Tag: Lady Police

  • ಎಷ್ಟು ಹಣ ಬೇಕ್ ಹೇಳಿ ಕೊಡ್ತೀನಿ, ಲಾಡ್ಜ್‌ಗೆ ಬನ್ನಿ: ಸಬ್‌ಇನ್ಸ್‌ಪೆಕ್ಟರಿಗೆ ಅಪರಿಚಿತ ಕರೆ

    ಎಷ್ಟು ಹಣ ಬೇಕ್ ಹೇಳಿ ಕೊಡ್ತೀನಿ, ಲಾಡ್ಜ್‌ಗೆ ಬನ್ನಿ: ಸಬ್‌ಇನ್ಸ್‌ಪೆಕ್ಟರಿಗೆ ಅಪರಿಚಿತ ಕರೆ

    ಬೆಂಗಳೂರು: ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಿಂದೆ ಅಪರಿಚಿತ ಕಾಮುಕನೊಬ್ಬ ಹಿಂದಬಿದ್ದು ಮಾನಸಿಕ ಹಿಂಸೆ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಾ ಇರುವ ಸಬ್ ಇನ್ಸ್ ಪೆಕ್ಟರ್‍ಗೆ ಕಾಲ್ ಮಾಡಿದ ಕಾಮುಕ ಮಂಚಕ್ಕೆ ಕರೆದಿದ್ದಾನೆ.

    “ನೀವು ಲೇಡಿ ಸಬ್ ಇನ್ಸ್ ಪೆಕ್ಟರ್ ಅಂತ ಗೊತ್ತು. ಲಾಡ್ಜ್‌ಗೆ ಬನ್ನಿ ನಿಮಗೆ ಎಷ್ಟು ಹಣ ಬೇಕು ಕೊಡ್ತಿನಿ” ಅಂತ ದೂರವಾಣಿ ಮೂಲಕ ಸಬ್ ಇನ್ಸ್ ಪೆಕ್ಟರ್ ಜೊತೆಯಲ್ಲಿ ಅನುಚಿತವಾಗಿ ಮಾತನಾಡಿದ್ದಾನೆ. ಇದರಿಂದ ಕೋಪಗೊಂಡ ಸಬ್ ಇನ್ಸ್ ಪೆಕ್ಟರ್ ನಿನಗೆ ಫೋನ್ ನಂಬರ್ ಕೊಟ್ಟಿದ್ದು ಯಾರು ಯಾಕೆ ಈ ರೀತಿ ಹಿಂಸೆ ಮಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡಿದಾಗ, ಅದೇ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಾ ಇದ್ದ ಪುಟ್ಟಮ್ಮ ಅನ್ನೋರ ಹೆಸರನ್ನು ಹೇಳಿದ್ದಾನೆ.

    ಅಷ್ಟೇ ಅಲ್ಲ “ನೀನು ಹಿರಿಯ ಅಧಿಕಾರಿಗಳ ಜೊತೆ ಓಡಾಡೋದು ಗೊತ್ತು 1 ಲಕ್ಷ ಹಣ ತಂದು ಕೊಡು” ಅಂತ ಕಾಮುಕ ಬ್ಲಾಕ್ ಮೇಲ್ ಕೂಡ ಮಾಡಿದ್ದು, ಅದೇ ಠಾಣೆಯಲ್ಲಿ ಕೆಲಸ ಮಾಡುತ್ತಾ ಇದ್ದ ಪುಟ್ಟಮ್ಮನ ಅಶ್ಲೀಲ ಫೋಟೋಗಳನ್ನು ಸಬ್ ಇನ್ಸ್ ಪೆಕ್ಟರ್ ಗೆ ಕಳುಹಿಸಿದ್ದಾನೆ. ನಿಮ್ಮದು ಕೂಡ ಇಂತಹದ್ದೇ ಫೋಟೋಗಳಿವೆ ಎಂದು ಬೆದರಿಕೆ ಹಾಕಿದ್ದು, ಕಾಮುಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೋಮ್ ಗಾರ್ಡ್ ಪುಟ್ಟಮ್ಮ ಹಾಗೂ ಅಪರಿಚಿತ ಕಾಮುಕನ ವಿರುದ್ಧ ದೂರು ನೀಡಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಲುಣಿಸಿದ ಅನಾಥ ಮಗುವಿನ ಸಾವಿಗೆ ಮರುಕಪಟ್ಟ ಪೊಲೀಸಮ್ಮ

    ಹಾಲುಣಿಸಿದ ಅನಾಥ ಮಗುವಿನ ಸಾವಿಗೆ ಮರುಕಪಟ್ಟ ಪೊಲೀಸಮ್ಮ

    ಬೆಂಗಳೂರು: ಅನೈತಿಕ ಸಂಬಂಧಕ್ಕೋ ಅಥವಾ ಮದುವೆಗೆ ಮುಂಚೆ ಹುಟ್ಟಿದ್ದಕ್ಕೋ ತಾಯಿಯೊಬ್ಬಳು ತನ್ನ ಮಗುವನ್ನು ಪೊದೆಯೊಂದರ ಬಳಿ ಎಸೆದು ಹೋಗಿದ್ದಳು. ರಸ್ತೆಯಲ್ಲಿ ಓಡಾಡೋ ಜನ ಮಗುವಿನ ಅಳುವಿನ ಶಬ್ಧ ಕೇಳಿ ಮಗುವನ್ನು ರಕ್ಷಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದರು.

    ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಗುವಿನ ಕೂಗಿಗೆ ಕೆಲವು ದಿನಗಳ ಹಿಂದಷ್ಟೇ ಬಾಣಂತನ ಮುಗಿಸಿ ಕೆಲಸಕ್ಕೆ ಬಂದಿದ್ದ ಮಹಿಳಾ ಪೇದೆ ಅರ್ಚನಾ ಹಿಂದು-ಮುಂದು ನೋಡದೆ ಹಾಲುಣಿಸಿ ಮಗುವನ್ನು ಬಾಲವಿಹಾರಕ್ಕೆ ಕಳುಹಿಸಿದ್ದರು.

    ಆದರೆ ಬಾಲವಿಹಾರದಲ್ಲಿ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಇದೀಗ ಕೇವಲ ಒಂದೇ ಒಂದು ಸಾರಿ ಹಾಲುಣಿಸಿದ ಮಹಿಳಾ ಪೊಲೀಸ್ ಅರ್ಚನಾ ಮಗುವನ್ನು ನೆನಸಿಕೊಂಡು ಮರುಕ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅರ್ಚನಾ, ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಮುಂದಿನ ಜನ್ಮದಲ್ಲಾದ್ರೂ ಮಗುವಿಗೆ ಒಳ್ಳೆ ತಾಯಿ ಸಿಗಲಿ ಎಂದು ಹೇಳಿದ್ದಾರೆ. ಅಲ್ಲದೇ ಒಂದು ಬಾರಿ ಹಾಲುಣಿಸಿದ್ದಕ್ಕೆ ಮಗುವಿನ ಸಾವನ್ನು ತನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾತನಾಡುತ್ತಲೇ, ದುಃಖ ತಡೆಯಲಾರದೆ ಅಳುತ್ತಾ ತೆರಳಿದರು.