Tag: Lakhs

  • ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ 59 ಲಕ್ಷ ರೂ. ಪಂಗನಾಮ ಹಾಕಿದ ಯುವತಿ!

    ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ 59 ಲಕ್ಷ ರೂ. ಪಂಗನಾಮ ಹಾಕಿದ ಯುವತಿ!

    ಬೆಂಗಳೂರು: ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಲಕ್ಷ-ಲಕ್ಷ ಹಣ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಅರ್ಪಿತಾ ಸಾಮಾಜಿಕ ಜಾಲತಾಣದಲ್ಲಿ ಮೋಸ ಮಾಡಿದ ಯುವತಿ.  ಡೇಟಿಂಗ್ ವೆಬ್‍ಸೈಟ್‍ವೊಂದರಲ್ಲಿ ಸುರೇಶ್ ಎಂಬಾತನಿಗೆ ಅರ್ಪಿತಾ ಪರಿಚಯವಾಗಿದ್ದಳು. ಪರಿಚಯ ಸ್ನೇಹಕ್ಕೆ ತಿರುಗಿ ಆಕೆಯೇ ಸುರೇಶ್ ವಾಟ್ಸಾಪ್‍ಗೆ ಮೆಸೇಜ್ ಕಳುಹಿಸಿದ್ದಾಳೆ. ಮುಂದುವರಿದು ಕೆಲ ವರ್ಷಗಳಿಂದ ಸುರೇಶ್ ಜೊತೆ ಚಾಟಿಂಗ್ ನಡೆಸುತ್ತಿದ್ದಳು.

    ಬಳಿಕ ಒಂದು ದಿನ ಅರ್ಪಿತಾ ತನ್ನ ತಂದೆಗೆ ಹುಷಾರಿಲ್ಲ ಎಂದು ಹಂತ ಹಂತವಾಗಿ 59 ಲಕ್ಷ ಹಣ ಪಡೆದು ಸುರೇಶ್ ಗೆ ವಂಚಿಸಿದ್ದಾಳೆ. ಸದ್ಯ ಯುವತಿಯಿಂದ ಮೋಸ ಹೋದ ಸುರೇಶ್ ಬೆಂಗಳೂರಿನ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ.