Tag: lake

  • ಮಳೆಯಾದ್ರೆ ಕೆರೆಯಾಗುತ್ತೆ ಗ್ರಾಮದ ಮುಖ್ಯರಸ್ತೆ

    ಮಳೆಯಾದ್ರೆ ಕೆರೆಯಾಗುತ್ತೆ ಗ್ರಾಮದ ಮುಖ್ಯರಸ್ತೆ

    ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಮೆದೆಕೆರೆನಹಳ್ಳಿ ಗ್ರಾಮದಲ್ಲಿ ಮಳೆಯಾದರೆ ಮುಖ್ಯರಸ್ತೆಯೇ ಕೆರೆಯಾಗಿ ಮಾರ್ಪಾಡು ಆಗುತ್ತದೆ. ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಗ್ರಾಮದಲ್ಲಿ ಮಳೆಯಾದರೆ ಸಾಕು ಇಲ್ಲಿನ ಮುಖ್ಯ ರಸ್ತೆ ಕೆರೆಯಾಗಿ ಮಾರ್ಪಾಡು ಆಗುತ್ತಿದ್ದು, ಶಾಲಾ ಮಕ್ಕಳು ಶಾಲೆಗೆ ಹೋಗಬೇಕು ಅಂದರೆ ಹರಸಾಹಸ ಪಡುವಂತಹ ಸ್ಥಿತಿ ಉಂಟಾಗಿದೆ. ಕಳೆದ ಒಂದು ವಾರದಿಂದ ಇದೇ ಪರಿಸ್ಥಿತಿ ಇದ್ದು ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಮಳೆ ನೀರು ಸುವ್ಯವಸ್ಥಿತವಾಗಿ ಹೋಗಲು ಚರಂಡಿ ವ್ಯವಸ್ಥೆ ಮಾಡಿದರೆ ನೀರು ನಿಲ್ಲುವ ಪ್ರಶ್ನೆಯೇ ಇರುವುದಿಲ್ಲ. ಆದರೆ ಸುವ್ಯವಸ್ಥಿತವಾದ ಕಾಮಗಾರಿ ಮಾಡದೇ ಇದ್ದುದರಿಂದ ಗ್ರಾಮದ ಪ್ರಮುಖ ರಸ್ತೆಯೇ ಕೆರೆಯಾಗಿ ಮಾರ್ಪಡು ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ರಾಜ್ಯವನ್ನು ಮತ್ತೆ ಆವರಿಸುತ್ತಾ ಭೀಕರ ಕ್ಷಾಮ?

    ರಾಜ್ಯವನ್ನು ಮತ್ತೆ ಆವರಿಸುತ್ತಾ ಭೀಕರ ಕ್ಷಾಮ?

    ಬೆಂಗಳೂರು: ರಾಜ್ಯಕ್ಕೆ ಮತ್ತೊಂದು ಭೀಕರ ಕ್ಷಾಮ ಎದುರಾಗಲಿದೆ. ಮೇ ಹೋಗಿ ಜೂನ್ ಕೂಡ ಮುಗಿಯುತ್ತಾ ಬಂದಿದೆ. ಆದರೂ ರಾಜ್ಯದ ಹಲವೆಡೆ ಮಳೆಯಾಗುತ್ತಿಲ್ಲ. ಜಲಾಶಯಗಳಲ್ಲಿ ನೀರು ಕಾಣಿಸಿಕೊಂಡಿಲ್ಲ. ಬಿತ್ತನೆ ಕಾರ್ಯ ಆಗಿಲ್ಲ. ಹೀಗಾಗಿ ರಾಜ್ಯ ಮತ್ತೊಮ್ಮೆ ಭೀಕರ ಬರಗಾಲವನ್ನು ಎದುರಿಸಲು ಸಜ್ಜಾಗಬೇಕಾಗಿದೆ.

    ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೆರೆ- ಕುಂಟೆಗಳು, ಜಲಾಶಯಗಳು ಒಣಗಿ ಹೋಗಿವೆ. ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಜೋರಾಗಿದೆ. ರೈತರು ಬಿತ್ತನೆ ಮಾಡಲು ಸಾಧ್ಯವಾಗದೇ ಪರದಾಡ್ತಿದ್ದಾರೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಪ್ರಮಾಣದಲ್ಲಿ ಭಾರೀ ಕುಸಿತವಾಗಿದೆ.

    ರಾಜ್ಯದಲ್ಲಿ ಮತ್ತೆ ಭೀಕರ ಬರ?
    ರಾಜ್ಯದಲ್ಲಿ ವಾಡಿಕೆಗಿಂತ ಶೇ.31ರಷ್ಟು ಕಡಿಮೆ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಶೇ.47, ಮಲೆನಾಡು ಪ್ರದೇಶದಲ್ಲಿ ಶೇ.49ರಷ್ಟು ನೀರಿನ ಕೊರತೆಯಿದೆ. ಕಳೆದ ವರ್ಷ 145 ಟಿಎಂಸಿ ನೀರು ಹರಿದಿದ್ದು, ಈ ಬಾರಿ ಜೂನ್ ನಲ್ಲಿ ಕೇವಲ 6 ಟಿಎಂಸಿ ನೀರು ಮಾತ್ರ ಜಲಾಶಯಗಳಿಗೆ ಹರಿದು ಬಂದಿದೆ.

    ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ 46 ವರ್ಷಗಳಲ್ಲೇ ಕಡಿಮೆ ನೀರು ಸಂಗ್ರಹವಾಗಿದೆ. ಕಳೆದ ಬಾರಿ 54 ಟಿಎಂಸಿ ನೀರು, ಈ ಬಾರಿ 2.35 ಟಿಎಂಸಿ ನೀರು ಸಂಗ್ರಹವಾಗಿದೆ. ಜುಲೈನಲ್ಲಿ ವಾಡಿಕೆಯಷ್ಟು ಮಳೆ ಸುರಿದರೂ ಜಲಾಶಯಗಳು ತುಂಬುವುದು ಕಷ್ಟವಾಗಲಿದೆ. ಮಳೆಯ ಕೊರತೆಯಿಂದ ಅಂತರ್ಜಲ ಪ್ರಮಾಣ ಶೇ.85 ರಷ್ಟು ಕುಸಿತವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಕಷ್ಟವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

  • ಮೀನಿನ ಬಲೆಗೆ ಬಿದ್ದ ಹೆಬ್ಬಾವು – ಗ್ರಾಮಸ್ಥರಿಂದ ರಕ್ಷಣೆ

    ಮೀನಿನ ಬಲೆಗೆ ಬಿದ್ದ ಹೆಬ್ಬಾವು – ಗ್ರಾಮಸ್ಥರಿಂದ ರಕ್ಷಣೆ

    ಮಂಡ್ಯ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಬಿದ್ದ ಹೆಬ್ಬಾವನ್ನು ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆ ಮದ್ದೂರು ತಾಲೂಕಿನ ಗೂಳೂರಿನಲ್ಲಿ ನಡೆದಿದೆ.

    ಗೂಳೂರು ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬಿಡಲಾಗಿತ್ತು. ಆದರೆ ಮೀನು ಸಿಗುತ್ತದೆ ಎಂದು ಬಲೆಯನ್ನು ಪರೀಕ್ಷಿಸಿದವರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಬಲೆಯಲ್ಲಿ ಮೀನಿನ ಬದಲು ಹೆಬ್ಬಾವು ಸುತ್ತಿಕೊಂಡಿತ್ತು. ತಕ್ಷಣ ಬಲೆಯಿಂದ ಹೆಬ್ಬಾವನ್ನು ರಕ್ಷಿಸಿದ ಮೀನುಗಾರರು ಅರಣ್ಯ ಇಲಾಖೆಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮೀನಿನ ಬದಲಿಗೆ ಹೆಬ್ಬಾವು ಸಿಕ್ಕಿದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲ ಗುಂಪಾಗಿ ಬಂದು ಹೆಬ್ಬಾವನ್ನು ನೋಡಿದ್ದಾರೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬಂದು ಮೀನುಗಾರರ ಬಳಿ ಹೆಬ್ಬಾವನ್ನು ತೆಗೆದುಕೊಂಡು ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.

    ಮೀನು ಹಿಡಿಯಲು ಬಲೆ ಹಾಕಿದ್ದೆವು. ಆದರೆ ಅದರಲ್ಲಿ ಹೆಬ್ಬಾವು ಸಿಲುಕಿಕೊಂಡಿತ್ತು. ಹೆಬ್ಬಾವು ಸುಮಾರು 25-30 ತೂಕವಿತ್ತು. ಬಳಿಕ ನಾವು ಬಲೆಯಿಂದ ಬಿಡಿಸಿಕೊಂಡು ಬಂದು ಗ್ರಾಮಕ್ಕೆ ತಂದಿದ್ದೆವು. ನಂತರ ಅರಣ್ಯ ಇಲಾಖೆಗೆ ಫೋನ್ ಮಾಡಿ ಹೆಬ್ಬಾವು ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ವಿ. ಅರಣ್ಯ ಸಿಬ್ಬಂದಿ ಬರುವರೆಗೂ ಹೆಬ್ಬಾವನ್ನು ನಾವೇ ಆಟ ಆಡಿಸುತ್ತಿದ್ವಿ. ಆದರೆ ಅದು ಯಾರಿಗೂ ಏನು ತೊಂದರೆ ಕೊಡಲಿಲ್ಲ. ಅರಣ್ಯ ಇಲಾಖೆಯವರು ಬಂದು ಕಾಡಿಗೆ ಬಿಡುತ್ತೇವೆ ಎಂದು ತೆಗೆದುಕೊಂಡು ಹೋದರು ಎಂದು ಸ್ಥಳೀಯ ನಾಗರಾಜು ಹೇಳಿದ್ದಾರೆ.

  • ಕೊಪ್ಪಳದಲ್ಲಿ ಎಲ್ಲಿ ನೋಡಿದ್ರೂ ಬರಗಾಲ-ಕನಕಗಿರಿಯ ಎಂಟು ಕೆರೆಗಳು ಮಾತ್ರ ಫುಲ್

    ಕೊಪ್ಪಳದಲ್ಲಿ ಎಲ್ಲಿ ನೋಡಿದ್ರೂ ಬರಗಾಲ-ಕನಕಗಿರಿಯ ಎಂಟು ಕೆರೆಗಳು ಮಾತ್ರ ಫುಲ್

    – ಮಾಜಿ ಸಚಿವರ ಮುಂದಾಲೋಚನೆಯಿಂದ ಕೆರೆಗಳು ಭರ್ತಿ
    – ವರ್ಷದ 365 ದಿನವೂ ನೀರು

    ಕೊಪ್ಪಳ: ಮಾನ್ಸೂನ್ ಅಧಿಕೃತವಾಗಿ ರಾಜ್ಯವನ್ನು ಪ್ರವೇಶ ಮಾಡಿದರೂ ಹೇಳಿಕೊಳ್ಳುವಂತಹ ಮಳೆ ಆಗುತ್ತಿಲ್ಲ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಚದುರಿದ ಮಳೆ ಆಗಿದ್ದು, ಈ ವರ್ಷವೂ ಮತ್ತೆ ಬರಗಾಲದ ಕರಿ ನೆರಳು ಬೀಳುತ್ತಾ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಈ ನಡುವೆ ಕೊಪ್ಪಳ ಜಿಲ್ಲೆಯ ಕನಕಗಿರಿಯ ವಿಧಾನಸಭಾ ಕ್ಷೇತ್ರದ 8 ಕೆರೆಗಳು ತುಂಬಿದ್ದು, ವರ್ಷದ 365 ದಿನ ಸಹ ನೀರು ಲಭ್ಯವಾಗುತ್ತಿದೆ.

    ಕನಕಗಿರಿ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿದ್ರೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬರಗಾಲದ ಛಾಯೆ ಮನೆ ಬಾಗಿಲಿನಲ್ಲಿ ಬಂದು ನಿಂತಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಟಾಪೂರ, ಲಕ್ಷ್ಮಿದೇವಿ, ರಾಂಪೂರ್, ದೇವಲಾಪೂರ, ಲಾಯದುಣಿಸಿ, ವಿಠಲಾಪುರ, ಗೌರಿಪುರ, ಬಸಿರಹಾಳ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ಮುಂದಾಲೋಚನೆಯಿಂದಲೇ ಇಂದು ಕನಕಗಿರಿಯ ಕ್ಷೇತ್ರದ ಎಂಟು ಕೆರೆಗಳು ಭರ್ತಿಯಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.

    ಈ ಎಂಟು ಕೆರೆಗಳ ಸುತ್ತ ಮುತ್ತ ಇರು ರೈತರು ಪಪ್ಪಾಯಿ, ಚಿಕ್ಕು, ದಾಳಿಂಬೆ ಹಾಗೂ ಬಾಳೆ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಕೆರೆಯ ನೀರಿನಿಂದ ಜಾನುವಾರುಗಳು ಅಂತರ್ಜಲದಿಂದ ರೈತರ ಹೊಲದಲ್ಲಿ ಈಗಲೂ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಸುತ್ತಮುತ್ತಲಿನ ಜನ ಬರಗಾಲ ಬಂದ್ರೆ ಸಾಕು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗ್ತಿತ್ತು. ಇಲ್ಲಿನ ಜನ ದೂರದ ಬೆಂಗಳೂರು, ಮಂಗಳೂರು ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಇಲ್ಲಿನ ರೈತರು ಗುಳೆ ಹೋಗುವುದು ಭಾಗಶಃ ನಿಂತಿದೆ.

    ಸಿದ್ದರಾಮಯ್ಯರ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಶಿವರಾಜ್ ತಂಗಡಗಿ ಮುಂದಾಲೋಚನೆಯಿಂದ ಎಂಟು ಕೆರೆಗಳು ತುಂಬಿವೆ ಅನ್ನೋದು ಸ್ಥಳೀಯರ ಮಾತು. ಕಳೆದ ಮೂರು ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದಿಂದ ಸುಮಾರು 150 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ಎಂಟು ಕೆರೆಗೆ ನೀರು ತುಂಬಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಆದರೆ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ಕೆರೆಗಳು ಭರ್ತಿಯಾಗಿದೆ. ಮಳೆಯಾಗದಿದ್ದರೂ ಇಲ್ಲಿನ ಜನರಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕೆರೆ ಹೂಳೆತ್ತುವ ಬಗ್ಗೆ ದೇಶಪಾಂಡೆ, ನಿಂಬಣ್ಣನವರ ಮಧ್ಯೆ ವಾಗ್ವಾದ – ಜೋಶಿಯಿಂದ ಸಮಾಧಾನ

    ಕೆರೆ ಹೂಳೆತ್ತುವ ಬಗ್ಗೆ ದೇಶಪಾಂಡೆ, ನಿಂಬಣ್ಣನವರ ಮಧ್ಯೆ ವಾಗ್ವಾದ – ಜೋಶಿಯಿಂದ ಸಮಾಧಾನ

    ಧಾರವಾಡ: ಜಿಲ್ಲೆಯ ನೀರಸಾಗರ ಕೆರೆ ಹೂಳೆತ್ತುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ಬಿಜೆಪಿ ಶಾಸಕ ಸಿ.ಎಸ್ ನಿಂಬಣ್ಣವರ ಕಲಘಟಗಿ ಮಧ್ಯೆ ವಾಗ್ವಾದ ನಡೆದಿದೆ.

    ಈಗ ಬಿತ್ತನೆ ಆರಂಭವಾಗಿದೆ, ಈಗ ಯಾಕೆ ಹೂಳು ತೆಗೆಯುತ್ತಿರಾ, ಎರಡು ತಿಂಗಳ ಮುಂಚೆಯೇ ಯಾಕೆ ಇದೇ ಕೆಸವನ್ನು ಮಾಡಲಿಲ್ಲ. ಮಳೆ ಆರಂಭವಾಗುವ ಹೊತ್ತಿಗೆ ಹೂಳೆತ್ತೋಕೆ ಯಾಕೆ ಬಂದಿದ್ದೀರಿ ಎಂದು ಶಾಸಕ ನಿಂಬಣ್ಣವರ ಆರ್.ವಿ ದೇಶಪಾಂಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ತೀರುಗೇಟು ನೀಡಿದ ದೇಶಪಾಂಡೆ ಅವರು, ಎಂಎಲ್‍ಎ ಅವರೇ ನೀವು ಹೇಳೋದು ಸರಿ ಇದೇ ಆದರೆ ಇದು ಸಿಎಸ್‍ಆರ್ ಕಾಮಗಾರಿ ಸರ್ಕಾರದಿಂದ ಮಾಡುತ್ತಿಲ್ಲ. ನೀವು ಕೇಳದೇ ನಾವು ಹೂಳು ತೆಗೆಯೋಕೆ ಬಂದಿದ್ದೇವೆ ನೀವು ಅದನ್ನು ತಿಳಿದುಕೊಂಡು, ಹೂಳು ತೆಗೆಯೋಕೆ ಬಂದಿದ್ದಕ್ಕೆ ನಮಗೆ ಅಭಿನಂದನೆ ಹೇಳಬೇಕು ಎಂದು ತೀರುಗೇಟು ನೀಡಿದರು. ವಾಗ್ವಾದ ತಾರಕಕ್ಕೆ ಏರಿದ ಪರಿಣಾಮ ಸ್ಥಳದಲ್ಲೇ ಇದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಬ್ಬರನ್ನೂ ಸಮಾಧಾನಪಡಿಸಿ ಕಾಮಗಾರಿ ಪೂಜೆಗೆ ಕರೆದುಕೊಂಡು ಹೋದರು.

    ಇದೇ ವೇಳೆ ಮಾತನಾಡಿದ ದೇಶಪಾಂಡೆ ಅವರು, ಈಗಾಗಲೇ ಮೋಡ ಬಿತ್ತನೆಯ ವಿಚಾರವಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ವಿಚಾರದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ. ಮೋಡ ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಒಂದು ಕೇಂದ್ರ ಮಾಡಿದ್ದೇವೆ. ಇಷ್ಟೊತ್ತಿಗೆ ರಾಜ್ಯದಲ್ಲಿ ಮಳೆಯಾಬೇಕಿತ್ತು, ಆದರೆ ಗುಜರಾತ್‍ನಲ್ಲಿ ಉಂಟಾದ ಚಂಡಮಾರುತದಿಂದ ಸಮಸ್ಯೆ ಆಗಿದೆ. ಆದಷ್ಟು ಬೇಗ ಮೋಡ ಬಿತ್ತನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನನ್ನ ನಂಬಿಕೆನೇ ನಂಗೆ ದ್ರೋಹ ಮಾಡ್ತು- ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಹಾರಿದ ಯುವಕ

    ನನ್ನ ನಂಬಿಕೆನೇ ನಂಗೆ ದ್ರೋಹ ಮಾಡ್ತು- ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಹಾರಿದ ಯುವಕ

    ಚಿತ್ರದುರ್ಗ: ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಜೋಗಿಮಟ್ಟಿ ರಸ್ತೆಯಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಪವನ್ ಆತ್ಮಹತ್ಯೆಗೆ ಶರಣಾದ ಯುವಕ. ಮೃತ ಪವನ್ ನಗರದ ಖಾಸಗಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಏಕಾಂಗಿಯಾಗಿ ಇರುತ್ತಿದ್ದನು. ಇಂದು ಕೆಲಸಕ್ಕೆ ರಜೆ ಹಾಕಿ ಈತ ಜೋಗಿಮಟ್ಟಿ ರಸ್ತೆ ಬಳಿಯ ಕೆರೆಯಲ್ಲಿ ಮುಳುಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    `ನನಗಾದಂತೆ ಬೇರೆಯವರಿಗೆ ಆಗಬಾರದು. ನನ್ನ ನಂಬಿಕೆಯೇ ನನಗೆ ದ್ರೋಹ ಮಾಡಿದೆ. ಮುಂದಿನ ಜನ್ಮ ಅಂತಿದ್ದರೆ ಒಳ್ಳೆಯ ಹುಡುಗನಾಗಿ ಹುಟ್ಟುವೆ’ ಎಂದು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ವಿಡಿಯೋದಲ್ಲಿ ಏನಿದೆ?
    ಹಾಯ್ ಫ್ರೆಂಡ್ಸ್ ನನಗಂತೂ ಈ ಜೀವನ ಬೇಡ. ನಮ್ಮ ಅಕ್ಕ ಮತ್ತು ಅಣ್ಣ ಸ್ವಂತ ಮಗನ ರೀತಿ ನೋಡಿಕೊಂಡಿದ್ದಾರೆ. ಅವರಂತ ಒಳ್ಳೆಯವರು ಯಾರೂ ಇಲ್ಲ ಸ್ನೇಹಿತರೆ. ನನಗಾದ ರೀತಿ ಬೇರೆಯಾರಿಗೂ ಆಗಬಾರದು, ನನ್ನ ನಂಬಿಕೆನೇ ನನಗೆ ದ್ರೋಹ ಮಾಡಿತು. ಇಂದು ಈ ರೀತಿ ಇದ್ದೀನಿ, ಮುಂದೆ ಹೇಗಿರುತ್ತೇನೆ ಎಂದು ಗೊತ್ತಿಲ್ಲ. ಹೀಗಾಗಿ ಮುಂದಿನ ಜನ್ಮ ಇದ್ದರೆ ಒಳ್ಳೆಯ ಹುಡುಗನಾಗಿ, ಮನುಷ್ಯನಾಗಿ ಹುಟ್ಟುವಂತೆ ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

    ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕಾಲೇಜು ಬಿಟ್ಟು ನಾನೇ ಸಾಲ ತೀರಿಸ್ತಿದ್ದೆ – ಮೃತ ರೈತನ ಪುತ್ರಿಯ ಅಳಲು

    ಕಾಲೇಜು ಬಿಟ್ಟು ನಾನೇ ಸಾಲ ತೀರಿಸ್ತಿದ್ದೆ – ಮೃತ ರೈತನ ಪುತ್ರಿಯ ಅಳಲು

    – ಮಕ್ಕಳಿಗೆ ಸಿಎಂ ಸರ್ಕಾರಿ ಕೆಲಸದ ಭರವಸೆ
    – ಕೆರೆ ವೀಕ್ಷಿಸಿ 5 ಲಕ್ಷ ರೂ. ಪರಿಹಾರ

    ಮಂಡ್ಯ: ತಂದೆ ನಮ್ಮ ಬಳಿ ಸಾಲ ಇದೆ ಎಂದು ಹೇಳಿಕೊಂಡಿರಲಿಲ್ಲ. ಒಂದು ವೇಳೆ ಅವರು ಹೇಳಿದ್ದರೆ ನಾನು ಓದುವುದನ್ನು ಬಿಟ್ಟು ಕೆಲಸ ಮಾಡಿ ಸಾಲ ತೀರಿಸುತ್ತಿದ್ದೆ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ ಸುರೇಶ್ ಪುತ್ರಿ ಸುವರ್ಣ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಪುತ್ರಿ ಸುವರ್ಣ, ನಮ್ಮಪ್ಪ ಸಾಲದ ಬಗ್ಗೆ ನಮ್ಮ ಬಳಿ ಹೇಳಿಕೊಂಡಿದ್ದರೆ ನಾನು ಓದುವುದು ಬಿಟ್ಟು ಸಾಲ ತೀರಿಸುತ್ತಿದ್ದೆ. ನಾನೇ ಅವರನ್ನು ಸಾಕುತ್ತಿದ್ದೆ. ಆದರೆ ಯಾವತ್ತೂ ಅವರು ಸಾಲದ ಬಗ್ಗೆ ಹೇಳಿಕೊಂಡಿರಲಿಲ್ಲ. ನಾವು ಧರ್ಮಸ್ಥಳಕ್ಕೆ ಹೋಗಿದ್ದರಿಂದ ನಮ್ಮಪ್ಪ ಸಾವನ್ನ ಒಂದು ವಾರ ಮುಂದೂಡಿದ್ದರು. ಪ್ರತಿದಿನ ನಮಗೆ ಕರೆ ಮಾಡಿ ಮಾತನಾಡುತ್ತಿದ್ದರು ಎಂದು ನೋವಿನಿಂದ ಹೇಳಿದ್ದಾರೆ.

    ನಮ್ಮಪ್ಪನ ಬಿಟ್ಟರೆ ನಮಗೆ ಯಾರೂ ದಿಕ್ಕಿಲ್ಲ. ಕುಟುಂಬ ನಿರ್ವಹಣೆಗಾಗಿ ನನ್ನ ಅಣ್ಣನಿಗೆ ಸಿಎಂ ಒಂದು ಕೆಲಸ ಕೊಡಲಿ. ನಮ್ಮಪ್ಪನ ಆಸೆಯಂತೆ ಸಂತೆಬಾಚಹಳ್ಳಿ ಹೋಬಳಿಯ ಕೆರೆಗಳಿಗೆ ಸಿಎಂ ನೀರು ತುಂಬಿಸಲಿ. ನಮ್ಮ ತಂದೆ ಬದುಕಿದ್ದಾಗ ಸಿಎಂ ಅವರು ಬಂದಿದ್ದರೆ ಅಪ್ಪ ತುಂಬಾ ಖುಷಿ ಪಡುತ್ತಿದ್ದರು. ಈಗ ಅವರೇ ನಮಗೆ ದಾರಿ ದೀಪವಾಗಿ ನೋಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ನಮ್ಮಪ್ಪ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಯಾರ ಬಳಿಯೂ ಏನು ಹೇಳಿಕೊಳ್ಳುತ್ತಿರಲಿಲ್ಲ ಎಂದು ಕಣ್ಣೀರು ಹಾಕುತ್ತಾ ಸುವರ್ಣ ಹೇಳಿದ್ದಾರೆ.

    ಕರೆ ವೀಕ್ಷಣೆ: ಮೃತ ರೈತನ ಮನವಿಯಂತೆ ಅಘಲಯ ಗ್ರಾಮಕ್ಕೆ ಸಿಎಂ ಆಗಮಿಸಿದ್ದು, ಮೃತ ರೈತ ಸುರೇಶ್ ಕುಟುಂಬ ಭೇಟಿಗೂ ಮುನ್ನ ಅಘಲಯ ಕೆರೆ ವೀಕ್ಷಿಸಿದ್ದಾರೆ. ಸಂತೆಬಾಚಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವಂತೆ ವಿಡಿಯೋ ಮೂಲಕ ಮನವಿ ಮಾಡಿ ರೈತ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಮೃತನ ರೈತನ ಮನವಿಯಂತೆ ಕೆರೆ ತುಂಬಿಸಲು ಬರಡಾಗಿರುವ ಕೆರೆ ವೀಕ್ಷಿಸಿದ್ದಾರೆ.

    ಸಿಎಂ ಹೇಳಿಕೆ:
    ರಾಜ್ಯದ ಎಲ್ಲಾಕಡೆ ಕೆರೆಗಳನ್ನ ತುಂಬಿಸುವ ಕೆಲಸ ಆಗಬೇಕಿದೆ. ಸುರೇಶ್ ಕೆರೆಗಳನ್ನ ತುಂಬಿಸಿ ಎಂದು ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ 213 ಕೋಟಿ ವೆಚ್ಚದಲ್ಲಿ ಈ ಭಾಗದ 40 -50 ಕೆರೆಗಳನ್ನ ತುಂಬಿಸುವ ಕಾರ್ಯ ಆರಂಭವಾಗಲಿದೆ. ಆತುರ ಪಟ್ಟು ಆತ್ಮಹತ್ಯೆಯ ದಾರಿಯನ್ನ ರೈತರು ಹಿಡಿಯಬಾರದು. ನಾನು ಹಳ್ಳಿಯ ಜನರಿಗೆ ಧೈರ್ಯ ತುಂಬಲು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದೇನೆ ಎಂದರು.

    ನಾನು ಗಿಮಿಕ್‍ಗಾಗಿ ಗ್ರಾಮವಾಸ್ತವ್ಯ ಮಾಡುತ್ತಿಲ್ಲ. ಗಿಮಿಕ್ ಅಂತ ಯಡಿಯೂರಪ್ಪ ಹೇಳುತ್ತಾರೆ. ನಾನು ಎಲ್ಲಾ ಜಿಲ್ಲಾಧಿಕಾರಿಗಳಿಂದ ಗ್ರಾಮಗಳ ಮಾಹಿತಿ ಪಡೆದಿದ್ದೇನೆ. ಗ್ರಾಮ ವಾಸ್ತವ್ಯ ಬೇಡ ಬರಪರಿಹಾರ ಅಧ್ಯಯನ ಮಾಡಿ ಎಂದು ಬಿಜೆಪಿ ಅವರು ಹೇಳುತ್ತಾರೆ. ನಾನು ಸ್ಟಾರ್ ಹೋಟೆಲನ್ನು ನೋಡಿದ್ದೇನೆ, ಸಣ್ಣ ಹಳ್ಳಿಯಲ್ಲೂ ವಾಸ್ತವ್ಯ ಹೂಡಿದ್ದೇನೆ ಎಂದು ಬಿಎಸ್‍ವೈಗೆ ಟಾಂಗ್ ಕೊಟ್ಟಿದ್ದಾರೆ.

    ಪರಿಹಾರ: ಮೃತ ಸುರೇಶ್ ಕುಟುಂಬದವರಿಗೆ ಸಿಎಂ 5 ಲಕ್ಷ ಪರಿಹಾರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾಭ್ಯಾಸ ಮುಗಿದ ಬಳಿಕ ಸುರೇಶ್ ಪುತ್ರಿ ಸುವರ್ಣ ಹಾಗೂ ಪುತ್ರ ಚಂದ್ರಶೇಖರ್ ಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಸುವರ್ಣ ಎಂಕಾಂ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.

  • ಕೆರೆ ಸ್ವಚ್ಛಗೊಳಿಸಿದ್ರೆ ಬಹಿರ್ದೆಸೆಗೆ ಜಾಗವಿರೋಲ್ಲ- ಯುವಕರಿಗೆ ತರಾಟೆ

    ಕೆರೆ ಸ್ವಚ್ಛಗೊಳಿಸಿದ್ರೆ ಬಹಿರ್ದೆಸೆಗೆ ಜಾಗವಿರೋಲ್ಲ- ಯುವಕರಿಗೆ ತರಾಟೆ

    ಧಾರಾವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೆರೆ ಸ್ವಚ್ಛ ಮಾಡಲು ಮುಂದಾದ ಯುವಕರನ್ನು ಅಲ್ಲಿಯ ಜನ ತರಾಟೆ ತೆಗೆದುಕೊಂಡಿದ್ದಾರೆ.

    ಸ್ವಯಂ ಪ್ರೇರಣೆಯಿಂದ ಸ್ವಚ್ಛ ಮಾಡಲು ಬಂದವರಿಗೆ ಶಹಬ್ಬಾಸ್‍ಗಿರಿ ಕೊಡುವುದನ್ನು ಬಿಟ್ಟು ಅವರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಕೆರೆ ಸ್ವಚ್ಛ ಮಾಡಿದರೆ ಬಯಲು ಬಹಿರ್ದೆಸೆಗೆ ಜಾಗ ಇರುವುದಿಲ್ಲ ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.

    ಪಟ್ಟಣದ ಹೊರವಲಯದ ಅಣ್ಣಿಗನ ಕೆರೆಯಲ್ಲಿ ಸ್ವಚ್ಛ ಸೇವಾ ಸಮಿತಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಈ ವೇಳೆ ಅಲ್ಲಿನ ಕೆಲ ಸ್ಥಳೀಯರು ಕೆರೆ ಸ್ವಚ್ಛ ಮಾಡಿದ್ರೆ ಬಯಲು ಬಹಿರ್ದೆಸೆಗೆ ಜಾಗ ಸಿಗುವುದಿಲ್ಲ ಎಂದು ಹಠ ಹಿಡಿದರು.

    ಜನರ ಮಾತನ್ನು ಕೇಳಿ ಯುವಕರು ಕೆರೆಯಲ್ಲಿ ಬಹಿರ್ದೆಸೆ ಮಾಡದಂತೆ ಮನವಿ ಮಾಡಿದರು. ಆದರೆ ಜನರು ಯುವಕರ ಮಾತನ್ನು ನಿರಾಕರಿಸಿ ಕೆರೆ ಸ್ವಚ್ಛ ಮಾಡದಂತೆ ತಡೆದಿದ್ದಾರೆ. ಇದರಿಂದ ಸ್ವಯಂ ಪ್ರೇರಣೆಯಿಂದ ಕೆರೆ ಸ್ವಚ್ಛತೆಗೆ ಬಂದ ಯುವಕರಿಗೆ ನಿರಾಸೆ ಆಗಿದೆ.

  • ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲು

    ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲು

    ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಕೆರೆಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಅನೇಕಲ್ ತಾಲೂಕಿನಲ್ಲಿ ನಡೆದಿದೆ.

    ಸಹಿದ್ ಖಾನ್ (17), ಜಾಕೀರ್ ಖಾನ್(14) ಹಾಗೂ ಮರಸೂರು ಗ್ರಾಮದ ರೋಷನ್(14) ಮೃತ ವಿದ್ಯಾರ್ಥಿಗಳು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬಿಂಗಿಪುರ ಕೆರೆಯಲ್ಲಿ ಸಹಿದ್ ಖಾನ್ ಹಾಗೂ ಜಾಕೀರ್ ಖಾನ್ ನಿನ್ನೆ ಸಂಜೆ ಈಜಲು ತೆರಳಿದ್ದರು. ಈ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ವಿದ್ಯಾರ್ಥಿಗಳ ಮೃತ ದೇಹಕ್ಕೆ ಹುಡುಕಾಟ ನಡೆಸಿದ್ದರು. ಆದರೆ ರಾತ್ರಿ ಕಳೆದರೂ ಮೃತ ದೇಹಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ನುರಿತ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆದಿದ್ದಾರೆ.

    ಈ ಪ್ರಕರಣ ಮಾಸುವ ಮುನ್ನವೇ ಆನೇಕಲ್ ಪಟ್ಟಣಕ್ಕೆ ಸಮೀಪವಿರುವ ಮರಸೂರು ಗ್ರಾಮದಲ್ಲಿ ಕೆರೆಗೆ ಈಜಲು ತೆರಳಿದ್ದ ರೋಷನ್ ಸಾವನ್ನಪ್ಪಿದ್ದಾನೆ. ಕೆರೆಯಲ್ಲಿದ್ದ ಹೂಳಿನಲ್ಲಿ ಕಾಲು ಸಿಲುಕಿದ್ದರಿಂದ ಈಜಲು ಸಾಧ್ಯವಾಗದೇ ರೋಷನ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೂರ್ಯಸಿಟಿ ಪೊಲೀಸರು ನುರಿತ ಈಜುಗಾರರನ್ನು ಕರೆಸಿ, ವಿದ್ಯಾರ್ಥಿಯ ಶವವನ್ನು ಮೇಲಕ್ಕೆತ್ತಿದ್ದಾರೆ.

    ಈ ವೇಳೆ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ರೋಷನ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಿಲ್ಲೆಯಾದ್ಯಂತ ವರುಣನ ಆರ್ಭಟ – ಖಾಲಿಯಾಗಿದ್ದ ಚೆಕ್ ಡ್ಯಾಂಗಳು ರಾತ್ರೋರಾತ್ರಿ ಭರ್ತಿ

    ಜಿಲ್ಲೆಯಾದ್ಯಂತ ವರುಣನ ಆರ್ಭಟ – ಖಾಲಿಯಾಗಿದ್ದ ಚೆಕ್ ಡ್ಯಾಂಗಳು ರಾತ್ರೋರಾತ್ರಿ ಭರ್ತಿ

    -ಫ್ಲೈಓವರ್ ಮೇಲೆ 2 ಅಡಿಯಷ್ಟು ನೀರು
    -ಬಿಸಿಲಿಗೆ ಬೆಂದಿದ್ದ ಜನರ ಮೊಗದಲ್ಲಿ ಹರ್ಷ

    ಬೆಂಗಳೂರು: ಸೋಮವಾರ ಸಿಲಿಕಾನ್ ಸಿಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಹೀಗಾಗಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

    ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತ್ಯಾಗರಾಜನಗರದ ವಿದ್ಯಾಪೀಠ ಸರ್ಕಲ್ ಬಳಿ ಇರುವ ಅಪಾರ್ಟ್ ಮೆಂಟ್ ಮತ್ತು ಶ್ರೀ ಸಾಯಿ ಸನ್ನಿಧಿ ಅಪಾರ್ಟ್ ಮೆಂಟ್ ಸೆಲ್ಲರ್ ಗೆ ನೀರು ನುಗ್ಗಿತ್ತು. ಅಷ್ಟೇ ಅಲ್ಲದೆ ಮಳೆ ನೀರು ನುಗ್ಗಿದ ಪರಿಣಾಮ 5 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಭಾರೀ ಮಳೆಗೆ ಹೆಬ್ಬಾಳ ಫ್ಲೈ ಓವರ್ ಕೆರೆಯಂತಾಗಿದ್ದು, ಫ್ಲೈ ಓವರ್ ಮೇಲೆ 2 ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.

    ಫ್ಲೈ ಓವರ್ ಮೇಲೆ ನೀರು ನಿಂತ ಹಿನ್ನೆಲೆಯಲ್ಲಿ ಏರ್‍ಪೋರ್ಟ್ ರೋಡ್ ಜಾಮ್ ಆಗಿದ್ದು, ಟ್ರಾಫಿಕ್ ಸಮಸ್ಯೆಯನ್ನ ಬಗೆಹರಿಸಲು ಪೊಲೀಸರ ಹರಸಾಹಸ ಪಡುವಂತಾಗಿತ್ತು. ನಂತರ ಹೆಬ್ಬಾಳ ಟ್ರಾಫಿಕ್ ಇನ್ಸ್ ಪೆಕ್ಟರ್ ಫ್ಲೈ ಓವರ್ ಮೇಲೆ ನಿಂತಿದ್ದ ನೀರನ್ನು ಹರಿದು ಹೋಗುವಂತೆ ಮಾಡಿದ್ದರು. ಬೇಸಿಲ ಬೇಗೆಗೆ ಸುಡುತ್ತಿದ್ದ ಕರಾವಳಿ ಜಿಲ್ಲೆ ಉಡುಪಿ ಕೊಂಚ ತಂಪಾಗಿದೆ. ಉಡುಪಿಯಲ್ಲಿ ಗುಡುಗು ಸಹಿತ ಮಳೆ ಬಿದ್ದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಕಳೆದ ರಾತ್ರಿ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಬಿರುಗಾಳಿ ಮಳೆಗೆ ಚಿಕ್ಕಬಳ್ಳಾಪುರ ನಗರದ ಗ್ರಂಥಾಲಯದ ಬಳಿ ಇದ್ದ ಬೃಹದಾಕಾರದ ಜಾಹೀರಾತು ನಾಮಫಲಕ ಧರೆಗುರುಳಿದ್ದು ಚಲಿಸುತ್ತಿದ್ದ ಕಾರೊಂದು ಹಾನಿಗೊಳಗಾಗಿದೆ. ಚಿಂತಾಮಣಿ ತಾಲೂಕಿನಾದ್ಯಾಂತ ಸಹ ಉತ್ತಮ ಮಳೆಯಾಗಿದ್ದು, ಕೆರೆ-ಕುಂಟೆ ಕಲ್ಯಾಣಿಗಳಿಗೆ ನೀರು ಹರಿದುಬಂದಿದೆ. ಮತ್ತೊಂದೆಡೆ ಭಾರೀ ಬಿರುಗಾಳಿ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಬಳಿಯ ಟೋಲ್ ಬೂತ್ ಹಾನಿಯಾಗಿದೆ. ಟೋಲ್ ಬೂತ್‍ನ ಮೇಲ್ಛಾವಣಿಯ ಶೀಟುಗಳು ಕಿತ್ತು ಹೋಗಿವೆ. ದೊಡ್ಡಬಳ್ಳಾಪುರ ನಗರದ ಸಂಜಯನಗರದಲ್ಲೂ ಸಹ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಗಿತ್ತು.

    ಇತ್ತ ಬರದ ನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ ವರುಣ ಸಿಂಚನವಾಗಿದೆ. ಮುದ್ದೇಬಿಹಾಳ ತಾಲೂಕಿನ ಸುತ್ತ ಮುತ್ತ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ವಿಜಯಪುರ ತಾಲೂಕಿನ ಮದಬಾವಿ ತಾಂಡಾ 1ರಲ್ಲಿ ಭಾರೀ ಗಾಳಿ ಸಮೇತ ಮಳೆ ಆಗಿದ್ದು, ಬಿರುಗಾಳಿಗೆ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಬಿರುಗಾಳಿಗೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದ್ದು, ಮನೆಯಲ್ಲಿನ ವಸ್ತುಗಳು, ಟಿವಿ ಪ್ರಿಡ್ಜ್ ಹಾನಿಗೊಳಗಾಗಿವೆ. ಆದರೆ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಾದ್ಯಂತ ಸಿಡಿಲು, ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಯಾಗಿ ಭಾರೀ ಅವಾಂತರ ಸೃಷ್ಟಿಸಿದೆ. ಈವರೆಗೆ ಮಳೆ ಇಲ್ಲದೆ ಖಾಲಿ ಖಾಲಿಯಾಗಿದ್ದ ಚೆಕ್ ಡ್ಯಾಂಗಳು ರಾತ್ರಿ ಸುರಿದ ಮಳೆಯಿಂದ ಭರ್ತಿಯಾಗಿರುವ ಖುಷಿ ಒಂದೆಡೆಯಾದರೆ, ಬಿರುಗಾಳಿಗೆ ಸಿಲುಕಿರುವ ಐಮಂಗಲ, ಹರಿಯಬ್ಬೆ ಹಾಗೂ ಮೇಟಿಕುರ್ಕೆ ಗ್ರಾಮಸ್ಥರ ಮನೆಗಳ ಮೇಲ್ಛಾವಣಿಯ ಶೀಟು, ಹೆಂಚುಗಳು ಹಾರಿ ಹೋಗಿ ಬಾರಿ ಆತಂಕ ಸೃಷ್ಟಿಸಿವೆ. ಅಲ್ಲದೇ ಧರ್ಮಪುರದಲ್ಲಿ ಬೃಹತ್ ಮರವೊಂದು ಧರೆಗುರಳಿದ್ದು, ಆ ಮರವು ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂ ಆಗಿದೆ. ಹೀಗಾಗಿ ಮಳೆ ಅನ್ನೋದು ಮರೀಚಿಕೆಯಾಗಿದ್ದ ಕೋಟೆನಾಡಲ್ಲಿ ರಾತ್ರಿ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿ ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.

    ಕುಷ್ಟಗಿ ಸೇರಿದಂತೆ ಕೊಪ್ಪಳ ಜಿಲ್ಲೆಯ ವಿವಿಧೆಡೆ ರಾತ್ರಿ ಮಳೆಯಾಗಿದೆ. ಬಿರುಗಾಳಿ, ಗುಡುಗು, ಸಿಡಿಲಿನೊಂದಿಗೆ ಆರಂಭವಾದ ಮಳೆ ಉತ್ತಮವಾಗಿ ಸುರಿದಿದೆ. ಮಳೆಗಾಲ ಪ್ರಾರಂಭವಾದರೂ ಜಿಲ್ಲೆಯಲ್ಲಿ ಮಳೆಯಾಗಿರಲಿಲ್ಲ. ಇದರಿಂದಾಗಿ ಜನರು ಮಳೆ ಯಾವಾಗ ಬರುತ್ತದೆ ಎಂದು ಮುಗಿಲು ನೋಡುತ್ತಾ ಕುಳಿತಿದ್ದರು. ಇದೀಗ ರೋಹಿಣಿ ಮಳೆ ಸ್ಪರ್ಶ ಜಿಲ್ಲೆಯಲ್ಲಾಗಿರೋದು ನೆಮ್ಮದಿ ಮೂಡಿಸಿದೆ. ರಾತ್ರಿ ಕುಷ್ಟಗಿ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು, ಕುಷ್ಟಗಿ ಪಟ್ಟಣದ ಮಾರುತಿ ಸರ್ಕಲ್ ನಲ್ಲಿ ಚರಂಡಿ ನೀರು ರಸ್ತೆ ಹಾಗೂ ಅಂಗಡಿಗಳಿಗೆ ನುಗ್ಗಿತ್ತು. ಇದರಿಂದಾಗಿ ಅಂಗಡಿಯವರು ನೀರು ಹೊರಹಾಕಲು ಹರಸಾಹಸ ಮಾಡಬೇಕಾಯಿತು.