Tag: Lakshmi

  • ದೀಪಾವಳಿಯಂದು ಲಕ್ಷ್ಮೀ ಪೂಜೆ ಮಾಡೋದು ಯಾಕೆ?

    ದೀಪಾವಳಿಯಂದು ಲಕ್ಷ್ಮೀ ಪೂಜೆ ಮಾಡೋದು ಯಾಕೆ?

    ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ… ಪುರಂದರ ದಾಸರ ರಚಿಸಿದ ಈ ಹಾಡು ಗುನುಗುತ್ತಲೇ ಇರುತ್ತದೆ. ಹಿಂದೂ (Hindu) ಧರ್ಮದಲ್ಲಿ ಸಂಪತ್ತು, ಅದೃಷ್ಟ, ಸಮೃದ್ಧಿ, ಸೌಂದರ್ಯ, ಫಲವತ್ತತೆ, ರಾಜಮನೆತನದ ಶಕ್ತಿ ಮತ್ತು ಸಮೃದ್ಧಿಯ ದೇವತೆ ಎಂದು ಪೂಜಿಸಲಾಗುತ್ತದೆ.

    ದೇವ ದಾನವರು ಅಮೃತಕ್ಕಾಗಿ ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ ಮೊದಲು ತೀವ್ರವಾದ ವಿಷ ಜನಿಸಿತು. ನಂತರ ಜೇಷ್ಠಾದೇವಿ ಜನಿಸಿದಳು. ಬಳಿಕ ಲಕ್ಷ್ಮೀ ಪಾಲ್ಗಡಲಿಂದ ಹೊರಬಂದಳು. ವಿಷ್ಣು ಲಕ್ಷ್ಮೀಯನ್ನು ಮದುವೆಯಾದ. ಎಲ್ಲಿ ಲಕ್ಷ್ಮೀ ನೆಲೆಸಿದ್ದಾಳೋ ಆ ಸ್ಥಳದಲ್ಲಿ ಎಂದಿಗೂ ಹಣ ಅಥವಾ ಆರ್ಥಿಕ ಸಮಸ್ಯೆ ಬರುವುದಿಲ್ಲ ಎಂಬ ನಂಬಿಕೆ. ಈ ಕಾರಣಕ್ಕಾಗಿ ಜನರು ಲಕ್ಷ್ಮೀ ದೇವಿಯನ್ನು ಮನೆಯ ದೇವರ ಕೋಣೆ, ಉದ್ಯೋಗ, ವ್ಯಾಪಾರ ಮಾಡುವ ಸ್ಥಳಗಳಲ್ಲಿ ಲಕ್ಷ್ಮೀಯ ಫೋಟೋವನ್ನು ಇರಿಸುತ್ತಾರೆ. ವ್ಯಾಪಾರಸ್ಥರು ಬೆಳಗ್ಗೆ ಲಕ್ಷ್ಮೀದೇವಿ ಕೈ ಮುಗಿದು ವ್ಯಾಪಾರ ಆರಂಭಿಸುತ್ತಾರೆ.

    ದೀಪಾವಳಿ ಅಮಾವಾಸ್ಯೆಯನ್ನು ದೀವಳಿಗೆ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಆ ದಿನ ಕೆಲ ಕಡೆಗಳಲ್ಲಿ ಪಿತೃಗಳಿಗೆ ತರ್ಪಣವನ್ನಿತ್ತು ಶ್ರಾದ್ಧವಿಧಿಗಳನ್ನು ತೀರಿಸಿ ಜನರು ತಮ್ಮನ್ನು ಅಗಲಿದ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಬೇಡುತ್ತಾರೆ. ಲಕ್ಷ್ಮೀ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ. ಆದರೆ ಲಕ್ಷ್ಮೀ ಕೇವಲ ‘ಧನಲಕ್ಷ್ಮೀ’ ಮಾತ್ರವಲ್ಲ. ಆಕೆ ಸಚ್ಚಿದಾನಂದ ಶಕ್ತಿಯ ವಿಶ್ವಮಯಿ. ಈಕೆಯೇ ಸಕಲ ಶ್ರೇಯಸ್ಸುಗಳಿಗೆ ಕಾರಣಳು. ಲಕ್ಷ್ಮೀ ಕಟಾಕ್ಷ ಜ್ಯೋತಿ ಸ್ವರೂಪಕ್ಕೆ ಸಮಾನ, ಮಹಾಲಕ್ಷ್ಮಿಯು ಜ್ಯೋತಿಸ್ವರೂಪಿಣಿಯಾಗಿದ್ದಾಳೆ. ಸೂರ್ಯ, ಚಂದ್ರ, ಅಗ್ನಿ, ನಕ್ಷತ್ರಗಳು ಮೊದಲಾದ ಎಲ್ಲಾ ಜ್ಯೋತಿರ್ವಸ್ತುಗಳಲ್ಲಿಯೂ ವಿರಾಜಮಾನಳಾಗಿದ್ದಾಳೆ. ಇದನ್ನೂ ಓದಿ: ವಯಸ್ಸಿನ ಅಂತರವಿಲ್ಲದೇ ಆಚರಿಸುವ ಹಬ್ಬ ದೀಪಾವಳಿ!

    DEEPA

     

    ಸರಸ್ವತಿ ಇದ್ದಲ್ಲಿ ಲಕ್ಷ್ಮೀ ಇರುತ್ತಾಳೆ. ಸರಸ್ವತಿ ಇಲ್ಲದ ಮನೆಯಲ್ಲಿ ಲಕ್ಷ್ಮೀ ನೆಲೆ ನಿಲ್ಲುವುದಿಲ್ಲ ಎಂಬ ಮಾತಿದೆ. ಈ ಕಾರಣಕ್ಕೆ ದಸರಾ ಸಮಯದಲ್ಲಿ ಸರಸ್ವತಿ ಪೂಜೆ ಮಾಡಿದರೆ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ಪೂಜೆ (Lakshmi Puja) ಮಾಡಿದರೆ ಆ ಮನೆಗೆ ಒಳ್ಳೆದಾಗುತ್ತದೆ ಎಂಬ ನಂಬಿಕೆಯಿದೆ. ಲಕ್ಷ್ಮೀ ಎಷ್ಟು ಸಂತೋಷವಾಗಿರುತ್ತಾಳೆಯೋ ಅಷ್ಟು ಕುಟುಂಬಕ್ಕೆ ಆರೋಗ್ಯ ಮತ್ತು ಸಂಪತ್ತನ್ನು ಕರುಣಿಸುತ್ತಾಳೆ ಎಂದು ಭಕ್ತರು ನಂಬುತ್ತಾರೆ. ಅಸ್ಸಾಂ, ಒಡಿಶಾ ಮತ್ತು ಬಂಗಾಳದ ಕೆಲವು ಭಾಗಗಳಲ್ಲಿ ಲೋಕಿ ಪೂಜೆ ಅಥವಾ ಲಕ್ಷ್ಮೀ ಪೂಜೆಯನ್ನು ಅಶ್ವಿನಿ ಪೂರ್ಣಿಮಾ ದಿನದಂದು ವಿಜಯ ದಶಮಿಯ ನಂತರದ ಹುಣ್ಣಿಮೆಯ ದಿನದಂದು ಆಚರಿಸುತ್ತಾರೆ.

    ಪುರಾಣ ಕಥೆ ಏನು?
    ಋಷಿ ದೂರ್ವಾಸ ಮತ್ತು ದೇವೇಂದ್ರ ನಡುವಿನ ಸಭೆಯೊಂದಿಗೆ ಕಥೆಯು ಪ್ರಾರಂಭವಾಗುತ್ತದೆ. ಋಷಿ ದೂರ್ವಾಸ, ಬಹಳ ಗೌರವದಿಂದ ಇಂದ್ರನಿಗೆ ಹೂವಿನ ಹಾರವನ್ನು ಅರ್ಪಿಸುತ್ತಾನೆ. ಇಂದ್ರನು ಹೂವುಗಳನ್ನು ತೆಗೆದುಕೊಂಡು ತನ್ನ ಆನೆಯ ಐರಾವತದ ಹಣೆಯ ಮೇಲೆ ಇಡುತ್ತಾನೆ. ಆನೆಯು ಹಾರವನ್ನು ಸೊಂಡಿಲಿನಿಂದ ತೆಗೆದುಕೊಂಡು ಭೂಮಿಯ ಮೇಲೆ ಎಸೆಯುತ್ತದೆ.

    ನಾನು ನೀಡಿದ ಹಾರಕ್ಕೆ ಅಗೌರವ ತೋರಿದ್ದಕ್ಕೆ ಸಿಟ್ಟಾದ ದೂರ್ವಾಸ ಮುನಿ ಕೋಪಗೊಂಡು, ನಿನಗೆ ಅಹಂಕಾರ ಬಂದಿದೆ. ಹೇಗೆ ನನ್ನ ಹಾರವನ್ನು ನೆಲಕ್ಕೆ ಎಸೆದು ಹಾಳು ಮಾಡಿದೆಯೋ ಅದೇ ರೀತಿ ನಿನ್ನ ರಾಜ್ಯವು ಹಾಳಾಗಲಿ ಎಂದು ಇಂದ್ರನಿಗೆ ಶಾಪವನ್ನು ಕೊಡುತ್ತಾನೆ. ದೂರ್ವಾಸನ ಶಾಪದ ಪರಿಣಾಮ ದೇವತೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಎಲ್ಲಾ ತರಕಾರಿ ಉತ್ಪನ್ನಗಳು ಮತ್ತು ಸಸ್ಯಗಳು ಸಾಯಲು ಪ್ರಾರಂಭಿಸುತ್ತವೆ, ಪುರುಷರು ದಾನ ಮಾಡುವುದನ್ನು ನಿಲ್ಲಿಸುತ್ತಾರೆ, ಮನಸ್ಸುಗಳು ಭ್ರಷ್ಟವಾಗುತ್ತವೆ, ಜನರು ಅಂತಿಮ ಇಂದ್ರಿಯ ಸುಖಗಳಲ್ಲಿ ತೊಡಗಲು ಪ್ರಾರಂಭಿಸುತ್ತಾರೆ. ಅಮರಾವತಿಯಲ್ಲಿ ದೇವರುಗಳು ದುರ್ಬಲವಾಗುತ್ತಿದ್ದಂತೆ, ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುತ್ತಾರೆ.

     

    ಸೋತ ನಂತರ ಇಂದ್ರಾದಿ ದೇವತೆಗಳು ವಿಷ್ಣುವಿನ ಬಳಿ ಹೋಗಿ ಮೊರೆ ಇಡುತ್ತಾರೆ. ಆಗ ಆಮೃತ ಪಡೆಯಬೇಕೆಂದು ಹೇಳಿದ ವಿಷ್ಣು ನೀವು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡಬೇಕು ಎಂದು ಸೂಚಿಸುತ್ತಾನೆ. ಸಮುದ್ರ ಮಥನದ ವೇಳೆ ಲಕ್ಷ್ಮೀ ದೇವಿಯು ಪೂರ್ಣ ಅರಳಿದ ಕಮಲದ ಮೇಲೆ ಕುಳಿತಿರುವ ಅಲೆಗಳಿಂದ ಹೊರಬರುತ್ತಾಳೆ. ನಂತರ ವಿಷ್ಣು ಲಕ್ಷ್ಮೀಯನ್ನು ವರಿಸುತ್ತಾನೆ.

    ಈ ಕಥೆಯ ಸಾರಾಂಶ ಏನೆಂದರೆ ಅದೃಷ್ಟದ ದೇವತೆಯಾದ ಲಕ್ಷ್ಮಿಯು ಅಹಂಕಾರಿಗಳಾದರೆ ದೇವತೆಗಳನ್ನೂ ಸಹ ಕೈಬಿಡುತ್ತಾಳೆ. ಹೀಗಾಗಿ ಸಿರಿವಂತಿಕೆ ಬಂದರೂ ಅಂಹಕಾರ ತೋರದೇ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀ ನೆಲಸುತ್ತಾಳೆ ಎಂಬ ನಂಬಿಕೆ ಈಗಲೂ ಇದೆ.

  • ಗುರು ರಾಯರ ಸನ್ನಿಧಿಯಲ್ಲಿ ‘ಚಿನ್ನದ ಮಲ್ಲಿಗೆ ಹೂವೇ’ ಟೀಮ್

    ಗುರು ರಾಯರ ಸನ್ನಿಧಿಯಲ್ಲಿ ‘ಚಿನ್ನದ ಮಲ್ಲಿಗೆ ಹೂವೇ’ ಟೀಮ್

    ತ್ತೀಚೆಗೆ ಟೈಟಲ್ ಮೂಲಕವೇ ಬಾರಿ ಸುದ್ದಿ ಮಾಡಿದ ಚಿತ್ರ ‘ಚಿನ್ನದ ಮಲ್ಲಿಗೆ  ಹೂವೇ’ (Chinnada Mallige Hoove). ಈ ಸಿನಿಮಾ ತಂಡ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಬಳಿಯಲ್ಲಿ ಸ್ಕ್ರಿಪ್ಟ್ ಪೂಜೆ ಸಲ್ಲಿಸಿ ರಾಯರ ಅನುಗ್ರಹಕ್ಕೆ ಪಾತ್ರರಾದರು.

    ಈ ಪೂಜೆಯಲ್ಲಿ ರಾಜ್ ಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದ ರಾಜು (Lakshmi), ಹಾಗೂ ಎಸ್.ಎ. ಗೋವಿಂದ ರಾಜು (Govindaraju) ಸಿನಿಮಾದ ನಾಯಕ ನಟರಾದ ಷಣ್ಮುಖ ಗೋವಿಂದ (Shanmukh), ನಿರ್ಮಾಪಕರಾದ ಶ್ವೇತಾ ಶೆಟ್ಟಿ, ನಿರ್ದೇಶಕರಾದ ನವಿಲುಗರಿ ನವೀನ್.ಪಿ.ಬಿ,  ಕಲಾವಿದರಾದ ಅನಿಲ್, ಲಲಿತ್ ಇನ್ನೂ ಅನೇಕರು ಪೂಜೆಯಲ್ಲಿ ಭಾಗವಾಹಿಸಿ ಗುರುಗಳಿಂದ ಆಶೀರ್ವಾದ ಪಡೆದರು.

     

    ಈ ಚಿತ್ರವನ್ನು ತೀರ್ಥಹಳ್ಳಿ, ಆಗುಂಬೆ, ಮಲೆನಾಡು, ಶಿವಮೊಗ್ಗ, ಬೆಂಗಳೂರು ಪ್ರದೇಶಗಳಲ್ಲಿ ಶೂಟಿಂಗ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಛಾಯಾಗ್ರಹಣವನ್ನು ವಿ ಆರ್ ಚಂದ್ರು ಮತ್ತು ಪ್ರಮೋದ್ ಆರ್ ಇಬ್ಬರು ಮಾಡುತ್ತಿದ್ದು, ಸಂಕಲನವನ್ನು ಮಧು ತುಂಬಕೆರೆ ಮಾಡಿದರೆ ಸಂಗೀತವನ್ನು ಪ್ರಣವ್ ಸತೀಶ್ ನೀಡುತ್ತಿದ್ದರೆ ಸೆಪ್ಟಂಬರ್ ನಿಂದ ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರ ತಂಡ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    ಬೆಂಗಳೂರು: ವೈದ್ಯೆಯ ರೀತಿ ವೇಷ ಧರಿಸಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಚಿನ್ನಾಭರಣ ಕಳವು ಮಾಡುತ್ತಿದ್ದ ಲಕ್ಷ್ಮಿಯನ್ನು ಬಂಧಿಸಲಾಗಿದೆ.

    ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿತ್ತು. ಕಳೆದ ಕೆಲ ದಿನಗಳ ಹಿಂದೆ ವೈದ್ಯೆಯ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಆಸ್ಪತ್ರೆ (Hospital) ಎಂಟ್ರಿಯಾಗಿದ್ದ ಕಳ್ಳಿ ಲಕ್ಷ್ಮಿ, ರೋಗಿಗಳ ವಾರ್ಡ್ ಗೆ ಹೋಗುತ್ತಿದ್ದಳು. ಬಳಿಕ ರೋಗಿಯ ಜೊತೆಗಿದ್ದವರನ್ನು ಚಿಕಿತ್ಸೆ ಕೊಡುವ ವೇಳೆ ಯಾರು ಒಳಗೆ ಇರಬಾರದು ಅಂತಾ ಹೊರಗೆ ಕಳುಹಿಸುತ್ತಿದ್ದಳು. ಹಾಗೆಯೇ ಹೊರಗೆ ಕಳುಹಿಸಿ ಚಿಕಿತ್ಸೆ ಕೊಡುವ ನೆಪದಲ್ಲಿ ರೋಗಿಗಳ ಬಳಿಯಿದ್ದ ಚಿನ್ನಾಭರಣ ಕಳವು ಮಾಡಿ ಎಸ್ಕೇಪ್ ಆಗುತ್ತಿದ್ದಳು. ಇದನ್ನೂ ಓದಿ: ಟ್ರಕ್, ಕಾರು ಭೀಕರ ಅಪಘಾತ- 9 ಮಂದಿ ದಾರುಣ ಸಾವು

    ರೋಗಿ ಸರಸಮ್ಮ ಅನ್ನೋರ ಬಳಿ ಇದೇ ವಂಚಿಸಿ 40 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಕಲಿ ಡಾಕ್ಟರ್ ಲಕ್ಷ್ಮಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆರೋಪಿತೆ ಲಕ್ಷ್ಮಿಯ ಖಾಸಗಿ ಫೋಟೋ (Photo) ಇಟ್ಟುಕೊಂಡು ಹಣ ತರುವಂತೆ ಬ್ಲಾಕ್ ಮೇಲ್ ಮಾಡ್ತಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕಳ್ಳತನ ಮಾಡಿದಳು ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಆ ವ್ಯಕ್ತಿಯ ಬಂಧನಕ್ಕೆ ಪೊಲೀಸರು, ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೋಟುಗಳ ಮೇಲೆ ಲಕ್ಷ್ಮಿ, ಗಣೇಶನ ಫೋಟೋವನ್ನು ಮುದ್ರಿಸಿ – ಮೋದಿಗೆ ಕೇಜ್ರಿವಾಲ್ ಮನವಿ

    ನೋಟುಗಳ ಮೇಲೆ ಲಕ್ಷ್ಮಿ, ಗಣೇಶನ ಫೋಟೋವನ್ನು ಮುದ್ರಿಸಿ – ಮೋದಿಗೆ ಕೇಜ್ರಿವಾಲ್ ಮನವಿ

    ನವದೆಹಲಿ: ಹೊಸ ನೋಟುಗಳ ಮೇಲೆ ಇನ್ಮುಂದೆ ಲಕ್ಷ್ಮಿ ದೇವಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಒತ್ತಾಯಿಸಿದ್ದಾರೆ.

    ಹೊಸ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ (Mahatma Gandhi) ಫೋಟೋ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮಿ ದೇವಿ (Lakshmi)  ಮತ್ತು ಗಣೇಶನ (Ganesh) ಫೋಟೋಗಳನ್ನು ಮುದ್ರಿಸಬಹುದು. ಕರೆನ್ಸಿ ನೋಟುಗಳ ಮೇಲೆ ಎರಡು ದೇವರ ಫೋಟೋಗಳಿರುವುದು ದೇಶದ ಏಳಿಗೆಗೆ ಸಹಾಯವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು

    ಪ್ರಯತ್ನಗಳನ್ನು ಮಾಡಿದರೂ, ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ಹೀಗಾಗಿ ನಮ್ಮ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಸೇರಿಸುವಂತೆ ನಾನು ಪ್ರಧಾನಿ ಮೋದಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಧಿಕಾರ ಚುಕ್ಕಾಣಿಗೂ ಮುನ್ನ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಖರ್ಗೆ

    Live Tv
    [brid partner=56869869 player=32851 video=960834 autoplay=true]

  • ಅಪ್ಪಾಜಿ ಗಂಧದ ಗುಡಿ ಸಿನಿಮಾ ಅಪ್ಪುಗೆ ಇಷ್ಟ: ಪುನೀತ್ ಸಹೋದರಿ ಲಕ್ಷ್ಮಿ

    ಅಪ್ಪಾಜಿ ಗಂಧದ ಗುಡಿ ಸಿನಿಮಾ ಅಪ್ಪುಗೆ ಇಷ್ಟ: ಪುನೀತ್ ಸಹೋದರಿ ಲಕ್ಷ್ಮಿ

    ಪುನೀತ್ ರಾಜ್ ಕುಮಾರ್ (Puneeth Rajkumar) ನಟಿಸಿ, ನಿರ್ಮಾಣ ಮಾಡಿರುವ ಗಂಧದ ಗುಡಿ (Gandhad Gudi) ಪ್ರಿ ರಿಲೀಸ್ ಇವೆಂಟ್ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತೀಯ ಸಿನಿಮಾ ರಂಗವೇ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಪುನೀತ್ ಸಹೋದರಿ ಲಕ್ಷ್ಮಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತಂದೆಯ ಗಂಧದ ಗುಡಿ ಸಿನಿಮಾ ಮತ್ತು ತಮ್ಮನ ಗಂಧದ ಗುಡಿ ಡಾಕ್ಯುಮೆಂಟರಿ ಬಗ್ಗೆ ಮಾತನಾಡಿದ್ದಾರೆ.

    ಅಪ್ಪು ಕನಸಿನ‌ ಚಿತ್ರವಿದು. ಅವನಿಗೆ ಅಪ್ಪಾಜಿ ಗಂಧದಗುಡಿ ತುಂಬಾ ಇಷ್ಟ ಆಗಿತ್ತು. ಎಲ್ಲಾ ಅಭಿಮಾನಿಗಳು ಕಾಯ್ತಿರೋ ಹಾಗೆನಾನು  ಗಂಧದ ಗುಡಿಗಾಗಿ ಕಾಯ್ತಿದ್ದೀನಿ. ಗಂಧದಗುಡಿ ರಿಲೀಸ್ ಆಗುವಾಗ ಅಪ್ಪು ಇನ್ನೂ ಹುಟ್ಟಿರಲಿಲ್ಲ. ಆಮೇಲೆ ದೊಡ್ಡವನಾದ ಮೇಲೆ ನೋಡ್ದಾಗ ತುಂಬಾ ಖುಷಿ ಪಡ್ತಿದ್ದ. ಅದೇ ಕನಸು ಈ ಥರ ಕರೆದುಕೊಂಡು ಹೋಗಿರಬೇಕು. ಗಂಧದಗುಡಿ ಶೂಟಿಂಗ್ ಆಗುವಾಗ ನಾನು, ಪೂರ್ಣಿಮಾ, ರಾಘು ಎಲ್ಲರೂ ಹೋಗಿದ್ದೆವು. ಅಪ್ಪು ಗಂಧದಗುಡಿ ಶೂಟಿಂಗ್ ಆಗುವಾಗ ಕಾಡಿಗೆ ಹೋದಾಗ ಹೇಳಿದ್ದ. ನಾನು ಜೋಪಾನ ಇರ್ತೀನಿ ಅಂತ ಅವ್ನೇ ಹೇಳಿದ್ದ. ಅಪ್ಪು ಇಲ್ಲದೆ ಈ ಒಂದು ವರ್ಷ ಹೇಗಿದ್ದೆವೋ ಗೊತ್ತಿಲ್ಲ. ಪ್ರತಿ ದಿನ ಪ್ರತಿ ಕ್ಷಣ ನೆನಪಾಗ್ತಾನೆ. ನಮ್ಮ ಜೊತೆ ಇರುವ ಅಭಿಮಾನಿಗಳಿಗೆ ನಾವು ಚಿರಋಣಿ’ ಎಂದರು ಲಕ್ಷ್ಮಿ (Lakshmi). ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ (Puneetha Parva) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ, ಆದರೆ ಅವರಲ್ಲಿ ಶ್ರೀಮಂತರಿಲ್ಲವೇ?- ಬಿಜೆಪಿ ಶಾಸಕ

    ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ, ಆದರೆ ಅವರಲ್ಲಿ ಶ್ರೀಮಂತರಿಲ್ಲವೇ?- ಬಿಜೆಪಿ ಶಾಸಕ

    ಪಾಟ್ನಾ: ಕಾಂತಾರಾ (Kantara) ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಚೇತನ್ (Actor Chetan) ಅವರು ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಚರ್ಚೆಗೀಡಾಗಿದ್ದರು. ಇದೀಗ ಬಿಹಾರದ ಬಿಜೆಪಿ ಶಾಸಕ (Bihar BJP MLA) ರೊಬ್ಬರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಹಿಂದೂ ದೇವತೆಗಳ ಕುರಿತಾಗಿ ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ (Lalan Paswan) ವಿವಾದಾತ್ಮಕ ಹೇಳಿಕೊಂದನ್ನು ನೀಡಿದ್ದಾರೆ. ಸದ್ಯ ಶಾಸಕರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಲಾಲನ್ ಪಾಸ್ವಾನ್ ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ. ಇದೀಗ ಇವರು ಹಿಂದೂಗಳ ನಂಬಿಕೆಯಾದ ಲಕ್ಷ್ಮಿ ಪೂಜೆ (Lakshmi Pooja) ಯನ್ನು ಅವಹೇಳನ ಮಾಡುವ ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ್ದಾರೆ. ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ – ರಿಷಬ್ ಸಮರ್ಥನೆ ತಳ್ಳಿಹಾಕಿದ ನಟ ಚೇತನ್

    ಕೇವಲ ಲಕ್ಷ್ಮಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುವುದಾದರೆ ಇಂದು ಮುಸ್ಲಿಮರು ಕೋಟ್ಯಧಿಪತಿಗಳಾಗುತ್ತಿರಲಿಲ್ಲ. ಯಾಕೆಂದರೆ ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ. ಆದರೆ ಅವರಲ್ಲಿ ಶ್ರೀಮಂತರಲಿಲ್ಲವೇ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮುಸ್ಲಿಮರು ಸರಸ್ವತಿ ದೇವಿ (Goddess Saraswati) ಯನ್ನು ಕೂಡ ಪೂಜಿಸುವುದಿಲ್ಲ. ಆದರೆ ಅವರಲ್ಲಿ ಪಂಡಿತರು, ವಿದ್ವಾಂಸರಿಲ್ಲವೇ. ಅವರು ಕೂಡ ಐಎಎಸ್, ಐಪಿಎಸ್ ಆಗಿಲ್ಲವೇ ಎಂದು ಮರು ಪ್ರಶ್ನೆ ಹಾಕುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಆತ್ಮ ಹಾಗೂ ಪರಮಾತ್ಮ ಎಂಬುದು ಜನರ ನಂಬಿಕೆಯಾಗಿದೆ ಅಷ್ಟೇ. ನೀವು ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಬರೀ ಕಲ್ಲಿನ ವಿಗ್ರಹವಾಗಿರುತ್ತದೆ. ಹೀಗಾಗಿ ನಾವು ದೇವತೆಗಳನ್ನು ನಂಬಬೇಕೋ, ಬೇಡವೋ ಅನ್ನೋದು ನಮಗೆ ಬಿಟ್ಟ ವಿಚಾರವಾಗಿರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಆಂಜನೇಯ ಶಕ್ತಿಯುಳ್ಳ ದೇವರು ಎಂದು ನಂಬಲಾಗುತ್ತದೆ. ಆದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬಜರಂಗಬಲಿಯನ್ನು ಪೂಜಿಸುವುದಿಲ್ಲ. ಹಾಗಾದರೆ ಅವರು ಶಕ್ತಿಶಾಲಿಗಳಲ್ಲವೇ..?. ಒಟ್ಟಿನಲ್ಲಿ ನೀವು ನಂಬುವುದನ್ನು ನಿಲ್ಲಿಸಿದ ದಿನ ಇವೆಲ್ಲದಕ್ಕೂ ಒಂದು ಅಂತ್ಯ ಕಾಣುತ್ತೇವೆ ಎಂದು ಪಾಸ್ವಾನ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡು ಮರಿಗೆ ಜನ್ಮ ನೀಡಿದ ಗಜಪಡೆಯ ಸದಸ್ಯೆ ಲಕ್ಷ್ಮಿ

    ಗಂಡು ಮರಿಗೆ ಜನ್ಮ ನೀಡಿದ ಗಜಪಡೆಯ ಸದಸ್ಯೆ ಲಕ್ಷ್ಮಿ

    ಮೈಸೂರು: ದಸರಾ (Mysuru Dasara) ಮೆರವಣಿಗೆಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರೋ ಗಜಪಡೆಯ ಸದಸ್ಯೆ 22 ವರ್ಷದ ಲಕ್ಷ್ಮಿ (Lakshmi) ನಿನ್ನೆ(ಮಂಗಳವಾರ) ಗಂಡು ಮರಿಗೆ ಜನ್ಮ ನೀಡಿದೆ.

    ದಸರಾ ವೇಳೆ ಗಜಪಡೆಯ ಸದಸ್ಯೆ ಮರಿ ಹಾಕುತ್ತಿರುವ ಎರಡನೇ ಪ್ರಸಂಗವಿದು. ಲಕ್ಷ್ಮಿಯ ಪುತ್ರನನ್ನು ಕಂಡು ಗಜಪಡೆಯ ಮಾವುತರು, ಕಾವಾಡಿಗಳು, ಅರಣ್ಯಾಧಿಕಾರಿಗಳು ಖುಷಿಯಾಗಿದ್ದಾರೆ. 15 ವರ್ಷಗಳ ಹಿಂದೆ ದಸರಾ ಗಜಪಡೆಯ ಸದಸ್ಯೆಯಾಗಿ ಬಂದಿದ್ದ ಸರಳ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಮರಿಗೆ ಚಾಮುಂಡಿ (Chamundi) ಎಂದು ಹೆಸರಿಡಲಾಗಿತ್ತು.

    ಲಕ್ಷ್ಮಿ ಆನೆ 2017 ರಲ್ಲಿ ಮೊದಲ ಬಾರಿಗೆ ನಾಡಹಬ್ಬದ ಮೆರವಣಿಗೆಗೆ ಕಾಡಿ ನಿಂದ ನಾಡಿಗೆ ಬಂದಿತ್ತು. ಆಗ ಸಿಡಿಮದ್ದಿನ ಶಬ್ದಕ್ಕೆ ಲಕ್ಷ್ಮಿ ಬೆಚ್ಚುತ್ತಿದ್ದ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಈಗ ಎರಡನೇ ಬಾರಿಗೆ ಲಕ್ಷ್ಮಿಯನ್ನು ನಾಡಹಬ್ಬದ ಮೆರವಣಿಗೆಗೆ ಕರೆಸಲಾಗಿದೆ. ಮೊನ್ನೆ ನಡೆದ ಸಿಡಿಮದ್ದಿನ ತಾಲೀಮಿನ ವೇಳೆ ಶಬ್ಧಕ್ಕೆ ಬೆಚ್ಚದ್ದೆ ನಿಂತು ಕೊಂಡಿತ್ತು. ಇದನ್ನೂ ಓದಿ: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಈ ಬಾರಿ ದಸರಾ ಉದ್ಘಾಟನೆ – ಸಿಎಂ

    ನಿನ್ನೆ ಮಧ್ಯಾಹ್ನ ಲಕ್ಷ್ಮಿ ವರ್ತನೆಯಲ್ಲಿ ಬದಲಾವಣೆ ಕಂಡಿತ್ತು. ಆಗ ವೈದ್ಯರು ಆನೆಯನ್ನು ಪರೀಕ್ಷಿಸಿದ್ದಾಗ ಲಕ್ಷ್ಮಿ ತುಂಬು ಗರ್ಭಿಣಿ ಎಂಬುದು ಗೊತ್ತಾಗಿದೆ. ತಕ್ಷಣ ಲಕ್ಷ್ಮಿಯನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ನಿನ್ನೆ ರಾತ್ರಿ 8.10ಕ್ಕೆ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಈ ಮರಿಗೆ ಗಣಪತಿ (Ganapathi) ಎಂದು ನಾಮಕರಣ ಮಾಡಲು ಚಿಂತನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಡ್ರಾಮಾ ಜ್ಯೂನಿಯರ್ ಪಟ್ಟ ಪಡೆದ ಸಮೃದ್ಧಿ: ಲಕ್ಷ ಲಕ್ಷ ಬಹುಮಾನ ಪಡೆದ ಡ್ರಾಮಾ ಕ್ವೀನ್

    ಡ್ರಾಮಾ ಜ್ಯೂನಿಯರ್ ಪಟ್ಟ ಪಡೆದ ಸಮೃದ್ಧಿ: ಲಕ್ಷ ಲಕ್ಷ ಬಹುಮಾನ ಪಡೆದ ಡ್ರಾಮಾ ಕ್ವೀನ್

    ರ್ನಾಟಕದ ಅತಿ ದೊಡ್ಡ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ ಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ . ಜೀ ಕನ್ನಡ ವಾಹಿನಿ ಹೆಮ್ಮೆಯಿಂದ ಪ್ರಸ್ತುತ ಪಡಿಸಿದ್ದ ಈ ಶೋ ಸತತ 23 ವಾರಗಳ ಕಾಲ ಇಡೀ ಕರುನಾಡನ್ನು ರಂಜಿಸಿ ಇಂದು ಕರ್ನಾಟಕದ ಮನೆಮನೆಯ ಮುದ್ದಾದ ಕಾರ್ಯಕ್ರಮವಾಗಿದೆ. ಇನ್ನು ಈ ಸೀಸನ್ ನ ವಿಜೇತರಾಗಿ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್ ರವರು ಹೊರಹೊಮ್ಮಿದ್ದಾರೆ.

    ತಮ್ಮ ಅದ್ಭುತ ಅಭಿನಯದ ಮೂಲಕ ಮನಸೂರೆಗೊಂಡಿದ್ದ 15 ಮಕ್ಕಳು ಫೈನಲ್ ಗೆ ಆಯ್ಕೆಯಾಗಿದಿದ್ದು ವಿಶೇಷವಾಗಿತ್ತು. ಅವರಲ್ಲಿ ನಾಲ್ಕು ಮಕ್ಕಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದು ತ್ರಿವಳಿ ರತ್ನಗಳು ಉತ್ತಮರಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಗುಣಮಟ್ಟ ಹಾಗು ವಿಶೇಷತೆಗೆ ಸಾಕ್ಷಿಯಂತೆ  ಇಬ್ಬರು ಪ್ರತಿಭೆಗಳು ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ ಹಾಗು ತಲಾ ಮೂರು ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ಇನ್ನು  ಮಂಗಳೂರಿನ ವೇದಿಕ್ ಅವರು ಮೂರನೇ ಸ್ಥಾನ ಪಡೆದು ಜನಮೆಚ್ಚುಗೆಗಳಿಸಿದರು. ಈ ಸೀಸನ್ ವಿಶಿಷ್ಟ ಪ್ರತಿಭೆಯಾಗಿ ವೇದಿಕೆಗೆ ಆಗಮಿಸಿದ ರಾಯಚೂರಿನ ಕುಳ್ಳ ಸಿಂಗಂ ಖ್ಯಾತಿಯ ಅರುಣ್ ಅವರಿಗೆ ವಿಶೇಷ ಬಹುಮಾನವಾಗಿ ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಸಹ ನೀಡಿ  ವೇದಿಕೆ ಸಾರ್ಥಕತೆ ಮೆರೆಯಿತು. ಅಷ್ಟೇ ಅಲ್ಲದೆ ಈ ಎಲ್ಲಾ ಬಹುಮಾನಗಳು ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಆಗುತ್ತಿರುವುದು ವಿಶೇಷ. ಈ ಶೋ ನಿರ್ದೇಶಕ ಹಾಗು ಜೀ ಕನ್ನಡ ವಾಹಿನಿಯ ನಾನ್ ಫಿಕ್ಷನ್ ಮುಖ್ಯಸ್ಥರಾದ ಶರಣಯ್ಯ ಅವರು ಮಾತನಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ ಎಲ್ಲಾ ಕಾರ್ಮಿಕರನ್ನು, ಮೆಂಟರ್ ರನ್ನು, ತೀರ್ಪುಗಾರರನ್ನು , ಕ್ಯಾಮರಾ ಮ್ಯಾನ್ಗಳನ್ನು, ಸ್ಕಿಟ್ ಬರಹಗಾರರಿಗೆ ಪ್ರಶಂಸೆ ನೀಡಿದರು.

    ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರು ಮಾತನಾಡಿ ಎಲ್ಲಾ ಮಕ್ಕಳಿಗೂ ಅಭಿನಂದಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿ ವೀಕ್ಷಕರನ್ನು ನಕ್ಕು ನಗಿಸಲು  ಕಾಮಿಡಿ ಕಿಲಾಡಿಗಳು ಸೀಸನ್ 4 ಶುರುವಾಗಲಿದೆ ಎಂದು ಮಾಹಿತಿ ನೀಡಿದರು.  ಜೊತೆಗೆ  ಎಂದಿನಂತೆ ಈ ಸೀಸನ್ ನಲ್ಲೂ  ನಿರ್ದೇಶಕ  ಯೋಗರಾಜ್ ಭಟ್,  ನವರಸನಾಯಕ ಜಗ್ಗೇಶ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ರವರು ತೀರ್ಪುಗಾರರಾಗಿ ಮುಂದುವರೆಯುತ್ತಾರೆ ಜೊತೆಗೆ ಮಾಸ್ಟರ್ ಆನಂದ್  ನಿರೂಪಕರಾಗಿರುತ್ತಾರೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಬದುಕು ನಡೆಸಲು ಸಾಬೂನು ಮಾರುತ್ತಿರುವ ನಟಿ ಬೇರೆ ಯಾರೂ ಅಲ್ಲ, ಹಿರಿಯನಟಿ ಲಕ್ಷ್ಮೀ ಪುತ್ರಿ ಐಶ್ವರ್ಯ

    ಬದುಕು ನಡೆಸಲು ಸಾಬೂನು ಮಾರುತ್ತಿರುವ ನಟಿ ಬೇರೆ ಯಾರೂ ಅಲ್ಲ, ಹಿರಿಯನಟಿ ಲಕ್ಷ್ಮೀ ಪುತ್ರಿ ಐಶ್ವರ್ಯ

    ನ್ನಡವೂ ಸೇರಿದಂತೆ ದಕ್ಷಿಣದ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಐಶ್ವರ್ಯ ಭಾಸ್ಕರನ್ ಇದೀಗ ಕೆಲಸವಿಲ್ಲದೇ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಅವರೇ ಚಾನೆಲ್ ವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ನಾನು ಒಂದ್ಹೊತ್ತು ಮಾತ್ರ ಊಟ ಮಾಡುತ್ತೇನೆ. ಚಿಕ್ಕದೊಂದು ಮನೆಯಲ್ಲಿ ವಾಸ. ಬದುಕಿಗಾಗಿ ಸಾಬೂನು ಮಾರುತ್ತಿದ್ದೇನೆ. ಮನೆಯಾಚೆ ನಗುತ್ತಿದ್ದವಳು, ಮನೆಗೆ ಬಂದ ಮೇಲೆ ದುಃಖಿಸುತ್ತೇನೆ. ನನ್ನ ಬದುಕು ಸರಿ ಹೋಗಬೇಕು ಅಂದರೆ, ಒಂದೊಳ್ಳೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗಬೇಕು’ ಎಂದಿದ್ದಾರೆ.

    ಅಂದಹಾಗೆ ಈ ಐಶ್ವರ್ಯ ಬೇರೆ ಯಾರೂ ಅಲ್ಲ, ಕನ್ನಡಿಗರೇ ಆಗಿ ಹೋಗಿರುವ ಹಿರಿಯ ನಟಿ ಲಕ್ಷ್ಮೀ ಮತ್ತು ಅವರ ಮೊದಲ ಪತಿ ಭಾಸ್ಕರ್ ದಂಪತಿ ಮಗು. 1969ರಲ್ಲಿ ಭಾಸ್ಕರ್ ಮತ್ತು ಲಕ್ಷ್ಮೀ ಹೊಸ ಜೀವನಕ್ಕೆ ಕಾಲಿಟ್ಟರು. ಆ ಹೊಸ ಜೀವನ ಅವರನ್ನು ಅಪ್ಪಿಕೊಳ್ಳಲಿಲ್ಲ. ಹಾಗಾಗಿ 1974ರಲ್ಲಿ ದೂರವಾದರು. ಅಷ್ಟರಲ್ಲೇ ಈ ದಂಪತಿಗೆ ಐಶ್ವರ್ಯ ಹುಟ್ಟಿದ್ದರು. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ನಟಿ ಐಶ್ವರ್ಯ ಭಾಸ್ಕರನ್ ಸೌತ್ ಸಿನಿಮಾಗಳಲ್ಲಿ ನಟಿಯಾಗಿ ಗಮನ ಸೆಳೆದಿದ್ದಾರೆ. ಕನ್ನಡದ ಹೊಸ ಕಾವ್ಯ ಸೇರಿದಂತೆ ನಾನಾ ಭಾಷೆಗಳಲ್ಲಿ  ನರಸಿಂಹಂ, ಸತ್ಯಮೇವ ಜಯತೇ, ಪ್ರಜಾ, ದಿ ಫೈರ್, ನೋಟ್ ಬುಕ್‌ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಟಿ ಐಶ್ವರ್ಯ ಹೊಟ್ಟೆಪಾಡಿಗಾಗಿ ಸಾಬೂನು ಮಾರಾಟ ಮಾಡುತ್ತಿದ್ದಾರೆ. ಅವಕಾಶಗಳ ಕೊರತೆಯಿಂದ ಜೀವನ ನಿರ್ವಹಣೆಗೆ ಸಾಬೂನು ಮಾರಾಟಕ್ಕಿಳಿದಿದ್ದಾರೆ.

    ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಐಶ್ವರ್ಯ ತಮ್ಮ ಖಾಸಗಿ ಜೀವನದ ನಿರ್ವಹಣೆಯ ಕುರಿತು ಮಾತನಾಡಿದ್ದಾರೆ. ನನಗೆ ಈಗ ಕೆಲಸವಿಲ್ಲ ಜತೆಗೆ ಜೀವನ ನಿರ್ವಹಣೆಗೆ ಹಣವಿಲ್ಲ ಮತ್ತು ಸಾಬೂನು ಮಾರುತ್ತಾ ಬೀದಿಗಳಲ್ಲಿ ವಾಸಿಸುತ್ತಿದ್ದೇನೆ. ನನಗೆ ಸಿನಿಮಾ ಮಾಡಲು ಆಸಕ್ತಿಯಿದೆ ಯಾರಾದರೂ ಸಿನಿಮಾಗಾಗಿ ಕರೆ ಮಾಡುತ್ತಾರೆ ಎಂಬ ಭರವಸೆಯಿದೆ ಎಂದು ನಟಿ ಐಶ್ವರ್ಯ ಮುಕ್ತವಾಗಿ ಮಾತನಾಡಿದ್ದಾರೆ. ಒಟ್ನಲ್ಲಿ ಎಷ್ಟೇ ಇದ್ರೂ ಮಾದರಿಯಾಗಿ ಬದುಕುತ್ತಿರುವ ನಟಿ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

    Live Tv

  • ತಾಳ್ಮೆಯ ಅಸಲಿ ತಾಕತ್ತು ಅನಾವರಣ ಮಾಡಲಿದೆ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’ ಚಿತ್ರ

    ತಾಳ್ಮೆಯ ಅಸಲಿ ತಾಕತ್ತು ಅನಾವರಣ ಮಾಡಲಿದೆ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’ ಚಿತ್ರ

    143 ಎಂಬ ಸಿನಿಮಾ ನಿರ್ದೇಶಿಸಿ ಚಂದನವನದಲ್ಲಿ ಗಮನ ಸೆಳೆದಿದ್ದ ನಿರ್ದೇಶಕ ಚಂದ್ರಕಾಂತ್, ತ್ರಿಕೋನ ಸಿನಿಮಾ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಬಿಡುಗಡೆಯ ಅಂಚಿನಲ್ಲಿರುವ ಈ ಸಿನಿಮಾ ಟ್ರೇಲರ್ ಜೊತೆಗೆ ಸ್ಟಾರ್ ತಾರಬಳಗದ ಮೂಲಕ ಸಖತ್ ಸುದ್ದಿಯಲ್ಲಿದೆ.

    ‘ತ್ರಿಕೋನ’ ಸಿನಿಮಾದ ಕಥೆ ಎಷ್ಟು ಗಟ್ಟಿತನ ಹೊಂದಿದೆಯೋ ಅದಕ್ಕೆ ಆಯ್ಕೆ ಮಾಡಿಕೊಂಡ ತಾರಬಳಗವೂ ಅಷ್ಟೇ ಪರ್ಫೆಕ್ಟ್ ಆಗಿದೆ. ಬಹುತೇಕ ಸ್ಟಾರ್ ಪೋಷಕ ನಟರೇ ಅಭಿನಯಿಸಿರುವ ಈ ಚಿತ್ರದಲ್ಲಿ ಮೂರು ಜನರೇಷನ್ ಕಥೆ ಹೇಳ ಹೊರಟಿದ್ದೇವೆ ಎನ್ನುತ್ತಾರೆ ನಿರ್ದೇಶಕರು. ಇಂಟ್ರಸ್ಟಿಂಗ್ ಫ್ಯಾಕ್ಟರ್ ಏನಪ್ಪ ಅಂದರೆ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮಿ ಹಾಗೂ ಹಿರಿಯ ನಟ ಸುರೇಶ್ ಹೆಬ್ಳಿಕರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‍ವುಡ್ ಎವರ್ ಗ್ರೀನ್ ಸಿನಿಮಾ ಪಲ್ಲವಿ ಅನುಪಲ್ಲವಿಯಲ್ಲಿ ನಟಿಸಿದ್ದ ಇವರು ಮೂರು ದಶಕದ ನಂತರ ಅದರಲ್ಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾವಿದು. ಇದನ್ನೂ ಓದಿ: ಕ್ಲಾಸ್ ಕಟೆಂಟ್, ಮಾಸ್ ನರೇಶನ್, ಮಸ್ತ್ ಮನರಂಜನೆ ನೀಡಲು ‘ತ್ರಿಕೋನ’ ಟೀಂ ರೆಡಿ

    Trikona

    ಚಿತ್ರದಲ್ಲಿ 25, 45, 65 ಹೀಗೆ ಮೂರು ವಯೋಮಾನದವರ ಕಥೆ ಇದೆ. ಈ ಮೂರು ವಯೋಮಾನವು ಚಿತ್ರದಲ್ಲಿ ಶಕ್ತಿ, ಅಹಂ, ತಾಳ್ಮೆಯನ್ನು ಪ್ರತಿನಿಧಿಸುತ್ತವೆ. ರಾಜ್ ವೀರ್, ಮಾರುತೇಶ್ 25 ವರ್ಷದವರನ್ನು ಚಿತ್ರದಲ್ಲಿ ಪ್ರತಿನಿಧಿಸಿದರೆ, ಅಚ್ಯುತ್ ಕುಮಾರ್, ಸುಧಾರಾಣಿ 45, ಲಕ್ಷ್ಮಿ, ಸುರೇಶ್ ಹೆಬ್ಳಿಕರ್ 65ರ ವಯೋಮಾನದವರನ್ನು ಪ್ರತಿನಿಧಿಸುವ ಪಾತ್ರವನ್ನು ನಿಭಾಯಿಸಿದ್ದಾರೆ. ಬದುಕಿನಲ್ಲಿ ಕಷ್ಟಗಳು ಎದುರಾದಾಗ ಶಕ್ತಿ, ಅಹಂ, ತಾಳ್ಮೆ ಮೂಲಕ ಮೂರು ವಯೋಮಾನದವರು ಹೇಗೆ ಬಗೆಹರಿಸಿಕೊಳ್ಳುತ್ತಾರೆ, ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದೇ ಚಿತ್ರದ ಒನ್ ಲೈನ್ ಕಹಾನಿ. ಇದನ್ನೂ ಓದಿ: ಕಿಚ್ಚನ ಭೇಟಿಗೆ 600 ಕಿಲೋ ಮೀಟರ್ ನಡೆದು ಬಂದ ಮಹಿಳಾ ಅಭಿಮಾನಿಗಳು

    ಬರ್ಫಿ, ಪೆರೋಲ್ ಸಿನಿಮಾ ನಿರ್ದೇಶನ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ರಾಜ್ ಶೇಖರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಜೀವನ್ ಪ್ರಕಾಶ್ ಸಂಕಲನ, ಶ್ರೀನಿವಾಸ್ ವಿನ್ನಕೋಟ ಕ್ಯಾಮೆರಾ ವರ್ಕ್, ಸುರೇಂದ್ರನಾಥ್ ಸಂಗೀತ ಸಂಯೋಜನೆ ಇದೆ. ಏಪ್ರಿಲ್ 8ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.