‘ಬಿಗ್ ಬಾಸ್’ (Bigg Boss Kannada 7) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ನಟಿಯರೊಂದಿಗೆ ಡ್ಯಾನ್ಸ್ ಮಾಡಿರುವ ರೀಲ್ಸ್ ಅನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ತನ್ವಿ ರಾವ್ (Tanvi Rao) ಜೊತೆ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
‘ಲಕ್ಷ್ಮಿ ಬಾರಮ್ಮ’ಖ್ಯಾತಿಯ ಕೀರ್ತಿ ಅಲಿಯಾಸ್ ತನ್ವಿ ಜೊತೆ ಕಿಶನ್ ಅವರು ಸ್ಟೈಲೀಶ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವಾಸುಕಿ ವೈಭವ ಹಾಡಿರುವ ‘ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು’ ಹಾಡಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ. ತನ್ವಿ ಭರತನಾಟ್ಯ ಮಾಡುವ ಮೂಲಕ ಹೆಜ್ಜೆ ಹಾಕ್ತಿದ್ರೆ, ಕಿಶನ್ ಸ್ಟೈಲೀಶ್ ಆಗಿ ಕುಣಿದಿದ್ದಾರೆ. ಇಬ್ಬರ ನೃತ್ಯಕ್ಕೆ ಫ್ಯಾನ್ಸ್ ಬೆರಗಾಗಿದ್ದಾರೆ. ರೀಲ್ಸ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ವರುಣ್ ಧವನ್ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ
ಈಗಾಗಲೇ ರಾಗಿಣಿ, ರಾಧಿಕಾ ಚೇತನ್, ನಮ್ರತಾ ಗೌಡ, ಚೈತ್ರಾ ಆಚಾರ್, ಅನುಪಮಾ ಗೌಡ, ಶ್ರಾವ್ಯ, ಶ್ರುತಿ ಪ್ರಕಾಶ್ ಜೊತೆ ಕಿಶನ್ ಡ್ಯಾನ್ಸ್ ಮಾಡಿದ್ದಾರೆ. ಅವರ ರೀಲ್ಸ್‌ಗಳು ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದಿದೆ.
ಇನ್ನೂ ತನ್ವಿ ರಾವ್ ಪ್ರಸ್ತುತ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ನಾಯಕ ವೈಷ್ಣವ್ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಕಿಶನ್ ಅವರು ‘ನಿನಗಾಗಿ’ (Ninagagi Serial) ಸೀರಿಯಲ್‌ನ ವಿಲನ್ ಆಗಿದ್ದಾರೆ.
‘ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ (Kavitha Gowda) ಮುದ್ದು ಮಗನ (Son) ಆರೈಕೆಯಲ್ಲಿದ್ದಾರೆ. ಮಗನಿಗೆ 6 ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಮಗನ ಜೊತೆಗಿನ ಕ್ಯೂಟ್ ಫೋಟೋವೊಂದನ್ನು ಕವಿತಾ ಹಾಗೂ ಚಂದನ್ (Chandan Kumar) ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೊಸ ಜೀವನದ 6 ತಿಂಗಳುಗಳು. ಗುಂಡಪ್ಪ ಎಂದು ನಟಿ ಬರೆದುಕೊಂಡಿದ್ದಾರೆ. ಪೋಷಕರಾಗಲು ಅದೃಷ್ಟ ಮಾಡಿದ್ದೇವೆ. ನಿನ್ನೊಂದಿಗೆ ಅರ್ಧ ವರ್ಷ ಸಂತೋಷದಿಂದ ಕಳೆದಿರೋದು ಖುಷಿಯಿದೆ ಎಂದು ಕವಿತಾ ದಂಪತಿ ಮಗನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ಸಾಂಗ್ ರಿಲೀಸ್
‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್ ಸೀಸನ್ 9’ರ (Bigg Boss Kannada 9) ಮೂಲಕ ಮನೆ ಮಾತಾದ ನಟಿ ನೇಹಾ ಗೌಡ (Neha Gowda) ಮೊದಲ ಬಾರಿಗೆ ಮಗಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ನ.14 ಮಕ್ಕಳ ದಿನಾಚರಣೆ ಪ್ರಯುಕ್ತ ಮಗಳ ಸುಂದರ ಫೋಟೋ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಡಬ್ಬಿಂಗ್‌ನಲ್ಲಿ ಶ್ರೀವಲ್ಲಿ- ಬಿಗ್ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಮಕ್ಕಳ ದಿನಾಚರಣೆಯಂದು ನಮ್ಮ ಪುಟ್ಟ ಮಗುವಿನ ಫೋಟೋ ಹಂಚಿಕೊಳ್ಳುತ್ತಿರೋದಕ್ಕೆ ಖುಷಿಯಿದೆ. ನಮ್ಮ ಜೀವನದಲ್ಲಿ ಮಗಳ ಆಗಮನವಾಗಿರೋದು ಖುಷಿಯಿದೆ ಎಂದು ಮುದ್ದು ಮಗಳ ಫೋಟೋ ಶೇರ್ ಮಾಡಿ ನೇಹಾ ಸಂಭ್ರಮಿಸಿದ್ದಾರೆ. ಅಂದಹಾಗೆ, ಅ.29ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹಾಗಾಗಿ ನಟನೆಯಿಂದ ನೇಹಾ ವಿರಾಮ ತೆಗೆದುಕೊಂಡಿದ್ದಾರೆ.
ಕಿರುತೆರೆಯ ಜನಪ್ರಿಯ ‘ಲಕ್ಷ್ಮಿ ಬಾರಮ್ಮ’ ವಿಧಿ ಪಾತ್ರಧಾರಿ ಲಾವಣ್ಯ ಹಿರೇಮಠ್ (Lavanya Hiremath) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದು, ಮದುವೆ (Wedding) ಬಗ್ಗೆ ಲಾವಣ್ಯ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಹೇಮಾ ಚೌಧರಿ, ನರಸಿಂಹಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಲಾವಣ್ಯ ಹಿರೇಮಠ್ ಭಾವಿ ಪತಿ ಜೊತೆಗೆ ರೊಮ್ಯಾಂಟಿಕ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅದರ ಜೊತೆಗೆ ಮದುವೆಯಾಗುವ ಹುಡುಗ ಯಾರೆಂದು ಟ್ಯಾಗ್ ಕೂಡ ಮಾಡಿದ್ದಾರೆ. ನಟಿ ಕಮ್ ಡೆಂಟಿಸ್ಟ್ ಆಗಿರುವ ಲಾವಣ್ಯ ಮದುವೆಯಾಗುತ್ತಿರುವ ಹುಡುಗನ ಹೆಸರು ಅಕ್ಷಯ್ ಆಚಾರ್ಯ. ಅವರು ಕೂಡ ಡೆಂಟಿಸ್ಟ್ ಆಗಿದ್ದಾರೆ.
ಇನ್ನೂ ನವೆಂಬರ್ 11ರಂದು ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಲಾವಣ್ಯ ಹಸೆಮಣೆ ಏರಲಿದ್ದಾರೆ. ನಟಿಯ ಮದುವೆಯಲ್ಲಿ ಕುಟುಂಬಸ್ಥರು. ಕಿರುತೆರೆ ಕಲಾವಿದರು, ಆಪ್ತರು ಭಾಗಿಯಾಗಲಿದ್ದಾರೆ.
‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ನೇಹಾ ಗೌಡ (Neha Gowda) ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಶಾಕುಂತಲೆಯಂತೆ ನಟಿ ಮಿಂಚಿದ್ದಾರೆ. ನಟಿಯ ಸುಂದರ ಬೇಬಿ ಬಂಪ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೊಳದ ಬಳಿ ಬಿಳಿ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಕೈಯಲ್ಲಿ ಕಮಲದ ಹೂ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸೀರೆಯುಟ್ಟು ವಿವಿಧ ಭಂಗಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.
ಇತ್ತೀಚೆಗೆ ನೇಹಾ ಅವರಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅದಷ್ಟೇ ಅಲ್ಲ, ವೆಸ್ಟರ್ನ್ ಸ್ಟೈಲಿನಲ್ಲಿ ಬೇಬಿ ಶವರ್ ಕಾರ್ಯಕ್ರಮ ಕೂಡ ಮಾಡಲಾಯಿತು. ಇದನ್ನೂ ಓದಿ:ಫೆ.10ರಂದು ‘ಗರುಡ’ ಚಿತ್ರದ ನಟ ಸಿದ್ಧಾರ್ಥ್ ಮಹೇಶ್ ಮದುವೆ
ಇನ್ನೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೇಹಾ ಮತ್ತು ಚಂದನ್ (Chandan) ಜೋಡಿ 2018ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು.
‘ಬಿಗ್ ಬಾಸ್’, ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿಯ ಚಿನ್ನು ಅಲಿಯಾಸ್ ನಟಿ ಕವಿತಾ ಗೌಡ (Kavitha Gowda) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿರುವ ನಟಿ ಕವಿತಾ ಸೀಮಂತ ಶಾಸ್ತ್ರ ಜರುಗಿದೆ. ಕಿರುತೆರೆಯ ನಟ, ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮ್ಮನಾಗ್ತಿರೋ ಕವಿತಾಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಲೈಂಗಿಕ ಕಿರುಕುಳ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಕೇಸ್
ಕವಿತಾ ಮತ್ತು ನಟ ಚಂದನ್ ಕುಮಾರ್ (Chandan Kumar) ಮನೆಗೆ ಸದ್ಯದಲ್ಲೇ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಇದೇ ಖುಷಿಯಲ್ಲಿ ತುಂಬು ಗರ್ಭಿಣಿ ಕವಿತಾಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಈ ಸಮಾರಂಭಕ್ಕೆ ನಟಿ ನಮ್ರತಾ ಗೌಡ, ತನಿಷಾ ಕುಪ್ಪಂಡ, ಹಿರಿಯ ನಟಿ ಶ್ರುತಿ, ನಿಮಿಕಾ ರತ್ನಾಕರ್, ನೇಹಾ ಗೌಡ (Neha Gowda), ಅನುಪಮಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಅಂದಹಾಗೆ, ಲಾಕ್‌ಡೌನ್ ವೇಳೆ 2021ರ ಮೇ 14ರಂದು ಚಂದನ್ ಕುಮಾರ್ ಮತ್ತು ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸಿದ್ದರು.
ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿ ಕುಮುದಾ ಅಲಿಯಾಸ್ ಅನಿಕಾ ಸಿಂಧ್ಯ (Anikha Sindhya) ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅದೆಷ್ಟೋ ಕಲಾವಿದರು ತೆರೆಯ ಮೇಲೆ ತಮ್ಮ ವಿರುದ್ಧ ಪಾತ್ರಗಳನ್ನ ಮಾಡುತ್ತಾರೆ. ಇದೀಗ ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್ ಆಗಿದ್ದನ್ನ ಸಂದರ್ಶನವೊಂದರಲ್ಲಿ ನಟಿ ಹಂಚಿಕೊಂಡಿದ್ದಾರೆ.
ನಟಿ ಅನಿಕಾ ಸಿಂಧ್ಯ ಅವರು ‘ಲಕ್ಷ್ಮಿ ಬಾರಮ್ಮ’ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ತಾವು ಹೀರೋಯಿನ್ ಆಗಬೇಕು ಅಂತ ಈ ಚಿತ್ರರಂಗಕ್ಕೆ ಬಂದೆ. ಆದರೆ ಆರಂಭದಲ್ಲಿಯೇ ‘ಕಾದಂಬರಿ’ (Kadambari) ಧಾರಾವಾಹಿಯಲ್ಲಿಯೇ ನೆಗೆಟಿವ್ ಶೇಡ್ ಮಾಡಿದೆ. ಪದೇ ಪದೇ ನೆಗೆಟಿವ್ ಪಾತ್ರ ಬಂದರೂ ಕೂಡ ನನ್ನ ಯಾರೂ ಸ್ಟಾಪ್ ಮಾಡುವವರೂ ಇರಲಿಲ್ಲ. ನನಗೆ ಯಾರೂ ಸಲಹೆ ನೀಡುವವರೂ ಇರಲಿಲ್ಲ. ನಾನು ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟೆ. ನೆಗೆಟಿವ್ ಶೇಡ್ ಮಾಡೋದು ನನ್ನ ಬದುಕನ್ನು ಹೇಗೆ ರೂಪಿಸುತ್ತದೆ ಎಂಬುದೇ ಗೊತ್ತಿರಲಿಲ್ಲ ಎಂದು ಅನಿಕಾ ಹೇಳಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ
ಆನ್‌ಸ್ಕ್ರೀನ್ ಮೇಲೆ ನನ್ನ ವಿಲನ್ ಶೇಡ್‌ನಲ್ಲಿ ನೋಡಿದವರು ರಿಯಲ್ ಲೈಫ್‌ನಲ್ಲಿ ಕೂಡ ನಾನು ಹೀಗೆ ಅಂತಾ ಅಂದುಕೊಡರು. ಧಾರಾವಾಹಿಗಳಲ್ಲಿ ನಾನು ಮಾಡಿರುವ ಪಾತ್ರ ನೋಡಿ ಅನೇಕ ಹಿರಿಯರು ಶಾಪ ಹಾಕಿದ್ದಾರೆ ಎಂದು ಅನಿಕಾ ಸಿಂಧ್ಯ ರಿವೀಲ್ ಮಾಡಿದ್ದಾರೆ.
ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡ್ತೀನಿ,ಕುಟುಂಬಕ್ಕೆ ಹೊಂದಿಕೊಳ್ಳೋದಿಲ್ಲ ಅಂತಾ ಎಷ್ಟೋ ಮನೆಯವರು ನನ್ನ ಮದುವೆ ಸಂಬಂಧವನ್ನು ತಿರಸ್ಕರಿಸಿದ್ದಾರೆ. ಮದುವೆ ಬೇಡ ಎನ್ನೋದಿಕ್ಕೆ ಅವರೆಲ್ಲರೂ ನನ್ನ ಪಾತ್ರಗಳೇ ಕಾರಣ ಅಂತ ಹೇಳಿದ್ದಾರೆ. ನೆಗೆಟಿವ್ ಶೇಡ್ ಮಾಡಿ ನಾನು ಎಷ್ಟೋ ಮದುವೆ ಪ್ರಪೋಸಲ್‌ಗಳನ್ನು ಕಳೆದುಕೊಂಡಿದ್ದೇನೆ ಎಂದು ನಟಿ ಅನಿಕಾ ಮೌನ ಮುರಿದಿದ್ದಾರೆ. ಆದರೆ ನಾನು ಇದುವರೆಗೂ ನಟಿಸಿದ ಪಾತ್ರಗಳು ನನಗೆ ಖುಷಿ ಕೊಟ್ಟಿದೆ. ನಾನು ನೆಗೆಟಿವ್ ರೋಲ್ ಮಾಡಿರೋದ್ದಕ್ಕೆ ಪಶ್ಚತ್ತಾಪವಿಲ್ಲ ಎಂದು ನಟಿ ಮಾತನಾಡಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿರುವ ನಟ ಚಂದು ಗೌಡ (Actor Chandu Gowda) ಅವರ ಮನೆಯಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗೆ ಮುದ್ದು ಮಗಳ ಆಗಮನದ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಈಗ ಮಗಳ ಜೊತೆಗೆ ಮುದ್ದಾದ ಫೋಟೋಶೂಟ್ ಮಾಡಿಸಿ, ಮಗಳ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.
ಸಾಕಷ್ಟು ಸೀರಿಯಲ್, ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ತ್ರಿನಯನಿ ಖ್ಯಾತಿಯ ಚಂದು ಗೌಡ 2020ರಲ್ಲಿ ಬಹುಕಾಲದ ಶಾಲಿನಿ (Shalini) ಜೊತೆ ಹಸೆಮಣೆ (Wedding) ಏರಿದ್ದರು. 2022ರಲ್ಲಿ ಚಂದು ಮನೆಗೆ ಆಗಸ್ಟ್‌ನಲ್ಲಿ ಹೆಣ್ಣು ಮಗುವಿನ ಆಗಮನವಾಗಿತ್ತು. ಇದೀಗ ವಿಶೇಷವಾದ ರೀತಿಯಲ್ಲಿ ಮಗಳನ್ನು ಅಭಿಮಾನಿಗಳಿಗೆ ನಟ ಚಂದು ಪರಿಚಯಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ
ಕವಿತಾ ನಾಗಾರಾಜ್ ಫೋಟೋಗ್ರಾಫಿಯಲ್ಲಿ ಈ ಫೋಟೋಶೂಟ್ ಮೂಡಿ ಬಂದಿದೆ. ಸದ್ಯ ಚಂದು ಗೌಡ ಅವರ ಮುದ್ದಾದ ಫೋಟೋ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಫೋಟೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದೆ.
ಪ್ರತಿ ವರ್ಷವೂ ಬಿಗ್ ಬಾಸ್ (Bigg Boss Season 9) ಮನೆಯಲ್ಲಿರುವ ಸದಸ್ಯರಲ್ಲಿ ಅತೀ ಹೆಚ್ಚು ಕಿರುತೆರೆಯ ಲೋಕದವರೇ ಇರುತ್ತಾರೆ. ಈ ಬಾರಿಯೂ ಅದಕ್ಕೆ ಹೊರತಾಗಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾದ ನಾನಾ ಧಾರಾವಾಹಿಗಳ ಫೇಮಸ್ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ತಾರೆಯರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದೂ ಹೇಳಲಾಗಿತ್ತು. ಯಾರೆಲ್ಲ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎನ್ನುವುದು ಇವತ್ತಷ್ಟೇ ಗೊತ್ತಾಗಲಿದೆ. ಅದಕ್ಕೂ ಮುನ್ನ ಕೆಲವು ಹೆಸರುಗಳು ಹರಿದಾಡುತ್ತಿವೆ.
ನೇಹಾ ಗೌಡ (ಲಕ್ಷ್ಮಿ ಬಾರಮ್ಮ)
ಆರು ವರ್ಷಗಳ ಅಧಿಕ ಕಾಲ ಪ್ರಸಾರವಾದ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆ ಅಂತಾನೇ ಫೇಮಸ್ ಆಗಿರುವ ನಟಿ ನೇಹಾ ಗೌಡ (Neha Gowda). ಈ ಬಾರಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ಹೆಸರಾಂತ ನಟಿ ಸೋನು ಗೌಡ ಅವರ ಸಹೋದರಿ ಕೂಡ ಇವರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ಮದುವೆ ಆಗಿರುವ ನೇಹಾ ಗೌಡ, ಇದೀಗ ಧಾರಾವಾಹಿ ಲೋಕದಲ್ಲಿ ಅಷ್ಟೇನೂ ಸಕ್ರಿಯರಾಗಿಲ್ಲವಾದರೂ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರಿಂದ, ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಇದನ್ನೂ ಓದಿ :ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು
ರಮೋಲಾ (ಕನ್ನಡತಿ)
ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುತ್ತಿರುವ ಕನ್ನಡತಿ (Kannadathi)ಧಾರಾವಾಹಿಯ ಸಾನಿಯಾ ಪಾತ್ರದ ಮೂಲಕ ಫೇಮಸ್ ಆದವರು ರಮೋಲಾ. ಈ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ. ಅದೊಂದು ನೆಗೆಟಿವ್ ಪಾತ್ರವಾದರೂ, ರಮೋಲಾ (Ramola) ಒಪ್ಪಿಕೊಂಡು ಪಾತ್ರ ನಿರ್ವಹಿಸಿದ ರೀತಿ ಮೆಚ್ಚುವಂಥದ್ದು. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದರೂ, ಈವರೆಗೂ ಒಂದೂ ಸಿನಿಮಾ ಬಿಡುಗಡೆ ಆಗಿಲ್ಲ. ಮೊನ್ನೆಯಷ್ಟೇ ಕನ್ನಡತಿ ಧಾರಾವಾಹಿಯಿಂದ ಈ ನಟಿ ಹೊರ ನಡೆದಿದ್ದರು. ಇದು ಬಿಗ್ ಬಾಸ್ ಮನೆಗೆ ಹೋಗುವ ಕಾರಣಕ್ಕಾಗಿಯೇ ಆದ ಘಟನೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಸದ್ಯ ಫ್ಯಾಷನ್ ಡಿಸೈನ್ ಕೋರ್ಸ್ ಕೂಡ ಮಾಡುತ್ತಿದ್ದಾರೆ ರಮೋಲಾ.
ಕಾವ್ಯಶ್ರೀ ಗೌಡ (ಮಂಗಳಗೌರಿ ಮದುವೆ)
ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಮಂಗಳಗೌರಿಯಾಗಿ ನಟಿಸಿದವರು ಕಾವ್ಯಶ್ರೀ ಗೌಡ (Kavyashree Gowda). ಕಥಾನಾಯಕಿಯ ಪಾತ್ರವೇ ಅದಾಗಿದ್ದರಿಂದ ಅತೀ ಬೇಗ ಜನರಿಗೆ ಹತ್ತಿರವಾದರು. ನಿರೂಪಕಿಯಾಗಿಯೂ ಕೆಲಸ ಮಾಡಿರುವ ಕಾವ್ಯಶ್ರೀ, ಮೂಲತಃ ಚನ್ನಪಟ್ಟಣದವರು. ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕಾವ್ಯಶ್ರೀ, ಇದೀಗ ಬಿಗ್ ಬಾಸ್ ಮನೆಯನ್ನೂ ಪ್ರವೇಶ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ ಅದು ಕನಸಾಗಿಯೇ ಉಳಿಯಿತು.
ಅಮೂಲ್ಯ ಗೌಡ (ಕಮಲಿ)
ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ಚಿರಪರಿಚಿತ ಹೆಸರು ಅಮೂಲ್ಯ ಗೌಡ (Amulya Gowda) ಅವರದ್ದು. ಕನ್ನಡದ ಪ್ರೇಕ್ಷಕರಿಗೆ ಕಮಲಿ (Kamali) ಆಗಿಯೇ ಪರಿಚಯವಾದವರು. ಅದೊಂದು ಸಾಂಪ್ರದಾಯಿಕ ಹುಡುಗಿಯ ಪಾತ್ರವಾಗಿದ್ದರಿಂದ ನೋಡುಗರಿಗೆ ಬೇಗನೇ ಹತ್ತಿರವಾದ ನಟಿ. ಸ್ವಾತಿ ಮುತ್ತು, ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್‌ವುಡ್‌ನ ರಿಯಲ್ ಕಪಲ್ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಹೊಸ ಮನೆಯ ಹೊಸ ಬದುಕಿನ ಹೊಸ್ತಿಲಲ್ಲಿದ್ದಾರೆ. ಕಳೆದ ವರ್ಷ ಹಸೆಮಣೆ ಏರಿದ್ದ ಈ ಜೋಡಿ, ಇದೀಗ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಕಿರುತೆರೆಯ `ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಚಿನ್ನು ಮತ್ತು ಚಂದನ್ ಜೋಡಿ, ರಿಯಲ್ ಲೈಫ್‌ನಲ್ಲೂ ಪ್ರೀತಿಸಿ, ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ಮೇ 14ರಂದು ಸರಳವಾಗಿ ಮದುವೆಯಾಗಿದ್ದರು. ಇಬ್ಬರು ಕಲಾವಿದರಾಗಿರುವುದರಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ನೀಡುತ್ತಾ ಜೊತೆಯಾಗಿ ಸಾಗುತ್ತಿದ್ದಾರೆ. ಇದೀಗ ಬಿಗ್ ಬಾಸ್ ಖ್ಯಾತಿಯ ಕವಿತಾ ಮತ್ತು ಚಂದನ್ ಹೊಸ ಜೀವನದ ಜತೆ ಹೊಸ ಮನೆಯ ಹೊಸ್ತಿಲಲ್ಲಿದ್ದಾರೆ. ಇದನ್ನೂ ಓದಿ: ಪ್ರಾಣಿ, ಪಕ್ಷಿಗಳ ಜೊತೆ ರಾಕಿಭಾಯ್ ಕುಟುಂಬ: ವಿಡಿಯೋ ಹಂಚಿಕೊಂಡ ಯಶ್
ಬೆಂಗಳೂರಿನ ನಾಯಂಡಹಳ್ಳಿಯ ಬಳಿ ನಿನ್ನೆಯಷ್ಟೇ (ಜೂ.18) ಕವಿತಾ ಮತ್ತು ಚಂದನ್ ಗೃಹಪ್ರವೇಶ ಮಾಡಿದ್ದಾರೆ. ಇದೇ ಖುಷಿಯಲ್ಲಿ ಹೊಸ ಮನೆಯ, ಹೊಸ ಬದುಕಿನ ಹೊಸ್ತಿಲಲ್ಲಿ ಎಂದು ಅಡಿಬರಹ ನೀಡಿ ವಿಶೇಷ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ನೆಚ್ಚಿನ ಜೋಡಿಯ ಸಂತಸ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸುತ್ತಿದ್ದಾರೆ.