ಇಲ್ಲಿಯವರೆಗೂ ಈ ಖಾತೆಯಲ್ಲಿ 2,883 ಹಾಡುಗಳನ್ನು ಅಪ್ಲೋಡ್ ಮಾಡಲಾಗಿದೆ. ಕನ್ನಡದ ಪ್ರಸಿದ್ಧ ಭಾವಗೀತೆಗಳನ್ನು ನೀವು ಲಹರಿ ಕಂಪನಿಯ Lahari Bhavageethegalu & Folk – T-Series ಯೂಟ್ಯೂಬ್ ಚಾನೆಲ್‌ನಲ್ಲಿ ಆಲಿಸಬಹುದು.
ಬೆಂಗಳೂರು: ರಿಕ್ಕಿ ಕೇಜ್ ಮತ್ತು ಅಮೆರಿಕದ ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲೆಂಡ್ ಜಂಟಿಯಾಗಿ ಸಂಯೋಜಿಸಿ, ಹಾಡಿರುವ ಡಿವೈನ್ ಟೈಡ್ಸ್ (ದೈವಿಕ ಅಲೆಗಳು) ಆಲ್ಬಂ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದೆ.
ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದ ಡಿವೈನ್ ಟೈಡ್ಸ್ ಆಲ್ಬಂ ಎಂಟು ಹಾಡುಗಳನ್ನು ಒಳಗೊಂಡಿದ್ದು, ಇದನ್ನು ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ನಿರ್ಮಾಣ ಮಾಡಿತ್ತು ಮತ್ತು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್ ಸಂಯೋಜಿಸಿದ್ದರು. ಇದನ್ನೂ ಓದಿ: ಲಹರಿ ಸಂಸ್ಥೆ ಹೊರ ತಂದ ರಿಕ್ಕಿ ಕೇಜ್ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನ
ಸಂಗೀತ ಲೋಕದಲ್ಲಿ ಸಾಧನೆ ಮಾಡಿದವರಿಗೆ ಕೊಡುವ ಪ್ರಶಸ್ತಿ ಗ್ರಾಮಿ ಅವಾಡ್ರ್ಸ್ ಆಗಿದ್ದು, ಲಹರಿ ಸಂಸ್ಥೆ ಇದೇ ಮೊದಲ ಬಾರಿಗೆ ಗ್ರಾಮಿ ಪ್ರಶಸ್ತಿ ಪಡೆದ ಸಂತಸದಲ್ಲಿದ್ದರೆ, ರಿಕ್ಕಿ ಅವರು ಎರಡನೇ ಬಾರಿಗೆ ಗ್ರಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಹಿಂದೆ ಅಂದ್ರೆ 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಇದೇ ವಿಭಾಗದಲ್ಲಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. ಇದು ಕೂಡ ಭಕ್ತಿಗೆ ಸಂಬಂಧಿಸಿದ್ದಾಗಿತ್ತು. ಇದನ್ನೂ ಓದಿ: ನನ್ನಮ್ಮ ಸೂಪರ್ ಸ್ಟಾರ್’ ಯಶಸ್ಸಿನ ಗರಿಯನ್ನ ಮುಡಿಗೇರಿಸಿಕೊಂಡ ಬಿಜ್ಲಿ ಪಟಾಕಿ ವಂಶಿಕಾ – ಯಶಸ್ವಿನಿ
ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಮೊದಲ ಬಾರಿಗೆ ನಿರ್ದೇಶಿಸಿರುವ ‘ನಟ ಭಯಂಕರ’ ಸಿನಿಮಾದ ಹಾಡುಗಳು ಇಂದು ರಿಲೀಸ್ ಆಗಿವೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ ಮಾಡಿದರು. ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್, ಗಿರೀಶ್, ಅರ್ಜುನ್ ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಆಡಿಯೋ ರಿಲೀಸ್ ಗೆ ಸಾಕ್ಷಿಯಾದರು. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್
ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ ಬಾಸ್ ನ ಆರಂಭದಲ್ಲಿ ಇವರನ್ನು ನೋಡಿ, ಏನಪ್ಪಾ, ಹೀಗೆ ಮಾತಾಡುತ್ತಾರೆ? ಅಂದು ಕೊಂಡೆ. ನಂತರ ನಾನೇ ಅವರ ಅಭಿಮಾನಿಯಾದೆ. ಈಗ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ರಘು ದೀಕ್ಷಿತ್ ಹಾಗೂ ನಾನು ಇಷ್ಟಪಡುವ ಉಪ್ಪಿ ಸರ್ ಹಾಡಿರುವ ಹಾಡುಗಳು ನನಗೆ ಇಷ್ಟವಾಯಿತು. ಸಿನಿಮಾ ಕೂಡ ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬ ನಂಬಿಕೆಯಿದೆ ಎಂದ ಶ್ರೀಮುರಳಿ, ಪ್ರಥಮ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳಿತನ್ನು ಹಾರೈಸಿದರು. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ
ಚೊಚ್ಚಲು ಸಿನಿಮಾ ಕುರಿತು ಮಾತನಾಡಿದ ಪ್ರಥಮ್, ‘ಭಾರೀ ಅಹಂಕಾರವಿರುವ ಮನುಷ್ಯ ಒಬ್ಬರಿಗೆ ಮಾತು ಕೊಟ್ಟಾಗ ಹೇಗೆ ಬದಲಾಗುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಇನ್ನೊಂದು ಕಡೆ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ಕುರುಡಿ ದೆವ್ವದ ನಡುವೆ ನಡೆಯುವ ಕಥೆ ಕೂಡ ಅನ್ನಬಹುದು. ಇಂದು ಆಡಿಯೋ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಅನಾವರಣಗೊಳಿಸುತ್ತೇವೆ’ ಎಂದರು. ನಾಯಕಿ ಫ್ರಾನ್ಸ್ ನಿವಾಸಿ ನಿಹಾರಿಕ, ಪ್ರಮುಖ ಪಾತ್ರಧಾರಿ ಚಂದನ, ಸಂಗೀತ ನೀಡಿರುವ ಪ್ರದ್ಯೋತನ್ ಚಿತ್ರದ ಕುರಿತು ಮಾತನಾಡಿದರು.
ಬೆಂಗಳೂರು: ರೈಡರ್ ಸಿನಿಮಾ ಪೈರಸಿ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಲಹರಿ ವೇಲು ಅವರು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅಭಿನಯದ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ತಮಿಳು ಬ್ಲಾಸ್ಟರ್ಸ್‍ನಿಂದ ಪೈರಸಿಯಾಗಿದೆ. ಕಿಡಿಗೇಡಿಗಳ ವಿರುದ್ಧ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ
ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ್ದ ಲಹರಿ ವೇಲು, ಪೈರಸಿ ಒಂದು ದೊಡ್ಡ ಪಿಡಗು. ರೈಡರ್ ಚಿತ್ರ ರಿಲೀಸ್ ಆಗಿ ಎರಡೇ ದಿನದಲ್ಲಿ ಪೈರಸಿ ಕಾಟ ಶುರುವಾಗಿದೆ. ಸಿನಿಮಾ ಚಿತ್ರ ಹಿಟ್ ಆಗಿದೆ. ಆದರೆ ತಮಿಳು ಬ್ಲಾಸ್ಟರ್ ವೆಬ್ ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರವನ್ನು ನಮ್ಮ ಚಿತ್ರದಲ್ಲಿ ನಟಿಸಿರುವ ಪ್ರಥಮ್ ತಿಳಿಸಿದರು. ಪೈರಸಿ ಪಿಡುಗು ಅಂತ್ಯ ಕಾಣಬೇಕು. ಕರ್ನಾಟಕದಲ್ಲಿ ಹಿಟ್ ಆಗುವ ಎಲ್ಲಾ ಚಿತ್ರಗಳನ್ನ ಅಪ್ಲೋಡ್ ಮಾಡಿ ನಿರ್ಮಾಪಕರಿಗೆ ಲಾಸ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಅದಿತಿ ಪ್ರಭುದೇವ?
ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾವನ್ನು ತೆರೆ ಮೇಲೆ ನೋಡಲು 1ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆಗೆ ಪೈರಸಿ ಕಾಟದಿಂದ ತಣ್ಣಿರು ಎರಚಿದಂತಾಗಿದೆ. ಉತ್ತಮ ರೆಸ್ಪಾನ್ಸ್ ಹಿನ್ನೆಲೆ ನಿಖಿಲ್ ವಿಜಯ ಯಾತ್ರೆ ಮಾಡುತ್ತಿದ್ದಾರೆ. ಆದರೆ ಇತ್ತ ಸಿನಿಮಾ ಪೈರಸಿಯಾಗಿದೆ.
ಡಿಸೆಂಬರ್ 24ಕ್ಕೆ ರಿಲೀಸ್ ಆಗಿದ್ದ ರೈಡರ್ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿತ್ತು. ಸಿನಿಮಾ ರಿಲೀಸ್ ಆದ ಎರಡನೇ ದಿನಕ್ಕೆ ಕಿಡಿಗೇಡಿಗಳಿಂದ ರೈಡರ್ ಸಿನಿಮಾ ಪೈರಸಿಯಾಗಿದೆ. ತಮಿಳ್ ರಾಕರ್ಸ್‍ನಿಂದ ರೈಡರ್‌ಗೆ ಪೈರಸಿ ಕಾಟ ಶುರುವಾಗಿದೆ. ಕಿಡಿಗೇಡಿಗಳ ವಿರುದ್ಧ ರೈಡರ್ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!
ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರ ಪೈರಸಿ ಆಗಿರೋ ಹಿನ್ನಲೆ ಲಹರಿ ವೇಲು ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿ, ಪೈರಸಿ ಪಿಡಗು ಸುಮಾರು 40 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರೈಡರ್ ಚಿತ್ರ ರಿಲೀಸ್ ಆಗಿ ಎರಡೇ ದಿನದಲ್ಲಿ ಪೈರಸಿ ಕಾಟ ಶುರುವಾಗಿದೆ. ಸಿನಿಮಾ ಚಿತ್ರ ಹಿಟ್ ಆಗಿದೆ ತಮಿಳು ಬ್ಲಾಸ್ಟರ್ ವೆಬ್ ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರ ನಮ್ಮ ಚಿತ್ರದಲ್ಲಿ ನಟಿಸಿರೋ ಪ್ರಥಮ್ ವಿಚಾರ ತಿಳಿಸಿದ್ದರು. ಪೈರಸಿ ಪಿಡಗು ಅಂತ್ಯ ಕಾಣಬೇಕು. ನಾಳೆ ಪೊಲೀಸ್ ಕಮೀಷರ್ ಭೇಟಿ ಮಾಡಿ ಸೈಬರ್ ಕ್ರೈಂಗೆ ದೂರು ಕೊಡಲಾಗುತ್ತದೆ. ಕರ್ನಾಟಕದಲ್ಲಿ ಹಿಟ್ ಆಗೋ ಎಲ್ಲಾ ಚಿತ್ರಗಳನ್ನ ಅಪ್ಲೋಡ್ ಮಾಡಿ ನಿರ್ಮಾಪಕರಿಗೆ ಲಾಸ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್ ಹೊಸ ಸಾಧನೆಯನ್ನು ಮಾಡಿದ್ದಾರೆ.
ರಿಕ್ಕಿ ಕೇಜ್ ಮತ್ತು ಅಮೆರಿಕಾದ ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್ಲೆಂಡ್ ಜಂಟಿಯಾಗಿ ಸಂಯೋಜಿಸಿ, ಹಾಡಿರುವ ಡಿವೈನ್ ಟೈಡ್ಸ್ (ದೈವಿಕ ಅಲೆಗಳು) ಆಲ್ಬಂ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಉತ್ತಮ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇದನ್ನೂ ಓದಿ: Adheera is back in action – ಕೆಜಿಎಫ್ 2ಗೆ ವಾಯ್ಸ್ ಕೊಟ್ಟ ಸಂಜಯ್ ದತ್
Humbled and Happy to have been nominated to the Grammy Awards in association with our renowned music geniuses @rickykej and @copelandmusic for the amazing album “Divine Tides” at the 64th Annual Grammy Awards pic.twitter.com/JQ3JtMoK8E
ಎಂಟು ಹಾಡುಗಳನ್ನು ಒಳಗೊಂಡಿರುವ ಡಿವೈನ್ ಟೈಡ್ಸ್ ಆಲ್ಬಂ ಅನ್ನು ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ಹೊರತಂದಿದೆ. 2022ರ ಜನವರಿ 31ರಂದು ಪ್ರಶಸ್ತಿ ಘೋಷಣೆಯಾಗಲಿದೆ. ಈ ಹಿಂದೆ ಅಂದ್ರೆ 2015ರಲ್ಲಿ ವಿಂಡ್ಸ್ ಆಫ್ ಸಂಸಾರ ಆಲ್ಬಂಗೆ ಇದೇ ವಿಭಾಗದಲ್ಲಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು. ಇದು ಕೂಡ ಭಕ್ತಿಗೆ ಸಂಬಂಧಿಸಿದ್ದಾಗಿತ್ತು.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ಆಡಿಯೋ ಹಕ್ಕು ಭಾರೀ ಮೊತ್ತದಲ್ಲಿ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ.
ಇಡೀ ಭಾರತೀಯ ಚಿತ್ರರಂಗವೇ ಕಾದು ಎದುರು ನೋಡುತ್ತಿರುವ ಕೆಜಿಎಫ್-2 ಸಿನಿಮಾದ ಆಡಿಯೋ ಹಕ್ಕು ಮಾರಾಟವನ್ನು ಪ್ರತಿಷ್ಠಿತ ಲಹರಿ ಆಡಿಯೋ ಸಂಸ್ಥೆ ಕೋಟಿ-ಕೋಟಿ ಹಣ ನೀಡಿ ಕೊಂಡುಕೊಂಡಿದೆ. ಈ ಹಿಂದೆ ಕೆಜಿಎಫ್ ಚಾಪ್ಟರ್-1 ಸಿನಿಮಾದ ಆಡಿಯೋ ಹಕ್ಕನ್ನು 3.60 ಕೋಟಿ ರೂ. ನೀಡಿ ಲಹರಿ ಆಡಿಯೋ ಸಂಸ್ಥೆ ಖರೀದಿಸಿತ್ತು. ನಂತರ ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದ ಆಡಿಯೋ ಹಕ್ಕನ್ನು 5.40 ಕೋಟಿ ಹಣ ನೀಡಿ ಕೊಂಡುಕೊಂಡಿದ್ದ ಲಹರಿ ಆಡಿಯೋ ಸಂಸ್ಥೆ, ಇದೀಗ ಕೆಜಿಎಫ್-2 ಸಿನಿಮಾದ ಆಡಿಯೋ ಹಕ್ಕನ್ನು 7.20 ಕೋಟಿ ಹಣ ನೀಡಿ ಖರೀದಿಸುವ ಮೂಲಕ ಬಾಹುಬಲಿ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.
ಕೆಜಿಎಫ್-2 ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, 5 ಭಾಷೆಗಳ ಆಡಿಯೋ ಹಕ್ಕನ್ನು ಕೂಡ ಲಹರಿ ಸಂಸ್ಥೆಯೇ ಖರೀದಿಸಿದ್ದು, ಚಿತ್ರದ ಹಾಡುಗಳ ಪ್ರಚಾರ ನಡೆಸಲು ಪ್ಲಾನ್ ಹೊಂದಿರುವುದಾಗಿ ಲಹರಿ ವೇಲುರವರು ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಜಿಎಫ್ ಚಾಪ್ಟರ್-1 ಗಿಂತಲೂ, ಕೆಜಿಎಫ್-2 ಸಿನಿಮಾದ ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಎರಡು ಬಿಟ್‍ಗಳಿವೆ. ಸಂಗೀತಾ ನಿರ್ದೇಶಕ ರವಿಬಸ್ರೂರು ಅದ್ಭುತವಾಗಿ ಹಾಡನ್ನು ಸಂಯೋಜಿಸಿದ್ದಾರೆ. ಇನ್ನೂ ಚಿತ್ರವನ್ನು ನಿರ್ದೇಶಕ ಪ್ರಶಂತ್ ನೀಲ್ ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ. ಕೆಜಿಎಫ್-2 ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತದಲ್ಲಿ ಮಾರಾಟವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಇಡೀ ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡ ಮೊತ್ತದಲ್ಲಿ ಆಡಿಯೋ ಮಾರಾಟವಾದ ಸಿನಿಮಾ ಎಂದರೆ ಅದು ಕೆಜಿಎಫ್-2. ನಮ್ಮ 45 ವರ್ಷದ ಅನುಭವದಲ್ಲಿ ಈ ರೀತಿ ಆಗಿದ್ದು, ಇದೇ ಮೊದಲು. ಕನ್ನಡ ಮಾರುಕಟ್ಟೆಯಲ್ಲಿ ಇಷ್ಟು ಎತ್ತರಕ್ಕೆ ಬೆಳದಿರುವುದು ಸಂತೋಷದ ವಿಚಾರವಾಗಿದೆ. ಇದನ್ನೂ ಓದಿ : ‘ಅ’ ಕಾರಕ್ಕೂ, ‘ಹ’ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ: ಅನಿತಾ ಭಟ್
ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ, ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಒಂದಾಗಿದ್ದಾರೆ. ತಮ್ಮ ನಡುವಿನ ಎಲ್ಲ ಕಿರಿಕ್‍ಗಳನ್ನು ಬದಿಗಿಟ್ಟು ಸ್ನೇಹದ ಹಸ್ತ ಚಾಚಿದ್ದಾರೆ.
ಒಂದು ಘಟನೆ, ಹಲವು ದೃಷ್ಟಿಕೋನಗಳು. ದೃಷ್ಟಿಕೋನಗಳನ್ನು ಹಂಚಿಕೊಂಡು, ಅರ್ಥ ಮಾಡಿಕೊಂಡಾಗ ನಾವು ಮನುಷ್ಯರಾಗಿ ಒಗ್ಗೂಡುತ್ತೇವೆ. ಪ್ರೀತಿ ಮತ್ತು ಪರಸ್ಪರ ಗೌರವಗಳಲ್ಲಿ ಎಲ್ಲವೂ ಸೇರಿಕೊಳ್ಳಲೇಬೇಕು. ಅದೇ ಬೆಳವಣಿಗೆಯ ನಿಜವಾದ ಲಕ್ಷಣ ಎಂದು ರಕ್ಷಿತ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.
One incident… many perspectives… and when the perspectives are shared and understood, we stand united as humans. Everything must meet at a juncture of love and mutual respect… for that’s the only true nature of growth. Within and without ???? pic.twitter.com/1gBK5nUmW9
ಫೋಟೋ ನೋಡಿದ ಅನೇಕರು ಈ ಮೂವರಿಗೂ ಶುಭ ಹಾರೈಸಿದ್ದಾರೆ. ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ತಮ್ಮ ನಡುವಿನ ಕಿರಿಕ್ ಮರೆತು ಒಂದಾಗಿರುವ ಈ ಸೆಲೆಬ್ರಿಟಿಗಳನ್ನು ಕಂಡು ಸ್ಯಾಂಡಲ್‍ವುಡ್ ಮಂದಿ ಖುಷಿಪಟ್ಟಿದ್ದಾರೆ.
Nothing given, nothing taken. Only point of views were shared ☺️
ನಡೆದಿದ್ದೇನು..?
ಕನ್ನಡ ಚಿತ್ರರಂಗದಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ಲಹರಿ ಮ್ಯೂಸಿಕ್ ಸಂಸ್ಥೆ ನಡುವೆ ಉಂಟಾಗಿದ್ದ ಕಿರಿಕ್ ಬಗ್ಗೆ ಎಲ್ಲರಿಗೂ ತಿಳಿದಿದೆ. ತಮ್ಮ ಸಂಸ್ಥೆಗೆ ಸೇರಿದ ಸಂಗೀತವನ್ನು ಕಿರಿಕ್ ಪಾರ್ಟಿ ಚಿತ್ರತಂಡ ಕೃತಿಚೌರ್ಯ ಮಾಡಿದೆ ಎಂದು ಆರೋಪಿಸಿ ಲಹರಿ ಸಂಸ್ಥೆಯ ವೇಲು ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆ ಬಗ್ಗೆ ಹಲವು ಬಾರಿ ವಿಚಾರಣೆ ನಡೆದಿತ್ತು. ಲಹರಿ ವೇಲು ಮತ್ತು ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿಯೇ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಂಡಿದ್ದರು.
ಕಿರಿಕ್ ಪಾರ್ಟಿ ಚಿತ್ರದ ಹೇ ಹೂ ಆರ್ ಯೂ ಹಾಡಿನಲ್ಲಿ ಶಾಂತಿ ಕ್ರಾಂತಿ ಚಿತ್ರದ ‘ಮಧ್ಯರಾತ್ರೀಲಿ’ ಹಾಡಿನ ಟ್ಯೂನ್ ಅನ್ನು ಬಳಸಿಕೊಳ್ಳಲಾಗಿತ್ತು. ನಮ್ಮ ಅನುಮತಿ ಇಲ್ಲದೇ ಹಾಡಿನ ಟ್ಯೂನ್ ಕದ್ದಿದ್ದಾರೆ ಅಂತ ಲಹರಿ ಸಂಸ್ಥೆ ಆರೋಪಿಸಿತ್ತು. ನಾವು ರವಿಚಂದ್ರನ್ ಅವರಿಗೆ ಟ್ರಿಬ್ಯೂಟ್ ಮಾಡಲು ಆ ರೀತಿ ಟ್ಯೂನ್ ಮಾಡಿದ್ವಿ ಅಂದಿದ್ದ ಕಿರಿಕ್ ಪಾರ್ಟಿ ಟೀಮ್ ಹೇಳಿಕೊಂಡಿತ್ತು. ಇದನ್ನೂ ಓದಿ: ಸಂಚಾರಿ ವಿಜಯ್‍ಗೆ ಅಮೆರಿಕದ ಥಿಯೇಟರ್ ನಿಂದ ಗೌರವ
ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆ ಕೋರ್ಟ್ ನಿಂದ ಜಾಮೀನು ರಹಿತ ವಾರೆಂಟ್ ಜಾರಿ ಆಗಿತ್ತು. ವಾರಂಟ್ ಹಿನ್ನಲೆ 9ನೇ ಎಸಿಎಂಸಿ ಕೋರ್ಟ್ ಮುಂದೆ ಹಾಜರಾಗಿದ್ದ ರಕ್ಷಿತ್ ಶೆಟ್ಟಿ 10,000 ರೂಪಾಯಿ ಶ್ಯೂರಿಟಿ ನೀಡಿ ಜಾಮೀನು ಪಡೆದಿದ್ದರು. ‘ಕಿರಿಕ್ ಪಾರ್ಟಿ’ ವರ್ಸಸ್ ಲಹರಿ ಆಡಿಯೋ ಸಂಸ್ಥೆ ಫೈಟ್ ನಡೆಯುತ್ತಿತ್ತು. ಈ ವೇಳೆ ಕಾಪಿರೈಟ್ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಕಿರಿಕ್ ಪಾರ್ಟಿ ವಿವಾದವನ್ನು ಲಹರಿ ವೇಲು ಅವರ ಜೊತೆ ಕೂತು ರಕ್ಷಿತ್ ಶೆಟ್ಟಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.
ಬೆಂಗಳೂರು: ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ವೇಲು ಅವರಿಗೆ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂದು ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಸ್ತಿಯನ್ನು ಲಹರಿ ವೇಲು ಅವರು ಸ್ವೀಕರಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ನಮ್ಮನ್ನಗಲಿದ ಖ್ಯಾತ ಗಾಯಕ ಎಸ್‍ಪಿಬಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಲಹರಿ ವೇಲು, ನನಗೆ ಈ ಪ್ರಶಸ್ತಿ ರಾಜ್ಯ ಪ್ರಶಸ್ತಿ ನೀಡಿದಷ್ಟು ಸಂತೋಷ ನೀಡಿದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಿಮಾಲಯ ಪರ್ವತ. ಅವರಿಗೆ ಅವರೇ ಸಾಟಿ, ನಮ್ಮ ಸಂಸ್ಥೆಯಲ್ಲಿ ಸುಮಾರು 14 ಸಾವಿರ ಹಾಡುಗಳನ್ನು ಹಾಡಿದ್ದಾರೆ ಎಂದು ಪ್ರಶಸ್ತಿ ಪಡೆದ ಸಂತಸವನ್ನು ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ ಶಶಿಕುಮಾರ್, ನಟಿ ಪ್ರಿಯಾಂಕಾ ಉಪೇಂದ್ರ, ಸಾಹಿತಿ ಕೆ.ಕಲ್ಯಾಣ್, ಗಾಯಕಿ ಮಂಜುಳಾ ಗುರುರಾಜ್ ಸೇರಿದಂತೆ ಹಲವಾರು ಗಣ್ಯರಿಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಪ್ರಶಸ್ತಿ ನೀಡಿ ಗೌರವಿಸಿದರು.
ಬೆಂಗಳೂರು: ತುಂಬಾ ಹೃದಯವಂತಿಕೆಯಿಂದ ಇದ್ದರು. ವಿಧಿ ಎಷ್ಟು ಕ್ರೂರಿ, ಜೀವನ ಎಂದರೆ ಇಷ್ಟೆನಾ ಎನಿಸುತಿದೆ ಎಂದು ಲಹರಿ ಸಂಸ್ಥೆಯ ಮುಖ್ಯಸ್ಥ ನೋವಿನಿಂದ ಮಾತನಾಡಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, ನನಗೆ ಚಿರಂಜೀವಿ ಸಾವಿನ ಸುದ್ದಿ ಬಂದಾಗ ತಮಾಷೆ ಮಾಡುತ್ತಿದ್ದೀರ ಎಂದು ಕೋಪ ಮಾಡಿಕೊಂಡೆ. ನಂತರ ಮಾಧ್ಯಮ ನೋಡಿದಾಗ ನನಗೂ ಶಾಕ್ ಆಯಿತು. ಇದನ್ನೂ ಈಗಲೂ ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನಿಂದ ಮಾತ್ರವಲ್ಲ ಈಗಾಗಲೇ ನೂರಾರು ಜನರು ನನಗೆ ಫೋನ್ ಮಾಡಿ ಇದು ನಿಜನಾ ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.
ಎರಡು ತಿಂಗಳ ಹಿಂದೆಯಷ್ಟೆ ಚಿರಂಜೀವಿ ಸರ್ಜಾರ ಅಭಿನಯದ ‘ಖಾಕಿ’ ಸಿನಿಮಾದಲ್ಲಿ ನಾನು ಮಾಡಿದ್ದೆ. ಸುಮಾರು 15 ದಿನಗಳ ಕಾಲ ಅವರ ಜೊತೆ ಒಟ್ಟಿಗೆ ಕೆಲಸ ಮಾಡಿದ್ದೇನೆ. ತುಂಬಾ ಹೃದಯವಂತಿಕೆಯಿಂದ ಇದ್ದರು. ಜೀವನ ಎಂದರೆ ಇಷ್ಟೆನಾ, ವಿಧಿ ಎಷ್ಟು ಕ್ರೂರವಾಗಿದೆ ಎಂದು ನೋವಿನಿಂದ ಮಾತನಾಡಿದರು.
‘ಖಾಕಿ’ ಸಿನಿಮಾ ಚಿತ್ರೀಕರಣದ ವೇಳೆ ನೀವು ತುಂಬಾ ಫಿಟ್ ಆಗಿದ್ದೀರ. ನಾನು ಕೂಡ ಜಿಮ್ ಮಾಡುತ್ತಿದ್ದೀನಿ. ಫಿಟ್ ಆಗುತ್ತೇನೆ ಎಂದಿದ್ದರು. ಪ್ರತಿಯೊಬ್ಬರ ಜೊತೆಯೂ ಒಂದೇ ರೀತಿ ಇದ್ದರು. ನಟ ಎಂಬ ಯಾವುದೇ ಅಹಂ ಇರಲಿಲ್ಲ. ಈ ಕೊರೊನಾ ಬಂದು ಎಲ್ಲರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದೆ. ಮೊನ್ನೆ ನಿಸಾರ್ ಅಹಮದ್ ನಮ್ಮನ್ನು ಅಗಲಿ ಹೋದರು. ಈಗ ಚಿರಂಜೀವಿ. ಮೊನ್ನೆ ಮೊನ್ನೆಯವರೆಗೆ ನಮ್ಮ ಜೊತೆ ಇದ್ದವರು ನಿಧನರಾಗುತ್ತಿರುವುದನ್ನು ನೋಡಿ ಶಾಕ್ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾಮಾರಿ ಕೊರೊನಾ ಬಂದ ಸಂದರ್ಭದಲ್ಲಿ ಇಫ್ರಾನ್ ಖಾನ್, ನಂತರ ವಾಜೀದ್ ಖಾನ್, ಈಗ ಚಿರಂಜೀವಿ ಸರ್ಜಾ ಅಗಲಿದ್ದಾರೆ. ಹೀಗಾಗಿ ಈ ಮಾಹಾಮಾರಿ ಕೊರೊನಾ ಬಂದು ಒಬ್ಬೊಬ್ಬರಂತೆ ಕರೆದುಕೊಂಡು ಹೋಗುತ್ತಿದೆ ಎಂದು ಕೊರೊನಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.