿಡಬ್ಲ್ಯೂಎಫ್ ನಿಯಮದ ಪ್ರಕಾರ ಲೀಗ್‌ನಲ್ಲಿದ್ದ ಓರ್ವ ಆಟಗಾರ ಮಧ್ಯದಲ್ಲೇ ಹಿಂದಕ್ಕೆ ಸರಿದರೆ ಆಟಗಾರ ಆಡಿದ ಮತ್ತು ಆಡಲಿರುವ ಎಲ್ಲಾ ಪಂದ್ಯಗಳನ್ನು ರದ್ದು ಮಾಡಲಾಗುತ್ತದೆ.

    ಲಕ್ಷ್ಯ ಸೆನ್‌ ಇರುವ ಎಲ್‌ ಗುಂಪಿನಲ್ಲಿ ನಾಲ್ವರು ಆಟಗಾರಿದ್ದರು. ಕಾರ್ಡನ್ ಕೆವಿನ್ ಆಟದಿಂದ ಹಿಂದೆ ಸರಿದ ಕಾರಣ ಈಗ ಲಕ್ಷ್ಯ ಸೆನ್‌ ಭವಿಷ್ಯ ಬೆಲ್ಜಿಯಂನ ಜೋಯಲ್ ಕ್ಯಾರಾಗಿ ಮತ್ತು ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ವಿರುದ್ಧ ನಡೆಯುವ ಪಂದ್ಯಗಳ ಮೇಲೆ ನಿಂತಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮನು ಭಾಕರ್‌ಗೆ ಮೋದಿ ಕರೆ – ಗಣ್ಯರಿಂದ ಅಭಿನಂದನೆಗಳ ಮಹಾಪೂರ

    ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ಉಳಿದ ಎಲ್ಲಾ 2 ಪಂದ್ಯಗಳನ್ನು ಗೆಲ್ಲಬೇಕು. ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರು ಮೂರನೇ ಶ್ರೇಯಾಂಕ ಹೊಂದಿದ್ದು ಚಿನ್ನದ ಪದಕ ಗೆಲ್ಲುವ ನೆಚ್ಚಿನವರಲ್ಲಿ ಒಬ್ಬರಾಗಿದ್ದಾರೆ.

    22 ವರ್ಷದ ಲಕ್ಷ್ಯ ಸೆನ್‌ ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2022 ರಲ್ಲಿ ಥಾಮಸ್ ಕಪ್ ಗೆದ್ದ ಐತಿಹಾಸಿಕ ಭಾರತೀಯ ತಂಡದ ಭಾಗವಾಗಿದ್ದರು ಮತ್ತು ಆಲ್-ಇಂಗ್ಲೆಂಡ್ ಓಪನ್‌ನ ಫೈನಲ್‌ಗೆ ಅರ್ಹತೆ ಪಡೆದ ನಾಲ್ಕು ಭಾರತೀಯ ಪುರುಷರಲ್ಲಿ ಒಬ್ಬರಾಗಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆರ್ಭಟಕ್ಕೆ ಲಂಕಾ ಭಸ್ಮ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ, ಸರಣಿ ಕೈವಶ

  • CWG 2022: ಬ್ಯಾಡ್ಮಿಂಟನ್‍ನಲ್ಲಿ 20ರ ಹರೆಯದ ಯುವಕನಿಗೆ ಚಿನ್ನದ ಹಾರ – ದಿಗ್ಗಜರ ಸಾಲಿಗೆ ಸೇರಿದ ಲಕ್ಷ್ಯ ಸೇನ್

    CWG 2022: ಬ್ಯಾಡ್ಮಿಂಟನ್‍ನಲ್ಲಿ 20ರ ಹರೆಯದ ಯುವಕನಿಗೆ ಚಿನ್ನದ ಹಾರ – ದಿಗ್ಗಜರ ಸಾಲಿಗೆ ಸೇರಿದ ಲಕ್ಷ್ಯ ಸೇನ್

    ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ 20ರ ಹರೆಯದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

    ಫೈನಲ್‍ನಲ್ಲಿ ಲಕ್ಷ್ಯ ಸೇನ್, ಮಲೇಷ್ಯಾದ ಎನ್‍ಜಿ ಟ್ಜೆ ಯೋಂಗ್ ಅವರನ್ನು 19-21, 21-9, 21-16 ಸೆಟ್‍ಗಳಿಂದ ಸೋಲಿಸಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು. ಇದನ್ನೂ ಓದಿ: ಎದ್ದು ಬಿದ್ದು ಬ್ಯಾಟಿಂಗ್‌ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್

    ಈ ಮೂಲಕ ಲಕ್ಷ್ಯ ಸೇನ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ 4ನೇ ಭಾರತೀಯ ಬ್ಯಾಡ್ಮಿಂಟನ್ ಪುರುಷ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಮೊದಲು 1978 ಪ್ರಕಾಶ್ ಪಡುಕೋಣೆ, 1982 ಸೈಯದ್ ಮೋದಿ,  2014 ಪರುಪಳ್ಳಿ ಕಶ್ಯಪ್ ಪದಕ ಗೆದ್ದಿದ್ದರು. ಆ ಬಳಿಕ ಇದೀಗ 2022 ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಲಕ್ಷ್ಯ ಸೇನ್ ಈ ಸಾಧನೆ ಮಾಡಿದ್ದಾರೆ.

    ಈ ಮೊದಲು ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಸೆಟ್‍ಗಳಿಂದ ಪಂದ್ಯವನ್ನು ಗೆದ್ದು ಸತತ ಮೂರು ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

    Live Tv
    [brid partner=56869869 player=32851 video=960834 autoplay=true]

  • ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಲಕ್ಷ್ಯ ಸೇನ್‍ಗೆ ಸಿಎಂ ಗೌರವ

    ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಲಕ್ಷ್ಯ ಸೇನ್‍ಗೆ ಸಿಎಂ ಗೌರವ

    ಬೆಂಗಳೂರು: ಬ್ಯಾಂಕಾಕ್‍ನಲ್ಲಿ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತ ತಂಡದ ಸದಸ್ಯ ಹಾಗೂ ಬೆಂಗಳೂರಿನಲ್ಲಿದ್ದುಕೊಂಡು ತರಬೇತಿ ಪಡೆದಿರುವ ಲಕ್ಷ್ಯ ಸೇನ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.

    ಈ ಸಂದರ್ಭದಲ್ಲಿ ಲಕ್ಷ್ಯ ಸೇನ್ ಅವರಿಗೆ 5 ಲಕ್ಷ ರೂಪಾಯಿ ಮೊತ್ತದ ಬಹುಮಾನದ ಚೆಕ್ ವಿತರಿಸಲಾಯಿತು. ಕ್ರೀಡಾ ಸಚಿವ ಡಾ. ನಾರಾಯಣಗೌಡ, ಸೇನ್ ಅವರ ತರಬೇತುದಾರ ವಿಮಲ್ ಕುಮಾರ ಹಾಗೂ ತಂದೆ ಬೀರೇನ್ ಕುಮಾರ ಸೇನ್ ಹಾಗೂ ತಾಯಿ ನಿರ್ಮಲಾ ಸೇನ್ ಅವರನ್ನು ಕೂಡಾ ಸನ್ಮಾನಿಸಿದರು. ಇದನ್ನೂ ಓದಿ: ಉಮ್ರಾನ್ ಮಲಿಕ್ ಪಾಕಿಸ್ತಾನದಲ್ಲಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು: ಕಮ್ರಾನ್ ಅಕ್ಮಲ್

    14 ಬಾರಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿರುವ ಭಾರತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ತಂಡದಲ್ಲಿ ಬೆಂಗಳೂರಿನ ಆಟಗಾರ ಇರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತರಿಸಿದೆ. ಸದ್ಯ ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ಲಕ್ಷ್ಯ ಸೇನ್ ತರಬೇತಿ ಪಡೆಯುತ್ತಿದ್ದಾರೆ. ಭಾರತದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯವಾಗಿದ್ದು, ಈ ಐತಿಹಾಸಿಕ ಗೆಲುವು ನಮ್ಮ ದೇಶದ ಯುವಜನತೆಗೆ ಸ್ಫೂರ್ತಿ ನೀಡಲಿದೆ. ಇದನ್ನೂ ಓದಿ: ಮಹಿಳಾ T20 ಚಾಲೆಂಜ್‍ಗೆ ದೀಪ್ತಿ, ಹರ್ಮನ್‍ಪ್ರೀತ್, ಮಂದಾನ ನಾಯಕಿಯರು – 3 ತಂಡ ಪ್ರಕಟಿಸಿದ ಬಿಸಿಸಿಐ

  • ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಬೆಂಗಳೂರು: ಇದೇ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

    KCN

    14 ಬಾರಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿರುವ ಭಾರತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ತಂಡದಲ್ಲಿ ಬೆಂಗಳೂರಿನ ಆಟಗಾರ ಇರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತರಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಲಕ್ಷ್ಯ ಸೇನ್ ತರಬೇತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    THOMAS (1)

    ಭಾರತದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯವಾಗಿದ್ದು, ಈ ಐತಿಹಾಸಿಕ ಗೆಲುವು ನಮ್ಮ ದೇಶದ ಯುವಜನತೆಗೆ ಸ್ಫೂರ್ತಿ ನೀಡಲಿದೆ. ಭಾರತದ ಗೆಲುವಿಗೆ ತಮ್ಮದೇ ಕೊಡುಗೆ ನೀಡಿರುವ ಬೆಂಗಳೂರಿನ ಲಕ್ಷ್ಯ ಸೇನ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಲಕ್ಷ್ಯ ಸೇನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ – ಲಕ್ಷ್ಯ ಸೇನ್‌ ರನ್ನರ್‌ ಅಪ್‌

    ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ – ಲಕ್ಷ್ಯ ಸೇನ್‌ ರನ್ನರ್‌ ಅಪ್‌

    ಬರ್ಮಿಂಗ್‌ಹ್ಯಾಮ್‌: ಭಾರತದ ಯುವ ಶಟ್ಲರ್‌ 20 ವರ್ಷದ ಲಕ್ಷ್ಯ ಸೇನ್‌ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌ ಆಗಿ ಹೊರಹೊಮ್ಮಿದ್ದಾರೆ.

    ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಪರಾಭವಗೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಅಕ್ಸೆಲ್ಸೆನ್‌ ವಿರುದ್ಧ 21-10, 21-15 ಅಂತರದಿಂದ ಲಕ್ಷ್ಯ ಸೇನ್‌ ಸೋತಿದ್ದಾರೆ. 6.3 ಅಡಿ ಎತ್ತರದ ಅಕ್ಸೆಲ್ಸೆನ್‌ ವಿರುದ್ಧ 5.8 ಎತ್ತರದ ಲಕ್ಷ್ಯ ಸೇನ್‌ ಎರಡನೇ ಸುತ್ತಿನಲ್ಲಿ ಸ್ವಲ್ಪ ಪ್ರತಿರೋಧ ತೋರಿದರೂ ಯಶಸ್ವಿಯಾಗಲಿಲ್ಲ.

    ಒಂದು ವೇಳೆ ಪ್ರಶಸ್ತಿ ಗೆದ್ದಿದ್ದರೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನೆತ್ತಿದ ಭಾರತದ ಮೂರನೇ ಬ್ಯಾಡ್ಮಿಂಟನ್‌ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದ್ದರು. 1980ರಲ್ಲಿ ಪ್ರಕಾಶ್‌ ಪಡುಕೋಣೆ, 2001ರಲ್ಲಿ ಪುಲ್ಲೇಲ ಗೋಪಿಚಂದ್‌ ಪ್ರಶಸ್ತಿ ಎತ್ತಿದ್ದರು.

    ಇದು ಅಕ್ಸೆಲ್ಸೆನ್‌ ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಲಕ್ಷ್ಯ ಸೇನ್‌ ಅನುಭವಿಸಿದ 5ನೇ ಸೋಲು. ಕಳೆದ ಜರ್ಮನ್‌ ಓಪನ್‌ ಸೆಮಿಫೈನಲ್‌ನಲ್ಲಿ ಮಾತ್ರ ಲಕ್ಷ್ಯ ಸೇನ್‌ ಗೆದ್ದಿದ್ದರು. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    ನೀವು ಉತ್ಸಾಹಭರಿತ ಹೋರಾಟವನ್ನು ಮಾಡಿದ್ದೀರಿ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ನೀವು ಯಶಸ್ಸಿನ ಹೊಸ ಎತ್ತರಗಳನ್ನು ಏರುತ್ತಲೇ ಇರುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲಕ್ಷ್ಯ ಸೇನ್‌ ಅವರನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.

    ಭಾರತದ ಜೋಡಿಗೆ ಸೋಲು: ವನಿತಾ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ತ್ರಿಷಾ ಜಾಲಿ-ಗಾಯತ್ರಿ ಗೋಪಿಚಂದ್‌ ಜೋಡಿ ಪರಾಭವಗೊಂಡಿತು. ಚೀನದ ಶು ಕ್ಸಿಯಾನ್‌ ಜಾಂಗ್‌-ಯು ಜೆಂಗ್‌ 21-17, 21-16 ನೇರ ಗೇಮ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದರು.