Tag: ladies hostel

  • ಹಾಸ್ಟೆಲ್‍ಗೆ ನುಗ್ಗಿ ಸಿಬ್ಬಂದಿ, ವಿದ್ಯಾರ್ಥಿನಿಯರಿಗೆ ನಕಲಿ ಪತ್ರಕರ್ತರಿಂದ ಬೆದರಿಕೆ

    ಹಾಸ್ಟೆಲ್‍ಗೆ ನುಗ್ಗಿ ಸಿಬ್ಬಂದಿ, ವಿದ್ಯಾರ್ಥಿನಿಯರಿಗೆ ನಕಲಿ ಪತ್ರಕರ್ತರಿಂದ ಬೆದರಿಕೆ

    – 6 ಮಂದಿಯನ್ನು ಇಬ್ಬರು ಪೊಲೀಸ್ ವಶಕ್ಕೆ

    ಬಾಗಲಕೋಟೆ: ಪಬ್ಲಿಕ್ ಟವಿಯ ಹೆಸರು ಹೇಳಿಕೊಂಡು ಲೇಡಿಸ್ ಹಾಸ್ಟೆಲ್‍ಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ, ಅವಾಂತರ ಸೃಷ್ಟಿಸಿದ್ದ 6 ಜನ ನಕಲಿ ಪತ್ರಕರ್ತರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಈ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಓರ್ವ ಮಹಿಳೆ ಹಾಗೂ 5 ಜನ ಪುರುಷರು ತಾವು ಪಬ್ಲಿಕ್ ಟಿವಿಯವರು ಅಂತಾ ಹೇಳಿ ನವನಗರದ 45ನೇ ಸೆಕ್ಟರ್ ನಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವೃತ್ತಿಪರ ಮಹಿಳಾ ವಸತಿ ನಿಲಯಕ್ಕೆ ಶನಿವಾರ ಭೇಟಿ ನೀಡಿ, ಹಾಸ್ಟಲ್ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರಿಗೆ ಬೆದರಿಸಿ ಹಣ ವಸೂಲಿ ಮಾಡಲು ಮುಂದಾಗಿದ್ದರು.

    ಸದ್ಯ ಈ ವಿಷಯ ತಿಳಿಯುತ್ತಿದ್ದಂತೆಯೇ ಪಬ್ಲಿಕ್ ಟಿವಿಯ ಪ್ರತಿನಿಧಿಗಳು ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಘಟನೆಯಿಂದ ಗಾಬರಿಗೊಂಡಿದ್ದ ಹಾಸ್ಟೆಲ್ ಸಿಬ್ಬಂದಿಗೆ ಧೈರ್ಯ ಹೇಳಿ, ಹಾಸ್ಟೆಲ್ ಸಿಬ್ಬಂದಿಯಿಂದ ನವನಗರ ಠಾಣೆಯಲ್ಲಿ ದೂರು ಕೊಡಿಸಲಾಗಿದೆ.

    ಸೆಕ್ಷನ್ 353 ಅಡಿ ಪ್ರಕರಣ ದಾಖಲಿಸಿಕೊಂಡಿರುವ ನವನಗರದ ಮಹಿಳಾ ಠಾಣೆ ಪೊಲೀಸರು, 6 ಮಂದಿ ನಕಲಿ ಪತ್ರಕರ್ತರ ಪೈಕಿ ಕಿಂಗ್‍ಪಿನ್ ಆಗಿದ್ದ ಶಶಿಕಲಾ, ವಿಜಯ್‍ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವೀರೇಶ್ ಲಮಾಣಿ, ಸಿದ್ದು ಕಳ್ಳಿಮನಿ, ರಾಮನಗೌಡ ನ್ಯಾಮಗೌಡರ್ ಸೇರಿದಂತೆ 5 ಜನ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

    ಈ ನಕಲಿ ಪತ್ರಕರ್ತರು 10 ಜನರ ಒಂದು ತಂಡವನ್ನು ಮಾಡಿಕೊಂಡು ಸುಮಾರು 15 ದಿನಗಳಿಂದ ಪಬ್ಲಿಕ್ ಟಿವಿ ಹೆಸರು ಹೇಳಿಕೊಂಡು ಬಾಗಲಕೋಟೆ ಜಿಲ್ಲೆಯಲ್ಲಿ ಓಡಾಡುತ್ತಿದ್ದರು. ಆದರೆ ಶನಿವಾರ ಮಹಿಳಾ ವಸತಿನಿಲಯಕ್ಕೆ ಪರವಾಣಿಗೆ ಇಲ್ಲದೇ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿನಿಯರಿಗೆ ಬೆದರಿಸಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸನದ ಲೇಡಿಸ್ ಹಾಸ್ಟೆಲ್ ನಲ್ಲಿ ಮತ್ತೆ ಅಪರಿಚಿತ ವ್ಯಕ್ತಿ ಎಂಟ್ರಿ

    ಹಾಸನದ ಲೇಡಿಸ್ ಹಾಸ್ಟೆಲ್ ನಲ್ಲಿ ಮತ್ತೆ ಅಪರಿಚಿತ ವ್ಯಕ್ತಿ ಎಂಟ್ರಿ

    ಹಾಸನ: ನಗರದ ಪ್ರತಿಷ್ಠಿತ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಮತ್ತೊಮ್ಮೆ ಅಪರಿಚಿತ ವ್ಯಕ್ತಿ ಎಂಟ್ರಿ ಕೊಟ್ಟು ಹೋಗಿದ್ದಾನೆ. ಇದರಿಂದ ಸಹಜವಾಗಿಯೇ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ.

    ಇದೇ ವರ್ಷ ಅಂದರೆ 2017 ಮಾರ್ಚ್ 30ರ ರಾತ್ರಿ ಅನಾಮಿಕನೊಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ ಗೆ ಎಂಟ್ರಿ ಕೊಟ್ಟಿದ್ದ. ಇದು ದೊಡ್ಡ ಸುದ್ದಿಯಾಗಿತ್ತು. ಅಷ್ಟೇ ಅಲ್ಲ ಹಾಸ್ಟೆಲ್ ನ ಒಳಹೊರಗೆ ಸಿಸಿ ಕ್ಯಾಮೆರಾ ಜೊತೆಗೆ ಕಾವಲಿಗೆ ಸೆಕ್ಯುರಿಟಿ ಗಾರ್ಡ್ ಇದ್ದರೂ ಆತ ಬಂದಿದ್ದು ಹೇಗೆ ಎಂಬುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.

    ಈ ಬಗ್ಗೆ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಆ ಘಟನೆ ಮಾಸುವ ಮುನ್ನವೇ ಡಿಸೆಂಬರ್ 2 ರಂದು ಮತ್ತೊಬ್ಬ ಅಪರಿಚಿತ ಅದೇ ಹಾಸ್ಟೆಲ್ ಗೆ ಹಳೇ ಶೈಲಿಯಲ್ಲೇ ಬಂದು ಹೋಗಿದ್ದಾನೆ. ಇದಕ್ಕೆ ಯಾವ ಲೋಪ ಕಾರಣ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆತ ಕಾಮುಕನೋ? ಕಳ್ಳನೋ? ಗೊತ್ತಿಲ್ಲ. ಆದರೆ ಸಣ್ಣ ಪೈಪ್ ಸಹಾಯದಿಂದ ಕಟ್ಟಡ ಏರಿರುವುದು ಪಾದದ ಗುರುತುನಿಂದ ಖಾತ್ರಿಯಾಗಿದೆ.

    ಇಷ್ಟೆಲ್ಲಾ ಆದ ಬಳಿಕ ಪೈಪ್ ಗೆ ತಂತಿ ಸುತ್ತಿರುವ ಆಡಳಿತ ಮಂಡಳಿ, ಮುಂದೆ ಹಾಸ್ಟೆಲ್ ನಲ್ಲಿ ಭದ್ರತೆ ಹೆಚ್ಚಿಸಲು ಮುಂದಾಗಿದೆ. ಅಲ್ಲದೇ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಮತ್ತೊಮ್ಮೆ ಬಡಾವಣೆ ಪೊಲೀಸರಿಗೆ ದೂರು ನೀಡಲಾಗಿದೆ.

  • ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ ಕಿಟಕಿ, ಬಾಗಿಲು ಬಡಿಯುತ್ತಿರೋ ಕಿಡಿಗೇಡಿಗಳು- ವಿದ್ಯಾರ್ಥಿನಿಯರಲ್ಲಿ ಆತಂಕ

    ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ ಕಿಟಕಿ, ಬಾಗಿಲು ಬಡಿಯುತ್ತಿರೋ ಕಿಡಿಗೇಡಿಗಳು- ವಿದ್ಯಾರ್ಥಿನಿಯರಲ್ಲಿ ಆತಂಕ

    ಕೊಪ್ಪಳ: ರಾತ್ರಿ ವೇಳೆ ಬಾಲಕಿಯರ ಹಾಸ್ಟೆಲ್ ಮೇಲೇರಿ ಕಿಡಿಗೇಡಿಗಳು ಕಿಟಕಿ ಮತ್ತು ಬಾಗಿಲು ಬಡಿದು ವಿದ್ಯಾರ್ಥಿನಿಯರನ್ನು ಹೆದರಿಸ್ತಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿಯ ಹಿರೇಜಂತಕಲ್ ನಲ್ಲಿರುವ ಬಿಸಿಎಂ ಬಾಲಕಿಯರ ಹಾಸ್ಟೆಲ್‍ನಲ್ಲಿ ಈ ರೀತಿಯಾದ ಘಟನೆ ನಡೆದಿದೆ. ಕಳೆದ ಕೆಲ ದಿನಗಳಿಂದ ರಾತ್ರಿ ವೇಳೆ ಹಾಸ್ಟೆಲ್ ಮೇಲೇರಿ ಕಿಟಕಿ ಮುಖಾಂತರ ವಿದ್ಯಾರ್ಥಿನಿಯರನ್ನ ಕಿಡಗೇಡಿಗಳು ಹೆದರುಸುತ್ತಿದ್ದಾರೆ. ಇದ್ರಿಂದ ವಿದ್ಯಾರ್ಥಿನಿಯರು ಭಯದಲ್ಲಿದ್ದಾರೆ. ಹೀಗಾಗಿ ಭಾನುವಾರ ರಾತ್ರಿ ಎಸ್‍ಎಫ್‍ಐ ಕಾರ್ಯಕರ್ತರು ಹಾಸ್ಟೆಲ್‍ಗೆ ಕಾವಲು ನಿಂತಿದ್ದರು.

    50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಸ್ಟೆಲ್‍ನಲ್ಲಿ ವಾಸ ಮಾಡುತ್ತಿದ್ದು, ಓರ್ವ ಮಹಿಳಾ ವಾರ್ಡನ್ ಇದ್ದಾರೆ. ಸ್ಥಳಕ್ಕೆ ಗಂಗಾವತಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.