Tag: Ladies Bar

  • ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

    ಲೇಡಿಸ್ ಬಾರ್‌ಗಳಲ್ಲಿ ನಿಯಮ ಉಲ್ಲಂಘನೆ – ಪ್ರತಿದಿನ ಸಿಸಿಟಿವಿ ಫೂಟೇಜ್ ಕೊಡುವಂತೆ ಸಿಸಿಬಿ ರೂಲ್ಸ್

    ಬೆಂಗಳೂರು: ನಗರದ (Bengaluru) ಲೇಡಿಸ್ ಬಾರ್‌ಗಳಲ್ಲಿ (Ladies Bar) ನಿಯಮ ಉಲ್ಲಂಘನೆಯಾಗುತ್ತಿವೆ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿವೆ. ಈ ಹಿಂದೆ ಯುವತಿಯರು ಅರ್ಧಂಬರ್ಧ ಬಟ್ಟೆ ತೊಟ್ಟು ಸರ್ವಿಸ್ ಮಾಡುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿತ್ತು. ಈಗ ನಿಯಮ ಉಲ್ಲಂಘನೆ ತಡೆಗೆ ಸಿಸಿಬಿ (CCB) ಹೊಸ ನಿಯಮಕ್ಕೆ ಮುಂದಾಗಿದೆ.

    ಹಲವಾರು ಬಾರಿ ದಾಳಿ ಮಾಡಿ ಎಚ್ಚರಿಕೆ ಕೊಟ್ಟರು ಏನು ಪ್ರಯೋಜನವಾಗದ ಹಿನ್ನೆಲೆ, ನಿಯಮಗಳ ಉಲ್ಲಂಘನೆಗೆ ಸಿಸಿಬಿ ಹೊಸ ರೂಲ್ಸ್ ಮಾಡಿದೆ. ಪ್ರತಿದಿನದ ಸಿಸಿಟಿವಿ ವಿಡಿಯೋ ತುಣುಕನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್‌

    ಪೆನ್‌ಡ್ರೈವ್ ಅಥವಾ ಸಿಡಿಗೆ ಹಾಕಿ ವಿಡಿಯೋ ನೀಡಬೇಕು. ಸಿಸಿಟಿವಿ ವೀಕ್ಷಣೆ ವೇಳೆ ತಪ್ಪು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ದಾವಣಗೆರೆ | ಫಸಲಿಗೆ ಬಂದಿದ್ದ 7.50 ಲಕ್ಷ ಮೌಲ್ಯದ ದಾಳಿಂಬೆ ಕಳವು

  • ‘ಲೇಡಿಸ್ ಬಾರ್’ ನಲ್ಲಿ ಮನಮೋಹಕ ಗೀತೆ

    ‘ಲೇಡಿಸ್ ಬಾರ್’ ನಲ್ಲಿ ಮನಮೋಹಕ ಗೀತೆ

    ಡಿ.ಎಂ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ  ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್  (AN) ನಿರ್ದೇಶಿಸಿರುವ ‘ಲೇಡಿಸ್ ಬಾರ್’ (Ladies Bar) ಚಿತ್ರದ ಟೀಸರ್ ಹಾಗೂ ಹಾಡುಗಳು (Song) ಇತ್ತೀಚಿಗೆ ಬಿಡುಗಡೆಯಾಯಿತು ರಾಜಕೀಯ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳನ್ನು ನಟಿ ರೂಪಿಕಾ (Rupika), ಮಮತ ಹಾಗೂ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಲೋಕಾರ್ಪಣೆಯಾಗಿದೆ. ನಂತರ ಚಿತ್ರತಂಡದ ಸದಸ್ಯರು ಲೇಡಿಸ್ ಬಾರ್ ಕುರಿತು ಮಾಹಿತಿ ನೀಡಿದರು.

    ಲೇಡಿಸ್ ಬಾರ್ ಶೀರ್ಷಿಕೆ ಕೇಳಿದ ತಕ್ಷಣ ಕುಡಿತದ ಬಗ್ಗೆ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ನಮ್ಮ ಚಿತ್ರದಲ್ಲಿ ಬರೀ ಕುಡಿತವಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡಿದಾಗ ಅದು ತಿಳಿಯುತ್ತದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ‌. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು, ಜನವರಿಯಲ್ಲಿ ತೆರೆಗೆ ತರುತ್ತೇವೆ ಎಂದು ನಿರ್ದೇಶಕ ಎ.ಎನ್ ಮುತ್ತು ತಿಳಿಸಿದರು.

    ನಾನು ಉದ್ಯಮಿ ಜೊತೆಗೆ ರೈತ ಕೂಡ ಎಂದು ಮಾತನಾಡಿದ ಟಿ.ಎಂ.ಸೋಮರಾಜು, ಸಿನಿಮಾ ರಂಗ ಪರಿಚಯವೇ ಇಲ್ಲ. ನನ್ನ ಗೆಳೆಯ ರಾಜಶೇಖರ್ ನನ್ನನ್ನು ಈ ರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ನಿರ್ದೇಶಕ ಎ.ಎನ್ ಮುತ್ತು ಅವರು ಹೇಳಿದ ಕಥೆ ಇಷ್ಟವಾಯಿತು ನಿರ್ಮಾಣ ಮಾಡಿದ್ದೇನೆ. ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹ ನೀಡಿ ಎಂದರು.

    ಸಹ ನಿರ್ಮಾಪಕ ರಾಜಶೇಖರ್ ಚಿತ್ರ ಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ಹರ್ಷ ಕಾಗೋಡ್, ಛಾಯಾಗ್ರಾಹಕ ವೀನಸ್ ಮೂರ್ತಿ, ಸಾಹಸ ನಿರ್ದೇಶಕ ಜಗ್ಗು ಮಾಸ್ಟರ್ ಹಾಗೂ ಚಿತ್ರದಲ್ಲಿ ನಟಿಸಿರುವ ಹರೀಶ್ ರಾಜ್, ಶಿವಾನಿ, ಮಾಧುರಿ, ಗಣೇಶ್ ರಾವ್, ಆರಾಧ್ಯ ಮುಂತಾದವರು “ಲೇಡಿಸ್ ಬಾರ್” ಬಗ್ಗೆ ಮಾತನಾಡಿದರು. ಚಿತ್ರದ ಸಿರಿ ಮ್ಯೂಸಿಕ್ ನಲ್ಲಿ  ಹಾಡುಗಳನ್ನು ನೋಡಿ, ನಿಮಗನಿಸಿದನ್ನು ಕಾಮೆಂಟ್ ಮಾಡಿ. ಉತ್ತಮ ಕಾಮೆಂಟ್ ಗೆ ನಿರ್ಮಾಪಕರು ಮೊಬೈಲ್‌ ನೀಡಲಿದ್ದಾರೆ ಎಂದು ಸಿರಿ ಮ್ಯೂಸಿಕ್ ಚಿಕ್ಕಣ್ಣ ತಿಳಿಸಿದರು.

  • ಹೊಸ ಸರ್ಕಾರ ಬಂದ ಬಳಿಕ 40 ಲೇಡಿಸ್ ಬಾರ್‌ಗಳಿಗೆ ಬೀಗ – ಬೀದಿಗೆ ಬಂದ ಕಾರ್ಮಿಕರ ಕುಟುಂಬ

    ಹೊಸ ಸರ್ಕಾರ ಬಂದ ಬಳಿಕ 40 ಲೇಡಿಸ್ ಬಾರ್‌ಗಳಿಗೆ ಬೀಗ – ಬೀದಿಗೆ ಬಂದ ಕಾರ್ಮಿಕರ ಕುಟುಂಬ

    ಬೆಂಗಳೂರು: ಸರ್ಕಾರಕ್ಕೆ ಆಟ, ಮಾಲಿಕರು, ಕಾರ್ಮಿಕರಿಗೆ ಪ್ರಾಣಸಂಕಟ ಎನ್ನುವಂತಾಗಿದೆ ಲೇಡಿಸ್ ಬಾರ್‌ಗಳ (Ladies Bar) ಸ್ಥಿತಿ. ಬೆಂಗಳೂರಿನ (Bengaluru) ನೈಟ್ ಲೈಫ್‌ನ ಭಾಗವಾಗಿದ್ದ ಲೇಡಿಸ್ ಬಾರ್‌ಗಳನ್ನು ಕಾಂಗ್ರೆಸ್ (Congress) ಸರ್ಕಾರ ಬಂದ ಬಳಿಕ 3 ತಿಂಗಳಿನಿಂದ ಬಂದ್ ಮಾಡಿಸಲಾಗಿದೆ. ಕಾರಣ ಇಲ್ಲದೆ ಲೇಡಿಸ್ ಬಾರ್‌ಗಳು ಬಂದ್ ಆಗಿರೋದಕ್ಕೆ 4,000ಕ್ಕೂ ಹೆಚ್ಚು ಕಾರ್ಮಿಕರು ಕಂಗಾಲಾಗಿದ್ದಾರೆ.

    ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಲೇಡಿಸ್ ಬಾರ್‌ಗಳನ್ನು ತೆರೆಯಲು ಸರ್ಕಾರ ಅವಕಾಶ ಕೊಡುತ್ತಿಲ್ಲ. ಆದರೆ ಅದೇ ಮ್ಯೂಸಿಕ್ ಹೊಂದಿರುವ ಪಬ್ ಮತ್ತು ಡೆಸ್ಕೊಥೆಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಲಸವಿಲ್ಲದೆ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿದ್ದಿವೆ. ಸಾಲ ಮಾಡಿ ಬಾರ್ ಓಪನ್ ಮಾಡಿರುವ ಮಾಲೀಕರು ತಿಂಗಳಾದರೆ ಬಾಡಿಗೆ ಬಡ್ಡಿ ಅಂತ ಲಕ್ಷಾಂತರ ರೂ. ಹಣ ಕಟ್ಟಬೇಕಿದೆ. ಕಾನೂನು ಅಡಿಯಲ್ಲಿ ಬಾರ್ ನಡೆಸಲು ಅನುಮತಿ ನೀಡಿ ಎಂದು ಗೃಹಮಂತ್ರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ.

    ಈ ಬಗ್ಗೆ ಲೇಡಿಸ್ ಬಾರ್ ಉಪಾಧ್ಯಕ್ಷ ಬಿಸಿ ಗೋಪಾಲಕೃಷ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಲೇಡಿಸ್ ಬಾರ್‌ಗಳನ್ನು ಬಂದ್ ಮಾಡಿಸಿದ್ದಾರೆ. ಪ್ರತಿಯೊಂದು ಹೋಟೆಲ್‌ಗಳಿಂದ 10 ಲಕ್ಷ ರೂ. ರಿನಿವಲ್ ಕಟ್ಟಿಸಿಕೊಂಡಿದ್ದೇವೆ. ನಮ್ಮಲ್ಲಿ 4-5 ಸಾವಿರ ಜನರು ಕೆಲಸಕ್ಕಿದ್ದಾರೆ. ಸುಮಾರು 15-20 ಸಾವಿರ ಜನರು ಈ ವ್ಯಾಪಾರದಿಂದ ಜೀವನ ಸಾಗಿಸುತ್ತಿದ್ದಾರೆ. ನಾವು ಈ ಬಗ್ಗೆ ಲೋಕಲ್ ಪೊಲೀಸ್ ಠಾಣೆಯಲ್ಲಿ ಕೇಳಿದಾಗ ಅವರು ತಮಗೆ ಸರ್ಕಾರದಿಂದ ಆದೇಶ ಬಂದಿರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹಜ್ಯೋತಿಗಾಗಿ ಹಣ ಬಿಡುಗಡೆ – ಎಸ್ಕಾಂಗಳು ಕೇಳಿದ್ದು ಎಷ್ಟು? ಸಿಕ್ಕಿದ್ದು ಎಷ್ಟು?

    ಇದಕ್ಕೆ ಸಂಬಂಧಿಸಿದಂತೆ ನಾವು ಗೃಹಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿದ್ದೇವೆ. ಕೋರ್ಟ್ ಆರ್ಡರ್‌ಗಳನ್ನು ಕೂಡಾ ತಲುಪಿಸಿದ್ದೇವೆ. ಇದೀಗ 2-3 ತಿಂಗಳಿನಿಂದ ನಮ್ಮ ಉದ್ಯೋಗಿಗಳು ಊಟಕ್ಕೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ದಯವಿಟ್ಟು ನಮ್ಮ ಹೋಟೆಲ್‌ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಬೇಕಾಗಿ ಎಲ್ಲಾ ಲೇಡಿಸ್ ಬಾರ್‌ಗಳ ಪರವಾಗಿ ಗೃಹಮಂತ್ರಿಗಳಿಗೆ ಹಾಗೂ ಸಿಎಂ ಅವರಿಗೆ ಮನವಿ ಮಾಡುತ್ತೇವೆ ಎಂದು ಗೋಪಾಲಕೃಷ್ಣ ನುಡಿದಿದ್ದಾರೆ. ಇದನ್ನೂ ಓದಿ: ಆ.31 ರಿಂದ ಬೆಂಗಳೂರಿನ ಗಾರ್ಡನ್‌ ಟರ್ಮಿನಲ್‌ನಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಟೇಕಾಫ್‌, ಲ್ಯಾಂಡಿಂಗ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ಬಾರಿನಲ್ಲಿ ಲೇಡೀಸ್‍ಗೆ ಮಾತ್ರ ಪ್ರವೇಶ, ಪುರುಷರಿಗಿಲ್ಲ ಎಂಟ್ರಿ

    ಈ ಬಾರಿನಲ್ಲಿ ಲೇಡೀಸ್‍ಗೆ ಮಾತ್ರ ಪ್ರವೇಶ, ಪುರುಷರಿಗಿಲ್ಲ ಎಂಟ್ರಿ

    – 22 ವರ್ಷದ ಯುವತಿಯಿಂದ 80 ವರ್ಷದ ವೃದ್ಧೆಯರಿಗೆ ಪ್ರವೇಶ

    ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಕ್ಲಬ್, ಪಬ್ ಪ್ರಿಯರು. ರಾಜಧಾನಿಯಲ್ಲಿ ಕತ್ತಲಾದರೆ ಸಾಕು ರಂಗಿನ ಲೋಕ ತೆರೆದುಕೊಳ್ಳುತ್ತೆ. ಪಬ್, ಕ್ಲಬ್‍ಗೆ ಹೋಗಬೇಕೆಂಬ ಆಸೆ ಹುಡುಗಿಯರಿಗೆ ಇರುತ್ತೆ. ಆದರೆ ಇಲ್ಲಿ ಸ್ಥಳಗಳಲ್ಲಿ ರಕ್ಷಣೆ ಇಲ್ಲ ಎಂಬ ಕಾರಣಕ್ಕಾಗಿ ಬಹುತೇಕ ಹುಡುಗಿಯರು ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಈ ಚಿಂತೆ ಹೋಗಲಾಡಿಸೋಕೆ ಬೆಂಗಳೂರಲ್ಲಿ ಲೇಡಿಸ್ ಬಾರ್‌ವೊಂದು ಓಪನ್ ಆಗಲಿದೆ.

    ಮಹಿಳೆಯರಿಂದ, ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ ಬಾರ್‌ವೊಂದು ತಲೆಯೆತ್ತಲಿದೆ. ನಗರದ ಬ್ರಿಗೇಡ್ ರಸ್ತೆಯಲ್ಲಿ ‘ಮಿಸ್ ಆ್ಯಂಡ್ ಮಿಸೆಸ್ ರೆಸ್ಟೋರೆಂಟ್ ಮತ್ತು ಲಾಂಜ್ ಬಾರ್’ ಹೆಸರಿನ ಬಾರ್ ಆರಂಭಗೊಳ್ಳಲಿದೆ. ಇಲ್ಲಿ ಮಾಲೀಕರಿಂದ ಬೌನ್ಸರ್‌ವರೆಗೆ, ವ್ಯಾಲೆಟ್ ಪಾರ್ಕಿಂಗ್, ಕ್ಯಾಷಿಯರ್, ಬಾಣಸಿಗರು, ಸಫ್ಲೈಯರ್‌ವರೆಗೆ ಎಲ್ಲರೂ ಮಹಿಳೆಯರೇ. ಇಲ್ಲಿ ಒಬ್ಬನೇ ಒಬ್ಬ ಪುರುಷನಿಗೂ ಎಂಟ್ರಿಯಿಲ್ಲ. ಇದು ಮಹಿಳಾ ದಿನಾಚರಣೆಗಿಂತ ಮೊದಲು ಅಂದರೆ ಮಾರ್ಚ್ 6 ಅಥವಾ 7 ರಂದು ಉದ್ಘಾಟನೆಗೊಳ್ಳಲಿದೆ.

    ಪಂಜೂರಿ ವಿ.ಶಂಕರ್, ಅಂಕಿತಾ ಶೆಟ್ಟಿ, ಅರುಣಾ ಶ್ರೀಧರ್, ಸಹನಾ ಸಂಪತ್, ಆಶಾ ಹೆಗಡೆ ಹಾಗೂ ಸೌಮ್ಯಾ ಶ್ರೀನಿವಾಸ್ ಸೇರಿದ ಮಹಿಳಾ ತಂಡ ಈ ಹೋಟೆಲ್‍ನ ಪರಿಕಲ್ಪನೆಯನ್ನು ಹೊರತಂದಿದೆ. ಇನ್ನೂ ಈ ಬಾರ್‌ಗೆ 22 ವರ್ಷದ ಯುವತಿಯಿಂದ ಹಿಡಿದು 80 ವರ್ಷದವರೆಗಿನ ವೃದ್ಧೆಯರಿಗೆ ಪ್ರವೇಶವಿದೆ. ಇಲ್ಲಿ ಕುಡಿಯುವುದರ ಜೊತೆಗೆ ಸ್ಪಾ, ನೇಲ್ ಆರ್ಟ್, ಪೆಡಿಕ್ಯೂರ್, ಲೆಗ್ ಮಸಾಜ್ ಸೇರಿದಂತೆ ಹಲವು ಸೇವೆಗಳಿವೆ.

    ಪ್ರತಿ ದಿನ ಮಧ್ಯಾಹ್ನ 12ರಿಂದ ತಡರಾತ್ರಿ 1ರವರೆಗೂ ಕಾರ್ಯ ನಿರ್ವಹಿಸಲಿದೆ. ಮಹಿಳೆಯರ ರಕ್ಷಣೆಗಾಗಿ ತಡರಾತ್ರಿ ಕ್ಯಾಬ್ ಬುಕ್ ಮಾಡಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾರಾದರೂ ಪುರುಷರು ತೊಂದರೆ ಕೊಟ್ಟರೇ ಬೌನ್ಸರ್‌ಗಳಿಂದ ಹೊಡೆತ ತಿನ್ನಬೇಕಾಗುತ್ತದೆ. ಈ ಬಾರಿನಲ್ಲಿ ಲೇಡಿಸ್ ಹುಡುಗರ ಮುಜುಗರವಿಲ್ಲದೇ ಆರಾಮಾಗಿ ಏಂಜಾಯ್ ಮಾಡಬಹುದಾಗಿದೆ.