Tag: Lahari Films

  • UI: ಉಪೇಂದ್ರ, ಶಿವಣ್ಣ ಫೋಟೋ ಇಟ್ಟು ಪೂಜೆ- ಫ್ಯಾನ್ಸ್ ಭರ್ಜರಿ ಸೆಲೆಬ್ರೇಶನ್

    UI: ಉಪೇಂದ್ರ, ಶಿವಣ್ಣ ಫೋಟೋ ಇಟ್ಟು ಪೂಜೆ- ಫ್ಯಾನ್ಸ್ ಭರ್ಜರಿ ಸೆಲೆಬ್ರೇಶನ್

    ಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ UI ಸಿನಿಮಾ ಡಿ.20ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಉಪ್ಪಿ ಎಂಟ್ರಿ ನೋಡಿ ಫ್ಯಾನ್ಸ್ ಅಬ್ಬರ, ಸೆಲೆಬ್ರೇಶನ್ ಎರಡು ಜೋರಾಗಿದೆ. ಸಿನಿಮಾ ರಿಲೀಸ್ ಸಂಭ್ರಮದ ನಡುವೆ ಉಪೇಂದ್ರ ಮತ್ತು ಶಿವಣ್ಣ ಫೋಟೋ ಇಟ್ಟು ವಿಶೇಷ ಪೂಜೆ ಮಾಡಿದ್ದಾರೆ. ಇದನ್ನೂ ಓದಿ:UI ಅಬ್ಬರ: ಉಪ್ಪಿ ನಟನೆ, ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕರು

    UI ರಿಲೀಸ್ ಸಮಯದಲ್ಲೇ ಸಂತೋಷ್ ಥಿಯೇಟರ್ ಮುಂದೆ ಅಭಿಮಾನಿ ಒಬ್ಬರು ಶಿವಣ್ಣ (Shivarajkumar) ಸರ್ಜರಿ ಬಳಿಕ ಆರೋಗ್ಯವಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಪೂಜೆ ಮಾಡಿಸಿದ್ದಾರೆ. ಚಿತ್ರಮಂದಿರದ ಮುಂದೆ ಶಿವಣ್ಣ, ಉಪೇಂದ್ರ ಅವರ ಫೋಟೋಗಳನ್ನಿಟ್ಟು ಹೋಮ ಮಾಡಿದ್ದಾರೆ. ಮೂವರು ಪೂಜಾರಿಗಳು ಹೋಮ ಕುಂಡಕ್ಕೆ ತುಪ್ಪ ಸುರಿದು ಮಂತ್ರ ಪಠಿಸಿದ್ದಾರೆ.

    UI ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಗೆ ಉಪೇಂದ್ರ ಹುಳ ಬಿಟ್ಟಿದ್ದಾರೆ. ಚಿತ್ರದ ಕಥೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬೆಳಗ್ಗೆ 6:30ರಿಂದಲೇ ಚಿತ್ರದ ಪ್ರದರ್ಶನ ಶುರುವಾಗಿದೆ. ‘ಯುಐ’ ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಪ್ರೇಕ್ಷಕರಿಂದ ರೆಸ್ಪಾನ್ಸ್ ಬಂದಿದೆ. ಎಂದಿಗೂ ಕಾಯಕವೇ ಕೈಲಾಸ, ಕೆಲಸ ಮಾಡಿ ಅಂತ ಹೇಳಿದ್ದಾರೆ. ಜೀವನದ ಬಗ್ಗೆ ಫೋಕಸ್ ಮಾಡಿ ಅನ್ನುವ ಸಂದೇಶ ಜನರಿಗೆ ಕೊಟ್ಟಿದ್ದಾರೆ. ಉಪೇಂದ್ರ ನಟನೆ, ನಿರ್ದೇಶನಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ ಯುಐ ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಭಾರಿ ಮೊತ್ತಕ್ಕೆ ಉಪೇಂದ್ರ ನಿರ್ದೇಶನದ ‘ಯುಐ’ ವಿತರಣೆ ಹಕ್ಕು ಖರೀದಿಸಿದ ಕೆವಿಎನ್ ಪ್ರೊಡಕ್ಷನ್ಸ್

    ಭಾರಿ ಮೊತ್ತಕ್ಕೆ ಉಪೇಂದ್ರ ನಿರ್ದೇಶನದ ‘ಯುಐ’ ವಿತರಣೆ ಹಕ್ಕು ಖರೀದಿಸಿದ ಕೆವಿಎನ್ ಪ್ರೊಡಕ್ಷನ್ಸ್

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿದ ಸಿನಿಮಾಗಳಿಗೆ ಕ್ರೇಜ್ ಇರುತ್ತೋ ಇಲ್ಲವೋ. ಆದ್ರೆ, ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿದ್ದಾರೆ, ಅಂದ್ರೆ ಇಡೀ ಇಂಡಸ್ಟ್ರಿ ಆ ಸಿನಿಮಾಗಾಗಿ ಎದುರು ನೋಡುತ್ತಿರುತ್ತೆ ಅನ್ನೋ ಮಾತು ಸಹಜ. ಸಿನಿ ಪ್ರೇಮಿಗಳಂತೂ ಆ ಸಿನಿಮಾವನ್ನ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಈದೀಗ ಉಪೇಂದ್ರ ನಟಿಸಿ ನಿರ್ದೇಶಿಸಿರುವ `ಯುಐ’ ಚಿತ್ರದ (UI Cinema) ಕನ್ನಡದ ಹಂಚಿಕೆ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ.

    ಕನ್ನಡದ ಬಹುಕೋಟಿ ಬಜೆಟ್ ಚಿತ್ರ ಡಿಸೆಂಬರ್ 20ಕ್ಕೆ ಬಹುಭಾಷೆಯಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದ್ದು ಚಿತ್ರವನ್ನು ಲಹರಿ ಫಿಲಮ್ಸ್‌ (Lahari Films) ಹಾಗೂ ವೀನಸ್ ಎಂಟರ್ಟೈನರ್ಸ್‌ ಅಡಿಯಲ್ಲಿ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಇದನ್ನೂ ಓದಿ: ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

    ಚಿತ್ರದ ಇತರೆ ಭಾಷೆಯ ಹಂಚಿಕೆ ಹಕ್ಕುಗಳು ಈಗಾಗ್ಲೇ ಬಹುಕೋಟಿಗೆ ಸೇಲ್ ಆಗಿದೆ, ಮಲಯಾಳಂ ಹಂಚಿಕೆ ಹಕ್ಕನ್ನ ಸಿ.ಜೆ ರಾಯ್ ಪಡೆದುಕೊಂಡ್ರೆ, ತಮಿಳಿನಲ್ಲಿ ಎ.ಪಿ ಇಂಟರ್‌ನ್ಯಾಷನಲ್‌ ಫಿಲಮ್ಸ್‌ ಶನ್ ಹಂಚಿಕೆಯನ್ನ ತಮ್ಮದಾಗಿಸಿಕೊಂಡಿದೆ. ತೆಲುಗಿನಲ್ಲಿ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಸಂಸ್ಥೆ ಹಂಚಿಕೆ ಹಕ್ಕುಪಡೆದುಕೊಂಡಿದೆ. ಹಿಂದಿ ಭಾಷೆಯಲ್ಲೂ ಹಂಚಿಕೆಯ ಹಕ್ಕು ಮಾರಾಟವಾಗಿದ್ದು ನಾಳೆ (ನ.25) ಘೋಷಣೆಯಾಗಲಿದೆ.

    ಇದೀಗ ವಿವಿಧ ಭಾಷೆಗಳ ಬಿಗ್ ಬಜೆಟ್ ಸಿನಿಮಾಗಳ ಹಂಚಿಕೆ ಹಕ್ಕು ಪಡೆದು ಹೆಸರುವಾಸಿಯಾಗಿರುವ, ಸದ್ಯಕ್ಕೆ ಟಾಕ್ಸಿಕ್ ಚಿತ್ರ ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್‌ ವಿಶಾಲ ಕರ್ನಾಟಕಕ್ಕೆ `ಯುಐ’ ಹಂಚಿಕೆ ಮಾಡುವ ಹಕ್ಕನ್ನು ದಾಖಲೆ ಮೊತ್ತಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: ಬಿಗ್ ಬಿ ಮೊಮ್ಮಗನ ಜೊತೆ ಸುಹಾನಾ ಖಾನ್‌ ಫೋಟೋ ವೈರಲ್- ಡೇಟಿಂಗ್‌ ಬಗ್ಗೆ ಶುರುವಾಯ್ತು ಚರ್ಚೆ

  • ಅಕ್ಟೋಬರ್ ನಲ್ಲಿ ‘ಯುಐ’ ತೆರೆಗೆ: ವಿಳಂಬಕ್ಕೆ ಉಪ್ಪಿ ಉತ್ತರ

    ಅಕ್ಟೋಬರ್ ನಲ್ಲಿ ‘ಯುಐ’ ತೆರೆಗೆ: ವಿಳಂಬಕ್ಕೆ ಉಪ್ಪಿ ಉತ್ತರ

    ಸೆಪ್ಟೆಂಬರ್‌ 18 ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಹುಟ್ಟುಹಬ್ಬ. ಈ ದಿನದಂದು ಅವರು ನಟಿಸಿ, ನಿರ್ದೇಶಿಸಿರುವ ಬಹು ನಿರೀಕ್ಷಿತ “UI” ಚಿತ್ರದ ಬಗ್ಗೆ ಮಾತನಾಡಿ, ಹೆಚ್ಚಿನ ಮಾಹಿತಿ ನೀಡಿದ್ದಾರೆ‌. ಹುಟ್ಟುಹಬ್ಬದ (Birthday) ದಿನ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ “UI” ಚಿತ್ರದ  ಪತ್ರಿಕಾಗೋಷ್ಠಿಯಲ್ಲಿ  ನಟ, ನಿರ್ದೇಶಕ ಉಪೇಂದ್ರ, ನಿರ್ಮಾಪಕರಾದ ಜಿ.ಮನೋಹರನ್, ಕೆ.ಪಿ.ಶ್ರೀಕಾಂತ್,  ಸಹ ನಿರ್ಮಾಪಕರಾದ ನವೀನ್, ತುಳಸಿರಾಮ ನಾಯ್ಡು(ಲಹರಿ ವೇಲು), ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ “UI” ಚಿತ್ರದ ವಿಭಿನ್ನ ಪೋಸ್ಟರ್ ಸಹ ಬಿಡುಗಡೆಯಾಗಿದೆ.

    ನನ್ನ‌ ಹುಟ್ಟುಹಬ್ಬಕ್ಕೆ ಹಾರೈಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ಉಪೇಂದ್ರ ಅವರು, ಐದಾರು ಮದುವೆ ಆಗಬಹುದು. ಆದರೆ ಒಂದು ಚಿತ್ರ ನಿರ್ದೇಶನ ಮಾಡುವುದು ಅದಕ್ಕಿಂತ ಕಷ್ಟ. ಇನ್ನೂ ನಾನು ಬಹಳ ವರ್ಷಗಳ ನಂತರ ನಿರ್ದೇಶಿಸಿರುವ “UI” ಚಿತ್ರ ಬಿಡುಗಡೆಯ ಹಂತಕ್ಕೆ ತಲುಪಿದೆ. ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿರುವ ನಿರ್ಮಾಪಕರು ಅಕ್ಟೋಬರ್ ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ತಾಂತ್ರಿಕ(ಟೆಕ್ನಿಕಲ್) ಕಾರ್ಯಗಳು ಹೆಚ್ಚಾಗಿರುವುದು ಹಾಗೂ ಸಿನಿಮಾ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬರುತ್ತಿರುವುದರಿಂದ ಬಿಡುಗಡೆ ಸ್ವಲ್ಪ ವಿಳಂಬವಾಗುತ್ತಿದೆ. ಜನರು ಯಾವಗಲೂ ನನಗೆ ತಲೆಯಲ್ಲಿ ಹುಳ ಬಿಡುತ್ತೀರಾ ಎನ್ನುತ್ತಾರೆ. ಅದರೆ ಈ ಚಿತ್ರದಲ್ಲಿ ಹುಳ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಪ್ರೇಕ್ಷಕರು ನಮಗಿಂತ ತುಂಬಾ ಬುದ್ದಿವಂತರು. ಅವರ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ “UI” ಉತ್ತಮ ಚಿತ್ರವಾಗಿ ಬರಲಿದೆ ಎಂದರು.

    ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ನಿರ್ಮಾಪಕ ಜಿ.ಮನೋಹರನ್, ಇದು ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಬಿಡುಗಡೆ ಸ್ವಲ್ಪ ತಡವಾಯಿತು.ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದರು. 25 ವರ್ಷಗಳ ನನ್ನ ಸಿನಿ ಜರ್ನಿಯಲ್ಲಿ ಶಿವಣ್ಣ ಅವರ ಜೊತೆಗಿನ ಒಡನಾಟ ಹಾಗೂ ಉಪೇಂದ್ರ ಅವರು ನಮ್ಮ ಬ್ಯಾನರ್ ನ ಚಿತ್ರವನ್ನು ನಿರ್ದೇಶಿಸಿರುವುದು ನನಗೆ ತುಂಬಾ ಖುಷಿಕೊಟ್ಟ ವಿಚಾರ. ಎಲ್ಲರಂತೆ ನಾನು ಉಪೇಂದ್ರ ಅವರ ನಿರ್ದೇಶನಕ್ಕೆ ಅಭಿಮಾನಿ. ಈ ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರ ಅವರ ಅಭಿಮಾನಿಗಳಂತೆ ನನಗೂ ಇದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು ನಿರ್ಮಾಪಕ ಕೆ.ಪಿ.ಶ್ರೀಕಾಂತ್.

    ಸಹ ನಿರ್ಮಾಪಕರಾದ ನವೀನ್, ತುಳಸಿರಾಮ ನಾಯ್ಡು(ಲಹರಿ ವೇಲು), ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರು “UI” ಚಿತ್ರದ ಬಗ್ಗೆ ಮಾತನಾಡಿದರು.

  • `ಸೌಂಡ್ ಆಫ್ ಯುಐ’ ಉಪ್ಪಿಯ ಹಾಡಿನ ಹಬ್ಬ ಶುರು

    `ಸೌಂಡ್ ಆಫ್ ಯುಐ’ ಉಪ್ಪಿಯ ಹಾಡಿನ ಹಬ್ಬ ಶುರು

    ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಡೇಟ್ ಫಿಕ್ಸ್ ಆದ ಬೆನ್ನಲ್ಲೇ ಉಪೇಂದ್ರ ಅವರ `UI’ ಚಿತ್ರದ ಮೇಲಿನ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈಗ ಬರ್ತಿರೋ ಅಭಿಮಾನಿಗಳಿಗೆ ಇದೇ ಶುಭ ಶುಕ್ರವಾರ 6 ಗಂಟೆ 3 ನಿಮಿಷಕ್ಕೆ ಯುಐ ಜಗತ್ತಿನ ಬಿಜಿಎಂ ದರ್ಶನ ಮಾಡಿಸಲು ಸಜ್ಜಾಗಿದೆ ಟೀಮ್.

    ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ದೂರದ ಹಂಗೇರಿ ದೇಶದ ಬುಡಾಪೆಸ್ಟ್‌ನಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಿತ್ತು ಯುಐ ತಂಡ, ಇದೀಗ ಅಲ್ಲಿ ಕ್ರಿಯೇಟ್ ಆಗಿದ್ದ ಯುಐ ಸೌಂಡ್ ಮ್ಯಾಜಿಕ್ ಬಿಡಲು ತಯಾರಾಗಿದೆ. ಸೌಂಡ್ ಆಫ್ ಎಂದು ಬರೆದು ವಾಯಲಿನ್ ಫೋಟೋ ತೋರಿಸಿದ್ದಾರೆ.

    ವಯೊಲಿನ್‌ ಮ್ಯೂಸಿಕ್ ಝಲಕ್‌ನ್ನೇ ರಿಲೀಸ್ ಮಾಡಬಹುದಾ ಎಂಬ ನಿರೀಕ್ಷೆ ಇದೆ. ಆದರೆ ಇದು ಉಪ್ಪಿ ಸಿನಿಮಾ ಅಲ್ವೇ ಇಲ್ಲಿ ಏನ್‌ಬೇಕಾದ್ರೂ ಆಗಬಹುದು. ಆದರೆ ಈ ಬಾರಿ ಕಿವಿಗೆ ಇಂಪು ಕೊಡುವ ಸಂಗೀತ ಬರೋದಂತೂ ಫಿಕ್ಸ್.

    ಉಪೇಂದ್ರ ಬಹುವರ್ಷಗಳ ಬಳಿಕ ನಿರ್ದೇಶಿಸಿರುವ ಚಿತ್ರ `ಯುಐ’. ಲಹರಿ ಫಿಲ್ಮ್ಸ್‌ ಜೊತೆ ವೀನಸ್ ಎಂಟರ್‌ಪ್ರೈಸ್‌ ಜಂಟಿಯಾಗಿ ನಿರ್ಮಿಸಿರುವ ಚಿತ್ರ. `ಯುಐ’ ಮೂಲಕ ಸ್ಯಾಂಡಲ್‌ವುಡ್ ಇನ್ನೊಮ್ಮೆ ಜಗತ್ತಿನಾದ್ಯಂತ ವಿಜಯಪತಾಕೆ ಹಾರಿಸುವ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ರಿಯಲ್ ಸ್ಟಾರ್ ಫ್ಯಾನ್ಸ್ ಅಂತೂ ಯುಐ ಸಾಂಗ್ ಮಾಧುರ್ಯವನ್ನ ಕಿವಿಗೆ ಅಪ್ಪಳಿಸಿಕೊಳ್ಳಲು ಕಾದಿದ್ದಾರೆ.

  • ಏನು ಚಿಕ್ಕದು? ಯಾರದು ದೊಡ್ಡದು ಅಂತ ಹೇಳಲೇ ಇಲ್ಲ ಉಪೇಂದ್ರ

    ಏನು ಚಿಕ್ಕದು? ಯಾರದು ದೊಡ್ಡದು ಅಂತ ಹೇಳಲೇ ಇಲ್ಲ ಉಪೇಂದ್ರ

    ಅಂದುಕೊಂಡಂತೆ ಆಗಿದ್ದರೆ ಇಂದು ಉಪೇಂದ್ರ ನಟನೆಯ ಯುಐ ಸಿನಿಮಾದ ಚೀಪ್ ಚೀಪ್ ಸಾಂಗ್ ರಿಲೀಸ್ ಆಗಬೇಕಿತ್ತು. ಮೊನ್ನೆಯಷ್ಟೇ ಈ ಹಾಡಿನ ಸಣ್ಣ ತುಣುಕೊಂದನ್ನು ಹಾಕಿ ಸಾಕಷ್ಟು ಕುತೂಹಲ ಮೂಡಿಸಿದ್ದರು ಉಪೇಂದ್ರ. ಪೂರ್ಣ ಪ್ರಮಾಣದ ಹಾಡನ್ನು ಫೆಬ್ರವರಿ 26ರಂದು ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಆದರೆ, ರಿಲೀಸ್ ಮಾಡದೇ ಇರುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

    ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋ ಉಪ್ಪಿ, ‘ಚೀಪ್ ಚೀಪ್ ಏನದು? ದೊಡ್ದದು.. ಚಿಕ್ಕದು.. ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿ ಹೋಗುತ್ತದೆ. ಅದಾಗಿ ಹೋಗುತ್ತದೆ ಎಂದು ಏನು? ಏನು ಅದು? ಅದು ಏನಾಗುತ್ತದೆ? ಏನಾಗುತ್ತದೆ ಎಂಧು ಮಾರ್ಚ್ 4ನೇ ತಾರೀಕು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ಗೊತ್ತಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ ಉಪ್ಪಿ.

    ಈ ಹಿಂದೆ ಕ್ಷಮಿಸಿ.. ಹಾಡಿನ ಅರ್ಥವನ್ನು ನೀವು ಹೇಗೆ ಬೇಕಾದರೂ ಕಲ್ಪಿಸಿಕೊಳ್ಳಿ ಎನ್ನುತ್ತಾ “ಚೀಪ್.. ಚೀಪ್.. ಎಲ್ಲಾ ಚೀಪ್ ಚೀಪ್.. (Cheap Song Promo Kannada) ನಂದು ತುಂಬಾ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬಾ ಚಿಕ್ಕದು, ಇವನಿಗಿಂತ ಅವಂದು ದೊಡ್ದು..” ಥೋ.. ಇದು ಡಬಲ್ ಮೀನಿಂಗ್ ಹಾಡಾ ಅಥವಾ ಗೂಢಾರ್ಥ ಏನಾದರೂ ಇದೆಯಾ ಗೊತ್ತಿಲ್ಲ. ಒಟ್ನಲ್ಲಿ ನಟ, ನಿರ್ದೇಶಕ ಉಪೇಂದ್ರ ಪ್ರೇಮಿಗಳ ದಿನದಂದು ತಮ್ಮ ಯುಐ ಸಿನಿಮಾದ ಹಾಡಿನ ತುಣುಕೊಂದನ್ನು ಬಿಡುಗಡೆ ಮಾಡಿ ಮತ್ತೆ ಮೆದುಳಿಗೆ ಹುಳು ಬಿಟ್ಟಿದ್ದರು. ಹಾಡಿನ ಈ ಸಣ್ಣ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು.

    ಈ ಹಿಂದೆ ಯುಐ (UI) ಸಿನಿಮಾದ ಟೀಸರ್  ರಿಲೀಸ್ ಆಗಿತ್ತು. ಅದಕ್ಕೆ  ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಈ ಖುಷಿಯಲ್ಲಿ ಉಪ್ಪಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ವೀಕ್ಷಣೆಗೆ ಧನ್ಯವಾದಗಳನ್ನೂ ಹೇಳಿದ್ದರು.

     

    ಟೀಸರ್ ನೋಡಿದ ಉಪ್ಪಿ (Upendra) ಅಭಿಮಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಜೊತೆಗೆ ನೂರಾರು ಪ್ರಶ್ನೆಗಳನ್ನು ಉಪ್ಪಿಗೆ ಕೇಳಿದ್ದರು. ಯಾರೇ ಪ್ರಶ್ನೆ ಮಾಡಿದರೂ ಉಪೇಂದ್ರ ಮಾತ್ರ ಟೀಸರ್ ನೋಡಿ, ಅಲ್ಲೇ ಉತ್ತರವಿದೆ ಎನ್ನುವಂತೆ ಮೌನ ತಾಳಿದ್ದರು. ಇದೀಗ ಹಾಡಿನಿಂದಲೂ ಅಂಥದ್ದೇ ಉತ್ತರ ಬಂದಿದೆ. ವಿಚಿತ್ರವಾದ ಮಾತುಗಳನ್ನು ಹಾಕಿ ಮೌನಕ್ಕೆ ಜಾರಿದ್ದಾರೆ ಉಪೇಂದ್ರ.

  • ‘ಯುಐ’ ಟೀಸರ್  23 ಮಿಲಿಯನ್ ವೀಕ್ಷಣೆ: ಧನ್ಯವಾದ ಎಂದ ನಟ ಉಪೇಂದ್ರ

    ‘ಯುಐ’ ಟೀಸರ್ 23 ಮಿಲಿಯನ್ ವೀಕ್ಷಣೆ: ಧನ್ಯವಾದ ಎಂದ ನಟ ಉಪೇಂದ್ರ

    ಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ಯುಐ (UI) ಸಿನಿಮಾದ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಖುಷಿಯಲ್ಲಿ ಉಪ್ಪಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ವೀಕ್ಷಣೆಗೆ ಧನ್ಯವಾದಗಳನ್ನೂ ಹೇಳಿದ್ದಾರೆ.

    ಟೀಸರ್ ನೋಡಿದ ಉಪ್ಪಿ (Upendra) ಅಭಿಮಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ನೂರಾರು ಪ್ರಶ್ನೆಗಳನ್ನು ಉಪ್ಪಿಗೆ ಕೇಳಿದ್ದಾರೆ. ಯಾರೇ ಪ್ರಶ್ನೆ ಮಾಡಿದರೂ ಉಪೇಂದ್ರ ಮಾತ್ರ ಟೀಸರ್ ನೋಡಿ, ಅಲ್ಲೇ ಉತ್ತರವಿದೆ ಎನ್ನುವಂತೆ ಮೌನ ತಾಳಿದ್ದಾರೆ.

    ಮೊನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಆಗಮಿಸಿದ್ದರು. ಶಿವರಾಜ್ ಕುಮಾರ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ (Shivaraj Kumar) ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರು.

    ನಟ ಶಿವರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದರೆ, ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಸಾಥ್ ನೀಡಿದ್ದಾರೆ. ಡಿಜಿಟಲ್ ಮೂಲಕ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟೀಸರ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಲಿರೋ ಟೀಸರ್ ನಲ್ಲಿ ಉಪ್ಪಿ ಕಲಿಯುಗದ ಕಥೆ ಹೇಳ್ತಿರೋ  ಹಾಗಿದೆ.

     

    ಈ ಸಂದರ್ಭದಲ್ಲಿ ಮಾತನಾಡಿದ ಉಪ್ಪಿ, ಬರೀ ಸುಳ್ಳಿಗೆ ಮಾತ್ರ ಹೈಪ್ ಮಾಡಬೇಕು ಸಿನಿಮಾಗಲ್ಲ ಎಂದು ಹೇಳುವ ಮೂಲಕ ಚಿತ್ರದಲ್ಲಿ ಸಾಕಷ್ಟು ಸತ್ಯಗಳನ್ನು ಹೇಳಿದ್ದೇನೆ ಎನ್ನುವ ಸೂಚನೆ ನೀಡಿದ್ದಾರೆ. 8 ವರ್ಷಗಳ ಬಳಿಕ ‘ಉಪ್ಪಿ’ ಡೈರೆಕ್ಷನ್ ಮಾಡುತ್ತಿದ್ದು, ಕೆ.ಪಿ. ಶ್ರೀಕಾಂತ್, ನವೀನ್ ಮನೋಹರನ್ ಹಾಗೂ ಲಹರಿ ಫಿಲಂಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.

     

    ರಿಲೀಸ್ ಆಗಿರುವ ಟೀಸರ್ ಹೊಸ ಆಲೋಚನೆಯನ್ನು ಬಿತ್ತಲಿದ್ದು, ಅದ್ಧೂರಿ ಮೇಕಿಂಗ್ ಕಾಣಿಸುತ್ತದೆ. ಉಪೇಂದ್ರ ಎಂಟ್ರಿ ಮತ್ತು ಸಾಮ್ರಾಜ್ಯಕ್ಕೆ ನುಗ್ಗಿದ ದೃಶ್ಯಗಳನ್ನು ನೋಡುತ್ತಿದ್ದರೆ, ಉಪೇಂದ್ರ ಮತ್ತೊಂದು ಮೆದುಳಿಗೆ ಕೈ ಹಾಕುವಂತಹ ಸಿನಿಮಾವನ್ನೇ ಮಾಡಿದ್ದಾರೆ ಎನ್ನುವುದು ಸತ್ಯ.

  • ಯುಐ ‘ಟೀಸರ್’ಗೆ ಸಖತ್ ರೆಸ್ಪಾನ್ಸ್: ಉಪ್ಪಿಗೆ ಪ್ರಶ್ನೆಗಳ ಸುರಿಮಳೆ

    ಯುಐ ‘ಟೀಸರ್’ಗೆ ಸಖತ್ ರೆಸ್ಪಾನ್ಸ್: ಉಪ್ಪಿಗೆ ಪ್ರಶ್ನೆಗಳ ಸುರಿಮಳೆ

    ನಿನ್ನೆಯಷ್ಟೇ ಉಪೇಂದ್ರ ನಟನೆಯ ‘ಯುಐ’ (UI) ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಈ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್ ನೋಡಿದ ಉಪ್ಪಿ (Upendra) ಅಭಿಮಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ನೂರಾರು ಪ್ರಶ್ನೆಗಳನ್ನು ಉಪ್ಪಿಗೆ ಕೇಳಿದ್ದಾರೆ. ಯಾರೇ ಪ್ರಶ್ನೆ ಮಾಡಿದರೂ ಉಪೇಂದ್ರ ಮಾತ್ರ ಟೀಸರ್ ನೋಡಿ, ಅಲ್ಲೇ ಉತ್ತರವಿದೆ ಎನ್ನುವಂತೆ ಮೌನ ತಾಳಿದ್ದಾರೆ.

    ನಿನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಆಗಮಿಸಿದ್ದರು. ಶಿವರಾಜ್ ಕುಮಾರ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ (Shivaraj Kumar) ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರು.

    ನಟ ಶಿವರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದರೆ, ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಸಾಥ್ ನೀಡಿದ್ದಾರೆ. ಡಿಜಿಟಲ್ ಮೂಲಕ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟೀಸರ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಲಿರೋ ಟೀಸರ್ ನಲ್ಲಿ ಉಪ್ಪಿ ಕಲಿಯುಗದ ಕಥೆ ಹೇಳ್ತಿರೋ  ಹಾಗಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಉಪ್ಪಿ, ಬರೀ ಸುಳ್ಳಿಗೆ ಮಾತ್ರ ಹೈಪ್ ಮಾಡಬೇಕು ಸಿನಿಮಾಗಲ್ಲ ಎಂದು ಹೇಳುವ ಮೂಲಕ ಚಿತ್ರದಲ್ಲಿ ಸಾಕಷ್ಟು ಸತ್ಯಗಳನ್ನು ಹೇಳಿದ್ದೇನೆ ಎನ್ನುವ ಸೂಚನೆ ನೀಡಿದ್ದಾರೆ. 8 ವರ್ಷಗಳ ಬಳಿಕ ‘ಉಪ್ಪಿ’ ಡೈರೆಕ್ಷನ್ ಮಾಡುತ್ತಿದ್ದು, ಕೆ.ಪಿ. ಶ್ರೀಕಾಂತ್, ನವೀನ್ ಮನೋಹರನ್ ಹಾಗೂ ಲಹರಿ ಫಿಲಂಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.

     

    ರಿಲೀಸ್ ಆಗಿರುವ ಟೀಸರ್ ಹೊಸ ಆಲೋಚನೆಯನ್ನು ಬಿತ್ತಲಿದ್ದು, ಅದ್ಧೂರಿ ಮೇಕಿಂಗ್ ಕಾಣಿಸುತ್ತದೆ. ಉಪೇಂದ್ರ ಎಂಟ್ರಿ ಮತ್ತು ಸಾಮ್ರಾಜ್ಯಕ್ಕೆ ನುಗ್ಗಿದ ದೃಶ್ಯಗಳನ್ನು ನೋಡುತ್ತಿದ್ದರೆ, ಉಪೇಂದ್ರ ಮತ್ತೊಂದು ಮೆದುಳಿಗೆ ಕೈ ಹಾಕುವಂತಹ ಸಿನಿಮಾವನ್ನೇ ಮಾಡಿದ್ದಾರೆ ಎನ್ನುವುದು ಸತ್ಯ.

  • ‘ಯುಐ’ ಟೀಸರ್ ರಿಲೀಸ್: ಕಲಿಯುಗದ ಕಥೆ ಹೇಳ್ತಿದ್ದಾರೆ ಉಪ್ಪಿ

    ‘ಯುಐ’ ಟೀಸರ್ ರಿಲೀಸ್: ಕಲಿಯುಗದ ಕಥೆ ಹೇಳ್ತಿದ್ದಾರೆ ಉಪ್ಪಿ

    ಪೇಂದ್ರ (Upendra) ನಿರ್ದೇಶಿಸಿ, ನಟಿಸುತ್ತಿರುವ ಯುಐ (UI) ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಆಗಮಿಸಿದ್ದಾರೆ. ಶಿವರಾಜ್ ಕುಮಾರ್ (Shivaraj Kumar) ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದಾರೆ.

    ನಟ ಶಿವರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದರೆ, ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಸಾಥ್ ನೀಡಿದ್ದಾರೆ. ಡಿಜಿಟಲ್ ಮೂಲಕ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟೀಸರ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಲಿರೋ ಟೀಸರ್ ನಲ್ಲಿ ಉಪ್ಪಿ ಕಲಿಯುಗದ ಕಥೆ ಹೇಳ್ತಿರೋ  ಹಾಗಿದೆ.

    ಈ ಸಂದರ್ಭದಲ್ಲಿ ಮಾತನಾಡಿದ ಉಪ್ಪಿ, ಬರೀ ಸುಳ್ಳಿಗೆ ಮಾತ್ರ ಹೈಪ್ ಮಾಡಬೇಕು ಸಿನಿಮಾಗಲ್ಲ ಎಂದು ಹೇಳುವ ಮೂಲಕ ಚಿತ್ರದಲ್ಲಿ ಸಾಕಷ್ಟು ಸತ್ಯಗಳನ್ನು ಹೇಳಿದ್ದೇನೆ ಎನ್ನುವ ಸೂಚನೆ ನೀಡಿದ್ದಾರೆ. 8 ವರ್ಷಗಳ ಬಳಿಕ ‘ಉಪ್ಪಿ’ ಡೈರೆಕ್ಷನ್ ಮಾಡುತ್ತಿದ್ದು, ಕೆ.ಪಿ. ಶ್ರೀಕಾಂತ್, ನವೀನ್ ಮನೋಹರನ್ ಹಾಗೂ ಲಹರಿ ಫಿಲಂಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.

     

    ರಿಲೀಸ್ ಆಗಿರುವ ಟೀಸರ್ ಹೊಸ ಆಲೋಚನೆಯನ್ನು ಬಿತ್ತಲಿದ್ದು, ಅದ್ಧೂರಿ ಮೇಕಿಂಗ್ ಕಾಣಿಸುತ್ತದೆ. ಉಪೇಂದ್ರ ಎಂಟ್ರಿ ಮತ್ತು ಸಾಮ್ರಾಜ್ಯಕ್ಕೆ ನುಗ್ಗಿದ ದೃಶ್ಯಗಳನ್ನು ನೋಡುತ್ತಿದ್ದರೆ, ಉಪೇಂದ್ರ ಮತ್ತೊಂದು ಮೆದುಳಿಗೆ ಕೈ ಹಾಕುವಂತಹ ಸಿನಿಮಾವನ್ನೇ ಮಾಡಿದ್ದಾರೆ ಎನ್ನುವುದು ಸತ್ಯ.

  • ‘ಯುಐ’ ಅಪ್ ಡೇಟ್: ಡೇಟ್ ಹೇಳಿ ಅಂತ ಮತ್ತೆ ತಲೆಗೆ ಹುಳು ಬಿಟ್ಟ ಉಪ್ಪಿ

    ‘ಯುಐ’ ಅಪ್ ಡೇಟ್: ಡೇಟ್ ಹೇಳಿ ಅಂತ ಮತ್ತೆ ತಲೆಗೆ ಹುಳು ಬಿಟ್ಟ ಉಪ್ಪಿ

    ಹೊಸ ವರ್ಷದಂದು ಯುಐ (UI) ಕುರಿತಂತೆ ಹೊಸ ಅಪ್ ಡೇಟ್ ನೀಡುವುದಾಗಿ ಉಪ್ಪಿ (Upendra) ಹೇಳಿಕೊಂಡಿದ್ದರು. ಅದರಂತೆ ಇವತ್ತು ಸಣ್ಣದೊಂದು ವಿಡಿಯೋ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಓಡುತ್ತಿರುವ ಕುದುರೆ, ಕುದುರೆ ಕಾಲಿನ ಲಾಳದಿಂದ ಹೊರಬರುವ ಬೆಂಕಿ, ಆ ನಂತರ ದಿನಾಂಕವೊಂದು ರಿವೀಲ್ ಆಗುತ್ತದೆ. ಅಲ್ಲಿ ದಿನಾಂಕ ಬಿಟ್ಟು, ತಿಂಗಳು ಮತ್ತು ವರ್ಷವನ್ನು ಹಾಕಿದ್ದಾರೆ. ದಿನಾಂಕ ಗುರುತಿಸಿ, ಇವೆಂಟ್ ನಲ್ಲಿ ಭಾಗಿಯಾಗಲು ಪಾಸ್ ಪಡೆಯಿರಿ ಎಂದಿದ್ದಾರೆ.

    ದಿನಾಂಕ ಗ್ಯಾಪ್ ಬಿಟ್ಟಿರೋದು ಸಿನಿಮಾ ರಿಲೀಸ್ (Release) ದಿನಾಂಕ ಇರಬಹುದಾ ಅಥವಾ ಇವೆಂಟ್ ದಿನಾಂಕ ಇರಬಹುದಾ ಗೊತ್ತಿಲ್ಲ. ಒಟ್ಟಿನಲ್ಲಿ ದಿನಾಂಕ ಡಿಕೋಡ್ ಮಾಡಿ ಎಂದಷ್ಟೇ ಹೇಳಿದ್ದಾರೆ. ಅದು ರಿಲೀಸ್ ದಿನಾಂಕ ಆಗಿದ್ದರೆ, ಇದೇ ತಿಂಗಳು ಯುಐ ಸಿನಿಮಾ ರಿಲೀಸ್ ಆಗಲಿದೆ. ಯಾವ ದಿನದಂದು ಅನ್ನೋದು ಮಾತ್ರ ರಹಸ್ಯವಾಗಿ ಉಳಿದುಕೊಂಡಿದೆ.

    ಉಪ್ಪಿಇದೊಂದು ಹೆಸರು ಕನ್ನಡಿಗರಿಗೆ ಮಾತ್ರ ಅಲ್ಲ, ದಕ್ಷಿಣ ಭಾರತದ ಜನರಲ್ಲಿ ಕಿಚ್ಚು ಮೂಡಿಸುತ್ತದೆ. ಹುಚ್ಚು ಹಿಡಿಸುತ್ತದೆ. ಅದರಲ್ಲೂ ಇವರೇ ನಿರ್ದೇಶಕ ಅದರಂತೂ ಕೇಳಬೇಕೆ? ಇಲ್ಲಿವರೆಗೆ ಉಪ್ಪಿ ನಿರ್ದೇಶನ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ, ಈ ಯುಐ ಇದೆಯಲ್ಲ ಅದು ಭೂಮಿ ತೂಕ. ಭರ್ತಿ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಹಲವಾರು ಗ್ರೇಟ್ ಸ್ಪೆಶಾಲಿಟಿಗಳಿವೆ. ಭಾರತದಲ್ಲೇ ಮೊದಲ ಬಾರಿ ಎನ್ನುವಂಥ ವಿಷಯ ಹಾಗೂ ತಾಂತ್ರಿಕ ಕೆಲಸಗಳಿವೆ. ಅದಕ್ಕಾಗಿಯೇ ಬೆಂಗಳೂರು ಸಮೀಪ ಹತ್ತು ಎಕರೆ ಜಾಗದಲ್ಲಿ ಹಿಂದೆಂದೂ ಕಾಣದಂಥ ಸೆಟ್ ಹಾಕಿ ಶೂಟ್ ಮಾಡಲಾಗಿದೆ.

    ಉಪ್ಪಿ ನಿರ್ದೇಶನ ಅಂದರೆ ಅಲ್ಲಿ ಗ್ರಾಫಿಕ್ಸ್ ಗೆ ಕೆಲಸ ಅಷ್ಟೇನೂ ಇರುತ್ತಿರಲಿಲ್ಲ. ಆದರೆ ಈ ಬಾರಿ ಉಪ್ಪಿ ಹಳೇ ಸ್ಟೈಲ್ ಮರೆತು ಅತ್ಯದ್ಭುತ ನಯಾ ತಂತ್ರಜ್ಞಾನಕ್ಕೆ ಕೈ ಹಾಕಿದ್ದಾರೆ. ಕಂಪ್ಯೂಟರೈಸ್ಡ್ ಕ್ಯಾಮೆರಾ ಬಳಸುತ್ತಿದ್ದಾರೆ. ಮೊಕೊ ಬೋಟ್ ಹೆಸರಿನ ಈ ಕ್ಯಾಮೆರಾದಲ್ಲಿ ಇಲ್ಲಿವರೆಗೆ ಭಾರತದ ಯಾವುದೇ ಸಿನಿಮಾ ಚಿತ್ರೀಕರಣ ಮಾಡಿಲ್ಲ. ಅದರ ಜೊತೆಗೆ ವರ್ಚುವಲ್ ಗ್ರಾಫಿಕ್ಸ್ ಕೂಡ ಕೆಲಸ ಮಾಡಲಿದೆ. ಕೆಲವೊಂದು ತಾಂತ್ರಿಕ ವಿಷಯ ಈಗ ಅರ್ಥವಾಗುವುದಿಲ್ಲ. ಅದನ್ನು ಸಿನಿಮಾ ನೋಡಿದ ಮೇಲೆಯೇ ಅನುಭವಿಸಬೇಕು. ಈ ಹೊಸ ತಂತ್ರಜ್ಞಾನಕ್ಕೆ ನಿರ್ಮಾಪಕರಲ್ಲಿ ಒಬ್ಬರಾದ ನವೀನ್ ಮನೋಹರ್ ನಾಯ್ಡು ಬರೀ ಹೆಗಲು ಕೊಟ್ಟಿಲ್ಲ ಜೀವವನ್ನೇ ತೇಯುತ್ತಿದ್ದಾರೆ. ಉಪ್ಪಿ ಇದಕ್ಕೆ ಹೆಮ್ಮೆ ಪಡುತ್ತಾರೆ.

    `ಇದೊಂದು ಗ್ಲೋಬಲ್ ಸಿನಿಮಾ’ ಎನ್ನುತ್ತಾರೆ ಉಪ್ಪಿ. ಯಾರೇ ನೋಡಿದರೂ ಇದನ್ನು ಒಪ್ಪಿಕೊಳ್ಳಬೇಕು. ಹಾಗಿರುತ್ತದೆ ಕತೆ ಹಾಗೂ ಮೇಕಿಂಗ್ ಎನ್ನುವುದು ಇವರ ಷರಾ. ಇದುವರೆಗೆ ಮನಸಿಗೆ ಸಂಬಂಧಿಸಿದ ವಿಷಯ ಹೆಣೆಯುತ್ತಿದ್ದ ಉಪ್ಪಿ ಈ ಬಾರಿಯೂ ಹಾಗೆಯೇ ಮಾಡಿರುತ್ತಾರೆ. ಆದರೆ ವಿಷಯ ಮಾತ್ರ ಇಡೀ ವಿಶ್ವಕ್ಕೆ ಮೆಚ್ಚುಗೆಯಾಗುತ್ತದೆ ಎನ್ನುವುದು ಇವರ ನಂಬಿಕೆ. ಇದರ ಜೊತೆಗೆ ಅಪ್‌ಡೇಟ್ ತಂತ್ರಜ್ಞಾನವನ್ನು ದಿಕ್ಕೆಡಿಸುವಂತೆ ಬಳಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಹಗಲು ರಾತ್ರಿ ಬೆವರು ಸುರಿಸುತ್ತಿದ್ದಾರೆ. ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಬಿಡುಗಡೆ ಬಗ್ಗೆ ಸದ್ಯಕ್ಕೆ ಮಾತಾಡೋದು ಬೇಡ.

     

    ಅದ್ಭುತ ತಂಡವನ್ನು ಕಟ್ಟಿಕೊಂಡು ಉಪ್ಪಿ ಹೊಸ ಯುದ್ಧಕ್ಕೆ ಸಜ್ಜಾಗಿದ್ದಾರೆ. ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೇ ಇದನ್ನು ಮಾಡುತ್ತಿದ್ಧಾರೆ ಎಂದು ತಿಳಿಯಬೇಡಿ. ಈಗ ಆಗಬೇಕಿತ್ತು. ಆಗುತ್ತಿದೆ ಅಷ್ಟೇ. ಇದಕ್ಕೆ ಲಹರಿ ಆಡಿಯೋ ಸಂಸ್ಥೆ ಮಾಲೀಕರ ಮಗ ಮನೋಹರ್ ನಾಯ್ಡು ಮಕ್ಕಳಾದ ಚಂದ್ರು, ನವೀನ್ ಹಾಗೂ ಸಲಗ ಕೆ.ಪಿ.ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ. ಎಲ್ಲರೂ ಒಂದೊಂದೆ ಕೆಲಸವನ್ನು ಹಂಚಿಕೊಂಡಿದ್ದಾರೆ.

  • ಉಪೇಂದ್ರ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು: ಉಪ್ಪಿ ಕೊಟ್ಟ ಭರವಸೆ ಏನು?

    ಉಪೇಂದ್ರ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು: ಉಪ್ಪಿ ಕೊಟ್ಟ ಭರವಸೆ ಏನು?

    ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಮನೆಮುಂದೆ ಅಭಿಮಾನಿಗಳು ಏಕಾಏಕಿ ಜಮಾಯಿಸಿದ್ದಾರೆ. ಅಭಿಮಾನಿಗಳ ಈ ಜಮಾವಣೆಗೆ ಸ್ವತಃ ಉಪ್ಪಿನೇ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ಕೇಳಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಟೀಸರ್ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

    ಹೌದು, ಯುಐ (UI) ಸಿನಿಮಾದ ಟೀಸರ್ (Teaser) ರಿಲೀಸ್ ಮಾಡುವುದಕ್ಕಾಗಿ ಚಿತ್ರತಂಡ ಪ್ರಮೋಷನಲ್ ವಿಡಿಯೋವೊಂದನ್ನು ಶೂಟ್ ಮಾಡಿದ್ದು, ಈ ವಿಡಿಯೋದಲ್ಲಿ ಅಭಿಮಾನಿಗಳು ಉಪೇಂದ್ರ ಅವರ ಮನೆ ಮುಂದೆ ಬರೋದು, ತಮಗೆ ಟೀಸರ್ ಬೇಕೇ ಬೇಕು ಎಂದು ಕೇಳುವುದು, ಅದಕ್ಕೆ ಉಪೇಂದ್ರ ಕೌಂಟರ್ ಕೊಡುವುದು, ದೂರದಿಂದಲೇ ಅದನ್ನು ನಿರ್ಮಾಪಕರು ನೋಡುವುದು ಹೀಗೆ ನಾನಾ ದೃಶ್ಯಗಳ ಮೂಲಕ ಟೀಸರ್ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಇದನ್ನೂ ಓದಿ:Gadar 2 ಸಕ್ಸಸ್, ರಾಜಕೀಯಕ್ಕೆ ವಿದಾಯ ಹೇಳ್ತಾರಾ ಸನ್ನಿ ಡಿಯೋಲ್?

    ಹೌದು, ಸೆಪ್ಟೆಂಬರ್ 18ರಂದು ಉಪೇಂದ್ರ ಹುಟ್ಟು ಹಬ್ಬ (Birthday). ಅಂದೇ ಯುಐ ಟೀಸರ್ ರಿಲೀಸ್ ಮಾಡುವುದಾಗಿ ಉಪೇಂದ್ರ ಘೋಷಣೆ ಮಾಡಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ರಿಲೀಸ್ ಮಾಡುವುದಾಗಿ ಉಪೇಂದ್ರ ತಿಳಿಸಿದ್ದಾರೆ.

     

    ನಾನಾ ಕಾರಣಗಳಿಂದಾಗಿ ಉಪೇಂದ್ರ ನಿರ್ದೇಶನದ ಯುಐ ಸಿನಿಮಾ ಕುತೂಹಲ ಮೂಡಿಸಿದೆ. ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ಜೊತೆಗೆ ಹೊಸ ಬಗೆಯ ಕಥೆಯನ್ನು ಈ ಸಿನಿಮಾಗಾಗಿ ಹುಡುಕಿದ್ದಾರಂತೆ. ಹೀಗಾಗಿ ಯುಐ ಸಿನಿಮಾ ಸಾಕಷ್ಟು ನಿರೀಕ್ಷೆ ಹಾಗೂ ಕ್ಯೂರಿಯಾಸಿಟಿ ಮೂಡಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]