Tag: labourer

  • ಹೈಟೆನ್ಷನ್ ತಂತಿ ತಗುಲಿ ಹೊತ್ತಿ ಉರಿದ ಬಸ್ – ಮೂವರು ಕಾರ್ಮಿಕರು ಸಾವು

    ಹೈಟೆನ್ಷನ್ ತಂತಿ ತಗುಲಿ ಹೊತ್ತಿ ಉರಿದ ಬಸ್ – ಮೂವರು ಕಾರ್ಮಿಕರು ಸಾವು

    ಜೈಪುರ: ಉತ್ತರ ಪ್ರದೇಶದ (Uttar Pradesh) ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲ್ಭಾಗವು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಸುಮಾರು 12 ಮಂದಿಗೆ ಗಂಭೀರ ಸುಟ್ಟು ಗಾಯಗಳಾಗಿವೆ.

    ಜೈಪುರ (Jaipur) ಗ್ರಾಮೀಣ ಜಿಲ್ಲೆಯ ಶಹಪುರ ಉಪವಿಭಾಗದ ಮನೋಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಟೋಡಿ ಗ್ರಾಮದ ಇಟ್ಟಿಗೆ ಗೂಡಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ 11,000 ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ಲೈನ್ ತಗುಲಿದೆ. ಇದನ್ನೂ ಓದಿ: ಕೀನ್ಯಾ | 12 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ – ಎಲ್ಲರೂ ಸಾವನ್ನಪ್ಪಿರುವ ಶಂಕೆ

    ಮನೋಹರಪುರದ ಹಳ್ಳಿಯೊಂದರ ಬಳಿಯ ರಸ್ತೆಯಿಂದ ಬಸ್ ಹಾದು ಹೋಗುವಾಗ ಬಸ್‌ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳು ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ತಿಳಿಸಿದ್ದಾರೆ.

    ಬಸ್‌ನ ಮೇಲ್ಭಾಗವು ಹೈಟೆನ್ಷನ್ ಲೈನ್‌ಗೆ ತಗುಲುತ್ತಿದ್ದಂತೆ, ಜೋರಾದ ಸ್ಫೋಟ ಸದ್ದು ಕೇಳಿತ್ತು. ಕಾರ್ಮಿಕರ ಕಿರುಚಾಟ ಸದ್ದು ಕೇಳಿ ಹತ್ತಿರದ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮನೋಹರ್‌ಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ತಕ್ಷಣವೇ ಶಹಪುರ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ.

  • ವಾರದಲ್ಲಿ 2 ದಿನ ರಜೆ – ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ?

    ವಾರದಲ್ಲಿ 2 ದಿನ ರಜೆ – ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ?

    ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯ (10 Hour Workday For Labourers) ಗರಿಷ್ಠ ಮಿತಿಯನ್ನು ದಿನಕ್ಕೆ 9 ರಿಂದ 10 ಗಂಟೆಗೆ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ (Karnataka Government) ಚಿಂತನೆ ನಡೆಸಿದೆ.

    ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮವಿದೆ.

    ಈಗ ಈ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆಸಿದೆ. ಇದನ್ನೂ ಓದಿ: ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

     

    ಕಾನೂನು ತಿದ್ದುಪಡಿ ವಿಚಾರ ಈಗ ಚರ್ಚಾ ಹಂತದಲ್ಲಿದ್ದು ಈ ಸಂಬಂಧ ರಾಜ್ಯ ಸರ್ಕಾರ ವಿಕಾಸ ಸೌಧದಲ್ಲಿ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸುತ್ತಿದೆ. ಈ ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕ ಸಂಘಟನೆಗಳು ಸದಸ್ಯರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಇಸ್ರೇಲ್ ತಯಾರಿ

    ಈಗಾಗಲೇ ಕೇಂದ್ರ ಹಾಗೂ ಖಾಸಗಿ ಉದ್ಯೋಗಿಗಳ ಸಂಘದಿಂದಲೂ ಪ್ರಸ್ತಾವನೆ ಬಂದಿದೆ. ನಿತ್ಯ 10 ಗಂಟೆ ಕೆಲಸ ಮಾಡಿದರೆ ಶನಿವಾರ ಭಾನುವಾರ ಎರಡು ದಿನದ ರಜೆ ನೀಡಲಾಗುತ್ತದೆ.

    ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ಕೆಲ ದಿನಗಳ ಹಿಂದೆ ನಡೆಸಿದ ಸಂಪುಟ ಸಭೆಯಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಿಸುವ ತಿದ್ದುಪಡಿ ಮಸೂದೆಗೆ  ಅನುಮೋದನೆ ನೀಡಿತ್ತು.

     

  • ಮಂಗಳೂರಿನಲ್ಲಿ ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಂಗಡಿ ಮಾಲೀಕ

    ಮಂಗಳೂರಿನಲ್ಲಿ ಕಾರ್ಮಿಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಂಗಡಿ ಮಾಲೀಕ

    ಮಂಗಳೂರು: ಅಂಗಡಿ ಮಾಲೀಕನೊಬ್ಬ (Shop Owner) ತನ್ನ ಕಾರ್ಮಿಕನನ್ನೇ (Labourer) ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

    ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ ಘಟನೆ ನಡೆದಿದೆ. ಉತ್ತರ ಭಾರತ ಮೂಲದ ಗಜ್ಞಾನ್ ಜಗು ಕೊಲೆಯಾದ ವ್ಯಕ್ತಿಯಾಗಿದ್ದು, ಆತನನ್ನು ಅಂಗಡಿ ಮಾಲೀಕ ತೌಸಿಫ್ ಹುಸೈನ್ ಬೆಂಕಿ ಹಚ್ಚಿ ಕೊಂದಿದ್ದಾನೆ.

    ಆರೋಪಿ ಜನರಲ್ ಸ್ಟೋರ್‌ನ ಮಾಲೀಕನಾಗಿದ್ದು, ಕಾರ್ಮಿಕನನ್ನು ಕೊಂದ ಬಳಿಕ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾನೆ. ಆದರೆ ವೈದ್ಯರು ಆತನನ್ನು ಪರೀಕ್ಷಿಸಿದಾಗ ಗಜ್ಞಾನ್ ಮೃತಪಟ್ಟಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಕರೆಂಟ್ ಶಾಕ್ ಕೊಟ್ಟು, ಕತ್ತು ಹಿಸುಕಿ ಜೈನಮುನಿ ಹತ್ಯೆ – ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ಆರೋಪಿ ಬಳಿಕ ವಿದ್ಯುತ್ ಶಾಕ್‌ನಿಂದ ಕಾರ್ಮಿಕ ಸಾವನ್ನಪ್ಪಿರುವುದಾಗಿ ಪೊಲೀಸರಿಗೆ ದೂರು ನೀಡಿ ಘಟನೆಯನ್ನು ತಿರುಚಲು ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ಅಂಗಡಿ ಮಾಲೀಕನ ಮೇಲೆಯೇ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಸಂಚು ಬಯಲಾಗಿದೆ.

    ಘಟನೆ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತೌಸಿಫ್ ಹುಸೈನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದಲಿತನ ಮೇಲೆ ಹಲ್ಲೆ – ಚಪ್ಪಲಿ ನೆಕ್ಕಿಸಿ ವಿಕೃತಿ ಮೆರೆದ ದುರುಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೀದರ್‌ನಲ್ಲಿ ಭೀಕರ ರಸ್ತೆ ಅಫಘಾತ – ಐವರು ಕೂಲಿಕಾರ್ಮಿಕ ಮಹಿಳೆಯರು ಸಾವು

    ಬೀದರ್‌ನಲ್ಲಿ ಭೀಕರ ರಸ್ತೆ ಅಫಘಾತ – ಐವರು ಕೂಲಿಕಾರ್ಮಿಕ ಮಹಿಳೆಯರು ಸಾವು

    ಬೀದರ್: ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಟ್ರಕ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಐವರು ಮಹಿಳೆಯರು (Women) ದಾರುಣವಾಗಿ ಸಾವಿಗೀಡಾದ ಘಟನೆ ಬೀದರ್‌ನಲ್ಲಿ ನಡೆದಿದೆ.

    ಬೀದರ್ (Bidar) ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ಘಟನೆ ನಡೆದಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನುಳಿದ 6 ಮಂದಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ಪ್ರಭಾವತಿ (36), ಯಾದಮ್ಮ (40), ಗುಂಡಮ್ಮ (52), ಜಕ್ಕಮ್ಮ (32) ಹಾಗೂ ರುಕ್ಮಿಣಿ (60) ಮೃತಪಟ್ಟ ಮಹಿಳೆಯರು. ಇದರೊಂದಿಗೆ ಚಿಕಿತ್ಸೆ ಪಡೆಯುತ್ತಿರುವ 6 ಮಂದಿ ಮಹಿಳೆಯರು ಉಡುಬಾಳು ಗ್ರಾಮದವರೇ ಆಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್

    crime

    ಕೂಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ಆಟೋದಲ್ಲಿ (Auto Rickshaw) ವಾಪಸಾಗುತ್ತಿದ್ದಾಗ ಬೆಮಳಖೇಡಾ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ವೇತನ ಸರಿಯಾಗಿ ನೀಡದ ಮಾಲೀಕನ ಮರ್ಸಿಡಿಸ್ ಕಾರನ್ನೇ ಸುಟ್ಟ ಕಾರ್ಮಿಕ

    ವೇತನ ಸರಿಯಾಗಿ ನೀಡದ ಮಾಲೀಕನ ಮರ್ಸಿಡಿಸ್ ಕಾರನ್ನೇ ಸುಟ್ಟ ಕಾರ್ಮಿಕ

    ಲಕ್ನೋ: ಸಂಬಳವನ್ನು ಸರಿಯಾಗಿ ನೀಡದ ಮಾಲೀಕನಿಗೆ ಬುದ್ಧಿ ಕಲಿಸಲು ಮಾಲೀಕನ ಮರ್ಸಿಡಿಸ್(Mercedes) ಕಾರನ್ನೇ ಕಾರ್ಮಿಕನೊಬ್ಬ(Labourer) ಸುಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ನೋಯ್ಡಾದಿಂದ(Noida) ಈ ಘಟನೆ ನಡೆದಿದೆ. ರಣವೀರ್ ಐಷಾರಾಮಿ ಕಾರನ್ನು(Car) ಸುಟ್ಟ ವ್ಯಕ್ತಿ. ಈತ ಮಾಲೀಕನ ಮನೆಗೆ ಟೈಲ್ಸ್ ಅಳವಡಿಸಿದ್ದನು. ಆದರೆ ರಣವೀರ್‌ಗೆ ಮಾಲೀಕ ಪೂರ್ಣ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ರಣವೀರ್ ಮಾಲೀಕನ ಐಷಾರಾಮಿ ಕಾರನ್ನು ಸುಟ್ಟು ತನ್ನ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರಿಗೆ ಬೆಂಕಿ ಹಚ್ಚಿ ರಣವೀರ್ ಪರಾರಿಯಾಗಿದ್ದಾನೆ. ಇದೀಗ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ರಣವೀರ್ ಬೈಕ್‍ನಲ್ಲಿ ಬಂದು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಕಾರಿಗೆ ಹತ್ತುದ್ದಿದ್ದಂತೆ ರಣವೀರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ನೋಯ್ಡಾದ ಸದರ್‍ಪುರದಲ್ಲಿ ನಡೆದಿದ್ದು, ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

    ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಘಟನೆಗೆ ಸಂಬಂಧಿಸಿ ರಣವೀರ್‌ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮರ್ಸಿಡಿಸ್ ಮಾಲೀಕರು ನೀಡಿದ ದೂರಿನ ನಂತರ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಶಿಕ್ಷಕಿ ಮೇಲೆ ಕುಡುಕನಿಂದ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಕಬ್ಬಿಣದ ರಾಡ್ ತುಂಬಿದ ಟ್ರಕ್ ಪಲ್ಟಿ-8 ಕಾರ್ಮಿಕರ ದುರ್ಮರಣ

    ಕಬ್ಬಿಣದ ರಾಡ್ ತುಂಬಿದ ಟ್ರಕ್ ಪಲ್ಟಿ-8 ಕಾರ್ಮಿಕರ ದುರ್ಮರಣ

    ಪಾಟ್ನಾ: ಕಬ್ಬಿಣದ ರಾಡ್ ತುಂಬಿದ ಟ್ರಕ್ ಪಲ್ಟಿಯಾದ ಪರಿಣಾಮ 16 ಕಾರ್ಮಿಕರಲ್ಲಿ 8 ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ನಡೆದಿದೆ.

    ಕಾರ್ಮಿಕರೆಲ್ಲರರೂ ರಾಜಸ್ಥಾನದ ನಿವಾಸಿಗಳಾಗಿದ್ದರು. ಕಬ್ಬಿಣದ ರಾಡ್ ತುಂಬಿದ ಟ್ರಕ್‍ನಲ್ಲಿದ್ದ 16 ಕಾರ್ಮಿಕರು ತ್ರಿಪುರದಿಂದ ಜಮ್ಮುವಿಗೆ ತೆರಳುತ್ತಿದ್ದರು.  ಆದರೆ ಸಿಲಿಗುರಿ ದೆಹಲಿ 4 ಲೇನ್ ರಾಷ್ಟ್ರೀಯ ಹೆದ್ದಾರಿ 57ರ ಜಲಾಲ್‍ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿ ದೇವಸ್ಥಾನದಲ್ಲಿ ಟ್ರಕ್‌ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

    ಕಬ್ಬಿಣದ ರಾಡ್‍ಗಳನ್ನು ತುಂಬಿದ್ದ ಟ್ರಕ್ ಸಿಲಿಗುರಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುತ್ತಿತ್ತು. ಈ ಟ್ರಕ್‍ನಲ್ಲಿ ಕಾರ್ಮಿಕರು ಇದ್ದರು. ಕಾಳಿ ದೇವಸ್ಥಾನದ ಬಳಿ ಟ್ರಕ್ ಪಲ್ಟಿ ಆಗಿದ್ದು, ಟ್ರಕ್‍ನಲ್ಲಿದ್ದ ಕಬ್ಬಿಣದ ರಾಡ್‍ಗಳಡಿಯಲ್ಲಿ 8 ಕಾರ್ಮಿಕರು ಸಿಲುಕಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಲಿ- ರಥಕ್ಕೆ ಬಾಳೆಹಣ್ಣು ಎಸೆದ ಪ್ರೇಮಿ

    ಅಧಿಕಾರಿಗಳು ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಮೃತ ದೇಹವನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ. ಅಪಘಾತದ ನಂತರ, ಚಾಲಕ ಮತ್ತು ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬುಡಕಟ್ಟು ಸಮುದಾಯದ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಬಾಲಕ – ಕ್ರಮಕ್ಕೆ ಸಿಎಂ ಸೂಚನೆ

  • ನಿನ್ನೆ ಕೂಲಿ ಕೆಲಸ ಮಾಡುತ್ತಿದ್ದವ ಇಂದು ಮಾಡೆಲ್- ಅದೃಷ್ಟ ಅಂದ್ರೆ ಇದು

    ನಿನ್ನೆ ಕೂಲಿ ಕೆಲಸ ಮಾಡುತ್ತಿದ್ದವ ಇಂದು ಮಾಡೆಲ್- ಅದೃಷ್ಟ ಅಂದ್ರೆ ಇದು

    ತಿರುವನಂತಪುರಂ: ಜೀವನವು ರಾತ್ರೋರಾತ್ರಿ ಹೇಗೆ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಬದಲಾದ ಅದೃಷ್ಟದ ಕಥೆಯಲ್ಲಿ ಕೇರಳದ ಮಮ್ಮಿಕಾ ಕೂಡ ಒಬ್ಬರಾಗಿದ್ದಾರೆ. 60 ವರ್ಷದ ಮಮ್ಮಿಕಾ ಕೂಲಿ ಕಾರ್ಮಿಕರಾಗಿ ಕೆಲಸ ಮಡುತ್ತಿದ್ದರು. ಆದರೆ ದಿಢೀರಂತ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.

    ಮಾಸಿದ ಲುಂಗಿ ಮತ್ತು ಶರ್ಟ್ ತೊಡುತ್ತಿದ್ದರು. ಕೂಲಿ ಕೆಲಸವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇದೀಗ ಇವರನ್ನು ಗುರುತಿಸಿದ ಜಾಹೀರಾತು ಏಜೆನ್ಸಿಯೊಂದು ಮಾಡೆಲ್ ಆಗಿ ಮಾಡಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿವೆ.

    ಖ್ಯಾತ ಛಾಯಾಗ್ರಾಹಕ ಶರೀಕ್ ವಯಾಲಿಲ್ ಅದ್ಭುತ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಮಾಡೆಲ್ ಆಗುವ ಮೊದಲು ಅವರು ಹೇಗಿದ್ದರು ಎನ್ನುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಕೂಲಿ ಕಾರ್ಮಿಕರ ಡ್ರೆಸ್‍ನಲ್ಲಿದ್ದರೂ ಅದೇನೋ ಗ್ಲಾಮರ್ ಲುಕ್ ಅವರ ಮೊಗದಲ್ಲಿ ಕಾಣುತ್ತದೆ. ಹೀಗಾಗಿ ಮಮ್ಮಿಕಾ ಅವರನ್ನು ಶರೀಕ್ ಅವರು ಮೇಕಪ್ ಕಲಾವಿದಾರ ಮಜ್ನಾಸ್, ಆಶಿಕ್ ಪುವಾದ್ ಮತ್ತು ಶಬೀಬ್ ವಯಾಲಿಲ್ ಅವರಿಂದ ಮೇಕಪ್ ಮಾಡಿಸಿ ಬ್ರ್ಯಾಂಡ್ ಬಟ್ಟೆಯನ್ನು ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಸೂಟುಬೂಟು, ದುಬಾರಿ ಗ್ಲಾಸ್ ಧರಿಸಿ ಖಡಕ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.