ಮುಂಬೈ: ಸಾವು ಯಾರಿಗೆ ಹೇಗೆ, ಎಲ್ಲಿ, ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅದೇ ರೀತಿ ಮುಂಬೈನಲ್ಲಿ (Mumbai) ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಂಡೆ ಕಲ್ಲೊಂದು (Rock) ಬೆಟ್ಟದಿಂದ ಉರುಳಿ ಕಾರಿನ ಸನ್‌ರೂಫ್‌ನಿಂದ ಒಳಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ.
ಮಹಿಳೆಯು ಪುಣೆಯಿಂದ ಮಂಗಾವ್‌ಗೆ ವೋಕ್ಸ್ವ್ಯಾಗನ್ ವರ್ಟಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಕಾರಿನ ಮೇಲೆ ಬಂಡೆ ಕಲ್ಲೊಂದು ಉರುಳಿ ಸನ್‌ರೂಫ್ ಮೂಲಕ ಒಳಗೆ ಬಿದ್ದಿದೆ. ಮಹಿಳೆ ಕೂತಿದ್ದ ಸೀಟಿನ ಮೇಲೆ ಬಿದ್ದಿದ್ದರಿಂದ ಆಕೆಯ ತಲೆಗೆ ನೇರವಾಗಿ ಬಂಡೆ ಕಲ್ಲು ಬಡಿದು, ಮೃತಪಟ್ಟಿದ್ದಾರೆ.
ಅಲ್ಲದೇ ಮುಂಬೈನಲ್ಲಿ ಪ್ರತ್ಯೇಕ ಘಟನೆಯೊಂದು ಸಂಭವಿಸಿದ್ದು, ಚಾಲಕ ತನ್ನ ಸಮಯಪ್ರಜ್ಞೆಯಿಂದ 12 ಪ್ರಯಾಣಿಕರ ಜೀವ ಉಳಿಸಿದ್ದಾನೆ. ಬುಧವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಮುಂಬೈನಿಂದ ಜಲ್ನಾಗೆ ಪ್ರಯಾಣಿಸುತ್ತಿದ್ದಾಗ ಸಮೃದ್ಧಿ ಹೆದ್ದಾರಿಯಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು.
ಕೂಡಲೇ ಎಚ್ಚೆತ್ತುಕೊಂಡ ಚಾಲಕ 12 ಪ್ರಯಾಣಿಕರನ್ನು ತಕ್ಷಣವೇ ಬಸ್‌ನಿಂದ ಕೆಳಗಿಳಿಸಿ ಅವರ ಪ್ರಾಣ ಉಳಿಸಿದ್ದಾನೆ.
ಮಂಗಳೂರು: ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸವಾರೆ ಮೇಲೆಯೇ ಕ್ಯಾಂಟರ್ ಲಾರಿ ಹರಿದು, ಮಹಿಳೆ ಮೃತಪಟ್ಟಿರುವ ಘಟನೆ ಮಂಗಳೂರು (Mangaluru) ನಗರದ ಕೂಳೂರು (Kulur) ರಾಯಲ್ ಓಕ್ ಶೋರೂಂ ಮುಂಭಾಗ ನಡೆದಿದೆ.
ಉಡುಪಿಯ ಪರ್ಕಳ ಮೂಲದ ಮಾಧವಿ ಮೃತ ಮಹಿಳೆ. ಮಂಗಳೂರಿನ ಎ.ಜೆ.ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿ, ಕರ್ತವ್ಯಕ್ಕೆ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದರು. ದ್ವಿಚಕ್ರ ವಾಹನವು ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಮಾಧವಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳು ಹೊಂಡಗುಂಡಿಗಳಿಂದ ತುಂಬಿದ್ದು, ಇದನ್ನು ದುರಸ್ಥಿ ಮಾಡದ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
– ಪ್ರೀಪ್ಲಾನ್ ಮಾಡಿ ಮಸೀದಿಯಿಂದ ಕಲ್ಲೆಸೆದಿದ್ದಾರೆ – ಪೊಲೀಸರಿಗೆ ಹೆದರದವರು ನಮ್ಮನ್ನು ಬಿಡ್ತಾರಾ?
ಮಂಡ್ಯ: ಈ ಪ್ರದೇಶವನ್ನು ಮುಸ್ಲಿಮರು ಮಿನಿ ಪಾಕಿಸ್ತಾನ (Mini Pakistan) ಮಾಡ್ಬೇಕು ಅಂದ್ಕೊಂಡಿದ್ದಾರೆ ಎಂದು ಸ್ಥಳೀಯ ಹಿಂದೂ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದ (Mandya) ಮದ್ದೂರಿನಲ್ಲಿ (Maddur) ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರು ಕಲ್ಲೆಸೆದ ಬಗ್ಗೆ ಮಹಿಳೆಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಸ್ಲಿಂ ಯುವಕರೇ ಕಲ್ಲೆಸೆಯಬೇಕು ಅಂತ ಫ್ರೀ ಪ್ಲಾನ್ ಮಾಡ್ಕೊಂಡಿದ್ರು. ಮಸೀದಿಗೆ ಯಾರೋ ಕಲ್ಲು ಎಸೆದಿದ್ದಾರೆ. ಅದಕ್ಕೆ ನಾವು ಕಲ್ಲೆಸೆದಿದ್ದೇವೆ ಅಂತ ಅವ್ರು ಹೇಳ್ತಾರೆ. ಆದ್ರೆ ಎಲ್ಲಾ ರೀತಿಯ ಸಾಕ್ಷಿಗಳು ಸಹ ಇದೆ ಎಲ್ಲಿಂದ ಕಲ್ಲು ಎಸೆದಿದ್ದಾರೆ ಅಂತಾ ಪೊಲೀಸರು ಹೇಳಲಿ ಎಂದಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ
ನಾವು ಹಿಂದೂಗಳು ಒಗ್ಗಟ್ಟಾಗಿ ಇದಿದ್ದರೆ ನಮಗೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಇಲ್ಲಿ ಮಕ್ಕಳನ್ನು ಓದ್ಸೋಕು ಆಗ್ತಿಲ್ಲ. ಎಲ್ಲ ಮಕ್ಕಳನ್ನು ಬೇರೆ ಕಡೆ ಸ್ಕೂಲ್, ಕಾಲೇಜಿಗೆ ಸೇರಿಸಿದ್ದೇವೆ. ಅಂತಹ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾತ್ರಿ ಆಯಿತು ಅಂದ್ರೆ ಮುಸ್ಲಿಂ ಹುಡುಗರು ಲಾಂಗ್, ಮಚ್ಚು ಹಿಡ್ಕೊಂಡು ಬರ್ತಾರೆ. ಒಂದು ಹೆಣ್ಮಕ್ಕಳು ಓಡಾಡೋಕೆ ಆಗಲ್ಲ. ಚಾಕು ಹಿಡ್ಕೊಂಡು ಓಡಿ ಬರೋದು, ಬಾಟಲ್ ಎಸೆಯೋದು ಈ ರೀತಿಯಾಗಿ ವರ್ತಿಸ್ತಾರೆ. ಪೊಲೀಸರಿಗೆ ಹೆದರದೇ ಇರೋರು ಇನ್ನು ನಮ್ಮನ್ನು ಬಿಡ್ತಾರಾ ಎಂದು ಪ್ರಶ್ನಿಸಿದ್ದಾರೆ.
ಗಂಡಸರು ಓಡಾಡಿದ್ರೇನೆ ಬಾರೋ ಹೊಡಿ ಬಾ ಅಂತಾರೆ. ಇನ್ನು ನಮ್ಮಂತ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಳ್ತಾರೆ. ನೀವು ಅಲ್ಲಿ ಕಿಡಿ ಹಚ್ಚಿ ಬಂದಿದ್ದೀರಾ ಅಲ್ವಾ. ಅದು ಇಲ್ಲಿ ಉರಿತಿದೆ ಅಂತಾ ನಿನ್ನೆ ಪೊಲೀಸರು ಹೇಳಿದ್ರು. ರೌಂಡ್ಸ್ ಬರೋ ಪೊಲೀಸರಿಗೇನೆ ಇವರೆಲ್ಲ ಹೆದರಲ್ಲ. ಇನ್ನು ನಾವೆಲ್ಲ ಏನು ಮಾಡ್ಬೇಕು ಎಂದಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ
ನಾವು ಹಿಂದುಗಳಲ್ಲ, ನಾವು ಮುಸ್ಲಿಂ ಆಗಿ ಮತಾಂತರ ಆಗ್ತೀವಿ. ಇಲ್ಲಿ ಇದೊಂದೇ ಆಗೋಕೆ ಬಾಕಿ ಇರೋದು. ಈ ಏರಿಯಾದಲ್ಲಿ ಅರ್ಧಕರ್ಧ ಜನ ಮುಸ್ಲಿಮರೇ ಇರೋದು. ನಾವು ಗಣೇಶನನ್ನ ಮೆರವಣೆಗೆ ವರ್ಷಕ್ಕೆ ಒಂದೇ ಸಲ ಮಾಡೋದು. ಆದ್ರೆ ಇವರೆಲ್ಲ ಹೇಗೆ ಊರೆಲ್ಲ ಹೋಗಿ ರ‍್ಯಾಲಿ ಮಾಡಿದ್ರು. ಈ ಸ್ಥಳವನ್ನು ಮಿನಿ ಪಾಕಿಸ್ತಾನ ಮಾಡ್ಬೇಕು ಅನ್ನೋದೇ ಇವ್ರ ಅಜೆಂಡಾ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂ ಹುಡುಗರು ರಾತ್ರಿ ಆದ್ರೆ ಬಟ್ಟೆ ಬಿಚ್ಚಿಕೊಂಡು, ಕಾಂಪೌಂಡ್ ಹಾರಿಕೊಂಡು ಬರ್ತಾರೆ. ಪೊಲೀಸರು ಬಂದು ನಮ್ಮನ್ನ ಕೇಳ್ತಾರೆ. ಆದ್ರೆ ಅವರೆಲ್ಲ ಎಲ್ಲಿ ಇರ್ತಾರೆ ಅಂತ ನಮಗೆ ಗೊತ್ತಿರಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಹೆಣ್ಮಗಳು ಕೂಡ ಹೆದರಿಕೊಂಡು ಆ ಮಸೀದಿ ಇರೋ ಕಡೆ ಹೋಗಲ್ಲ ಅಂತಾರೆ. ಏರಿಯಾದಲ್ಲಿ ಯಾರಾದ್ರು ಸತ್ರೆ ಅವರ ಮೆರವಣಿಗೆಯ ತಮಟೆ ಶಬ್ದ ಕೂಡ ಮಸೀದಿ ಕೇಳ್ಬಾರ್ದು ಅಂತಾರೆ. ಇದೆಂತ ನ್ಯಾಯ. ಇಲ್ಲಿರುವ ಹಿಂದುಗಳಿಗೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷರನ್ನು ವಿಚಾರಿಸಿದಾಗ ಬ್ಯಾಂಕ್‌ನ ಹಿತದೃಷ್ಟಿಯಿಂದ ಹಣ ಬಳಸಿದ್ದೇವೆಂದು 4 ವರ್ಷಗಳಿಂದ ಸಬೂಬು ಹೇಳುತ್ತಾ ಬಂದಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಮ್ಯಾನೇಜರ್ ಶಿವಕುಮಾರ್ ಅವರನ್ನ ಸೇವೆಯಿಂದ ಅಮಾನತು ಮಾಡಲಾಗಿತ್ತು. ಅವರು ಬಳಸಿಕೊಂಡ ಹಣಕ್ಕೆ ಬಡ್ಡಿ ಸಹಿತ ವಾಪಸ್ ಕೊಡಿಸುವುದಾಗಿ ಅಧ್ಯಕ್ಷ ಕೆ.ಎನ್. ಬಸಂತ್ ಭರವಸೆ ನೀಡಿದ್ದರು. ಈವರೆಗೆ 25 ಲಕ್ಷ ರೂ. ಮಾತ್ರ ಸುನಿತಾ ಅವರ ಖಾತೆಗೆ ಜಮೆ ಆಗಿದ್ದು, ಇನ್ನೂ 1 ಕೋಟಿ 16 ಲಕ್ಷ ರೂ. ಕೊಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಗುಂಡು ತಗುಲಿ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು
ತಮ್ಮ ಬಾಕಿ ಹಣವನ್ನು ವಾಪಸ್ ನೀಡದೇ ಇದಿದ್ದಕ್ಕೆ ಸುನಿತಾ, ಬ್ಯಾಂಕ್‌ನ ಅಧ್ಯಕ್ಷ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ (Vijayanagara Police Station) ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪೂಜಾ, 4 ತಿಂಗಳ ಹಿಂದೆಯಷ್ಟೇ ಅಮರೇಶ ಎಂಬುವವರನ್ನು ಮದುವೆಯಾಗಿದ್ದರು. ಪತಿ ಅಮರೇಶ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸೋಮವಾರವಷ್ಟೇ ಚೆನ್ನೈಗೆ ಕೆಲಸಕ್ಕೆ ತೆರಳಿದ್ದರು. ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ: ಬೀದಿ ನಾಯಿಗಳ(Street Dog) ದಾಳಿಯಿಂದ ಮಹಿಳೆಗೆ ಗಂಭೀರ ಗಾಯವಾದ ಘಟನೆ ಜಿಲ್ಲೆ ರೋಣ(Rona) ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ.
ಜನ್ನತಬೀ (45) ಗಾಯಗೊಂಡ ಮಹಿಳೆ. ಗಾಡಗೋಳಿ ಗ್ರಾಮದ ಹೊಳೆ ಆಲೂರ ರಸ್ತೆಯಲ್ಲಿ ನಾಯಿಗಳ ಕಾದಾಟ ನಡೆದಿತ್ತು. ಆ ಸಂದರ್ಭದಲ್ಲಿ ಮಹಿಳೆ ಮನೆಯಿಂದ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದರು. ಕಾದಾಡಿಕೊಂಡು ಬಂದ ಶ್ವಾನಗಳ ಗುಂಪು ಏಕಾಏಕಿ ಮಹಿಳೆಯ ಮೇಲೆ ಎರಗಿವೆ. ಈ ಪರಿಣಾಮ ಮಹಿಳೆ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ಮಹಿಳೆ ಕೆಳಗೆ ಬಿದ್ದ ಕೂಡಲೇ ನಾಯಿಗಳು ಎಲ್ಲೆಂದರಲ್ಲಿ ಕಚ್ಚಿವೆ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ರೋಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ರಂಜಾನ್ ಹಬ್ಬಕ್ಕೆ ಬೆಂಗಳೂರಿನಿಂದ ತವರೂರು ಗಾಡಗೋಳಿಗೆ ಆಗಮಿಸಿದ್ದರು. ಇದನ್ನೂ ಓದಿ: ಚಿತ್ರದುರ್ಗ| ಜಮೀನಿನ ಬದು ಬಳಿ ಬೆಂಕಿಯಿಟ್ಟ ವಿಚಾರಕ್ಕೆ ಗುಂಪು ಘರ್ಷಣೆ – ಮೂವರಿಗೆ ಗಾಯ
ಘಟನೆಯ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದರು.
ಝಾನಾ, ಹಿಂದೂ ಕಾಲೋನಿಯ ಟೆಕ್ನೋ ಹೈಟ್ಸ್ ಕಟ್ಟಡದ ಎಂಟನೇ ಮಹಡಿಯಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಪ್ರತಿದಿನ ಆಕೆ, ಇಬ್ಬರು ಸ್ನೇಹಿತರೊಂದಿಗೆ 14ನೇ ಮಹಡಿಯಲ್ಲಿರುವ ಟೆರೇಸ್‌ಗೆ ತೆರಳುತ್ತಿದ್ದಳು. ಮಂಗಳವಾರ ಸಂಜೆಯೂ ಸಹ ಸ್ನೇಹಿತರೊಂದಿಗೆ ಟೆರೇಸ್‌ಗೆ ತೆರಳಿದ್ದಳು. ಈ ವೇಳೆ ಝಾನಾ ಟೆರೇಸ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬದುಕು ಕೊಟ್ಟ ರೆಸ್ಟೋರೆಂಟ್‌ಗೆ ಶೈನ್ ಶೆಟ್ಟಿ ಗುಡ್ ಬೈ- ಫ್ಯಾನ್ಸ್‌ಗೆ ಬಹಿರಂಗ ಪತ್ರ ಬರೆದ ನಟ
ಪ್ರೇಮ ವೈಫಲ್ಯದಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಸ್ನೇಹಿತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಮಟುಂಗಾ ಪೊಲೀಸ್ ಠಾಣೆಯಲ್ಲಿ( Matunga police station) ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಜಯಪುರ: ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ ಆಗಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನವಭಾಗ್ ರಸ್ತೆಯ ಫಿಶ್ ಟನಲ್ ಎಕ್ಸ್ಪೋದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅ.20ರಂದು ಸಾಯಂಕಾಲ ಫಿಶ್ ಟನಲ್ ಎಕ್ಸ್ಪೋದಲ್ಲಿರುವ ರೇಂಜರ್ ಸ್ವಿಂಗ್‌ನಲ್ಲಿ ನಿಖಿತಾ ಕುಳಿತಿದ್ದರು. ಮೂವರು ಯುವತಿಯರು ಒಟ್ಟಿಗೆ ಕುಳಿತಿದ್ದು, ಅದರಲ್ಲಿ ನಿಖಿತಾಳ ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ಟಾಗಿ ಕೆಳಗೆ ಬಿದ್ದಿದ್ದಾಳೆ. ತಲೆ ಕೆಳಗಾಗಿ ಬಿದ್ದ ಪರಿಣಾಮ ತ್ರೀವವಾಗಿ ಗಾಯಗೊಂಡಿದ್ದರು. ತಕ್ಷಣ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಅ.22) ಯುವತಿ ಮೃತಪಟ್ಟಿದ್ದಾಳೆ.
ಬೆಂಗಳೂರು: ಬೆಳ್ಳಂಬೆಳಗ್ಗೆ ಆಟೋ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಂಗಳೂರು (Bengaluru) ವಿಧಾನಸೌಧ ಕೂಗಳತೆಯ ಕಾಫಿ ಬೋರ್ಡ್ ಸಿಗ್ನಲ್ ಬಳಿ ನಡೆದಿದೆ.
ಶಾಲಿನಿ ಮೃತ ದುರ್ದೈವಿ. ಬೆನ್ಸನ್ ಟೌನ್ ಚಿನ್ನಪ್ಪ ಗಾರ್ಡನ್‌ನಿಂದ `ನಮ್ಮ ಯಾತ್ರಿ’ (Namma Yatri) ಆಪ್ ಮೂಲಕ ಆಟೋ ಬುಕ್ ಮಾಡಿದ್ದ ಯುವತಿ, ಮೆಜೆಸ್ಟಿಕ್ (Megestic) ಕಡೆ ಪ್ರಯಾಣ ಬೆಳಸಿದರು. ಈ ವೇಳೆ ಕಾಫಿ ಬೋರ್ಡ್ ಜಂಕ್ಷನ್‌ಗೆ ಬಂದ ವೇಳೆ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ಲಾರಿ ಸಿಗ್ನಲ್ ಜಂಪ್ ಮಾಡಿ ಆಟೋಗೆ ಗುದ್ದಿದ ಪರಿಣಾಮ ಹಿಂಬದಿ ಸೀಟ್‌ನಲ್ಲಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ದಶೋತ್ಸವ ಸಂಭ್ರಮದಲ್ಲಿ ಪಬ್ಲಿಕ್ ಮ್ಯೂಸಿಕ್ – ನೀವಿಲ್ಲದೇ ನಾವಿಲ್ಲ, ಮುಂದೆಯೂ ಹರಸಿ ಹಾರೈಸಿ
– ದರ್ಶನ್‌ಗೋಸ್ಕರ ಚಿಕನ್, ಮಟನ್ ತಂದುಕೊಡ್ತೀನಿ ಎಂದ ಡಿಬಾಸ್ ಫ್ಯಾನ್ – ಯಾರು ಸಿಗರೇಟ್ ಸೇದಲ್ಲ, ಕುಡಿಯಲ್ಲ ಹೇಳಿ ಎಂದು ಪ್ರಶ್ನೆ
ಬಳ್ಳಾರಿ: ನಟ ದರ್ಶನ್ (Actor Darshan) ನೋಡಲೇಬೇಕು ಎಂದು ಬಳ್ಳಾರಿ ಸೆಂಟ್ರಲ್ ಜೈಲಿನ (Ballary Central Iail) ಮುಂಭಾಗ ಬಂದ ಮಹಿಳಾ ಅಭಿಮಾನಿಯೊಬ್ಬರು ಹೈಡ್ರಾಮಾ ಮಾಡಿದ್ದಾರೆ.
ಕಲಬುರಗಿ (Kalaburagi) ಮೂಲದ ಲಕ್ಷ್ಮೀ ಎಂಬ ಮಹಿಳೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ದರ್ಶನ್ ನೋಡಲು ಬೆಂಗಳೂರಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಿದ್ದರು. ಜೈಲು ಮುಂಭಾಗದಲ್ಲಿ ಬಂದ ಮಹಿಳೆ ದರ್ಶನ್ ನೋಡಬೇಕೆಂದು ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ.ಇದನ್ನೂ ಓದಿ: ಕೊಲೆಗೂ ಮುನ್ನ ದರ್ಶನ್ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್ ಪಬ್‌ನಲ್ಲಿ ಸ್ಥಳ ಮಹಜರು; ಫೋಟೊ ರಿವೀಲ್
ಈ ಹಿಂದೆ ಇದೇ ಮಹಿಳೆ, ದರ್ಶನ್ ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿದ್ದಾಗಲೂ (Parappana Agrahara) ಅಲ್ಲಿಗೆ ಭೇಟಿ ನೀಡಿದ್ದರು. ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದು ಆಕೆಯನ್ನು ತಿಳಿಸಿದಾಗ, ದರ್ಶನ್‌ರನ್ನು ಮದುವೆ ಆಗುವುದಕ್ಕೂ ನಾನು ರೆಡಿಯಾಗಿ ಬಂದಿರುವೆ. ನನಗೆ ದರ್ಶನ್ ಅಂದ್ರೆ ತುಂಬಾ ಇಷ್ಟ. ನಾನು ದರ್ಶನ್ ಅವರ ಹೆಂಡತಿಯಾಗುವುದಕ್ಕೂ ಸಿದ್ಧಳಿದ್ದೇನೆ. ದರ್ಶನ್ ಅವರಿಗೆ ವಿಜಯ ಲಕ್ಷ್ಮೀ (Vijaya lakshmi) ಒಬ್ಬರೇ ಹೆಂಡತಿ ಇದ್ದಾರೆ. ಇವಾಗ ನನಗೆ ಅವರೆಂದರೆ ತುಂಬಾ ಇಷ್ಟ. ನಾನು ಜೈಲಲ್ಲಿ ಅವರನ್ನು ನೋಡಲೇಬೇಕು. ಅವರನ್ನು ಮಾತಾಡಿಸಿ ಬರಲೇಬೇಕು. ನಾನು ಅವರಿಗೆ ಮಾತಾಡಿಸುವುದಕ್ಕೆ ಪರಪ್ಪನ ಆಗ್ರಹಾರಕ್ಕೂ ಹೋಗಿದ್ದಾಗ ಅವಕಾಶ ಸಿಗಲಿಲ್ಲ. ನಾನು ಅವರನ್ನು ಮಾತಾಡಿಸಿದ ಬಳಿಕವೇ ಇಲ್ಲಿಂದ ಹೋಗಬೇಕು. ನಾನು ಅವರ ರಕ್ತ ಸಂಬಂಧಿಯಾಗುವುದಕ್ಕೆ ಕಾಯ್ತಾ ಇದ್ದೀನಿ ಎಂದು ಆ ಮಹಿಳೆ ರಂಪಾಟ ಮಾಡಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿಗೆ ಯಾಕೆ ಸಿಫ್ಟ್ ಮಾಡಿದ್ದೀರಾ? ಬೆಂಗಳೂರು ಪೊಲೀಸರು, ದರ್ಶನ್ ಅವರು ಸಿಗರೇಟ್ ಸೇದಿದ್ದಾರೆಂದು ಅವರನ್ನು ಇಲ್ಲಿಗೆ ಕರೆತಂದಿದ್ದಾರೆ. ಯಾರು ಬೀಡಿ ಸೇದಲ್ಲ? ಯಾರು ಸಿಗರೇಟ್ ಸೇದಲ್ಲ? ಯಾರು ಕುಡಿಯಲ್ಲ ಹೇಳಿ? ಸಿಟಿಗಳಲ್ಲಿ ಹೆಣ್ಣುಮಕ್ಕಳೇ ಇದೆಲ್ಲ ಮಾಡುತ್ತಾರೆ. ಹಂಗಾದ್ರೆ ಇವೆಲ್ಲಾ ಬ್ಯಾನ್ ಮಾಡಬೇಕು. ಯಾರು ಜೀವ ಹೊಡೆದಿಲ್ಲವಾ? ದರ್ಶನ್ ಅವರು ಒಬ್ಬ ಮಹಿಳೆಯ ಮಾನ ಕಾಪಾಡಿದ್ದಾರೆ. ಬೆಂಗಳೂರಲ್ಲಿ ಖಾಕಿ ಬಟ್ಟೆ ಹಾಕಿದವರು ದರ್ಶನ್‌ರನ್ನ ಇಲ್ಲಿಗೆ ಕಳುಹಿಸಿದ್ದಾರಲ್ಲ. ಸಿಟಿಯಲ್ಲಿ ಖಾಕಿ ಹಾಕಿಕೊಂಡು ಕೆಲಸ ಮಾಡುವವರು ಹಳ್ಳಿಗೆ ಬರಲಿ, ಹಳ್ಳಿಯವರು ಸಿಟಿಗೆ ಹೋಗಲಿ ಎಂದು ಸಿಟ್ಟಿಗೆದ್ದಿದ್ದಾರೆ.ಇದನ್ನೂ ಓದಿ: ನೋಡಿ.. ನೋಡಿ.. ಜೀವಂತ ಹೆಣವಾಗಿಬಿಟ್ಟಿದ್ದೇವೆ – ರೇಣುಕಾ ಕೊನೇ ಕ್ಷಣದ ಫೋಟೋ ಕಂಡು ತಂದೆ ಕಣ್ಣೀರು
ಅವರ ಹೆಂಡತಿ ಜೊತೆಗೆ ಬರುತ್ತಿದ್ದೆ. ಆದರೆ ಅವರು ಇವಾಗ ಬಂದಿಲ್ಲ. ದರ್ಶನ್‌ಗೋಸ್ಕರ ಹಣ್ಣು ತೆಗೆದುಕೊಂಡು ಬಂದಿರುವೆ. ಅವಕಾಶ ಕೊಟ್ಟರೆ ಅವರಿಗೋಸ್ಕರ ಚಿಕನ್, ಮಟನ್ ತಂದು ಕೊಡುತ್ತೇನೆ. ಮಾತಾಡಲು ಬರುವವರನ್ನು ಒಳಗಡೆ ಬಿಡಬೇಕು. ನನಗೆ ಯಾರು ಕಳುಹಿಸಲಿಲ್ಲ. ನಾನು ಒಬ್ಬಳೆ ಬಂದಿದ್ದೇನೆ. ಮಾತಾಡದಿದ್ದರೂ ನಾನು ಅವರನ್ನು ನೋಡಿಕೊಂಡು ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಆಕೆಯನ್ನು ಮನವೊಲಿಸಿದ ಜೈಲು ಸಿಬ್ಬಂದಿ ವಾಪಾಸ್ ಕಳುಹಿಸಿದ್ದಾರೆ.