Tag: Ladakh

  • ಲಡಾಖ್‌ನಲ್ಲಿ ವಿಶಿಷ್ಟ ಟೂರಿಸಂ ಪ್ರೆಗ್ನೆನ್ಸಿ – ಮಕ್ಕಳನ್ನ ಪಡೆಯೋಕೆ ಇಲ್ಲಿಗೆ ಬರ್ತಾರಂತೆ ವಿದೇಶಿಯರು

    ಲಡಾಖ್‌ನಲ್ಲಿ ವಿಶಿಷ್ಟ ಟೂರಿಸಂ ಪ್ರೆಗ್ನೆನ್ಸಿ – ಮಕ್ಕಳನ್ನ ಪಡೆಯೋಕೆ ಇಲ್ಲಿಗೆ ಬರ್ತಾರಂತೆ ವಿದೇಶಿಯರು

    ಭೂಮಿಯ ಮೇಲಿರುವ ಕೆಲವು ವಸ್ತು, ಜಾಗ ಹಾಗೂ ಭಾಷೆಗಳು ತನ್ನದೇ ಆದಂತಹ ಪರಿಕಲ್ಪನೆಯನ್ನು ಹೊಂದಿರುತ್ತವೆ. ಅವುಗಳು ಬೆಳೆಯುತ್ತಾ ತನ್ನಲ್ಲಿನ ಕಲ್ಪನೆಯನ್ನು ಇತರರಲ್ಲಿ ಬೀಜ ಬಿತ್ತುವ ಕೆಲಸ ಮಾಡುತ್ತವೆ. ಹಾಗೆ ಬೆಳೆದುಕೊಂಡು ಬಂದು ಹೆಸರು ಗಳಿಸುತ್ತವೆ. ಈ ರೀತಿ ತನ್ನದೇ ಆದ ಪರಿಕಲ್ಪನೆಯೊಂದಿಗೆ ಬೆಳೆದು ಬಂದ ಲಡಾಖ್ ಗರ್ಭಧಾರಣೆಗೆ ಹೆಸರು ಪಡೆದುಕೊಂಡಿದೆ ಎನ್ನಬಹುದು. 

    ಹೌದು, ಲಡಾಖ್ ಪ್ರದೇಶದಲ್ಲಿರುವ ಈ ಒಂದು ಪುಟ್ಟ ಗ್ರಾಮ ತುಂಬಾ ಪ್ರಸಿದ್ಧಿಯಾಗಿದೆ. ಇಲ್ಲಿಗೆ ಬೇರೆ ಬೇರೆ ದೇಶಗಳಿಂದ ಜನರು ಆಗಮಿಸುತ್ತಾರೆ. ಇದೆಲ್ಲದಕ್ಕೂ ಒಂದೇ ಕಾರಣ ಅದು ಗರ್ಭಧಾರಣೆ. ಪ್ರೆಗ್ನೆನ್ಸಿ ಟೂರಿಸಂ ಎಂತಲೇ ಹೆಸರು ಪಡೆದಿರುವ ಈ ಪ್ರದೇಶಕ್ಕೆ ಮಕ್ಕಳನ್ನು ಪಡೆಯುವ ಉದ್ದೇಶದಿಂದ ವಿದೇಶಿಯರು ಇಲ್ಲಿಗೆ ಬರುತ್ತಾರೆ. ಯಾಕೆ ಈ ಪ್ರದೇಶಕ್ಕೆ ಬರಬೇಕು? ಯಾಕೆ ಬರುತ್ತಾರೆ? ಮಕ್ಕಳನ್ನು ಪಡೆಯುವ ಉದ್ದೇಶದಿಂದ ಇಲ್ಲಿಗೆ ಬರುವುದು ಯಾಕೆ? ಎನ್ನುವ ಹೆಚ್ಚಿನ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದೆಲ್ಲದಕ್ಕೂ ಉತ್ತರ ಇಲ್ಲಿದೆ.

    ಲಡಾಖ್ ನಲ್ಲಿರುವ ಆರ್ಯನ್ ವ್ಯಾಲಿಯೂ ಗರ್ಭಧಾರಣೆಗೆ ತುಂಬಾ ಖ್ಯಾತಿಯನ್ನು ಪಡೆದಿದೆ. ಈ ಗ್ರಾಮಕ್ಕೆ ದೇಶ ವಿದೇಶಗಳಿಂದ ಮಹಿಳೆಯರು ಮಕ್ಕಳನ್ನು ಪಡೆಯುವ ಉದ್ದೇಶದಿಂದಲೇ ಆಗಮಿಸುತ್ತಾರೆ. ಇಲ್ಲಿಗೆ ಬಂದು ಇಲ್ಲಿನ ಪುರುಷರೊಟ್ಟಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಲು ಇಚ್ಚಿಸುತ್ತಾರೆ. ಕೇಳಲು ವಿಚಿತ್ರವಾಗಿ ಅನಿಸಿದರೂ ಅದು ಸತ್ಯ. ಆರ್ಯನ್ ವ್ಯಾಲಿಯಲ್ಲಿ ಬ್ರೋಕ್ಪಾ ಎಂಬ ಸಮುದಾಯದವರು ವಾಸಿಸುತ್ತಾರೆ. ಈ ಸಮುದಾಯದವರನ್ನ ಆರ್ಯ ವಂಶದ ಕೊನೆಯ ಸಂತತಿ ಎನ್ನಲಾಗುತ್ತದೆ. ಇಡೀ ಜಗತ್ತನ್ನೇ ಗೆಲ್ಲಲು ಮುಂದಾಗಿದ್ದ ಅಲೆಕ್ಸಾಂಡರ್ ನ ಸೈನಿಕರ ವಂಶಸ್ಥರು ಎಂದು ಈ ಆರ್ಯನ್ ವ್ಯಾಲಿಯಲ್ಲಿರುವ ಸಮುದಾಯದವರು ಹೇಳಿಕೊಳ್ಳುತ್ತಾರೆ. ಅಂದರೆ ಆರ್ಯವಂಶದ ಕೊನೆಯ ಕುಡಿ ಎನ್ನಲಾಗುತ್ತದೆ. ಅಲೆಕ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದು ಮರಳುವಾಗ ಆತನ ಒಂದು ಸೇನಾ ತುಕಡಿ ಇಲ್ಲೇ ಉಳಿದಿತ್ತು. ಆ ಉಳಿದ ಒಂದು ಸೇನೆಯ ಭಾಗವೇ ಬ್ರೋಕ್ಪಾ ಸಮುದಾಯವಾಯಿತು ಎನ್ನಲಾಗಿದೆ. ಈ ಸಮುದಾಯದ ಪುರುಷರೊಂದಿಗೆ ಮಹಿಳೆಯರು ಲೈಂಗಿಕ ಸಂಪರ್ಕ ಬೆಳೆಸಿ ಮಕ್ಕಳನ್ನು ಪಡೆಯಲು ಇಚ್ಚಿಸುತ್ತಾರೆ. ಹೀಗಾಗಿ ಈ ಆರ್ಯನ್ ವ್ಯಾಲಿ ಗರ್ಭಧಾರಣೆಗೆ ಬಹು ಮಹತ್ವ ಪಡೆದುಕೊಂಡಿದೆ. 

    ಇಲ್ಲಿಗೆ ಬರುವುದ್ಯಾಕೆ?

    ಹೌದು, ಇದೇ ಲಡಾಖ್ ನ ಆರ್ಯನ್ ವ್ಯಾಲಿಗೆ ಬರಲು ಒಂದು ಕಾರಣವಿದೆ. ಇಲ್ಲಿನ ಬ್ರೋಕ್ಪಾ ಸಮುದಾಯದವರು ತಮ್ಮನ್ನು ತಾವು ಆರ್ಯ ವಂಶದ ಕೊನೆಯ ಸಂತತಿ ಎಂದು ಹೇಳಿಕೊಳ್ಳುತ್ತಾರೆ. ಈ ಸಮುದಾಯದ ಪುರುಷರು ಬಿಳಿ ಚರ್ಮ, ತಿಳಿ ಬಣ್ಣದ ಕಣ್ಣುಗಳು ಹಾಗೂ ಎತ್ತರದ ಮೈಕಟ್ಟನ್ನು ಹೊಂದಿದ್ದಾರೆ. ಇಲ್ಲಿಗೆ ಬರುವ ಮಹಿಳೆಯರು ಇಲ್ಲಿನ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದರೆ ತಮಗೆ ಅಲೆಕ್ಸಾಂಡರ್ ನಂತಹ ಅಥವಾ ಅಲೆಕ್ಸಾಂಡರ್ ಸೇವೆಯಲ್ಲಿದ್ದ ಬಲಿಷ್ಠ ಸೈನಿಕನಂತೆ ಮಗು ಜನಿಸಬೇಕು. ಜೊತೆಗೆ ಬಲಿಷ್ಠ, ಸದೃಢ ಮೈಕಟ್ಟು ಹಾಗೂ ಆಕರ್ಷಕ ಕಣ್ಣುಗಳನ್ನು ಹೊಂದಬೇಕು ಎಂದು ಬಯಸುತ್ತಾರೆ. ಈ ಕಾರಣಕ್ಕಾಗಿ ಈ ಪ್ರದೇಶಕ್ಕೆ ಹೆಚ್ಚಿನ ವಿದೇಶಿ ಮಹಿಳೆಯರು ಆಗಮಿಸುತ್ತಾರೆ. 

    ಇದೇ ಕಾರಣದಿಂದಾಗಿ ಲಡಾಖ್ ನ ಆರ್ಯನ್ ವ್ಯಾಲಿ ಜನಪ್ರಿಯತೆಯನ್ನು ಪಡೆದಿದೆ. ಇದೇ ಉದ್ದೇಶದಿಂದ ವಿಶೇಷವಾಗಿ ಜರ್ಮನಿ ಹಾಗೂ ಯುರೋಪಿನ ಇತರ ಭಾಗಗಳಿಂದ ಮಹಿಳೆಯರು ಬ್ರೋಕ್ಪಾ ಸಮುದಾಯದ ಪುರುಷರಿಂದ ಮಕ್ಕಳನ್ನು ಪಡೆಯುವ ಉದ್ದೇಶದಿಂದ ಈ ಹಳ್ಳಿಗೆ ಬರುತ್ತಾರೆ. 

    ಇನ್ನು ಇಲ್ಲಿನ ಸಮುದಾಯದವರು ಆರ್ಯವಂಶಸ್ಥರು ಎಂಬ ಹೇಳಿಕೆಯನ್ನು ಈಗಾಗಲೇ ಇತಿಹಾಸಕಾರರು ತಳ್ಳಿ ಹಾಕಿದ್ದಾರೆ. ಅಲ್ಲದೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇನ್ನು ಗರ್ಭಧಾರಣೆಗೆ ಸಂಬಂಧಿಸಿದಂತೆ ಇಂತಹ ವಿಷಯಗಳು ಹೆಚ್ಚಾಗಿ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಹರಡಿಕೊಂಡು ಎಲ್ಲರ ಕಿವಿ ಮುಟ್ಟಿವೆ. ಈ ಕುರಿತು ಸ್ಥಳೀಯರ ಮಾಹಿತಿ ಪ್ರಕಾರ, ಗರ್ಭ ಧರಿಸಲು ಹೆಚ್ಚಿನ ವಿದೇಶಿಗರು ಇಲ್ಲಿಗೆ ಆಗಮಿಸುತ್ತಾರೆ.

    ಗರ್ಭಧಾರಣೆಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪುರಾವೆಗಳಿಲ್ಲ.   ಆದರೆ ಗರ್ಭ ಧರಿಸಲು ಬರುವ ಪ್ರತಿ ಮಹಿಳೆಯು ತನಗೆ ಅಲೆಕ್ಸಾಂಡರ್ ಸೈನಿಕರ ಹಾಗೆಯೇ ಮಗು ಆಗುತ್ತದೆ ಎಂಬ ನಂಬಿಕೆಯಿಂದಲೇ ಬರುತ್ತಾರೆ. ಪ್ರವಾಸಿಗರನ್ನು ಆಕರ್ಷಿಸಲು ಇಲ್ಲಿನ ಜನರೇ ಈ ಕಥೆಯನ್ನ ಹಬ್ಬಿಸುತ್ತಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಇನ್ನು ಹಬ್ಬುತ್ತಿರುವ ಮಾಹಿತಿಯನ್ನು ಬೆಂಬಿಡದೆ ಹಲವು ಇತಿಹಾಸಕಾರರು ಹಾಗೂ ಪತ್ರಕರ್ತರು ಈ ವಿಷಯವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ. ಆದರೂ ಕೂಡ ಸತ್ಯ ಹೊರಬರದೆ ಈ ವಿಷಯ ಗೊಂದಲವಾಗಿ ಉಳಿದುಕೊಂಡು ಹೋಗಿದೆ.

  • ಸೋನಮ್ ವಾಂಗ್‌ಚುಕ್ ಜೊತೆ ನಂಟು ಹೊಂದಿದ್ದ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬಂಧನ

    ಸೋನಮ್ ವಾಂಗ್‌ಚುಕ್ ಜೊತೆ ನಂಟು ಹೊಂದಿದ್ದ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬಂಧನ

    ಲೇಹ್: ಸೋನಮ್ ವಾಂಗ್‌ಚುಕ್ (Sonam Wangchuk) ಜೊತೆ ನಂಟು ಹೊಂದಿರುವ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಲಡಾಖ್ (Ladakh) ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರತ್ಯೇಕ ರಾಜ್ಯಕ್ಕಾಗಿ ಕಳೆದ ಬುಧವಾರದಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆದು ಘರ್ಷಣೆಯಲ್ಲಿ ನಾಲ್ವರು ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ. ಸಾವಿಗೆ ಕಾರಣವಾದ ಗುಂಪನ್ನು ಪ್ರಚೋದಿಸಿದ ಆರೋಪದ ಮೇಲೆ ನಿನ್ನೆ ಲಡಾಖ್ ರಾಜ್ಯ ಹೋರಾಟಗಾರ ಸೋನಮ್ ವಾಂಗ್‌ಚುಕ್ ಬಂಧಿಸಲಾಗಿದೆ. ವಾಂಗ್‌ಚುಕ್‌ಗೆ ಪಾಕ್‌ ನಂಟಿನ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಲಡಾಖ್‌ ಹಿಂಸಾಚಾರಕ್ಕೆ ಪ್ರಚೋದನೆ – ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅರೆಸ್ಟ್‌

    ಲಡಾಖ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಸ್‌ಡಿ ಸಿಂಗ್ ಜಮ್ವಾಲ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಾಂಗ್‌ಚುಕ್ ಅವರ ಪಾಕಿಸ್ತಾನ ಭೇಟಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಾಂಗ್‌ಚುಕ್ ಪಾಕಿಸ್ತಾನದಲ್ಲಿ ನಡೆದ ಡಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

    ವಾಂಗ್‌ಚುಕ್ ಬಂಧನಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಗುಪ್ತಚರ ಆಪರೇಟಿವ್ (ಪಿಐಒ) ಬಂಧನದ ಬಗ್ಗೆ ಮತ್ತು ಆ ಕಾರ್ಯಕರ್ತ ಪಾಕಿಸ್ತಾನಿ ಜನರೊಂದಿಗೆ ಸಂಪರ್ಕದಲ್ಲಿರುವುದರ ಬಗ್ಗೆ ಸುಳಿವು ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ನಾವು ಪಾಕಿಸ್ತಾನದ ಪಿಐಒ ಒಬ್ಬನನ್ನು ಬಂಧಿಸಿದ್ದೇವೆ. ಆತ ವಾಂಗ್‌ಚುಕ್‌ರೊಂದಿಗೆ ಸಂಪರ್ಕದಲ್ಲಿದ್ದ. ಇದರ ದಾಖಲೆ ನಮ್ಮ ಬಳಿ ಇದೆ. ವಾಂಗ್‌ಚುಕ್ ಪಾಕಿಸ್ತಾನದಲ್ಲಿ ನಡೆದ ಡಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರು ಬಾಂಗ್ಲಾದೇಶಕ್ಕೂ ಭೇಟಿ ನೀಡಿದ್ದರು. ಅವರ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ ಎಂದು ಡಿಜಿಪಿ ಜಮ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಲಡಾಖ್‌ ಹಿಂಸಾಚಾರ – ಸೋನಮ್ ವಾಂಗ್‌ಚುಕ್ NGO ಪರವಾನಗಿ ರದ್ದು

    ಸೋನಮ್ ವಾಂಗ್‌ಚುಕ್ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದು ಜಾಮೀನು ಪಡೆಯಲು ಯಾವುದೇ ಅವಕಾಶವಿಲ್ಲದೆ ದೀರ್ಘಾವಧಿಯ ಬಂಧನಕ್ಕೆ ಅವಕಾಶ ನೀಡುತ್ತದೆ. ಅವರನ್ನು ರಾಜಸ್ಥಾನದ ಜೋಧ್‌ಪುರದಲ್ಲಿರುವ ಒಂದು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೇಹ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

  • ಲಡಾಖ್‌ ಹಿಂಸಾಚಾರಕ್ಕೆ ಪ್ರಚೋದನೆ – ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅರೆಸ್ಟ್‌

    ಲಡಾಖ್‌ ಹಿಂಸಾಚಾರಕ್ಕೆ ಪ್ರಚೋದನೆ – ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅರೆಸ್ಟ್‌

    ಲೇಹ್‌: ಲಡಾಖ್‌ನಲ್ಲಿ ಹಿಂಸಾಚಾರ (Ladakh Statehood Clashes) ನಡೆದ 2 ದಿನದ ಬಳಿಕ ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌(Sonam Wangchuk) ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರತ್ಯೇಕ ರಾಜ್ಯಸ್ಥಾನಮಾನಕ್ಕೆ ಆಗ್ರಹಿಸಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ ನಡೆಸುತ್ತಿದ್ದರು. ಬುಧವಾರ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ನಾಲ್ವರು ಮೃತಪಟ್ಟಿದ್ದರು. 40 ಪೊಲೀಸ್ ಸಿಬ್ಬಂದಿ ಸೇರಿದಂತೆ 80 ಜನರು ಗಾಯಗೊಂಡರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ವಾಂಗ್‌ಚುಕ್ ನೀಡಿದ ಹೇಳಿಕೆಯೇ  ಕಾರಣ ಎಂದು ಕೇಂದ್ರ ಗೃಹಸಚಿವಾಲಯ ಆರೋಪಿಸಿತ್ತು.

    ಹಿಂಸಾಚಾರ ನಡೆದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಸೋನಮ್ ವಾಂಗ್‌ಚುಕ್ ಅವರ ಸರ್ಕಾರೇತರ ಸಂಸ್ಥೆ ಲಡಾಖ್‌ ವಿದ್ಯಾರ್ಥಿಗಳ ಲಡಾಖ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿಯ (Students’ Educational and Cultural Movement of Ladakh) FCRA ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಇದನ್ನೂ ಓದಿ:  MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್‌-21ಗೆ ಗುಡ್‌ಬೈ ಹೇಳಿದ ಭಾರತ

    ನಾಲ್ವರು ಸಾವನ್ನಪ್ಪಿ ಇತರ ಅನೇಕರು ಗಾಯಗೊಂಡ ನಂತರ ಕೇಂದ್ರ ಸರ್ಕಾರವು ಗುರುವಾರ ವಿದೇಶಿ ನಿಧಿಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕೆ SECMOL ಪರವಾನಗಿ ರದ್ದು ಮಾಡಿದೆ.

    ವಾಂಗ್‌ಚುಕ್ ಅವರ ವೈಯಕ್ತಿಕ ಮತ್ತು ಜಂಟಿ ಖಾತೆಗಳಲ್ಲಿ ಹಣವನ್ನು ಸ್ವೀಕರಿಸಲಾಗಿದ್ದು ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ -2010 (FCRA) ಉಲ್ಲಂಘನೆಯಾಗಿದೆ. 2021 ಮತ್ತು 2024 ರ ನಡುವೆ ಅವರ ಎನ್‌ಜಿಒ ವಿದೇಶದಿಂದ ಕೋಟ್ಯಂತರ ರೂಪಾಯಿಗಳನ್ನು ಸ್ವೀಕರಿಸಿದೆ. ವಿದೇಶದಿಂದ ಬಂದ ಹಣವನ್ನು ಅಪರಿಚಿತ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದು ಅದು ಹೇಳಿದೆ.  ಇದನ್ನೂ ಓದಿ:  Bihar | ಮಹಿಳೆಯರಿಗೆ ಬಂಪರ್‌ – ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆಗಿಂದು ಪ್ರಧಾನಿ ಮೋದಿ ಚಾಲನೆ


    59 ವರ್ಷ ವಯಸ್ಸಿನ ಸೋನಮ್ ವಾಂಗ್‌ಚುಕ್ 9 ಖಾತೆಗಳನ್ನು ಹೊಂದಿದ್ದು ಅವುಗಳಲ್ಲಿ 8 ಖಾತೆಗಳನ್ನು ಘೋಷಣೆ ಮಾಡಿಲ್ಲ. ಈ ಎಂಟರ ಪೈಕಿ ಹಲವು ಖಾತೆಗಳಲ್ಲಿ ಭಾರಿ ಪ್ರಮಾಣದ ವಿದೇಶಿ ಹಣ ರವಾನೆಯಾಗಿದೆ. ವಾಂಗ್‌ಚುಕ್ 2021 ಮತ್ತು 2024 ರ ನಡುವೆ ತಮ್ಮ ವೈಯಕ್ತಿಕ ಖಾತೆಯಿಂದ ವಿದೇಶಗಳಿಗೆ ಸುಮಾರು 2.3 ಕೋಟಿ ರೂ.ಗಳನ್ನು ಕಳುಹಿಸಿದ್ದಾರೆ ಎಂದು ಉಲ್ಲೇಖಿಸಿದೆ.

    ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ. ಪಾಕಿಸ್ತಾನಕ್ಕೆ ಹೋಗಿ ಬಂದಿರುವ ವಾಂಗ್‌ಚುಕ್ ವಿರುದ್ಧ ಸಿಬಿಐ ಸಹ ಪ್ರಾಥಮಿಕ ತನಿಖೆ ಆರಂಭಿಸಿದೆ.

  • ಲಡಾಖ್‌ ಹಿಂಸಾಚಾರ – ಸೋನಮ್ ವಾಂಗ್‌ಚುಕ್ NGO ಪರವಾನಗಿ ರದ್ದು

    ಲಡಾಖ್‌ ಹಿಂಸಾಚಾರ – ಸೋನಮ್ ವಾಂಗ್‌ಚುಕ್ NGO ಪರವಾನಗಿ ರದ್ದು

    – ಅಕ್ರಮವಾಗಿ ವಿದೇಶದಿಂದ ದೇಣಿಗೆ ಸ್ವೀಕಾರ

    ನವದೆಹಲಿ: ಲಡಾಖ್‌ನಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಸರ್ಕಾರೇತರ ಸಂಸ್ಥೆ ಲಡಾಖ್‌ ವಿದ್ಯಾರ್ಥಿಗಳ ಲಡಾಖ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿಯ (Students’ Educational and Cultural Movement of Ladakh) FCRA ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.

    ನಾಲ್ವರು ಸಾವನ್ನಪ್ಪಿ ಇತರ ಅನೇಕರು ಗಾಯಗೊಂಡ ನಂತರ ಕೇಂದ್ರ ಸರ್ಕಾರವು ಗುರುವಾರ ವಿದೇಶಿ ನಿಧಿಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕೆ SECMOL ಪರವಾನಗಿ ರದ್ದು ಮಾಡಿದೆ.

    ವಾಂಗ್‌ಚುಕ್ ಅವರ ವೈಯಕ್ತಿಕ ಮತ್ತು ಜಂಟಿ ಖಾತೆಗಳಲ್ಲಿ ಹಣವನ್ನು ಸ್ವೀಕರಿಸಲಾಗಿದ್ದು ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ -2010 (FCRA) ಉಲ್ಲಂಘನೆಯಾಗಿದೆ. 2021 ಮತ್ತು 2024 ರ ನಡುವೆ ಅವರ ಎನ್‌ಜಿಒ ವಿದೇಶದಿಂದ ಕೋಟ್ಯಂತರ ರೂಪಾಯಿಗಳನ್ನು ಸ್ವೀಕರಿಸಿದೆ. ವಿದೇಶದಿಂದ ಬಂದ ಹಣವನ್ನು ಅಪರಿಚಿತ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದು ಅದು ಹೇಳಿದೆ. ಇದನ್ನೂ ಓದಿ:  ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌

    59 ವರ್ಷ ವಯಸ್ಸಿನ ಸೋನಮ್ ವಾಂಗ್‌ಚುಕ್ 9 ಖಾತೆಗಳನ್ನು ಹೊಂದಿದ್ದು ಅವುಗಳಲ್ಲಿ 8 ಖಾತೆಗಳನ್ನು ಘೋಷಣೆ ಮಾಡಿಲ್ಲ. ಈ ಎಂಟರ ಪೈಕಿ ಹಲವು ಖಾತೆಗಳಲ್ಲಿ ಭಾರಿ ಪ್ರಮಾಣದ ವಿದೇಶಿ ಹಣ ರವಾನೆಯಾಗಿದೆ. ವಾಂಗ್‌ಚುಕ್ 2021 ಮತ್ತು 2024 ರ ನಡುವೆ ತಮ್ಮ ವೈಯಕ್ತಿಕ ಖಾತೆಯಿಂದ ವಿದೇಶಗಳಿಗೆ ಸುಮಾರು 2.3 ಕೋಟಿ ರೂ.ಗಳನ್ನು ಕಳುಹಿಸಿದ್ದಾರೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ:  ಅಗ್ನಿ ಪ್ರೈಮ್‌ ಆರ್ಭಟ – ಇನ್ಮುಂದೆ ರೈಲಿನಿಂದಲೂ ಶತ್ರುಗಳ ಮೇಲೆ ದಾಳಿ ನಡೆಸಬಹುದು

    ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ. ಪಾಕಿಸ್ತಾನಕ್ಕೆ ಹೋಗಿ ಬಂದಿರುವ ವಾಂಗ್‌ಚುಕ್ ವಿರುದ್ಧ ಸಿಬಿಐ ಸಹ ಪ್ರಾಥಮಿಕ ತನಿಖೆ ಆರಂಭಿಸಿದೆ.

    ಪ್ರತ್ಯೇಕ ರಾಜ್ಯಸ್ಥಾನಮಾನಕ್ಕೆ ಆಗ್ರಹಿಸಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ ನಡೆಸುತ್ತಿದ್ದರು. ಬುಧವಾರ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ನಾಲ್ವರು ಮೃತಪಟ್ಟಿದ್ದರು. 40 ಪೊಲೀಸ್ ಸಿಬ್ಬಂದಿ ಸೇರಿದಂತೆ 80 ಜನರು ಗಾಯಗೊಂಡರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ವಾಂಗ್‌ಚುಕ್ ನೀಡಿದ ಹೇಳಿಕೆಯೇ  ಕಾರಣ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.

  • ಹಿಂಸಾಚಾರಕ್ಕೆ ತಿರುಗಿದ ಲಡಾಖ್‌ ರಾಜ್ಯ ಸ್ಥಾನಮಾನ ಪ್ರತಿಭಟನೆ – 4 ಬಲಿ, ಬಿಜೆಪಿ ಕಚೇರಿಗೆ ಬೆಂಕಿ

    ಹಿಂಸಾಚಾರಕ್ಕೆ ತಿರುಗಿದ ಲಡಾಖ್‌ ರಾಜ್ಯ ಸ್ಥಾನಮಾನ ಪ್ರತಿಭಟನೆ – 4 ಬಲಿ, ಬಿಜೆಪಿ ಕಚೇರಿಗೆ ಬೆಂಕಿ

    – ಹಿಂಸಾಚಾರಕ್ಕೆ ಕಾಂಗ್ರೆಸ್‌ ಕಾರಣ ಎಂದ ಬಿಜೆಪಿ

    ಲೆಹ್‌: ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ (Ladakh’s Statehood Protests) ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. 4 ಜನ ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

    ಲಡಾಖ್ ಅಪೆಕ್ಸ್ ಬಾಡಿ (LAB)  ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಹಲವು ವಾಹನಗಳು ಸುಟ್ಟಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯಲ್ಲಿ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಬಂಧನ

    ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದರಿಂದ ಪ್ರತಿಭಟನೆ ತೀವ್ರಗೊಂಡಿದೆ ಎಂದು ಎಲ್‌ಎಬಿ ಸಂಘಟಕರು ಆರೋಪಿಸಿದ್ದಾರೆ.

    ಹಿಂಸಾಚಾರ ತೀವ್ರಗೊಂಡ ಬೆನ್ನಲ್ಲೇ ಕೇಂದ್ರ ಆಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ರ ಸೆಕ್ಷನ್ 163 ರ ಅಡಿಯಲ್ಲಿ ಕರ್ಫ್ಯೂ ಹೇರಿ ತಕ್ಷಣವೇ ಲೇಹ್‌ನಲ್ಲಿ ಪ್ರತಿಭಟನೆಗಳು ನಿಷೇಧಿಸಿದೆ.

    ಸೆ.10ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 15 ಜನರಲ್ಲಿ ಇಬ್ಬರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದಾದ ನಂತರ ಎಲ್‌ಎಬಿ ಯುವ ಘಟಕವು ಬಂದ್ ಮತ್ತು ಬೃಹತ್ ಪ್ರತಿಭಟನೆಗೆ ಕರೆ ನೀಡಿತು. ಹಿಂಸಾಚಾರ ಹಿನ್ನೆಲೆಯಲ್ಲಿ ಹೋರಾಟಗಾರ ಸೋನಮ್ ವಾಂಗ್ ಚುಕ್ (Sonam Wangchuk) ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. ಲಡಾಖ್‌ಗೆ ರಾಜ್ಯದ ಮಾನ್ಯತೆ ನೀಡುವುದು ಮತ್ತು ಆರನೇ ಪರಿಚ್ಛೇದದಡಿಯಲ್ಲಿ ಸೇರಿಸುವ ಬೇಡಿಕೆ ಈಡೇರಿದಾಗ ಮಾತ್ರ ತಮ್ಮ ಹೋರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

    ಲಡಾಖ್‌ ಪ್ರತಿಭಟನೆಯ ಹಿಂದೆ ಕಾಂಗ್ರೆಸ್‌ ಇದೆ. ಸ್ಥಳೀಯ ಕಾಂಗ್ರೆಸ್‌ ನಾಯಕರೇ ಈ ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಿ ಬಿಜೆಪಿ ವಿಡಿಯೋ ಬಿಡುಗಡೆ ಮಾಡಿದೆ.

  • ಸೇನಾ ವಾಹನದ ಮೇಲೆ ಬಿದ್ದ ಬಂಡೆ – ಇಬ್ಬರು ಯೋಧರು ಸಾವು

    ಸೇನಾ ವಾಹನದ ಮೇಲೆ ಬಿದ್ದ ಬಂಡೆ – ಇಬ್ಬರು ಯೋಧರು ಸಾವು

    ಶ್ರೀನಗರ: ಪೂರ್ವ ಲಡಾಖ್‌ನಲ್ಲಿ ಸೇನಾ ವಾಹನದ ಮೇಲೆ ಬಂಡೆಯೊಂದು ಉರುಳಿ ಬಿದ್ದ ಪರಿಣಾಮ ಇಬ್ಬರ ಯೋಧರು ಸಾವಿಗೀಡಾಗಿರುವ ಘಟನೆ ನಡೆದಿದೆ.

    ಮೃತ ಸೈನಿಕರಲ್ಲಿ ಒಬ್ಬರು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಘಟನೆಯಲ್ಲಿ ಇತರ ಮೂವರು ಸೇನಾ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲಡಾಖ್‌ನಲ್ಲಿ ಸೇನಾ ಬೆಂಗಾವಲು ಪಡೆಯ ವಾಹನವೊಂದರ ಮೇಲೆ ಬಂಡೆಯೊಂದು ಬಿದ್ದು, ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮತ್ತು ಲ್ಯಾನ್ಸ್-ದಫದಾರ್ ದಲ್ಜೀತ್ ಸಿಂಗ್ ಕರ್ತವ್ಯದ ವೇಳೆ ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

    ಇಂದು ಬೆಳಗ್ಗೆ ಲಡಾಖ್‌ನ ಡರ್ಬುಕ್‌ನಿಂದ ಚೊಂಗ್ತಾಶ್‌ಗೆ ಸೇನಾ ಬೆಂಗಾವಲು ಪಡೆಯು ಚಲಿಸುತ್ತಿದ್ದಾಗ ವಾಹನವು ಬಂಡೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧ ಸ್ಥಳದಲ್ಲೇ ಸಾವನ್ನಪ್ಪಿದರು. ಇಬ್ಬರು ಪ್ರಮುಖ ಶ್ರೇಣಿಯ ಅಧಿಕಾರಿಗಳು ಮತ್ತು ಒಬ್ಬರು ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಲೇಹ್‌ನಲ್ಲಿರುವ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

  • ಹರಿಯಾಣ, ಗೋವಾ, ಲಡಾಖ್‌ಗೆ ಹೊಸ ರಾಜ್ಯಪಾಲರ ನೇಮಕ

    ಹರಿಯಾಣ, ಗೋವಾ, ಲಡಾಖ್‌ಗೆ ಹೊಸ ರಾಜ್ಯಪಾಲರ ನೇಮಕ

    ನವದೆಹಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ( BD Mishra) ಅವರು ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸೋಮವಾರ ಅಂಗೀಕರಿಸಿದ್ದಾರೆ. ಇದೇ ವೇಳೆ ರಾಷ್ಟ್ರಪತಿಗಳು, ಲಡಾಖ್‌ಗೆ ಹೊಸ ಲೆಫ್ಟಿನೆಂಟ್ ಗವರ್ನರ್, ಹರಿಯಾಣ ಮತ್ತು ಗೋವಾ ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

    ಹರಿಯಾಣದ ನೂತನ ರಾಜ್ಯಪಾಲರಾಗಿ ಪ್ರೊ.ಅಶೀಮ್‌ ಕುಮಾರ್ ಘೋಷ್ (Ashim Kumar Ghosh) ಹಾಗೂ ಗೋವಾ ರಾಜ್ಯಪಾಲರಾಗಿ ಪಶುಪತಿ ಅಶೋಕ್ ಗಜಪತಿ ರಾಜು (Pusapati Ashok Gajapathi Raju) ಅವರನ್ನು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ. ಇದನ್ನೂ ಓದಿ: ದ್ವೇಷ ಭಾಷಣಕ್ಕೆ ಕಡಿವಾಣ ಹಾಕಿ – ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ

    ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆಗಿ ಕವಿಂದರ್ ಗುಪ್ತಾ (Kavinder Gupta) ಅವರನ್ನು ನೇಮಕ ಮಾಡಲಾಗಿದ್ದು, ಈ ಮೂವರು ಅಧಿಕಾರ ವಹಿಸಿಕೊಳ್ಳುವ ದಿನಾಂಕಗಳಿಂದ ಅವರ ಅಧಿಕಾರಾವಧಿ ಜಾರಿಗೆ ಬರಲಿದೆ.

  • ಲಡಾಖ್‍ನಲ್ಲಿ ಪ್ರವಾಸಿಗರಿಗೆ ಉಚಿತ ವಸತಿ!

    ಲಡಾಖ್‍ನಲ್ಲಿ ಪ್ರವಾಸಿಗರಿಗೆ ಉಚಿತ ವಸತಿ!

    ಶ್ರೀನಗರ: ಭಾರತ (India) ಮತ್ತು ಪಾಕ್ (Pakistan) ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ಕಾಶ್ಮೀರದಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಇದರಿಂದ ಆಲ್ ಲಡಾಖ್ ಹೋಟೆಲ್ ಮತ್ತು ಅತಿಥಿ ಗೃಹ ಸಂಘಟನೆ (ALHAGHA) ಈ ಪ್ರದೇಶದಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಉಚಿತ ವಸತಿ ಸೌಕರ್ಯವನ್ನು ಒದಗಿಸಿದೆ.

    ಅಪರೇಷನ್‌ ಸಿಂಧೂರ (Operation Sindoor) ನಡೆದ ಬಳಿಕ ಸಂಘ ತುರ್ತು ಕಾರ್ಯಕಾರಿ ಸಭೆ ನಡೆಸಿ, ಈ ನಿರ್ಧಾರ ತೆಗೆದುಕೊಂಡಿದೆ. ಅನಿವಾರ್ಯದ ಪರಿಸ್ಥಿತಿಯಲ್ಲಿ ಅತಿಥಿಗಳ ಕಾಳಜಿವಹಿಸುವುದು ನಮ್ಮ ಕರ್ತವ್ಯವಾಗಿದೆ. ವಿಮಾನಗಳನ್ನು ರದ್ದಾಗಿದ್ದರಿಂದ ಪ್ರವಾಸಿಗರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಳಿದುಕೊಂಡಿರುವ ಹೋಟೆಲ್‌ಗಳಲ್ಲಿ ಪ್ರವಾಸಿಗರಿಗೆ ಉಳಿಯಲು ಅವಕಾಶ ನೀಡಲಾಗುವುದು ಎಂದು ಸಂಘಟನೆ ಹೇಳಿಕೊಂಡಿದೆ.

    ಪ್ರವಾಸಿಗರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಕ್ ಡ್ರಿಲ್‌ ಮೂಲಕ ಯುದ್ಧದ ಪರಿಸ್ಥಿತಿ ಉಂಟಾದರೆ ಹೇಗೆ ಸುರಕ್ಷಿತ ಕ್ರಮವಹಿಸಬೇಕು ಎಂಬುದನ್ನು ತಿಳಿಸಲಾಗಿದೆ. ಇದರ ನಡುವೆ, ಲಡಾಖ್‌ನ ಬೌದ್ಧ ಸಂಘ (LBA) ಭಾರತ ಸರ್ಕಾರದ ಆಪರೇಷನ್ ಸಿಂಧೂರಕ್ಕೆ ಬೆಂಬಲವನ್ನು ನೀಡಿದೆ. ಇದನ್ನೂ ಓದಿ: ಬಾಲಾಕೋಟ್‌, ಬ್ರಹ್ಮೋಸ್‌ ಬಳಿಕ ʻಆಪರೇಷನ್‌ ಸಿಂಧೂರʼ – ಪಾಕ್‌ ನಂಬಿದ್ದ ʻಮೇಡ್‌ ಇನ್‌ ಚೈನಾʼ ರೆಡಾರ್‌ ಫೇಲ್‌

    ಭಾರತವು ಪಾಕಿಸ್ತಾನದ (Pakistan) ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ವಾಯುನೆಲೆಯನ್ನು ನಿರ್ಬಂಧಿಸಲಾಗಿದ್ದು, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ(Indigo) 165ಕ್ಕೂ ಹೆಚ್ಚು ವಿಮಾನಯಾನವನ್ನು ಸ್ಥಗಿತಗೊಳಿಸಿದೆ. ಜಮ್ಮು, ಶ್ರೀನಗರ, ಅಮೃತಸರ, ಲೇಹ್, ಚಂಡೀಗಢ, ಜೋಧ್‌ಪುರ, ಧರ್ಮಶಾಲಾ, ಬಿಕಾನೇರ್, ಗ್ವಾಲಿಯರ್, ಕಿಶನ್‌ಗಢ ಮತ್ತು ರಾಜ್‌ಕೋಟ್‌ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೇ 10ರವರೆಗೆ ಇಂಡಿಗೋ ರದ್ದುಗೊಳಿಸಿದೆ.

    ಪರಿಸ್ಥಿತಿ ಸೂಕ್ಷ್ಮತೆಯನ್ನು ಗಮನಿಸಿ ಇತರ ನಿಲ್ದಾಣಗಳಿಗೆ ವಿಮಾನ ಹಾರಾಟವನ್ನು ಹೊಂದಾಣಿಕೆ ಮಾಡಲಾಗುವುದು. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ಪ್ರಯಾಣದ ಸ್ಥಿತಿಯನ್ನು ಪರಿಶೀಲಿಸುವಂತೆ ಗ್ರಾಹಕರಿಗೆ ಇಂಡಿಗೋ ಸಲಹೆ ನೀಡಿದೆ. ಅಲ್ಲದೇ ಏರ್ ಇಂಡಿಯಾ(Air India) ಸಂಸ್ಥೆ ಕೂಡ ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್ ನಿಲ್ದಾಣಗಳಿಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟಗಳನ್ನು ಮೇ 10ರ ವರೆಗೆ ಬಂದ್ ಮಾಡಿದೆ ಎಂದು ಎಕ್ಸ್ ಮೂಲಕ ತಿಳಿಸಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ | ಉಗ್ರರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಭಿಕಾರಿಸ್ತಾನ್‌!

  • ಭಾರತದ ಜೊತೆ ಸ್ನೇಹ ಹಸ್ತ ಚಾಚಿ ಕಿರಿಕ್‌ – ಲಡಾಖ್‌ನಲ್ಲಿ 2 ಕೌಂಟಿ ರಚಿಸಿ ಚೀನಾ ಕ್ಯಾತೆ

    ಭಾರತದ ಜೊತೆ ಸ್ನೇಹ ಹಸ್ತ ಚಾಚಿ ಕಿರಿಕ್‌ – ಲಡಾಖ್‌ನಲ್ಲಿ 2 ಕೌಂಟಿ ರಚಿಸಿ ಚೀನಾ ಕ್ಯಾತೆ

    ನವದೆಹಲಿ: ಭಾರತದೊಂದಿಗೆ (India) ಸ್ನೇಹ ಹಸ್ತ ಚಾಚಿ ನಂತರ ಕಿರಿಕ್‌ ಮಾಡುವ ಚಾಳಿಯನ್ನು ಮತ್ತೆ ಚೀನಾ (China) ಮುಂದುವರಿಸಿದೆ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಅಕ್ಸಾಯ್ ಚಿನ್‌ನಲ್ಲಿ (Aksai Chin) ಚೀನಾ ಎರಡು ಹೊಸ ‘ಕೌಂಟಿ’ಗಳನ್ನು ರಚಿಸಿ  ಕ್ಯಾತೆ ತೆಗೆದಿದೆ.

    ಚೀನಾದ ಈ ಪ್ರಯತ್ನಕ್ಕೆ ಭಾರತ ಸರ್ಕಾರ ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.  ಭಾರತೀಯ ಭೂಪ್ರದೇಶದಲ್ಲಿ ಅಕ್ರಮ ಚೀನೀ ಆಕ್ರಮಣವನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಖಾರವಾಗಿ ತಿಳಿಸಿದೆ.

     

    ವಾರದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್. ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿರುವ ಚೀನಾದ ಕ್ರಮವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಈ ಕೌಂಟಿಗಳೆಂದು ಕರೆಯಲ್ಪಡುವ ಅಧಿಕಾರ ವ್ಯಾಪ್ತಿಯ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿವೆ (Ladakh) ಎಂದು ಹೇಳಿದರು. ಇದನ್ನೂ ಓದಿ: ಚೀನಾದಲ್ಲಿ ಆರ್ಭಟಿಸುತ್ತಿದೆ ಹೊಸ ವೈರಸ್‌| ಸಾವಿರಾರು ಮಂದಿ ಆಸ್ಪತ್ರೆ ಪಾಲು – ವೈರಸ್ ಲಕ್ಷಣಗಳೇನು?

    ಹೊಸ ಕೌಂಟಿಗಳ ರಚನೆಯು ಪ್ರದೇಶದ ಮೇಲೆ ತನ್ನ ಸಾರ್ವಭೌಮತ್ವದ ಬಗ್ಗೆ ಭಾರತದ ದೀರ್ಘಕಾಲೀನ ಮತ್ತು ಸ್ಥಿರವಾದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಈ ನಡೆಯು ಈ ಪ್ರದೇಶವನ್ನು ‘ಅಕ್ರಮ’ವಾಗಿ ಹಾಗೂ ‘ಬಲವಂತ’ದಿಂದ ಆಕ್ರಮಿಸಿಕೊಳ್ಳಲು ಚೀನಾಕ್ಕೆ ಯಾವುದೇ ಅಧಿಕಾರ ನೀಡುವುದಿಲ್ಲ ಎಂದು ತಿಳಿಸಿದರು.

    ಅಕ್ಸಯ್‌ ಚೀನ್‌ ಏಲ್ಲಿದೆ?
    ಸ್ವಾತಂತ್ರ್ಯ ಗಳಿಸಿದ ನಂತರ ಭಾರತ ಮತ್ತು ಚೀನಾದ ಸಂಬಂಧ ಚೆನ್ನಾಗಿತ್ತು. ಆದರೆ ಕುತಂತ್ರಿ ಚೀನಾ ಭಾರತಕ್ಕೆ ಹಿಂದುಗಡೆಯಿಂದ ಚೂರಿ ಹಾಕಿತ್ತು. 1950 ರ ದಶಕದಲ್ಲಿ ಚೀನಾ ಟಿಬೆಟ್ ಸಂಪರ್ಕಿಸುವ ಸಲುವಾಗಿ ಅಕ್ಸಯ್‌ ಚೀನ್‌ ಪ್ರದೇಶದ ಮೂಲಕ ಮಿಲಿಟರಿ ರಸ್ತೆಯ ನಿರ್ಮಾಣಕ್ಕೆ ಕೈಹಾಕಿತ್ತು.

    ಚೀನಾದವರು ರಸ್ತೆ ನಿರ್ಮಿಸುವಾಗ ಭಾರತದ ಸೈನಿಕರು ಅಲ್ಲಿ ಗಸ್ತು ಕಾಯುತ್ತಿರಲಿಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ಈ ಸಂದರ್ಭದಲ್ಲಿ ಸೈನಿಕರು ಅಲ್ಲಿ ಗಸ್ತು ತಿರುಗುತ್ತಿರಲಿಲ್ಲ. ಯಾಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 5,000 ಮೀಟರ್ ಎತ್ತರದಲ್ಲಿದೆ. ಇಲ್ಲಿ ಜನವಸತಿ ಇಲ್ಲದ ಕಾರಣ ಅಲ್ಲಿ ಏನಾಗುತ್ತಿದೆ ಎನ್ನುವುದು ಅಷ್ಟು ಸುಲಭವಾಗಿ ತಿಳಿಯುತ್ತಿರಲಿಲ್ಲ. 1958ರಲ್ಲಿ 1,200 ಕಿಲೋಮೀಟರ್‌ ಉದ್ದದ ರಸ್ತೆಯನ್ನು ಚೀನಾ ನಿರ್ಮಾಣ ಮಾಡಿತ್ತು.

    1958ರಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಭಾರತ ಬಲವಾಗಿ ಚೀನಾ ನಡೆಯನ್ನು ವಿರೋಧಿಸಿತ್ತು. ಯಾವುದೇ ಯುದ್ಧ ಮಾಡದೇ ಭಾರತದ 38,000 ಚದರ ಕಿ.ಮೀ ಜಾಗವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಈ 38,000 ಚದರ ಕಿ.ಮೀ ಜಾಗವೇ ಈಗಿನ ಅಕ್ಷಯ್‌ ಚೀನ್‌. ಇದನ್ನು ಚೀನಾ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.

  • ಲಡಾಖ್‌ನಲ್ಲಿ 5 ಹೊಸ ಜಿಲ್ಲೆಗಳ ಸ್ಥಾಪನೆ: ಅಮಿತ್ ಶಾ ಘೋಷಣೆ

    ಲಡಾಖ್‌ನಲ್ಲಿ 5 ಹೊಸ ಜಿಲ್ಲೆಗಳ ಸ್ಥಾಪನೆ: ಅಮಿತ್ ಶಾ ಘೋಷಣೆ

    ನವದೆಹಲಿ: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ (Ladakh) ಐದು ಹೊಸ ಜಿಲ್ಲೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಘೋಷಿಸಿದ್ದಾರೆ.

    ಸದ್ಯ ಲಡಾಕ್ ನಲ್ಲಿ ಲೇಹ್ ಮತ್ತು ಕಾರ್ಗಿಲ್ ಎರಡು ಜಿಲ್ಲೆಗಳಿದ್ದು ಹೆಚ್ಚುವರಿಯಾಗಿ ಝನ್ಸ್ಕಾರ್, ದ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್ ಹೊಸ ಜಿಲ್ಲೆಗಳಾಗಿ ಸ್ಥಾಪನೆಯಾಗಲಿವೆ.

    ಈ ಬಗ್ಗೆ ಎಕ್ಸ್ ಪೊಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವ ಅಮಿತ್ ಶಾ, ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಲಡಾಖ್ ಅನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ದೂರ ದೃಷ್ಟಿಯ ಅನ್ವೇಷಣೆಯಲ್ಲಿ, ಕೇಂದ್ರಾಡಳಿತ ಪ್ರದೇಶದಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಇದನ್ನೂ ಓದಿ: ಕೀಬೋರ್ಡ್‌ನಲ್ಲಿ ಡಾಲರ್ ಬದಲು ರೂಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ

     

    ಹೊಸ ಜಿಲ್ಲೆಗಳಾದ ಝನ್ಸ್ಕಾರ್, ದ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್‌ಥಾಂಗ್ ಈಗ ಹೆಚ್ಚು ಕೇಂದ್ರೀಕೃತ ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲ ಜನರಿಗೆ ಮೀಸಲಾದ ಪ್ರಯೋಜನಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?