Tag: lahari music

  • ಮುತ್ತಿನ ನಗರಿಯಲ್ಲಿ ರಾಜಮೌಳಿ ಜೊತೆ ಕೆಜಿಎಫ್

    ಮುತ್ತಿನ ನಗರಿಯಲ್ಲಿ ರಾಜಮೌಳಿ ಜೊತೆ ಕೆಜಿಎಫ್

    – ಗಡಿದಾಟಿದ ರಾಕಿಯ ಖಡಕ್ ಸದ್ದು

    ಬೆಂಗಳೂರು: ಕನ್ನಡದ ಕೆಜಿಎಫ್ ಕರುನಾಡ ಗಡಿ ದಾಟಿದ್ದು, ಎಲ್ಲಡೆ ರಾಕಿಯ ಗುಂಗು ಕಾಣುತ್ತಿದೆ. ಕೆಜಿಎಫ್ ಚಿತ್ರದ ವಿಶೇಷ ಕಾರ್ಯಕ್ರಮವೊಂದನ್ನು ಡಿಸೆಂಬರ್ 9ರಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಈ ಸಂಬಂಧ ಯಶ್ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ ರಿಲೀಸ್ ಮುನ್ನ ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ಅದರಂತೆ ಕೆಜಿಎಫ್ ಚಿತ್ರತಂಡ ಹೈದರಾಬಾದ್ ನಲ್ಲಿ ಸಿನಿಮಾದ ಇವೆಂಟ್ ಏರ್ಪಡಿಸಿದೆ. ಹೈದರಾಬಾದ್ ನಗರದ ಜ್ಯೂಬ್ಲಿ ಹಿಲ್ಸ್, ಜೆಆರ್‍ಸಿ ಕನ್ವೆಂನಷನ್ ನಲ್ಲಿ ಸಂಜೆ 6.30ಕ್ಕೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ಜೊತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

    ಮಂಗಳವಾರ ಸಂಜೆ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋವನ್ನು 5 ಭಾಷೆಗಳಲ್ಲಿಯೂ ರಿಲೀಸ್ ಆಗಿತ್ತು. ಬುಧವಾರ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಭರವಸೆಯನ್ನು ಹೆಚ್ಚಿಸಿದೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ- ಲಹರಿ ಸಂಗೀತ ಸಂಸ್ಥೆಯಿಂದ `ಅಮ್ಮಾ ಕಾವೇರಿ` ಹಾಡು ಸಮರ್ಪಣೆ

    62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ- ಲಹರಿ ಸಂಗೀತ ಸಂಸ್ಥೆಯಿಂದ `ಅಮ್ಮಾ ಕಾವೇರಿ` ಹಾಡು ಸಮರ್ಪಣೆ

    ಬೆಂಗಳೂರು: ಕನ್ನಡ ಎನ್ನುವುದು ಬರೀ ಭಾಷೆ ಮಾತ್ರ ಅಲ್ಲ. ಇಲ್ಲಿಯ ನೆಲ, ಜಲ ಕನ್ನಡದ ಜೊತೆಜೊತೆಗೆ ಬಂದು ನಿಲ್ಲುತ್ತವೆ. ಕನ್ನಡ ಮಾತಾಡುವುದು, ಕನ್ನಡ ಉಳಿಸುವುದು ಮತ್ತು ಬೆಳೆಸುವುದು ಎಷ್ಟು ಮುಖ್ಯವೋ ಅದೇ ರೀತಿ ಇಲ್ಲಿಯ ನೆಲ-ಜಲವನ್ನು ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ.

    ಕಾವೇರಿ ರಾಜ್ಯದ ದಕ್ಷಿಣ ಭಾಗದಲ್ಲಿದ್ದರೂ ಇದು ಇಡೀ ಕನ್ನಡ ನಾಡಿಗೆ ತಾಯಿಯಿದ್ದಂತೆ. ರಾಜ್ಯೋತ್ಸವದ ದಿನವಾದ ಇಂದು ‘ಅಮ್ಮಾ ಕಾವೇರಿ’ ಹಾಡು ಪಬ್ಲಿಕ್ ಟಿವಿ ಮೂಲಕ ಬಿಡುಗಡೆಯಾಗಿದೆ. ಹಾಡಿನಲ್ಲಿ ಕಾವೇರಿಯ ನದಿಯ ವರ್ಣನೆ ಮಾಡಲಾಗಿದ್ದು, ನದಿಯ ವಿಹಂಗಮ ನೋಟವನ್ನು ನೋಡಬಹುದಾಗಿದೆ.

    ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ಪುರಸ್ಕøತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಈ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಸರಸ್ವತಿ ಎಂ.ಡಿ.ಪಲ್ಲವಿ ಹಾಡಿಗೆ ಧ್ವನಿಯಾಗಿದ್ದಾರೆ. ಖ್ಯಾತ ಕವಿ ಎಚ್‍ಎಸ್ ವೆಂಕಟೇಶ್ ಮೂರ್ತಿ ಅವರ ಸಾಹಿತ್ಯವಿದೆ. ಕನ್ನಡದ ಪ್ರತಿಷ್ಠಿತ ಲಹರಿ ಸಂಗೀತ ಸಂಸ್ಥೆ ಈ ವಿಡಿಯೋ ಆಲ್ಬಂ ಹೊರತಂದಿದೆ.

     

  • ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

    ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಬಿಡುಗಡೆಯಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ 3.50 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.

    ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ‘ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ವಿಶೇಷ ಪಾತ್ರದಲ್ಲಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.

    ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಟೀಸರ್ ನೋಡಲು ಕಾಯುತ್ತಿದ್ದ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಗುಣಗಾನ ಮಾಡುತ್ತಿದ್ದಾರೆ. ಈ ಬಾರಿಯ ದಸರಾ ವೇಳೆ ತಾರಕ್ ಚಿತ್ರಮಂದಿರ ತಲುಪಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಚಿತ್ರದ ಟೀಸರ್ ನೀವೂ ನೋಡಬಹುದು.

    https://www.youtube.com/watch?v=bUWVi72WlCw

  • ಹ್ಯಾಪನ್ ಆಪ್ ಜೊತೆ ಕೈ ಜೋಡಿಸಿದ ಲಹರಿ ಮ್ಯೂಸಿಕ್ ಸಂಸ್ಥೆ

    ಹ್ಯಾಪನ್ ಆಪ್ ಜೊತೆ ಕೈ ಜೋಡಿಸಿದ ಲಹರಿ ಮ್ಯೂಸಿಕ್ ಸಂಸ್ಥೆ

    ಬೆಂಗಳೂರು: ಲಹರಿ ಆಡಿಯೋ ಸಂಸ್ಥೆ ಕೇವಲ ಮ್ಯೂಸಿಕ್ ಕ್ಷೇತ್ರಕಷ್ಟೇ ಸಿಮಿತವಾಗದೇ ಈಗ ಹೊಸದಾಗಿ ಆಪ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ.

    ವಿದೇಶದಲ್ಲಿ ಈಗಾಗಲೇ ಖ್ಯಾತಿ ಪಡೆದು ಹೊಸ ಕ್ರೇಜ್ ಹುಟ್ಟಿಸುತ್ತಿರುವ ಹ್ಯಾಪನ್ ಎಂಬ ಡೇಟಿಂಗ್/ ಮೀಟಿಂಗ್ ಆಪ್ ಜೊತೆ ಲಹರಿ ಸಂಸ್ಥೆ ಸಹ ಕೈ ಜೋಡಿಸಿದೆ.

    ಲಹರಿ ಸಂಸ್ಥೆಯ ಮುಖ್ಯಸ್ಥರಾದ ವೇಲು ಮಾತನಾಡಿ, ಹ್ಯಾಪನ್ ಮೀಟಿಂಗ್ ಆಪ್ ಜನರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಆಪ್ ಆಗಿದ್ದು, ವಿದೇಶಗಳಲ್ಲಿ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿದೆ. ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ 40 ಕ್ಕೂ ಹೆಚ್ಚಿನ ದೇಶಗಳ ಜನರು ಈ ಆಪನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಭಾರತದಲ್ಲಿ ಈ ಆಪ್‍ಗೆ ಬಾಲಿವುಡ್ ನಟ ಹೃತಿಕ್ ರೋಷನ್ ರಾಯಭಾರಿಯಾಗಿದ್ದಾರೆ. ವಿಶ್ವದಲ್ಲಿ ಒಟ್ಟು 2.8 ಕೋಟಿಗೂ ಅಧಿಕ ಜನ ಈ ಆಪನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ಮುಂಬೈನಲ್ಲಿ ಉದ್ಘಾಟನೆ ಮಾಡಿದ 50 ದಿನದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಡೌನ್‍ಲೋಡ್ ಮಾಡಿದ್ದಾರೆ ಎಂದು ತಿಳಿಸಿದರು.

    ಹ್ಯಾಪನ್ ಸಂಸ್ಥೆಯ ಸಿಇಒ ಡೈಡೆರ್ ರಪಾಪೊರ್ಟ್ ಮತ್ತು ಲಹರಿ ಸಂಸ್ಥೆಯ ಚಂದ್ರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ನೀವು ಸಹ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು ಅಂದ್ರೆ ಗೂಗಲ್ ಪ್ಲೇ ಸ್ಟೋರ್/ ಐಟ್ಯೂನ್ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು

    ಐಓಎಸ್ ಆಪ್ : happen

    ಆಂಡ್ರಾಯ್ಡ್ ಆಪ್: happen

  • ಬಾಹುಬಲಿ ಆಡಿಯೋ ರಿಲೀಸ್

    ಬಾಹುಬಲಿ ಆಡಿಯೋ ರಿಲೀಸ್

    ಹೈದರಾಬಾದ್: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಆಡಿಯೋ ಆಲ್ಬಂ ಇಂದು ಲೋಕಾರ್ಪಣೆಗೊಂಡಿದೆ. ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಬಾಹುಬಲಿ ಪ್ರೀ ರಿಲೀಸ್ ಕಾರ್ಯಕ್ರಮದ ಆಡಿಯೋ ಆಲ್ಬಂ ಬಿಡುಗಡೆಯಾಗಿದೆ.

    ಬಾಹುಬಲಿ-2 ಆಡಿಯೋ ವನ್ನು ದಕ್ಷಿಣ ಭಾರತದ ಖ್ಯಾತ ಆಡಿಯೋ ಕಂಪನಿ ಲಹರಿ ಮ್ಯೂಸಿಕ್ ತರುತ್ತಿದ್ದು, ಇಂದು 5 ಹಾಡುಗಳು ಬಿಡುಗಡೆಯಾಗಿದೆ.

    ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಎಮ್.ಎಮ್ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ದಲೆರ್ ಮೆಹೆಂದಿ, ಕೀರವಾಣಿ, ಕಾಲ ಭೈರವ, ಶ್ರೀನಿಧಿ, ಶ್ರೀ ಸೌಮ್ಯ ಮುಂತಾದವರು ಹಾಡಿದ್ದಾರೆ.

    ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ವಿಜಯೇಂದ್ರ ಪ್ರಸಾದ್, ರಾಜಮೌಳಿ, ರಮ್ಯಾ ಕೃಷ್ಣ, ಕರಣ್ ಜೋಹಾರ್ ಉಪಸ್ಥಿತರಿದ್ದರು.

    ಬಾಹುಬಲಿ ಟ್ರೇಲರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದ್ದು, ಈಗಾಗಲೇ ನಾಲ್ಕು ಭಾಷೆಯಲ್ಲಿ 10 ಕೋಟಿಗೂ ಅಧಿಕ ವ್ಯೂ ಕಂಡಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    https://twitter.com/LakshPimpdae/status/845999338396381184