Tag: laggere

  • Bengaluru | ಪತಿಯೊಂದಿಗೆ ಗಲಾಟೆ – ಗೃಹಿಣಿ ನೇಣಿಗೆ ಶರಣು

    Bengaluru | ಪತಿಯೊಂದಿಗೆ ಗಲಾಟೆ – ಗೃಹಿಣಿ ನೇಣಿಗೆ ಶರಣು

    ಬೆಂಗಳೂರು: ಪತಿಯೊಂದಿಗೆ ಗಲಾಟೆ ಹಿನ್ನೆಲೆ ಮನನೊಂದು ಗೃಹಿಣಿ (Housewife) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಲಗ್ಗೇರೆಯ (Laggere) ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿದೆ.

    ರಕ್ಷಿತಾ (26) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ರಕ್ಷಿತಾ ನಾಲ್ಕು ವರ್ಷದ ಹಿಂದೆ ರವೀಶ್‌ನನ್ನು ಮದುವೆಯಾಗಿದ್ದರು. ಕಳೆದ ಮೂರು ವರ್ಷದಿಂದ ರವೀಶ್ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ರವೀಶ್ ಜೊತೆ ಸಹೋದರ ಲೋಕೇಶ್ ಕೂಡ ರಕ್ಷಿತಾ ಜೊತೆ ಗಲಾಟೆ ಮಾಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಲೋಕೇಶ್ ರವೀಶ್ ಮನೆಯಲ್ಲೇ ವಾಸವಾಗಿದ್ದ. ಭಾನುವಾರ ರಾತ್ರಿ ಕೂಡ ರಕ್ಷಿತಾ ಜೊತೆ ರವೀಶ್ ಹಾಗೂ ಲೋಕೇಶ್ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದು ರಕ್ಷಿತಾ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಪ್ರಮುಖ ಪ್ರಕರಣಗಳ ಪಟ್ಟಿಯಲ್ಲಿ ರೇಣುಕಾಸ್ವಾಮಿ ಕೇಸ್‌ಗೆ 2ನೇ ಸ್ಥಾನ

    ರವೀಶ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ. ಗಂಡನೇ ರಕ್ಷಿತಾಳನ್ನು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಮೂರು ವರ್ಷದ ಹೆಣ್ಣು ಮಗುವಿನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

  • ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿಣ ಕುಂಕುಮ ಪಡೆಯಲು ಹೋದಾಗ ಅಪಘಾತ – ನವವಿವಾಹಿತೆ ಸಾವು

    ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿಣ ಕುಂಕುಮ ಪಡೆಯಲು ಹೋದಾಗ ಅಪಘಾತ – ನವವಿವಾಹಿತೆ ಸಾವು

    ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ (Varamahalakshmi Festival) ಅರಿಶಿಣ ಕುಂಕುಮ ಪಡೆಯಲು ಹೋದ ವೇಳೆ ಅಪಘಾತಕ್ಕೀಡಾಗಿ ನವವಿವಾಹಿತೆ ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ಲಗ್ಗೆರೆ (Laggere) ಬಳಿ ನಡೆದಿದೆ.

    ಗೀತಾ (23) ಸಾವಿಗೀಡಾದ ನವವಿವಾಹಿತೆ. ಗೀತಾ ಎರಡೂವರೆ ತಿಂಗಳ ಹಿಂದಷ್ಟೇ ಸುನೀಲ್ ಎಂಬವರನ್ನು ವಿವಾಹವಾಗಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಅರಿಶಿಣ ಕುಂಕುಮ ಪಡೆಯಲೆಂದು ನಂದಿನಿ ಲೇಔಟ್‌ನಲ್ಲಿರುವ ನಾದಿನಿ ಮನೆಗೆ ದಂಪತಿ ಹೊರಟಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾಗಿದೆ. ಇದನ್ನೂ ಓದಿ: ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ

    ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಡ ಸುನೀಲ್‌ಗೆ ಗಾಯಗಳಾಗಿವೆ. ಘಟನೆ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಅಪಘಾತ ಸಂಬಂಧ ಲಾರಿ ಚಾಲಕ ಸುರೇಶ್‌ನನ್ನು ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

  • 4 ತಿಂಗಳು, 120 ದಿನ ಬರೀ ಅರಿಶಿಣ ನೀರು, ನಿಂಬೆ ರಸ- ಗೃಹಬಂಧನದಲ್ಲಿದ್ದ ಯುವತಿ ರಕ್ಷಣೆ

    4 ತಿಂಗಳು, 120 ದಿನ ಬರೀ ಅರಿಶಿಣ ನೀರು, ನಿಂಬೆ ರಸ- ಗೃಹಬಂಧನದಲ್ಲಿದ್ದ ಯುವತಿ ರಕ್ಷಣೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಜ್ಯೋತಿಷಿಯ ಮಾತು ಕೇಳಿ ಯುವತಿಯನ್ನು ಮನೆಯೊಳಗೆ ಕೂಡಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಲಗ್ಗೆರೆಯಲ್ಲಿ (Laggere) ನಡೆದಿದೆ.

    ಸದ್ಯ 26 ವರ್ಷದ ಯುವತಿಯನ್ನು (Woman Home Arrest) ಬೆಂಗಳೂರು ಉತ್ತರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಶಶಿಧರ್ ಟೀಂ ನೇತೃತ್ವದಲ್ಲಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇತ್ತ ಅಧಿಕಾರಿಗಳು ಯುವತಿ ಹಾಗೂ ಕುಟುಂಬಸ್ಥರ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಘಟನೆ ಏನು..?: ಮೂಲತಃ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದ ಯುವತಿ ಡಿಗ್ರಿ ಮುಗಿಸಿದ್ದಾಳೆ. ಈಕೆಗೆ 4 ತಿಂಗಳ ಹಿಂದೆ ಬೆನ್ನುನೋವು ಶುರುವಾಗಿತ್ತು. ಈ ವೇಳೆ ಯುವತಿ ತಮ್ಮ ಈ ಸಮಸ್ಯೆಯ ಕುರಿತು ವೈದ್ಯರ ಬಳಿ ತೆರಳದೆ ಜ್ಯೋತಿಷಿ ಮೊರೆ ಹೋಗಿದ್ದಾನೆ. ಅಂತೆಯೇ ಜ್ಯೋತಿಷಿ ಮಾತು ಕೇಳಿ ಕಳೆದ ಮೂರು ತಿಂಗಳಿನಿಂದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಪರಿಣಾಮ ಆಕೆಯ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿದೆ.

    3 ತಿಂಗಳಿನಿಂದ ಅರಿಶಿಣ ನೀರು, ನಿಂಬೆ ಹಣ್ಣು ರಸ ಕುಡಿಸ್ತಿದ್ರು. ಊಟನೇ ನೀಡ್ತಿರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಕೆಗೆ ಕ್ಯಾನ್ಸರ್ ಇರೋದು ದೃಢವಾಗಿದೆ. ನಾಲ್ಕು ತಿಂಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದರೆ ಈ ವೇಳೆಗಾಗ್ಲೇ ನಿವಾರಣೆಯ ಹಂತಕ್ಕೆ ಬರುತ್ತಿತ್ತು. ಆದರೆ ಮಂತ್ರವಾದಿಯ ಮಾತು ಕೇಳಿ ಯುವತಿಯ ತಮ್ಮ ಹಾಗೂ ತಾಯಿ ಚಿಕಿತ್ಸೆ ಕೊಡಿಸದೇ ಜೀವಕ್ಕೆ ಕುತ್ತು ತಂದಿದ್ದಾರೆ.

    ಯುವತಿ ಮೆಸೇಜ್: ಯುವತಿಯನ್ನ ಮನೆಯೊಳಗೆ ಕೂಡಿಟ್ಟು ನಾಲ್ಕು ಗೋಡೆಗಳ ಮಧ್ಯೆ ಚಿತ್ರಹಿಂಸೆ ನೀಡಲಾಗುತ್ತಿತ್ತು. 4 ತಿಂಗಳು, 120 ದಿನ, 2880 ಗಂಟೆ ಮನೆಯಲ್ಲೇ ನರಳಾಟ ಅನುಭವಿಸಿದ್ದಾಳೆ. ಪರಿಣಾಮ ಹೊಟ್ಟೆ ಊದ್ಕೊಂಡು ಮನೆಯಲ್ಲೇ ನರಳಾಡುತ್ತಿದ್ದರೂ ಮನೆಯವರು ಆಸ್ಪತ್ರೆಗೆ ಕರೆದೊಯ್ದಿಲ್ಲ. ತೀವ್ರ ಹೊಟ್ಟೆ ನೋವು ತಾಳದೇ ಯುವತಿ ಕಿರುಚಾಡುತ್ತಿದ್ದಾಗ ತಮ್ಮ ಹಲ್ಲೆ ಕೂಡ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಪ್ಲೀಸ್ ನನ್ನನ್ನ ಕಾಪಾಡಿ.. ಸಹಾಯ ಮಾಡಿ ಎಂದು ಪರಿಚಯಸ್ಥರಿಗೆ ಮೆಸೇಜ್ ಹಾಕಿದ್ದಾಳೆ.

    ಸ್ವಾಮೀಜೀಗೆ ಗೂಸಾ: ಇಂಜಿನಿ ಆಯಿಲ್, ನಿಂಬೆಹಣ್ಣು ನೀರು ಕುಡಿಸಿ ಯುವತಿಯ ಕುಟುಂಬಸ್ಥರನ್ನ ನಂಬಿಸಿದ್ದ ನಕಲಿ ಜ್ಯೋತಿಷಿಯನ್ನು ಹಿಡಿದು ಸ್ಥಳೀಯರು ಗೂಸಾ ನೀಡಿದ್ದಾರೆ. ಇತ್ತ ಗೃಹಬಂಧನದಲ್ಲಿದ್ದ ಯುವತಿಯನ್ನು ರಕ್ಷಣೆ ಮಾಡಿ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಬೆಂಗ್ಳೂರಲ್ಲಿ 30ಕ್ಕೂ ಹೆಚ್ಚು ಕಾರ್‌ಗಳ ಗ್ಲಾಸ್ ಪುಡಿಗೈದಿದ್ದ ಪುಂಡರು ಅರೆಸ್ಟ್

    ಬೆಂಗ್ಳೂರಲ್ಲಿ 30ಕ್ಕೂ ಹೆಚ್ಚು ಕಾರ್‌ಗಳ ಗ್ಲಾಸ್ ಪುಡಿಗೈದಿದ್ದ ಪುಂಡರು ಅರೆಸ್ಟ್

    ಬೆಂಗಳೂರು: ಲಗ್ಗೆರೆ (Laggere) ಬಳಿ ಸುಮಾರು 30 ಕಾರುಗಳ (Car) ಗಾಜನ್ನು ಪುಡಿ ಮಾಡಿದ್ದ ಆರು ಜನ ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು (Police) ಬಂಧಿಸಿದ್ದಾರೆ.

    ಏರಿಯಾದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಕಿಡಿಗೇಡಿಗಳ ಗುಂಪು ಮುಖವಾಡ ಧರಿಸಿ ಬೈಕ್‍ನಲ್ಲಿ ಬಂದು ರಾಡ್ ಮತ್ತು ಲಾಂಗ್‍ನಿಂದ ಕಾರಿನ ಗಾಜನ್ನು ಪುಡಿಗೈದಿದ್ದರು. ಬಳಿಕ ಜನ ಹೊರಗೆ ಬರುತ್ತಿದ್ದಂತೆ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದರು. ಬಂಧಿತ ಆರೋಪಿಗಳನ್ನು ಕಳ್ಳ ಮಣಿ ಹಾಗೂ ರಾಬರಿ ಸೋಮನ ಗ್ಯಾಂಗ್‍ನ ಸಹಚರರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪುಂಡರ ಹುಚ್ಚಾಟ – ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂ

    ಆರೋಪಿಗಳು ಗಾಂಜಾ ಹಾಗು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಕೃತ್ಯದ ಬಳಿಕ ಆರೋಪಿಗಳು ಬೇರೆ ಬೇರೆಯಾಗಿ ತಲೆ ಮರೆಸಿಕೊಂಡಿದ್ದರು. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆ ಬಳಿಕ ಸ್ಥಳಕ್ಕೆ ಶಾಸಕ ಮುನಿರತ್ನ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಇದನ್ನೂ ಓದಿ: ಸಿಎಂ ಪುತ್ರನ ಎಡವಟ್ಟು – ಯತೀಂದ್ರ ಹೇಳಿದ ಮಹದೇವ್ ಯಾರು?

  • ಕುಡಿದ ಮತ್ತಿನಲ್ಲಿ ಪುಂಡರ ಹುಚ್ಚಾಟ –  ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂ

    ಕುಡಿದ ಮತ್ತಿನಲ್ಲಿ ಪುಂಡರ ಹುಚ್ಚಾಟ – ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಲಾಂಗ್‌, ಮಚ್ಚಿನಿಂದ ವಾಹನಗಳನ್ನು ಜಖಂ ಮಾಡಿದ ಘಟನೆ ಲಗ್ಗೆರೆಯ ರಾಜೀವ್ ಗಾಂಧಿ ನಗರದಲ್ಲಿ (Laggere, Rajiv Gandhi Nagar) ನಡೆದಿದೆ.

    ಸುಮಾರು 30 ಕ್ಕೂ ಹೆಚ್ಚು ವಾಹನಗಳ (Vehicles) ಮೇಲೆ ಪುಂಡರು ಲಾಂಗ್ ಬೀಸಿದ್ದಾರೆ. ಶುಕ್ರವಾರ ನಸುಕಿನ ಜಾವ 2-3 ಗಂಟೆಯ ವೇಳೆಗೆ ಮುಖಕ್ಕೆ ಮಾಸ್ಕ್‌ ಧರಿಸಿದ ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

    ಪುಂಡರ ಕಿತಾಪತಿಗೆ 12 ಕಾರು, 1 ಆಟೋ, 4 ಟೆಂಪೋಗಳ ಗ್ಲಾಸ್‌ ಪುಡಿ ಪುಡಿಯಾಗಿದೆ. 3 ಮಂದಿ ಕಿಡಿಗೇಡಿಗಳು ಮೂರು ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿದ್ದಾರೆ. ಕೇವಲ 5 ನಿಮಿಷದಲ್ಲೇ 30 ಕ್ಕೂ ಹೆಚ್ಚು ವಾಹನಗಳ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಸ್ಥಳೀಯ ಕಿಡಿಗೇಡಿಗಳೇ ಈ ಕೃತ್ಯ ಎಸಗಿರಬಹುದು ಎಂದು ನಿವಾಸಿಗಳು ಶಂಕಿಸಿದ್ದಾರೆ.

    ಘಟನಾ ಸ್ಥಳಕ್ಕೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಭೇಟಿ ನೀಡಿದ ಬಳಿಕ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ.

     

  • ಲಗ್ಗೆರೆಯಲ್ಲಿ ಭಾರೀ ಅಗ್ನಿ ಅವಘಡ – ಗುಜರಿ ಅಂಗಡಿ ಸೇರಿ 5 ಬೈಕ್‍ಗಳು ಭಸ್ಮ

    ಲಗ್ಗೆರೆಯಲ್ಲಿ ಭಾರೀ ಅಗ್ನಿ ಅವಘಡ – ಗುಜರಿ ಅಂಗಡಿ ಸೇರಿ 5 ಬೈಕ್‍ಗಳು ಭಸ್ಮ

    ಬೆಂಗಳೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಿಡಿದು ಗುಜರಿ ಅಂಗಡಿಗೆ ಬೆಂಕಿ (Fire ) ತಗುಲಿದ್ದು, ಸುತ್ತಮುತ್ತಲಿನ ಮನೆಗೂ ಬೆಂಕಿ ಆವರಿಸಿದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ (Laggere) ನಡೆದಿದೆ.

    ಘಟನೆಯಲ್ಲಿ ಗುಜರಿ ಅಂಗಡಿ ಪಕ್ಕದಲ್ಲಿದ್ದ ಐದಾರು ಬೈಕ್‍ಗಳು ಭಸ್ಮವಾಗಿವೆ. ಅಲ್ಲದೇ ಭಾರೀ ಪ್ರಮಾಣದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೂ ಬೆಂಕಿ ಹತೋಟಿಗೆ ಬರುತ್ತಿಲ್ಲ. ಇದನ್ನೂ ಓದಿ: ಹನಿಟ್ರ್ಯಾಪ್ ಆರೋಪ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

    ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಬೆಂಕಿ ನಿಯಂತ್ರಿಸಲು ಪ್ರಯತ್ನಪಡುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಟ್ರಾನ್ಸ್‌ಫಾರ್ಮರ್ ಸಿಡಿದಿರುವ ಶಂಕೆ ಇದೆ. ಇದನ್ನೂ ಓದಿ: ರಾಗಿಗುಡ್ಡ ಗಲಭೆಯಲ್ಲಿ ನಿಷೇಧಿತ PFI ಕಾರ್ಯಕರ್ತರ ಕೈವಾಡ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ

    ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ

    ಬೆಂಗಳೂರು: ಬಿಸಿಲಿನಿಂದ ಬಸವಳಿದಿದ್ದ ಸಿಲಿಕಾನ್ ಸಿಟಿ ಜನತೆಗೆ ವರುಣ ತಂಪೆರೆದಿದ್ದಾನೆ. ಬೆಂಗಳೂರಿನ ಹಲವೆಡೆ ಮಳೆಯ ಸಿಂಚನವಾಗಿದೆ.

    ಲಗ್ಗೆರೆಯಲ್ಲಿ ಡಿಕೆ ಸುರೇಶ್ ಪರ ಪ್ರಚಾರ ಸಭೆಗೆ ನೂರಾರು ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ಮಾತನಾಡುವಾಗ ಮಳೆಯಾಗಿದೆ.   ಕಾರ್ಯಕ್ರಮದಲ್ಲಿ  ಭಾಗಿಯಾಗಿದ್ದ ಕಾರ್ಯಕರ್ತರು ತಾವು ಕುಳಿತ್ತಿದ್ದ ಚೇರ್ ಗಳನ್ನು ಮೇಲಕ್ಕೆ ಎತ್ತಿ ಮಳೆಯಿಂದ ಆಶ್ರಯ ಪಡೆದರು.

    ಮಳೆ ಜೋರಾದ ಹಿನ್ನೆಲೆಯಲ್ಲಿ ಪರಮೇಶ್ವರ್ ಅರ್ಧದಲ್ಲೇ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಲಗ್ಗೆರೆ ಮಾತ್ರವಲ್ಲದೆ, ಯಶವಂತಪುರ ಹಾಗೂ ಇನ್ನೂ ಹಲವೆಡೆ ತುಂತುರು ಮಳೆಸುರಿದಿದೆ.

     

  • ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್ ಗೆ ಸೈಕಲ್ ಸವಾರ ಬಲಿ

    ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್ ಗೆ ಸೈಕಲ್ ಸವಾರ ಬಲಿ

    ಬೆಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸೈಕಲ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾಲಹಳ್ಳಿಯ ಎನ್‍ಡಿಡಿಎಫ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಟೇರಿಂಗ್ ಸಿಸ್ಟಂನಲ್ಲಿ ಕೆಲಸ ಮಾಡ್ತಿದ್ದ ರವಿ ಮೃತ ದುರ್ದೈವಿ.

    ಬೆಳಗ್ಗೆ ಕೆಲಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಬಸ್ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಡಿಪೋ ನಂಬರ್ 9ಕ್ಕೆ ಸೇರಿದ ಬಸ್ ಮೆಜೆಸ್ಟಿಕ್‍ನಿಂದ ಲಗ್ಗೆರೆಗೆ ಹೋಗ್ತಿತ್ತು. ಘಟನೆ ಬೆನ್ನಲ್ಲೇ ಚಾಲಕ ಸ್ಥಳದಿಂದಲೇ ಪರಾರಿಯಾಗಿದ್ದಾನೆ.

    ಅಪಘಾತ ನಡೆದ ಜಾಗದಲ್ಲೇ ಮೃತದೇಹವಿಟ್ಟು ಸ್ಟೇರಿಂಗ್ ಸಿಸ್ಟಂ ನೌಕರರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ರು. ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

    ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.