Tag: Lakshmi Menon

  • ಐಟಿ ಉದ್ಯೋಗಿ ಕಿಡ್ನ್ಯಾಪ್‌ ಕೇಸ್ – 3ನೇ ಆರೋಪಿ ನಟಿ ಲಕ್ಷ್ಮಿ ಮೆನನ್‌ ಬಂಧನಕ್ಕೆ ಕೋರ್ಟ್‌ ತಡೆ

    ಐಟಿ ಉದ್ಯೋಗಿ ಕಿಡ್ನ್ಯಾಪ್‌ ಕೇಸ್ – 3ನೇ ಆರೋಪಿ ನಟಿ ಲಕ್ಷ್ಮಿ ಮೆನನ್‌ ಬಂಧನಕ್ಕೆ ಕೋರ್ಟ್‌ ತಡೆ

    ತಿರುವನಂತಪುರಂ: ಕೇರಳದ (Kerala) ಕೊಚ್ಚಿಯಲ್ಲಿ ನಡೆದ ಐಟಿ ಉದ್ಯೋಗಿಯ ಕಿಡ್ನ್ಯಾಪ್‌ ಪ್ರಕರಣದಲ್ಲಿ ಖ್ಯಾತ ನಟಿ ಲಕ್ಷ್ಮಿ ಮೆನನ್‌ ಅವ‌ರ ಹೆಸರು ಕೇಳಿಬಂದಿದೆ. ಸದ್ಯ ಪ್ರಕರಣದ ಮೂರನೇ ಆರೋಪಿಯಾಗಿರುವ ಲಕ್ಷ್ಮಿ ಮೆನನ್‌ (Lakshmi Menon) ನಿರೀಕ್ಷಣಾ ಜಾಮೀನು ಪಡೆದು ಬಂಧನ ಭೀತಿಯಿಂದ ಪಾರಾಗಿದ್ದಾರೆ.

    ಲಕ್ಷ್ಮಿ ಮೆನನ್ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ನಟಿಯ ಜೊತೆಗಿದ್ದ ಮಿಥುನ್, ಅನೀಶ್ ಹಾಗೂ ಓರ್ವ ಮಹಿಳಾ ಸ್ನೇಹಿತೆಯನ್ನು ಈಗಾಗಲೇ ಪೊಲೀಸರು (Kerala Police) ಬಂಧಿಸಿದ್ದಾರೆ. ಅಲುವಾ ಮೂಲದ ಐಟಿ ಕಂಪನಿ ಉದ್ಯೋಗಿಯೊಬ್ಬರು ತನ್ನನ್ನು ಅಪಹರಿಸಿ (Techie Kidnap Case), ಥಳಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ನಟಿ ಲಕ್ಷ್ಮಿ ಮೆನನ್‌ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಂತರ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ನೇತೃತ್ವದ ಪೀಠವು ನಟಿಯ ಬಂಧನಕ್ಕೆ ಸೆ.17ರಂದಿ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ
    ಕೋರ್ಟ್‌ಗೆ ಸಲ್ಲಿಸಿದ ನಿರೀಕ್ಷಿಣಾ ಜಾಮೀನು ಅರ್ಜಿಯಲ್ಲಿ ದೂರುದಾರ ಬಾರ್‌ನಲ್ಲಿ ತಮ್ಮನ್ನು ಅವಾಚ್ಯ ಶದ್ಧಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಾರ್‌ನಿಂದ ಹೊರಬಂದ ನಂತರ ದೂರುದಾರರು ಕಾರಿನಲ್ಲಿ ತಮ್ಮನ್ನ ಹಿಂಬಾಲಿಸಿ ಬಿಯ‌ರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಐಟಿ ಉದ್ಯೋಗಿ ಸಲ್ಲಿಸಿರುವ ದೂರಿನ ವಿಷಯವು ಕಟ್ಟುಕಥೆಯಾಗಿದೆ. ಅಪರಾಧಕ್ಕೂ, ನನಗೂ ಯಾವ್ದೇ ಸಂಬಂಧವಿಲ್ಲ. ನನ್ನ ಹೆಸರು, ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಈ ರೀತಿ ದೂರು ಕೊಟ್ಟಿದ್ದಾರೆಂದು ಅರ್ಜಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: 1,000 ಡ್ಯಾನ್ಸರ್ಸ್ ಜೊತೆ ಮೈಸೂರಲ್ಲಿ ರಾಮ್ ಚರಣ್ ಸಿನಿಮಾ ಶೂಟಿಂಗ್

    ಏನಿದು ಪ್ರಕರಣ? ದೂರುದಾರ ಹೇಳಿದ್ದೇನು?
    ದೂರುದಾರರಾದ ಅಲಿಯಾರ್ ಶಾ ಸಲೀಂ ಪ್ರಕಾರ, ಕೆಲವು ದಿನಗಳ ಹಿಂದೆ ಬಾರ್‌ನಲ್ಲಿ ಯಾವುದೋ ಒಂದು ವಿಚಾರಕ್ಕೆ ಲಕ್ಷ್ಮಿ ಮೆನನ್‌ ಅವರ ಗ್ಯಾಂಗ್, ಅಲಿಯಾರ್ ಮತ್ತು ಅವರ ಸ್ನೇಹಿತನೊಂದಿಗೆ ತಗಾದೆ ತೆಗೆದು, ಜೋರಾಗಿ ಜಗಳವಾಡಿದೆ. ಇದಾದ ಬಳಿಕ ಅಲಿಯಾರ್ ಅವರನ್ನ ಹಿಂಬಾಲಿಸಿ ಹೋಗಿ, ಅವರ ಕಾರನ್ನು ಎರ್ನಾಕುಲಂ ನಾರ್ತ್ ಓವರ್‌ಬ್ರಿಡ್ಜ್ ಸಮೀಪದಲ್ಲಿ ನಟಿಯ ಗ್ಯಾಂಗ್ ತಡೆದಿದೆ. ಈ ವೇಳೆ ಆರೋಪಿಗಳಾದ ಲಕ್ಷ್ಮಿ ಮೆನನ್, ಮಿಥುನ್, ಅನೀಶ್ ಮತ್ತು ಸೋನಾಮೋಲ್ ಸೇರಿದಂತೆ ಒಂದು ಗ್ಯಾಂಗ್, ದೂರುದಾರ ಅಲಿಯಾರ್‌ರನ್ನು ಕಾರಿನಿಂದ ಬಲವಂತವಾಗಿ ಎಳೆದು, ಮತ್ತೊಂದು ವಾಹನದಲ್ಲಿ ಕರೆದೊಯ್ದು, ದೈಹಿಕವಾಗಿ ಹಲ್ಲೆ ಮಾಡಿ, ಗಂಭೀರ ಬೆದರಿಕೆ ಹಾಕಿದ್ದಾರೆ. ಇದಾದ ನಂತರ, ಅಲಿಯಾ‌ರ್ ಅವರನ್ನು ಅಲುವಾ-ಪರವೂರ್ ಜಂಕ್ಷನ್‌ನಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾದರು ಎಂದು ಅಲಿಯಾ‌ರ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ನಟಿ ಕೂಡ ಗ್ಯಾಂಗ್‌ನಲ್ಲಿದ್ದರು ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ಲಕ್ಷ್ಮಿ ಮನನ್‌ ಅವರನ್ನ ಪ್ರಕರಣದ 3ನೇ ಆರೋಪಿಯಾಗಿ ಹೆಸರಿಸಲಾಗಿದೆ. ಬಾರ್‌ನಲ್ಲಿ ನಡೆದ ಜಗಳವೇ ಅಪಹರಣ ಮತ್ತು ಥಳಿತಕ್ಕೆ ಕಾರಣ ಎಂದು ತಿಳಿದುಬಂದಿದೆ.

    ಘಟನೆ ಬಳಿಕ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಆದ್ರೆ ಲಕ್ಷ್ಮಿ ಮೆನನ್‌ ಈವರೆಗೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ತನಿಖೆ ಪ್ರಗತಿಯಲ್ಲಿದೆ.

    ತಮಿಳು, ಮಲಯಾಳಂ ಚಿತ್ರಗಳಲ್ಲಿ ಖ್ಯಾತಿ ಪಡೆದಿದ್ದ ಲಕ್ಷ್ಮಿ ಮೆನನ್‌, ಸುಂದರ ಪಾಂಡಿಯನ್, ರೆಕ್ಕಾ, ‘ಚಂದ್ರಮುಖಿ 2 ವೇದಾಲಂ, ಕೊಂಬನ್, ಪಾಂಡ್ಯನಾಡು ಮೊದಲಾದ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ವಿಶಾಲ್-ಲಕ್ಷ್ಮಿ ಮೆನನ್ ಮದುವೆ: ಯಾವುದು ನಿಜ, ಯಾವುದು ಸುಳ್ಳು?

    ವಿಶಾಲ್-ಲಕ್ಷ್ಮಿ ಮೆನನ್ ಮದುವೆ: ಯಾವುದು ನಿಜ, ಯಾವುದು ಸುಳ್ಳು?

    ಮ್ಮೊಂದಿಗೆ ‘ಪಾಂಡಿಯ ನಾಡು’ ಚಿತ್ರದಲ್ಲಿ ನಟಿಸಿದ್ದ ನಟಿ ಲಕ್ಷ್ಮಿ ಮೆನನ್ (Lakshmi Menon) ಅವರನ್ನು ನಟ ವಿಶಾಲ್ (Vishal) ಮದುವೆಯಾಗಲಿದ್ದಾರೆ (Marriage) ಎನ್ನುವ ಸುದ್ದಿ ಹಲವು ದಿನಗಳಿಂದ ತಮಿಳು (Tamil) ಚಿತ್ರೋದ್ಯಮದಲ್ಲಿ ಹರಿದಾಡುತ್ತಿತ್ತು. ಈ ಹಿಂದೆ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದೂ ಹೇಳಲಾಗಿತ್ತು.

    ಪಾಂಡಿಯ ನಾಡು (Pandiya Nadu) ಸಿನಿಮಾ ಲಕ್ಷ್ಮಿ ಮತ್ತು ವಿಶಾಲ್ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಬಾಕ್ಸ್ ಆಫೀಸಿನಲ್ಲೂ ಸಖತ್ ಕಮಾಯಿ ಮಾಡಿತ್ತು. ಹೀಗಾಗಿ ಅಲ್ಲಿಂದಲೇ ಈ ಜೋಡಿ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿತ್ತು. ಈ ಎಲ್ಲ ವದಂತಿಗಳಿಗೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ನಟಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಭಾವುಕ ಪತ್ರ ಬರೆದ ಆರೋಪಿ ಸುಕೇಶ್

    ವಂದತಿಗಳು ಹರಡಿದಾಗ ನಾನು ಯಾವುದಕ್ಕೂ ಉತ್ತರಿಸುವುದಕ್ಕೆ ಹೋಗುವುದಿಲ್ಲ. ಆದರೆ ಮದುವೆ ವಿಚಾರದಲ್ಲಿ ನನಗೆ ಸುಮ್ಮನಿರಲು ಆಗುತ್ತಿಲ್ಲ. ಸುಖಾಸುಮ್ಮನೆ ಒಂದು ಹುಡುಗಿಯ ಹೆಸರನ್ನು ತಳುಕು ಹಾಕಲಾಗುತ್ತಿದೆ. ನಾನು ಮದುವೆ ಆಗುತ್ತಿಲ್ಲ. ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಸುದ್ದಿ ಸುಳ್ಳು. ಅವರ ಹೆಸರನ್ನು ಹಾಳು ಮಾಡಬೇಡಿ ಎಂದು ವಿಶಾಲ್ ಬರೆದುಕೊಂಡಿದ್ದಾರೆ.

    45ರ ವಯಸ್ಸಿನ  ವಿಶಾಲ್ ಈವರೆಗೂ ಮದುವೆ ಆಗಿಲ್ಲ. ಈ ಹಿಂದೆ ಅವರಿಗೆ ನಿಶ್ಚಿತಾರ್ಥವಾಗಿತ್ತು. ಆದರೆ, ಆ ಮದುವೆ ನಡೆಯಲಿಲ್ಲ. ಅಲ್ಲಿಂದೀಚೆಗೆ ಅನೇಕ ಹುಡುಗಿಯರ ಜೊತೆ ವಿಶಾಲ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಯಾವುದಕ್ಕೂ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]