Tag: Labour

  • Nelamangala | ಕೆಲಸ ಮಾಡುವ ವೇಳೆ 2ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

    Nelamangala | ಕೆಲಸ ಮಾಡುವ ವೇಳೆ 2ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

    ನೆಲಮಂಗಲ: ನಿರ್ಮಾಣ ಹಂತದಲ್ಲಿದ್ದ ಮನೆಯ ಸೆಂಟ್ರಿಂಗ್ ಕಳಚುವ ವೇಳೆ ಆಯತಪ್ಪಿ ಎರಡನೇ ಮಹಡಿಯಿಂದ ಬಿದ್ದು ತೀವ್ರ ರಕ್ತಸ್ರಾವದಿಂದ ಕಾರ್ಮಿಕ (Labour) ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು (Bengaluru) ಹೊರವಲಯ ನೆಲಮಂಗಲ (Nelamangala) ಬಳಿಯ ಗೆಜ್ಜಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಯಾದಗಿರಿ ಜಿಲ್ಲೆಯ ಗೋಪಾಲಪುರ ಗ್ರಾಮದ ಬೀರಪ್ಪ (34) ಮೃತ ಕಾರ್ಮಿಕ. ಈತ ಕಳೆದ 8 ವರ್ಷದಿಂದ ಈ ಭಾಗದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಬೀರಪ್ಪನಿಗೆ ಹೆಂಡತಿ, ಇಬ್ಬರು ಮಕ್ಕಳು ಇದ್ದು, ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು. ಸದ್ಯ ನೆಲಮಂಗಲ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ತುಮಕೂರಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಕೇಸ್;‌ ಮಹಿಳೆಯ ಪತಿ, ಅತ್ತೆ ಬಂಧನ

    ಇನ್ನೂ ಮೃತ ಬೀರಪ್ಪ ನೂರಾರು ಜನ ಕಾರ್ಮಿಕರಿಗೆ ಆಸರೆಯಾಗಿದ್ದ. ಎಲ್ಲರಿಗೂ ಕೆಲಸ ಕೊಡಿಸಿ ಆಸರೆಯಾಗಿದ್ದ ಬೀರಪ್ಪ ಮೃತಪಟ್ಟ ವಿಚಾರ ತಿಳಿದು ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಬಡ್ಡಿ ಪಂದ್ಯದ ವೇಳೆ ಹಠಾತ್ ಬಿರುಗಾಳಿ – ವಿದ್ಯುತ್ ತಂತಿ ತಗುಲಿ ಮೂವರು ಸಾವು

  • ಕರೆಂಟ್​ ಶಾಕ್​ನಿಂದ ಜೀವ ಕಳೆದುಕೊಂಡಿದ್ದ ಕಾರ್ಮಿಕ – ರಹಸ್ಯವಾಗಿ ಶವ ಹೂತಿಟ್ಟ ಲೈನ್​ಮ್ಯಾನ್ ಅರೆಸ್ಟ್‌!

    ಕರೆಂಟ್​ ಶಾಕ್​ನಿಂದ ಜೀವ ಕಳೆದುಕೊಂಡಿದ್ದ ಕಾರ್ಮಿಕ – ರಹಸ್ಯವಾಗಿ ಶವ ಹೂತಿಟ್ಟ ಲೈನ್​ಮ್ಯಾನ್ ಅರೆಸ್ಟ್‌!

    – ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಶಾಂಕಿಂಗ್ ಪ್ರಕರಣ

    ಚಿಕ್ಕಬಳ್ಳಾಪುರ: ಕರೆಂಟ್​ ಶಾಕ್​ನಿಂದ (Electric Shock) ಜೀವ ಕಳೆದುಕೊಂಡಿದ್ದ ಕಾರ್ಮಿಕನ ಮೃತದೇಹವನ್ನ ರಹಸ್ಯವಾಗಿ ಹೂತಿಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಲೈನ್​ ಮ್ಯಾನ್ (Lineman) ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ

    ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ನಿವಾಸಿ ರವಿ (33) ಮೃತ ಕಾರ್ಮಿಕ. ಇನ್ನೂ ಚಂದ್ರಕುಮಾರ್ ಎಂಬ ಲೈನ್ ಮ್ಯಾನ್ ಕೃತ್ಯ ಮಾಡಿದವ. ಇದನ್ನೂ ಓದಿ: ಹಾಸನ | ಕಂಠಪೂರ್ತಿ ಕುಡಿದು ಪತ್ನಿಗೆ ಚಾಕು ಇರಿದು ಕೊಂದ ಪತಿ

    ವಿದ್ಯುತ್ ಕೆಲಸಕ್ಕೆ ಅಂತ ಕಾರ್ಮಿಕನನ್ನ (Labour) ಕರೆದೊಯ್ದ ಲೈನ್‌ಮ್ಯಾನ್ ಆತ ಆಕಸ್ಮಿಕವಾಗಿ ವಿದ್ಯುತ್ ಹರಿದು ಕಂಬದಲ್ಲೇ ಮೃತಪಟ್ಟಿ‌ದ್ದಾನೆ. ನಂತರ ಆತನ ಮೃತದೇಹವನ್ನ ಅಲ್ಲೇ ಸಮೀಪದ ಕೆರೆಯಂಗಳದ ಕಾಲುವೆಯಲ್ಲಿ ರಹಸ್ಯವಾಗಿ ಹೂತು ಹಾಕಿ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸಿದ್ದ. ಇದನ್ನೂ ಓದಿ: Bengaluru | ಮನೆಯ ಎರಡನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ಸೋಮವಾರ ಮೇಡಿಮಾಕಲಹಳ್ಳಿ ಕ್ರಾಸ್ ಬಳಿ ಇರುವ ಕೋಳಿ ಫಾರಂವೊಂದರ ಸಮೀಪ ವಿದ್ಯುತ್ ದುರಸ್ಥಿಗೆ ಕೆಲಸಕ್ಕೆ ಕಾರ್ಮಿಕ ರವಿಯನ್ನ ಕರೆದೊಯ್ದಿದ್ದಾನೆ. ಆದ್ರೆ ಆತ ಕಂಬದಲ್ಲಿ ಇರುವಾಗಲೇ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ. ಘಟನೆಯಿಂದ ಹೆದರಿದ ಚಂದ್ರಕುಮಾರ್ ಯಾರಿಗೂ ತಿಳಿಯದಂತೆ ರವಿ ಮೃತದೇಹವನ್ನ ಅಲ್ಲೇ ಬಂದಾರ್ಲಹಳ್ಳಿ ಕೆರೆಯಂಗಳದಲ್ಲಿ ಹೂತು ಹಾಕಿದ್ದಾನೆ‌.

    ಇನ್ನೂ ರವಿ ಮನೆಯವರು ರವಿ ಕಾಣೆಯಾದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಲೈನ್ ಮ್ಯಾನ್ ಚಂದ್ರಕುಮಾರ್ ನನ್ನ ಬಂಧಿಸಿದ್ದಾರೆ. ಇನ್ನೂ ಮೃತದೇಹ ಹೂತ ಜಾಗ ತೋರಿಸಿದ್ದು ಮೃತದೇಹ ಹೊರತೆಗೆಯಲು ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಕಾರು, ಬೈಕ್‌ ಮುಖಾಮುಖಿ ಡಿಕ್ಕಿ – ಮದುವೆ ನಿಶ್ಚಯವಾಗಿದ್ದ ಜೋಡಿ ದುರ್ಮರಣ

  • ಬೆಂಗಳೂರಲ್ಲಿ ಮಳೆ ಅವಾಂತರ – ಮಣ್ಣು ಕುಸಿದು ಓರ್ವ ಕಾರ್ಮಿಕ ಬಲಿ

    ಬೆಂಗಳೂರಲ್ಲಿ ಮಳೆ ಅವಾಂತರ – ಮಣ್ಣು ಕುಸಿದು ಓರ್ವ ಕಾರ್ಮಿಕ ಬಲಿ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಂದು (Bengaluru) ಏಕಾಏಕಿ ಮಳೆ ಅಬ್ಬರಿಸಿದೆ. ಸಂಜೆ ಸುರಿದ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಇದೇ ವೇಳೆ ಮಣ್ಣು ಕುಸಿದು ಓರ್ವ ಕಟ್ಟಡ ಕಾರ್ಮಿಕ ಬಲಿಯಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಕಟ್ಟಡ ನಿರ್ಮಾಣಕ್ಕಾಗಿ ಅಗೆಯುವಾಗ ಮಣ್ಣು ಕುಸಿದು ಎಂಬಾಸಿ ಗ್ರೂಪ್‌ಗೆ ಸೇರಿದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೆಂಗಳೂರು | ಸ್ವಚ್ಛತಾ ಕಾರ್ಮಿಕರಿಗೆ ʻಜಲಮಂಡಳಿ ಅನ್ನಪೂರ್ಣ ಯೋಜನೆʼ ಸ್ಮಾರ್ಟ್ ಕಾರ್ಡ್ ವಿತರಣೆ

    ಮಳೆ ನೀರು ಜಾಸ್ತಿ ಹರಿದ ಪರಿಣಾಮ ಮಣ್ಣು ಕುಸಿದಿದೆ, ಈ ವೇಳೆ ಮಣ್ಣಿನಡಿ ಸಿಲುಕಿ ಆಂಧ್ರ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇನ್ನೂ ಮತ್ತೋರ್ವನ ಸ್ಥಿತಿಯೂ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಇದನ್ನೂ ಓದಿ: ರಾಷ್ಟ್ರಪತಿಗೆ ಕನ್ನಡ ಬರುತ್ತಾ ಅಂತ ಕೇಳಿದ ಸಿಎಂ – ಸ್ವಲ್ಪ ಸ್ವಲ್ಪ ಬರುತ್ತೆ; ಮುರ್ಮು ಉತ್ತರ

    ಸಂಜೆ ಮಳೆಗೆ ಭಾರಿ ಅವಾಂತರ
    ಕಳೆದ 2-3 ದಿನಗಳಿಂದ ಆಗೊಮ್ಮೆ ಈಗೊಮ್ಮೆ ಮಳೆ ಬಂದು ಹೋಗುತ್ತಿತ್ತು. ಆದ್ರೆ ಸೆಪ್ಟೆಂಬರ್ ಮೊದಲ ದಿನವೇ ಜೋರು ಮಳೆ ಸುರಿದಿದೆ. ಮಳೆಗಾಲದ ದಿನಗಳಿಗೆ ಹೋಲಿಸಿದ್ರೆ ಸೋಮವಾರ ಸಂಜೆ ಸುರಿದ ಮಳೆ ಬಿರುಸಾಗಿತ್ತು. ರಸ್ತೆಯಲ್ಲಿ ಜನ, ವಾಹನ ಸಂಚಾರ ಸಾಧ್ಯವಾಗದಷ್ಟು ಜೋರಿತ್ತು. ಮಿಂಚು ಗುಡುಗು ಕೂಡ ಇದ್ದು ಜನ ಭಯ ಭೀತರಾದರು. ವಾಹನ ಸವಾರರು ಮಳೆಯಲ್ಲಿ ಸಂಚಾರ ಮಾಡುವ ಧೈರ್ಯ ಮಾಡದೇ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಮರ, ಕಟ್ಟಡಗಳ ಬಳಿ ಆಶ್ರಯ ಪಡೆದಿದ್ದರು. ಇನ್ನೂ ಅಲ್ಲಲ್ಲಿ ಟ್ರಾಫಿಕ್ ದಟ್ಟಣೆ ಕೂಡ ಉಂಟಾಗಿತ್ತು.

    ಎಲ್ಲೆಲ್ಲಿ ಮಳೆಯ ಆರ್ಭಟ ಜೋರು?
    ಟೌನ್ ಹಾಲ್, ಕಾರ್ಪೋರೇಷನ್, ಜಯನಗರ, ಜೆಪಿ ನಗರ ಸುತ್ತಮುತ್ತ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ ಬಾಗ್ ಸುತ್ತಮುತ್ತ, ಮಲ್ಲೇಶ್ವರಂ ರಸ್ತೆ, ಮಂತ್ರಿ ಮಾಲ್ ಯಲ್ಲಿ ಜೋರು ಮಳೆ ಉಂಟಾಗಿತ್ತು. ಅಲ್ಲದೇ ಬಿಬಿಎಂಪಿ ವಲಯ ಕಚೇರಿ ಮುಂದಿನ ರಸ್ತೆಯೇ ತುಂಬಿ ಹರಿಯುತ್ತಿದ್ದ ದೃಶ್ಯವೂ ಕಂಡುಬಂದಿತು. ಅಲ್ಲದೇ ಕೆ.ಆರ್ ಮಾರ್ಕೆಟ್, ಶಾಂತಿನಗರದಲ್ಲೂ ಜೋರು ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿದ್ದವು.

    ಇನ್ನೂ ಏಕಾಏಕಿ ಸುರಿದ ಮಳೆಯಿಂದಾಗಿ ಕೆಲ ಸಮಯದ ರಸ್ತೆಯಲ್ಲಿ 2 ರಿಂದ 3 ಅಡಿಯಷ್ಟು ನೀರು ಆವೃತವಾಗಿತ್ತು. ಅಲ್ಲಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಇದು ವಾಹನ ಸವಾರರನ್ನೂ ಹೈರಾಣಾಗುವಂತೆ ಮಾಡಿತ್ತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿತ್ತು. ಇದನ್ನೂ ಓದಿ: Bengaluru | ಗೋವಿಂದರಾಜನಗರದಲ್ಲಿ ಬ್ರಾಹ್ಮಣ ಭವನ ಉದ್ಘಾಟನೆ

  • ಬೆಂಗಳೂರು | ಹಣ ಕೊಡಲು ನಿರಾಕರಿಸಿದ ಪತ್ನಿ – ಪತಿ ನೇಣಿಗೆ ಶರಣು

    ಬೆಂಗಳೂರು | ಹಣ ಕೊಡಲು ನಿರಾಕರಿಸಿದ ಪತ್ನಿ – ಪತಿ ನೇಣಿಗೆ ಶರಣು

    ಬೆಂಗಳೂರು: ಪತ್ನಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೂಲಿ ಕಾರ್ಮಿಕನಾಗಿದ್ದ ಪತಿ ಖಾಸಗಿ ಶಾಲಾ ಕಟ್ಟಡವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿಯ (Amrutahalli) ಮರಿಯಣ್ಣನ ಪಾಳ್ಯದಲ್ಲಿ ನಡೆದಿದೆ.

    ತಮಿಳುನಾಡು (Tamilnadu) ಮೂಲದ ರಾಜೇಂದ್ರ (48) ಮೃತ ವ್ಯಕ್ತಿ. ಖಾಸಗಿ ಶಾಲೆಯ ಕಟ್ಟಡವೊಂದರಲ್ಲಿ ಕಾಮಗಾರಿ ಕೆಲಸ ಮಾಡುತ್ತಿದ್ದರು. ರಾತ್ರಿ ಶಾಲಾ ಕಟ್ಟಡದಲ್ಲಿಯೇ ಮಲಗಿಕೊಳ್ಳುತ್ತಿದ್ದರು. ಬುಧವಾರ ಬೆಳಿಗ್ಗೆ ಪತ್ನಿಗೆ ಕರೆ ಮಾಡಿ 20 ಸಾವಿರ ರೂ. ಕೊಡುವಂತೆ ಕೇಳಿದ್ದರು. ಈ ವೇಳೆ ಪತ್ನಿ ನಿರಾಕರಿಸಿದ್ದರು. ಇದರಿಂದ ಬೇಸತ್ತ ಪತಿ ರಾತ್ರಿ ಮದ್ಯಪಾನ ಮಾಡಿ, ಶಾಲಾ ಆವರಣದಲ್ಲಿರುವ ಕಟ್ಟಡದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಇರಾನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆ – ದೆಹಲಿಗೆ ಬಂದ ನಂತ್ರ ಕಳಪೆ ಬಸ್ಸು ನೀಡಿದ್ದಕ್ಕೆ ಆಕ್ರೋಶ

    ಪ್ರತಿದಿನದಂತೆ ಇಂದು ಇಸ್ಕಾನ್‌ನಿಂದ ಶಾಲೆಗೆ ಊಟ ಬಂದಿತ್ತು. ಅದನ್ನು ಇಡಲು ವಿದ್ಯಾರ್ಥಿಗಳು ಶಾಲೆ ಪಕ್ಕದಲ್ಲಿರುವ ಕಟ್ಟಡಕ್ಕೆ ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಹೆದರಿಕೊಂಡು ಕಿರುಚಾಡುತ್ತಾ ಓಡಿ ಬಂದಿದ್ದಾರೆ. ಗಾಬರಿಗೊಂಡ ಶಿಕ್ಷಕರು ಒಳಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆಯಾಗಿದೆ. ಇದರಿಂದ ಶಾಲೆಗೆ ರಜೆ ನೀಡಿ, ವಿದ್ಯಾರ್ಥಿಗಳನ್ನು ವಾಪಸ್ ಮನೆಗೆ ಕಳುಹಿಸಿದ್ದಾರೆ.

    ಸದ್ಯ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು (Amruthalli Police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

  • ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ – ಕಾರ್ಮಿಕ ಸಂಘಟನೆಗಳ ವಿರೋಧ

    ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ – ಕಾರ್ಮಿಕ ಸಂಘಟನೆಗಳ ವಿರೋಧ

    ಬೆಂಗಳೂರು: ಕರ್ನಾಟಕದಲ್ಲಿ (Karnataka) ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ದಿನಕ್ಕೆ 9ರಿಂದ 10 ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಕಾರ್ಮಿಕ ಕಾನೂನು ತಿದ್ದುಪಡಿ ಕುರಿತು ಚರ್ಚಾ ಹಂತದಲ್ಲಿ ಇರುವ ರಾಜ್ಯ ಸರ್ಕಾರ ಅಭಿಪ್ರಾಯ ಸಂಗ್ರಹಿಸುತ್ತಿದೆ.

    ವಿಕಾಸಸೌಧದಲ್ಲಿ ಇಂದು ಕಾರ್ಮಿಕ ಇಲಾಖೆಯಿಂದ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಯಿತು. ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸೇರಿದಂತೆ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಅರೆಸ್ಟ್

    ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮ ಇದೆ. ಆದರೆ ಇದೀಗ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನ ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ.

    ರಾಜ್ಯ ಸರ್ಕಾರದ ಈ ಚಿಂತನೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಾರ್ಮಿಕ ವಿರೋಧಿ ಕಾನೂನು ಜಾರಿ ಆಗಬಾರದು ಎಂದು ಆಗ್ರಹಿಸಿದ್ದಾರೆ. ಆದರೆ ಕಾರ್ಖಾನೆ, ಕಂಪನಿಗಳು, ಹೋಟೆಲ್ ಮಾಲೀಕರು ಕಾನೂನು ತಿದ್ದುಪಡಿಯನ್ನು ಬೆಂಬಲಿಸಿವೆ. ವಾರದಲ್ಲಿ ಎರಡು ದಿನ ರಜೆ ಸಿಗಲಿದೆ, ಹೆಚ್ಚುವರಿ ದುಡಿಮೆ ಹೇಗೆ ಆಗುತ್ತೆ. ಕಾರ್ಮಿಕ ಸಂಘಟನೆಗಳಿಗೆ ಇದು ಅರ್ಥ ಆಗುತ್ತಿಲ್ಲ ಎಂದು ಹೋಟೆಲ್ ಮಾಲೀಕ ಪಿ.ಸಿ.ರಾವ್ ಹೇಳಿದ್ದಾರೆ.

    ಕಾರ್ಮಿಕ ಕಾನೂನಿನ ತಿದ್ದುಪಡಿ ಪ್ರಸ್ತಾಪ ಏನು? ಯಾವ ಹಂತದಲ್ಲಿದೆ?
    > ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ಕ್ಕೆ ತಿದ್ದುಪಡಿ ಪ್ರಸ್ತಾಪ
    > ಸದ್ಯ ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆಯನ್ನು ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು
    > ಆದರೆ ಇದೀಗ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ, ಒಟಿಯನ್ನ ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ
    > ಮೂರು ತಿಂಗಳಲ್ಲಿ ಹೆಚ್ಚುವರಿ ಕೆಲಸದ ಗರಿಷ್ಠ ಮಿತಿಯು 50ರಿಂದ 144 ಗಂಟೆಗೆ ಹೆಚ್ಚಳಕ್ಕೆ ಪ್ಲ್ಯಾನ್
    > ಶನಿವಾರ, ಭಾನುವಾರ ರಜೆ ನೀಡುವ ಬಗ್ಗೆಯೂ ಪ್ರಸ್ತಾಪ
    > ಸದ್ಯ ಚರ್ಚಾ ಹಂತದಲ್ಲಿ ಇರುವ ತಿದ್ದುಪಡಿ ಪ್ರಸ್ತಾಪ, ಕಾನೂನು ರೂಪ ಸಿಗಬೇಕಾದರೆ ಸಂಪುಟ ಸಭೆಯಲ್ಲಿ ಚರ್ಚಿಸಬೇಕು.ಇದನ್ನೂ ಓದಿ: ಅಡ್ವಾನ್ಸ್‌ ಹಣ ವಾಪಸ್‌ ಕೊಡದ ಆರೋಪ – ರಚಿತಾ ರಾಮ್‌ ವಿರುದ್ಧ ಮತ್ತೊಂದು ದೂರು

  • ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮಣ್ಣು ಕುಸಿತ – ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮಣ್ಣು ಕುಸಿತ – ಓರ್ವ ಕಾರ್ಮಿಕನ ಸ್ಥಿತಿ ಗಂಭೀರ

    ರಾಯಚೂರು: ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ (Hatti Gold Mine) ಕಂಪನಿಯಲ್ಲಿ ಮಣ್ಣು ಕುಸಿತಗೊಂಡ ಪರಿಣಾಮ ಓರ್ವ ಕಾರ್ಮಿಕ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.

    ಗಾಯಗೊಂಡಿರುವ ಕಾರ್ಮಿಕನನ್ನು ಲಕ್ಷ್ಮಣ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮಹಿಳೆಯರಿಗೆ ತಿಂಗಳಿಗೆ 1,000 ರೂ. ಗ್ಯಾರಂಟಿ ಕಟ್ – ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಗಣಿಯ ಮಲ್ಲಪ್ಪ ಶಾಫ್ಟ್‌ನಲ್ಲಿ 2,600 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ತಲೆ ಹಾಗೂ ಕೈ-ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿನ್ನದ ಗಣಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ (Belagavi) ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಸ್ಧಳಕ್ಕೆ ಗಣಿ ಕಂಪನಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಹಟ್ಟಿ ಪೊಲೀಸ್ ಠಾಣಾ (Hatti Police Station)  ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಸಿನಿಮಾ ರೂಪದಲ್ಲಿ ಬರುತ್ತಿದೆ ಸಿಎಂ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ

  • ನೀರು ತರಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಕೂಲಿ ಕಾರ್ಮಿಕ ಸಾವು

    ನೀರು ತರಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಕೂಲಿ ಕಾರ್ಮಿಕ ಸಾವು

    ಬೀದರ್: ಕುಡಿಯುವ ನೀರು ತರಲು ಬಾವಿಗೆ ಹೋಗಿದ್ದ ಕೂಲಿ ಕಾರ್ಮಿಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಹುಲಸೂರು ತಾಲೂಕಿನ ಮಾಚಾನಾಳ ಗ್ರಾಮದಲ್ಲಿ ನಡೆದಿದೆ.

    ಕಾರ್ಮಿಕ ಸತೀಶ್ ಲಿಂಬಾಜಿ ಬಾಗುವಾಲೆ (40) ಮೃತ ದುರ್ದೈವಿ. ಗುರುವಾರ ಸಂಜೆ ಹೊಲದಲ್ಲಿ ಕೆಲಸ ಮಾಡುವಾಗ ಪಕ್ಕದ ಬಾವಿಯಲ್ಲಿ ಕುಡಿಯಲು ನೀರು ತರಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ: ಟಿಕೆಟ್ ಕಳೆದುಕೊಂಡು ವರ್ಷವಾಯ್ತು, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ: ಪ್ರತಾಪ್‌ ಸಿಂಹ

    ಮಾಚಾನಾಳ ಗ್ರಾಮದ ಹೊಲದಲ್ಲಿ ಕೃಷಿ ಕೆಲಸ ಮಾಡಲು ಕಾರ್ಮಿಕ ತೆರಳಿದ್ದು, ನೀರು ತರಲು ಬಾವಿಗೆ ಹೋದಾಗ ಕಾಲು ಜಾರಿದೆ. ಈಜು ಬಾರದ ಕಾರಣ ಬಾವಿಯಿಂದ ಹೊರಬರಲಾಗದೆ ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದು ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಗೆ ಇಳಿದು ಹಗ್ಗದ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: IPL 2025: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಅಕ್ಷರ್‌ ಪಟೇಲ್‌ ನಾಯಕ

  • ಅಮಾನವೀಯವಾಗಿ ಮೃತ ಕಾರ್ಮಿಕನ ಶವ ಎಳೆದೊಯ್ದ 6 ಮಂದಿ ವಿರುದ್ಧ ಎಫ್ಐಆರ್

    ಅಮಾನವೀಯವಾಗಿ ಮೃತ ಕಾರ್ಮಿಕನ ಶವ ಎಳೆದೊಯ್ದ 6 ಮಂದಿ ವಿರುದ್ಧ ಎಫ್ಐಆರ್

    ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಸಮೀಪದ ಸಿಮೆಂಟ್ ಕಾರ್ಖಾನೆಯಲ್ಲಿ ರಕ್ತದೊತ್ತಡದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗುತ್ತಿರುವ ಬಿಹಾರ ಮೂಲದ ಕಾರ್ಮಿಕನ (Bihar Labour)ಮೃತದೇಹವನ್ನು ಅಮಾನವೀಯವಾಗಿ ಎಳೆದೊಯ್ದ ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ 6 ಸಿಬ್ಬಂದಿ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ (Sedam Police Station) ಪ್ರಕರಣ ದಾಖಲಾಗಿದೆ.

    ಬಿಹಾರ ಮೂಲದ ಚಂದನ್‌ಸಿಂಗ್ ಕಳೆದ ಎರಡು ದಿನಗಳ ಹಿಂದೆ ಅಧಿಕ ರಕ್ತದೊತ್ತಡಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಬಳಿಕ ಶವ ಸಾಗಣೆ ಸಂದರ್ಭದಲ್ಲಿ ಕೆಲವು ಸಿಬ್ಬಂದಿ ಆತನ ಮೃತದೇಹವನ್ನ ದರದರನೆ ಎಳೆದೊಯ್ದಿದ್ದರು. ಈ ಸಂಬಂಧ ಉತ್ತರ ಭಾರತದ ಕಾರ್ಮಿಕರಾದ ಹೈದರ್ ಅಲಿ, ಅಜಯ್, ರವಿಶಂಕರ್, ಹರಿಂದರ್, ರಮೇಶ್ಚಂದ್ರ ಹಾಗೂ ಅಖಿಲೇಶ್ ವಿರುದ್ಧ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಮಧ್ಯೆ, ಕಾರ್ಮಿಕನ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಸಹ ಕಾರ್ಮಿಕರು ಕಾರ್ಖಾನೆ ಆವರಣದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುವ ನೆಪದಲ್ಲಿ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡಿದ್ದಾರೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ.

    ಮತ್ತೊಂದೆಡೆ, ಚಂದನ್‌ಸಿಂಗ್‌ನನ್ನ ಗುತ್ತಿಗೆ ಆಧಾರದ ಮೇಲೆ ಕಾರ್ಖಾನೆಗೆ ಕೆಲಸಕ್ಕೆ ಕಳುಹಿಸಿದ್ದ ಗುತ್ತಿಗೆ ಸಂಸ್ಥೆ ಆತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ಈ ಎಲ್ಲ ವಿದ್ಯಮಾನಗಳ ಮಧ್ಯೆ ಕಾರ್ಖಾನೆ ಹಾಗೂ ಕಾರ್ಮಿಕರ ಮಧ್ಯೆ ಜಟಾಪಟಿ ಏರ್ಪಟ್ಟಿದ್ದು, ಕಾರ್ಮಿಕರು ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಗಲಾಟೆ – ಜ್ಯೂಸ್ ಫ್ಯಾಕ್ಟರಿ ಕಾರ್ಮಿಕ ಸಾವು

    ಕ್ಷುಲ್ಲಕ ಕಾರಣಕ್ಕೆ ಗಲಾಟೆ – ಜ್ಯೂಸ್ ಫ್ಯಾಕ್ಟರಿ ಕಾರ್ಮಿಕ ಸಾವು

    ಕೋಲಾರ: ಕುಲ್ಷಕ ಕಾರಣಕ್ಕೆ ಗಲಾಟೆ ನಡೆದ ಪರಿಣಾಮ ಜ್ಯೂಸ್ ಫ್ಯಾಕ್ಟರಿ (Juice Factory) ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ (Srinivaspura) ತಾಲೂಕಿನ ಯಚ್ಚನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಕಾರ್ಮಿಕರ ನಡುವೆ ಗಲಾಟೆಯಲ್ಲಿ ಉತ್ತರ ಪ್ರದೇಶ ಮೂಲದ ಉಯ್ಯಾದ್ ತಲಾ (24) ಎಂಬ ಕಾರ್ಮಿಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ‘ಏಕ್ ಹೈ ತೋ ಸೇಫ್ ಹೈ’ ದೇಶದ ಮಹಾ ಮಂತ್ರವಾಗಿದೆ: ಮೋದಿ ಬಣ್ಣನೆ

    ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಕೇಶ್ (20) ಹಾಗೂ ರವಿಯನ್ನು (25) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ಪಾಲು – ಫಲಕೊಡದ ಗೌಡರ ತಂತ್ರ, ಕೈಹಿಡಿದ ಮುಸ್ಲಿಂ ಮತ!

  • ಆಯತಪ್ಪಿ ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

    ಆಯತಪ್ಪಿ ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

    ಬೆಂಗಳೂರು: ಆಯತಪ್ಪಿ ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ಯಲಹಂಕದ (Yelahanka) ಪಿರಮಿಡ್ ಬನ್ಸಿಕಾ-ಮಹಿಕಾ ಅಪಾರ್ಟ್ಮೆಂಟ್‌ನಲ್ಲಿ (Pyramid Banksia & Mahika) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಇದನ್ನೂ ಓದಿ: ನಿಮ್ಮದೇ ಲೋಕಾಯುಕ್ತ, ನಿಮ್ಮ ಅಧಿಕಾರಿಗಳು ನಿಮ್ಮನ್ನು ಹೇಗೆ ಅಪರಾಧಿ ಮಾಡೋಕೆ ಆಗುತ್ತೆ – ಶೋಭಾ

    ಮೃತ ಕಾರ್ಮಿಕನನ್ನು ಬಿಹಾರ (Bihar) ಮೂಲದ ಅಬಿದುಲ್ಲಾ ಎಂದು ಗುರುತಿಸಲಾಗಿದೆ.

    ನಿನ್ನೆ ರಾತ್ರಿ ಕಾರ್ಮಿಕ ಅಪಾರ್ಟ್ಮೆಂಟ್‌ನ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಆಯಾತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸದ್ಯ ಕಾರ್ಮಿಕನ ಕುಟುಂಬಸ್ಥರಿಗೆ ಯಲಹಂಕ ಪೊಲೀಸರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಕ್ಫ್ ವಿವಾದ; ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ