Tag: labour organization

  • ಭಾಸ್ಕರ್ ರಾವ್ ಕಾಪಿ ಹೊಡೆದು ಐಪಿಎಸ್ ಪಾಸ್ ಮಾಡಿರಬೇಕು: ಆಯುಕ್ತರ ವಿರುದ್ಧ ಕಾರ್ಮಿಕರ ಕಿಡಿ

    ಭಾಸ್ಕರ್ ರಾವ್ ಕಾಪಿ ಹೊಡೆದು ಐಪಿಎಸ್ ಪಾಸ್ ಮಾಡಿರಬೇಕು: ಆಯುಕ್ತರ ವಿರುದ್ಧ ಕಾರ್ಮಿಕರ ಕಿಡಿ

    ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ಮಾಡಲು ಕಾರ್ಮಿಕ ಸಂಘಟನೆಯವರು ಕರೆಕೊಟ್ಟಿದ್ದರು. ಆದರೆ ರ‍್ಯಾಲಿಗೆ ಅವಕಾಶ ಕೊಡದ ನಗರ ಪೊಲೀಸ್ ಆಯುಕ್ತರ ವಿರುದ್ಧ ಕಾರ್ಮಿಕ ಸಂಘಟನೆಯ ಸದಸ್ಯರು ಸಿಡಿದೆದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಪ್ರತಿಭಟನೆ ಕಿಚ್ಚು ಜಾಸ್ತಿ ಇಲ್ಲದ ಕಾರಣ ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಈ ಬಾರಿ ರ‍್ಯಾಲಿಗೆ ಅವಕಾಶ ಕೊಡದ ನಗರ ಪೊಲೀಸ್ ಆಯುಕ್ತರ ವಿರುದ್ಧ ಕಾರ್ಮಿಕರು ಸಿಡಿದೆದಿದ್ದಾರೆ. ಕೇಂದ್ರ ಸರ್ಕಾರದ ಬದಲಾಗಿ ಕಮೀಷನರ್ ಮೇಲೆ ವಾಗ್ದಾಳಿ ನಡೆಸಿದರು.

    ಕಾರ್ಮಿಕ ಸಂಘಟನೆ ಮುಖಂಡ ಮೀನಾಕ್ಷಿ ಸುಂದರಂ ಮಾತನಾಡಿ, ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಕಾಪಿ ಹೊಡೆದು ಐಪಿಎಸ್ ಪಾಸ್ ಮಾಡಿರಬೇಕು. ಅಧಿಕಾರದಲ್ಲಿರುವವರ ಬೂಟ್ ನೆಕ್ಕಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಯಡಿಯೂರಪ್ಪ ಚೇಲಾ ಆಗಿರುವ ಭಾಸ್ಕರ್ ರಾವ್. ನಾವ್ ಮನಸ್ಸು ಮಾಡಿದರೆ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಕಿಡಿಕಾರಿದರು.

  • ನಾಳೆ ಕೊಡಗಿನಲ್ಲಿ ಬಂದ್ ಇಲ್ಲ, ಪ್ರತಿಭಟನೆಗೆ ಮಾತ್ರ ಸೀಮಿತ

    ನಾಳೆ ಕೊಡಗಿನಲ್ಲಿ ಬಂದ್ ಇಲ್ಲ, ಪ್ರತಿಭಟನೆಗೆ ಮಾತ್ರ ಸೀಮಿತ

    ಮಡಿಕೇರಿ: ದೇಶಾದ್ಯಂತ ನಾಳೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರೊ ಭಾರತ್ ಬಂದ್ ಗೆ ಕೊಡಗು ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ ಸಿಐಟಿಯು, ಎಐಟಿಯುಸಿ ಕಾರ್ಮಿಕ ಸಂಘಟನೆಯಿಂದ ನಾಳೆ ಬೃಹತ್ ಪ್ರತಿಭಟನೆ ಮಡಿಕೇರಿ ನಗರದಲ್ಲಿ ನಡೆಯಲಿದೆ.

    ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಅಂಗನವಾಡಿ, ಬಿಸಿಯೂಟ ಸಿಬ್ಬಂದಿ, ಬಿಎಸ್‍ಎನ್‍ಎಲ್ ಗುತ್ತಿಗೆ ನೌಕರರು, ಎಲ್‍ಐಸಿ ಸಿಬ್ಬಂದಿ, ಕಟ್ಟಡ ಕಾರ್ಮಿಕರು, ಕಾಫಿ ತೋಟದ ಕಾರ್ಮಿಕರು, ಅಮಾಲಿ ನೌಕರರ ಸಂಘದಿಂದ ಈಗಾಗಲೇ ಬಂದ್‍ಗೆ ಬೆಂಬಲ ಘೋಷಣೆಯಾಗಿದೆ. ಆದರೆ ನಾಳೆ ಎಂದಿನಂತೆ ಶಾಲಾ ಕಾಲೇಜುಗಳು ಇರಲಿದ್ದು, ಪೆಟ್ರೋಲ್ ಬಂಕ್, ಹಾಲಿನ ಬೂತ್, ಮೆಡಿಕಲ್ ಸ್ಟೋರ್ ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸಲಿವೆ.

    ಖಾಸಗಿ ಬಸ್ ಮಾಲೀಕರ ಸಂಘದವರು ಎಂದಿನಂತೆ ಬಸ್ಸು ಸಂಚಾರ ನಡೆಸಲಿದ್ದಾರೆ. ಆದರೆ ಅಟೋ ಚಾಲಕರು ಪರಿಸ್ಥಿತಿ ನೋಡಿಕೊಂಡು ಆಟೋ ಚಾಲನೆ ಮಾಡುತ್ತೇವೆ ಎಂದಿದ್ದಾರೆ. ಇತ್ತ ವಿರಾಜಪೇಟೆ ತಾಲೂಕಿನಲ್ಲಿ ಕಾರ್ಮಿಕ ವಲಯಗಳು ಜಾಸ್ತಿ ಇರುವ ಕಾರಣ ಗ್ರಾಮೀಣ ಭಾಗಗಳಿಂದ ಸಿದ್ದಾಪುರ ಕರಡಿಗೋಡು, ನೆಲ್ಲಿಹುದಿಕೇರಿ ಕುಟ್ಟ ಭಾಗದಲ್ಲಿ ಅಲ್ಲಿಯ ಪರಿಸ್ಥಿತಿಯನ್ನು ಅರಿತು ಆಟೋ ಚಾಲಕರು ನಿಲ್ಲಸಬಹುದು ಎಂದು ಆಟೋ ಚಾಲಕ ಜಿಲ್ಲಾಧ್ಯಕ್ಷ ಮೇದಪ್ಪ ಅವರು ತಿಳಿಸಿದ್ದಾರೆ.