Tag: lake

  • ಕೆರೆಗೆ ಈಜಲು ಹೋದ ಇಬ್ಬರು ಯುವಕರು ನೀರು ಪಾಲು

    ಕೆರೆಗೆ ಈಜಲು ಹೋದ ಇಬ್ಬರು ಯುವಕರು ನೀರು ಪಾಲು

    ಮಂಡ್ಯ: ಕೆರೆಗೆ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಮೋದೂರು ಗ್ರಾಮದಲ್ಲಿ ನಡೆದಿದೆ.

    ಮೋದೂರು ಗ್ರಾಮದ ರಮೇಶ್ ಅವರ ಪುತ್ರ ರಾಜು(19) ಹಾಗೂ ಪ್ರದೀಪ್ (21) ಮೃತ ಯುವಕರಾಗಿದ್ದಾರೆ. ಇಬ್ಬರೂ ಕೆರೆಯ ಕಡೆ ಹೋಗುತ್ತೇವೆ ಎಂದು ಹೇಳಿ ಮನೆಯಿಂದ ಹೋಗಿದ್ದು, ಬಳಿಕ ಕೆರೆಯ ಬಳಿ ಈಜಲು ಮುಂದಾಗಿದ್ದಾರೆ.

    ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಎರಡೂ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

  • ಮೀನು ಹಿಡಿಯಲು ಹೋಗಿ ಸಿವಿಲ್ ಇಂಜಿನಿಯರ್ ಸಾವು

    ಮೀನು ಹಿಡಿಯಲು ಹೋಗಿ ಸಿವಿಲ್ ಇಂಜಿನಿಯರ್ ಸಾವು

    ಚಿಕ್ಕಬಳ್ಳಾಪುರ: ಮೀನು ಹಿಡಿಯಲು ಹೋದ ಯುವಕನೊರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಭಕ್ತರಹಳ್ಳಿ ಅರಸಿಕೆರೆಯಲ್ಲಿ ನಡೆದಿದೆ.

    ಮೂಲತಃ ಗದಗ ಮೂಲದ ಮೊಹಮದ್ ಹುಸೇನ್ ಮೃತ ಯುವಕ. ಸಿವಿಲ್ ಇಂಜಿನಿಯರ್ ಆಗಿದ್ದ ಮೃತ ಯವಕ ಲಾಕ್‍ಡೌನ್ ರಜೆಯಲ್ಲಿ ಸ್ನೇಹಿತರ ಜೊತೆ ಮೀನು ಹಿಡಿಯಲು ಅರಸಿಕೆರೆಗೆ ತೆರಳಿದ್ದ. ಈ ವೇಳೆ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

    ಹುಸೇನ್ ಜೊತೆಗಿದ್ದ ಇತರ ಸ್ನೇಹಿತರು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗದೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ನೇಹಿತರೊಂದಿಗೆ ಈಜಲು ಹೋದ ಬಾಲಕ ನೀರುಪಾಲು

    ಸ್ನೇಹಿತರೊಂದಿಗೆ ಈಜಲು ಹೋದ ಬಾಲಕ ನೀರುಪಾಲು

    ಚಿಕ್ಕಬಳ್ಳಾಪುರ: ಗೆಳೆಯರ ಜೊತೆ ಸೇರಿ ಕೆರೆಯಲ್ಲಿ ಈಜಲು ಹೋದ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ನಡೆದಿದೆ.

    30ನೇ ವಾರ್ಡಿನ ಅಂಬೇಡ್ಕರ್ ನಗರದ ನಿವಾಸಿಗಳಾದ ಮುನಿರಾಜು, ವೆಂಕಟಲಕ್ಷ್ಮಮ್ಮ ದಂಪತಿಯ ಪುತ್ರ ವಿಜಯ್(17) ಮೃತ ದುರ್ದೈವಿಯಾಗಿದ್ದಾನೆ. ನಾಲ್ವರು ಗೆಳೆಯರೊಂದಿಗೆ ವಿಜಯ್ ಅಮಾನಿ ಗೋಪಾಲಕೃಷ್ಣ ಕೆರೆಗೆ ಈಜಲು ಹೋಗಿದ್ದು, ಈಜು ಬಾರದೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಹಾವೇರಿ: ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ನಡೆದಿದೆ.

    ಅಖ್ತರ್ ರಜಾ ಯಳವಟ್ಟಿ(16), ಅಹ್ಮದ್ ರಜಾ ಅಂಚಿ(16) ಮತ್ತು ಸಾಹಿಲ್ ಡೊಂಗ್ರಿ(17) ಮೃತ ಬಾಲಕರು. ಈ ಮೂವರು ಸೇರಿಕೊಂಡು ಗ್ರಾಮದ ಬಳಿ ಇರುವ ಕೆರೆಗೆ ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

    ಸ್ಥಳೀಯರು ಮೂವರು ಬಾಲಕರ ಮೃತದೇಹವನ್ನು ಕೆರೆಯಿಂದ ಹೊರಗಡೆ ತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಪಿಕ್ನಿಕ್‍ಗೆ ತೆರಳಿದ ಬಾಲಕಿ ಶವವಾಗಿ ಪತ್ತೆ

    ಪಿಕ್ನಿಕ್‍ಗೆ ತೆರಳಿದ ಬಾಲಕಿ ಶವವಾಗಿ ಪತ್ತೆ

    ಕೋಲಾರ: ಮನೆಯಲ್ಲಿ ಪಿಕ್‍ನಿಕ್‍ಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿಯಲ್ಲಿ ನಡೆದಿದೆ.

    ಪಿಕ್‍ನಿಕ್‍ಗೆ ಹೋಗುತ್ತೇನೆಂದು ತೆರಳಿದ್ದ 17 ವರ್ಷದ ಕೀರ್ತಿ ಕಾರಿಣಿ ಅನುಮಾನಾಸ್ಪದ ರೀತಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕೆಜಿಎಫ್‍ನ ಸೆಂಟ್ ಥೆರೆಸಾ ಕಾಲೇಜು ವಿದ್ಯಾರ್ಥಿನಿ ಎನ್ನಲಾಗಿದೆ.

    ಕಳೆದ ಎರಡು ದಿನಗಳಿಂದ ಬಾಲಕಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪೋಷಕರು, ಬಾಲಕಿ ಹುಡುಕಾಟದಲ್ಲಿದ್ದರು. ಆದರೆ ಇಂದು ಬಾಲಕಿ ಬ್ಯಾಗ್ ಮತ್ತು ಮೊಬೈಲ್ ಕೆರೆ ದಡದಲ್ಲಿ ಪತ್ತೆ ಯಾಗಿತ್ತು. ಹೀಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ ವೇಳೆ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಕೆಜಿಎಫ್ ಡಿವೈಎಸ್‍ಪಿ ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಡರ್‍ಸನ್ ಪೇಟ್ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಸ್ಯಾಂಕಿ ಕೆರೆ ಬಳಿ ನಿರ್ಮಾಣವಾಗಲಿದೆ 100 ಅಡಿ ಅಗಲದ ಜಲಪಾತ

    ಸ್ಯಾಂಕಿ ಕೆರೆ ಬಳಿ ನಿರ್ಮಾಣವಾಗಲಿದೆ 100 ಅಡಿ ಅಗಲದ ಜಲಪಾತ

    -ಜಲಪಾತ ನಿರ್ಮಾಣ ಶಿವರಾತ್ರಿ ದಿನ ಸ್ಥಳ ಪರಿಶೀಲನೆ ಮಾಡಿದ ಡಿಸಿಎಂ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಜಲಪಾತವೊಂದು ಸೃಷ್ಟಿಯಾಗಲಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಹಾ ಶಿವರಾತ್ರಿ ದಿನ ಆ ಯೋಜನೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

    ಮಲ್ಲೇಶ್ವರದ ಸ್ಯಾಂಕಿ ಕೆರೆಯ ಈಜುಕೊಳದ ಪಕ್ಕದಲ್ಲಿ ಜಲಪಾತ ನಿರ್ಮಿಸುವ ಸಂಬಂಧ ಡಿಸಿಎಂ ಸ್ಥಳ ಪರಿಶೀಲನೆ ನಡೆಸಿದರು. ಈ ಮೂಲಕ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಕೃತಕ ಜಲಪಾತವನ್ನು ನಿರ್ಮಾಣ ಮಾಡಲಾಗುತ್ತಿದೆ.

    ಕೃತಕ ಜಲಪಾತ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮವರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ ಅವರು, ಸದಾಶಿವನಗರದ ಸ್ಯಾಂಕಿ ಕೆರೆ ನವೀಕರಣ ಕಾಮಗಾರಿ ನಡೆಯುತ್ತಿದ್ದು ಹೆಚ್ಚುವರಿಯಾಗಿ ಕೆರೆ ಪಕ್ಕದ ಈಜುಕೊಳಕ್ಕೆ ಹೊಂದಿಕೊಂಡಂತೆ ಜಲಪಾತದ ಗೋಡೆ ನಿರ್ಮಿಸಲಾಗುವುದು. ವಾಟರ್ ಫಾಲ್ಸ್ ಜತೆಗೆ ಏರಿಯೇಟರ್ಸ್ ಕೂಡ ಅಳವಡಿಸಲಾಗುವುದು. ಇದರಿಂದ ಕೆರೆ ನೀರು ಸ್ವಚ್ಛ ಆಗಲಿದೆ. ಈಗಾಗಲೇ ಸರ್ವಋತುಗಳಲ್ಲಿಯೂ ನಳನಳಿಸುವ ಉದ್ಯಾನವನಗಳಿಂದ ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ನಗರಕ್ಕೆ ಈ ಜಲಪಾತ ಮತ್ತಷ್ಟು ಮೆರಗು ನೀಡಲಿದೆ. ಮಲ್ಲೇಶ್ವರದ ಪಾರಂಪರಿಕ ವೈಭವಕ್ಕೆ ಪೂರಕವಾಗಿರಲಿದೆ. ಇದಕ್ಕೆ ಒಂದೂವರೆ ಕೋಟಿ ಖರ್ಚಾಗುವ ಅಂದಾಜಿದೆ ಎಂದು ಮಾಹಿತಿ ಹಂಚಿಕೊಂಡರು.

    12 ರಿಂದ 15 ಅಡಿ ಎತ್ತರ ಹಾಗೂ ಸುಮಾರು 100 ಅಡಿ ಅಗಲ ಇರಲಿರುವ ಈ ಜಲಪಾತ ನಗರದ ಪ್ರವಾಸೋದ್ಯಮಕ್ಕೂ ಪೂರಕವಾಗಿರಲಿದ್ದು, ಸ್ಯಾಂಕಿ ಕೆರೆಯು ಮಲ್ಲೇಶ್ವರಕ್ಕೆ ಮಾತ್ರವಲ್ಲ, ಇಡೀ ಬೆಂಗಳೂರಿಗೆ ಒಂದು ಮಹತ್ವದ ತಾಣ. ಮುಂದಿನ ದಿನಗಳಲ್ಲಿ ಕೆರೆಗೆ ಇನ್ನಷ್ಟು ಕಾಯಕಲ್ಪ ನೀಡಲಾಗುವುದು. ಪ್ರತಿಯೊಬ್ಬ ಬೆಂಗಳೂರಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ಆ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

    ಪಾಲಿಕೆಯ ಮುಖ್ಯ ಇಂಜಿನಿಯರ್ (ಕೆರೆ) ಮೋಹನ್ ಕೃಷ್ಣ, ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಪಾಪರೆಡ್ಡಿ, ಸಹಾಯಕ ಇಂಜಿನಿಯರ್ ಗಳಾದ ಸುಷ್ಮಾ, ಸ್ವಪ್ನಾ, ಬಿಬಿಎಂಪಿ ಮಾಜಿ ಸದಸ್ಯರಾದ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಮುಖಂಡರು ಡಿಸಿಎಂ ಜೊತೆಗಿದ್ದರು.

  • ಬಿಸಿಲಿನ ತಾಪಕ್ಕೆ ಕೆರೆಯಲ್ಲಿದ್ದ ಮೊಸಳೆಗಳು ಸಾವು

    ಬಿಸಿಲಿನ ತಾಪಕ್ಕೆ ಕೆರೆಯಲ್ಲಿದ್ದ ಮೊಸಳೆಗಳು ಸಾವು

    ರಾಯಚೂರು: ಬಿಸಿಲಿನ ತಾಪಕ್ಕೆ ಕೆರೆಯಲ್ಲಿನ ಮೊಸಳೆ ಮರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರಿನ ಆಶಿಹಾಳ ತಾಂಡದಲ್ಲಿ ನಡೆದಿದೆ. ಕೆರೆದಡದಲ್ಲಿ ಎರಡು ಮೊಸಳೆ ಮರಿಗಳು ಸತ್ತು ಬಿದ್ದಿರುವುದನ್ನ ಕಂಡು ಗ್ರಾಮಸ್ಥರು ಇನ್ನಷ್ಟು ಮೊಸಳೆಗಳು ಇರಬಹುದು ಅಂತ ಗಾಬರಿಯಾಗಿದ್ದಾರೆ.

    ಮಳೆಗಾಲದಲ್ಲಿ ಹರಿಯುವ ನೀರಿನೊಂದಿಗೆ ಬಂದು ಸೇರಿಕೊಂಡ ಮರಿಗಳು ಕೊನೆಗೆ ಕೆರೆಯಲ್ಲೇ ಉಳಿದುಕೊಂಡಿವೆ. ಈಗ ಪತ್ತೆಯಾಗಿರುವ ಮರಿಗಳು ಎರಡು ಅಥವಾ ಮೂರು ತಿಂಗಳ ವಯಸ್ಸಿನವು ಇರಬಹುದು ಎನ್ನಲಾಗಿದೆ. ಕೆರೆಯಲ್ಲಿ ತಾಯಿ ಮೊಸಳೆ ಸೇರಿ ಇನ್ನಷ್ಟು ಮೊಸಳೆಗಳು ಇರುವ ಸಾಧ್ಯತೆಯಿದೆ. ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲಿನ ತಾಪಕ್ಕೆ ಸತ್ತಿರಬಹುದು ಎನ್ನಲಾಗಿದೆಯಾದ್ರೂ ಮೊಸಳೆಗಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

    ಕೆರೆಯಲ್ಲಿ ಮೀನು ಹಿಡಿಯಲು ಹೋದ ಮೀನುಗಾರರು ಕೊಲೆ ಮಾಡಿರುವ ಶಂಕೆಯೂ ಇದೆ. ಮೀನುಗಾರರ ಗಾಳಕ್ಕೆ ಸಿಲುಕಿದಾಗ ಸಾಯಿಸಿರುವ ಅನುಮಾನಗಳನ್ನು ಸಹ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯ ಪರಸ್ಥಿತಿ ನೋಡಿದರೆ ಈ ಕೆರೆಯಲ್ಲಿ ಇನ್ನೂ ಮೊಸಳೆಗಳು ವಾಸವಾಗಿರುವುದು ಅನುಮಾನ. ಹೀಗಾಗಿ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

  • ಆಟೋ ತೊಳೆಯಲು ನೀರಿಗೆ ಇಳಿದ ಚಾಲಕ ಸಾವು

    ಆಟೋ ತೊಳೆಯಲು ನೀರಿಗೆ ಇಳಿದ ಚಾಲಕ ಸಾವು

    ಧಾರವಾಡ: ಆಟೋ ತೊಳಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಆಟೋ ಚಾಲಕರೊಬ್ಬರು ಸಾವನ್ನಪ್ಪಿದ ಘಟನೆ ಧಾರವಾಡದ ಕೆಲಗೇರಿ ಕೆರೆಯಲ್ಲಿ ನಡೆದಿದೆ.

    ಮೃತ ಆಟೋಚಾಲಕನನ್ನು ಲಕ್ಷ್ಮಣ್ ಡೊಳ್ಳನ್ನವರ್ ಎಂದು ಗುರುತಿಸಲಾಗಿದೆ. ಆಟೋವನ್ನು ಕೆರೆಯ ದಂಡೆ ಮೇಲೆ ನಿಲ್ಲಿಸಿ ಆಟೋ ಹಿಂದಿನ ಭಾಗ ತೊಳೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.ಸ್ಥಳದಲ್ಲಿದ್ದ ಕೆಲವರು ಇದನ್ನ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಬಂದು ಶವ ಹೊರಗೆ ತೆಗೆದಿದ್ದಾರೆ. ಉಪನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಮೃತ ಲಕ್ಷ್ಮಣ್ ಧಾರವಾಡ ಕ್ಯಾರಕೊಪ್ಪ ಗ್ರಾಮದ ಆನಂದನಗರ ನಿವಾಸಿಯಾಗಿದ್ದು, ನಗರದ ದಾಸನಕೊಪ್ಪ ಆಟೋ ಸ್ಟ್ಯಾಂಡನಲ್ಲಿ ಆಟೋ ನಿಲ್ಲಿಸುತ್ತಿದ್ದರು.

  • ಫೋಟೋ ಕ್ಲಿಕ್ಕಿಸುತ್ತಾ ಕೆರೆಯಲ್ಲಿ ಜಾರಿ ಬಿದ್ದು ಬಾಲಕಿ ಸಾವು

    ಫೋಟೋ ಕ್ಲಿಕ್ಕಿಸುತ್ತಾ ಕೆರೆಯಲ್ಲಿ ಜಾರಿ ಬಿದ್ದು ಬಾಲಕಿ ಸಾವು

    – ನೀರು ಪಾಲಾಗಿದ್ದ 13 ಜನರಲ್ಲಿ 12 ಮಂದಿ ಪಾರು
    – ಇಂದು ಬೆಳಗ್ಗೆ ಬಾಲಕಿ ಶವ ಪತ್ತೆ

    ಭೋಪಾಲ್: ಫೋಟೋ ಕ್ಲಿಕ್ಕಿಸುತ್ತಿದ್ದ ಬಾಲಕಿ ಜಲ ಸಮಾಧಿ ಆಗಿರೋ ಘಟನೆ ಮಧ್ಯಪ್ರದೇಶದ ಇಂದೋರ್-ಭೋಪಾಲ್ ರಸ್ತೆಯಲ್ಲಿರುವ ದೇವಾಸ್ ಕೆರೆಯಲ್ಲಿ ನಡೆದಿದೆ.

    ಇಂದೋರ್ ಜಿಲ್ಲೆಯ ಸಾಂವೆರ ಗ್ರಾಮದ ಎಂಟನೇ ತರಗತಿ ಓದುತ್ತಿದ್ದ ನುಜ್ಜತ್ ಮೃತ ಬಾಲಕಿ. ಕೊರೊನಾ ಲಾಕ್‍ಡೌನ್ ಬಳಿಕ ನುಜ್ಜತ್ ಕುಟುಂಬ ಮತ್ತು ಗ್ರಾಮಸ್ಥರು ಸೇರಿದಂತೆ 13 ಜನರು ಸೋಮವಾರ ಪ್ರವಾಸಕ್ಕೆ ಬಂದಿದ್ದರು. ದೇವಾಸ್ ಕೆರೆಯ ಬಳಿಯ ಫೋಟೋ ತೆಗೆದಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ.

    ಕೆರೆ ಬಳಿ ಫೋಟೋ ಕ್ಲಿಕ್ಕಿಸುತ್ತಿದ್ದ ಬಾಲಕಿಯ ಅತ್ತೆ ಆಯತಪ್ಪಿ ಬಿದ್ದಿದ್ದರು. ಮಹಿಳೆಯನ್ನು ರಕ್ಷಿಸಲು ಒಬ್ಬರ ನಂತರ ಒಬ್ಬರು ನೀರಿಗೆ ಇಳಿದು ಅಪಾಯ ಸಿಲುಕಿದ್ದರು. ಮಹಿಳೆಯರ ಕಿರುಚಾಟ ಕೇಳಿ ಸ್ಥಳೀಯ ಮೀನುಗಾರರು ಮತ್ತು ರೈತರು 13 ಜನರಲ್ಲಿ 12 ಮಂದಿಯನ್ನ ರಕ್ಷಿಸಿದ್ದರು. ಇಂದು ಬೆಳಗ್ಗೆ ಬಾಲಕಿಯ ಶವ ಪತ್ತೆಯಾಗಿದೆ.

     

  • ಬೈಕ್ ಕೀ ನೀಡಲಿಲ್ಲವೆಂದು ಪತ್ನಿ ಎದುರಲ್ಲೇ ಕೆರೆಗೆ ಹಾರಿ ಪತಿ ಆತ್ಮಹತ್ಯೆ!

    ಬೈಕ್ ಕೀ ನೀಡಲಿಲ್ಲವೆಂದು ಪತ್ನಿ ಎದುರಲ್ಲೇ ಕೆರೆಗೆ ಹಾರಿ ಪತಿ ಆತ್ಮಹತ್ಯೆ!

    ಹುಬ್ಬಳ್ಳಿ: ಕೌಟುಂಬಿಕ ಕಲಹ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವ ವ್ಯಕ್ತಿಯೋರ್ವ ಪತ್ನಿ ಎದುರಿನಲ್ಲಿಯೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ರೋಹಿತ್ ಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿಯ ಸಂತೋಷ ನಗರದ ನಿವಾಸಿ.

    ರೋಹಿತ್ ಗೌಡ ಪಾಟೀಲ್ ನಿನ್ನೆ ರಾತ್ರಿ ಕುಡಿದು ಬಂದು ಪತ್ನಿ ಜೊತೆ ಜಗಳವಾಡಿದ್ದ. ಆದರೆ ಇಂದು ಮುಂಜಾನೆ ಎಂದಿನಂತೆ ತನ್ನ ಹೋಟೆಲ್‍ಗೆ ಬಂದಿದ್ದಾನೆ. ಈ ವೇಳೆ ಪತ್ನಿಯ ಬಳಿ ಬೈಕ್ ಕೀ ಕೊಡುವಂತೆ ವಾಗ್ವಾದ ನಡೆಸಿದ್ದಾನೆ. ಪತ್ನಿ ಬೈಕ್ ಕೀ ನೀಡದ ಪರಿಣಾಮ ಅಸಮಾಧಾನಗೊಂಡ ರೋಹಿತ್ ಗೌಡ ತನ್ನ ಹೋಟೆಲ್ ಹಿಂಭಾಗದ ಸಂತೋಷ ನಗರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ರೋಹಿತ್ ಗೌಡ ಕೆರೆಗೆ ಜಿಗಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರಿಬ್ಬರು ರಕ್ಷಣೆಗೆ ಮುಂದಾದರು. ಆದರೆ ರೋಹಿತ್ ಗೌಡನನ್ನು ಉಳಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನೊಂದಿಗೆ ಮೃತದೇಹವನ್ನು ಹೊರತಗೆಯಲಾಗಿದೆ. ಈ ಘಟನೆ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.