Tag: Ladies PG

  • ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್

    ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್

    ಬೆಂಗಳೂರು: ಲೇಡಿಸ್ ಪಿ.ಜಿಗೆ ನುಗ್ಗಿ ಯುವತಿಯ ಮೈ ಕೈ ಮುಟ್ಟಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತಲೆಮರಿಸಿಕೊಂಡಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶದ (Andhra Pradesh) ಮದನ್‌ಪಲ್ಲಿ (Madanapalle) ಮೂಲದ ಕೆ.ನರೇಶ್ ಪಟ್ಯಂ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಲ್ಲಿ (Bengaluru) ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.ಇದನ್ನೂ ಓದಿ: ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

    ಆ.29ರಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಪಿ.ಜಿಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೇ ಯುವತಿಯನ್ನ ಎಳೆದಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ.

    ಸದ್ದುಗುಂಟೆಪಾಳ್ಯ (Sadduguntepalya) ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸಾಮಿಯು ಯುವತಿಯ ರೂಮ್‌ಗೆ ನುಗ್ಗಿದಾಗ ಆಕೆ ರೂಮ್‌ಮೇಟ್ ಇರಬಹುದು ಅಂದುಕೊಂಡಿದ್ದಳು. ಕಾಮುಕ ಮೊದಲೇ ಪಿಜಿ ಫ್ಲೋರ್‌ನ ಎಲ್ಲಾ ರೂಮ್ ಡೋರ್‌ಗಳನ್ನು ಲಾಕ್ ಮಾಡಿ, ಬಳಿಕ ಯುವತಿ ಬಳಿ ಹೋಗಿ ಆಕೆಯ ಕೈ ಕಾಲು ಮುಟ್ಟಿದ್ದ. ಯುವತಿಗೆ ಎಚ್ಚರವಾಗಿ ಗಾಬರಿಯಿಂದ ಕಿರುಚಿದಾಗ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಈ ವೇಳೆ ಪ್ರತಿರೋಧ ಒಡ್ಡಿ, ಕೂಗಾಡಿ ಹೊರಬಂದಿದ್ದ ಯುವತಿಯ ಕಪಾಳಕ್ಕೆ ಹೊಡೆದು, ಆಕೆಯನ್ನು ಎಳೆದಾಡಿ ಕಾಮುಕ ಎಸ್ಕೇಪ್ ಆಗಿದ್ದ.

    ಸದ್ಯ ಸದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: Bengaluru | ಲೇಡಿಸ್ ಪಿಜಿಗೆ ನುಗ್ಗಿ ಎಂಜಿನಿಯರ್ ಕುತ್ತಿಗೆಗೆ ಚಾಕು ಇಟ್ಟು ಚಿನ್ನಾಭರಣ ದರೋಡೆ

  • ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

    ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

    ಬೆಂಗಳೂರು: ಲೇಡಿಸ್ ಪಿ.ಜಿಗೆ ನುಗ್ಗಿ ಯುವತಿಯ ಮೈ ಕೈ ಮುಟ್ಟಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಘಟನೆ ಬಿಟಿಎಂ ಲೇಔಟ್‌ನ (BTM Layout) ಪಿ.ಜಿಯಲ್ಲಿ ನಡೆದಿದೆ.

    ಆ.29 ರಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಪಿ.ಜಿಗೆ ನುಗ್ಗಿದ್ದ ಅಪರಿತ ವ್ಯಕ್ತಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಯುವತಿಯನ್ನ ಎಳೆದಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನೂ ಓದಿ: Uttar Pradesh | ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ದುರ್ಮರಣ, ಐವರಿಗೆ ಗಾಯ

    ಸದ್ದುಗುಂಟೆಪಾಳ್ಯ (Sadduguntepalya) ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸಾಮಿಯು ಯುವತಿಯ ರೂಮ್‌ಗೆ ನುಗ್ಗಿದಾಗ ಆಕೆ ರೂಮ್‌ಮೇಟ್ ಇರಬಹುದು ಅಂದುಕೊಂಡಿದ್ದಳು. ಕಾಮುಕನೂ ಮೊದಲೇ ಪಿಜಿ ಫ್ಲೋರ್‌ನ ಎಲ್ಲಾ ರೂಮ್ ಡೋರ್‌ಗಳನ್ನು ಲಾಕ್ ಮಾಡಿ ಯುವತಿ ಬಳಿ ಹೋಗಿ ಆಕೆಯ ಕೈ ಕಾಲು ಮುಟ್ಟಿದ್ದಾನೆ. ಯುವತಿಗೆ ಎಚ್ಚರವಾಗಿ ಗಾಬರಿಯಿಂದ ಕಿರುಚಿ, ಚಾಕು ತೋರಿಸಿ ಬೆದರಿಕೆ ಹಾಕಿದ್ದಾಳೆ. ಇದನ್ನೂ ಓದಿ: ʻಬಿಗ್ ಬಾಸ್ ಸೀಸನ್‌-12ʼನ ಬಿಗ್‌ ನ್ಯೂಸ್‌ – ಲಾಂಚ್‌ ಡೇಟ್‌ ಅನೌನ್ಸ್‌ ಮಾಡಿದ ಕಿಚ್ಚ ಸುದೀಪ್

    ಈ ವೇಳೆ ಪ್ರತಿರೋಧ ಒಡ್ಡಿ, ಕೂಗಾಡಿ ಹೊರ ಬಂದಿದ್ದ ಯುವತಿಯ ಕಪಾಳಕ್ಕೆ ಹೊಡೆದು, ಆಕೆಯನ್ನು ಎಳೆದಾಡಿ ಕಾಮುಕ ಎಸ್ಕೇಪ್ ಆಗಿದ್ದಾನೆ.

  • ಪ್ರೇಯಸಿ ಅವಾಯ್ಡ್ ಮಾಡಿದ್ದಕ್ಕೆ ಸ್ನೇಹಿತೆಯ ಕೊಲೆ – ಕೋರಮಂಗಲ ಪಿಜಿ ಯುವತಿ ಮರ್ಡರ್ ಕೇಸ್‌ಗೆ ಟ್ವಿಸ್ಟ್‌!

    ಪ್ರೇಯಸಿ ಅವಾಯ್ಡ್ ಮಾಡಿದ್ದಕ್ಕೆ ಸ್ನೇಹಿತೆಯ ಕೊಲೆ – ಕೋರಮಂಗಲ ಪಿಜಿ ಯುವತಿ ಮರ್ಡರ್ ಕೇಸ್‌ಗೆ ಟ್ವಿಸ್ಟ್‌!

    ಬೆಂಗಳೂರು: ಕೋರಮಂಗಲ ಲೇಡಿಸ್ ಪಿಜಿಯಲ್ಲಿ ನಡೆದ ಕೊಲೆ‌ ಪ್ರಕರಣಕ್ಕೆ (Koramangala PG Case) ಪೊಲೀಸ್ ತನಿಖೆ ವೇಳೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೃತಿ ಕುಮಾರಿಯನ್ನ ಎಂಬ ಯುವತಿಯನ್ನ ಕೊಲೆ ಮಾಡಿದ ಹಂತಕ ಕೃತಿ ಕುಮಾರಿ ಸ್ನೇಹಿತೆಯ ಪ್ರಿಯಕರ (Lover) ಅನ್ನೋದು ಬೆಳಕಿಗೆ ಬಂದಿದ್ದು, ಯಾವ ಕಾರಣಕ್ಕೆ‌ ಕೊಲೆ‌ ಮಾಡಿದ ಅನ್ನೋದು ಮಾತ್ರ ಇನ್ನು ನಿಗೂಢವಾಗಿದೆ.

    ಮಂಗಳವಾರ ತಡರಾತ್ರಿ ಕೋರಮಂಗಲ ಪಿಜಿಯಲ್ಲಿ ನಡೆದ ಯುವತಿ ಕೃತಿ ಕುಮಾರಿ ಕೊಲೆ ಪ್ರಕರಣದಲ್ಲಿ ಸ್ಪೋಟಕ‌ ತಿರುವು ಸಿಕ್ಕಿದೆ. ಕೃತಿ ಕುಮಾರಿಯನ್ನ ಕೊಲೆ ಮಾಡಿದ ಹಂತಕ ಕೃತಿ ಕುಮಾರಿಯ ರೂಮ್‌ಮೇಟ್‌ ಕಂ ಸಹೋದ್ಯೋಗಿಯ ಪ್ರಿಯಕರ ಅಭಿಷೇಕ್ ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಭೂಪಾಲ್ ಮೂಲದ ಅಭಿಷೇಕ್‌ ಹಾಗೂ ಕೃತಿ ಕುಮಾರಿಯ ಸ್ನೇಹಿತೆ ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರಂತೆ. ಇತ್ತ ಬೆಂಗಳೂರಿಗೆ ಕೆಲಸ ಅರಿಸಿ‌ ಅಭಿಷೇಕ್ ಪ್ರಿಯತಮೆ ಕೃತಿ ಕುಮಾರಿ‌ ಕೆಲಸ ಮಾಡ್ತಿದ್ದ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದು, ಒಂದೇ ಪಿಜಿಯಲ್ಲಿ ವಾಸವಾಗಿದ್ದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ

    ಭೂಪಾಲ್ ನಲ್ಲಿ ಯಾವುದೇ ಕೆಲಸ ಕಾರ್ಯವಿಲ್ಲದೇ ಇದ್ದ ಅಭಿಷೇಕ್ ಆಗಾಗ್ಗೆ ಬೆಂಗಳೂರಿಗೆ ಬರೋದು, ಪ್ರೇಯಸಿಯೊಂದಿಗೆ ಕೆಲ ಸಮಯ ಸುತ್ತಾಡಿಕೊಂಡು ಹೋಗ್ತಿದ್ದನಂತೆ. ಆದ್ರೆ ಕೆಲಸ ಇಲ್ಲದೇ ಓಡಾಡ್ತಿದ್ದರಿಂದ ಅಭಿಷೇಕ್ ಹಾಗೂ ಆತನ ಪ್ರೇಯಸಿ ನಡುವೆ ಜಗಳ ನಡೆಯುತ್ತಿದ್ದು, ಪ್ರೀತಿಯಲ್ಲಿ ಬಿರುಕು‌ ಮೂಡಿತ್ತಂತೆ. ಇದರ ಮಧ್ಯೆ ಕೆಲಸಕ್ಕೆ ಸೇರಿಕೊ ಅಂತ ಅಭಿಷೇಕ್ ಪ್ರೇಯಸಿ ಹೇಳಿದ್ದು, ಕೆಲಸಕ್ಕೆ ಸೇರಿಕೊಂಡಿರುವುದಾಗಿ ಸುಳ್ಳು ಹೇಳಿದ್ದನಂತೆ. ಅಭಿಷೇಕ್‌ ಸುಳ್ಳು ಹೇಳ್ತಿದ್ದಾನೆ ಅನ್ನೋದು ತಿಳಿದ ನಂತರ ಪ್ರೇಯಸಿ ಜೋರಾಗಿಯೇ ಗಲಾಟೆ ಮಾಡಿದ್ದಾಳೆ. ನಂತರ ಅಭಿಷೇಕ್‌ನನ್ನ ಅವಾಯ್ಡ್‌ ಮಾಡೋದಕ್ಕೆ ಶುರು ಮಾಡಿದ್ದಾಳೆ. ಇದನ್ನೂ ಓದಿ: Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

    ಯಾವಾಗ ಆಭಿಷೇಕ್‌ನನ್ನ ಅವಾಯ್ಡ್‌ ಮಾಡೋದಕ್ಕೆ ಪ್ರೇಯಸಿ ಆರಂಭಿಸಿದ್ಲೋ ಅಭಿಷೇಕ್ ಆಗಾಗ್ಗೆ ಪಿಜಿ ಬಳಿ ಬಂದ ಗಲಾಟೆ ಮಾಡಿದ್ದ.‌ ಹೀಗಾಗಿ ಕೆಲವು ದಿನಗಳಿಂದೆ ಕೃತಿ ಕುಮಾರಿ ತನ್ನ ಸ್ನೇಹಿತೆಯನ್ನ ಬೇರೊಂದು ಪಿಜಿಗೆ ಶಿಫ್ಟ್ ಮಾಡಿಸಿದ್ದಳಂತೆ. ಪಿಜಿ ಬದಲಾಯಿಸಿದ್ದೆ ಅಭಿಷೇಕ್ ಫೋನ್ ಮಾಡಿದ್ರೆ ಆತನ ಪ್ರೇಯಸಿ ಫೋನ್ ಕಟ್ಮಾಡೋದು ಮಾಡ್ತಿದ್ದು, ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ಅಭಿಷೇಕ್ ನೇರವಾಗಿ ಪಿಜಿ ಬಳಿ ಬಂದಿದ್ದಾನೆ. ಆ ವೇಳೆ ಸೆಕ್ಯುರಿಟಿ ತಡೆದಿದ್ದಾರೆ. ಬಳಿಕ ಮದ್ಯರಾತ್ರಿ ಮತ್ತೆ ಬಂದ ಅಭಿಷೇಕ್ ನೇರವಾಗಿ 3ನೇ ಪ್ಲೋರ್‌ಗೆ ತೆರಳಿ ರೂಮ್‌ನ ಬಾಗಿಲು ತೆರೆಯುತ್ತಿದಂತೆ ಕೃತಿ ಕುಮಾರಿಯ ಕತ್ತು ಕೊಯ್ತು ಕೊಲೆ‌ ಮಾಡಿ ಎಸ್ಕೇಪ್ ಆಗಿದ್ದಾನೆ.

    ಕೃತಿ ಕುಮಾರಿ ಬಾಗಿಲು ತೆರೆಯುತ್ತಿದ್ದಂತೆ ಕತ್ತು ಕೊಯ್ದಿರೋದನ್ನ ಗಮನಿಸಿದಾಗ ಆತನ ಪ್ರೇಯಸಿಯನ್ನೇ ಕೊಲೆ ಮಾಡಲು ಬಂದಿದ್ದ ಅನ್ನೋ ಅನುಮಾನಗಳು ಬರುತ್ತಿವೆ ಎಂದು ಹೇಳಲಾಗಿದೆ. ಸದ್ಯ ಆರೋಪಿಯ ಸುಳಿವು ಪತ್ತೆ ಹಚ್ಚಿರುವ ಕೋರಮಂಗಲ ಪೊಲೀಸರು ಅಭಿಷೇಕ್‌ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ; ಉಭಯ ಸದನಗಳಲ್ಲಿ ತೀರ್ಮಾನ

  • ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ

    ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ

    – ಪರಿಚಯಸ್ಥ ಯುವಕನಿಂದಲೇ ಕೃತ್ಯ ಶಂಕೆ

    ಬೆಂಗಳೂರು: ಲೇಡಿಸ್ ಪಿಜಿಗೆ (Ladies PG) ನುಗ್ಗಿ ಯುವಕನೋರ್ವ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ (Bengaluru) ಕೋರಮಂಗಲದ (Koramangala) ವಿಆರ್ ಲೇಔಟ್‌ನಲ್ಲಿ ನಡೆದಿದೆ.

    ಕೃತಿ ಕುಮಾರಿ (24) ಮೃತ ಯುವತಿ. ಈಕೆ ಬಿಹಾರ ಮೂಲದವಳಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ರಾತ್ರಿ 11:30ರ ವೇಳೆಗೆ ಘಟನೆ ನಡೆದಿದೆ. ರಾತ್ರಿ 11:10ರ ವೇಳೆಗೆ ಯುವಕ ಚಾಕು ಸಮೇತ ಪಿಜಿಯೊಳಗೆ ಬಂದಿದ್ದಾನೆ. ಮೂರನೇ ಮಹಡಿಯಲ್ಲಿರುವ ರೂಂ ಬಳಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಟ್ಟು ಬಿಡದೇ ಕಾಡುತ್ತಿರುವ ಚಾಂದಿಪುರ ವೈರಸ್‌ – ಏನಿದರ ಲಕ್ಷಣ?

    ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಕಾರ್ಯ ನಡೆಯುತ್ತಿದೆ. ಪಿಜಿ ಮಾಲೀಕರ ನಿರ್ಲಕ್ಷ್ಯವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಜೈಲಲ್ಲಿ ಧ್ಯಾನ, ಅಧ್ಯಾತ್ಮ ಪುಸ್ತಕಗಳ ಓದು – ಅಧ್ಯಾತ್ಮದತ್ತ ದರ್ಶನ್ ಒಲವು?

  • ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್

    ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್

    – ಮೊಬೈಲ್‍ನಲ್ಲಿ 7 ವೀಡಿಯೋಗಳು ಪತ್ತೆ

    ಬೆಂಗಳೂರು: ಲೇಡಿಸ್ ಪಿಜಿಗಳನ್ನೇ ಹುಡುಕಿ ಕದ್ದುಮುಚ್ಚಿ ಹೋಗಿ ಯುವತಿಯರು ಸ್ನಾನ ಮಾಡುವ ವೀಡಿಯೋ ತೆಗೆಯುತ್ತಿದ್ದ ಕಿರಾತಕ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

    ಚಿಕ್ಕಬಳ್ಳಾಪುರ (Chikkaballapur) ಮೂಲದ ಅಶೋಕ್ ಸಿಕ್ಕಿಬಿದ್ದ ಯುವಕ. ಈತ ಖಾಸಗಿ ಬ್ಯಾಂಕ್ ಒಂದರ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ಮಹದೇವಪುರ (Mahadevapura) ಹೂಡಿಯಲ್ಲಿರುವ ಪಿಜಿಯಲ್ಲಿ ವಾಸವಾಗಿದ್ದ. ತಾನು ವಾಸ ಮಾಡುತ್ತಿದ್ದ ಪಿಜಿ ಮುಂಭಾಗದಲ್ಲೇ ಇದ್ದ ಲೇಡಿಸ್ ಪಿಜಿಯ (Ladies PG) ಮೇಲೆಯೇ ಯಾವಾಗಲೂ ಗಮನ ಇಟ್ಟು ಕುಳಿತಿರುತ್ತಿದ್ದ. ಯುವತಿಯರು ಸ್ನಾನ ಮಾಡಲು ಬರುತ್ತಿದ್ದಂತೆ ಅಲರ್ಟ್ ಆಗುತ್ತಿದ್ದ. ಇದನ್ನೂ ಓದಿ: ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

    ಬಳಿಕ ಸ್ನಾನ ಮಾಡುವುದನ್ನು ವೆಂಟಿಲೇಷನ್ ಮೂಲಕ ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದ. ಜೂ.21 ರಂದು ಕೃತ್ಯ ಎಸಗುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಸ್ನಾನದ ವೀಡಿಯೋ ತೆಗೆಯುತ್ತಿದ್ದ ವೇಳೆಯೇ ಸಿಕ್ಕಿಬಿದ್ದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ವೇಳೆ ಆರೋಪಿಯ ಮೊಬೈಲ್ ಪರಿಶೀಲನೆ ಮಾಡಿದಾಗ 7 ಯುವತಿಯರ ಸ್ನಾನ ಮಾಡುವ ವೀಡಿಯೋ ಪತ್ತೆಯಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

  • ಬೆಂಗಳೂರಿನಲ್ಲೊಬ್ಬ ಸೈಕೋ – ಲೇಡೀಸ್ ಪಿಜಿಗಳಲ್ಲಿ ನುಗ್ಗಿ ಬಟ್ಟೆ ಕದ್ದು ಎಸ್ಕೇಪ್

    ಬೆಂಗಳೂರಿನಲ್ಲೊಬ್ಬ ಸೈಕೋ – ಲೇಡೀಸ್ ಪಿಜಿಗಳಲ್ಲಿ ನುಗ್ಗಿ ಬಟ್ಟೆ ಕದ್ದು ಎಸ್ಕೇಪ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಸೈಕೋಪಾತ್ ಕಾಣಿಸಿಕೊಂಡಿದ್ದು, ಲೇಡೀಸ್ ಪಿಜಿಗಳಿಗೆ ನುಗ್ಗಿ ಬಟ್ಟೆ ಕದ್ದು ಪರಾರಿಯಾಗುತ್ತಿದ್ದಾನೆ.

    ನಗರದ ಸುದ್ದಗುಂಟೆಪಾಳ್ಯದಲ್ಲಿ ಸೈಕೋಪಾತ್ ಸದ್ದು ಮಾಡುತ್ತಿದ್ದು, ಲೇಡೀಸ್ ಪಿಜಿಗಳೇ ಇವನ ಟಾರ್ಗೆಟ್ ಆಗಿದೆ. ತಡರಾತ್ರಿ ಪಿಜಿಗೆ ನುಗ್ಗುತ್ತಾನೆ. ನಂತರ ಬಟ್ಟೆಗಳನ್ನು ಕದಿಯುತ್ತಿದ್ದಾನೆ. ಇದರಿಂದ ಪಿಜಿಗಳಲ್ಲಿ ವಾಸವಾಗಿರುವ ಯುವತಿಯರು, ಸ್ಥಳೀಯ ವಾಸಿಗಳಿಗೆ ಅಪರಿಚಿತ ಸೈಕೋಪಾತ್ ಆತಂಕ ಮೂಡಿಸಿದ್ದಾನೆ.

    ಒಂದು ದಿನ ತಡರಾತ್ರಿ ಬಂದರೆ ಮತ್ತೊಮ್ಮೆ ಮುಂಜಾನೆ ಲೇಡೀಸ್ ಪಿಜಿಗಳಿಗೆ ಎಂಟ್ರಿಯಾಗುತ್ತಾನೆ. ಸೆರೆಹಿಡಿಯಲು ಸಾಕಷ್ಟು ಭಾರೀ ಪ್ರಯತ್ನಪಟ್ಟರೂ ಕೈಗೆ ಸಿಗದೇ, ಜಂಪ್ ಮಾಡಿ ಎಸ್ಕೇಪ್ ಆಗುತ್ತಿದ್ದಾನೆ. ಈ ಸೈಕೋಪಾತ್ ವ್ಯಕ್ತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿಯೋದಕ್ಕೆ ಪಿ.ಜಿ ಒಳಗೆ ಬಿಟ್ಟಿಲ್ಲವೆಂದು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

    ಕುಡಿಯೋದಕ್ಕೆ ಪಿ.ಜಿ ಒಳಗೆ ಬಿಟ್ಟಿಲ್ಲವೆಂದು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ದೇಶದ ಸಾಫ್ಟ್ ವೇರ್ ಹಬ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗಳೆಷ್ಟು ಸೇಫ್ ಎನ್ನುವ ಅನುಮಾನ ಮೂಡಿದೆ. ಏಕೆಂದರೆ ಕುಡಿಯೋಕೆ ಪಿಜಿಯಲ್ಲಿ ಜಾಗ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

    ನಗರದ ಬೊಮ್ಮನಹಳ್ಳಿಯಲ್ಲಿರುವ ಗ್ರೀನ್ ಹಿಲ್ಸ್ ಲೇಡಿಸ್ ಪಿಜಿ ಮುಂದೆ ನಡೆದಿದೆ. ಕಳೆದ ಏಪ್ರಿಲ್ 3ರಂದು, ತಡರಾತ್ರಿ 1 ಗಂಟೆ ಸುಮಾರಿಗೆ ಬಂದ ಐದಾರು ಜನರ ತಂಡ, ಪಿಜಿಯೊಳಗೆ ಎಣ್ಣೆ ಹೊಡೆಯೋಕೆ ಒಂದು ರೂಮ್ ಬೇಕು ಎಂದು ಮಾಲೀಕ ಅನಿಲ್ ಕುಮಾರ್‍ಗೆ ಕಾಲ್ ಮಾಡಿದರು.

    ಮನೆಯಿಂದ ಹೊರಗೆ ಬಂದ ಅನಿಲ್ ಇದು ಲೇಡಿಸ್ ಪಿಜಿ, ಇಲ್ಲಿ ಹಾಗೆಲ್ಲಾ ಒಳಗೆ ಬಿಡಲ್ಲ ಎಂದು ಹೇಳಿದರು. ಇದೇ ವಿಚಾರವಾಗಿ ಕೆಲಕಾಲ ಮಾತುಕತೆಯೂ ನಡೆಯಿತು. ಈ ಮಾತುಕತೆಯ ನಡುವೆ ಮಾಲೀಕ ಅನಿಲ್ ಕುಮಾರ್, ಮತ್ತೊಬ್ಬ ಮಾಲೀಕ ಭಾಸ್ಕರ್ ರೆಡ್ಡಿಗೆ ಬೊಮ್ಮನಹಳ್ಳಿ ಮಂಜು ಅಂಡ್ ಗ್ಯಾಂಗ್ ದೊಣ್ಣೆ ಹಾಗೂ ಕೈಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಬೊಮ್ಮನಹಳ್ಳಿ ಸುತ್ತಮುತ್ತಲಿನ ಈ ಏರಿಯಾದಲ್ಲಿ ಸಿಕ್ಕಾಪಟ್ಟೆ ಪಿಜಿಗಳಿದ್ದು, ಇಲ್ಲಿನ ಕೆಲ ರೌಡಿಗಳು, ಎಲ್ಲಾ ಪಿಜಿಗಳಿಂದ ತಿಂಗಳಿಗೆ ಇಷ್ಟು ಹಣ ಎಂದು ಹಫ್ತಾ ವಸೂಲಿ ಮಾಡುತ್ತಾರೆ. ಈ ಹಣ ಕೊಡಲು ಪಿಜಿ ಮಾಲೀಕ ನಿರಾಕರಿಸಿದರು. ಇದೇ ಕಾರಣಕ್ಕೆ ಕುಡಿಯೋ ನೆಪ ಮಾಡ್ಕೊಂಡು ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಲೀಕ ಭಾಸ್ಕರ್ ರೆಡ್ಡಿ ಆರೋಪಿಸುತ್ತಿದ್ದಾರೆ.

    ಈ ಸಂಬಂಧ ಬಂಡೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ವಾರ ಕಳೆದರೂ, ಇಲ್ಲಿಯವರೆಗೂ ಯಾರನ್ನು ಕೂಡ ಅರೆಸ್ಟ್ ಮಾಡಿಲ್ಲ. ಇಲ್ಲಿ ಹೀಗೆ ದಾಂಧಲೆ ಮೆರೆದ ಹುಡುಗರ ಕಡೆಗೆ ಸ್ಥಳೀಯ ಶಾಸಕರೊಬ್ಬರ ಬಲಗೈ ಬಂಟನ ಸಪೋರ್ಟ್ ಇದೆ. ಆ ಕಾರಣಕ್ಕೆ ಪೊಲೀಸರು, ಅರೆಸ್ಟ್ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

    ಹಲ್ಲೆಗೊಳಗಾದ ಇಬ್ಬರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.