Tag: Lahari

  • 19.20.21 ಸಿನಿಮಾ ಟೀಸರ್ ರಿಲೀಸ್ : ನಿರೀಕ್ಷೆ ಹೆಚ್ಚಿಸಿದ ನಿರ್ದೇಶಕ ಮಂಸೋರೆ

    19.20.21 ಸಿನಿಮಾ ಟೀಸರ್ ರಿಲೀಸ್ : ನಿರೀಕ್ಷೆ ಹೆಚ್ಚಿಸಿದ ನಿರ್ದೇಶಕ ಮಂಸೋರೆ

    ನಿನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ’19.20.21’ ಹೆಸರಿನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಮಾಜದ ಮತ್ತೊಂದು ಮುಖವನ್ನು ಅನಾವರಣಗೊಳಿಸಿರುವ ಈ ಟೀಸರ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಮತ್ತೊಂದು ಭರವಸೆಯ ಸಿನಿಮಾ ಎಂದು ಹಲವರು ಹೊಗಳಿದ್ದಾರೆ. ಸಿನಿಮಾಟೋಗ್ರಫಿ, ಮ್ಯೂಸಿಕ್, ಪಾತ್ರಗಳ ಆಯ್ಕೆ ಹಾಗೂ ಚಿತ್ರಕಥೆಯ ತಾಕತ್ತಿನ ಬಗ್ಗೆ ಚರ್ಚೆಗಳು ನಡೆದಿವೆ.

    ನಾಗರೀಕ ಸಮಾಜದಲ್ಲಿನ ಅನಾಗರೀಕ ವರ್ತನೆಗೆ ಕನ್ನಡಿ ಹಿಡಿದಂತಿದೆ ಟೀಸರ್. ಶೋಷಿತ ಸಮುದಾಯದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರಾ ನಿರ್ದೇಶಕರು ಎನ್ನುವ ಪ್ರಶ್ನೆಯನ್ನೂ ಟೀಸರ್ ಮೂಡಿಸುತ್ತದೆ. ನಿರ್ದೇಶಕ ಮಂಸೋರೆ ಪ್ರತಿಭಾವಂತ ಮತ್ತು ಜೀವಪರ ನಿರ್ದೇಶಕರು. ಹಾಗಾಗಿ ಈವರೆಗೂ ಹೇಳದೇ ಇರುವಂತಹ ಘಟನೆಯನ್ನು ಈ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    75ನೇ ಸ್ವಾತಂತ್ರ ದಿನೋತ್ಸವ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು ನಿರ್ದೇಶಕರು. ವ್ಯಕ್ತಿಯೊಬ್ಬರ ಬಾಯಿಗೆ ಬಟ್ಟೆ ಕಟ್ಟಿ, ಬೆನ್ನಿನಲ್ಲಿ ರಕ್ತ ಸುರಿಯುವಂತಹ ಆ ಪೋಸ್ಟರ್ ಅನೇಕ ವಿಷಯಗಳನ್ನು ಹೇಳುವಂತಿತ್ತು. 2018 ರಿಂದ 2022ರ ತನಕ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾದ 4690ಜನರಲ್ಲಿ ಕೇವಲ 149 ಮಂದಿ ಮಾತ್ರ ಅಪರಾಧಿಗಳು ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದರು. ಹೀಗಾಗಿ ಇದೊಂದು ವಿಶೇಷ ಸಿನಿಮಾ ಎನ್ನುವುದು ಖಾತರಿ ಆಗಿತ್ತು. ಇದನ್ನೂ ಓದಿ: ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿ

    ಸಿನಿಮಾದ ತಾರಾ ಬಳಗವೇ ವಿಶೇಷವಾಗಿದೆ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ, ಬಾಲಾಜಿ ಮನೋಹರ್, ಕೃಷ್ಣ ಹೆಬ್ಬಾಳೆ, ಸಂಪತ್ ಮೈತ್ರೇಯಾ, ಶೃಂಗ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ನಾತಿಚರಾಮಿ ಸಿನಿಮಾ ನಂತರ ಮತ್ತೆ ಈ ಚಿತ್ರಕ್ಕೆ ಬಿಂದು ಮಾಲಿನ ಸಂಗೀತ ನೀಡಿದ್ದಾರೆ. ನಾತಿಚರಾಮಿ ಚಿತ್ರಕ್ಕಾಗಿ ಬಿಂದು ಮಾಲಿನಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು.

    ನಿರ್ದೇಶಕರ ಜೊತೆಗೂಡಿ ವೀರೇಂದ್ರ ಮಲ್ಲಣ್ಣ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು, ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ವಿದೆ. ಶಿವು ಕುಮಾರ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ದೇವರಾಜ್ ಆರ್ ನಿರ್ಮಾಪಕರು.  ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದ್ದು, ಬಿಡುಗಡೆಗೆ ಸಿದ‍್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಳೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಹೊಸ ಸಿನಿಮಾದ ಟೀಸರ್ ರಿಲೀಸ್

    ನಾಳೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಹೊಸ ಸಿನಿಮಾದ ಟೀಸರ್ ರಿಲೀಸ್

    ನ್ನಡ ಸಿನಿಮಾ ರಂಗದ ಪ್ರತಿಭಾವಂತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪಡೆದ ಮಂಸೋರೆ ಇದೀಗ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾರೆ. 19.20.21 ಹೆಸರಿನಲ್ಲಿ ಮೂಡಿ ಬಂದಿರುವ ಈ ಚಿತ್ರದ ಟೀಸರ್ ನಾಳೆ ಸಂಜೆ 6 ಗಂಟೆಗೆ ಲಹರಿ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗುತ್ತಿದೆ. ಟೈಟಲ್ ನಿಂದಾಗಿಯೇ ಸಖತ್ ಕುತೂಹಲ ಮೂಡಿಸಿರುವ ಈ ಟೀಸರ್ ನಲ್ಲಿ ಹತ್ತು ಹಲವು ಚರ್ಚಿಸಬೇಕಾದ ವಿಷಯಗಳು ಇರಲಿವೆ ಎನ್ನಲಾಗುತ್ತಿದೆ.

    75ನೇ ಸ್ವಾತಂತ್ರ ದಿನೋತ್ಸವ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು ನಿರ್ದೇಶಕರು. ವ್ಯಕ್ತಿಯೊಬ್ಬರ ಬಾಯಿಗೆ ಬಟ್ಟೆ ಕಟ್ಟಿ, ಬೆನ್ನಿನಲ್ಲಿ ರಕ್ತ ಸುರಿಯುವಂತಹ ಆ ಪೋಸ್ಟರ್ ಅನೇಕ ವಿಷಯಗಳನ್ನು ಹೇಳುವಂತಿತ್ತು. 2018 ರಿಂದ 2022ರ ತನಕ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾದ 4690ಜನರಲ್ಲಿ ಕೇವಲ 149 ಮಂದಿ ಮಾತ್ರ ಅಪರಾಧಿಗಳು ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದರು. ಹೀಗಾಗಿ ಇದೊಂದು ವಿಶೇಷ ಸಿನಿಮಾ ಎನ್ನುವುದು ಖಾತರಿ ಆಗಿತ್ತು.

    ಸಿನಿಮಾದ ತಾರಾ ಬಳಗವೇ ವಿಶೇಷವಾಗಿದೆ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ, ಬಾಲಾಜಿ ಮನೋಹರ್, ಕೃಷ್ಣ ಹೆಬ್ಬಾಳೆ, ಸಂಪತ್ ಮೈತ್ರೇಯಾ, ಶೃಂಗ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ನಾತಿಚರಾಮಿ ಸಿನಿಮಾ ನಂತರ ಮತ್ತೆ ಈ ಚಿತ್ರಕ್ಕೆ ಬಿಂದು ಮಾಲಿನ ಸಂಗೀತ ನೀಡಿದ್ದಾರೆ. ನಾತಿಚರಾಮಿ ಚಿತ್ರಕ್ಕಾಗಿ ಬಿಂದು ಮಾಲಿನಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು. ಇದನ್ನೂ ಓದಿ: ವಿಜಯ್ ಕಿರಗಂದೂರು ಸೇರಿದಂತೆ ಮೂವರಿಗೆ ವಿಶೇಷ ಪ್ರಶಸ್ತಿ

    ನಿರ್ದೇಶಕರ ಜೊತೆಗೂಡಿ ವೀರೇಂದ್ರ ಮಲ್ಲಣ್ಣ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು, ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ವಿದೆ. ಶಿವು ಕುಮಾರ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ದೇವರಾಜ್ ಆರ್ ನಿರ್ಮಾಪಕರು.  ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದ್ದು, ಬಿಡುಗಡೆಗೆ ಸಿದ‍್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪದವಿಪೂರ್ವ’ ಹಾಡುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿದ ಲಹರಿ ಸಂಸ್ಥೆ

    ‘ಪದವಿಪೂರ್ವ’ ಹಾಡುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿದ ಲಹರಿ ಸಂಸ್ಥೆ

    ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ ಜಂಟಿಯಾಗಿ ನಿರ್ಮಿಸಿ ಭಟ್ಟರ ಬಳಗದವರೇ ಆದ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ‘ಪದವಿಪೂರ್ವ’ ಚಿತ್ರತಂಡದಿಂದ ಎರಡೆರಡು ಖುಷಿ ಸುದ್ದಿಗಳು ಒಮ್ಮೆಲೇ ಹೊರಬಿದ್ದಿವೆ. ಮೊದಲನೇ ಖುಷಿ ಸುದ್ದಿ ‘ಪದವಿಪೂರ್ವ’ ಚಿತ್ರದ ಆಡಿಯೋ ರೈಟ್ಸನ್ನು ಲಹರಿ ಮ್ಯೂಸಿಕ್ ಸಂಸ್ಥೆ ಭರ್ಜರಿ ಮೊತ್ತ ನೀಡಿ ಖರೀದಿ ಮಾಡಿದೆ ಎಂಬುದು. ಹೌದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆಗೆ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗಲೇ ಚಿತ್ರದ ಹಾಡುಗಳ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮನೆ ಮಾಡಿತ್ತು. ಈಗ ನಿರೀಕ್ಷೆಗೆ ತಕ್ಕಂತ ಪದವಿಪೂರ್ವ ಚಿತ್ರದ ಹಾಡುಗಳ ಹಕ್ಕನ್ನು ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ‘ಲಹರಿ ಮ್ಯೂಸಿಕ್’ ತನ್ನ ತಕ್ಕೆಗೆ ಹಾಕಿಕೊಂಡಿದೆ.

    ಇನ್ನು ಎರಡನೆಯ ಖುಷಿ ಸುದ್ದಿಯೂ ಮೊದಲನೇ ಖುಷಿ ಸುದ್ದಿಯ ಮುಂದುವರಿದ ಭಾಗವೇ ಆಗಿದೆ. ಅದೇನೆಂದರೆ, ಪದವಿಪೂರ್ವ ಚಿತ್ರದ ಸುಂದರ ಗೀತೆಗಳಲ್ಲಿ ಒಂದಾದ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎಂಬ ಹಾಡು ಫ್ರೆಂಡ್‌ಶಿಪ್ ಡೇ ಪ್ರಯುಕ್ತ ಇದೇ ಆಗಸ್ಟ್ 06 ರಂದು ಸಂಜೆ 04:32ಕ್ಕೆ ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಯೋಗರಾಜ್ ಭಟ್ ಸಾಹಿತ್ಯವಿರುವ ಈ ಹಾಡಿಗೆ ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡದಿಂದ ಮೇಘಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಗಿಫ್ಟ್

    ಶೂಟಿಂಗ್ ಶುರುವಾದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುವಂತೆ ಮಾಡುತ್ತಿರುವ ಪದವಿಪೂರ್ವ ಚಿತ್ರ, ಸ್ನೇಹದ ಮಹತ್ವ ಸಾರುವ  ತಮ್ಮ ಸಿನಿಮಾದ ಪ್ರಪ್ರಥಮ ಹಾಡನ್ನು ಫ್ರೆಂಡ್‌ಶಿಪ್‌ ಡೇ ಸಲುವಾಗಿ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ವಿಶೇಷ.   ಚಿತ್ರದ ನಾಯಕನಾಗಿ ಪೃಥ್ವಿ ಶಾಮನೂರು ಅಭಿನಯಿಸುತ್ತಿದ್ದು ನಾಯಕಿಯರಾಗಿ ಅಂಜಲಿ ಅನೀಶ್ ಹಾಗು ಯಶ ಶಿವಕುಮಾರ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಚಿತ್ರದ ಸಂಕಲನದ ಜವಾಬ್ಧಾರಿಯನ್ನು  ಸಂಕಲನಕಾರ ಮಧು ತುಂಬಕೆರೆ ವಹಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಹರಿಗೆ 48 ವರುಷ : ಇಬ್ಬರ ಸಾಧನೆಗೆ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರಿಂದ ಅಭಿನಂದನೆ

    ಲಹರಿಗೆ 48 ವರುಷ : ಇಬ್ಬರ ಸಾಧನೆಗೆ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರಿಂದ ಅಭಿನಂದನೆ

    ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಕಳೆದಿದೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ  “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ಮೂಡಿಬಂದಿದೆ. ಈ ಆಲ್ಬಂ ಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಬಂದಿರುವುದು ಇದು ಎರಡನೇ ಬಾರಿ. ಈ ಸಂತಸ ಹಂಚಿಕೊಳ್ಳಲು ಲಹರಿ ಸಂಸ್ಥೆ ಆತ್ಮೀಯ ಸಮಾರಂಭ ಏರ್ಪಡಿಸಿತ್ತು. ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರಾದ ಸುಧಾಕರ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್, ಕ್ರೇಜಿಸ್ಟಾರ್ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಾಜೇಂದ್ರ ಸಿಂಗ್ ಬಾಬು,  ವಸಿಷ್ಠ ಸಿಂಹ, ಗುರುಕಿರಣ್, ಉದಯ್ ಕೆ ಮೆಹ್ತಾ, ಕೆ.ಪಿ. ಶ್ರೀಕಾಂತ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ನಾನು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ವೇಲು ಅವರನ್ನು ಮೊದಲಿನಿಂದಲೂ ಬಲ್ಲೆ. ನಮ್ಮ ಪಕ್ಕದ ಮನೆಯವರು ಅವರು. ಲಹರಿ ಸಂಸ್ಥೆ ಈ ಎತ್ತರಕ್ಕೆ ಬೆಳೆದಿರುವುದು ಖುಷಿ ತಂದಿದೆ. ಇಲ್ಲಿಗೆ ಬಂದಾಗ ಈ ಆಲ್ಬಂ ನ ಒಂದು ಹಾಡು ನೋಡಿ ತುಂಬಾ ಸಂತೋಷವಾಯಿತು. ಗ್ರ್ಯಾಮಿ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಅದರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ರಿಕ್ಕಿಕೇಜ್ ಎರಡು ಸಲ ಈ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ. ಅವರ ಸಾಧನೆ ಇಡೀ ಕನ್ನಡಿಗರು ಹೆಮ್ಮೆ ಪಡುವಂತದು. ಅವರಿಂದ ಇನ್ನಷ್ಟು ಈ ರೀತಿಯ ಸಾಧನೆಯಾಗಲಿ. ಅದು ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ನನಗೆ ಇದು ಕುಟುಂಬದ ಸಮಾರಂಭ ಇದ್ದ ಹಾಗೆ. ಕಳೆದವರ್ಷ ಕೊರೋನ ದಿಂದ ಅನೇಕ ಜನ ಹತ್ತಿರದವರನ್ನು ಕಳೆದುಕೊಂಡಿದ್ದೀವಿ. ಕೆಟ್ಟಸಮಯ ಹೋದ ಮೇಲೆ ಒಳ್ಳೆಯ ಸಮಯ ಬರುತ್ತದೆ ಎನ್ನುತ್ತಾರೆ. ಈಗ ಒಳ್ಳೆಯ ಸಮಯ ಬಂದಿದೆ. ಕೆ.ಜಿ.ಎಫ್ ೨  ಚಿತ್ರ ಪ್ರಚಂಡ ಜಯಭೇರಿ ಬಾರಿಸುತ್ತಿದೆ.  ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದಿದೆ. ಇನ್ನೂ ಲಹರಿ ಸಂಸ್ಥೆ ಜೊತೆ ನನ್ನ ಸ್ನೇಹ ಬಹಳ ವರ್ಷಗಳದು. ನನ್ನ ಪ್ರೇಮಲೋಕ ಸೇರಿದಂತೆ ಅನೇಕ ಚಿತ್ರಗಳ ಹಾಡುಗಳು ಈ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ ಅಂದರು ಕ್ರೇಜಿಸ್ಟಾರ್ ರವಿಚಂದ್ರನ್. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ನಿಜಕ್ಕೂ ಇದೊಂದು ಆತ್ಮೀಯ ಸಮಾರಂಭ. “ಮನ ಮೆಚ್ಚಿದ ಹುಡುಗಿ” ಸೇರಿದಂತೆ ನಮ್ಮ ಸಂಸ್ಥೆಯ ಅನೇಕ ಚಿತ್ರಗಳು ಲಹರಿ ಮೂಲಕ ಬಿಡುಗಡೆಯಾಗಿದೆ. ಈಗ ಅವರ ಸಂಸ್ಥೆಯ ನಿರ್ಮಾಣದ ಆಲ್ಬಂ ಸಾಂಗ್ ಗಾಗಿ  ರಿಕ್ಕಿಕೇಜ್ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇಬ್ಬರಿಗೂ ಶುಭಾಶಯ ಎಂದರು ಶಿವರಾಜಕುಮಾರ್. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಕೇವಲ ಐನ್ನೂರು ರೂಪಾಯಿಯಿಂದ ಆರಂಭವಾದ ಈ ಸಂಸ್ಥೆ ಈ ಮಟ್ಟಕ್ಕೆ ಬರಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಇದರಲ್ಲಿ ಅಣ್ಣ ಮನೋಹರ್ ನಾಯ್ಡು ಅವರ ಪರಿಶ್ರಮ ಸಾಕಷ್ಟಿದೆ. ಲಹರಿ ನಿರ್ಮಾಣದ ಆಲ್ಬಂ ಗಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿರುವುದು ಸಂತೋಷ. ಅದಕ್ಕಾಗಿ ರಿಕ್ಕಿಕೇಜ್ ಅವರಿಗೆ ಧನ್ಯವಾದ ಎಂದರು ಲಹರಿ ವೇಲು. ಲಹರಿ ಜೊತೆಗಿನ ಸಂಬಂಧ ಹಾಗೂ ಈ ಆಲ್ಬಂ ಸಾಂಗ್ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟ ರಿಕ್ಕಿಕೇಜ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಪಬ್ಲಿಕ್‌ ಟಿ ವಿ ಮುಖ್ಯಸ್ಥ ರಂಗನಾಥ್ ಅವರು ಸೇರಿದಂತೆ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರು ಲಹರಿ ಸಂಸ್ಥೆ ಹಾಗೂ ರಿಕ್ಕಿಕೇಜ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

  • ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯ ಮೂಲಕ ಇಡೀ ದೇಶಕ್ಕೆ ಗೌರವ ತಂದಿದ್ದಾರೆ: ರವಿಚಂದ್ರನ್

    ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯ ಮೂಲಕ ಇಡೀ ದೇಶಕ್ಕೆ ಗೌರವ ತಂದಿದ್ದಾರೆ: ರವಿಚಂದ್ರನ್

    ಬೆಂಗಳೂರು: ಲಹರಿ ಸಂಸ್ಥೆಗೆ ದೊಡ್ಡ ಇತಿಹಾಸ ಇದೆ. ಇಂದು ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅವರು ಇಡೀ ದೇಶಕ್ಕೆ ಗೌರವ ತಂದಿದ್ದಾರೆ ಎಂದು ನಟ ರವಿಚಂದ್ರನ್ ಹೇಳಿದರು.

    ಲಹರಿ ಆಡಿಯೋ ಸಂಸ್ಥೆ ಬಗ್ಗೆ ಮಾತನಾಡಿದ ಅವರು, ಲಹರಿ ಸಂಸ್ಥೆ ಸಂಗೀತಕ್ಕೆ ಕೋಟಿ ಕೋಟಿ ಸುರಿದಿದ್ದಾರೆ. ಲಹರಿ ಸಂಸ್ಥೆಯ ಮಾಲೀಕ ಮನೋಹರ್ ಅವರು ಅಳೆದು ತೂಗಿ ವ್ಯವಹಾರ ಮಾಡುತ್ತಾರೆ. ಅಪ್ಪ ಕೊಟ್ಟ ಕೈ ಇದು, ಆ ಕೈಯಿಂದ ಯಾರನ್ನು ಬೆನ್ನು ತಟ್ಟಿದ್ರೋ ಅವರು ಎತ್ತರಕ್ಕೆ ಹೋಗುತ್ತಾರೆ ಎಂದರು.

    ಕೆಜಿಎಫ್ 2 ಚಿತ್ರವನ್ನು ಸಿನಿಮಾ ಇಂದು ಇಡೀ ವಿಶ್ವ ಮಾತಾಡುತ್ತಿದೆ. ಕೆಜಿಎಫ್ ದಾಖಲೆ ಮುರಿಯೋದೆ ನಮ್ಮೆಲ್ಲರ ಗುರಿ ಆಗಿರಬೇಕು. ಕೆಜಿಎಫ್ ದಾಖಲೆ ಮಾಡಿದೆ. ಕೋಟಿ ಖರ್ಚು ಮಾಡಿದ್ದಾರೆ. ಅವರಿಗೆ ಟಿಕೆಟ್ 2 ಸಾವಿರ ತೆಗೆದುಕೊಳ್ಳುವ ಅಧಿಕಾರ ಇದೆ ಎಂದು ಸಿನಿಮಾ ಬಗ್ಗೆ ನಟ ಹೆಮ್ಮೆ ವ್ಯಕ್ತಪಡಿಸಿದರು.

    ಯಾವಾಗಲೂ ನಾವು ಅದೇ ತರ ದೊಡ್ಡದಾಗಿಯೇ ಯೋಚನೆ ಮಾಡಬೇಕು. 40 ವರ್ಷದ ಹಿಂದೆ ನಾನು ಇದಕ್ಕೆ ಯೋಚನೆ ಮಾಡಿದ್ದು, ಇಂದು ಕೆಜಿಎಫ್ ನಿಂದ ಇಡೀ ಪ್ರಪಂಚ ನಮ್ಮ ಕಡೆ ತಿರುಗಿ ನೋಡಿದೆ. ಕೆಜಿಎಫ್ ಯಶಸ್ಸನ್ನು ನಾವೆಲ್ಲಾ ಸಂಭ್ರಮಿಸೋಣ ಎಂದು ರವಿಚಂದ್ರನ್ ಕರೆ ನೀಡಿದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಇದೇ ವೇಳೆ ಲಹರಿ ಸಂಸ್ಥೆ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿ, ಲಹರಿ ಸಂಸ್ಥೆ ನಮ್ಮಲ್ಲೂ ಒಳ್ಳೆಯ ಬೆಲೆಗೆ ಆಡಿಯೋ ಕೊಂಡುಕೊಳ್ಳುತ್ತಿದ್ದರು. ಅವರು ಯಾಮಾರಿಸುತ್ತಿರಲಿಲ್ಲ, ಬಹಳ ಸುಲಭವಾಗಿ ಯಾಮಾರಿಸಬಹುದಿತ್ತು. ಆದರೆ ಅವರು ಹಾಗೆ ಮಾಡುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ಬಳಿಕ ಶಿವಣ್ಣ ಜನುಮದ ಜೋಡಿ “ಇವಳ್ಯಾರೋ ಮಗಳೋ ಹಿಂಗಳವ್ಳಲ್ಲ” ಎಂಬ ಹಾಡು ಹಾಡಿ ರಂಜಿಸಿದರು. ಅಲ್ಲದೆ “ರಾಜ್ ಕುಮಾರ್ ಮಗನೋ ಶಿವರಾಜ್ ಕುಮಾರ್ “ಎಂದು ತಾವೇ ಲಿರಿಕ್ಸ್ ಬದಲಾಯಿಸಿಕೊಂಡು ಹಾಡಿದರು. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ: ಅಜಯ್ ದೇವಗನ್

    ಕನ್ನಡದ ಪ್ರತಿಷ್ಠಿತ ಲಹರಿ ಸಂಸ್ಥೆ ‘ಗ್ರ್ಯಾಮಿ’ ಪ್ರಶಸ್ತಿ ಪಡೆದುಕೊಂಡಿದೆ. ಲಹರಿ ಸಂಸ್ಥೆಯಿಂದ ರಿಲೀಸ್ ಆಗಿದ್ದ “ಡಿವೈನ್ ಟ್ರೈಡ್ಸ್” ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದ್ದು, ಈ ವಿಶೇಷ ಆಲ್ಬಂ ಸಂಗೀತ ನಿರ್ದೇಶಕ ‘ರಿಕ್ಕಿಕೇಜ್’ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಿತ್ತು. ಈ ಸಂಬಂಧ ಇಂದು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ರಿಕಿ ಕೇಜ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ . ಆರ್ ರಂಗನಾಥ್ ಹಾಗೂ ಸಿಇಓ ಅರುಣ್, ಸಿಎಂ ಬಸವರಾಜ್ ಬೊಮ್ಮಾಯಿ ಲಹರಿಯ ಸಾಧನೆಯನ್ನ ಸ್ಮರಿಸಿದ್ರು.

  • ವಾಸವಿ ಪ್ರೀಮಿಯರ್ ಲೀಗ್ ಕ್ರಿಕೆಟ್‌ಗೆ ಚಾಲನೆ

    ವಾಸವಿ ಪ್ರೀಮಿಯರ್ ಲೀಗ್ ಕ್ರಿಕೆಟ್‌ಗೆ ಚಾಲನೆ

    ಬೆಂಗಳೂರು: ವಾಸವಿ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ 5ನೇ ವರ್ಷದ ವಾಸವಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

    ಸಮುದಾಯದ ಯುವಕರನ್ನು ಒಟ್ಟುಗೂಡಿಸುವ ಸಲುವಾಗಿ ಹಾಗೂ ಕ್ರೀಡಾ ಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಸಚ್ಚಿದಾನಂದ ಸರಸ್ವತಿ ಶ್ರೀಗಳು ಚಾಲನೆ ನೀಡಿದರು. ಎರಡು ದಿನಗಳ ಕಾಲ ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ನಗರದ ವಿವಿಧ ಭಾಗಗಳ 16 ತಂಡಗಳು ಭಾಗಿಯಾಗಿವೆ.

    ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಮಾತನಾಡಿ, 33 ವರ್ಷದ ನಂತರ ಈ ಮೈದಾನದಲ್ಲಿ ಕ್ರಿಕೆಟ್ ಆಡಲು ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ವಾಸವಿ ಗ್ರೂಪ್‍ಗೆ ಅಭಿನಂದನೆ ಹೇಳಲು ಬಯಸುತ್ತೇನೆ. ಇವರು 15 ವರ್ಷಗಳಿಂದ ಪಂದ್ಯಾವಳಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಒಳ್ಳೊಳ್ಳೆ ಆಟಗಾರರಿದ್ದಾರೆ ಎಂದರು. ಇದನ್ನೂ ಓದಿ: ಧರ್ಮವೇ ಮುಖ್ಯ- ಹಾಲ್ ಟಿಕೆಟ್ ಪಡೆದರೂ ಪರೀಕ್ಷೆಗೆ ಬಾರದ ಉಡುಪಿಯ ಅಲ್ಮಾಸ್

    ಕಾರ್ಯಕ್ರಮದಲ್ಲಿ ವೇದಿಕೆ ಛೇರೆಮೇನ್ ಸುನೀಲ್, ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

  • ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ಡೈಮಂಡ್ ಅವಾರ್ಡ್

    ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ಡೈಮಂಡ್ ಅವಾರ್ಡ್

    ಬೆಂಗಳೂರು: ಲಹರಿ ಮ್ಯೂಸಿಕ್‍ಗೆ ಯೂಟ್ಯೂಬ್ ನೀಡುವ ಪ್ರತಿಷ್ಠಿತ ಡೈಮಂಡ್ ಅವಾರ್ಡ್ ಸಿಕ್ಕಿದೆ.

    ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಲಹರಿ ಯುಟ್ಯೂಬ್ ಚಾನೆಲ್ ಶುರುವಾಗಿ ಇಲ್ಲಿಗೆ 10 ವರ್ಷ. ಈ ಸಂಭ್ರಮದ ಹೊತ್ತಲ್ಲೇ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲಿಗೆ  ಈಗ 1.18 ಕೋಟಿ ಮಂದಿ  ಸಬ್‍ಸ್ಕ್ರೈಬರ್ಸ್ ಆಗಿದ್ದಾರೆ.

    1 ಕೋಟಿ ಸಬ್‍ಸ್ಕ್ರೈಬರ್ಸ್ ಆದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‍ನಲ್ಲಿರುವ ಯೂಟ್ಯೂಬ್ ಸಂಸ್ಥೆಯಿಂದ ಲಹರಿ ಮ್ಯೂಸಿಕ್‍ಗೆ ಪ್ರತಿಷ್ಠಿತ ಡೈಮಂಡ್ ಅವಾರ್ಡ್ ಪ್ರಶಸ್ತಿ ಸಿಕ್ಕಿದೆ.  ಇದನ್ನೂ ಓದಿ: ಲಹರಿ ಮ್ಯೂಸಿಕ್ ಪಾಲಾಯ್ತು ಕೆಜಿಎಫ್ 2 ಆಡಿಯೋ ರೈಟ್ಸ್

    ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲೆಯಾಳಂಗೂ ಲಹರಿ ಯೂಟ್ಯೂಬ್ ಚಾನೆಲ್ ವಿಸ್ತರಣೆ ಗೊಂಡಿದೆ. ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲ್ಲಬೇಕಾದ ಗೌರವ. ಅವರಿಗೆ ಇದು ಅರ್ಪಣೆ ಅಂತಾ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು ಪಬ್ಲಿಕ್ ಟಿವಿಗೆ  ತಿಳಿಸಿದ್ದಾರೆ.

  • ಝೀರೋಗೆ ಸೆಡ್ಡು ಹೊಡೆದ ಕೆಜಿಎಫ್-ಗ್ಯಾಂಗ್‍ಸ್ಟರ್ ಅಲ್ಲ ಅದು ಗಾಯಗೊಂಡ ಹುಲಿಯ ಕಥೆ

    ಝೀರೋಗೆ ಸೆಡ್ಡು ಹೊಡೆದ ಕೆಜಿಎಫ್-ಗ್ಯಾಂಗ್‍ಸ್ಟರ್ ಅಲ್ಲ ಅದು ಗಾಯಗೊಂಡ ಹುಲಿಯ ಕಥೆ

    – ಎರಡನೇ ಟ್ರೇಲರ್ ನಲ್ಲಿ ರಿವೀಲ್ ಅಯ್ತು ಕಥೆಯ ತಿರುಳು

    ಬೆಂಗಳೂರು: ಈಗಾಗಲೇ ಭಾರತೀಯ ಸಿನಿ ಅಂಗಳದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಕೆಜಿಎಫ್ ಚಿತ್ರದ ಎರಡನೇ ಟ್ರೇಲರ್ ಹೊರಬಂದಿದೆ. ಪ್ರತಿ ಹೆಜ್ಜೆಯನ್ನು ತುಂಬಾನೇ ಲೆಕ್ಕಹಾಕಿ ಇಡುತ್ತಿರುವ ಚಿತ್ರತಂಡ ಮತ್ತೊಂದು ರೋಮಾಂಚನದ ಟ್ರೇಲರ್ ನ್ನು ಬಿಡುಗಡೆ ಮಾಡಿದೆ. ಮೊದಲಿನಿಂದಲೂ ಖಡಕ್ ಡೈಲಾಗ್ ಮೂಲಕವೇ ಕೆಜಿಎಫ್ ಸದ್ದು ಮಾಡುತ್ತಿದೆ.

    ಕೆಜಿಎಫ್ ಕ್ರೇಜ್ ನೋಡಿದ್ರೆ ಇಡೀ ಭಾರತೀಯ ಸಿನಿಮಾ ಲೋಕವೇ ಚಂದನವನದತ್ತ ತಿರುಗಿ ನೋಡುವಂತೆ ಮಾಡುತ್ತಿದೆ ಎಂಬ ಆರೋಗ್ಯಕರ ಚರ್ಚೆಗಳು ಗಾಂಧಿನಗರದ ಗಲ್ಲಿಗಳಲ್ಲಿ ಆರಂಭವಾಗಿವೆ. ಸಸತ ಎರಡೂವರೆ ವರ್ಷಗಳಿಂದ ಸಿದ್ಧಗೊಂಡಿರುವ ಕೆಜಿಎಫ್ ಒಟ್ಟು ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಮೊದಲ ಭಾಗ ಇದೇ ಡಿಸೆಂಬರ್ 21ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಒಂದು ರೀತಿಯ ವಿಭಿನ್ನ ಕುತೂಹಲವನ್ನು ಚಿತ್ರ ಸೃಷ್ಟಿಸಿದೆ.

    ತೆಲುಗಿನ ಬಾಹುಬಲಿ ಸಿನಿಮಾದ ಬಳಿಕ ಇಷ್ಟೊಂದು ಕ್ರೇಜ್ ಹುಟ್ಟುಹಾಕಿರುವ ಸಿನಿಮಾ ಕನ್ನಡದ ಕೆಜಿಎಫ್. ಮಂಗಳವಾರ ಸಂಜೆ ಬಿಡುಗಡೆಯಾಗಿದ್ದ, ‘ಸಲಾಮ್ ರಾಕಿ ಭಾಯ್’ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಒಬ್ಬ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿಯಾದ ಕಥೆಯನ್ನು ಹೇಳಿತ್ತು. 70ರ ದಶಕದಲ್ಲಿ ಮುಂಬೈ ಅಧಿಪತಿಯಾಗುವ ರಾಕಿಯ ತಾಕತ್ತನ್ನು ಸಲಾಮ್ ರಾಕಿ ಭಾಯ್ ಹಾಡಿನ ಪದಗಳು ವರ್ಣನೆ ಮಾಡಿದ್ದವು. ಇದೀಗ ಹಿಂದಿಯ ಮತ್ತೊಂದು ಟ್ರೇಲರ್ ರಿವೀಲ್ ಆಗಿದ್ದು, ಚಿತ್ರದ ಮತ್ತೊಂದು ಶೇಡ್ ಇದರಲ್ಲಿ ತೋರಿಸಲಾಗಿದೆ.

    ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.

  • ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಬೆಂಗಳೂರು: ದೇಶದ ಬಹುನಿರೀಕ್ಷಿತ ಯಶ್ ಅಭಿನಯದ ಸಿನಿಮಾ ಕೆಜಿಎಫ್ ಇದೇ ತಿಂಗಳು 21ರಂದು ಬಿಡುಗಡೆ ಆಗಲಿದೆ. ಇಂದು ಚಿತ್ರದ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡುವಂತೆ ಮಾಡಿದೆ.

    ಕೋಲಾರದ ಕೆಜಿಎಫ್‍ನ ಓರ್ವ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿ ಆದಾಗ ಚಿತ್ರದಲ್ಲಿ ಈ ಹಾಡು ಬರುತ್ತೆ ಎಂದು ಹೇಳಲಾಗುತ್ತಿದೆ. ಹಾಡಿನ ಪ್ರತಿಯೊಂದು ಸಾಲುಗಳು ಭೂಗತ ಲೋಕದ ಅಧಿಪತಿಯಾದ ರಾಕಿಯನ್ನು ವರ್ಣನೆ ಮಾಡುತ್ತಿವೆ. ಹಾಡಿನ ಚಿತ್ರೀಕರಣ ಸಂಪೂರ್ಣ 70ರ ದಶಕದ ಮಾದರಿಯಲ್ಲಿ ಮೂಡಿ ಬಂದಿದೆ. ಚಿತ್ರದ ಟ್ರೇಲರ್ ಈಗಾಗಲೇ 1 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    ಚಿತ್ರದ ಟೀಸರ್ ಮತ್ತು ಟ್ರೇಲರ್ ಎರಡು ಕೆಜಿಎಫ್ ಇದೊಂದು ಭಿನ್ನ ಸಿನಿಮಾ ಅಂತಾ ಎಂಬುದನ್ನು ಸಾಬೀತು ಮಾಡಿದ್ದವು. ಖಡಕ್ ಹಿನ್ನೆಲೆ ಧ್ವನಿಯಿಂದ ಆರಂಭವಾಗಿದ್ದ ಟೀಸರ್ ಮತ್ತು ಟ್ರೇಲರ್ ಇದೊಂದು ಪಕ್ಕಾ ಮಾಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಕಥೆ ಒಳಗೊಂಡಿದೆ ಎಂಬುದನ್ನು ಸಾರಿ ಹೇಳಿದ್ದವು. ಭೂಗತ ಲೋಕದ ಅಧಿಪತಿಯಾಗುವ ರಾಕಿ ಸಹ ಓರ್ವ ಮಗ. ತಾಯಿ ಮತ್ತು ಮಗನ ಪ್ರೀತಿಯನ್ನು ಚಿತ್ರದಲ್ಲಿ ಕಾಣಬಹುದು ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

    ಸದ್ಯ ಹಾಡನ್ನು ಲಹರಿ ಮ್ಯೂಸಿಕ್ ಯುಟ್ಯೂಬ್ ಅಕೌಂಟ್ ನಲ್ಲಿ ನೋಡಬಹುದಾಗಿದೆ. ಲಹರಿ ಮ್ಯೂಸಿಕ್ ಸಂಸ್ಥೆ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿ ಖರ್ಚಿನಲ್ಲಿ ಆಡಿಯೋದ ಹಕ್ಕನ್ನು ಖರೀದಿಸಿದ್ದು ವಿಶೇಷವಾಗಿದೆ. ಇದು `ಕೆಜಿಎಫ್’ನ ಮೊದಲ ಹಾಡಾಗಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ. ಕ್ರಮೇಣವಾಗಿ ಒಂದೊಂದೇ ಹಾಡುಗಳು ರಿಲೀಸ್ ಆಗಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv