Tag: Lady Doctor

  • 3 ಬಾರಿ ಗರ್ಭಪಾತ, ಬೇರೆ ಹೆಣ್ಮಕ್ಕಳ ಜೀವನ ಹಾಳು ಮಾಡ್ಬೇಡ- ಗೆಳೆಯನ ಮರ್ಮಾಂಗಕ್ಕೇ ವೈದ್ಯೆ ಕತ್ತರಿ!

    3 ಬಾರಿ ಗರ್ಭಪಾತ, ಬೇರೆ ಹೆಣ್ಮಕ್ಕಳ ಜೀವನ ಹಾಳು ಮಾಡ್ಬೇಡ- ಗೆಳೆಯನ ಮರ್ಮಾಂಗಕ್ಕೇ ವೈದ್ಯೆ ಕತ್ತರಿ!

    ಪಾಟ್ನಾ: ವೈದ್ಯೆಯೊಬ್ಬರು ತನ್ನ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿದ ಅಮಾನವೀಯ ಘಟನೆಯೊಂದು ಬಿಹಾರದ (Bihar) ಸರನ್ ಜಿಲ್ಲೆಯಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ವೈದ್ಯೆಯನ್ನು (Woman Doctor) ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆಕೆ ಪ್ರಿಯಕರ ತನಗೆ ಅನ್ಯಾಯ ಮಾಡಿದ್ದರಿಂದ ನಾನು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾಳೆ. ಘಟನೆಯ 2 ವೀಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ವೈರಲ್‌ ವೀಡಿಯೋದಲ್ಲಿ ವೈದ್ಯೆ, ಆತ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ಮೂರು ಬಾರಿ ನಾನು ಗರ್ಭಪಾತಕ್ಕೆ ಒಳಗಾಗಬೇಕಾಯಿತು ಎಂದು ಹೇಳಿದ್ದಾಳೆ. ಅಲ್ಲದೇ ಮರ್ಮಾಂಗ ಕತ್ತರಿಸಿದ್ದು ಯಾಕೆ ಎಂದು ಕೇಳಿದಾಗ, ಅವನು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಕೋಪದಲ್ಲಿ ಈ ಕೃತ್ಯ ಎಸಗಿದ್ದೇನೆ. ಸಾಯಿಸಬೇಕು ಎಂದು ಮಾಡಿಲ್ಲ. ಅಲ್ಲದೇ ಮುಂದೆ ಬೇರೆ ಯಾವುದೇ ಯುವತಿಗೂ ಇಂತಹ ದ್ರೋಹ ಅವನು ಎಸಗಬಾರದು ಎಂದು ನಾನು ಬಯಸುತ್ತೇನೆ ಎಂದು ಹೇಳುತ್ತಿರುವುದನ್ನು ಗಮನಿಸಬಹುದು.

    ಇನ್ನೊಂದು ವೀಡಿಯೋದಲ್ಲಿ ವೈದ್ಯೆ ಹಾಗೂ ಸಂತ್ರಸ್ತ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ನೋವಿನಿಂದ ಅಳುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಮಗುವಿಗೆ ಔಷಧಿ ತರಲು ತೆರಳಿದ್ದ ಮಹಿಳೆಯನ್ನು ನುಂಗಿದ ಹೆಬ್ಬಾವು!

    ವೈದ್ಯೆ ಪ್ರಿಯಕರನ ಮರ್ಮಾಂಗ ಕತ್ತರಿಸಿದ್ದಲ್ಲದೇ ಬಳಿಕ ಶೌಚಾಲಯದಲ್ಲಿ ಫ್ಲಶ್ ಮಾಡಿದ್ದಾಳೆ. ಸಂತ್ರಸ್ತ ಮಧುರಾ ಬ್ಲಾಕ್‌ನ ವಾರ್ಡ್‌ ನಂ.12ರ ಕೌನ್ಸಿಲರ್‌ ಆಗಿದ್ದು, ಸದ್ಯ ಪಾಟ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (PMCH) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಲೇಡಿ ಡಾಕ್ಟರ್ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿ ರೋಗಿಗಳ ಚಿನ್ನಾಭರಣ ಕಳವು

    ಲೇಡಿ ಡಾಕ್ಟರ್ ವೇಷದಲ್ಲಿ ಆಸ್ಪತ್ರೆಗೆ ನುಗ್ಗಿ ರೋಗಿಗಳ ಚಿನ್ನಾಭರಣ ಕಳವು

    ಬೆಂಗಳೂರು: ಲೇಡಿ ಡಾಕ್ಟರ್ (Lady Doctor) ವೇಷದಲ್ಲಿ ನಗರದ ಪ್ರತಿಷ್ಠಿತ ಆಸ್ಪತ್ರೆಗೆ ನುಗ್ಗಿದ ಮಹಿಳೆಯೊಬ್ಬಳು ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಇಲ್ಲಿನ ಅಶೋಕ ನಗರ ಪೊಲೀಸ್ ಠಾಣಾ (AshokNagara Police Station) ವ್ಯಾಪ್ತಿಯಲ್ಲಿರುವ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ (St. Philomenas Hospital) ಘಟನೆ ನಡೆದಿದೆ. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ಇದೇ ಜನವರಿ 11 ರಂದು ಉಸಿರಾಟ ಸಮಸ್ಯೆಯಿಂದ ಸರಸಮ್ಮ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಾಕ್ಟರ್ ಡ್ರೆಸ್ ಹಾಕಿಕೊಂಡು ವಾರ್ಡ್ ಒಳಗೆ ಬಂದ ಖತರ್ನಾಕ್ ಲೇಡಿ, ರೋಗಿಗೆ ಚಿಕಿತ್ಸೆ ನೀಡಬೇಕೆಂದು ಎಲ್ಲರಿಗೂ ಹೊರಗೆ ಹೋಗುವಂತೆ ಸೂಚಿಸಿದ್ದಾಳೆ. ಕೆಲ ಹೊತ್ತಿನ ನಂತರ ಆಕೆಯೂ ಹೊರಗೆ ಹೋಗಿದ್ದಾಳೆ. ಇದನ್ನೂ ಓದಿ: ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ಇದೇ ಸಮಯಕ್ಕೆ ಒಳಗೆ ಬಂದ ಶುಶ್ರೂಷಕಿ ಆ ಡಾಕ್ಟರ್ ಯಾರು? ಅಂತಾ ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಡಾಕ್ಟರ್ ಯಾರು ಬಂದಿಲ್ಲ ಎಂದು ತಿಳಿದು, ಆಕೆ ನಕಲಿ ಡಾಕ್ಟರ್ ಅನ್ನೋದು ಗೊತ್ತಾಗಿದೆ. ಅನುಮಾನಗೊಂಡು ಸರಸಮ್ಮರನ್ನ ಚೆಕ್ ಮಾಡಿದ ವೇಳೆ ಎರಡು ಉಂಗುರ, ಕತ್ತಿನಲ್ಲಿದ್ದ ಸರ ಸೇರಿ 41 ಗ್ರಾಂ ಚಿನ್ನಾಭರಣ ಕಳವು ಮಾಡಿರೋದು ಗೊತ್ತಾಗಿದೆ.

    ನಂತರ ಪೊಲೀಸರಿಗೆ ಮಾಹಿತಿ ನೀಡಿ, ವಿಚಾರಣೆ ನಡೆಸಿದಾಗ ಆ ನಕಲಿ ಲೇಡಿ ಡಾಕ್ಟರ್ ಅಕ್ಕಪಕ್ಕದ ವಾರ್ಡ್ಗಳಲ್ಲೂ ಇದೇ ರೀತಿ ಕೃತ್ಯವೆಸಗಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಶೋಕ ನಗರ ಪೊಲೀಸರು, ನಕಲಿ ಡಾಕ್ಟರ್ ಗಾಗಿ ಹುಡುಕಾಟ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇದು ಭಾರತದ ಚೈತನ್ಯ: ಸಾರ್ವಜನಿಕರ ಕಾರ್ಯಕ್ಕೆ ಮೋದಿ ಮೆಚ್ಚುಗೆ

    ಇದು ಭಾರತದ ಚೈತನ್ಯ: ಸಾರ್ವಜನಿಕರ ಕಾರ್ಯಕ್ಕೆ ಮೋದಿ ಮೆಚ್ಚುಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿತ್ಯವೂ ಹೋರಾಡುತ್ತಿದ್ದಾರೆ. ಈ ಪೈಕಿ ವೈದ್ಯೆಯೊಬ್ಬರಿಗೆ ಸ್ಥಳೀಯರು ತೋರಿದ ಗೌರವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವಿಡಿಯೋವನ್ನು ಟ್ವೀಟ್ ಮಾಡಿದ್ದ ಚಂಡೀಗಢ ಬಿಜೆಪಿ ಕಾರ್ಯದರ್ಶಿ ದೀಪಕ್ ಮಲ್ಹೋತ್ರಾ, ಮಹಿಳಾ ವೈದ್ಯೆಯೊಬ್ಬರು ಕೊರೊನಾ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಬರೋಬ್ಬರಿ 20 ದಿನಗಳ ಕಾಲ ಚಿಕಿತ್ಸೆ ನೀಡಿ ಮನೆಗೆ ವಾಪಸ್ ಆದರು. ಈ ವೇಳೆ ಅವರಿಗೆ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಜನರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂದು ಬರೆದುಕೊಂಡಿದ್ದರು.

    ದೀಪಕ್ ಮಲ್ಹೋತ್ರಾ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ರೀತಿಯ ಕ್ಷಣಗಳು ಹೃದಯವನ್ನು ಸಂತೋಷಪಡಿಸುತ್ತವೆ. ಇದು ಭಾರತದ ಚೈತನ್ಯ, ಸ್ಫೂರ್ತಿ. ಕೋವಿಡ್-19 ವಿರುದ್ಧ ನಾವು ಧೈರ್ಯದಿಂದ ಹೋರಾಟ ನಡೆಸಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೆಲಸ ಮಾಡುವವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 1,993 ಮಂದಿಗೆ ಸೋಂಕು ದೃಢಪಟ್ಟಿದ್ದು, 73 ಮಂದಿ ಸಾನ್ನಪ್ಪಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,147ಕ್ಕೆ ಏರಿಕೆ ಕಂಡಿದೆ.

    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿರುವ ಪ್ರಕಾರ, ಕಳೆದ 14 ದಿನಗಳಲ್ಲಿ ಕೋವಿಡ್-19ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ. ಅದೇ ರೀತಿ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

  • ಯುವಕನಿಂದ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ

    ಯುವಕನಿಂದ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ

    ಮಂಗಳೂರು: ಕರ್ತವ್ಯ ನಿರತ ವೈದ್ಯೆ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ರೆಹಮಾನ್ ಬಂಧಿತ ಆರೋಪಿ. ರೆಹಮಾನ್ ಚಿಕಿತ್ಸೆಯ ವಿಚಾರವಾಗಿ ವೈದ್ಯೆ ರಾಹಿಳಾ ಅವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ.

    ಘಟನೆಯ ವಿವರ:
    ಆರೋಪಿ ರೆಹಮಾನ್ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಚಿಕಿತ್ಸೆ ವಿಧಾನ ಪ್ರಶ್ನಿಸಿ ವೈದ್ಯೆ ರಾಹಿಳಾ ಅವರ ಜೊತೆಗೆ ವಾಗ್ವಾದ ನಡೆಸಿದ್ದಾನೆ. ಅಷ್ಟಕ್ಕೆ ನಿಲ್ಲಿಸದೇ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಈ ಕುರಿತು ವೈದ್ಯೆ ರಾಹಿಳಾ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರೆಹಮಾನ್‍ನನ್ನು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ.

    https://www.youtube.com/watch?v=JklAE0I3lQ0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv