Tag: lake

  • ಬಾತುಕೋಳಿ ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ!

    ಬಾತುಕೋಳಿ ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ!

    ಬೆಂಗಳೂರು: ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಂಗಮ್ಮನ ಪಾಳ್ಯದಲ್ಲಿರುವ ಸುಂದರವಾದ ಕೆರೆಯಲ್ಲಿ ನಡೆದಿದೆ.

    ಸಲ್ಮಾನ್ ಮೃತ ದುರ್ದೈವಿ. ಬಾತುಕೋಳಿಯನ್ನು ನೋಡಿ ಆಸೆಯಿಂದ ಹಿಡಿಯಲು ಹೋಗಿ ಸಲ್ಮಾನ್ ನೀರಿನಲ್ಲಿ ಮುಳುಗಿದ್ದಾನೆ. ಘಟನೆಯಿಂದ ಯುವಕ ಪ್ರಾಣ ಬಿಟ್ಟರೆ, ಬಾತುಕೋಳಿ ಯುವಕನ ಕೈಯಿಂದ ಬಚಾವ್ ಆಗಿದೆ.

    ಘಟನೆ ವಿವರ: ಸಲ್ಮಾನ್ ಕೆರೆಯಲ್ಲಿ ಬಾತುಕೊಳಿಯನ್ನು ನೋಡಿದ್ದಾನೆ. ತಕ್ಷಣವೇ ಅದನ್ನು ಹಿಡಿಯಬೇಕು ಅಂತ ಕೆರೆಗೆ ಇಳಿದಿದ್ದಾನೆ. ಆದರೆ ದುರಾದೃಷ್ಟವಶಾತ್ ಸಲ್ಮಾನ್ ಖಾನ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಪರಿಣಾಮ ಈಜಲು ಬಾರದೇ ನೀರಿನಲ್ಲಿ ಮುಳುಗಿದ್ದಾನೆ. ಈ ಅವಘಡವನ್ನು ಗಮನಿಸಿದ ಸಲ್ಮಾನ್ ನ ಇಬ್ಬರು ಸ್ನೇಹಿತರು ರಕ್ಷಣೆ ಮಾಡಲು ಹೋಗಿದ್ದಾರೆ. ಆದ್ರೆ ಅಷ್ಟರಲ್ಲಿ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಈ ಘಟನೆ ಬಗ್ಗೆ ಸ್ಥಳೀಯರು ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸಲ್ಮಾನ್ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇನ್ನು ಮೃತದೇಹ ಸಿಕ್ಕಿಲ್ಲ. ಇತ್ತ ಸಲ್ಮಾನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಂದೆ

    ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಂದೆ

    ಮಂಡ್ಯ: ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗನನ್ನು ರಕ್ಷಿಸಿ ತಂದೆ ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರೇಶ್ವರ ಗ್ರಾಮದ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಫಿರೋಜ್ ಮಗನನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾರೆ.

    ಫಿರೋಜ್ ಪತ್ನಿ ಜಬಿನ್ ತಾಜ್ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆಯುವ ಸಮಯದಲ್ಲಿ ಜಬಿನ್ ತಾಜ್ ಜೊತೆಯಲ್ಲಿ ಪತಿ ಫಿರೋಜ್ ಮತ್ತು ಒಂದು ವರ್ಷದ ಮಗ ಇದ್ದರು. ಈ ವೇಳೆ ಆಕಸ್ಮಿಕವಾಗಿ ಮಗ ನೀರಿಗೆ ಬಿದ್ದಿದ್ದಾನೆ. ಆಗ ಮಗನನ್ನು ರಕ್ಷಿಸಲು ಫಿರೋಜ್ ನೀರಿಗಿಳಿದಿದ್ದಾರೆ. ನಂತರ ಮಗನನ್ನು ರಕ್ಷಿಸಿದ್ದಾರೆ. ಆದರೆ ಸರಿಯಾಗಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ನಂತರ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಬಂದು ಕಾರ್ಯಚರಣೆ ಮಾಡಿ ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ. ಇನ್ನು ನೀರಿನಲ್ಲಿ ಮುಳುಗಿದ್ದ ಮಗ ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಊರ ಹಬ್ಬಕ್ಕೆ ಬಂದು ಇಬ್ಬರ ಮಕ್ಕಳ ಜೊತೆ ಕೆರೆಗೆ ಬಿದ್ದು ಗೃಹಿಣಿ ಆತ್ಮಹತ್ಯೆ

    ಊರ ಹಬ್ಬಕ್ಕೆ ಬಂದು ಇಬ್ಬರ ಮಕ್ಕಳ ಜೊತೆ ಕೆರೆಗೆ ಬಿದ್ದು ಗೃಹಿಣಿ ಆತ್ಮಹತ್ಯೆ

    ರಾಮನಗರ: ಇಬ್ಬರ ಮಕ್ಕಳ ಜೊತೆ ಕೆರೆಗೆ ಬಿದ್ದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.

    ತಾಯಿ ಸುಜಾತ(26), ಮಕ್ಕಳಾದ ವಿಶಾಲ್(4) ಮತ್ತು ನಕುಲ್(6) ಮೃತ ದುರ್ದೈವಿಗಳು. ಶನಿವಾರ ಸಂಜೆ ಗ್ರಾಮದ ಊರ ಹಬ್ಬಕ್ಕೆ ಬಂದಿದ್ದ ಸುಜಾತ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಎಂಟು ವರ್ಷದ ಹಿಂದೆ ತಾವರೆಕೆರೆಯ ಅಂಜನಮೂರ್ತಿ ಎಂಬವರನ್ನ ಮೃತ ಸುಜಾತ ವಿವಾಹವಾಗಿದ್ದರು. ಬೆಂಗಳೂರು ದಕ್ಷಿಣ ತಾಲೂಕಿನ ಮುದ್ದಯ್ಯನಪಾಳ್ಯ ಗ್ರಾಮಕ್ಕೆ ವಾಪಸ್ ಹೋಗುವುದಾಗಿ ಹೇಳಿ ಹೋಗಿದ್ದ ತಾಯಿ ಸುಜಾತ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ಸಂಜೆ ಶವಗಳು ಕೆರೆಯಲ್ಲಿ ತೇಲುವಾಗ ಘಟನೆ ಬೆಳಕಿಗೆ ಬಂದಿದೆ.

    ಸುಜಾತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕಬಿನಿ ಹಿನ್ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ಸಾವು!

    ಕಬಿನಿ ಹಿನ್ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ಸಾವು!

    ಮೈಸೂರು: ಕಬಿನಿ ಹಿನ್ನೀರಿನಲ್ಲಿ ಮುಳುಗಿ ಮೂವರ ಸಾವನ್ನಪ್ಪಿದ ಘಟನೆ ಕೇರಳದ ಗಡಿಭಾಗ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗೋಳೂರು ಮಸೀದಿಯ ಬಳಿ ನಡೆದಿದೆ.

    ತಂದೆ ಚಾಲಕಲ್ ಬೇಬಿ(53), ಮಗ ಅಜಿತ್(24) ಹಾಗೂ ಮಗಳು ಅನಿತ(18) ಮೃತ ದುರ್ದೈವಿಗಳು. ಮೃತರು ಕೇರಳದ ಕಬಿನಿ ಗಿರಿ ನಿವಾಸಿಗಳು ಎಂದು ಹೇಳಲಾಗಿದ್ದು, ಮಗಳು ಅನಿತಾ ಸ್ನಾನ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.

    ಮಗಳು ಅನಿತಾಳನ್ನು ರಕ್ಷಿಸಲು ಆಕೆಯ ತಂದೆ ನದಿಯ ಬಳಿ ಹೋದರು. ನಂತರ ಅವರು ಮುಳುಗುತ್ತಿದ್ದಾಗ ತಂದೆಗೆ ಸಹಾಯ ಮಾಡಲು ಹೋದ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಕೇರಳದ ಪುಲ್ಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

  • ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವು!

    ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವು!

    ಹಾವೇರಿ: ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕು ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಹೀನಾ ಬಾನು(12) ಎಂದು ಗುರುತಿಸಲಾಗಿದೆ. ಗೆಳತಿಯರೊಂದಿಗೆ ಮನೆಯಿಂದ ಆಟವಾಡಲು ತೆರಳಿದ್ದ ಬಾಲಕಿ ನೀರು ಕುಡಿಯಲೆಂದು ಕೆರೆಗೆ ಇಳಿಯುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

    ಕೆರೆ ಅಭಿವೃದ್ಧಿಗೆ ಕೆರೆಯಲ್ಲಿ ಗುಂಡಿ ತೋಡಿದ್ದರಿಂದ ಈ ಅನಾಹುತ ಸಂಭವಿಸಿದೆ. ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

    ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವು- ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು!

    ಕೋಲಾರ/ಚಿತ್ರದುರ್ಗ: ಕೆರೆಯಲ್ಲಿ ಬಿದ್ದು ಅಕ್ಕ-ತಂಗಿ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿದೆ.

    ಭವ್ಯ (10) ಮತ್ತು ಶಿಲ್ಪಾ(7) ಮೃತ ಸಹೋದರಿಯರು. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಗುರುವಾರ ಆಟವಾಡಲು ಹೋದಾಗ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಶಿಲ್ಪಾಳ ಶವ ದೊರಕಿದ್ದು, ಭವ್ಯ ಶವ ಪತ್ತೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳುಬಾಳು ಗುರುಪೀಠ ಶಾಂತಿ ವನದಲ್ಲಿರುವ ರೋಚೆಕ್ ಚೆಕ್ ಡ್ಯಾಂನಲ್ಲಿ ನಡೆದಿದೆ.

    ದರ್ಶನ್(12), ಶಿವರಾಜ್(15) ಮತ್ತು ಆಕಾಶ್(15) ಮೃತ ದುರ್ದೈವಿಗಳು. ಬಾಲಕರು ಬೇಸಿಗೆ ಶಿಬಿರಕ್ಕೆ ಬಂದಿದ್ದು, ಚೆಕ್ ಡ್ಯಾಂನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಭರಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • 3 ತಿಂಗಳ ಹಿಂದೆ ಮದ್ವೆಯಾಗಿದ್ದ ದಂಪತಿ ಜೊತೆ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು

    3 ತಿಂಗಳ ಹಿಂದೆ ಮದ್ವೆಯಾಗಿದ್ದ ದಂಪತಿ ಜೊತೆ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು

    ರಾಮನಗರ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ನಡೆದಿದೆ.

    ಶೇಖರ್ (39), ಸುಮಾ(28), ಹಂಸಾ (7) ಮತ್ತು ಧನು (8) ಮೃತ ದುರ್ದೈವಿಗಳು. ಮೂಲತಃ ಚನ್ನಪಟ್ಟಣದ ಹನುಮಂತ ನಗರದ ನಿವಾಸಿಗಳಾದ ಶೇಖರ್ ಮತ್ತು ಸುಮಾ ಇಬ್ಬರು ಮೂರು ತಿಂಗಳ ಹಿಂದೆ ಮದುವೆ ಆಗಿದ್ದರು. ಮದುವೆಯಾದ ಹೊಸತರಲ್ಲಿ ಸುಮಾ ತನ್ನ ಚಿಕ್ಕೇನಹಳ್ಳಿಯ ಅಕ್ಕ ಶಕುಂತಲಾರ ಮನೆಗೆ ಬಂದಿದ್ದರು.

    ಶಕುಂತಲಾರ ಮಕ್ಕಳಾದ ಹಂಸಾ ಮತ್ತು ಧನು ಈಜಲು ಕೆರೆಗೆ ಇಳಿದಿದ್ದರು. ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ನೋಡಿದ ಶೇಖರ್ ಕಾಪಾಡಲು ಮುಂದಾಗಿದ್ದಾರೆ. ಪತಿಯ ಹಿಂದೆಯೇ ಸುಮಾ ಕೂಡ ಕೆರೆಗೆ ಇಳಿದಿದ್ದಾರೆ. ಕೆರೆಯ ಆಳ ಹೆಚ್ಚಿದ್ದರಿಂದ ಹಂಸಾಳ ಹೊರತು ಪಡಿಸಿ ಮೂವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಗಂಭೀರ ಸ್ಥಿತಿಯಲ್ಲಿದ್ದ ಹಂಸಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮೃತ ದೇಹಗಳನ್ನು ಕೆರೆಯಿಂದ ಹೊರ ತೆಗೆಯಲಾಗಿದೆ.

  • ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

    ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ

    ಚಿಕ್ಕಮಗಳೂರು: ಸಾಲಬಾಧೆ ತಾಳಲಾರದೇ ರೈತ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 38 ವರ್ಷದ ಮೋಹನ್ ಕುಮಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು ಹಲವು ವರ್ಷಗಳಿಂದ ಕೃಷಿಯಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದರು. ಆದರೆ ಮಳೆಯಿಲ್ಲದೆ ಬರಗಾಲದ ಹಿನ್ನಲ್ಲೆಯಲ್ಲಿ ಕಾಫಿ-ಮೆಣಸು ಬೆಳೆ ಬರಲಿಲ್ಲ. ಅಷ್ಟೇ ಅಲ್ಲದೇ ಮೋಹನ್ ಕುಮಾರಿ, ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು ಐದು ಲಕ್ಷ ಸಾಲ ಮಾಡಿದ್ದರು.

    ಒಂದು ಕಡೆ ಬೆಳೆ ಬರಲಿಲ್ಲ. ಇನ್ನೊಂದೆಡೆ ಸಾಲ ತೀರಿಸಲಾಗದೇ ಮೋಹನ್ ಕುಮಾರಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಗೋಣಿಬೀಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೇಸಿಗೆಯ ಧಗೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕರ ದುರ್ಮರಣ

    ಬೇಸಿಗೆಯ ಧಗೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕರ ದುರ್ಮರಣ

    ಚಿಕ್ಕಬಳ್ಳಾಪುರ: ಬೇಸಿಗೆಯ ಧಗೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣ ಹೊರವಲಯದ ಅಮಾನಿ ಭೈರಸಾಗರ ಕೆರೆಯಲ್ಲಿ ನಡೆದಿದೆ.

    ಮರುಳಿಮೋಹನ್(16) ಹಾಗೂ ಕೇಶವ್(16) ಮೃತ ಬಾಲಕರು. 8 ಜನ ಸ್ನೇಹಿತರು ಸೇರಿ ಕರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ಕೆರೆಯಲ್ಲಿ ಮುಳುಗಿ ತುಂಬಾ ಸಮಯವಾದ್ರೂ ಮೇಲೆ ಬರಲಿಲ್ಲ. ಹೀಗಾಗಿ ಸ್ನೇಹಿತರು ಗಾಬರಿಗೊಂಡು ವಿಷಯವನ್ನ ಸ್ಥಳೀಯರಿಗೆ ತಿಳಿಸಿದ್ದಾರೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗುಡಿಬಂಡೆ ಪೊಲೀಸರು ಹಾಗೂ ಆಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿ ಮರುಳಿಮೋಹನ್ ಮೃತದೇಹ ಹೊರತೆಗೆದಿದ್ದಾರೆ. ಕೇಶವ್ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದ್ದಾರೆ.

    ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಹಬ್ಬಕ್ಕೆ ಸ್ನಾನ ಮಾಡಲು ಕೆರೆಗೆ ತೆರಳಿದ ಐವರು ಬಾಲಕರ ದುರ್ಮರಣ!

    ಹಬ್ಬಕ್ಕೆ ಸ್ನಾನ ಮಾಡಲು ಕೆರೆಗೆ ತೆರಳಿದ ಐವರು ಬಾಲಕರ ದುರ್ಮರಣ!

    ಹೈದರಾಬಾದ್: ಯುಗಾದಿ ಹಬ್ಬದ ದಿನದಂದೇ ಕೆರೆಯಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟಿರುವ ಘಟನೆ ನಾಲ್ಗಾಂಡ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಸಂತೋಷ್ (7), ರಾಕೇಶ್ (5), ನವ್ದೀಪ್ (6), ಸತ್ವಿಕ್ (7) ಮತ್ತು ಸರ್ದಾರ್ ಎಂದು ಗುರುತಿಸಲಾಗಿದೆ. ಈ ಐವರು ಬಾಲಕರು ಕೋಂಡಮಲ್ಲೆಪಲ್ಲಿ ಮಂಡಲ್ ದಲ್ಲಿರುವ ಕೆರೆಗೆ ಸ್ನಾನ ಮಾಡಲು ತೆರಳಿದ್ದರು.

    ಸ್ನಾನ ಮಾಡಲು ಹೋದ ಮಕ್ಕಳು ತುಂಬಾ ಸಮಯವಾದರೂ ಮನೆಗೆ ಹಿಂದಿರುಗಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ತಮ್ಮ ಮಕ್ಕಳು ಸಿಗದೇ ಇದ್ದಾಗ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸ್ನಾನ ಮಾಡಲು ಹೋದಾಗ ಕೆರೆಯ ಆಳದ ಜಾಗದಲ್ಲಿ ಮುಳುಗಿ ಬಾಲಕರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಬಾಲಕರ ಮೃತ ದೇಹಗಳನ್ನು ಕೆರೆಯಿಂದ ಹೊರತೆಗೆಯಲಾಗಿದೆ ಎಂದು ನಲ್ಗೊಂಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎ. ರಂಗನಾಥ್ ಹೇಳಿದರು.