Tag: lady PSI

  • 1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

    1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

    ಬೆಂಗಳೂರು: ಲಂಚದ ರೂಪದಲ್ಲಿ 1.25 ಲಕ್ಷ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಮಹಿಳಾ ಪಿಎಸ್‌ಐ‌ (Lady PSI) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿನ (Bengaluru) ಗೋವಿಂದಪುರ  ಪೊಲೀಸ್ ಠಾಣೆಯಲ್ಲಿ (Govindapura Police Station) ನಡೆದಿದೆ.

    ಸಾವಿತ್ರಿ ಬಾಯಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ. ಕೇಸ್ ಒಂದರಲ್ಲಿ ಬಿ ರಿಪೋರ್ಟ್ ಹಾಕಲು ಸಾವಿತ್ರಿ ಬಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಮೊಹಮ್ಮದ್ ಯೂನಸ್ ಎಂಬವರು ನೀಡಿದ ದೂರಿನ ಮೇರೆಗೆ ಸಾವಿತ್ರಿ ಬಾಯಿಯನ್ನು ಟ್ರ್ಯಾಪ್ ಮಾಡಲಾಗಿದೆ. ಇದನ್ನೂ ಓದಿ: D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

    ಗೊವಿಂದಪುರ ಪೊಲೀಸ್ ಠಾಣೆಯ ಕ್ರೈಂ ನಂಬರ್ 144/25ರ ಕೇಸ್ ಸಂಬಂಧಿಸಿದಂತೆ ಬಿ ರಿಪೋರ್ಟ್ ಸಲ್ಲಿಸಲು ಸಾವಿತ್ರಿ ಬಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ 1.25 ಲಕ್ಷ ರೂ. ಹಣ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ಸಾವಿತ್ರಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: GST ನೋಟಿಸ್; ರಾಜ್ಯ ದಿವಾಳಿಯಾದಾಗ, ಬೇಕರಿ ಎಟಿಎಂ ಆಗುತ್ತದೆ- ನಿಖಿಲ್ ಕುಮಾರಸ್ವಾಮಿ

  • ಬೀದರ್| ಲೇಡಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಕಾನ್‌ಸ್ಟೇಬಲ್‌ ಅಮಾನತು

    ಬೀದರ್| ಲೇಡಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಕಾನ್‌ಸ್ಟೇಬಲ್‌ ಅಮಾನತು

    ಬೀದರ್: ಡ್ಯೂಟಿಗೆ ಲೇಟಾಗಿ ಬಂದಿದ್ದನ್ನು ಪ್ರಶ್ನೆ ಮಾಡಿದ ಕರ್ತವ್ಯನಿರತ ಲೇಡಿ ಪಿಎಸ್‌ಐ (Lady PSI) ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಕಾನ್‌ಸ್ಟೇಬಲ್‌ನನ್ನು (Constable) ಅಮಾನತುಗೊಳಿಸಲಾಗಿದೆ.

    ಮಹಿಳಾ ಠಾಣೆ ಪಿಎಸ್‌ಐ ಮಲ್ಲಮ್ಮ ಮೇಲೆ ಹಲ್ಲೆ ಮಾಡಿ ಅಶಿಸ್ತಿನ ವರ್ತನೆ ತೊರಿದ ಹಿನ್ನಲೆಯಲ್ಲಿ ನ್ಯೂಟೌನ್ ಠಾಣೆಯ ಕಾನ್‌ಸ್ಟೆಬಲ್ ಧನರಾಜ್‌ನನ್ನು ಅಮಾನತುಗೊಳಿಸಿ ಎಸ್ಪಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಎಡಿಜಿಪಿ ಕುಮಾರಸ್ವಾಮಿಯನ್ನ ಹಂದಿ ಎಂದಿದ್ದಾರಾ? – ಸಿದ್ದರಾಮಯ್ಯ ಪ್ರಶ್ನೆ

    ಕೆಇಎ ಪರೀಕ್ಷೆ (KEA Exam) ಭದ್ರತಾ ಸಮಯದಲ್ಲಿ ಬಂದೋಬಸ್ತ್‌ಗೆ ಕಾನ್‌ಸ್ಟೇಬಲ್ ಧನರಾಜ್ ತಡಮಾಡಿ ಕೇಂದ್ರಕ್ಕೆ ಬಂದಿದ್ದನ್ನ ಪ್ರಶ್ನೆ ಮಾಡಿದ ಪಿಎಸ್‌ಐ ಮಲ್ಲಮ್ಮ ಮೇಲೆ ಕಾನಸ್ಟೇಬಲ್ ಗಂಬೀರವಾಗಿ ಹಲ್ಲೆ ಮಾಡಿದ್ದಾನೆ. ತಡ ಮಾಡಿ ಬಂದಿದ್ದಲ್ಲದೇ ಪ್ರಶ್ನೆ ಮಾಡಿದ ಪಿಎಸ್‌ಐ ಮಹಿಳೆ ಎಂಬುದನ್ನೂ ನೋಡದೆ ಕುತ್ತಿಗೆಯ ಭಾಗ ಹಿಡಿದು ಬೇವಿನ ಮರಕ್ಕೆ ಗುದ್ದಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಜಮೈಕಾ ಪ್ರಧಾನಿ ಭಾರತ ಪ್ರವಾಸ – ಸೋಮವಾರದಿಂದ 4 ದಿನಗಳ ಭೇಟಿ

  • ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ- ಪೊಲೀಸರ ಮೇಲೆ ಹಲ್ಲೆ, ಪಿಎಸ್‍ಐಗೆ ಅವಾಜ್

    ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ- ಪೊಲೀಸರ ಮೇಲೆ ಹಲ್ಲೆ, ಪಿಎಸ್‍ಐಗೆ ಅವಾಜ್

    ಯಾದಗಿರಿ: ಕಾರ್ ಪಾರ್ಕಿಂಗ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಯಾದಗಿರಿಯಲ್ಲಿ ಮಾರಾಮಾರಿ ನಡೆದಿದೆ. ಜೆಡಿಎಸ್ ಅಜೇಯ್ ರೆಡ್ಡಿ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಶಶಿಧರ್ ರೆಡ್ಡಿಯ ಇಬ್ಬರ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಮೊದಲಿಗೆ ನಗರದ ಹಳೇ ಬಸ್ ನಿಲ್ದಾಣದ ಬಳಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಜಗಳ ತೆಗೆದು ಶಶಿಧರ್ ರೆಡ್ಡಿ ಬೆಂಬಲಿಗರಾದ ಯಲ್ಲಾಲಿಂಗ ಮತ್ತು ಶಂಕರಪ್ಪನ ಮೇಲೆ ಅಜೇಯ ರೆಡ್ಡಿ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಯಲ್ಲಾಲಿಂಗ ಮತ್ತು ಶಂಕರಪ್ಪ ತೀವ್ರವಾಗಿ ಗಾಯಗೊಂಡು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಇದೇ ವೇಳೆ ಮತ್ತೆ ಆಸ್ಪತ್ರೆಗೆ ಗುಂಪು ಕಟ್ಟಿಕೊಂಡು ನುಗ್ಗಿದ ಅಜೇಯ ರೆಡ್ಡಿ ಬೆಂಬಲಿಗರು ಮತ್ತೆ ಯಲ್ಲಾಲಿಂಗ ಮತ್ತು ಶಂಕರಪ್ಪ ಮೇಲೆ ಪೊಲೀಸರ ಎದುರು ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಗಲಾಟೆಯಲ್ಲಿ ಪೊಲೀಸರ ಮೇಲೆಯೂ ಸಹ ಅಜೇಯ ರೆಡ್ಡಿ ಕಡೆಯವರು ಹಲ್ಲೆ ಮಾಡಿದ್ದಾರೆ.

    ವಿಷಯ ತಿಳಿದು ಆಸ್ಪತ್ರೆಗೆ ಬಂದ ಶಶಿಧರ್ ರೆಡ್ಡಿಯನ್ನು ತುರ್ತು ಚಿಕಿತ್ಸಾ ಘಟಕ್ಕೆ ಪೊಲೀಸರ ಬಿಟ್ಟಿಲ್ಲ. ಇದರಿಂದ ಕೋಪಗೊಂಡ ಶಶಿಧರ್ ರೆಡ್ಡಿ ನಗರ ಠಾಣೆಯ ಪಿಎಸ್‍ಐ ಸೌಮ್ಯ ಅವರಿಗೆ ಬಾಯಿಗೆ ಬಂದಂತೆ ಮಾತನಾಡಿ, ಅವಾಜ್ ಸಹ ಹಾಕಿದ್ದಾನೆ.

  • ಮಹಿಳಾ ಪಿಎಸ್‍ಐಗೆ ಕರೆ ಮಾಡಿ ‘ಲಾಡ್ಜ್‌ಗೆ ಬಾ’ ಎಂದವ ಪೊಲೀಸರ ಅತಿಥಿಯಾದ

    ಮಹಿಳಾ ಪಿಎಸ್‍ಐಗೆ ಕರೆ ಮಾಡಿ ‘ಲಾಡ್ಜ್‌ಗೆ ಬಾ’ ಎಂದವ ಪೊಲೀಸರ ಅತಿಥಿಯಾದ

    ಬೆಂಗಳೂರು: ಮಹಿಳಾ ಪಿಎಸ್‍ಐಗೆ ತಡರಾತ್ರಿ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

    ಮಂಜುನಾಥ ಅಲಿಯಾಸ್ ಚೂಲ್ ರಾಮ ಬಂಧಿತ ಆರೋಪಿ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕೆಂದರೆ ಆರೋಪಿ ಮಂಜುನಾಥನ ಪ್ರಿಯತಮೆ ಪುಟ್ಟಮ್ಮ ಎನ್ನುವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಳು.

    ಹೋಮ್ ಗಾರ್ಡ್ ಪುಟ್ಟಮ್ಮನಿಗೆ ಇನ್ ಚಾರ್ಜ್ ಆಗಿದ್ದ ಲೇಡಿ ಪಿಎಸ್‍ಐ ಪುಟ್ಟಮ್ಮನಿಗೆ ಓವರ್ ಡ್ಯೂಟಿ ಹಾಕಿ ಕಿರುಕುಳ ಕೊಡುತ್ತಿದ್ದರು. ಈ ವಿಚಾರವನ್ನು ಹೋಮ್ ಗಾರ್ಡ್ ಪ್ರಿಯಕರ ಮಂಜುನಾಥನ ಬಳಿ ಹೇಳಿಕೊಂಡಿದ್ದಳು. ಇದರಿಂದ ಕೋಪ ಗೊಂಡ ಆರೋಪಿ ಮಂಜುನಾಥ ಪಿಎಸ್‍ಐ ನಂಬರ್ ಪಡೆದು, ತಡರಾತ್ರಿ ಫೋನ್ ಮಾಡಿ ಅಶ್ಲೀಲ ಪದಳಿಂದ ನಿಂದಿಸಿದ್ದಾನೆ.

    ಇದರಿಂದ ಬೇಸತ್ತ ಲೇಡಿ ಪಿಎಸ್‍ಐ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಮಂಜುನಾಥನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.