Tag: Ladders

  • ಒಂದೂವರೆ ವರ್ಷದಲ್ಲೇ ಭಲೇ ಕಿಲಾಡಿ-ಎಳೆವಯಸ್ಸಲ್ಲೇ ಬೆರಗು ಮೂಡಿಸುವ ಸಾಹಸಿ

    ಒಂದೂವರೆ ವರ್ಷದಲ್ಲೇ ಭಲೇ ಕಿಲಾಡಿ-ಎಳೆವಯಸ್ಸಲ್ಲೇ ಬೆರಗು ಮೂಡಿಸುವ ಸಾಹಸಿ

    -ಹಗ್ಗದ ಏಣಿಯನ್ನ ಒಬ್ಬನೇ ಏರ್ತಾನೆ

    ಹಾವೇರಿ: ಹುಟ್ಟಿ 3 ವರ್ಷವಾದ್ರೂ ಕೆಲವು ಮಕ್ಕಳು ಹೆಜ್ಜೆ ಇಡಲು ಪರದಾಡ್ತವೆ ಅಂಥಾದ್ರಲ್ಲಿ 14 ತಿಂಗಳ ಗಂಡು ಮಗು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಕಸರತ್ತು ಮಾಡ್ತಾನೆ.

    ಹಾವೇರಿ ಜಿಲ್ಲೆ ಬ್ಯಾಡಗಿಯ ಕಾಗಿನೆಲೆ ಗ್ರಾಮದ ಮಾಜಿ ಯೋಧ ಆಸೀಪ್ ಅಲಿ ಅವರ ಪುತ್ರ ಮಹ್ಮದ್ ಜಾಹಿದ್. ಈ ಪುಟ್ಟ ಸಾಧಕ ಹಗ್ಗದ ಏಣಿಯನ್ನ ಒಬ್ಬನೇ ಏರ್ತಾನೆ. ರೋಮನ್ ರಿಂಗ್ಸ್ ಹಿಡಿದು ನೇತಾಡ್ತಾನೆ. ಕಿಟಕಿಯನ್ನ ಹಿಡಿದುಕೊಂಡು ಗೋಡೆಯನ್ನ ಏರಲು ಹೋಗ್ತಾನೆ.

    ಮಾಜಿ ಯೋಧ ಅಸೀಫ್ ಅಲಿ ಬಿಎಸ್‍ಎಫ್ ಸೇನೆಯಲ್ಲಿ ಹಲವು ವರ್ಷ ಸೇವೆ ಮಾಡಿ ನಿವೃತ್ತಿಯಾಗಿದ್ದಾರೆ. ಈಗ ಬಳ್ಳಾರಿಯ ಜೆಎಸ್‍ಡಬ್ಲೂ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗುವಿಗೆ ಕಳೆದ ಆರು ತಿಂಗಳಿನಿಂದ ವಿವಿಧ ತರಬೇತಿ ನೀಡ್ತಿದ್ದಾರೆ.