Tag: ladak

  • 18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಯೋಗ ಪ್ರದರ್ಶಿಸಿದ ಯೋಧರು!

    18 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಯೋಗ ಪ್ರದರ್ಶಿಸಿದ ಯೋಧರು!

    ಶ್ರೀನಗರ: ಅಂತರಾಷ್ಟ್ರೀಯ ಯೋಗ ದಿನವನ್ನು 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಪ್ರದರ್ಶಿಸಿ ಭಾರತೀಯ ಯೋಧರು ಸಾಹಸ ಮೆರೆದಿದ್ದಾರೆ.

    ಇಂಡೋ-ಟಿಬೇಟಿಯನ್ ಬಾರ್ಡರ್ ಸೇನಾ ವಿಭಾಗದ ಯೋಧರು ಈ ಸಾಹಸವನ್ನು ಮಾಡಿದ್ದಾರೆ. ಲಡಾಕ್‍ನ ಕಣಿವೆ ಪ್ರದೇಶಗಳಲ್ಲಿನ 18 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಯೋಧರು ಸೂರ್ಯ ನಮಸ್ಕಾರ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದಾರೆ.

    ಲಡಾಕ್‍ನ ಅನೇಕ ಗಡಿ ಪ್ರದೇಶಗಳು ಯಾವಾಗಲೂ ಹಿಮದಿಂದ ಆವೃತವಾಗಿರುತ್ತದೆ. ಇಲ್ಲಿ ನಮಗೆ ಉಸಿರಾಡಲು ಅಸಾಧ್ಯವಾಗುವಷ್ಟು ಹಿಮ ಆವರಿಸಿಕೊಂಡಿರುತ್ತದೆ. ಇಂತಹ ಸ್ಥಳದಲ್ಲಿ ಯೋಧರು ಯೋಗ ಪ್ರದರ್ಶನ ಮಾಡಿ ತಮ್ಮ ಸಾಹಸವನ್ನು ಮೆರೆದಿದ್ದಾರೆ.

    ಇಂತಹ ಪ್ರದೇಶಗಳು ಉಗ್ರರು ಭಾರತದ ಗಡಿಯೊಳಗೆ ನುಸುಳುವುದಕ್ಕೆ ಅನುಕೂಲವಾಗಿದ್ದು, ಇಂತಹ ಸ್ಥಳಗಳಲ್ಲಿ ಭಾರತೀಯ ಸೇನೆಯು ಉನ್ನತ ತರಬೇತಿ ಪಡೆದ ಯೋಧರನ್ನು ನೇಮಿಸಿ ಉಗ್ರರ ನುಸುಳುವಿಕೆಯನ್ನು ತಡೆದಿದ್ದಾರೆ. ಮೈ ಕೊರೆಯುವ ಚಳಿ ಹಾಗೂ ಉಸಿರಾಟಕ್ಕೂ ತೊಂದರೆಯಾಗುವ ಈ ಪ್ರದೇಶದಲ್ಲಿ ಯೋಧರು ದೇಶಕ್ಕೊಸ್ಕರ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.