Tag: laddu

  • Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

    Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

    ಹೈದರಾಬಾದ್‌: ತಿರುಪತಿ ದೇವಸ್ಥಾನದ (Tirupati Temple) ಲಡ್ಡು (Laddu ) ಪ್ರಸಾದ ವಿವಾದ ಜೋರಾಗುತ್ತಿದ್ದಂತೆ ಮಾಜಿ ಸಿಎಂ ಜಗನ್‌ ರೆಡ್ಡಿ (YS Jagan Mohan Reddy) ಆಂಧ್ರ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

    ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದಾರೆ. ಹೀಗಾಗಿ ಈ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ಹೈಕೋರ್ಟ್ (High Court) ನೇಮಿಸಿದ ಸಮಿತಿ ತನಿಖೆ ನಡೆಸಬೇಕು ಎಂದು ಜಗನ್‌ ಪರ ವಕೀಲರು ಮನವಿ ಮಾಡಿದರು.

    ಈ ವೇಳೆ ಸೆ.25 ರ ಒಳಗಡೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿ. ಅಂದು ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್‌ ಸೂಚಿಸಿದೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

     

    ಲ್ಯಾಬ್ ವರದಿಯಲ್ಲಿ ಏನಿದೆ?
    ಲಡ್ಡುಗೆ ಬಳಸಿದ ತುಪ್ಪದಲ್ಲಿ ಮೀನೆಣ್ಣೆ, ಹಂದಿಯ ಕೊಬ್ಬು, ತಾಳೆ ಎಣ್ಣೆ ಕೊಬ್ಬು, ತೆಂಗಿನ ಎಣ್ಣೆಯ ಕೊಬ್ಬು ಪತ್ತೆಯಾಗಿದೆ. ಸೋಯಾ, ಸೂರ್ಯಕಾಂತಿ, ಆಲಿವ್, ಹತ್ತಿ ಬೀಜದೆಣ್ಣೆ ಸಿಕ್ಕಿದೆ. ತುಪ್ಪದಲ್ಲಿ ವ್ಹೀಟ್ ಜೆರ್ಮ್ ಆಯಿಲ್, ಮೇಜ್ ಜೆರ್ಮ್ ಆಯಿಲ್ ಪತ್ತೆಯಾಗಿದೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ

     

    ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ. ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ ಅವರು ಚಂದ್ರಬಾಬು ನಾಯ್ಡು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ.

    ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

     

  • ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೌಂಟ್‌ಡೌನ್-‌ ಮುಂಬೈ‌ ಬಿಜೆಪಿಯಿಂದ 10 ಸಾವಿರ ಲಡ್ಡು ತಯಾರು

    ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೌಂಟ್‌ಡೌನ್-‌ ಮುಂಬೈ‌ ಬಿಜೆಪಿಯಿಂದ 10 ಸಾವಿರ ಲಡ್ಡು ತಯಾರು

    – ಯುಪಿಯಲ್ಲಿ ವಿವಿಧ ಪಕ್ಷಗಳಿಂದ ಲಡ್ಡು ಆರ್ಡರ್

    ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ (Loksabha Election Result 2024) ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಮುಂಬೈನಲ್ಲಿ ಬಿಜೆಪಿಯವರು 10 ಸಾವಿರ ಲಡ್ಡು ತಯಾರಿ ಮಾಡುತ್ತಿದ್ದಾರೆ.

    ಹೌದು. ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ ಒಕ್ಕೂಟ 350ಕ್ಕೂ ಹೆಚ್ಚು ಸ್ಥಾನ ಗೆದ್ದು ಮೂರನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಬೆನ್ನಲ್ಲೇ ಲಡ್ಡು ತಯಾರು ಮಾಡಲು ಬಿಜೆಪಿಯವರು ಆರ್ಡರ್‌ ಕೊಟ್ಟಿದ್ದಾರೆ.

    ಈ ಸಂಬಂಧ ಬಿಜೆಪಿ ಮಾಜಿ ಶಾಸಕ ಅತುಲ್ ಶಾ ಅವರು ಪ್ರತಿಕ್ರಿಯಿಸಿ, ಪ್ರತಿಯೊಂದು ಗೆಲುವನ್ನು, ಸಂತೋಷವನ್ನು ಸಿಹಿ ಹಂಚಿ ಸಂಭ್ರಮಿಸುವುದು ನಮ್ಮ ಸಂಸ್ಕೃತಿಯಾಗಿದೆ. ಪ್ರಧಾನಿ ಮೋದಿ ಅವರು ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ. ಹಾಗಾಗಿ ಈ ವಿಜಯೋತ್ಸವವನ್ನು ಜನರಿಗೆ ಲಡ್ಡು ಹಂಚುವ ಮೂಲಕ ಆಚರಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: `400 ಪಾರ್ vs 295′ – ಯಾರಾಗ್ತಾರೆ ಭಾರತದ ಅಧಿಪತಿ?

    ನಾವು ಲಡ್ಡುಗಳನ್ನು ವಿತರಿಸುವ ಸಮಯದಲ್ಲಿ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್, ಟೀಸ್ರಿ ಬಾರ್ ಮೋದಿ ಸರ್ಕಾರ್’ ಎಂದು ಮುದ್ರಿಸಲಾಗಿದೆ. ನಾವು ಇಲ್ಲಿ 10,000 ಲಡ್ಡುಗಳನ್ನು ತಯಾರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ವಿವಿಧ ಪಕ್ಷದ ನಾಯಕರು ಕೂಡ ಲಡ್ಡುಗಳನ್ನು ತಯಾರಿಸಲು ಆರ್ಡರ್‌ ಕೊಟ್ಟಿದ್ದಾರೆ. ಈ ಮೂಲಕ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ.

    ಆಗ್ರಾ ಬ್ರಿಜ್ ರಸಾಯನಂ ಮಿಷ್ಠನ್ ಭಂಡಾರ್ ಮಾಲೀಕ ಉಮೇಶ್ ಗುಪ್ತಾ ಮಾತನಾಡಿ, ತಮ್ಮ ಅಭ್ಯರ್ಥಿಯ ಗೆಲುವು ಖಚಿತವಾಗಿರುವ ಪಕ್ಷಗಳಿಂದ ನಾವು ಲಡ್ಡುಗಳ ಆರ್ಡರ್ ಪಡೆಯುತ್ತಿದ್ದೇವೆ. ಫಲಿತಾಂಶ ದಿನದ ಸಂಭ್ರಮಕ್ಕಾಗಿ ನಾವು 11 ವಿವಿಧ ರೀತಿಯ ಲಡ್ಡುಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ

    ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ

    ಹೈದರಾಬಾದ್‌: ಜನವರಿ 22ರಂದು ರಾಮಲಲ್ಲಾ (Ayodhya Ram Lalla) ಪ್ರಾಣಪ್ರತಿಷ್ಠೆಗಾಗಿ ದೇಶ ವಿದೇಶಗಳಿಂದ ಉಡುಗೊರೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಗೆಯೇ ಹೈದರಾಬಾದ್‌ ಮೂಲದ ವ್ಯಕ್ತಿಯೊಬ್ಬರು ಪ್ರತಿದಿನ ಒಂದೊಂದು ಕೆಜಿ ಲಡ್ಡುವನ್ನು ಮೀಸಲಿಟ್ಟು, ಶ್ರೀರಾಮನ ನೈವೇದ್ಯಕ್ಕಾಗಿ 1,265 ಕೆ.ಜಿ ತೂಕದ ವಿಶೇಷ ಲಡ್ಡು (Speical Laddu) ತಯಾರಿಸಿದ್ದಾರೆ.

    ಹೈದರಾಬಾದ್‌ ಮೂಲದ ವ್ಯಕ್ತಿ ನಾಗಭೂಷಣ ರೆಡ್ಡಿ ಎಂಬವರು ಜ.22ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ನೈವೇದ್ಯಕ್ಕಾಗಿ 1,265 ಕೆಜಿ ತೂಕದ ಲಡ್ಡು ತಯಾರಿಸಿದ್ದು, ಬುಧವಾರ (ಇಂದು) ರಾಮಮಂದಿರಕ್ಕೆ ಅರ್ಪಿಸಲಿದ್ದಾರೆ. ಇದರೊಂದಿಗೆ ಸಹೋದರ ಲಕ್ಷ್ಮಣ, ಪತ್ನಿ ಸೀತಾ, ಭಂಟ ಹನುಮಾನ್‌ ಹೆಸರಿನ ಲಡ್ಡುಗಳನ್ನೂ ತಯಾರಿಸಲಾಗಿದೆ  ಈ ಮೂಲಕ ಶ್ರೀರಾಮ ಕೃಪೆಗೆ ಪಾತ್ರರಾಗಲು ಬಯಸಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

    ದುಶಾಸನ್‌ ಎಂಬ ಸ್ವೀಟ್‌ ಮಾಸ್ಟರ್‌ ಈ ಲಡ್ಡುವನ್ನು ತಯಾರಿಸಿದ್ದಾರೆ. ಜೊತೆಗೆ ಸುಮಾರು 30 ಜನರ 24 ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿ ಈ ವಿಶೇಷ ಲಡ್ಡು ತಯಾರಿಸಿದ್ದಾರೆ, ಇದನ್ನ ಜೋಡಿಸಲು 4 ಗಂಟೆ ತೆಗೆದುಕೊಂಡಿದ್ದಾರೆ ಎಂದು ನಾಗಭೂಷಣರೆಡ್ಡಿ ತಿಳಿಸಿದರು.

    ಈ ಕುರಿತು ಮಾತನಾಡಿರುವ ನಾಗಭೂಷಣ್‌ ರೆಡ್ಡಿ, 2000ನೇ ಇಸವಿಯಿಂದ ನಾನು ಶ್ರೀ ರಾಮ ಕ್ಯಾಟರಿಂಗ್ ಎಂಬ ಕೆಲಸ ಪ್ರಾರಂಭಿಸಿದೆ. ರಾಮಜನ್ಮಭೂಮಿಯಲ್ಲಿ ದೇವಸ್ಥಾನದ ಭೂಮಿಪೂಜೆ ನಡೆಯುತ್ತಿದ್ದಾ ನಾವು ಶ್ರೀರಾಮನಿಗೆ ಏನು ನೈವೇದ್ಯ ನೀಡಬಹುದು ಎಂದು ಯೋಚಿಸಿದ್ದೆವು.‌ ಕೊನೆಗೆ ದೇವಸ್ಥಾನ ಭೂಮಿಪೂಜೆ ಆರಂಭವಾದ ದಿನದಿಂದ ದೇವಸ್ಥಾನ ತೆರೆಯುವ ದಿನದ ವರೆಗೆ ಪ್ರತಿದಿನ 1 ಕೆಜಿ ಲಡ್ಡು ಮೀಸಲಿಡಲು ನಿರ್ಧರಿಸಿದೆವು. ಅದರಂತೆ ಮಂದಿರಕ್ಕಾಗಿ 1,265 ಕೆಜಿ ಲಡ್ಡು ಸಿದ್ಧಪಡಿಸಿದ್ದು, ಇದನ್ನು ರೆಫ್ರಿಜರೇಟೆಡ್ ಬಾಕ್ಸ್‌ನಲ್ಲಿ ಇಟ್ಟಿದ್ದೇವೆ. ಇಂದೇ ಅಯೋಧ್ಯೆಗೆ ಕೊಂಡೊಯ್ದು ರಾಮನ ನೈವೇದ್ಯಕ್ಕೆ ಅರ್ಪಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ; ಇಂದಿನಿಂದ ಪೂಜಾಕಾರ್ಯ ಆರಂಭ – ಯಾವ ದಿನ ಏನು ಕಾರ್ಯಕ್ರಮ?

    ಒಟ್ಟಿನಲ್ಲಿ ನನಗೆ ತುಂಬಾ ಸಂತೋಷವಾಗಿದೆ. ನಾನು ಇದೇ ಮೊದಲಬಾರಿಗೆ ಶ್ರೀರಾಮನಿಗಾಗಿ ಇಂತಹ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

  • Ram Mandir Inauguration: ತಿರುಪತಿಯಿಂದ ಅಯೋಧ್ಯೆಗೆ 1 ಲಕ್ಷ ಲಡ್ಡು ಪೂರೈಕೆ

    Ram Mandir Inauguration: ತಿರುಪತಿಯಿಂದ ಅಯೋಧ್ಯೆಗೆ 1 ಲಕ್ಷ ಲಡ್ಡು ಪೂರೈಕೆ

    ಅಮರಾವತಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ಇತ್ತ ಅಯೋಧ್ಯೆಗೆ ರಾಮಭಕ್ತರು ತಮ್ಮ ಕೈಲಾದಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ತಿರುಪತಿಯಿಂದಲೂ ಇದೀಗ ಅಯೋಧ್ಯೆಗೆ ಲಡ್ಡು ಪೂರೈಕೆಯಾಗಲಿದೆ.

    ಈ ಸಬಂಧ ತಿರುಪತಿ (Tirupati) ತಿರುಮಲ ದೇವಸ್ಥಾನಂ (TTD) ಅಧಿಕೃತವಾಗಿ ತಿಳಿಸಿದೆ. ದೇಗುಲದ ವತಿಯಿಂದ ಅಯೋಧ್ಯೆಗೆ 1 ಲಕ್ಷ ಲಡ್ಡು ಪೂರೈಕೆ ಮಾಡಲಾಗುವುದು ಎಂದು ಹೇಳಿದೆ.

    ಉದ್ಘಾಟನೆಯ ದಿನ ರಾಮಭಕ್ತರಿಗೆ ಈ ಲಡ್ಡು (Laddu) ವಿತರಿಸಲಾಗುವುದು. ಪ್ರತಿ ಲಡ್ಡುವಿನ ತೂಕ 25 ಗ್ರಾಂ ಇರುತ್ತದೆ ಎಂದು ಟಿಟಿಡಿಯ ಅಧಿಕಾರಿಗಳು ವಿವರಿಸಿದ್ದಾರೆ. ಇದನ್ನೂ ಓದಿ: ಬಾಬ್ರಿ ಮಸೀದಿ ಪರ ವಾದಿಸಿದ್ದ ಇಕ್ಬಾಲ್‌ ಅನ್ಸಾರಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ

    ಅಯೋಧ್ಯೆಗೆ ಲಡ್ಡು ಪೂರೈಕೆ ಮಾಡುವ ಕುರಿತು ಟಿಟಿಡಿ ಒಪ್ಪಿಗೆ ನೀಡಿದೆ. ಹೀಗಾಗಿ ಶ್ರೀರಾಮ ಪ್ರಾಣ ಪತಿಷ್ಠಾಪನೆಯ ದಿನದಂದು ಭಕ್ತರಿಗೆ ವಿತರಣೆ ಮಾಡಲು ಅಯೋಧ್ಯೆಗೆ ಲಡ್ಡು ಪೂರೈಕೆ ಮಾಡುತ್ತೇವೆ ಎಂದು ಟಿಟಿಡಿ ಆಡಳಿತ ಕಾರ್ಯನಿರ್ವಾಹಕ ಎ ವಿ ಧರ್ಮ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಶಾಸಕ ಇಕ್ಬಾಲ್‌ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ

    ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಶಾಸಕ ಇಕ್ಬಾಲ್‌ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ

    ರಾಮನಗರ: 77ನೇ ಸ್ವಾತಂತ್ರ್ಯೋತ್ಸವ (77th Independence Day) ಸಂಭ್ರಮದ ಭಾಗವಾಗಿ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ (Iqbal Hussain) ಅವರು 2.70 ಲಕ್ಷ ಲಡ್ಡು ವಿತರಣೆ ಮಾಡಲಿದ್ದಾರೆ.

    ಆ.15 (ಮಂಗಳವಾರ) ಸ್ವತಂತ್ರ ದಿನಾಚರಣೆ ಆಚರಿಸಲು ದೇಶ ಸಜ್ಜಾಗಿದೆ. ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮಿಸುವ ಉದ್ದೇಶದಿಂದ ಲಾಡು ವಿತರಣೆಗೆ ಇಕ್ಬಾಲ್‌ ಹುಸೇನ್‌ ಅವರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 5 ತಾಲ್ಲೂಕಿನ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಲಡ್ಡು ಹಂಚಿಕೆ ಮಾಡಲಿದ್ದಾರೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್‌ ಸಿಸ್ಟಮ್‌, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ

    ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬರೋಬ್ಬರಿ 2,70,000 ಲಡ್ಡು ತಯಾರಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಲಾಡು ಹಂಚಿಕೆ ಮಾಡಲಾಗುವುದು.

    100 ಮಂದಿ ನುರಿತ ಬಾಣಸಿಗರು ಲಡ್ಡು ತಯಾರಿಸಿದ್ದಾರೆ. ಸ್ವತಂತ್ರ ದಿನದಂದು ಹಂಚಲು ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಿಗೂ ಲಡ್ಡು ನೀಡಲಾಗುವುದು. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಲಡ್ಡು ಹಂಚಿಕೆ ಕಾರ್ಯ ನಡೆಯಲಿದೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ರಾತ್ರಿ ವೇಳೆ ವಾಹನ ನಿಲ್ಲಿಸಿದ್ರೆ ಬರ್ತಾರೆ ದರೋಡೆಕೋರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಂಗಿನಕಾಯಿಯಿಂದ ಲಡ್ಡು ಮಾಡುವುದು ಹೇಗೆ ಗೊತ್ತಾ?

    ತೆಂಗಿನಕಾಯಿಯಿಂದ ಲಡ್ಡು ಮಾಡುವುದು ಹೇಗೆ ಗೊತ್ತಾ?

    ದೀಗ ನವರಾತ್ರಿ ಹಬ್ಬ ನಡೆಯುತ್ತಿದ್ದು, ಅದನ್ನು ಆಚರಿಸಲು ಪ್ರತಿ ದಿನ ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅಲ್ವಾ? ಇಂದು ನಾವು ತೆಂಗಿನಕಾಯಿಯ ಲಡ್ಡು ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಸಿಹಿ ಕಂಡೆನ್ಸ್ಡ್ ಮಿಲ್ಕ್ – 220 ಗ್ರಾಂ
    ತೆಂಗಿನ ತುರಿ – ಅರ್ಧ ಕಪ್
    ಒಣ ತೆಂಗಿನ ತುರಿ – ಕೋಟಿಂಗ್‌ಗೆ ಇದನ್ನೂ ಓದಿ: ನವರಾತ್ರಿ ಹಬ್ಬಕ್ಕೆ ಮನೆಲಿ ಮಾಡಿ ಸೋರೆಕಾಯಿ ಹಲ್ವಾ

    ಮಾಡುವ ವಿಧಾನ:
    * ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ತೆಂಗಿನ ತುರಿಯನ್ನು ಹಾಕಿ 3-4 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಅದಕ್ಕೆ ಸಿಹಿ ಕಂಡೆನ್ಸ್ಡ್ ಮಿಲ್ಕ್ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
    * ಮಿಶ್ರಣ ದಪ್ಪವಾಗುತ್ತಾ ಬರುತ್ತಿದ್ದಂತೆ ಕೈಯಾಡಿಸುವುದನ್ನು ಮುಂದುವರಿಸಿ.
    * ಈಗ ಮಿಶ್ರಣವನ್ನು ತಣ್ಣಗಾಗಲು ಪಕ್ಕಕ್ಕಿಡಿ.
    * ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ಬಳಿಕ ಒಂದೊಂದು ಟೀಸ್ಪೂನ್‌ನಷ್ಟು ಮಿಶ್ರಣದ ಉಂಡೆಗಳನ್ನು ಕಟ್ಟಿ.
    * ಈಗ ಉಂಡೆಗಳನ್ನು ಒಣ ತೆಂಗಿನ ತುರಿಯಲ್ಲಿ ಉರುಳಿಸಿ ಕೋಟ್ ಮಾಡಿ.
    * ತೆಂಗಿನಕಾಯಿಯ ಲಡ್ಡು ಇದೀಗ ಸವಿಯಲು ಸಿದ್ದವಾಗಿದ್ದು, ಅದನ್ನು 2-3 ದಿನಗಳ ವರೆಗೆ ಫ್ರಿಜ್‌ನಲ್ಲಿ ಇಡಬಹುದು. ಇದನ್ನೂ ಓದಿ: ನೀವೂ ಮಾಡಿ ನೋಡಿ ಎಳ್ಳು ಚಿಕ್ಕಿ

    Live Tv
    [brid partner=56869869 player=32851 video=960834 autoplay=true]

  • ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ

    ಸಾಂಪ್ರದಾಯಿಕ ಭಾರತೀಯ ಸಿಹಿ ತಿಂಡಿಗಳಲ್ಲೊಂದು ಕಡಲೆ ಹಿಟ್ಟಿನ ಲಡ್ಡು. ಏಲಕ್ಕಿ ತುಪ್ಪದ ಮಿಶ್ರಣದೊಂದಿಗೆ ಮಾಡುವ ಈ ಸಿಹಿ ಎಂಹವರ ಬಾಯಲ್ಲೂ ನೀರೂರಿಸುತ್ತದೆ. ಗಣೇಶ ಚತುರ್ಥಿ ಹತ್ತಿರದಲ್ಲಿದ್ದು, ಈ ಸಂದರ್ಭದಲ್ಲಿ ತಯಾರಿಸಬಹುದಾದ ಸಿಹಿಗಳಲ್ಲಿ ಇದು ಕೂಡಾ ಒಂದಾಗಿದೆ. ಭಾರತದಾದ್ಯಂತ ಫೇಮಸ್ ಆಗಿರುವ ಕಡಲೆ ಹಿಟ್ಟಿನ ಲಡ್ಡನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ಇಲ್ಲಿ ನೋಡಿ ಕಲಿಯಿರಿ.

    ಬೇಕಾಗುವ ಪದಾರ್ಥಗಳು:
    * ತುಪ್ಪ – ಅರ್ಧ ಕಪ್
    * ಕಡಲೆ ಹಿಟ್ಟು – 2 ಕಪ್
    * ಸಕ್ಕರೆ – 1 ಕಪ್
    * ಏಲಕ್ಕಿ – 4
    * ಒಣ ಕಲ್ಲಂಗಡಿ ಬೀಜಗಳು – 2 ಟೀಸ್ಪೂನ್
    * ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಹುರಿಯಿರಿ. ಮಿಶ್ರಣ ಒಣ ಎನಿಸಿದರೆ ಇನ್ನಷ್ಟು ತುಪ್ಪ ಸೇರಿಸಬಹುದು.
    * 20 ನಿಮಿಷಗಳ ಬಳಿಕ ಹಿಟ್ಟು ತುಪ್ಪವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಹಿಟ್ಟು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ. ಇದು ಸುಮಾರು 30 ನಿಮಿಷ ತೆಗೆದುಕೊಳ್ಳಬಹುದು.
    * ಬಳಿಕ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ಹಾಕಿ, ಸ್ವಲ್ಪ ತಣ್ಣಗಾಗಲು ಬಿಡಿ.
    * ಈ ನಡುವೆ ಒಣ ಹುರಿದ ಕಲ್ಲಂಗಡಿ ಬೀಜ ಹಾಗೂ ಗೋಡಂಬಿಯನ್ನು ಕಡಿಮೆ ಉರಿಯಲ್ಲಿ ಹುರಿದು, ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ.
    * ಈಗ ಸಕ್ಕರೆ ಹಾಗೂ ಏಲಕ್ಕಿಯನ್ನು ಬ್ಲೆಂಡರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಬಳಿಕ ತಣ್ಣಗಾದ ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. (ಹಿಟ್ಟು ಬೆಚ್ಚಗಿದ್ದರೆ ಸಕ್ಕರೆಯನ್ನು ಸೇರಿಸಬೇಡಿ. ಇದರಿಂದ ಸಕ್ಕರೆ ಕರಗುವ ಸಾಧ್ಯತೆ ಇರುತ್ತದೆ.)
    * ಈಗ ಮಿಶ್ರಣವನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿ, ಲಡ್ಡನ್ನು ತಯಾರಿಸಿ.
    * ಈಗ ಕಡಲೆ ಹಿಟ್ಟಿನ ಲಡ್ಡು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಇಟ್ಟರೆ, 2 ವಾರಗಳ ಕಾಲ ಕೆಡುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ

    ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ

    ಲಕ್ನೋ: ಇಳಿವಯಸ್ಸಿನ ದಂಪತಿ ತಮ್ಮ ವೈವಾಹಿಕ ವಿವಾದವನ್ನು ಲಡ್ಡು ತಿನ್ನಿಸುವ ಮೂಲಕ ಕೊನೆಗೊಳಿಸಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉತ್ತರ ಪ್ರದೇಶದ ಗೊಂಡಾದಲ್ಲಿ ಈ ಅಚ್ಚರಿ ಸುದ್ದಿ ನಡೆದಿದೆ. ಪೊಲೀಸ್ ಅಧಿಕಾರಿ ಸಚಿನ್ ಕೌಶಿಕ್ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಇಳಿವಯಸ್ಸಿನ ದಂಪತಿ ಪೊಲೀಸರ ಸಮ್ಮುಖದಲ್ಲಿ ಒಬ್ಬರಿಗೊಬ್ಬರು ಲಡ್ಡು ತಿನ್ನಿಸುವ ಮೂಲಕ ತಮ್ಮ ದಾಂಪತ್ಯ ಕಲಹಕ್ಕೆ ಮುಕ್ತಯವಾಡಿದ್ದಾರೆ. ಇದನ್ನೂ ಓದಿ:  ಸಂತೋಷ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರಿಂದಲೇ ಹೈಡ್ರಾಮಾ

    ಏನಿದು ಘಟನೆ?
    ದಂಪತಿ ತಮ್ಮ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬಂದು ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದನ್ನು ತಿಳಿದ ಗ್ರಾಮಸ್ಥರು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಪೊಲೀಸರು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿ ಎಪ್ಪತ್ತರ ಹರೆಯ ದಂಪತಿಯನ್ನು ಒಂದು ಮಾಡಿದ್ದಾರೆ.

    ಇಳಿವಯಸ್ಸಿನ ಮಹಿಳೆ ತನ್ನ ಪತಿಗೆ ಲಡ್ಡು ತಿನ್ನಿಸುತ್ತಿರುವ ದೃಶ್ಯ ಕ್ಲೈಮ್ಯಾಕ್ಸ್‌ನಲ್ಲಿ ಸೆರೆಹಿಡಿಯಲಾಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು, ಮುದ್ದಾದ ವೀಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಂತೋಷ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆಗ್ರಹ

    ಅದರಲ್ಲಿಯೂ ಈ ವೀಡಿಯೋ ಕೊನೆಯಲ್ಲಿ ಹೆಂಡತಿಗೆ ಲಡ್ಡು ತಿನ್ನಿಸುವಾಗ ಇಳಿವಯಸ್ಸಿನ ಪತಿ ನನ್ನ ಕೈಯನ್ನು ಕಚ್ಚಬೇಡ ಎಂದು ಹೇಳುತ್ತಾರೆ. ಇದು ಅಲ್ಲಿ ನೆರೆದಿಂದ ಜನರನ್ನು ನಗಿಸುವಂತೆ ಮಾಡುತ್ತೆ. ಒಟ್ಟಿನಲ್ಲಿ ವೀಡಿಯೋದಲ್ಲಿರುವ ಈ ಮುದ್ದಾದ ಜೋಡಿ ನೋಡಿ ಎಂಜಯ್ ಮಾಡುತ್ತಿದ್ದಾರೆ.

  • ಶೇಂಗಾ ಉಂಡೆ ಮಾಡಿ ಸವಿಯಲು ಇಲ್ಲಿದೆ ಸರಳ ವಿಧಾನ

    ಶೇಂಗಾ ಉಂಡೆ ಮಾಡಿ ಸವಿಯಲು ಇಲ್ಲಿದೆ ಸರಳ ವಿಧಾನ

    ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಈ ತಿನಿಸನ್ನು ಸುಲಭವಾಗಿ ಬಹುಬೇಗ ಮಾಡಬಹುದು. ಯಾವುದೇ ಹಬ್ಬ-ಹರಿದಿನ ಅಥವಾ ಅತಿಥಿಗಳು ಮನೆಗೆ ಭೇಟಿಕೊಟ್ಟಾಗ ಸಿದ್ಧಪಡಿಸಬಹುದು. ಸರಳವಾಗಿ ಶೇಂಗಾನಿಂದ ಉಂಡೆ ಹೇಗೆ ತಯಾರು ಮಾಡುವುದು ಎನ್ನುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಶೇಂಗಾ- 2 ಕಪ್
    * ಎಳ್ಳು- ಅರ್ಧ ಕಪ್
    * ಅವಲಕ್ಕಿ – ಅರ್ಧ ಕಪ್
    * ಒಣಕೊಬ್ಬರಿ- ಅರ್ಧ ಕಪ್
    * ಬೆಲ್ಲ- 1 ಕಪ್
    * ಏಲಕ್ಕಿ- ಸ್ವಲ್ಪ
    * ತುಪ್ಪ – ಅರ್ಧ ಕಪ್

    ಮಾಡುವ ವಿಧಾನ:
    * ಶೇಂಗಾ, ಎಳ್ಳು, ಒಣಕೊಬ್ಬರಿ, ಅವಲಕ್ಕಿಯನ್ನು ಬೇರೆ, ಬೇರೆಯಾಗಿ ಗರಿಗರಿಯಾಗುವರೆಗೆ ಹುರಿದುಕೊಳ್ಳಬೇಕು.
    * ಮಿಕ್ಸಿ ಜಾರಿಗೆ ಶೇಂಗಾ, ಎಳ್ಳು, ಅವಲಕ್ಕಿ, ಒಣಕೊಬ್ಬರಿ ಹಾಕಿ ಪುಡಿ ಮಾಡಿ.  ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಪುಡಿ ಮಾಡಿದ ಮಿಶ್ರಣಕ್ಕೆ ಬೆಲ್ಲದಪುಡಿ, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ನುಣ್ಣಗೆ ಮಾಡಿಕೊಳ್ಳಿ.
    * ತಯಾರಿಸಿದ ಪುಡಿಯನ್ನು ಬೌಲಿಗೆ ಹಾಕಿ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಉಂಡೆ ಮಾಡಿದರೆ ರುಚಿಯಾದ ಶೇಂಗಾ ಉಂಡೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:   ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಡಲೆ ಹಿಟ್ಟಿನಿಂದ ಬಜ್ಜಿಯನ್ನು ತಯಾರಿಸಿ ಗೊತ್ತಿದೆ. ಆದರೆ ಕಡಲೆ ಹಿಟ್ಟಿನಿಂದ ಸಿಹಿಯಾದ ತಿಂಡಿಯನ್ನು ತಯಾರಿಸಬಹುದು. ಯಾವುದೇ ವಿಶೇಷ ದಿನ ಅಥವಾ ಹಬ್ಬದ ಸಂದರ್ಭದಲ್ಲಿ ರುಚಿಯಾಗಿ ಏನಾದರೂ ತಿನ್ನಬೇಕು. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ ಅನ್ನಿಸುತ್ತಿರುತ್ತದೆ. ಹೀಗಾಗಿ ನೀವು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಲಾಡು ಮಾಡಿ, ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು- 3 ಕಪ್
    * ಎಳ್ಳು – 4-5 ಚಮಚ
    * ತೆಂಗಿನ ತುರಿ -1 ಕಪ್
    * ಬೆಲ್ಲ-2 ಕಪ್
    * ತುಪ್ಪ- ಅರ್ಧ ಕಪ್
    * ಗೋಡಂಬಿ- ಸ್ವಲ್ಪ ಇದನ್ನೂ ಓದಿ:  ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಮಾಡುವ ವಿಧಾನ:
    *  ಪಾತ್ರೆಗೆ ಕಡಲೆ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಲೆಸಿ, ಮಿಶ್ರಣ ತಯಾರಿಸಿಕೊಳ್ಳಬೇಕು.
    * ನಂತರ ತವಾಗೆ ತುಪ್ಪ ಹಾಕಿ ಬಿಸಿಯಾದಾಗ ಅದರಲ್ಲಿ ಕಡಲೆ ಹಿಟ್ಟು ಹಾಕಿ ಫ್ರೈ ಮಾಡಿ. ಬಳಿಕ ಇದೇ ರೀತಿ ಎಳ್ಳು ಮತ್ತು ತೆಂಗಿನ ತುರಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಉಳಿದ ತುಪ್ಪವನ್ನು ಪ್ಯಾನ್‍ಗೆ ಹಾಕಿ 2 ನಿಮಿಷ ಬಿಸಿ ಮಾಡಿ. ಬಳಿಕ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಬೆಲ್ಲ ಕರಗುವಷ್ಟು ಹೊತ್ತು ಬಿಸಿ ಮಾಡಿ. ಫ್ರೈ ಮಾಡಿಟ್ಟ ಹಿಟ್ಟು, ಎಳ್ಳು ಮತ್ತು ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ


    * ಕೈಗೆ ತುಪ್ಪ ಸವರಿಕೊಂಡು ಆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿದರೆ ಲಾಡು ಸಿದ್ಧವಾಗುತ್ತದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ