Tag: labourers

  • 300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    – ಕಾರು‌ ಹತ್ತಿಸಿ ಯಾರಾದ್ರೂ ಸತ್ತಿದ್ದಾರಾ ಅಂತ ಕೇಳಿದ ಚಾಲಕ

    ಲಕ್ನೋ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಗಂಟೆಗೆ 300 ಕಿಮೀ ವೇಗದಲ್ಲಿ ಬಂದ ಲ್ಯಾಂಬೋರ್ಗಿನಿ ಕಾರು (Lamborghini Car) ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ನುಗ್ಗಿದೆ. ಈ ವೇಳೆ ಫುಟ್‌ಪಾತ್‌ನಲ್ಲಿದ್ದ ಛತ್ತೀಸ್‌ಗಢದ ಇಬ್ಬರು ಕಾರ್ಮಿಕರಿಗೆ (Labourers) ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ಈ ವೇಳೆ ಕಾರು ಚಾಲಕ ತೋರಿದ ವರ್ತನೆ, ನೀಡಿದ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿದೆ.

    ನೋಯ್ಡಾದ ಸೆಕ್ಟರ್ 94ರಲ್ಲಿ (Noida’s sector 94) ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಈ ಘಟನೆ ನಡೆದಿದೆ. ಆದ್ರೆ ವೇಗವಾಗಿ ಕಾರು ಚಲಾಯಿಸಿಕೊಂಡ ಬಂದ ವ್ಯಕ್ತಿ ಅಪಘಾತ ಮಾಡಿ, ಏನೂ ನಡೆದಿಲ್ಲ ಅನ್ನುವಂತೆ ಕೂಲಾಗಿ ಇಳಿದು ಯಾರಾದ್ರು ಸತ್ತಿದ್ದಾರಾ? ಅಂತ ಕೇಳಿದ್ದಾನೆ. ಈ ಅಮಾನವೀಯ ಪ್ರತಿಕ್ರಿಯೆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಸದ್ಯ ಕಾರು ಚಾಲಕನಾದ ಅಜ್ಮೀರ್ ನಿವಾಸಿ ದೀಪಕ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ! 

    ದೀಪಕ್ ಅಜ್ಮೀರ್‌ ಮೂಲತಃ ಕಾರು ಮಾರಾಟಗಾರ. ಈತ ಕಾರಿನ ಟೆಸ್ಟ್ ಡ್ರೈವ್‌ಗಾಗಿ ನೊಯ್ಡಾಗೆ ಬಂದಿದ್ದ. ಕಾರಿನ ಮಾಲೀಕ ಮೃದುಲ್, ಸೆಕ್ಟರ್ 94 ರ ಸೂಪರ್ನೋವಾದ ನಿವಾಸಿ. ಅವರು ಯೂಟ್ಯೂಬರ್ (YouTuber) ಆಗಿದ್ದು, 18.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬೇಸಿಗೆ ಅವಧಿಯಲ್ಲಿ ಮುಂಬೈ-ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ

    ಪೊಲೀಸರ ಪ್ರಕಾರ, ದೀಪಕ್ ಒಬ್ಬನೇ ಕಾರು ಚಲಾಯಿಸುತ್ತಿದ್ದಾಗ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯಿಂದ ಪ್ರಕಾರ ದೀಪಕ್ ಭಾನುವಾರ ಬೆಳಗ್ಗೆ ಕಾರು ಟೆಸ್ಟ್ ಡ್ರೈವ್ ,ಮಾಡಲು ನೊಯ್ಡಾಗೆ ಬಂದಿದ್ದ. ಆತ ಕಾರನ್ನು ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗಿ, ಸ್ವಲ್ಪ ಶಾಪಿಂಗ್ ಕೂಡಾ ಮಾಡಿ, ವಾಪಸ್ ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಾಗ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದನ್ನ ಅಲ್ಲಿನ ಜನ ಪ್ರಶ್ನೆ ಮಾಡಿದಾಗ ಯಾರಾದ್ರೂ ಸತ್ತಿದ್ದಾರಾ? ಅಂತ ವಿಚಿತ್ರವಾಗಿ ಪ್ರಶ್ನೆ ಮಾಡಿದ್ದಾನೆ. ಜೊತೆಗೆ ಇದು ನನ್ನ ತಪ್ಪಲ್ಲ, ಕಾರಿನ ತಪ್ಪು ಅಂತ ಉದ್ಧಟತನ ಮೆರೆದಿದ್ದಾನೆ. ಚಾಲಕನ ಹೇಳಿಕೆ ವಿಡಿಯೋ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದ್ದು, ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಸದ್ಯ ಘಟನೆಯಲ್ಲಿ ಛತ್ತಿಸ್‌ಗಢ ಮೂಲದ ಇಬ್ಬರು ಕಾರ್ಮಿಕರರು ಪ್ರಾಣಾಪಾಯದಿಂದ ಪಾರಾಗಿದ್ದು, ಕೈ, ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತದ ಸಂದರ್ಭದಲ್ಲಿ ಕಾರು ಸುಮಾರು 300 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ನೋಟು – ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್‌ ದಾಖಲಾಗಲ್ಲ: ಅಮಿತ್‌ ಶಾ

  • ಬಲೂಚಿಸ್ತಾನ್‌ನಲ್ಲಿ ಮತ್ತೆ ಪಾಕ್‌ ಉಗ್ರರ ಅಟ್ಟಹಾಸ – ನಿದ್ರೆಯಲ್ಲಿದ್ದ 7 ಕಾರ್ಮಿಕರು ಚಿರನಿದ್ರೆಗೆ

    ಬಲೂಚಿಸ್ತಾನ್‌ನಲ್ಲಿ ಮತ್ತೆ ಪಾಕ್‌ ಉಗ್ರರ ಅಟ್ಟಹಾಸ – ನಿದ್ರೆಯಲ್ಲಿದ್ದ 7 ಕಾರ್ಮಿಕರು ಚಿರನಿದ್ರೆಗೆ

    ಇಸ್ಲಾಮಾಬಾದ್‌: ಪಾಕಿಸ್ತಾನದ ಬಲೂಚಿಸ್ತಾನ್‌ (Balochistan) ಪ್ರಾಂತ್ಯದಲ್ಲಿ ಮತ್ತೆ ನೆತ್ತರು ಹರಿದಿದೆ. ಪಾಕ್‌ ಪಂಜಾಬ್‌ ಪ್ರಾಂತ್ಯದ ಕನಿಷ್ಠ 7 ಕಾರ್ಮಿಕರನ್ನ ಪ್ರತ್ಯೇಕತಾವಾದಿ ಉಗ್ರರ ಗುಂಪು ಹತ್ಯೆ ಮಾಡಿರುವುದಾಗಿ ಭಾನುವಾರ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    ಮುಲ್ತಾನ್‌ನ ಕಾರ್ಮಿಕರು ಶನಿವಾರ ತಡರಾತ್ರಿ ಪಂಜ್‌ಗುರ್ ಪಟ್ಟಣದ ಖುದಾ-ಎ-ಅಬದಾನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರಲ್ಲಿ ಮಲಗಿದ್ದರು. ಈ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ್ ಪೊಲೀಸ್ ಮಹಾನಿರೀಕ್ಷಕ ಮೊವಾಝಮ್ ಜಾ ಅನ್ಸಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ತತ್ತರಿಸಿದ ನೇಪಾಳ – ಪ್ರವಾಹ, ಭೂಕುಸಿತದಿಂದ 112 ಮಂದಿ ಸಾವು

    ಶಸ್ತ್ರ ಸಜ್ಜಿನ ಭಯೋತ್ಪಾದಕರು ನಿರ್ಮಾಣ ಹಂತದಲ್ಲಿರುವ ಮನೆಗೆ ನುಗ್ಗಿದಾಗ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದರು. ಈ ವೇಳೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ (Automatic Weapons) ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಗಂಭೀರ ಗಾಯಗೊಂಡಿದ್ದ ಓರ್ವ ಕಾರ್ಮಿಕ ಮಾತ್ರ ಬಚಾವ್‌ ಆಗಿದ್ದಾನೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್, ಬಲೂಚಿಸ್ತಾನ ಮುಖ್ಯಮಂತ್ರಿ ಮೀರ್ ಸರ್ಫ್ರಾಜ್ ಬುಗ್ತಿ ಅವರಿಂದ ವರದಿ ಘಟನೆ ಕುರಿತು ವರದಿ ಕೇಳಿದ್ದಾರೆ. ಬಲೂಚಿಸ್ತಾನದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ: ಬೈರೂತ್ ದಾಳಿಯಲ್ಲಿ ಹಿಜ್ಬುಲ್ಲಾ‌ ಮುಖ್ಯಸ್ಥನ ಪುತ್ರಿಯೂ ಸಾವು; ನಸ್ರಲ್ಲಾ ಬಳಿಕ ಮತ್ತೊಬ್ಬ ಟಾಪ್‌ ಲೀಡರ್‌ ಟಾರ್ಗೆಟ್‌!

    ಇದಕ್ಕೂ ಮುನ್ನ ಶನಿವಾರ ಕ್ವೆಟ್ಟಾದಲ್ಲಿ ಬಲೂಚಿಸ್ತಾನ್ ನ್ಯಾಷನಲ್ ಪಾರ್ಟಿ-ಮೆಂಗಲ್ (BNP-M)ನ ಹಿರಿಯ ನಾಯಕ ಅಘಾ ಖಾಲಿದ್ ಶಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು, ಗ್ಯಾಂಗ್‌ ಲೀಡರ್‌ನ ಸೋದರಸಂಬಂಧಿ ಗಾಯಗೊಂಡಿದ್ದರು. ಇದಾದ ಮರುದಿನವೇ ಈ ಘಟನೆ ನಡೆದಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಬಲೂಚಿಸ್ತಾನ್‌ನಲ್ಲಿ ಹೆಚ್ಚಿದ ಹತ್ಯೆ:
    ಇತ್ತೀಚೆಗಷ್ಟೇ ಪಾಕಿಸ್ತಾನದ (Pakistan) ಬಲೂಚಿಸ್ತಾನ್ ಮುಸಾಖೆಲ್ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಕನಿಷ್ಠ 23 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಭಯೋತ್ಪಾದಕರು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಲು ಒತ್ತಾಯಿಸಿ, ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿದ್ದರು. ಇದಾದ ನಂತರ ಬಲೂಚಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚಾಗಿದೆ.

  • ಮಡಿಕೇರಿಯಲ್ಲಿ ಗುಡ್ಡ ಕುಸಿದು ಮೂವರು ಕೂಲಿ ಕಾರ್ಮಿಕರ ದುರ್ಮರಣ

    ಮಡಿಕೇರಿಯಲ್ಲಿ ಗುಡ್ಡ ಕುಸಿದು ಮೂವರು ಕೂಲಿ ಕಾರ್ಮಿಕರ ದುರ್ಮರಣ

    ಮಡಿಕೇರಿ: ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಗುಡ್ಡ ಕುಸಿದ (Hill Collapse) ಪರಿಣಾಮ ಮೂವರು ಕೂಲಿ ಕಾರ್ಮಿಕರು (Labourers) ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಡಿಕೇರಿ (Madikeri) ನಗರದ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿವಾಸಿಗಳಾದ ಬಸಪ್ಪ, ನಿಂಗಪ್ಪ ಹಾಗೂ ಆನಂದ ಮೃತ ದುರ್ದೈವಿಗಳು. ವ್ಯಕ್ತಿಯೊಬ್ಬರ ಜಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮಣ್ಣು ತೆಗೆಯುತ್ತಿದ್ದ ಸಂದರ್ಭ ಗುಡ್ಡ ಕುಸಿದಿದೆ. ಈ ಘಟನೆಯಿಂದ ಐವರು ಕೆಲಸ ಮಾಡುವ ಸಂದರ್ಭ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಅದೃಷ್ಟವಶಾತ್ ಕಾರ್ಮಿಕ ರಾಜು ಇತರ ಕಾರ್ಮಿಕರ ಸಹಕಾರದಿಂದ ಮೇಲೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಉಳಿದ ಮೂವರು ಮಣ್ಣಿನಡಿ ಸಿಲುಕಿಕೊಂಡ ಪರಿಣಾಮ ಮೇಲೆ ಬರಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ.

    ದುರ್ಘಟನೆ ವೇಳೆ ಸುಮಾರು 8 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಡಗು ಎಸ್‌ಪಿ ರಾಮರಾಜನ್, ಮಡಿಕೇರಿ ಶಾಸಕ ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜು ಸ್ಥಳ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಪಬ್ಲಿಕ್‌ ಹೀರೋ ಬಾದಾಮಿಯ ಶಿವ ರೆಡ್ಡಿ ವಾಸನ್‌ಗೆ ರಾಜ್ಯೋತ್ಸವ ಪ್ರಶಸ್ತಿ

    ಬಳಿಕ ಮಾತಾನಾಡಿದ ಎಸ್‌ಪಿ ರಾಮರಾಜನ್, ಇಂದು 15 ಅಡ್ಡಿ ಎತ್ತರದ ತಡೆಗೋಡೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಗುಡ್ಡ ಕುಸಿದು, ಕಾರ್ಮಿಕರ ಮೇಲೆ ಬಿದ್ದಿದೆ. ಅದರಲ್ಲಿ 4 ಜನರ ಮೇಲೆ ಮಣ್ಣು ಬಿದ್ದಿದೆ. ಒಬ್ಬರನ್ನು ಅಲ್ಲಿನ ಸಿಬ್ಬಂದಿಯೇ ರಕ್ಷಣೆ ಮಾಡಿದ್ದಾರೆ. ಉಳಿದ ಮೂವರು 1 ಗಂಟೆ ಕಾಲ ಮಣ್ಣಿನಡಿ ಸಿಲುಕಿದ್ದರು. ಅವರನ್ನು ರಕ್ಷಿಸಲು ಎಲ್ಲರೂ ನಿರಂತರವಾಗಿ ಶ್ರಮಿಸಿದರು ಎಂದು ಹೇಳಿದರು.

    ಈ ಘಟನೆಗೆ ಇಲ್ಲಿ ಮೊದಲೇ ಸಡಿಲವಾಗಿ ಮಣ್ಣ ಹಾಕಿದ್ದರು ಎನ್ನಲಾಗಿದೆ. ನೋಡುವುದಕ್ಕೆ ಯಾರಿಗೂ ತಿಳಿಯುವುದಿಲ್ಲ. ಈ ಕಾಮಗಾರಿ ಮಾಡಲು ಪರ್ಮಿಷನ್ ತೆಗೆದುಕೊಂಡಿದ್ದಾರೋ ಇಲ್ಲವೋ ಅನ್ನೊಂದು ಇನ್ನಷ್ಟೇ ಮಾಹಿತಿ ಕಲೆ ಹಾಕಬೇಕಿದೆ. ಇದು ಮನೆಯ ಮಾಲೀಕನ ನಿರ್ಲಕ್ಷ್ಯದಿಂದ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ ಸಿಎಂ: ಜಮೀರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲ್ಲು ಕ್ವಾರಿ ಕುಸಿತ – 15 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

    ಕಲ್ಲು ಕ್ವಾರಿ ಕುಸಿತ – 15 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ

    ಐಜ್ವಾಲ್: ಕಲ್ಲು ಕ್ವಾರಿ (Stone Quarry) ಕುಸಿದು 15ಕ್ಕೂ ಹೆಚ್ಚು ಕಾರ್ಮಿಕರು (labourers) ಮಣ್ಣಿನಡಿ ಸಿಲುಕಿರುವ ಘಟನೆ ಮಿಜೋರಾಂನಲ್ಲಿ (Mizoram) ನಡೆದಿದೆ.

    ಮಿಜೋರಾಂನ ಹ್ನಾಥಿಯಾಲ್ ಗ್ರಾಮದ ಬಳಿ ಇದ್ದ ಕಲ್ಲು ಕ್ವಾರಿಯಲ್ಲಿ 15ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕ್ವಾರಿ ಕುಸಿದು ಕ್ವಾರಿಗೆ ಮಣ್ಣು ಆವರಿಸಿದೆ. ಏಕಾಏಕಿ ಮಣ್ಣು ಕುಸಿದ ಪರಿಣಾಮ ಕ್ವಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ.

    ಕನಿಷ್ಟ 15 ಮಂದಿ ಮಣ್ಣಿನಡಿಯಲ್ಲಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಮಣ್ಣಿನಡಿ ಡ್ರಿಲ್ಲಿಂಗ್ ಯಂತ್ರಗಳು ಹೂತುಹೋಗಿವೆ. 5ಕ್ಕೂ ಹೆಚ್ಚು ಜೆಸಿಬಿಗಳು (JCB) ಮಣ್ಣು ತೆರವುಗೊಳಿಸುವ ಕಾರ್ಯಯದಲ್ಲಿ ತೊಡಗಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ – ದೀಪಾವಳಿ ಸಂಭ್ರಮಿಸಲು ಮನೆಗೆ ಹೋಗ್ತಿದ್ದ 15 ಕಾರ್ಮಿಕರು ಸಾವು

    ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ – ದೀಪಾವಳಿ ಸಂಭ್ರಮಿಸಲು ಮನೆಗೆ ಹೋಗ್ತಿದ್ದ 15 ಕಾರ್ಮಿಕರು ಸಾವು

    ಲಕ್ನೋ/ಭೋಪಾಲ್: ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ (Bus Accident) ಹೊಡೆದ ಪರಿಣಾಮ ದೀಪಾವಳಿ (Diwali) ಸಂಭ್ರಮಿಸಲು ಮನೆಗೆ ತೆರಳುತ್ತಿದ್ದ ಉತ್ತರಪ್ರದೇಶದ (UttarPradesh) 15 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ರೇವಾ ಹೆದ್ದಾರಿಯಲ್ಲಿ ನಡೆದಿದೆ.

    ಸುಮಾರು 100 ಮಂದಿ ಪ್ರಯಾಣಿಕರಿದ್ದ ಬಸ್ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳುತ್ತಿದ್ದಾಗ ತಡರಾತ್ರಿ ರೇವಾದ ಸುಹಾಗಿ ಪಹಾರಿ ಬಳಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡ 40 ಮಂದಿಯನ್ನು ರೇವಾದ ಸಂಜಯ್ ಗಾಂಧಿ ಮೆಮೊರಿಯಲ್‌ ಆಸ್ಪತ್ರೆಗೆ (Sanjay Gandhi Memorial Hospital) ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR

    ಈ ಅಪಘಾತಕ್ಕೂ ಮುನ್ನ ಇದೇ ದಾರಿಯಲ್ಲಿ ಮತ್ತೊಂದು ಟ್ರಕ್ ಅಪಘಾತ ಸಂಭವಿಸಿತ್ತು. ಹಾಗಾಗಿ ಟ್ರಕ್ ಹೆದ್ದಾರಿಯಲ್ಲೇ ಸಿಲುಕಿತ್ತು. ಈ ವೇಳೆ ಬಸ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ರೇವಾ ಎಸ್ಪಿ ನವನೀತ್ ಭಾಸಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಕಾರ್ಗಿಲ್ ಯುದ್ಧಭೂಮಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ

    ಉತ್ತರ ಪ್ರದೇಶ ಕಾರ್ಮಿಕರು (Labourers) ಮಧ್ಯಪ್ರದೇಶದ ಕಟ್ನಿಯಿಂದ ಬಸ್ ಹತ್ತಿದ್ದರು. ಹೈದರಾಬಾದ್‌ನಿಂದ ಕಟ್ನಿಗೆ ಪ್ರತ್ಯೇಕ ಬಸ್‌ನಲ್ಲಿ ಬಂದಿದ್ದರು. ದೀಪಾವಳಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಅವರ ಕುಟುಂಬ ಸದಸ್ಯರಿಗೆ ಮೃತದೇಹಗಳನ್ನು ರವಾನಿಸಲು ರೇವಾ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡುತ್ತಿದೆ ಎಂದು ಸಿಎಂ ಹೇಳಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪಿಎಂ ಮೋದಿ ಮೃತರ ಕುಟುಂಬಕ್ಕೆ ತಲಾ 50 ಸಾವಿರ ಪರಿಹಾರಧನ ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಡಿಯಲ್ಲಿ 20 ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಕಾರ್ಮಿಕರ ರಕ್ಷಣೆ – ಇನ್ನೂ ಸಿಕ್ಕಿಲ್ಲ 9 ಮಂದಿ

    ಗಡಿಯಲ್ಲಿ 20 ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಕಾರ್ಮಿಕರ ರಕ್ಷಣೆ – ಇನ್ನೂ ಸಿಕ್ಕಿಲ್ಲ 9 ಮಂದಿ

    ಇಟಾನಗರ: ಅರುಣಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ವೇಳೆ ನಾಪತ್ತೆಯಾಗಿದ್ದ ಇಬ್ಬರು ಕಾರ್ಮಿಕರು ಪತ್ತೆಯಾಗಿದ್ದಾರೆ.

    20 ದಿನಗಳ ಹಿಂದೆ ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯ ಭಾರತ-ಚೀನಾ ಗಡಿಯ ಬಳಿ 19 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದರು. ಇಲ್ಲಿವರೆಗಿನ ಶೋಧ ಕಾರ್ಯಾಚರಣೆಯಲ್ಲಿ 10 ಮಂದಿ ಸಿಕ್ಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ಗಾಂಜಾ ಸಾಗಾಟ ಎಂದು ತನಿಖೆ ಮಾಡಿದ ಪೊಲೀಸರಿಗೆ ತಿಳಿಯಿತು ಕೊಲೆ ರಹಸ್ಯ 

    Arunachal Pradesh: 7 of 19 missing Assam construction workers rescued- The New Indian Express

    ಕುರುಂಗ್ ಕುಮೇ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಬೆಂಗಿಯಾ ನಿಘೀ ಅವರು ಈ ಕುರಿತು ಮಾತನಾಡಿದ್ದು, ರಕ್ಷಿಸಲ್ಪಟ್ಟ ಇಬ್ಬರು ಕಾರ್ಮಿಕರನ್ನು ಖೋಲೆಬುದ್ದೀನ್ ಶೇಕ್(27) ಮತ್ತು ಶಮೀದುಲ್ ಶೇಕ್(19) ಎಂದು ಗುರುತಿಸಲಾಗಿದೆ. ಇವರಿಬ್ಬರು ಅಸ್ವಸ್ಥರಾಗಿದ್ದು, ನಹರ್ಲಾಗುನ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.

    ಜಿಲ್ಲಾಧಿಕಾರಿ ಈ ಕುರಿತು ಮಾತನಾಡಿದ್ದು, ವಿಷಕಾರಿ ಹಾವುಗಳ ಹೆದರಿಕೆಯಿಂದಾಗಿ ಸ್ಥಳೀಯ ಮಾರ್ಗದರ್ಶಿ ಸೇರಿದಂತೆ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‍ಡಿಆರ್‌ಎಫ್) ಭಾನುವಾರ ತಡರಾತ್ರಿ ಕಾರ್ಯಾಚರಣೆಯನ್ನು ನಿಲ್ಲಿಸಿತು. ಆದರೆ ಮತ್ತೆ ಸೋಮವಾರ ನಾಪತ್ತೆಯಾಗಿರುವ 9 ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಪುನರಾರಂಭವಾಗಲಿದೆ. ಪ್ರತಿಕೂಲ ಹವಾಮಾನದಿಂದಾಗಿ ಭಾರತೀಯ ವಾಯುಪಡೆ(ಐಎಎಫ್) ಹೆಲಿಕಾಪ್ಟರ್ ಭಾನುವಾರ ಕಾರ್ಯಾಚರಣೆಯಲ್ಲಿ ತೊಡಗಿಲ್ಲ ಎಂದಿದ್ದಾರೆ.

    ಎಸ್‍ಡಿಆರ್‌ಎಫ್‍ನಿಂದ ರಕ್ಷಿಸಲ್ಪಟ್ಟ ಇಬ್ಬರು ಕಾರ್ಮಿಕರು ಈ ಕುರಿತು ಮಾತನಾಡಿದ್ದು, ದಟ್ಟವಾದ ಅರಣ್ಯ ಮತ್ತು ಪರ್ವತ ಪ್ರದೇಶದಲ್ಲಿ ನಡೆಯಲು ಸಾಧ್ಯವಾಗದೆ ಇನ್ನೂ ನಾಲ್ವರು ಕಾರ್ಮಿಕರು ನಮ್ಮ ಹಿಂದೆ ಇದ್ದರು ಎಂದು ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಬಾಯಿಗೆ ಕಹಿ ಇದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು ‘ಹಾಗಲಕಾಯಿ ಡ್ರೈ ಪಲ್ಯ’

    ನಡೆದಿದ್ದೇನು?
    19 ಕಾರ್ಮಿಕರು ಹೆಚ್ಚಾಗಿ ಮುಸ್ಲಿಮರು ಮತ್ತು ಅಸ್ಸಾಂ ನಿವಾಸಿಗಳು. ಬಾರ್ಡರ್ ರೋಡ್ ಆರ್ಗನೈಸೇಶನ್(BRO) ರಸ್ತೆ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಂದ ಕೆಲಸ ಮಾಡಲು ತೊಡಗಿಸಿಕೊಂಡಿದ್ದರು. ಈದ್ ಆಚರಿಸಲು ಕಾರ್ಮಿಕರು ರಜೆ ನೀಡಲು ಗುತ್ತಿಗೆದಾರರು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಕಾರ್ಮಿಕರು ಜುಲೈ 5 ರಂದು ರಾತ್ರಿ ತಮ್ಮ ಪ್ರಾಜೆಕ್ಟ್ ಸೈಟ್ ಕ್ಯಾಂಪ್‍ನಿಂದ ಪಲಾಯನ ಮಾಡಿದ್ದರು.

    ಆದರೆ 19 ಕಾರ್ಮಿಕರು ವಿಷಕಾರಿ ಹಾವುಗಳು ಮತ್ತು ಕಾಡು ಪ್ರಾಣಿಗಳಿಂದ ಮುತ್ತಿಕೊಂಡಿರುವ ದಟ್ಟ ಅರಣ್ಯವನ್ನು ಪ್ರವೇಶಿಸಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ದುರಸ್ತಿ ಕೆಲಸ ಮುಗಿಸಿ ರಸ್ತೆ ಬದಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದ ಲಾರಿ – 3 ಸಾವು

    ದುರಸ್ತಿ ಕೆಲಸ ಮುಗಿಸಿ ರಸ್ತೆ ಬದಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದ ಲಾರಿ – 3 ಸಾವು

    ಚಂಡೀಗಢ: ಅತೀ ವೇಗವಾಗಿ ಬಂದ ಸರಕು ಸಾಗಣೆ ಲಾರಿಯೊಂದು ರಸ್ತೆ ದುರಸ್ತಿ ಕೆಲಸ ಮುಗಿಸಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದು ಮೂವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಜಜ್ಜರ್ ಬಳಿ ನಡೆದಿದೆ.

    Road accident

    ಇಲ್ಲಿನ ಕುಂಡ್ಲಿ ಮನೇಸರ್ ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌- ವೇ ಹೆದ್ದಾರಿಯಲ್ಲಿ ರಸ್ತೆ ಅಪಘಾತ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡ 11 ಮಂದಿ ಪೈಕಿ 10 ಮಂದಿಯನ್ನು PGIMS ಆಸ್ಪತ್ರೆಗೆ, ಗಂಭೀರ ಗಾಯಗೊಂಡ ಓರ್ವನನ್ನು ಬಹದ್ದೂರ್‌ಗಢ್‌ನ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆಗೆ ಬೀಗ, ವೈದ್ಯರಿಗೆ ನೋಟಿಸ್

    CRIME 2

    ಅಪಘಾತಕ್ಕೆ ಒಳಗಾದವರು ಇಲ್ಲಿನ ಕೆಎಂಪಿ ಎಕ್ಸ್‌ಪ್ರೆಸ್‌-ವೇ ಹೆದ್ದಾರಿಯಲ್ಲಿ ರಸ್ತೆದುರಸ್ತಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ, ರಸ್ತೆ ಬದಿಯಲ್ಲೇ ಮಲಗಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಲಾರಿಯೊಂದು ಕಾರ್ಮಿಕರ ಮೇಲೆ ಹರಿದಿದೆ. ಇದನ್ನೂ ಓದಿ: ಚೇತನಾ ರಾಜ್ ಸಾವು: ಬಾಡಿ ಶೇಮಿಂಗ್‌ ವಿರುದ್ಧ ದನಿಯೆತ್ತಿದ ಅಶ್ವಿತಿ ಶೆಟ್ಟಿ

    ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬಹದ್ದೂರ್‌ಗಢ ಜನರಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.

  • ಸುರಂಗದಲ್ಲಿ ಸಿಲುಕಿದ ಕಾರ್ಮಿಕರು – 7 ಮಂದಿಯ ರಕ್ಷಣೆ

    ಸುರಂಗದಲ್ಲಿ ಸಿಲುಕಿದ ಕಾರ್ಮಿಕರು – 7 ಮಂದಿಯ ರಕ್ಷಣೆ

    ಭೋಪಾಲ್: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್‍ನಲ್ಲಿ ಕಾಮಗಾರಿ ವೇಳೆ ಬಾರ್ಗಿ ಕಾಲುವೆ ಸುರಂಗ ಮೇಲ್ಭಾಗ ಕುಸಿದು 9 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಅವರಲ್ಲಿ ಈಗಾಗಲೇ 7 ಮಂದಿಯನ್ನು ರಕ್ಷಿಸಿದ್ದು, ಇನ್ನೂ ಇಬ್ಬರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ.

    ಶನಿವಾರ ತಡರಾತ್ರಿ ನಿರ್ಮಾಣ ಹಂತದಲ್ಲಿರುವ ಬಾರ್ಗಿ ಕಾಲುವೆ ಸುರಂಗದ ಮೇಲ್ಭಾಗ ಕುಸಿದಿದೆ. ಇದರಲ್ಲಿ 9 ಕಾರ್ಮಿಕರು ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿರನ್ನು ರಕ್ಷಿಸಲು ಸ್ಥಳೀಯ ಅಧಿಕಾರಿಗಳು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ತಂಡ(ಎಸ್‍ಡಿಇಆರ್‍ಎಫ್)ದ ಸಹಾಯ ಪಡೆದು ಕಾರ್ಮಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಎಸ್‍ಡಿಇಆರ್‍ಎಫ್ ತಂಡ ಜಬಲ್‍ಪುರದಿಂದ ಆಗಮಿಸಿದೆ ಎಂದು ಕಟ್ನಿ ಕಲೆಕ್ಟರ್ ಪ್ರಿಯಾಂಕ್ ಮಿಶ್ರಾ ತಿಳಿಸಿದರು.

    ಸಿಕ್ಕಿಬಿದ್ದ ಕಾರ್ಮಿಕರು ರಕ್ಷಣಾ ಸಿಬ್ಬಂದಿಯ ಕರೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದರಿಂದಾಗಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎಂದು ಸ್ಲೀಮನಾಬಾದ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಘ ಮಿತ್ರ ಗೌತಮ್ ಹೇಳಿದರು. ಇದನ್ನೂ ಓದಿ: ನಿರುದ್ಯೋಗ ಹೆಚ್ಚಾಗಲು ಕಾರಣ ಕೇಂದ್ರ ಸರ್ಕಾರ: ರಾಹುಲ್ ಗಾಂಧಿ

    ಅಗತ್ಯ ಸಾಧನಗಳೊಂದಿಗೆ ಎಸ್‍ಡಿಇಆರ್‌ಎಫ್ ತಂಡವು ಸುರಂಗವನ್ನು ಅಗೆಯುವ ಮೂಲಕ ಕಾರ್ಮಿಕರನ್ನು ತಲುಪಲು ಪ್ರಯತ್ನಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರಾಜೋರಾ ತಿಳಿಸಿದರು.

    ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಸ್ಲೀಮನಾಬಾದ್‍ನಲ್ಲಿ ನಡೆದ ಘಟನೆಯ ಕಟ್ನಿ ಕಲೆಕ್ಟರ್‌ರೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

  • ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ- 27 ಮಂದಿ ಗಂಭೀರ

    ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ- 27 ಮಂದಿ ಗಂಭೀರ

    ಶ್ರೀನಗರ: ನಿರ್ಮಾಣ ಹಂತದ ಸೇತುವೆ ಕುಸಿದು 27 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

    ಸಾಂಬಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಕಬ್ಬಿಣದ ಕಟ್ಟು, ಹಲಗೆಗಳು ಕುಸಿದು ಬಿದ್ದಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ:  ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ

    ರಾಮಗಡ-ಕೌಲ್‍ಪುರದಲ್ಲಿ ದೇವಿಕಾ ನದಿಯ ಮೇಲೆ ಗಡಿ ರಸ್ತೆಗಳ ಸಂಸ್ಥೆ ಪ್ರಮುಖ ಸೇತುವೆಯನ್ನು ಕಾಮಗಾರಿ ಆಗುತ್ತಿತ್ತು. ಕಾಂಕ್ರೀಟ್ ಸ್ಲ್ಯಾಬ್ ಹಾಕುವ ವೇಳೆ ಕಬ್ಬಿಣದ ಶೆಟರ್ ಕುಸಿದಿದೆ. ಈ ಅವಘಡ ಸಂಭವಿಸಿದಾಗ ಅಲ್ಲೇ ಇದ್ದ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದರು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಸ್ಥಳಾಂತರ ಮಾಡಲಾಗಿದೆ.

  • ಕೊರೊನಾ ಭಯದಿಂದ ಗ್ರಾಮಕ್ಕೆ ಮರಳುತ್ತಿದ್ದವ್ರು ಮಸಣ ಸೇರಿದ್ರು

    ಕೊರೊನಾ ಭಯದಿಂದ ಗ್ರಾಮಕ್ಕೆ ಮರಳುತ್ತಿದ್ದವ್ರು ಮಸಣ ಸೇರಿದ್ರು

    – ಲಾರಿ ಡಿಕ್ಕಿ ರಭಸಕ್ಕೆ 4 ಜನ ಅಪ್ಪಚ್ಚಿ, ಸಾವಿನ ಸಂಖ್ಯೆ 7ಕ್ಕೆ
    – 4 ಜನರ ಸ್ಥಿತಿ ಚಿಂತಾಜನಕ

    ರಾಯಚೂರು: ಕೊರೊನಾ ವೈರಸ್ ಭಯದಿಂದ ಲಾಕ್‍ಡೌನ್ ಮಧ್ಯ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದ ರಾಯಚೂರು ಜಿಲ್ಲೆಯ 30 ಜನರಿದ್ದ ಮಿನಿ ಟ್ರಕ್‍ಗೆ ಲಾರಿ ಡಿಕ್ಕಿ ಹೊಡೆದು ಏಳ ಜನ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಸುರಪೂರ ತಾಲೂಕಿನ ಕಕ್ಕೇರಿ ಗ್ರಾಮದ ಬಸಮ್ಮ, ಹನುಮಂತ, ಲಿಂಗಸ್ಗೂರು ತಾಲೂಕಿನ ರಾಯದುರ್ಗ ಗ್ರಾಮದ ಶ್ರೀದೇವಿ, ರಂಗಪ್ಪ, ಶರಣಪ್ಪ, ಅಮರಪ್ಪ ಹಾಗೂ ಚಿಂಚರಕಿ ಗ್ರಾಮದ ಕೊಳ್ಳಪ್ಪ ಮೃತ ದುರ್ದೈವಿಗಳು. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ.

    ಆಗಿದ್ದೇನು?:
    ಕೊರೊನಾ ವೈರಸ್‍ನಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ರಾಯಚೂರಿನ ರಸ್ತೆ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಜೊತೆಗೆ ಕೊರೊನಾ ಭಯಕ್ಕೆ ಸೂರ್ಯಪೇಟೆಯಿಂದ 30 ಜನರು ತಮ್ಮ ಗ್ರಾಮಗಳಿಗೆ ಮಿನಿ ಟ್ರಕ್‍ನಲ್ಲಿ ಸಾಗಿಸುತ್ತಿದ್ದರು. ಶಂಶಾಬಾದ್ ಬಳಿ ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ಹಿಂಬದಿಯಿಂದ ಮಿನಿ ಟ್ರಕ್‍ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಮಿನಿ ಟ್ರಕ್‍ನಲ್ಲಿದ್ದ ನಾಲ್ವರು ಸ್ಥಳದಲ್ಲಿ ಪ್ರಾಣಬಿಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದರು.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ವೆಂಕಟೇಶ್ ಅವರು ಪರಿಶೀಲನೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡವರನ್ನು ಶಂಶಾಬಾದ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಗಾಯಾಳುಗಳನ್ನು ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರಿಗೆ ಇನ್ನೂ ಚಿಕಿತ್ಸೆ ಕೊಡಲಾಗುತ್ತದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಯಚೂರು ಎಸ್‍ಪಿ, ತೆಲಂಗಾಣದಕ್ಕೆ ಗುಳೆ ಹೋಗಿದ್ದ ರಾಯಚೂರಿನ ಜನರು ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ತಮ್ಮ ಗ್ರಾಮಗಳಿಗೆ ಮಾರ್ಚ್ 27ರಂದು ಬೆಳಗಿನ ಜಾವ 12ಗಂಟೆ ಸುಮಾರಿಗೆ ವಾಪಸ್ ಆಗುತ್ತಿದ್ದರು. ಆದರೆ ಶಂಶಾಬಾದ್ ರಿಂಗ್ ರೋಡ್‍ನಲ್ಲಿ ಕಾರ್ಮಿಕರಿದ್ದ ಮಿನಿ ಟ್ರಕ್ ಕೆಟ್ಟು ನಿಂತಿತ್ತು. ಅದನ್ನು ರಿಪೇರಿ ಮಾಡುತ್ತಿದ್ದಾಗ ಹಿಂದುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದ ಸ್ಥಳದಲ್ಲಿಯೇ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಮೂವರು ಉಸ್ಮಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.