Tag: Lakshman savadi

  • ಚಿಕ್ಕೋಡಿ ಗೆಲ್ಲಲು ರಣತಂತ್ರ – ಸವದಿಗೆ ಟಾಸ್ಕ್ ಜೊತೆಗೆ ಆಫರ್‌ ಕೊಟ್ಟ ಕಾಂಗ್ರೆಸ್‌

    ಚಿಕ್ಕೋಡಿ ಗೆಲ್ಲಲು ರಣತಂತ್ರ – ಸವದಿಗೆ ಟಾಸ್ಕ್ ಜೊತೆಗೆ ಆಫರ್‌ ಕೊಟ್ಟ ಕಾಂಗ್ರೆಸ್‌

    ಬೆಳಗಾವಿ: ಲೋಕಸಭಾ ಚುನಾವಣೆಗೆ (Lok Sabha Election) ದಿನಗಣನೆ ಶುರುವಾಗಿದೆ. ಚಿಕ್ಕೋಡಿ (Chikkodi Lok Sabha constituency) ಅಖಾಡವನ್ನು ಗೆಲ್ಲಲು ಕಾಂಗ್ರೆಸ್ (Congress) ಸ್ಪೆಷಲ್ ರಣತಂತ್ರ ಹೆಣೆದಿದೆ. ಚಿಕ್ಕೋಡಿ ಕ್ಷೇತ್ರ ಗೆಲ್ಲಲು ಲಕ್ಷ್ಮಣ ಸವದಿಗೆ (Lakshman Savadi) ಸ್ಪೆಷಲ್ ಟಾಸ್ಕ್ ನೀಡಿ ಆಫರ್ ಒಂದನ್ನು ನೀಡಿದೆ.

    ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಈಗಿನಿಂದಲೇ ರಣತಂತ್ರ ರೂಪಿಸಲು ಆರಂಭಿಸಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನ ಶತಾಯ ಗತಾಯ ಗೆಲ್ಲಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಮತ್ತೆ ಸಿಬಿಐ ವಶಕ್ಕೆ ಶೇಖ್ ಶಹಜಹಾನ್ – ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗ!

     

    ಬೆಳಗಾವಿಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ 1,480 ಕೋಟಿ ರೂ ಮೊತ್ತದ ಅಮ್ಮಾಜೇಶ್ವರಿ ಏತ ನೀರಾವರಿಗೆ ಸಿಎಂ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಚಿಕ್ಕೋಡಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಫಿಕ್ಸ್ ಎಂದು ಡಿಕೆಶಿ ಭರವಸೆ ನೀಡುವುದರ ಜೊತೆಗೆ ಕಾಂಗ್ರೆಸ್ ಗೆಲ್ಲಿಸುವ ಟಾಸ್ಕ್ ನೀಡಿದ್ದಾರೆ.  ಇದನ್ನೂ ಓದಿ: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ- 50% ರಷ್ಟು ಸಂಸದರಿಗೆ ಕೊಕ್ ಸಾಧ್ಯತೆ

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮನವಿ ಮಾಡಿದ ಸಿಎಂ, ಡಿಸಿಎಂ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು. ಸುಳ್ಳೇ ಬಿಜೆಪಿ ಅವರ ಮನೆ ದೇವರು. ಬಿಜೆಪಿ ಅವರನ್ನು ನಂಬದೇ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು. ಮುಂದಿನ ದಿನದಲ್ಲಿ ಶಾಸಕ ಲಕ್ಷ್ಮಣ ಸವದಿಗೆ ಭವಿಷ್ಯವಿದೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಸವದಿಗೆ ಮಂತ್ರಿಗಿರಿ ನೀಡುವ ಮೂನ್ಸೂಚನೆ ನೀಡಿದರು.

     

  • ಶೆಟ್ಟರ್‌, ಸವದಿ ಸೋಲಿಸಲು ಬೊಮ್ಮಾಯಿ, ಬಿಎಸ್‌ವೈಗೆ ಟಾಸ್ಕ್‌

    ಶೆಟ್ಟರ್‌, ಸವದಿ ಸೋಲಿಸಲು ಬೊಮ್ಮಾಯಿ, ಬಿಎಸ್‌ವೈಗೆ ಟಾಸ್ಕ್‌

    ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ (Congress) ಸೇರಿದ ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Lakshman Savadi) ಅವರನ್ನು ಸೋಲಿಸಲು ಟಾರ್ಗೆಟ್ ಫಿಕ್ಸ್ ಆಗಿದೆ. ಇಬ್ಬರನ್ನು ಸೋಲಿಸಲು, ಲಿಂಗಾಯತ ವೋಟ್ ಬ್ಯಾಂಕ್ (Lingayat Vote Bank) ಉಳಿಸಿಕೊಳ್ಳಲು ಬಿಜೆಪಿ ನಾಯಕರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ.

     

    ಅವಿಭಜಿತ ಧಾರವಾಡ ಜಿಲ್ಲೆಯ 175 ನಾಯಕರ ಜೊತೆ ಅಮಿತ್ ಶಾ (Amit Shah) ಮಂಥನ ನಡೆಸಿದ್ದಾರೆ. ಇವತ್ತು ಬಿಎಸ್‌ ಯಡಿಯೂರಪ್ಪ (BS Yediyurappa) ನಿವಾಸಕ್ಕೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಧಾವಿಸಿ, ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

    ಮೂಲಗಳ ಪ್ರಕಾರ, ಶೆಟ್ಟರ್, ಸವದಿ ಸೋಲಿಸಲು ಬಿಎಸ್‌ವೈ ಮತ್ತು ಬೊಮ್ಮಾಯಿಗೆ ಹೈಕಮಾಂಡ್ ಟಾಸ್ಕ್ ನೀಡಿದೆ. ಬುಧವಾರ ಅಥಣಿ, ಹುಬ್ಬಳ್ಳಿ ಧಾರವಾಡದಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ.

    ಈ ಮಧ್ಯೆ ಶೆಟ್ಟರ್ ವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್ ಶಾ, ಹುಬ್ಬಳ್ಳಿಯಲ್ಲಿ ಶೆಟ್ಟರ್ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಸೋಲಬೇಕು ಎಂದು ಕರೆ ನೀಡಿದ್ದಾರೆ.

  • ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

    ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

    ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕಾಂಗ್ರೆಸ್‌ ತನ್ನ 3ನೇ ಪಟ್ಟಿಯನ್ನು (Congress Candidates List) ಶನಿವಾರ ಬಿಡುಗಡೆ ಮಾಡಿದೆ.

    ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದ್ದ ಕಾಂಗ್ರೆಸ್‌, 2ನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಿಸಿತ್ತು. ಶನಿವಾರ 3ನೇ ಪಟ್ಟಿ ಪ್ರಕಟಿಸಿದ್ದು, 43 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದು, ಇನ್ನೂ 15 ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿದೆ.

    ಕೋಲಾರದಿಂದ (Kolara Constituency) ಸಿದ್ಧರಾಮಯ್ಯಗೆ (Siddaramaiah) ಟಿಕೆಟ್‌ ನಿರಾಕರಿಸಲಾಗಿದ್ದು ವರುಣಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಲಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿದ ಲಕ್ಷ್ಮಣ ಸವದಿಗೆ ಟಿಕೆಟ್‌ ನೀಡಲಾಗಿದೆ. ತೇರದಾಳ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷಿಸಿದ್ದ ನಟಿ ಉಮಾಶ್ರೀಗೆ ನಿರಾಸೆಯಾಗಿದ್ದು, ತೆರದಾಳದಿಂದ ಸಿದ್ಧಪ್ಪ ರಾಮಪ್ಪ ಕೊಣ್ಣೂರುಗೆ ಟಿಕೆಟ್‌ ಸಿಕ್ಕಿದೆ.

    ಮದ್ದೂರಿನಲ್ಲಿ ಕೆ.ಎಂ ಉದಯ್‌ ಅವರಿಗೆ ನೀಡಲಾಗಿದೆ. ತರಿಕೇರೆಯಲ್ಲಿ ಜಿ.ಎಚ್‌ ಶ್ರೀನಿವಾಸ್‌ಗೆ ಟಿಕೆಟ್‌ ನೀಡಲಾಗಿದೆ. ಭಾರೀ ಬಂಡಾಯದ ನಡುವೆಯೂ ಮಾಜಿ ರಾಜ್ಯಪಾಲರಾದ ಮಾರ್ಗೆರೇಟ್‌ ಆಳ್ವಾ ಅವರ ಪುತ್ರ ನಿವೇದಿತಾ ಆಳ್ವಾಗೆ ಕುಮಟಾದಿಂದ ಟಿಕೆಟ್‌ ನೀಡಿದೆ. ಬೊಮ್ಮನಹಳ್ಳಿ ಕ್ಷೇತ್ರದಿಂದ ನಿರ್ಮಾಪಕ ಶ್ರೀನಿವಾಸ್‌ ಗೌಡಗೆ ಟಿಕೆಟ್‌ ನೀಡಲಾಗಿದೆ.

    ದೇವರಹಿಪ್ಪರಗಿಯಲ್ಲಿ ಶರಣಪ್ಪ ಸುಣಗಾರ್‌ಗೆ, ಸಿಂಧನೂರಿನಲ್ಲಿ ಹಂಪನಗೌಡ ಬಾರ್ದಲಿ ಹಾಗೂ ಬಳ್ಳಾರಿಯಲ್ಲಿ ನಾರಾ ಭರತ್‌ ರೆಡ್ಡಿಗೆ ಟಿಕೆಟ್‌ ನೀಡಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಬೆಂಬಲಿಗ ಆಂಜನೇಯಲುಗೆ ಟಿಕೆಟ್‌ ಕೊಡಿಸುವಲ್ಲಿ ಡಿ.ಕೆ ಶಿವಕುಮಾರ್‌ ವಿಫಲರಾಗಿದ್ದಾರೆ.

    ಬಾಕಿ ಇರಿಸಿಕೊಂಡಿದ್ದ 58 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ 3ನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆಯಾಗಿದ್ದು, ಇನ್ನೂ 15 ಕ್ಷೇತ್ರಗಳನ್ನ ಬಾಕಿ ಇರಿಸಿಕೊಂಡಿದೆ.

  • ಸ್ವಪಕ್ಷೀಯರ ವಿರೋಧದ ನಡುವೆಯೂ ಆಪ್ತನನ್ನು ಬಿಜೆಪಿಗೆ ಕರೆತಂದ ಲಕ್ಷ್ಮಣ ಸವದಿ

    ಸ್ವಪಕ್ಷೀಯರ ವಿರೋಧದ ನಡುವೆಯೂ ಆಪ್ತನನ್ನು ಬಿಜೆಪಿಗೆ ಕರೆತಂದ ಲಕ್ಷ್ಮಣ ಸವದಿ

    ಬೆಳಗಾವಿ: ಸ್ವಪಕ್ಷೀಯರ ವಿರೋಧದ ನಡುವೆಯೂ ಆಪ್ತನನ್ನು ಬಿಜೆಪಿಗೆ ಕರೆತರುವಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ.

    ನಗರದ ಖಾನಾಪೂರ ಕ್ಷೇತ್ರದ ಎಂಇಎಸ್‍ನ ಮಾಜಿ ಶಾಸಕ ಅರವಿಂದ ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

    ಅರವಿಂದ ಅವರ ಬಿಜೆಪಿ ಸೇರ್ಪಡೆಯಿಂದಾಗಿ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ತರಹೇವಾರು ಚರ್ಚೆಯಾಗುತ್ತಿದೆ. ಸ್ವಪಕ್ಷೀಯರ ವಿರೋಧದ ಮಧ್ಯೆ ಆಪ್ತನನ್ನು ಪಕ್ಷಕ್ಕೆ ಕರೆತರುವಲ್ಲಿ ಸವದಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಅರವಿಂದ ಪಾಟೀಲ್ ಬಿಜೆಪಿ ಪಕ್ಷ ಸೇರ್ಪಡೆಯಿಂದ ಖಾನಾಪೂರ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದನ್ನೂ ಓದಿ: ಹರ್ಷ ಕೊಲೆ ಕೇಸ್ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ಎನ್‍ಕೌಂಟರ್ ಮಾಡಿ: ಮುತಾಲಿಕ್

    ಖಾನಾಪೂರ ಕ್ಷೇತ್ರದ ಬಿಜೆಪಿ ಟಿಕೆಟ್‍ಗಾಗಿ ಕಸರತ್ತು ನಡೆಸಿದ್ದ ವಿಠ್ಠಲ ಹಲಗೇಕರ್, ಡಾ.ಸೋನಾಲಿ ಸರ್ನೋಬತ್ ಸೇರಿದಂತೆ ಹಲವು ಮುಖಂಡರು ಸವದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಿನ್ನಮತ ಶಮನ ವಿಚಾರವಾಗಿ ಮಧ್ಯಪ್ರವೇಶಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಖಾನಾಪೂರ ಬಿಜೆಪಿ ನಾಯಕರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಹಾಗೆಯೇ ಯಾರೂ ಮಾಧ್ಯಮಗಳಿಗೆ ಹೇಳಿಕೆ ನೀಡಿದಂತೆ ಖಾನಾಪೂರ ಅವರು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

  • ಬೆಳಗಾವಿಯ ಗೌಪ್ಯ ಸಭೆ ಬಿಜೆಪಿ ಅಧಿಕೃತ ಸಭೆಯಲ್ಲ: ಬಾಲಚಂದ್ರ ಜಾರಕಿಹೊಳಿ

    ಬೆಳಗಾವಿಯ ಗೌಪ್ಯ ಸಭೆ ಬಿಜೆಪಿ ಅಧಿಕೃತ ಸಭೆಯಲ್ಲ: ಬಾಲಚಂದ್ರ ಜಾರಕಿಹೊಳಿ

    ಬೆಳಗಾವಿ: ಉದ್ದೇಶಪೂರ್ವಕವಾಗಿ ಯಾರನ್ನೂ ಹೊರಗಿಟ್ಟು ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ಸಚಿವ ಉಮೇಶ್ ಕತ್ತಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿರುಗೇಟು ನೀಡಿದರು.

    ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ನಡೆದ ಗೌಪ್ಯ ಸಭೆ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಬೆಳಗಾವಿಯಲ್ಲಿ ನಡೆದ ಸಭೆ ಬಿಜೆಪಿ ಅಧಿಕೃತ ಸಭೆಯಲ್ಲ. ಹೀಗಾಗಿ ಈ ಸಭೆಗೆ ಹೆಚ್ಚಿನ ಮಹತ್ವ ಬೇಡ ಎಂದು ತಿಳಿಸಿದರು.

    ಯಾರನ್ನು ಹೊರಗಿಟ್ಟು ಈ ಸಭೆಯನ್ನು ಮಾಡಲಾಗಿದೆ ಎನ್ನುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಯಾರು ಎಷ್ಟು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ದಿನಕ್ಕೊಬ್ಬರಂತೆ ಸಭೆ ನಡೆಸುತ್ತ ಹೋದರೆ ಅದಕ್ಕೆಲ್ಲ ಉತ್ತರಿಸುವ ಗೋಜಿಗೆ ಹೋಗಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ

    2008ರಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಕೆಲಸ ಮಾಡುತ್ತೇವೆ. ಈಗ ನಡೆದಿರುವ ವಿದ್ಯಮಾನಗಳನ್ನು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: 2047ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ: ಮೋದಿ

  • ನಾನು ಮಾಸ್ಕ್ ಹಾಕಲ್ಲ : ಸಚಿವ ಉಮೇಶ್ ಕತ್ತಿ

    ನಾನು ಮಾಸ್ಕ್ ಹಾಕಲ್ಲ : ಸಚಿವ ಉಮೇಶ್ ಕತ್ತಿ

    ಬೆಳಗಾವಿ: ದಿನೇ ದಿನೇ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರ ಮಾರ್ಗಸೂಚಿಯನ್ನು ಪಾಲಿಸದಿದ್ದರೆ, ಸಾಮಾನ್ಯರಿಗೆ ದಂಡವನ್ನು ವಿಧಿಸುತ್ತಿದೆ. ಆದರೆ ಜನ ಸಾಮಾನ್ಯರಿಗೆ ಸರ್ಕಾರದ ಮಾರ್ಗಸೂಚಿಯನ್ನು ಮನವರಿಕೆ ಮಾಡುವ ಸಚಿವರೇ ನಾನು ಮಾಸ್ಕ್ ಧರಿಸಲ್ಲ ಎಂದು ಉಡಾಫೆ ಉತ್ತರ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

    ಸಚಿವ ಉಮೇಶ್ ಕತ್ತಿ ಅವರು ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಚಿವರು ಸೇರಿ ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಪಾಟೀಲ್, ಶಾಸಕ ಕುಮಟಳ್ಳಿ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸಚಿವ ಉಮೇಶ್‍ಕತ್ತಿ ನಾನು ಮಾಸ್ಕ್ ಹಾಕಲ್ಲ. ಮಾಸ್ಕ್ ಹಾಕೋದು ನನಗೆ ಬಿಟ್ಟಿದ್ದು. ನನಗೆ ಮಾಸ್ಕ್ ಹಾಕಬೇಕು ಎಂದು ಅನ್ನಿಸಿಲ್ಲ. ಹಾಗಾಗಿ ನಾನು ಮಾಸ್ಕ್ ಹಾಕಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ನಿನ್ನೆ ರಾತ್ರಿ ಪ್ರಧಾನಿಮಂತ್ರಿ ತಿಳಿಸಿದ್ದಾರೆ. ಯಾವುದೇ ನಿರ್ಬಂಧ ವಿಧಿಸಲ್ಲ. ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಮಾಸ್ಕ್ ಹಾಕಿಕೊಳ್ಳಬೇಕು. ಅದು ಅವರಿಗೆ ಬಿಟ್ಟಿದ್ದು. ಇದರಿಂದಾಗಿ ನಾನು ಮಾಸ್ಕ್ ಹಾಕಲ್ಲ ಎಂದು ಹೇಳಿದರು. ಲಸಿಕೆ ವಿಚಾರವಾಗಿ ಯಾರಿಗೂ ಒತ್ತಾಯ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು. ಇದನ್ನೂ ಓದಿ:  ದೂಧ್ ಸಾಗರ್ ಬಳಿ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್‌ ರೈಲು

  • ಟ್ರಾಫಿಕ್ ನಿಯಮ ಉಲ್ಲಂಘಿಸಿದ ಡಿಸಿಎಂ, ಎಂಎಲ್‍ಎ, ಬಿಜೆಪಿ ರಾಜ್ಯಾಧ್ಯಕ್ಷ

    ಟ್ರಾಫಿಕ್ ನಿಯಮ ಉಲ್ಲಂಘಿಸಿದ ಡಿಸಿಎಂ, ಎಂಎಲ್‍ಎ, ಬಿಜೆಪಿ ರಾಜ್ಯಾಧ್ಯಕ್ಷ

    ಕೊಪ್ಪಳ: ಜಿಲ್ಲೆಯ ಶಾಸಕರು, ಡಿಸಿಎಂ ಲಕ್ಷಣ ಸವದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಪ್ಪಳದಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ.

    ನಳಿನ್ ಕುಮಾರ್ ಕಟೀಲ್ ಹಾಗೂ ಡಿಸಿಎಂ ಲಕ್ಷಣ ಸವದಿ ಅವರು ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಸಂಚಾರ ಮಾಡಿದ್ದಾರೆ. ಅಲ್ಲದೆ ಹಿಂದೆ ಮುಂದೆ ಪೊಲೀಸ್ ವಾಹನಗಳಿದ್ದರೂ ನಿಯಮ ಉಲ್ಲಂಘನೆಗೆ ದಂಡ ವಿಧಿಸಿಲ್ಲ.

    ಸೀಟ್ ಬೆಲ್ಟ್ ಧರಿಸದಿದ್ದರೆ ಟ್ರಾಫಿಕ್ ನಿಯಮದ ಪ್ರಕಾರ ಒಂದು ಸಾವಿರ ದಂಡ ವಿಧಿಸಬೇಕಾಗುತ್ತದೆ. ಆದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರು ಬಿಜೆಪಿ ನಾಯಕರು ದಂಡ ಕಟ್ಟಲಿಲ್ಲ. ಇದನ್ನು ನೋಡಿದ ಸಾರ್ವಜನಿಕರು ಜನ ಸಾಮಾನ್ಯರಿಗೆ ಒಂದು ನ್ಯಾಯ? ಬಿಜೆಪಿ ನಾಯಕರಿಗೆ ಒಂದು ನ್ಯಾಯಾನಾ? ಎಂದು ಪ್ರಶ್ನಿಸುತ್ತಿದ್ದಾರೆ.

    ಸೀಟ್ ಬೆಲ್ಟ್ ಧರಿಸದ ಡಿಸಿಎಂ ಲಕ್ಷಣ ಸವದಿ ಅವರು ಕಾರ್ ಇಳಿಯುತ್ತಿದ್ದಂತೆ ಎಸ್‍ಪಿ ಹಾಗೂ ಡಿಸಿ ಹೂಗುಚ್ಚ ನೀಡಿ ಬರ ಮಾಡಿಕೊಂಡಿದ್ದಾರೆ.

  • ಬಸ್ ನಿಲ್ದಾಣದ ಮೇಲಿದ್ದ ನಾಲ್ವರ ರಕ್ಷಣೆ- ಲಕ್ಷ್ಮಣ ಸವದಿ ಮನೆಗೆ ಶಿಫ್ಟ್

    ಬಸ್ ನಿಲ್ದಾಣದ ಮೇಲಿದ್ದ ನಾಲ್ವರ ರಕ್ಷಣೆ- ಲಕ್ಷ್ಮಣ ಸವದಿ ಮನೆಗೆ ಶಿಫ್ಟ್

    ವಿಜಯಪುರ: ಜಿಲ್ಲೆಯ ದರೂರು ಗ್ರಾಮದ ಬಸ್ ನಿಲ್ದಾಣದ ಮೇಲೆ ಆಶ್ರಯ ಪಡೆದಿದ್ದ ನಾಲ್ವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದ್ದು, ಅವರನ್ನು ಮಾಜಿ ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ಸ್ಥಳಾಂತರಿಸಲಾಗಿದೆ.

    ದರೂರ್ ಗ್ರಾಮದಲ್ಲಿ ಹಲವು ಜನ ಸಿಲುಕಿಕೊಂಡಿರುವ ಮಾಹಿತಿಯ ಮೇರೆಗೆ ಸೇನಾ ಹೆಲಿಕಾಪ್ಟರ್ ರಕ್ಷಣೆಗೆ ತೆರಳಿತ್ತು. ಈ ವೇಳೆ ಗ್ರಾಮದ ಬಸ್ ನಿಲ್ದಾಣದ ಮೇಲೆ ಆಶ್ರಯ ಪಡೆದಿದ್ದ ನಾಲ್ವರನ್ನು ರಕ್ಷಣೆ ಮಾಡಲಾಯಿತು.

    ಇನ್ನೂ 13 ಜನ ದರೂರು ಗ್ರಾಮದ ಖವಟಕೊಪ್ಪ ರಸ್ತೆಯಲ್ಲಿ ಸಿಲುಕಿರುವ ಮಾಹಿತಿ ಇದ್ದು, ರಕ್ಷಣೆಗಾಗಿ ಸೇನಾ ಹೆಲಿಕಾಪ್ಟರ್ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಿಸಲ್ಪಟ್ಟ ಪರಶುರಾಮ್ ಕುಂಬಾರ್, ಅಶೋಕ ಗಳತಗಿ, ಗುರುಸಿದ್ದಯ್ಯ ಮಠದ, ಹನುಮಂತ ಅವಟಿ ಅವರನ್ನು ಅಥಣಿಯ ಮಾಜಿ ಶಾಸಕ ಲಕ್ಷ್ಮಣ ಸವದಿ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

    ಕೃಷ್ಣಾ ನದಿ ಸಮುದ್ರದಂತೆ ರಭಸವಾಗಿ ಹರಿಯುತ್ತಿದ್ದು, ಅಂತಹ ರಭಸದ ಮಧ್ಯೆ ಕುಟುಂಬ ಸಿಲುಕಿಕೊಂಡಿತ್ತು. ಹುಣಸಿಗಿ ತಾಲೂಕಿನ ಗೆದ್ದಲಮರಿ ನದಿಪಾತ್ರದಲ್ಲಿ ವಾಸವಿದ್ದ ಹಳ್ಳೆಪ್ಪ ಎಂಬವರ ಕುಟುಂಬ ನದಿಯಲ್ಲಿ ಸಿಲುಕಿಕೊಂಡಿತ್ತು. ಹೆಲಿಕಾಪ್ಟರ್ ಬಳಸಿ ಎನ್‍ಡಿಆರ್ ಎಫ್ ತಂಡ ಕುಟುಂಬದ ರಕ್ಷಣೆ ಮಾಡಿದೆ.

  • ರಾವಣ ಅಂತ ಇಡ್ಬೇಕಿತ್ತು, ಅದ್ಯಾಕೋ ಅವ್ರಪ್ಪ ರೇವಣ್ಣ ಎಂದು ಹೆಸ್ರಿಟ್ಟಿದ್ದಾರೆ: ಕೆ.ಎನ್.ರಾಜಣ್ಣ

    ರಾವಣ ಅಂತ ಇಡ್ಬೇಕಿತ್ತು, ಅದ್ಯಾಕೋ ಅವ್ರಪ್ಪ ರೇವಣ್ಣ ಎಂದು ಹೆಸ್ರಿಟ್ಟಿದ್ದಾರೆ: ಕೆ.ಎನ್.ರಾಜಣ್ಣ

    -ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಚೌಲ್ಟ್ರಿ ಹತ್ರ ಗಿಣಿ ಶಾಸ್ತ್ರ ಕೇಳಿ
    – ನಾನು ಲಕ್ಷ್ಮಣ ಸವದಿ 25 ವರ್ಷದ ಸ್ನೇಹಿತರು

    ತುಮಕೂರು: ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮವೆಲ್ಲ ರಾವಣನ ರೀತಿ. ರಾವಣ ಎಂದು ಹೆಸರು ಇಡಬೇಕಿತ್ತು. ಅದು ಯಾಕೋ ಅವರಪ್ಪ ರೇವಣ್ಣ ಎಂದು ಇಟ್ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ನಾಯಕ ಲಕ್ಷ್ಮಣ ಸವದಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ರೇವಣ್ಣ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರೇವಣ್ಣನ ಕಾಟಕ್ಕೆ ಯಾವ ಅತೃಪ್ತ ಶಾಸಕರು ವಾಪಸ್ ಬರೋದಿಲ್ಲ. ಯಾಕೆಂದರೆ ಅವರಿಗೆಲ್ಲ ರೇವಣ್ಣ ಅಷ್ಟೊಂದು ಕಾಟ ಕೊಟ್ಟಿದ್ದಾರೆ. ಅವರ ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮ ಎಲ್ಲಾ ರಾವಣನ ರೀತಿ. ಅವರ ಅಪ್ಪ ರಾವಣ ಎಂದು ಇಡ್ಬೇಕಿತ್ತು ಆದರೆ ರೇವಣ್ಣ ಎಂದು ಇಟ್ಟುಬಿಟ್ಟಿದ್ದಾರೆ. ಸರ್ಕಾರ ಬೀಳೋಕೆ ರೇವಣ್ಣನೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಬಹುಮತ ಸಾಬೀತು ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರವೇ ಇಲ್ಲ. ವಿಶ್ವಾಸ ಮತ ಸಾಬೀತು ಹೇಗೆ? ಸರ್ಕಾರವೇ ಇಲ್ಲ ಅಂದ ಮೇಲೆ ಬಹುಮತ ಸಾಬೀತು ಫಲಿತಾಂಶ ಯಾಕೆ ಕೇಳ್ತೀರಾ? ಚುನಾವಣೆಯಲ್ಲಿ ನಿಲ್ಲೋ ಎಲ್ಲರೂ ಗೆಲುತ್ತೇವೆ ಅಂತಲೇ ಹೇಳೋದು. ಸೋಲುತ್ತೇವೆ ಎಂದು ಯಾರೂ ಹೇಳಲ್ಲ. ಫಲಿತಾಂಶ ಬಂದ ಮೇಲೆ ಯಾರು ಸೋಲ್ತಾರೆ, ಯಾರು ಗೆಲ್ತಾರೆ ಎಂದು ಗೊತ್ತಾಗುತ್ತದೆ. ನಮಗೆ ಯಾವತ್ತೂ ಸುಳ್ಳು ಹೇಳಿ ಅಭ್ಯಾಸ ಇಲ್ಲ, ನಿಜ ಹೇಳೋದಾದರೆ ಸರ್ಕಾರವೇ ಇಲ್ಲ. ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಚೌಲ್ಟ್ರಿ ಹತ್ರ ಗಿಣಿ ಶಾಸ್ತ್ರ ಕೇಳಿ ಎಂದು ಕಿಡಿಕಾರಿದರು.

    ಲಕ್ಷ್ಮಣ ಸವದಿ ನನ್ನನ್ನು ಬಿಜೆಪಿಗೆ ಕರೀಲಿಲ್ಲ. ನಾನು ಅವರನ್ನ ಕಾಂಗ್ರೆಸ್ಸಿಗೆ ಕರೆದಿಲ್ಲ. ಅವರು ನಾನು 25 ವರ್ಷಗಳ ಸ್ನೇಹಿತರು. ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದು ನನ್ನನ್ನ ಭೇಟಿ ಮಾಡಿದ್ದಾರೆ. ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಬೇಡ. ಲೂಟಿಕೋರರು ಹೋಗಲಿ ಅನ್ನೋ ಅವರ ಉದ್ದೇಶಕ್ಕೆ ನನ್ನ ಸಹಮತ ಇದೆ ಎಂದರು.