Tag: lakshmi nivasa serial

  • ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ಪ್ರತಿಷ್ಠಿತ ಧಾರಾವಾಹಿ ʻಲಕ್ಷ್ಮಿ ನಿವಾಸʼದಿಂದ ನಟಿ ಅಂಜಲಿ ಸುಧಾಕರ್ (Anjali Sudhakar) ಹೊರ ನಡೆದಿದ್ದಾರೆ. ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ರೇಣುಕಾ ಪಾತ್ರದ ಮೂಲಕ ಮನೆ ಮಾತಾಗಿದ್ದ ಅಂಜಲಿ ಸುಧಾಕರ್ ಇತ್ತೀಚೆಗೆ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಈಗ ದಿಢೀರ್ ಅಂತಾ ಧಾರಾವಾಹಿಯಿಂದಲೇ ಹೊರ ಬಂದಿದ್ದಾರೆ. ಅಂಜಲಿ ಹೊರಬರೋದಕ್ಕೆ ಕಾರಣವೇನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

    ಅಂಜಲಿ ಸುಧಾಕರ್ ಸೀರಿಯಲ್‌ನಿಂದ (Lakshmi Nivasa Serial) ಹೊರ ಬಂದಿರುವ ಬಗ್ಗೆ ಅವರ ಸ್ನೇಹಿತೆ ವಿಜಯಲಕ್ಷ್ಮಿ ಸುಬ್ರಮಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಖುದ್ದಾಗಿ ಅಂಜಲಿಯವರನ್ನ ಸಂಪರ್ಕ ಮಾಡಿದಾಗ ಸ್ಪಷ್ಟನೆ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿತ್ತು. ಇತ್ತೀಚೆಗೆ ಪಾತ್ರದ ತಿರುವುಗಳಲ್ಲಿ ತುಂಬಾ ಬದಲಾವಣೆ ಮಾಡಿದ್ದಾರೆ. ನನ್ನ ಪಾತ್ರವನ್ನ ತುಂಬಾ ನೆಗೆಟಿವ್ ಆಗಿ ಪೋಷಣೆ ಮಾಡುತ್ತಿರೋದು ತುಂಬಾ ಬೇಸರ ಮೂಡಿಸಿದೆ. ಚಾನೆಲ್ ಅವರಿಂದ ಈ ಸಮಸ್ಯೆಯಾಗಿಲ್ಲ ಬದಲಾಗಿ ಧಾರಾವಾಹಿ ತಂಡದಿಂದ ಈ ಸಮಸ್ಯೆಯಾಗಿದೆ ಎಂದಿದ್ದಾರೆ ನಟಿ ಅಂಜಲಿ ಸುಧಾಕರ್.

    ಇನ್ನು ಈ ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಆಚೆ ಬಂದಿರೋದು ಪೇಮೆಂಟ್ ವಿಚಾರಕ್ಕೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಪೇಮೆಂಟ್ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ, ಕೆಲವು ಬಾರಿ ಡಿಲೇ ಆಗಿದೆ, ಹೊರತು ವೇತನದ ಸಮಸ್ಯೆಯಾಗಿಲ್ಲ ಎಂದಿದ್ದಾರೆ.

    ಈ ಮುಂಚೆ ನಟಿ ಶ್ವೇತಾ ಕೂಡಾ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಇದರ ಬೆನ್ನಲ್ಲೇ ಇದೀನ ನಟಿ ಅಂಜಲಿ ಸುಧಾಕರ್ ರೇಣುಕಾ ಪಾತ್ರವನ್ನ ತೊರೆದು ಆಚೆ ಬಂದಿದ್ದಾರೆ.

    ನಟಿ ಅಂಜಲಿ ಸುಧಾಕರ್ ಬೇರೆ ಬೇರೆ ಧಾರಾವಾಹಿಯಲ್ಲಿ ಪಾಸಿಟಿವ್ ಆಗಿರುವ ಪಾತ್ರದ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಆದರೆ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಮಾತ್ರ ತುಂಬಾ ನೆಗೆಟಿವ್ ಆಗಿರುವ ಪಾತ್ರದ ಪೋಷಣೆ ನಿರ್ವಹಿಸುವುದು. ಆ ಮೂಲಕ ಜನರು ಸ್ವೀಕರಿಸುವ ರೀತಿ ಕಷ್ಟವಾಗುತ್ತಿರುವ ಕಾರಣದಿಂದ ಈ ಧಾರಾವಾಹಿಯಿಂದ ಆಚೆ ನಡೆದಿದ್ದಾರಂತೆ ನಟಿ ಅಂಜಲಿ ಸುಧಾಕರ್.

  • ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

    ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

    ಕನ್ನಡದ ಹೆಸರಾಂತ ʻಲಕ್ಷ್ಮೀ ನಿವಾಸʼ ಧಾರಾವಾಹಿಯಿಂದ (Lakshmi Nivasa Serial) ನಟಿ ಶ್ವೇತಾ ಹೊರನಡೆದಿದ್ದಾರೆ. ಲಕ್ಷ್ಮಿ ಪಾತ್ರದಲ್ಲಿ ಕಾಣಿಸ್ಕೊಂಡಿದ್ದ ಶ್ವೇತಾ ಧಾರಾವಾಹಿಗೆ ಕಳೆ ತಂದಿದ್ದರು. ಕಳೆದ ಒಂದು ತಿಂಗಳಿಂದ ಪ್ರಸಾರವಾಗುತ್ತಿದ್ದ ಸಂಚಿಕೆಗಳಲ್ಲೂ ಶ್ವೇತಾ ಕಾಣಿಸಿಕೊಂಡಿರಲಿಲ್ಲ. ಇದೀಗ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಧಾರಾವಾಹಿ ತಂಡ ಘೋಷಿಸುವ ಮೊದಲೇ ʻಲಕ್ಷ್ಮೀ ನಿವಾಸʼದಿಂದ ಹೊರಬಂದ ವಿಚಾರ ಅವರೇ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಸುಮಾರು 1 ವರ್ಷದಿಂದ ʻಲಕ್ಷ್ಮೀ ನಿವಾಸʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಒಂದು ಗಂಟೆಗಳ ಕಾಲ ಪ್ರಸಾರವಾಗುತ್ತಿದ್ದ ಸುದೀರ್ಘ ಧಾರಾವಾಹಿ (Kannada Serial) ಇದಾಗಿದ್ದು ಬಹಳ ವರ್ಷಗಳ ಬಳಿಕ ಶ್ವೇತಾ ಕನ್ನಡಕ್ಕೆ ವಾಪಸ್ಸಾಗಿದ್ರು. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ಚೆನೈನಲ್ಲಿ ಕುಟುಂಬದೊಂದಿಗೆ ವಾಸವಿರುದ ಶ್ವೇತಾ (Actress Shweta) ಶೂಟಿಂಗ್ ಇದ್ದಾಗ ಮಾತ್ರ ಬೆಂಗಳೂರಿಗೆ ಬರುತ್ತಿದ್ದರು. ಇದೀಗ ತಾಯಿಯ ಅನಾರೋಗ್ಯದ ಕಾರಣ ಕೊಟ್ಟು ಧಾರಾವಾಹಿಯಿಂದ ಹೊರಬಂದಿರೋದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರುಕ್ಮಿಣಿ ಸೆಲ್ಫಿ `ಟೈಗರ್’ ಪ್ರಿಂಟ್ ಶರ್ಟ್ ಸೀಕ್ರೆಟ್ ರಿವೀಲ್! ಜೂ.ಎನ್‌ಟಿಆರ್‌ಗೆ ನಾಯಕಿ?

    ʻಚೈತ್ರದ ಪ್ರೇಮಾಂಜಲಿʼ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತವಾದ ತಮಿಳಿನ ವಿನೋದಿನಿ ಕನ್ನಡದಲ್ಲಿ ಶ್ವೇತಾ ಹೆಸರಿನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಮೂಲ ತಮಿಳುನಾಡಿನವರಾಗಿದ್ದರೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಪ್ರೀತಿ ಗಳಿಸಿದವರು ಶ್ವೇತಾ. ʻಗೆಜ್ಜೆನಾದʼ, ʻಲಕ್ಷ್ಮಿ ಮಹಾಲಕ್ಷ್ಮಿʼ, ʻಕರ್ಪೂರದ ಗೊಂಬೆʼ ಸೇರಿ ಹಲವು ಸಿನಿಮಾಗಳಲ್ಲಿ ಇವರ ಅಭಿನಯ ಮರೆಯುವಂತಿಲ್ಲ.

    ಬಹು ವರ್ಷಗಳ ಬಳಿಕ ʻಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಲೀಡ್‌ರೋಲ್‌ನಲ್ಲಿ ಅಭಿನಯಿಸೋ ಮೂಲಕ ಕಮ್‌ಬ್ಯಾಕ್ ಆಗಿದ್ದರು. ಇದೀಗ ವೈಯಕ್ತಿಕ ಕಾರಣ ಹೇಳಿ ಬ್ರೇಕ್ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಮತ್ತೆ ಮರಳುತ್ತಾರಾ? ಅಲ್ಲಿಯವರೆಗೂ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರವನ್ನ ಹೊರಗಿಟ್ಟು ಚಿತ್ರೀಕರಣ ಮಾಡಲಾಗುತ್ತಾ? ಶ್ವೇತಾ ಪಾತ್ರವನ್ನ ಬೇರೆಯವರು ರಿಪ್ಲೇಸ್ ಮಾಡೋದಾಗಿದ್ರೆ ಯಾರು ಮಾಡಲಿದ್ದಾರೆ? ಅನ್ನೋದು ಸಸ್ಪೆನ್ಸ್‌ ಆಗಿ ಉಳಿದಿದೆ. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

    ಶ್ವೇತಾ ಹೇಳಿದ್ದೇನು ?
    ವೈಯಕ್ತಿಕ ಕಾರಣ ಹಾಗೂ ತಾಯಿಯ ಅನಾರೋಗ್ಯದಿಂದಾಗಿ ʻಲಕ್ಷ್ಮೀ ನಿವಾಸʼ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದೇನೆ. ನನ್ನನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಕ್ಕಾಗಿ ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಧಾರಾವಾಹಿ ಸೆಟ್‌ನಲ್ಲಿ ಹಲವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅದ್ಭುತ ಪ್ರೀತಿ ಕೊಡುವ ಕನ್ನಡಿಗರಿಗೆ ನನ್ನನ್ನು ರೀ ಎಂಟ್ರಿ ಮಾಡಿಸಿರೋದಕ್ಕೆ ಜೀ ಕನ್ನಡ ವಾಹಿನಿ ಧನ್ಯವಾದ ಹೇಳುತ್ತೇನೆ. ಮತ್ತೆ ಸಿಗುತ್ತೇನೆ. ಇದನ್ನೂ ಓದಿ: ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದಕ್ಕೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್

  • Cannes Film Festival 2025: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್

    Cannes Film Festival 2025: ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್

    ನ್ನಡದ ನಟಿ, ಡಿಜಿಟಲ್ ಕ್ರಿಯೇಟರ್ ದಿಶಾ ಮದನ್ (Disha Madan) ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival 2025) ಭಾಗಿಯಾಗಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ. ವಿಶೇಷ ಅಂದ್ರೆ, 70 ವರ್ಷಗಳ ಹಿಂದಿನ ಕೆಂಪು ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡತಿ- ಅಮ್ಮನ ಸೀರೆ ಗೌನ್ ಮಾಡಿದ ದಿಶಾ ಮದನ್

    ಫ್ರಾನ್ಸ್‌ನಲ್ಲಿ ಅದ್ಧೂರಿಯಾಗಿ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಚಾಲನೆ ಸಿಕ್ಕಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆ ನಟಿ ದಿಶಾ ಮದನ್ ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್‌ನಲ್ಲಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಶೋಲ್ಡರ್ ಲೆಸ್ ಬ್ಲೌಸ್‌ಗೆ ಕೆಂಪು ಸೀರೆಯನ್ನು ಡಿಫರೆಂಟ್ ಆಗಿ ಉಟ್ಟಿದ್ದಾರೆ. 70 ವರ್ಷಗಳ ಹಿಂದಿನ ಕಾಂಚಿವರಂ ಸೀರೆಗೆ ನಟಿ ಹೊಸ ರೂಪ ಕೊಟ್ಟಿದ್ದಾರೆ. ಇದನ್ನೂ ಓದಿ:ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು

    ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ಇದು ನಡೆಯಲಿದೆ. ಪ್ರತಿದಿನವೂ ಒಂದೊಂದು ಬಗೆಯ ಧಿರಿಸಿನಲ್ಲಿ ನಟಿ ಮಿಂಚಿದ್ದಾರೆ. ವಿದೇಶದಲ್ಲೂ ಸೀರೆಯುಟ್ಟು ಮಿಂಚಿದ್ದಾರೆ. ಇದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಪರದೇಶಕ್ಕೆ ಹೋದ್ರು ಭಾರತೀಯ ಸಂಸ್ಕೃತಿ ಮರಿಯದೇ ಸೀರೆಯುಟ್ಟ ನಟಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ಕನ್ನಡತಿ ದಿಶಾಗೆ ಈ ಸಿನಿಮಾ ಹಬ್ಬಕ್ಕೆ ಬರಲು ಬಂಪರ್ ಅವಕಾಶ ಸಿಕ್ಕಿದೆ. ಆಹ್ವಾನ ಪತ್ರ ನೀಡಲಾಗಿದೆ. ಈ ಬಗ್ಗೆ ನಟಿ ವಿಡಿಯೋ ಮೂಲಕ ತಿಳಿಸಿದ್ದರು.

     

    View this post on Instagram

     

    A post shared by Disha Madan (@disha.madan)

    ದಿಶಾ ಮದನ್ ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿ. ನಟಿಯ 3ನೇ ವರ್ಷ ಹುಟ್ಟುಹಬ್ಬದ ಸಮಯದಲ್ಲಿ ಅವರನ್ನು ಡ್ಯಾನ್ಸ್ ತರಬೇತಿಗೆ ಸೇರಿಸಲಾಯಿತು. ಮೂರು ಗಂಟೆಗೂ ಜಾಸ್ತಿ ನಿರಂತರ ನೃತ್ಯಾಭ್ಯಾಸ ಮಾಡುತ್ತಿದ್ದರು. ಹೀಗೆ ನೃತ್ಯ ಮಾಡಿ ಸುಸ್ತಾಗಿ ಬಂದಾಗ ಅಮ್ಮ ಮುದ್ದು ಮಾಡಿ ಊಟ ಮಾಡಿಸುತ್ತಿದ್ದರು. ರಾಜ್‌ಕುಮಾರ್ ಅವರ ಸಿನಿಮಾಗಳ ಹಾಡನ್ನ ಹಾಡಿ ಮಲಗಿಸುತ್ತಿದ್ದರು. ಭಾನುವಾರ ಬಂದರೆ ಅಜ್ಜ ಬಬ್ರುವಾಹನ ಚಿತ್ರವನ್ನ ಮನೆಯಲ್ಲಿ ಹಾಕುತ್ತಿದ್ದರು. ಹೀಗೆ ಬಾಲ್ಯದಿಂದಲೂ ಸಿನಿಮಾ ಜೀವನದ ಒಂದು ಭಾಗವೇ ಆಗಿದೆ ಎಂದು ನಟಿ ವಿಡಿಯೋದಲ್ಲಿ ಹೇಳಿದ್ದಾರೆ. ಪ್ರತಿಯೊಬ್ಬ ನರ್ತಕಿಯಲ್ಲೂ ಒಬ್ಬ ನಟಿ ಇರುತ್ತಾಳೆ. ಹೀಗಾಗಿ ಆಕಸ್ಮಿಕವಾಗಿ ನಟನೆಗೆ ಎಂಟ್ರಿ ಕೊಟ್ಟಿದ್ದಾಗಿ ತಿಳಿಸಿದ್ದರು.

     

    View this post on Instagram

     

    A post shared by Disha Madan (@disha.madan)

    ಪ್ರಸ್ತುತ ನಟಿ ದಿಶಾ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮನೋಜ್ಞ ನಟನೆಯಿಂದ ಮನೆ ಮಾತಾಗಿದ್ದಾರೆ.

  • ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

    ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

    ‘ಲಕ್ಷ್ಮಿ ನಿವಾಸ’ದ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ನ.28ರಂದು ಉದ್ಯಮಿ ಪ್ರತ್ಯಕ್ಷ್ ಜೊತೆ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಸದ್ಯ ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿದ್ದು, ಭಾವಿ ಪತಿ ಜೊತೆ ‘ಬಾರೇ ಬಾರೇ ಕಲ್ಯಾಣ ಮಂಟಪಕೆ ಬಾ’ ಎಂದು ನಟಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

    ಬೆಂಗಳೂರಿನಲ್ಲಿ ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕ್ಯೂಟ್ ಜೋಡಿ ಚಂದನಾ ಮತ್ತು ಪ್ರತ್ಯಕ್ಷ್ ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಅಂತ ಹೆಜ್ಜೆ ಹಾಕಿ ಸಂಭ್ರಮಿಸಿದೆ. ಅಪ್ಪು ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ‘ಲಕ್ಷ್ಮಿ ನಿವಾಸ’ ಸೀರಿಯಲ್ ತಂಡ ಕೂಡ ಜೊತೆಯಾಗಿದೆ. ಮಾನಸಾ ದಂಪತಿ, ದಿಶಾ ಮದನ್ ದಂಪತಿ, ನಟ ಮಧು, ಕ್ಲೋಸ್ ಫ್ರೆಂಡ್ ನಯನಾ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಆತ್ಮಿಯರು ಭಾಗಿಯಾಗಿದರು.

    ಇನ್ನೂ ನ.28ರಂದು ಉದ್ಯಮಿ ಪ್ರತ್ಯಕ್ಷ್ ಜೊತೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಟಿ ಮದುವೆಯಾಗಲಿದ್ದಾರೆ. ಈ ಮದುವೆಗೆ (Wedding) ಬಿಗ್ ಬಾಸ್ ಮನೆಯ ಮಾಜಿ ಸ್ಪರ್ಧಿಗಳು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನೆಪೋಟಿಸಂ ಬಗ್ಗೆ ಕೃತಿ ಸನೋನ್ ಶಾಕಿಂಗ್ ಕಾಮೆಂಟ್

     

    View this post on Instagram

     

    A post shared by Prathima Bhat (@prathima.ashoka.18)

    ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ (Lakshmi Nivasa) ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ‘ಲಕ್ಷ್ಮಿ ನಿವಾಸ’ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ ನಟನೆಯ ‘Mr.ರಾಣಿ’ ಪೋಸ್ಟರ್‌ ರಿಲೀಸ್‌

    ‘ಲಕ್ಷ್ಮಿ ನಿವಾಸ’ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ ನಟನೆಯ ‘Mr.ರಾಣಿ’ ಪೋಸ್ಟರ್‌ ರಿಲೀಸ್‌

    ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದ ನಿರ್ದೇಶಕ ಮಧುಚಂದ್ರ ತಮ್ಮ ಚಿತ್ರಗಳಲ್ಲಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುತ್ತಾ ಬಂದಿದ್ದಾರೆ. ಪ್ರಸ್ತುತ ಮಧುಚಂದ್ರ ಅವರು ‘ಮಿ.ರಾಣಿ’ (Mr.Rani) ಎಂಬ ವಿಭಿನ್ನ ಕಾಮಿಡಿ ಜಾನರ್ ನ ಚಿತ್ರ ನಿರ್ದೇಶಿಸಿದ್ದಾರೆ. ಸದ್ಯ ರಿಲೀಸ್‌ ಆಗಿರುವ ಮಿ.ರಾಣಿ ಸಿನಿಮಾದ ಪೋಸ್ಟರ್‌ ಗಮನ ಸೆಳೆಯುತ್ತಿದೆ.

    ‘ಲಕ್ಷ್ಮೀ ನಿವಾಸ’ (Lakshmi Nivasa) ಧಾರಾವಾಹಿಯಲ್ಲಿ ಜಯಂತ ಪಾತ್ರದ ಮೂಲಕ ಜನಮನ ಗೆದ್ದಿರುವ ದೀಪಕ್ ಸುಬ್ರಹ್ಮಣ್ಯ (Deepak Subramanya) ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪ್ರಚಾರಕಾರ್ಯದಲ್ಲಿ ಭಾಗಿಯಾಗಿದೆ. ಪ್ರಚಾರದ ಮೊದಲೇ ಹೆಜ್ಜೆಯಾಗಿ ನಿರ್ದೇಶಕ ಮಧುಚಂದ್ರ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ. ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ನಟ ದೀಪಕ್ ಸುಬ್ರಹ್ಮಣ್ಯ ಅವರಿಗೆ ಸಹಸ್ರಾರು ಅಭಿಮಾನಿಗಳಿದ್ದಾರೆ. ಆ ಪೈಕಿ 108 ಜನ ಅಭಿಮಾನಿಗಳ ಮನೆಗೆ ʻಮಿ.ರಾಣಿ’ ಚಿತ್ರತಂಡ ಭೇಟಿ ನೀಡಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ದರ್ಶನ ಪಡೆದು, ಅವರ ಮೂಲಕ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿದ್ದಾರೆ. ಈ ವಿನೂತನ ಪ್ರಚಾರಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕಿದೆ.

     

    View this post on Instagram

     

    A post shared by Deepak Subramanya (@deepakthebard)

    108 ಜನರ ಮನೆಗೆ ಭೇಟಿ ನೀಡಿದಾಗ ಅವರು ತೋರಿದ ಪ್ರೀತೆಗೆ ಮನತುಂಬಿ ಬಂದಿದೆ ಎಂದು ತಿಳಿಸಿರುವ “ಮಿ.ರಾಣಿ” ಚಿತ್ರತಂಡ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆಯುತ್ತಿದೆ. ದೀಪಕ್ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ ಪಾರ್ವತಿ ನಾಯರ್ ನಟಿಸಿದ್ದಾರೆ. ಶ್ರೀವತ್ಸ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

    EXCEL ORBIT CREATIONS ಲಾಂಛನದಲ್ಲಿ ನೂರಕ್ಕೂ ಹೆಚ್ಚು ಜನರು ಬಂಡಾವಳ ಹೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಅವರ ಸಂಕಲವಿದೆ.

  • ‘ಭಾವ ತೀರ ಯಾನ’ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟ ‘ಲಕ್ಷ್ಮಿ ನಿವಾಸ’ ನಟಿ

    ‘ಭಾವ ತೀರ ಯಾನ’ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟ ‘ಲಕ್ಷ್ಮಿ ನಿವಾಸ’ ನಟಿ

    ‘ಬಿಗ್ ಬಾಸ್ ಸೀಸನ್ 7’ರ (Bigg Boss Kannada 7)  ಸ್ಪರ್ಧಿ ಚಂದನಾ ಅನಂತಕೃಷ್ಣ (Chandana Ananthakrishna) ಪ್ರಸ್ತುತ ‘ಲಕ್ಷ್ಮಿ ನಿವಾಸ’ (Lakshmi Nivasa Serial) ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ. ಇದೀಗ ಕಿರುತೆರೆಯಿಂದ ಹಿರಿತೆರೆಗೆ ನಟಿ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ನನ್ನ ಆಸೆನೂ ಒಂದು ದಿನ ಸಮುದ್ರನೇ ಆಗಿತ್ತು, ಆದ್ರೆ ಸಮುದ್ರದ ನೀರು ಕುಡಿಯೋಕೆ ಎಲ್ಲಾಗತ್ತೆ ಹೇಳಿ!? ಎಂದು ಡೈಲಾಗ್ ಮೂಲಕ ‘ಭಾವ ತೀರ ಯಾನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಟಿಯ ಲುಕ್ ಮತ್ತು ಸಿನಿಮಾದ ಡೈಲಾಗ್ ಪ್ರೇಕ್ಷಕರಿಗೆ ಮೆಚ್ಚುಗೆ ಆಗಿದೆ. ಇದನ್ನೂ ಓದಿ:‘ಚಿಲ್ಲಿ ಚಿಕನ್’ ಟೀಸರ್ ರಿಲೀಸ್ : ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ

     

    View this post on Instagram

     

    A post shared by Aroha Films (@aroha_films)

    ಮಯೂರ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ಅವರು ನಿರ್ಮಾಣ ಮಾಡುತ್ತಿರುವ ‘ಭಾವ ತೀರ ಯಾನ’ (Bhaava Theera Yaana) ಚಿತ್ರದಲ್ಲಿ ಚಂದನಾ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಧೃತಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸದ್ಯ ನಟಿಯ ಮೊದಲ ಸಿನಿಮಾದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ (Bigg Boss)  ಸೇರಿದಂತೆ ರಿಯಾಲಿಟಿ ಶೋನ ನಿರೂಪಕಿಯಾಗಿಯೂ ಕೂಡ ಗುರುತಿಸಿಕೊಂಡಿದ್ದರು.