Tag: ladies finger

  • ಆಲೂ ಸೇರಿಸಿ ಬೆಂಡೆಕಾಯಿ ಪಲ್ಯ ಮಾಡಿದ್ರೆ ಸಖತ್ ಟೇಸ್ಟ್

    ಆಲೂ ಸೇರಿಸಿ ಬೆಂಡೆಕಾಯಿ ಪಲ್ಯ ಮಾಡಿದ್ರೆ ಸಖತ್ ಟೇಸ್ಟ್

    ಬೆಂಡೆಕಾಯಿ ಪಲ್ಯವನ್ನು ವಿಭಿನ್ನವಾಗಿ ಮಾಡಲು ಟ್ರೈ ಮಾಡುತ್ತಿದ್ದರೆ ಈ ರೆಸಿಪಿ ಸೂಕ್ತವಾಗಿದೆ. ನೀವೆನಾದ್ರೂ ಹೀಗೆ ಪಲ್ಯವನ್ನ ಮಾಡಿದ್ರೆ ನಿಮ್ಮ ಮನೆ ಮಂದಿಗೆ ಸಖತ್ ಇಷ್ಟವಾಗುತ್ತದೆ. ಆಲೂ, ಬೆಂಡೆಕಾಯಿ ಪಲ್ಯ ಕೆಲವರಿಗೆ  ಅಲರ್ಜಿ. ಆದರೆ ಇದಕ್ಕೆ ಆಲೂ ಸೇರಿಸುವುದರಿಂದ ಇದನ್ನ ಇಷ್ಟಪಡದೇ ಇರುವುದಿಲ್ಲ. ಈ ಎರಡು ತರಕಾರಿಯನ್ನು ಒಟ್ಟಿಗೆ ಸೇರಿಸಿ ಆಲೂ ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಅಡುಗೆ ಎಣ್ಣೆ- ಸ್ವಲ್ಪ
    * ಬೆಂಡೆಕಾಯಿ
    * ರುಚಿಗೆ ತಕ್ಕಷ್ಟು ಉಪ್ಪು
    * ಸಾಸಿವೆ- ಸ್ವಲ್ಪ
    * ಜೀರಿಗೆ – ಸ್ವಲ್ಪ
    * ಈರುಳ್ಳಿ -1
    * ಟೊಮೊಟೋ-1
    * ಶುಂಠಿ ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
    * ಆಲೂಗಡ್ಡೆ- 2
    * ಅರಿಶಿಣ- ಸ್ವಲ್ಪ
    * ಖಾರದ ಪುಡಿ- 1
    * ಗರಂ ಮಸಾಲಾ – ಸ್ವಲ್ಪ
    * ಕಸೂರಿ ಮೇಥಿ –  ಸ್ವಲ್ಪ

    ಮಾಡುವ ವಿಧಾನ:
    * ಬೆಂಡೆಕಾಯಿಯನ್ನು ಎಣ್ಣೆಯಲ್ಲಿ 5 ನಿಮಿಷಗಳ ಕಾಲ ಹುರಿದು ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ: ವಿಭಿನ್ನ ಟೇಸ್ಟ್‌ನ  ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ

    * ಒಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೊಟೋ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ

    * ನಂತರ, ಅರಿಶಿಣ, ಖಾರದಪುಡಿ, ಗರಂ ಮಸಾಲಾ, ಕಸೂರಿ ಮೇಥಿ, ಆಲೂಗಡ್ಡೆ ಹಾಗೂ ಬೇಯಿಸಿಟ್ಟ ಬೆಂಡೆಕಾಯಿ ಹಾಕಿ ಕಲಸಿ ಬೇಯಿಸಿದರೆ ಬೆಂಡೆಕಾಯಿ ಪಲ್ಯ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಹೋಟೆಲ್ ಸ್ಟೈಲ್‌ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ

    ಬೆಂಡೆಕಾಯಿ ಹಾಕಿ ಮೊಸರು ಸಾರು ಮಾಡಿದ್ರೆ ಸಖತ್ ಟೇಸ್ಟ್-ನೀವೂ ಒಮ್ಮೆ ಟ್ರೈ ಮಾಡಿ

    ಮೊಸರನ್ನು ಅನ್ನಕ್ಕೆ ಹಾಕಿ ಊಟ ಮಾಡುವ ಬದಲು ನೀವು ಸಾಂಬಾರ್ ಮಾಡಿದರೆ ಸಖತ್ ಟೇಸ್ಟ್ ಆಗಿರುತ್ತದೆ. ಈ ಮೊಸರು ಬೆಂಡೆಕಾಯಿ ಸಾರಿನ ರುಚಿ ಒಂದು ಹಿಡಿ ಅನ್ನವನ್ನು ಹೆಚ್ಚೇ ನಿಮ್ಮ ಹೊಟ್ಟೆ ತಲುಪುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

    ಬೇಕಾಗುವ ಸಾಮಗ್ರಿಗಳು:
    * ಬೆಂಡೆಕಾಯಿ- ಕಾಲು ಕೆಜಿ
    * ಈರುಳ್ಳಿ-1
    * ಟೊಮೆಟೋ-1
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಮೊಸರು 2 ಕಪ್ ಸ್ವಲ್ಪ
    * ತೆಂಗಿನ ತುರಿ- ಸ್ವಲ್ಪ
    * ಗೋಡಂಬಿ 6-7
    * ಗರಂ ಮಸಾಲ- 1 ಚಮಚ
    * ಖಾರದ ಪುಡಿ- 1ಚಮಚ
    * ಅರಿಶಿಣ ಪುಡಿ- ಅರ್ಧ
    * ಅಡುಗೆ ಎಣ್ಣೆ- 4 ಚಮಚ
    * ರುಚಿಗೆ ತಕ್ಕ ಉಪ್ಪು
    * ಇಂಗು, ಸಾಸಿವೆ, ಜೀರಿಗೆ, ಉದ್ದಿನ ಬೇಳೆ- ಸ್ವಲ್ಪ
    * ಒಣ ಮೆಣಸು-3
    * ಕರಿ ಬೇವು- ಸ್ವಲ್ಪ

    ಮಾಡುವ ವಿಧಾನ:
    * ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಂಡೆ ಕಾಯಿ ಹಾಕಿ ಫ್ರೈ ಮಾಡಿಕೊಳ್ಳಬೇಕು.
    * ಗೋಡಂಬಿ, ತೆಂಗಿನ ತುರಿ ಹಾಕಿ ನುಣ್ಣನೆ ರುಬ್ಬಿ. ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಇಂಗು ಹಾಕಿ, ಈರುಳ್ಳಿ, ಒಣ ಮೆಣಸನ್ನು ಹಾಕಿ ಫ್ರೈ ಮಾಡಿಕೊಳ್ಳಿ.

    * ನಂತರ ಈಗಾಗಲೇ ರುಬ್ಬಿದ ಗೋಡಂಬಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಪುಡಿ, ಅರಿಶಿಣ ಪುಡಿ, ಮೊಸರು, ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿಕೊಳ್ಳಿ. ಇದನ್ನೂ ಓದಿ:  ಸರಳ, ರುಚಿಯಾದ ಬೆಳ್ಳುಳ್ಳಿ ಚಟ್ನಿ ಮಾಡಲು ಟ್ರೈ ಮಾಡಿ

    * ಸಾರು ಕುದಿ ಬರುವಾಗ ಫ್ರೈ ಮಾಡಿದ ಬೆಂಡೆ ಕಾಯಿ ಹಾಕಿದರೆ ರುಚಿಯಾದ ಮೊಸರು ಬೆಂಡೆಕಾಯಿ ಸಾರು ಸವಿಯಲು ಸಿದ್ಧವಾಗುತ್ತದೆ.

  • ಆರೋಗ್ಯ ಜೀವನಕ್ಕಾಗಿ ಬೆಂಡೆಕಾಯಿ ಸೇವಿಸಿ

    ಆರೋಗ್ಯ ಜೀವನಕ್ಕಾಗಿ ಬೆಂಡೆಕಾಯಿ ಸೇವಿಸಿ

    ಬೆಂಡೆಕಾಯಿ ಎಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸಿದ ಅಡುಗೆಗಳು. ಪಲ್ಯ, ಸಾಂಬರ್, ಸೂಪ್, ಸಲಾಡ್ ಹೀಗೆ ಡಿಫರೆಂಟ್ ಆಗಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತದೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿಯ ಆರೋಗ್ಯಕರ ಅಂಶಗಳು ಒಳಗೊಂಡಿರುತ್ತವೆ. ಬೆಂಡೆಕಾಯಿ ಬರೀ ಬಾಯಿರುಚಿಗಷ್ಟೇ ಸೀಮಿತವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂಬ ವಿಚಾರ ಹಲವರಿಗೆ ತಿಳಿದಿರಲ್ಲ.

    ಹೌದು. ಬೆಂಡೆಕಾಯಿಯಲ್ಲಿ ಕಬ್ಬಿಣದ ಅಂಶ, ಫೈಬರ್ ಅಂಶ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಆದ್ದರಿಂದ ಇದು ಹೃದಯಕ್ಕೆ, ಕರುಳಿಗೆ ಒಳ್ಳೆಯದು. ದೇಹದ ತೂಕ ಇಳಿಸಲು ಕೂಡ ಬೆಂಡೆಕಾಯಿ ಉಪಯುಕ್ತ. ಅಷ್ಟೇ ಅಲ್ಲದೆ ಇದು ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದೊಳ್ಳೆಯ ಮದ್ದಾಗಿದೆ.

    ಬೆಂಡೆಕಾಯಿಯಲ್ಲಿ ಅಡಗಿರುವ ಆರೋಗ್ಯ ಗುಣಗಳೇನು?
    ಹೃದಯಕ್ಕೆ ಒಳ್ಳೆದು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೆಂಡೆಕಾಯಿ ಬಹಳ ಒಳ್ಳೆಯದು. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಇದನ್ನು ಸೇವಿಸಿದವರಿಗೆ ಹೃದಯಾಘಾತವಾಗುವ ಸಂಭವ ಕಡಿಮೆ ಇರುತ್ತದೆ. ಇದನ್ನೂ ಓದಿ:ಬೆಂಡೆಕಾಯಿ ಸೇವಿಸಿ ದೇಹದ ತೂಕ ಇಳಿಸಿಕೊಳ್ಳಿ

    ಕರುಳಿನ ಕ್ಯಾನ್ಸರ್ ನಿವಾರಿಸುತ್ತೆ: ದೊಡ್ಡ ಕರುಳಿನ ಕ್ಯಾನ್ಸರ್ ದೂರ ಮಾಡಲು ಬೆಂಡೆಕಾಯಿ ಒಳ್ಳೆಯ ಮದ್ದಾಗಿದೆ. ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದವರು ಬೆಂಡೆಕಾಯಿಯನ್ನು ಸೇವಿಸಿದರೆ ಒಳ್ಳೆಯದು. ಯಾಕೆಂದರೆ ಬೆಂಡೆಕಾಯಿ ಸೇವಿಸಿದರೆ ಕರುಳಿನಲ್ಲಿರುವ ಟಾಕ್ಸಿಕ್ ಅಂಶವನ್ನು ಹೋಗಲಾಡಿಸಿ, ಕರುಳಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ.

    ಜೀರ್ಣಕ್ರಿಯೆಗೆ ಉತ್ತಮ: ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಅಡಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ. ಹಾಗೆಯೇ ಮಲಬದ್ಧತೆ ಸಮಸ್ಯೆಯನ್ನು ಕೂಡ ದೂರ ಮಾಡಲು ಬೆಂಡೆಕಾಯಿ ಉತ್ತಮ ಔಷಧಿಯಾಗಿದೆ.

    ರಕ್ತಹೀನತೆಯನ್ನು ತಡೆಗಟ್ಟುತ್ತದೆ: ಬೆಂಡೆಕಾಯಿಯಲ್ಲಿರುವ ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ, ಇದು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಹೀಗಾಗಿ ರಕ್ತಹೀನತೆಯಿಂದ ದೇಹವನ್ನು ರಕ್ಷಿಸವಲ್ಲಿ ಬೆಂಡೆಕಾಯಿ ಸಹಕಾರಿಯಾಗಿದೆ.

    ತೂಕ ಇಳಿಸಲು ಸಹಕಾರಿ: ತೂಕ ಇಳಿಸಿಕೊಳ್ಳುವವರು ಬೆಂಡೆಕಾಯಿ ಸೇವನೆ ಮಾಡಬಹುದು. ಯಾಕೆಂದರೆ ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಆದರೆ ಫೈಬರ್ ಅಂಶ ಹೇರಳವಾಗಿರುತ್ತದೆ. ಇದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.

    ಕೂದಲ ಆರೈಕೆಗೆ ಉತ್ತಮ: ಕೂದಲು ಉದುರುವಿಕೆ, ಕಡಿಮೆ ಕೂದಲು ಹೀಗೆ ಕೂದಲು ಸಮಸ್ಯೆಯಿಂದ ಬಳಲುವವರಿಗೆ ಬೆಂಡೆಕಾಯಿ ಉತ್ತಮ ಮದ್ದು. ದಟ್ಟ ಹಾಗೂ ಕಪ್ಪನೆಯ ಕೂದಲನ್ನು ಬಯಸುವವರು ಬೆಂಡೆಕಾಯಿ ಸೇವನೆ ಮಾಡಬೇಕು. ಇದು ಕೂದಲಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ ಬೆಂಡೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ನಿಂಬೆ ರಸವನ್ನು ಸೇರಿಸಿ, ಆ ರಸ ತಲೆಗೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ತೊಳೆದರೆ ಕೂದಲುದುರುವುದು ಕಡಿಮೆಯಾಗುತ್ತದೆ.

    ಇಷ್ಟೆಲ್ಲ ಆರೋಗ್ಯಕರ ಅಂಶವನ್ನು ತನ್ನಲ್ಲಿ ಬಚ್ಚಿಟ್ಟಿಕೊಂಡಿರುವ ಬೆಂಡೆಕಾಯಿಯನ್ನು ನೀವೂ ತಿನ್ನಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.

  • ಬೆಂಡೆಕಾಯಿಗೆ ಮತ ಹಾಕಿದ್ರೆ ಭ್ರಷ್ಟರ ಬೆಂಡೆತ್ತುವೆ: ಅನುಪಮಾ ಶೆಣೈ

    ಬೆಂಡೆಕಾಯಿಗೆ ಮತ ಹಾಕಿದ್ರೆ ಭ್ರಷ್ಟರ ಬೆಂಡೆತ್ತುವೆ: ಅನುಪಮಾ ಶೆಣೈ

    ಉಡುಪಿ: ಡಿವೈಎಸ್ ಪಿ ಆಗಿದ್ದಾಗ ನಾನು ಅಪರಾಧಿಗಳ ಬೆಂಡೆತ್ತುತ್ತಿದ್ದೆ. ಈಗ ನಾನು ಎಲ್ಲಾ ರಾಜಕೀಯ ಪಕ್ಷಗಳನ್ನು, ಭ್ರಷ್ಟ ರಾಜಕಾರಣಿಗಳನ್ನು ಬೆಂಡೆತ್ತಬೇಕು. ಈ ಕಾರಣಕ್ಕಾಗಿ ಬೆಂಡೆಕಾಯಿ ಚಿಹ್ನೆ ಆಯ್ಕೆ ಮಾಡಲಾಗಿದೆ. ಬೆಂಡೆಕಾಯಿಗೆ ಮತನೀಡಿ ಎಂದು ಅನುಪಮಾ ಶೆಣೈ ಮನವಿ ಮಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನನಗೆ ದ್ವೇಷದ ರಾಜಕಾರಣ ಮಾಡುವ ಉದ್ದೇಶವಿಲ್ಲ. ಪರಮೇಶ್ವರ್ ನಾಯಕ್ ನಿಮಿತ್ತ ಮಾತ್ರ. ಕಾಪು ನನಗೆ ಸೇಫರ್ ಝೋನ್. ದುಡ್ಡಿದ್ದು ರಾಜಕೀಯಕ್ಕೆ ಬಂದಿಲ್ಲ. ಮನೆಯ ಮಗಳನ್ನು ಕಾಪುವಿನ ಜನ ಕೈ ಬಿಡಲ್ಲ ಅಂತ ಅಂದುಕೊಂಡಿದ್ದೇನೆ ಎಂದು ಶೆಣೈ ಹೇಳಿದರು. ಇದನ್ನೂ ಓದಿ; ಬಸವ ನಾಡಿನಲ್ಲಿ ಪಕ್ಷದ ಲಾಂಛನ ಬಿಡುಗಡೆ ಮಾಡಿದ ಅನುಪಮಾ ಶೆಣೈ

    ನಾನು ರಾಜಕೀಯಕ್ಕೆ ಬರಲು ಕಾಂಗ್ರೆಸ್ ಸರ್ಕಾರ ಪ್ರೇರಣೆ. ಹೆಸರು ಸೆಲೆಕ್ಷನ್ ಕೂಡಾ ಬಹಳ ಚರ್ಚೆ ಮಾಡಿ ಫಿಕ್ಸ್ ಮಾಡಲಾಯ್ತು. ಭಾರತೀಯವೂ ಇದೆ. ಕಾಂಗ್ರೆಸ್ಸೂ ಇದೆ. ಜನ ಎರಡನ್ನೂ ನಮ್ಮ ಪಕ್ಷದಲ್ಲಿ ಕಾಣುತ್ತಾರೆ ಎಂದರು. ಎರಡೂ ಪಕ್ಷದ ಸಜ್ಜನರ ಬೆಂಬಲ ನಮಗೆ ಬೇಕು ಎಂದು ಹೇಳಿದರು.

    ತಲಾಖ್ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ. ಹಾಗಾದ್ರೆ ಹೆಂಡತಿಯನ್ನು ಬಿಟ್ಟ ಮೋದಿಗೂ ಶಿಕ್ಷೆಯಾಗಬೇಕು. ಫೇಸ್ ಬುಕ್ ನಲ್ಲಿ ನಾನು ಪ್ರಧಾನಿಯನ್ನು ಟೀಕಿಸುವುದರ ಬಗ್ಗೆ ಬಹಳ ಚರ್ಚೆಗಳಾಗುತ್ತದೆ ಎಂದು ಹೇಳಿದರು. ದೇಶಕ್ಕೆ ಒಳ್ಳೆದಾಗುತ್ತದೆ ಎಂದು ಹೇಳುವ ಪ್ರಧಾನಿ ಮೋದಿ, ದೇಶದಲ್ಲಿ ಎಲ್ಲರಿಗೂ ಸಮಾನ ಕಾನೂನು ಜಾರಿ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ; ಪ್ರಧಾನಿ ಪತ್ನಿ ತೊರೆದ ವಿರುದ್ಧ ಅನುಪಮಾ ಶೆಣೈ ಸ್ಟೇಟಸ್- ಮೋದಿ ಅಭಿಮಾನಿಗಳು ಗರಂ

    ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಸ್ವ-ಕ್ಷೇತ್ರಗಳಲ್ಲೇ ಎಲ್ಲಾ ಅಭ್ಯರ್ಥಿಗಳು ಕಣಕ್ಕಿಳಿದರೆ ಉತ್ತಮ ಎಂಬ ಭಾವನೆಯಿದೆ. ನಾನು ಬಳ್ಳಾರಿಯಿಂದ ಸ್ಪರ್ಧಿಸಲ್ಲ ಅಂತ ಮಾಜಿ ಡಿವೈ ಎಸ್ ಪಿ ಅನುಪಮಾ ಹೆಗ್ಡೆ ಘೋಷಣೆ ಮಾಡಿದ್ದಾರೆ.