Tag: Lakshmi Manchu

  • ಸಮಂತಾ ಸಿನಿಮಾ ಆಫರ್‌ಗೆ ನಾಗಾರ್ಜುನ ಫ್ಯಾಮಿಲಿ ಅಡ್ಡಗಾಲು?

    ಸಮಂತಾ ಸಿನಿಮಾ ಆಫರ್‌ಗೆ ನಾಗಾರ್ಜುನ ಫ್ಯಾಮಿಲಿ ಅಡ್ಡಗಾಲು?

    ಅಂದ ಚೆಂದ ಫಿಟ್ನೆಸ್ ಎಲ್ಲವೂ ಇದ್ರೂ ಸಮಂತಾಗೆ (Samantha) ಇತ್ತೀಚೆಗೆ ಸಿನಿಮಾ ಆಫರ್ ಕಡಿಮೆಯಾಗಿದೆ. ವೆಬ್‍ಸಿರೀಸ್‍ಗಳು ಬಿಟ್ರೆ ಸಮಂತಾಗೆಂದೇ ಹುಡುಕಿಕೊಂಡು ಬರುವ ಅವಕಾಶಗಳು ಕಮ್ಮಿಯಾಗಿರೋದು ಎಲ್ಲರ ಗಮನಕ್ಕೂ ಬಂದಿದೆ. ಅವಕಾಶಗಳು ಬರುತ್ತಿಲ್ಲವೋ ಅಥವಾ ಸಮಂತಾ ಬೇಡ ಎನ್ನುತ್ತಿದ್ದಾರೋ ಅನ್ನೋ ಅನುಮಾನ ಎಲ್ಲರಲ್ಲಿತ್ತು. ಈಗ ನಟಿಯೊಬ್ಬರು ಸಮಂತಾ ಹೆಸರು ಹೇಳದೇ ಆಡಿದ ಮಾತು ಟಾಲಿವುಡ್ (Tollywood) ಇಂಡಸ್ಟ್ರಿಯನ್ನು ಶೇಕ್ ಮಾಡಿದೆ.

    ಸಮಂತಾಳ ಸಿನಿಮಾ ಅವಕಾಶವನ್ನು ನಾಗಾರ್ಜುನ (Nagarjuna) ಕುಟುಂಬ ತಪ್ಪಿಸುತ್ತಿದೆಯಂತೆ. ಸ್ಟಾರ್ ನಟಿಯಾಗಿದ್ದಾಗ ನಾಗಚೈತನ್ಯ ಕೈ ಹಿಡಿದ ಸಮಂತಾ, ಸಂಸಾರದಲ್ಲಿ ಬಿರುಕುಂಟಾಗಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ನಾಗಚೈತನ್ಯ ಇನ್ನೊಂದು ಮದುವೆಯನ್ನೂ ಆಗಿದ್ದಾರೆ. ಆದರೆ ಸಮಂತಾಗೆ ಬರುವ ಸಿನಿಮಾ ಆಫರ್‌ಗಳನ್ನ ಟಾಲಿವುಡ್ ಪ್ರತಿಷ್ಠಿತ ಸಿನಿಮಾ ಕುಟುಂಬ ಸಮಂತಾ ಮಾಜಿ ಮಾವ ನಾಗಾರ್ಜುನ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಟಿ ಲಕ್ಷ್ಮೀ ಮಂಚು (Lakshmi Manchu) ಅವರು ಕುಟುಂಬದ ಹೆಸರು ಹಾಗೂ ನಟಿಯ ಹೆಸರು ಹೇಳದೆಯೇ ಈ ವಿಚಾರವನ್ನ ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಿಂಟಿಂಗ್ ಮಷಿನ್ ಕಾಸ್ಟ್ಯೂಮ್ ಧರಿಸಿ ಬಂದ ಉರ್ಫಿ – ನನಗೊಂದು ಪ್ರಿಂಟ್‌ ಕೊಡಿ ಅಂದ್ರು ನೆಟ್ಟಿಗರು

    ಸಂದರ್ಶನವೊಂದರಲ್ಲಿ ಹಿರಿಯ ನಟ ಮೋಹನ್ ಬಾಬು ಪುತ್ರಿ ನಟಿ ಲಕ್ಷ್ಮಿ ಮಂಚು ಮಹತ್ವದ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ಮಹಿಳೆಯರ ಮೇಲಿನ ಅನ್ಯಾಯದ ವರ್ತನೆಯ ಬಗ್ಗೆ ಮಾತನಾಡುತ್ತಾ ಯಾರ ಹೆಸರನ್ನೂ ಬಳಸದೆ ಸಮಂತಾಗೆ ಅನ್ಯಾಯವಾಗುತ್ತಿರುವ ವಿಚಾರವನ್ನ ಪ್ರಸ್ತಾಪಿಸಿದ್ರು. “ಓರ್ವ ನಟಿ ಸಿನಿಮಾದಲ್ಲಿ ಕೆಲಸ ಮಾಡಲು ಸಿದ್ಧರಿಸಿದ್ದಾರೆ. ಆದರೆ ನಿರ್ಮಾಪಕರು ಅವರಿಗೆ ಆಫರ್ ಕೊಡಲು ಹೆದರುತ್ತಿದ್ದಾರೆ. ಇಲ್ಲೇ ಕೆಲಸ ಮಾಡುವ ಒಬ್ಬ ಸೂಪರ್‍ಸ್ಟಾರ್‍ನ ಮಾಜಿ ಪತ್ನಿ ಇದ್ದಾರೆ. ಅವರು ವಿಚ್ಛೇದನ ಪಡೆದುಕೊಂಡ ಬಳಿಕ ಅವರಿಗೆ ಒದಗಿ ಬಂದ ಆಫರ್‌ಗಳನ್ನೆಲ್ಲಾ ಕಿತ್ತುಕೊಳ್ಳಲಾಗುತ್ತಿದೆ. ಬೇಡಮ್ಮ ಅವರು ಏನಂತಾರೋ ಏನೋ ಎಂದು ಆಕೆಗೆ ಹೇಳಲಾಗುತ್ತದೆ. ಆಕೆ ಒಳ್ಳೆಯ ಕೆಲಸ ಮಾಡಲು ಕಾಯುತ್ತಿದ್ದಾಳೆ. ನಾನು ಆಕೆಯ ಹೆಸರನ್ನು ಹೇಳುವ ಅಗತ್ಯ ಇಲ್ಲ” ಎಂದಿದ್ದಾರೆ.

    ಇದೀಗ ಲಕ್ಷ್ಮಿ ಮಂಚು ಮಾತು ಟಾಲಿವುಡ್‍ನಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ಸಮಂತಾಗೆ ಸಿನಿಮಾ ಆಫರ್‍ಗಳು ಬರುತ್ತಿಲ್ಲವಾ ಎಂದು ಬೇಸರ ಹೊರಹಾಕಿದ್ದಾರೆ ಸಮಂತಾ ಫ್ಯಾನ್ಸ್. ಇದನ್ನೂ ಓದಿ: ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು

  • ಲಕ್ಷ್ಮಿ ಮಂಚು ಇನ್ಸ್ಟಾಗ್ರಾಂ ಖಾತೆ ಹ್ಯಾಕ್- ಫ್ಯಾನ್ಸ್‌ಗೆ ಎಚ್ಚರಿಸಿದ ನಟಿ

    ಲಕ್ಷ್ಮಿ ಮಂಚು ಇನ್ಸ್ಟಾಗ್ರಾಂ ಖಾತೆ ಹ್ಯಾಕ್- ಫ್ಯಾನ್ಸ್‌ಗೆ ಎಚ್ಚರಿಸಿದ ನಟಿ

    ತೆಲುಗಿನ ನಟಿ ಲಕ್ಷ್ಮಿ ಮಂಚು (Lakshmi Manchu) ಇನ್ಸ್ಟಾಗ್ರಾಂ ಖಾತೆ ಹ್ಯಾಕ್ (Hack) ಆಗಿದೆ. ನಟಿಯ ಖಾತೆಯಿಂದ ಫ್ಯಾನ್ಸ್‌ಗೆ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಲಕ್ಷ್ಮಿ ಮಂಚು ಸೈಬರ್ ಕ್ರೈಮ್‌ಗೆ ದೂರು ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಮೆಜೆಸ್ಟಿಕ್ 2’ ನಾಯಕಿ ಸಂಹಿತಾ ವಿನ್ಯಾ

    ಇನ್ಸ್ಟಾಗ್ರಾಂ ಹ್ಯಾಕ್‌ ಕುರಿತು ಲಕ್ಷ್ಮಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, ನನ್ನ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ನನಗೆ ಹಣದ ಅಗತ್ಯವಿದ್ದರೆ, ನಾನೇ ನಿಮಗೆ ನೇರವಾಗಿ ಕೇಳುತ್ತೇನೆ. ಅದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ. ಯಾರೂ ಹಣ ಕಳೆದುಕೊಂಡಿಲ್ಲ ಎಂದು ಭಾವಿಸಿದ್ದೇನೆ. ಎಲ್ಲವನ್ನೂ ಸರಿಪಡಿಸಿದ ಬಳಿಕ ಮತ್ತೆ ಎಕ್ಸ್ ಖಾತೆಯಲ್ಲಿ ತಿಳಿಸುತ್ತೇನೆ ಎಂದು ಲಕ್ಷ್ಮಿ ಮಂಚು ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು

    ಅಂದಹಾಗೆ, ದಕ್ಷ, ಅಗ್ನಿ ನಕ್ಷತ್ರಂ ಸೇರಿದಂತೆ ತೆಲುಗಿನ ಹಲವು ಸಿನಿಮಾಗಳಲ್ಲಿ ಲಕ್ಷ್ಮಿ ಮಂಚು ಬ್ಯುಸಿಯಾಗಿದ್ದಾರೆ.

  • ಕಾಲಿಗೆ ಬಿದ್ದ ಅಭಿಮಾನಿ ವರ್ತನೆ ಕಂಡು ಶಾಕ್‌ ಆದ ಲಕ್ಷ್ಮಿ ಮಂಚು

    ಕಾಲಿಗೆ ಬಿದ್ದ ಅಭಿಮಾನಿ ವರ್ತನೆ ಕಂಡು ಶಾಕ್‌ ಆದ ಲಕ್ಷ್ಮಿ ಮಂಚು

    ಟಾಲಿವುಡ್ ಬಹುಮುಖ ಪ್ರತಿಭೆ ಲಕ್ಷ್ಮಿ ಮಂಚು (Lakshmi Manchu) ಸದ್ಯ ‘ಆದಿಪರ್ವ’ (Adiparva) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಕೂಡ ಅಭಿಮಾನಿಗಳ ಸೆಳೆದಿದೆ. ಇದೀಗ ಸಿನಿಮಾ ಪ್ರಚಾರ ಕಾರ್ಯಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಈ ವೇಳೆ, ಏಕಾಏಕಿ ಲಕ್ಷ್ಮಿ ಮಂಚು ಕಾಲಿಗೆ ಅಭಿಮಾನಿಯೊಬ್ಬ ನಮಸ್ಕರಿಸಿದ್ದಾರೆ. ಅಭಿಮಾನಿಯ ವರ್ತನೆ ಕಂಡು ನಟಿ ಶಾಕ್ ಆಗಿದ್ದಾರೆ.

    ಆದಿಪರ್ವ ಸಿನಿಮಾದಲ್ಲಿ ಲಕ್ಷ್ಮಿ ಮಂಚು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ದೈವಿಕ ಕಥೆ ಇದಾಗಿದ್ದು, ಇಡೀ ಸಿನಿಮಾ ಅವರ ಪಾತ್ರದ ಸುತ್ತ ಸುತ್ತುತ್ತದೆ. ಹೈದರಾಬಾದ್‌ನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ‘ಆದಿಪರ್ವ’ ಚಿತ್ರದ ಬಗ್ಗೆ ಮಾತನಾಡಲು ನಟಿ ವೇದಿಕೆ ಹತ್ತಿದ್ದಾರೆ. ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ಅಭಿಮಾನಿ ವೇದಿಕೆಯನ್ನೇರಿದ್ದಾನೆ. ಹಿಂದೆ ಮುಂದೆ ನೋಡದೇ ಸೀದಾ ಲಕ್ಷ್ಮಿ ಮಂಚು ಪಾದಕ್ಕೆ ನಮಸ್ಕಾರ ಮಾಡಿದ್ದಾನೆ. ಈ ವರ್ತನೆಯನ್ನ ನಿರೀಕ್ಷೆ ಮಾಡದ ನಟಿ ಅಭಿಮಾನಿ ಕಾಲಿಗೆ ಬೀಳುತ್ತಿದ್ದಂತೆ ಗಲಿಬಿಲಿಗೊಂಡು ಹಿಂದೆ ಸರಿದಿದ್ದಾರೆ.

    ಆ ನಂತರ ಅವರ ಅಂಗರಕ್ಷಕರು ಬಂದು ಆ ಅಭಿಮಾನಿಯನ್ನ ಮೇಲೆತ್ತಿ ಕೆಳಗಿಳಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿ ಆ ನಂತರ ಕಣ್ಣೀರನ್ನೂ ಹಾಕಿದ್ದಾನೆ. ಇದನ್ನ ಗಮನಿಸಿರುವ ಮಂಚು ಲಕ್ಷ್ಮೀ ಕಾರ್ಯಕ್ರಮ ಮುಕ್ತಾಯವಾದ ನಂತರ ಅಭಿಮಾನಿಯನ್ನ ಕರೆದು ಫೋಟೋವನ್ನ ಕ್ಲಿಕಿಸಿಕೊಂಡಿದ್ದಾರೆ. ಅಭಿಮಾನಿಯ ವಿವರವನ್ನೂ ಪಡೆದು ಚಿತ್ರದ ವಿಶೇಷ ಪ್ರದರ್ಶನಕ್ಕೆ ಆಹ್ವಾನ ನೀಡೋದಾಗಿ ತಿಳಿಸಿದ್ದಾರೆ.

    ‘ಆದಿಪರ್ವ’ ಚಿತ್ರದ ಲಕ್ಷ್ಮಿ ಮಂಚು ಲುಕ್ ಕೆಲ ದಿನಗಳ ಹಿಂದೆ ರಿವೀಲ್ ಆಗಿತ್ತು. ನಟಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಈ ಚಿತ್ರದ ಪೋಸ್ಟರ್ ನೋಡಿದ್ರೆ ಸಾಕ್ಷಾತ್ ದೇವಿಯಂತೆಯೇ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ನಟಿಯ ಲುಕ್ ನೋಡುಗರ ಮನಮುಟ್ಟಿದೆ. ಆದಿಪರ್ವ ಸಿನಿಮಾ 5 ಭಾಷೆಗಳಲ್ಲಿ ಏಪ್ರಿಲ್ 5ರಂದು ರಿಲೀಸ್ ಆಗಲಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ

    ‘ಆದಿಪರ್ವ’ ಸಿನಿಮಾವನ್ನ ಸಂಜೀವ ಕುಮಾರ್ ಮೇಗೋಟಿ ಡೈರೆಕ್ಷನ್ ಮಾಡಿದ್ದಾರೆ. ಸೀರಿಯಲ್, ಸಿನಿಮಾ ಅಂತ ಈಗಾಗಲೇ ಇವರು ಕೆಲಸ ಮಾಡಿದ್ದಾರೆ.

  • ಕನ್ನಡಕ್ಕೆ ಎಂಟ್ರಿ ಕೊಟ್ಟ ತೆಲುಗಿನ ಲಕ್ಷ್ಮಿ ಮಂಚು

    ಕನ್ನಡಕ್ಕೆ ಎಂಟ್ರಿ ಕೊಟ್ಟ ತೆಲುಗಿನ ಲಕ್ಷ್ಮಿ ಮಂಚು

    ತೆಲುಗಿನ ಹೆಸರಾಂತ ನಟ ಮೋಹನ್ ಬಾಬು (Mohan Babu) ಪುತ್ರಿ ಲಕ್ಷ್ಮಿ ಮಂಚು (Lakshmi Manchu) ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರುವ ‘ಆದಿಪರ್ವ’ (Adiparva) ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಸದ್ಯ ಶಕ್ತಿ ರೂಪ ತಾಳಿರುವ ಲಕ್ಷ್ಮಿ ಮಂಚು ಪೋಸ್ಟರ್ ಲುಕ್ ರಿಲೀಸ್ ಆಗಿದೆ.

    ನಟಿ, ನಿರೂಪಕಿ ಲಕ್ಷ್ಮಿ ಮಂಚು ಸದಾ ಒಂದಲ್ಲಾ ಒಂದು ಹೊಸ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರು ಜನಕ್ಕೆ ಕನೆಕ್ಟ್ ಆಗುವಂತಹ ಪಾತ್ರಗಳಲ್ಲಿ ನಟಿ ಕಾಣಿಸಿಕೊಳ್ತಾರೆ. ಸದ್ಯ ಶಕ್ತಿದೇವಿಯ ಕಥೆ ಹೇಳೋಕೆ ನಟಿ ಸಜ್ಜಾಗಿದ್ದಾರೆ.

    ‘ಆದಿಪರ್ವ’ ಚಿತ್ರದಲ್ಲಿ ಲಕ್ಷ್ಮಿ ಮಂಚು ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಪೋಸ್ಟರ್ ನೋಡಿದ್ರೆ ಸಾಕ್ಷಾತ್ ದೇವಿಯಂತೆಯೇ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ನಟಿಯ ಲುಕ್ ನೋಡುಗರ ಮನಮುಟ್ಟಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

    ‘ಆದಿಪರ್ವ’ ಸಿನಿಮಾವನ್ನ ಸಂಜೀವ ಕುಮಾರ್ ಮೇಗೋಟಿ ಡೈರೆಕ್ಷನ್ ಮಾಡಿದ್ದಾರೆ. ಸೀರಿಯಲ್, ಸಿನಿಮಾ ಅಂತ ಈಗಾಗಲೇ ಇವರು ಕೆಲಸ ಮಾಡಿದ್ದಾರೆ.

  • ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿರುವುದು ದೇಶಕ್ಕೆ ಅವಮಾನ- ಲಕ್ಷ್ಮಿ ಮಂಚು

    ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿರುವುದು ದೇಶಕ್ಕೆ ಅವಮಾನ- ಲಕ್ಷ್ಮಿ ಮಂಚು

    ಲಿಂಗ ವಿವಾಹಕ್ಕೆ (Same Sex Marraige) ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಮಂಗಳವಾರ (ಅ.17) ಸುಪ್ರೀಂ ಕೋರ್ಟ್‌ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಇದರ ಬಗ್ಗೆ ನಟಿ ಲಕ್ಷ್ಮಿ ಮಂಚು (Lakshmi Manchu) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಸಲಿಂಗ ವಿವಾಹಕ್ಕೆ ಕೋರ್ಟ್‌ ತಡೆ ನೀಡಿರುವ ಬಗ್ಗೆ ನಟಿ ಲಕ್ಷ್ಮಿ ಮಂಚು ಟ್ವೀಟ್ ಮಾಡಿದ್ದಾರೆ. ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಲು ಸುಪ್ರೀಂ ಕೋರ್ಟ್ ತೀರ್ಪು ನನಗೆ ನಿರಾಸೆಗೊಳಿಸಿದೆ. ನನ್ನ ಹೃದಯ ಒಡೆದಿದೆ. ಎಲ್ಲಾ ರೀತಿಯ ಪ್ರೀತಿಯನ್ನು ಸ್ವೀಕರಿಸುವ, ಪ್ರಪಂಚದಲ್ಲಿನ ಪ್ರೀತಿಯ ಬಗ್ಗೆ ಬೋಧಿಸಿದ ದೇಶಕ್ಕೆ ಇದು ನಿಜವಾಗಿಯೂ ಅವಮಾನ ಎಂದಿದ್ದಾರೆ.

    ಅವರು ಬೇರೆ ದೇಶಗಳಲ್ಲಿ ಸ್ವತಂತ್ರವಾಗಿ ಬದುಕುತ್ತಾರೆ. ನಮ್ಮ ದೇಶದಲ್ಲಿ ಅವರ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ರಕ್ಷಕ್‌ ಬುಲೆಟ್‌ಗೆ ಇದ್ಯಂತೆ 5 ಮದುವೆ ಆಗುವ ಯೋಗ

    ಕಳೆದ ವರ್ಷ ‘ಮಾನ್ಸ್ಟರ್’ (Monster) ಎಂಬ ಚಿತ್ರದಲ್ಲಿ ಲಕ್ಷ್ಮಿ ಮಂಚು ಲೆಸ್ಬಿಯನ್ ರೋಲ್ ನಟಿಸಿದ್ದರು. ಚಿತ್ರದಲ್ಲಿನ ಹನಿ ರೋಸ್- ಲಕ್ಷ್ಮಿ ಮಂಚು ಲಿಪ್‌ಲಾಕ್ ದೃಶ್ಯಗಳು ಸಖತ್ ವೈರಲ್ ಆಗಿತ್ತು. ಹಾಗಾಗಿ ಈ ಕುರಿತು ನಟಿಯ ಟ್ವೀಟ್ ಭಾರೀ ವೈರಲ್ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಟಾಲಿವುಡ್‌ನ ಈ ಸ್ಟಾರ್‌ಗೆ ಹೆಸರೂ ಇದೆ ಹಣಾನೂ ಇದೆ. ಮೂವರು ಮಕ್ಕಳು, ಮಕ್ಕಳೆಲ್ಲಾ ಸ್ಟಾರ್ಸು. ಇದೀಗ ಆ ಸ್ಟಾರ್‌ಗೆ ಗಳಿಸಿದ ಆಸ್ತಿಯೇ ತಲೆನೋವು ತಂದಿದೆ. ಎದೆಎತ್ತರಕ್ಕೆ ಬೆಳೆದ ಮಕ್ಕಳು ಕಿತ್ತಾಡ್ಕೊಂಡು ಮೂರು ದಿಕ್ಕಲ್ಲಿ ದಾರಿ ಕಂಡುಕೊಂಡಿದ್ದಾರೆ. ಈ ಕಡೆ ತಂದೆ ಇನ್ನೊಂದು ದಾರಿ ಹಿಡಿದು ಹೊರಟಿದ್ದಾರೆ. ಏನಿದು ಟಾಲಿವುಡ್‌ನಲ್ಲಿ ಗುಲ್ಲಾಗಿರೋ ಜ್ಯುಬಲಿಹಿಲ್ಸ್ ಗಲ್ಲಿ ಸಮಾಚಾರ ಗೊತ್ತೇ..?

    ಟಾಲಿವುಡ್‌ನ (Tollywood)  ಶ್ರೀಮಂತ ನಟರಲ್ಲಿ ಇವರೂ ಒಬ್ಬರು. 90ರ ಕಾಲದ ಸೂಪರ್ ಸ್ಟಾರ್. ನಮ್ಮ್ ಅಂಬರೀಶ್ ಅವರ ಆಪ್ತಮಿತ್ರ. ಅವರ ಹೆಸರೇ ಡೈಲಾಗ್ ಕಿಂಗ್ ಮೋಹನ್ ಬಾಬು. ಡಿಫರೆಂಟ್ ಸ್ಟೈಲ್‌ನಿಂದ ಟಾಲಿವುಡ್‌ನಲ್ಲಿ ಭದ್ರನೆಲೆಕಂಡುಕೊಂಡ ಮೋಹನ್‌ಬಾಬುಗೆ ಮೂವರು ಮಕ್ಕಳು. ವಿಷ್ಣು ಮಂಚು(Vishnu Manchu)  ಮತ್ತು ಮನೋಜ್ ಮಂಚು (Manoj Manchu) ಹಾಗೂ ಲಕ್ಷ್ಮಿ ಮಂಚು. ಮೂರೂ ಮಕ್ಕಳು ಸ್ಟಾರೇ. ಆದರೆ ವಿಷ್ಣು ಹಾಗೂ ಮನೋಜ್ ಮಂಚುವಿನ ಪರಸ್ಪರ ಕಿತ್ತಾಟ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಉಳಿದಿಲ್ಲ. ಕೈಕೈಮಿಲಾಯಿಸಿಕೊಂಡು ಹೊಡೆದಾಡಿಕೊಂಡ ವೀಡಿಯೋ ವೈರಲ್ ಆಗಿ ಇಳಿವಯಸಿನಲ್ಲಿ ಮೋಹನ್ ಬಾಬು(Mohan Babu) ತಲೆಕೆಡಿಸಿಕೊಳ್ಳುವಂತಾಯ್ತು. ಇನ್ನು ಮಗಳು ಲಕ್ಷ್ಮಿ ಕೂಡ ತಮ್ಮದೇ ಸೆಪರೇಟ್ ಮನೆ ಮಾಡ್ಕೊಂಡು ವಾಸವಿದ್ದಾಳೆ.

    ಮಕ್ಕಳು ಅವರವರ ಪಾಡಿಗೆ ದೂರ ಇದ್ರೂ ಮೋಹನ್ ಬಾಬು ತಲೆ ಕೆಡಿಸಿಕೊಳ್ತಿರಲಿಲ್ಲವೇನೋ ಆದರೆ ಆಗಿರೋದು ಬೇರೆ ಅನ್ನುತ್ತದೆ ಟಾಲಿವುಡ್ ಮೂಲ. ಮಕ್ಕಳ ಜಗಳ ನೋಡಲಾರದೆ ಮೋಹನ್ ಬಾಬು ಆಸ್ತಿ ಪಾಲು ಮಾಡಲು ಅಲೆಯುತ್ತಿದ್ದಾರೆ. ಆಂಧ್ರದ ರಿಜಿಸ್ಟರ್ ಆಫೀಸ್‌ಗೂ ಮೋಹನ್ ಬಾಬು ಕಾಲಿಟ್ಟಿದ್ದು ಮಕ್ಕಳಿಗೆ ಆಸ್ತಿ ಪಾಲು ಮಾಡಿ ಪಾರಾಗುತ್ತಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ನೆಮ್ಮದಿ ಜೀವನ ಕಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ. ಅದಕ್ಕೆ ಹೇಳೋದು ಹಣ ಅತಿಯಾಗಿದ್ದರೂ ಕಷ್ಟವೇ.

    ಸ್ಟಾರ್ ನಟರ ಕುಟುಂಬ, ಕಲಾವಿದರು ಅಂದ ಮೇಲೆ ಅಭಿಮಾನಿಗಳಿಗೆ ಪ್ರೇರಣೆಯಾಗಬೇಕು. ಕೂಡಿ ಬಾಳುವ ಮೂಲಕ ಫ್ಯಾನ್ಸ್ಗೆ ಉದಾಹರಣೆಯಾಗಿ ನಿಲ್ಲಬೇಕು. ಆದರೆ ಮೋಹನ್ ಬಾಬು ಅವರ ಮನೆಯ ಜಗಳ ನೋಡಿ ಆಡಿಕೊಳ್ಳುವವರ ಬಾಯಿಗೆ ಗುರಿಯಾಗಿದ್ದಾರೆ. ಮುಂದೆ ಏನಾಗತ್ತೋ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟಾರ್ ನಟನ  ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ಸ್ಟಾರ್ ನಟನ ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ತೆಲುಗು ಸಿನಿಮಾ ರಂಗದ ಖ್ಯಾತ ನಟ ಮೋಹನ್ ಬಾಬು ಅವರ ಪುತ್ರಿ ಲಕ್ಷ್ಮಿ ಮಂಚು ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ಅನ್ನುವುದು ಸಾಮಾನ್ಯ ನಟಿಗೆ ಅಥವಾ ಹೊಸದಾಗಿ ಬರುವ ಕಲಾವಿದೆಯರಿಗೆ ಮಾತ್ರವಲ್ಲ, ಖ್ಯಾತ ನಟರ ಮಗಳಾದ ನನಗೂ ಆಗಿದೆ ಎಂದು ಹೇಳುವ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇದನ್ನೂ ಓದಿ : ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತರು ಮಳೆ ಹನಿ ನಿಲ್ಲದು

    ನಟರ ಮಕ್ಕಳು ಸಿನಿಮಾ ರಂಗದಲ್ಲಿ ಸೇಫ್ ಅನ್ನುವ ಮಾತು ನನ್ನ ವಿಷಯದಲ್ಲಿ ಸುಳ್ಳಾಗಿದೆ. ನನ್ನ ತಂದೆ ಹೆಸರಾಂತ ನಟ. ಆದರೂ, ನನಗೆ ಇಂತಹ ಕಹಿ ಅನುಭವವಾಗಿದೆ. ಯಾರು, ಎಲ್ಲಿ, ಹೇಗೆ ಇರುತ್ತಾರೆ ಎನ್ನುವುದನ್ನು ಊಹಿಸಲೂ ಆಗುವುದಿಲ್ಲ. ನಮಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎನ್ನುವ  ನಂಬಿಕೆ ಹೇಗೆಲ್ಲ ಸುಳ್ಳು ಮಾಡುತ್ತದೆ ಎಂದು ಆಗಿರುವ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಲಕ್ಷ್ಮೀ ಮಂಚು ಆಡಿದ ಈ ಮಾತು ಅವರು ಯಾವೆಲ್ಲ ಸಿನಿಮಾಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದರತ್ತ ಹೊರಳಿದ್ದು, ಯಾರು ಇವರಿಗೆ ಆ ರೀತಿ ತೊಂದರೆ ಕೊಟ್ಟಿರಬಹುದು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಸಿನಿಮಾ ಮತ್ತು  ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಲಕ್ಷ್ಮೀ, ಯಾವ ಕ್ಷೇತ್ರದಲ್ಲಿ ತಮಗೆ ಇಂತಹ ಕಹಿ ಘಟನೆ ನಡೆದಿದೆ ಎಂದು ಹೇಳಿಕೊಂಡಿಲ್ಲ. ಹಾಗಾಗಿ ಯಾವ ಕ್ಷೇತ್ರದಲ್ಲಿ ಅವರಿಗೆ ತೊಂದರೆ ಆಗಿದೆ ಎನ್ನುವುದು ನಿಗೂಢ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು

    ಈವರೆಗೂ ಇಂಗ್ಲಿಷ್, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ, ಹಲವು ಟಿವಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಸಿನಿಮಾದ ಮೂಲಕವೇ ಇವರು ಸಿನಿಮಾ ರಂಗಕ್ಕೆ ಬಂದಿರುವುದು ವಿಶೇಷ.