Tag: ladies fight

  • ಸುರಿಯೋ ಮಳೆ ಮಧ್ಯೆಯೇ ಲೇಡಿಸ್-ಜೆಂಟ್ಸ್ ಫೈಟ್

    ಸುರಿಯೋ ಮಳೆ ಮಧ್ಯೆಯೇ ಲೇಡಿಸ್-ಜೆಂಟ್ಸ್ ಫೈಟ್

    ಚಿಕ್ಕಮಗಳೂರು: ಸುರಿಯುತ್ತಿದ್ದ ಮಳೆ ಮಧ್ಯೆಯೇ ಲೇಡಿಸ್ ಮತ್ತು ಜೆಂಟ್ಸ್ ಫೈಟ್ ಮಾಡಿರುವ ಘಟನೆ ನಗರದ ರಾಮನಹಳ್ಳಿಯಲ್ಲಿ ನಡೆದಿದೆ.

    ಮದ್ಯದ ಅಮಲಿನಲ್ಲಿದ್ದ ಯುವಕರ ಗುಂಪುಗಳ ಮಧ್ಯೆ ಸಣ್ಣ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿ ಮಳೆಯಲ್ಲಿಯೇ ರಸ್ತೆ ಮಧ್ಯೆ ಹೊಡೆದಾಡಿದ್ದಾರೆ. ಈ ವೇಳೆ, ಹೆಂಗಸರು ಕೂಡ ರಸ್ತೆ ಮಧ್ಯೆಯೇ ಹೊಡೆದಾಡಿದ್ದಾರೆ. ಗಲಾಟೆ ವೇಳೆ ಹೆಂಗಸರು-ಯುವಕರು ಒಬ್ಬರನ್ನೊಬ್ಬರು ಎಳೆದಾಡಿದ್ದಾರೆ. ಯುವಕರು ಕೂಡ ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ರಸ್ತೆಗೆ ಹೋಗಿದ್ದಾರೆ.

    ಈ ವೇಳೆ, ಮರದ ರೀಪ್‍ನಿಂದ ಹಲ್ಲೆ ಮಾಡಿದ್ದಾರೆ. ಮನೆಯ ಮೇಲ್ಛಾವಣಿಗೆ ಹಾಕುವ ತುಂಡಾದ ಸಿಮೆಂಟ್ ಶೀಟ್‍ನಿಂದಲೂ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಗಲಾಟೆ ಸ್ಪಷ್ಟವಾದ ಕಾರಣ ಏನೆಂದು ತಿಳಿದು ಬಂದಿಲ್ಲ. ಇಡೀ ರಾಜ್ಯದಲ್ಲಿ ಲಾಕ್‍ಡೌನ್ ಇದೆ. ಬೆಳಗ್ಗೆ 10ರ ನಂತರ ಯಾರೂ ಓಡಾಡುವಂತಿಲ್ಲ. ಆದರೆ ಈ ಯುವಕರು ಏಕೆ ಮನೆಯಿಂದ ಹೊರಬಂದಿದ್ದರು ಎಂಬ ಪ್ರಶ್ನೆ ಮೂಡಿದೆ.

  • ತಕ್ಕಡಿಯಲ್ಲಿ ಹೊಡೆದ್ರು, ಜಡೆ ಜಡೆ ಹಿಡಿದು ಎಳೆದಾಡಿಕೊಂಡ್ರು – ಬೆಂಗ್ಳೂರಲ್ಲಿ ಲೇಡೀಸ್ ಫೈಟ್

    ತಕ್ಕಡಿಯಲ್ಲಿ ಹೊಡೆದ್ರು, ಜಡೆ ಜಡೆ ಹಿಡಿದು ಎಳೆದಾಡಿಕೊಂಡ್ರು – ಬೆಂಗ್ಳೂರಲ್ಲಿ ಲೇಡೀಸ್ ಫೈಟ್

    ಬೆಂಗಳೂರು: ಫುಟ್ ಪಾತ್ ನಲ್ಲಿ ಅಂಗಡಿ ಹಾಕೋ ವಿಚಾರಕ್ಕೆ ಮಹಿಳೆಯರು ಜಡೆ ಹಿಡಿದು ಹೊಡೆದಾಡಿಕೊಂಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಜಾಗ ನನ್ನದು ನನ್ನದು ಅಂತ ಜಡೆ ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಜಾಗ ಬಿಡದೇ ಇದ್ದಿದ್ದಕ್ಕೆ ತಕ್ಕಡಿಯನ್ನೇ ತೆಗೆದುಕೊಂಡು ಮಹಿಳೆ ತಲೆಗೆ ಒಡೆದಿದ್ದಾಳೆ.

    ಕೊನೆಗೆ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿ ಮಹಿಳೆಯರನ್ನ ದೂರ ತಳ್ಳಿ ಜಗಳ ಬಿಡಿಸಿದ್ದಾರೆ. ಇಷ್ಟಾದರೂ ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ.