Tag: lakhimpur violenc

  • ನ್ಯಾಯ ಕೇಳಿ ಮೋದಿಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ

    ನ್ಯಾಯ ಕೇಳಿ ಮೋದಿಗೆ ಪತ್ರ ಬರೆದ ಪ್ರಿಯಾಂಕಾ ಗಾಂಧಿ

    ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ನ್ಯಾಯ ನೀಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಪರೆದಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಲಖಿಂಪುರ-ಖೇರಿ ರೈತರಿಗೆ ಕಾರು ಗುದ್ದಿಸಿ ಕೆಳಗೆ ಬೀಳಿವಂತೆ ಮಾಡಿದ್ದು, ಕೇಂದ್ರ ಗೃಹ ಖಾತೆ ಸಚಿವರ ಮಗ. ಉತ್ತರಪ್ರದೇಶ ಸರ್ಕಾರವು ರಾಜಕೀಯ ಒತ್ತಡಕ್ಕೆ ಒಳಗಾಗಿ ಮೃತರ ಕುಟುಂಬಕ್ಕೆ ನೀಡಬೇಕಾದ ನ್ಯಾಯದ ಸಿಕ್ಕಿಲ್ಲ ಎಂದು ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನು ಎಂದಿದ್ದಾರೆ. ಇದನ್ನೂ ಓದಿ:  ಕೃಷಿ ಕಾಯ್ದೆ ಹಿಂಪಡೆದದ್ದು, ತಡವಾದರೂ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ: ಬಿಎಸ್‍ವೈ

    ಪತ್ರದಲ್ಲಿ ಏನಿದೆ? : ಮೃತ ರೈತರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಹೀಗಾಗಿ ಮೋದಿಯವರು ಲಕ್ನೋದಲ್ಲಿ ನಡೆಯಲಿರುವ ಡಿಜಿಪಿ ಮತ್ತು ಐಜಿಪಿ ಸಮ್ಮೇಳನದಲ್ಲಿ ಭಾಗವಹಿಸಬಾರದು. ಮೋದಿ ಅವರಿಗೆ ನಿಜವಾಗಿಯೂ ರೈತರ ಕುರಿತಾಗಿ ಕಾಳಜಿ ಇದ್ದರೆ ಲಖಿಂಪುರ್ ಖೇರಿ ಪ್ರಕರಣ ಆರೋಪಿ ತಂದೆ ಅಜಯ್ ಮಿಶ್ರಾ ಜೊತೆಗೆ ವೇದಿಕೆ ಹಂಚಿಕೊಳ್ಳಬಾರದು. ಕೆಂದ್ರ ಗೃಹ ಝಾತೆಯ ರಾಜ್ಯ ಸಚಿವರಾಗಿ ಅಜಯ್ ಮಿಶ್ರಾ ಮಂದುವರಿದರೆ ರೈತ ಕುಟುಂಕ್ಕೆ ಖಂಡಿತವಾಗಿಯೂ ನ್ಯಾಯ ಸಿಗುವುದಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ