Tag: lake

  • ಬಸ್, ಟ್ರ್ಯಾಕ್ಟರ್ ನಡುವೆ ಡಿಕ್ಕಿ- ಕೆರೆಗೆ ಉರುಳಿದ ಬಸ್

    ಬಸ್, ಟ್ರ್ಯಾಕ್ಟರ್ ನಡುವೆ ಡಿಕ್ಕಿ- ಕೆರೆಗೆ ಉರುಳಿದ ಬಸ್

    ಕೋಲಾರ: ಜಿಲ್ಲೆಯ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 75ರ ನರಸಿಂಹ ತೀರ್ಥ ಬಳಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಆಯ ತಪ್ಪಿದ ಬಸ್ ರಸ್ತೆ ಪಕ್ಕದ ಕೆರೆಗೆ ಉರುಳಿದೆ.

    ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರನಲ್ಲಿದ್ದ ಚಂದ್ರಪ್ಪ ಹಾಗೂ ಭೂಲಕ್ಷ್ಮಮ್ಮ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಬೆಳಗಾವಿಯಿಂದ ತಿರುಪತಿಗೆ ಹೊರಟಿತ್ತು ಎಂದು ತಿಳಿದುಬಂದಿದೆ.

    ಮುಳಬಾಗಿಲು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

     

  • ಜೀವಜಲಕ್ಕಾಗಿ ಗ್ರಾಮಸ್ಥರಲ್ಲಿ ಒಗ್ಗಟ್ಟು – ಸ್ವಂತ ಖರ್ಚಿನಲ್ಲಿ ಕೆರೆಗೆ ಕಾಯಕಲ್ಪ ನೀಡಿದ ಹಾವೇರಿಯ ರುದ್ರೇಶ್

    ಜೀವಜಲಕ್ಕಾಗಿ ಗ್ರಾಮಸ್ಥರಲ್ಲಿ ಒಗ್ಗಟ್ಟು – ಸ್ವಂತ ಖರ್ಚಿನಲ್ಲಿ ಕೆರೆಗೆ ಕಾಯಕಲ್ಪ ನೀಡಿದ ಹಾವೇರಿಯ ರುದ್ರೇಶ್

    ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರಗಾಲಕ್ಕೆ ಕಾರಣ ಏನು ಅನ್ನೋದು ಎಲ್ಲರ ಅರಿವಿಗೆ ಬಂದಿದೆ. ಅದ್ರಲ್ಲೂ ರೈತಾಪಿ ವರ್ಗ ಭಾರೀ ಕಾಳಜಿ ವಹಿಸಿದೆ. ಹೀಗಾಗಿ, ರೈತರು, ಸ್ಥಳೀಯರು, ಸಂಘ ಸಂಸ್ಥೆಗಳು ಮೊದಲಿಗೆ ಹೂಳೆತ್ತುವ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡ್ತಿವೆ. ಹೀಗೆ ಹೂಳೆತ್ತಿರುವವರ ಪೈಕಿ ಇವತ್ತಿನ ಹಾವೇರಿಯ ರುದ್ರೇಶ್ ಸಹ ಒಬ್ರು.

    ವಿಶಾಲವಾದ ಕೆರೆಯಲ್ಲಿ ಬೆಳೆದಿರೋ ಮುಳ್ಳು-ಕಂಟಿಗಳು. ಹೂಳು ತೆಗೆಯುತ್ತಿರೋ ಜೆಸಿಬಿಗಳು. ಜೊತೆಗೆ ಕೆರೆಯನ್ನ ತೋರಿಸ್ತಿರೋ ಇವರೇ ಇವತ್ತಿನ ಪಬ್ಲಿಕ್ ಹೀರೋ. ಹೆಸರು ರುದ್ರೇಶ್ ಚಿನ್ನಣ್ಣವರ್. ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ರುದ್ರೇಶ್ ಎಂಎಸ್‍ಡಬ್ಯೂ ಓದಿದ್ದು, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಸ್ವಂತ ಹಣ ಹಾಗೂ ಗ್ರಾಮಸ್ಥರ ಸಹಾಯ ಪಡೆದು ಹೂಳು ಹಾಗೂ ಮುಳ್ಳು-ಕಂಟಿಗಳನ್ನ ತೆಗೆಸಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ 32 ಎಕರೆ ಕೆರೆಯಲ್ಲಿ ಹೂಳು ಹಾಗೂ ಹೆಚ್ಚು ಮುಳ್ಳು ಕಂಟಿ ಬೆಳೆದು ಕೆರೆಯಲ್ಲಿ ನೀರು ನಿಲ್ಲುತ್ತಿರಲಿಲ್ಲ. ಗ್ರಾಮದ ಜನರ ಹಾಗೂ ರೈತರ ಜೊತೆಗೆ ಸಭೆ ಮಾಡಿ ರುದ್ರೇಶ್ ಅವರು 20 ದಿನಗಳಿಂದ ಕೆರೆಗೆ ಕಾಯಕಲ್ಪ ನೀಡಿದ್ದಾರೆ. ಇದಕ್ಕಾಗಿ 2 ಲಕ್ಷ ರೂ. ಹಣ ಖರ್ಚು ಮಾಡಿದ್ದಾರೆ. ತುಂಗಾ ಮೇಲ್ದಂಡೆ ಕಾಲುವೆ ಮುಖಾಂತರ ಕೆರೆಗೆ ನೀರು ತರುವ ಭರವಸೆ ನೀಡಿದ್ದಾರೆ ರುದ್ರೇಶ್.

    https://www.youtube.com/watch?v=-rUSJLtifXk

  • ಈ ಊರಿನ ಜನ್ರಿಗೆ ಚಿಕೂನ್ ಗುನ್ಯಾ- ಚುನಾವಣೆಯಲ್ಲಿ ವೋಟ್ ಕೊಡಿ, ನೀರು ಕೊಡ್ತೀವಿ ಎಂದ ಕಾಂಗ್ರೆಸ್ ನಾಯಕರು ನಾಪತ್ತೆ

    ಈ ಊರಿನ ಜನ್ರಿಗೆ ಚಿಕೂನ್ ಗುನ್ಯಾ- ಚುನಾವಣೆಯಲ್ಲಿ ವೋಟ್ ಕೊಡಿ, ನೀರು ಕೊಡ್ತೀವಿ ಎಂದ ಕಾಂಗ್ರೆಸ್ ನಾಯಕರು ನಾಪತ್ತೆ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಸುಮಾರು 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ. ಇದುವರೆಗೂ ಯಾವ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.

    ಕಲುಷಿತ ನೀರಿನ ಸೇವನೆಯಿಂದ ಗ್ರಾಮಸ್ಥರು ಚಿಕೂನ್ ಗುನ್ಯಾದಿಂದ ಬಳಲುವಂತಾಗಿದೆ. ಗುಂಡ್ಲುಪೇಟೆ ಉಪಚುನಾವಣೆಯ ವೇಳೆಯಲ್ಲಿ ಗ್ರಾಮಕ್ಕೆ ಬಂದಿದ್ದ ಎಲ್ಲ ರಾಜಕೀಯ ನಾಯಕರು ನಮಗೆ ವೋಟ್ ಕೊಡಿ, ನಾವು ನಿಮಗೆ ನೀರು ಕೊಡ್ತೀವಿ ಅಂತಾ ಭರವಸೆಗಳನ್ನು ನೀಡಿದ್ದರು. ಆದ್ರೆ ಚುನಾವಣೆ ಗೆಲುವಿನ ಬಳಿಕ ಯಾವ ಕಾಂಗ್ರೆಸ್ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಚಿಕೂನ್ ಗುನ್ಯಾ ಬಂದಿದ್ದು ಯಾಕೆ?: ಭೀಮನಬೀಡು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಊರಿಗೆ ಒಂದು ಮೇಲ್ಮಟ್ಟದ ನೀರಿನ ಟ್ಯಾಂಕ್ ಇದೆ. ಆದರೆ ಸ್ವಚ್ಛ ನೀರು ಬರುವುದಿಲ್ಲ. ಹೀಗಾಗಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಕೆರೆಯ ಮೊರೆ ಹೋಗಿದ್ದಾರೆ. ಆದರೆ ಕೆರೆಯಲ್ಲಿನ ನೀರು ಕಲುಷಿತಗೊಂಡಿದ್ದರಿಂದ ಕುಡಿಯಲು ಯೋಗ್ಯವಾಗಿಲ್ಲ. ಆದ್ರೂ ಗ್ರಾಮಸ್ಥರು ವಿಧಿಯಿಲ್ಲದೇ ಕೆರೆಯ ನೀರನ್ನು ಬಳಸುತ್ತಿದ್ದಾರೆ. ದೀರ್ಘ ಕಾಲದಿಂದ ಕಲುಷಿತವಾಗಿರೋ ನೀರನ್ನು ಕುಡಿಯುವುದರಿಂದ ಗ್ರಾಮದಲ್ಲಿನ 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದಾರೆ.

    ಉಪಚುನಾವಣೆ ಪ್ರಚಾರದ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪ್ರದರ್ಶನ ಮಾಡಿದ್ದರು. ತೀವ್ರ ಮುಜುಗುರಕ್ಕೊಳಗಾದ ಸಿಎಂ ನಮ್ಮ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್‍ರಿಗೆ ಮತ ನೀಡಿ ನಿಮಗೆ ನೀರು ಕೊಡ್ತೇವೆ ಎಂದು ಭರವಸೆ ನೀಡಿದ್ದರು.

  • ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಆನೆಯ ರಕ್ಷಣೆ

    ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಆನೆಯ ರಕ್ಷಣೆ

    ಕೊಡಗು: ಗಾಯಗೊಂಡು ಕೆರೆಯಲ್ಲಿ ನರಳಾಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ವಲ್ಲೂರು ಗ್ರಾಮದ ಕಾಡಂಚಿನ ಕೆರೆಯಲ್ಲಿ ಗಾಯಗೊಂಡಿತ್ತು. ಆನೆ ಕಳೆದ ಎರಡು ತಿಂಗಳಿನಿಂದ ಗಾಯಗೊಂಡು ಕೆರೆಯ ದಡದಲ್ಲಿಯೇ ವಾಸ್ತವ್ಯ ಹೂಡಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಪಶು ವೈದ್ಯರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು.

    ಕಾಡಾನೆಯನ್ನು ರಕ್ಷಿಸಲು ಅಭಿಮನ್ಯು. ಕೃಷ್ಣ, ಭೀಮ, ಗೋಪಾಲಕೃಷ್ಣ ಮತ್ತು ದ್ರೋಣ ಎಂಬ ಐದು ಸಾಕಾನೆಗಳನ್ನು ಕಾರ್ಯಚಾರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಅನೆಯ ಕಾಲಿನ ಬಲ ಭಾಗದ ತೊಡೆಯಲ್ಲಿ ದೊಡ್ಡ ಗಾಯವಾಗಿದ್ದು, ಗಾಯದಿಂದ ಹುಳುಗಳು ಉದುರುತ್ತಿದವು ಹಾಗು ಬೆನ್ನಿನ ಭಾಗದಲ್ಲಿಯೂ ಸಹ ಗಾಯಗಳಾಗಿವೆ. ಪಶುವೈದ್ಯಾಧಿಕಾರಿಗಳು ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆನೆ ಸಂಪೂರ್ಣ ಗುಣಮುಖವಾದ ನಂತರ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

  • ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

    ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

    ಬಳ್ಳಾರಿ: ರವಿವಾರ ಸಂಜೆ ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ.

    ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಮನೆಯಿಂದ ಮೂವರು ಬಾಲಕರು ಆಟವಾಡಲೆಂದು ಹೊರಹೋಗಿ ಕಾಣೆಯಾಗಿದ್ದರು. ಇಂದು ಗ್ರಾಮದ ಹೊರವಲಯದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಮಾರುತಿ (10), ಮಹ್ಮದ್ ಸುಭಾನಿ(7) ಮತ್ತು ಗುರುರಾಜ್(9) ಮೃತಪಟ್ಟ ಬಾಲಕರು. ಈ ಮೂವರು ಬಾಲಕರು ಕಾಣೆಯಾದ ಬಗ್ಗೆ ಕೂಡ್ಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.  ಪೊಲೀಸರು ಬಾಲಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.

    ಇಂದು ಮುಂಜಾನೆ ಮೂವರು ಬಾಲಕರ ಶವಗಳು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿವೆ. ಹೀಗಾಗಿ ಬಾಲಕರು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಗ್ರಾಮಸ್ಥರು ಮತ್ತು ಪೋಲೀಸರು ಶವಗಳನ್ನು ಕೆರೆಯಿಂದ ಹೊರತಗೆಯುವ ಕಾರ್ಯ ನಡೆಸುತ್ತಿದ್ದಾರೆ. ಮೂವರು ಬಾಲಕರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

     

     

     

     

  • ಶಾಲೆಗೆ ರಜೆಯೆಂದು ಈಜಲು ಹೋದ ಬಾಲಕರಿಬ್ಬರ ದುರ್ಮರಣ

    ಶಾಲೆಗೆ ರಜೆಯೆಂದು ಈಜಲು ಹೋದ ಬಾಲಕರಿಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಇಂದು ಭಾನುವಾರ ಶಾಲೆಗೆ ರಜೆಯೆಂದು ಕೆರೆಗೆ ಈಜಲು ಹೋಗಿದ್ದ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುರಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮುಬಾರಕ್ (13) ಮತ್ತು ಮನ್ಸೂರ್ (12) ಮೃತ ಬಾಲಕರು. ಕುರಬರಹಳ್ಳಿಯ ಮುಬಾರಕ್ ಮತ್ತು ಬುರ್ಜಾನಕುಂಟೆ ಗ್ರಾಮದ ಮನ್ಸೂರು ಇಬ್ಬರೂ ತಮ್ಮ ಗೆಳೆಯರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಮುಬಾರಕ್ ಮತ್ತು ಮನ್ಸೂರು ನೀರುಪಾಲಾಗಿದ್ದಾರೆ.

    ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಗೌರಿಬಿದನುರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ವರ್ತೂರು ಕೋಡಿಯಲ್ಲಿ ನೊರೆಯ ಆರ್ಭಟ- ನೊರೆಯಲ್ಲಿ ಫೋಟೊ ಕ್ಲಿಕಿಸಿಕೊಳ್ಳಲು ಮುಂದಾದ ಜನ

    ವರ್ತೂರು ಕೋಡಿಯಲ್ಲಿ ನೊರೆಯ ಆರ್ಭಟ- ನೊರೆಯಲ್ಲಿ ಫೋಟೊ ಕ್ಲಿಕಿಸಿಕೊಳ್ಳಲು ಮುಂದಾದ ಜನ

    ಬೆಂಗಳೂರು: ಕಳೆದ ರಾತ್ರಿ ಸುರಿದ ಮಳೆಗೆ ವರ್ತೂರು ಕೋಡಿ ಕೆರೆಯಲ್ಲಿ ನೊರೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ನೊರೆಯ ಒಂದೆಡೆ ಶೇಖರಣೆಯಾಗಿ ಹಿಮಾಲಯದಂತೆ ಕಾಣಿಸುತ್ತಿದ್ದು, ಸೆಲ್ಫೀ ಪ್ರಿಯರು ನೊರೆಯ ಮುಂಭಾಗದಲ್ಲಿ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದಾರೆ.

    ನೊರೆಯ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಬಿಡಿಎ ವತಿಯಿಂದ 20 ಅಡಿ ಎತ್ತರದ ಕಬ್ಬಿಣದ ಮೆಷ್ ಅಳವಡಿಸಲಾಗಿತ್ತು. ಆದರೆ ಬಿಡಿಎ ಅರ್ಧ ಭಾಗಕ್ಕೆ ಮಾತ್ರ ಮೆಷ್ ಅಳವಡಿಸಿ ಉಳಿದ ಅರ್ಧಭಾಗ ಕಾಲಿ ಬಿಟ್ಟಿರುವುದರಿಂದಾಗಿ ನೊರೆ ಹೆಚ್ಚು ಸಂಗ್ರಹಣೆಯಾಗಿದೆ. ಮೆಷ್ ಒಳಗಡೆ ಭಾರೀ ಪ್ರಮಾಣದಲ್ಲಿ ನೊರೆ ಸಂಗ್ರಹಣೆಯಾಗಿದ್ದು, ನೊರೆ ರಸ್ತೆಗೆ ಬಂದು ವಾಹನ ಸವಾರರು ಪರದಾಡುವಂತಾಗಿದೆ.

    ಇಲ್ಲಿಯ ವರ್ಜೀನಿಯ ಮಾಲ್ ಗೇಟ್ ನಲ್ಲಿ ಬಳಿಯೇ ನೊರೆ ಶೇಖರಣೆಯಾಗಿದ್ದು, ಮಾಲ್ ಗೆ ಬರುವ ಗ್ರಾಹಕರಿಗೂ ತೊಂದರೆ ಉಂಟಾಗಿದೆ. ಮಾಲ್ ಸಿಬ್ಬಂದಿ ನೊರೆಯನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    https://www.youtube.com/watch?v=_FxnpjRlTKg

  • ಧಾರಾಕಾರ ಮಳೆಗೆ ತುಂಬಿ ತುಳುಕುತ್ತಿದೆ ಗದಗದ ಐತಿಹಾಸಿಕ ಕೆರೆ- ಜನರ ಮೊಗದಲ್ಲಿ ಹರ್ಷದ ಕಳೆ

    ಧಾರಾಕಾರ ಮಳೆಗೆ ತುಂಬಿ ತುಳುಕುತ್ತಿದೆ ಗದಗದ ಐತಿಹಾಸಿಕ ಕೆರೆ- ಜನರ ಮೊಗದಲ್ಲಿ ಹರ್ಷದ ಕಳೆ

    ಗದಗ: ವಿದೇಶಿ ಬಾನಾಡಿಗಳ ಆಗಮನದಿಂದ ಹೆಸರುವಾಸಿಯಾದ ಐತಿಹಾಸಿಕ ಕೆರೆ, ಬರಗಾಲಕ್ಕೆ ಬತ್ತಿಹೊಗಿತ್ತು. ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಕೆರೆ ಭರ್ತಿಯಾಗಿದೆ. ಇದರಿಂದ ಈ ಭಾಗದ ಪ್ರಾಣಿ-ಪಕ್ಷಿಗಳು ಹಾಗೂ ಜನರು ಫುಲ್ ಖಷಿಯಾಗಿದ್ದಾರೆ.

    ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ 134 ಎಕರೆ ವಿಸ್ತಿರ್ಣದ ಕೆರೆ ಮೊನ್ನೆಯಷ್ಟೇ ಸುರಿದ ಧಾರಾಕಾರ ಮಳೆಗೆ ಭರ್ತಿಯಾಗಿದೆ. ಇದೀಗ ಸಮೃದ್ಧ ಜಲ ಕಣ್ತುಂಬಿಕೊಳ್ಳಲು ಜನ ತಂಡೋಪತಂಡವಾಗಿ ಬರ್ತಿದ್ದಾರೆ. ಕೆರೆಯ ಒಡಲು ತುಂಬಿದ್ದು, ಇದನ್ನು ಕಂಡ ಸ್ಥಳೀಯರ ಮೊಗದಲ್ಲಿ ಹರ್ಷದ ಕಳೆ ಕಾಣುತ್ತಿದೆ.

    ಮಾಗಡಿ ಕೆರೆಗೆ 1 ಕೋಟಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಯಕಲ್ಪ ನೀಡಲಾಗಿದೆ. ಕೆರೆಯ ಹಳೆಯ ದಿನಗಳು ಮರುಕಳಿಸಿವೆ. ಮೂರು ನಾಲ್ಕು ವರ್ಷಗಳ ನಂತರ ಮತ್ತೆ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಮಾಗಡಿ ಕೆರೆ ಸಜ್ಜಾಗಿದೆ. ಶೀಘ್ರವೇ ವಿದೇಶಿ ಹಕ್ಕಿಗಳ ಕಲರವ ಇರಲಿದೆ. ರೈತರ ಮೊಗದಲ್ಲೂ ಮಂದಹಾಸ ಮೂಡಿದೆ.

     

  • ಬೆಂಗ್ಳೂರಲ್ಲಾಯ್ತು, ಈಗ ಹಾಸನದಲ್ಲೂ ಕೆರೆಗೆ ಬಿತ್ತು ಬೆಂಕಿ!

    ಬೆಂಗ್ಳೂರಲ್ಲಾಯ್ತು, ಈಗ ಹಾಸನದಲ್ಲೂ ಕೆರೆಗೆ ಬಿತ್ತು ಬೆಂಕಿ!

    ಹಾಸನ: ಕೆರೆಯ ನೀರಿನ ಮಧ್ಯದಿಂದ ಬಾನೆತ್ತರಕ್ಕೆ ಸಾಗಿದ ಬೆಂಕಿ. ದಟ್ಟ ಹೊಗೆಯಿಂದ ಜನರೆಲ್ಲಾ ಕಂಗಾಲು. ಹೌದು, ಕೆರೆಗೂ ಬೆಂಕಿ ಬೀಳುತ್ತಾ ಎಂದು ಕೇಳಬೇಡಿ. ಯಾಕೆಂದರೆ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ಜನಮಾನಸದಿಂದ ಮಾಸುವ ಮುನ್ನವೇ ಹಾಸನದಲ್ಲೂ ಇಂಥದ್ದೇ ಘಟನೆ ನಡೆದಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವರು ಮಾಡುತ್ತಿರುವ ಸಣ್ಣ ಸಣ್ಣ ಲೋಪಗಳಿಂದಾಗಿ ಇಡೀ ಊರಿನ ಜನರೇ ಸಮಸ್ಯೆಗೆ ಸಿಲುಕುವಂತಾಗಿದೆ.

    ಏನಾಯ್ತು?: ಹಾಸನದ ದೊಡ್ಡಬಸವನಹಳ್ಳಿ ಕೆರೆಯಲ್ಲಿ ಬಿಸಿಲ ಬೇಗೆಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಘಟಕದಿಂದ ಕಚ್ಚಾತೈಲಗಳನ್ನು ಕೆರೆಗೆ ಬಿಡಲಾಗುತ್ತಿದೆ ಇದರಿಂದಾಗಿಯೇ ಈ ಅವಘಡ ಸಂಭವಿಸಿದೆ. ಕುಡಿಯುವ ನೀರು ಸಂಪೂರ್ಣ ಕಲುಷಿತವಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ವಾಸನೆ ಬರುತ್ತಿದೆ. ಐದಾರು ಗ್ರಾಮಗಳ ಜನ್ರು ಈ ಕೆರೆಯನ್ನೇ ಅವಲಂಬಿಸಿದ್ದಾರೆ. ಕುಡಿಯುವ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ.

    ಮಂಗಳೂರಿನಿಂದ ಹಾಸನಕ್ಕೆ ಪೆಟ್ರೋಲಿಯಂ ಪೈಪ್ ಲೈನ್ ಹಾಕಿದ್ದಾರೆ. ಬಿಸಿಲು ಹೆಚ್ಚಾದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಡೀ ಕೆರೆ ಪೆಟ್ರೋಲ್ ಮಯವಾಗಿದ್ದು ಕೆರೆಯ ನೀರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ನೂರಾರು ಅಡಿ ಎತ್ತರಕ್ಕೆ ಹಾರುತ್ತಿದೆ. ಈ ಬಗ್ಗೆ ಹಿಂದೂಸ್ತಾನ್ ಪೆಟ್ರೋಲಿಯಂ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    https://youtu.be/jYawxVoQ9hU

     

  • ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಹಾವೇರಿ: ಜಿಲ್ಲಾಧಿಕಾರಿಗಳು ಅಂದ್ರೆ ಕಚೇರಿ ಕೆಲಸ ಮಾಡಿಕೊಂಡು ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದು ಕಾಮನ್. ಆದ್ರೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿಯ ಜೊತೆ ಸೇರಿಕೊಂಡು ಶ್ರಮದಾನ ಮಾಡಿ, ಅವರ ಕುಂದು-ಕೊರತೆಗಳನ್ನ ಕೇಳಿದ್ದಾರೆ.

    ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆರೆಯಲ್ಲಿ ಹೂಳು ಎತ್ತಲಾಗುತ್ತಿತ್ತು. ಶ್ರಮದಾನದಲ್ಲಿ ಜಿಲ್ಲಾಧಿಕಾರಿಗಳು ಭಾಗವಾಹಿಸುವದರ ಜೊತೆ ಕಾರ್ಮಿಕರ ತೊಂದರೆಗಳನ್ನು ಆಲಿಸಿದರು.

    ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಕೇಳಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸದ್ಯ ಪ್ರತಿ 15 ದಿನಕ್ಕೆ ವೇತನವನ್ನ ನೀಡಲಾಗುತ್ತದೆ. ಅದನ್ನ ಕಡಿಮೆ ಮಾಡಿ ಪ್ರತಿವಾರ ತಮ್ಮ ಖಾತೆಗೆ ಹಣಬರುವಂತೆ ಮಾಡಬೇಕು ಎಂದು ಕಾರ್ಮಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

    ಪ್ರಸ್ತಕ ವರ್ಷ ಬರಗಾಲ ಇರೋದ್ರಿಂದ ಬೇರೆ ಕಡೆ ಕೆಲಸ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ರಿಂದ 150 ದಿನಗಳ ಕಾಲ ಬಡಕೂಲಿಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ನಮ್ಮ ಜೊತೆಗೆ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿದ್ರು. ನಮಗೆ ಬಹಳ ಸಂತೋಷವಾಗಿದೆ. ಅಲ್ಲದೆ ನಮ್ಮ ವೇತನವನ್ನ ವಾರಕ್ಕೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಕೂಲಿ ಕಾರ್ಮಿಕೆ ಸರೋಜಮ್ಮ ಸುಣಗಾರ ಹೇಳಿದರು.