Tag: Labor Department

  • ಕಾರ್ಮಿಕ ಇಲಾಖೆ ಕೊಟ್ಟಿರೋ ನ್ಯೂಟ್ರಿಷನ್ ಕಿಟ್‌ನಲ್ಲಿ ದೊಡ್ಡ ಅಕ್ರಮ – ರವಿಕುಮಾರ್

    ಕಾರ್ಮಿಕ ಇಲಾಖೆ ಕೊಟ್ಟಿರೋ ನ್ಯೂಟ್ರಿಷನ್ ಕಿಟ್‌ನಲ್ಲಿ ದೊಡ್ಡ ಅಕ್ರಮ – ರವಿಕುಮಾರ್

    ಬೆಂಗಳೂರು: ರಕ್ತಹೀನತೆ ಇರೋ ಕಟ್ಟಡ ಕಾರ್ಮಿಕರಿಗೆ ಕಂಚಿಕೆ ಮಾಡಿರೋ ನ್ಯೂಟ್ರಿಷನ್ ಕಿಟ್‌ನಲ್ಲಿ (Nutrition Kit) ದೊಡ್ಡ ಅಕ್ರಮವಾಗಿದೆ‌. ಈ ಕುರಿತು ತನಿಖೆ ನಡೆಸಬೇಕು ಅಂತ ಬಿಜೆಪಿ ಸದಸ್ಯ ರವಿಕುಮಾರ್ (N Ravikumar) ಕಾರ್ಮಿಕ ಸಚಿವರನ್ನ ಒತ್ತಾಯ ಮಾಡಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ರವಿಕುಮಾರ್ ಪ್ರಶ್ನೆ ಕೇಳಿದ್ರು. ಕಾರ್ಮಿಕ ಇಲಾಖೆ (Labor Department) ಹಂಚಿಕೆ ಮಾಡಿರೋ ನ್ಯೂಟ್ರಿಷನ್ ಕಿಟ್ ನಲ್ಲಿ ಕೊಟ್ಟಿರೋ ಸಾಮಗ್ರಿಗಳಲ್ಲಿ ಅಕ್ರಮವಾಗಿದೆ. ಮಾರುಕಟ್ಟೆಯಲ್ಲಿ ಒಂದು ರೇಟ್ ಇದ್ದರೆ ಕಾರ್ಮಿಕ ‌ಇಲಾಖೆ ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದೆ‌. ಮಹಾನಾರಯಣ ತೈಲ, ಚ್ಯವನ ಪ್ರಾಶ ಸೇರಿ ಹಲವು ಸಾಮಗ್ರಿಗಳಿಗೆ ಹೆಚ್ಚು ಹಣ ಕೊಡಲಾಗಿದೆ. ಮಾರುಕಟ್ಟೆಯಲ್ಲಿ 600-700 ರೂ.ಗೆ ಒಂದು ಕಿಟ್ ಸಿಗುತ್ತದೆ. ಆದರೆ ಕಾರ್ಮಿಕ ಇಲಾಖೆ ಒಂದು ಕಿಟ್‌ಗೆ 2,600 ರೂಪಾಯಿ ಕೊಡಲಾಗಿದೆ. ನ್ಯೂಟ್ರಿಷನ್ ಕಿಟ್ ಕೊಡೋದ್ರಲ್ಲಿ ಅಕ್ರಮವಾಗಿದೆ. ಕಿಟ್‌ ಪದಾರ್ಥಗಳನ್ನ ಸದನದಲ್ಲಿ ಪ್ರದರ್ಶನ ಮಾಡಿ ಆರೋಪ ಆಗ್ರಹಿಸಿದರು.

    ಬ್ಲಾಸಂ ಅನ್ನೋ ಕಂಪನಿಗೆ ಕೊಡೋಕೆ ಕಿಟ್ ಹಂಚಿಕೆಯನ್ನ ಸ್ಲಿಪ್ಟ್ ಮಾಡಿ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವಾಗಿದೆ. ಈ‌ ಬಗ್ಗೆ ತನಿಖೆ ಆಗಬೇಕು ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಬೆಂಗಳೂರು ಕಸ ಅನ್ನೋದು ಮಾಫಿಯಾ, ಶಾಸಕರೇ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ: ಡಿ.ಕೆ ಶಿವಕುಮಾರ್

    ಇದಕ್ಕೆ ಸಚಿವ ಸಂತೋಷ್ ಲಾಡ್ (Santosh Lad) ಉತ್ತರ ನೀಡಿ, ರಕ್ತಹೀನತೆ ಇರೋ ಕಟ್ಟಡ ಕಾರ್ಮಿಕರಿಗೆ 75 ಕೋಟಿ ರೂ. ವೆಚ್ಚದಲ್ಲಿ ನ್ಯೂಟ್ರೀಷನ್ ಕಿಟ್ ಹಂಚಿಕೆ ಮಾಡಲಾಗಿದೆ. ಪ್ರತಿ ಜಿಲ್ಲೆಗೆ 26 ಸಾವಿರ ಕಿಟ್‌ಗಳನ್ನ ಹಂಚಿಕೆ ಮಾಡಿದ್ದೇವೆ‌. ಒಟ್ಟು 12 ಲಕ್ಷ ಕಿಟ್ ವಿತರಣೆ ಆಗಿದೆ. ಟೆಂಡರ್ ಪ್ರಕ್ರಿಯೆ ಮೂಲಕವೇ ಕಿಟ್ ಹಂಚಿಕೆ ಆಗಿದೆ. 75 ಕೋಟಿ ರೂ. ಬಳಕೆಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಕಿಟ್ ಹಂಚಿಕೆ‌ ಮಾಡಿ ಒಂದು ವರ್ಷ ಆಗಿದೆ. ಯಾವುದೇ ಅಕ್ರಮ ನ್ಯೂಟ್ರಿಷನ್ ಕಿಟ್ ಕೊಡೋದ್ರಲ್ಲಿ ಆಗಿಲ್ಲ ಅಂತ‌ ಸ್ಪಷ್ಟಪಡಿಸಿದರು.  ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – ಜೊತೆಗಿದ್ದ ಪ್ರೇಯಸಿ ಮೇಲೆಯೇ ಅನುಮಾನ

    ಬಿಜೆಪಿ ಅವಧಿಯಲ್ಲಿ ನ್ಯೂಟ್ರಿಷನ್ ಕಿಟ್ ಯೋಜನೆ ಅಪ್ರೂವ್ ಆಗಿದೆ. ಟೆಂಡರ್ ಪ್ರಕ್ರಿಯೆ ಮೂಲಕವೇ ಕಿಟ್ ಖರೀದಿ ಆಗಿದೆ. ಟೆಂಡರ್ ನಲ್ಲಿ ಲೋಪ ಆಗಿದ್ರೆ ಹೇಳಿ. ಟೆಂಡರ್ ಗೆ ನಾವು ಸಹಾಯ ಮಾಡಲು ಆಗೊಲ್ಲ. L1 ಗೆ ಕಿಟ್ ಪೂರೈಕೆಗೆ ಅವಕಾಶ ಕೊಡಲಾಗಿದೆ. ಕಿಟ್ ಕೊಟ್ಟು ಒಂದು ವರ್ಷ ಆಗಿದೆ. ಟೆಂಡರ್ ನಲ್ಲಿ ಯಾವುದೇ ಅಕ್ರಮವಾಗಿಲ್ಲ. ಎಲ್ಲದ್ದಕ್ಕೂ ಬಹಿರಂಗವಾಗಿ ಭ್ರಷ್ಟಾಚಾರ ಅಂತ ಹೇಳೋದಾದ್ರೆ ಹೇಗೆ? ಅಕ್ರಮದ ದಾಖಲಾತಿ ಇದ್ದರೆ ಕೊಡಿ ತನಿಖೆ ‌ಮಾಡಿಸ್ತೀನಿ ಅಂತ ತಿಳಿಸಿದರು.  ಇದನ್ನೂ ಓದಿ: ಕರಾವಳಿಯಲ್ಲಿ ನಿಷೇಧಿತ PFI ಮತ್ತೆ ಆಕ್ಟಿವ್‌? – ಅಕ್ರಮ ಪಿಸ್ತೂಲ್‌ ಮಾರಾಟ ಜಾಲ ಭೇದಿಸಿದ ಪೊಲೀಸರು

  • ಕಾರ್ಮಿಕರನ್ನು ಸತಾಯಿಸಿ ಮನಬಂದಂತೆ ಕಿಟ್‌ಗಳನ್ನು ಎಸೆದ ಸಿಬ್ಬಂದಿ

    ಕಾರ್ಮಿಕರನ್ನು ಸತಾಯಿಸಿ ಮನಬಂದಂತೆ ಕಿಟ್‌ಗಳನ್ನು ಎಸೆದ ಸಿಬ್ಬಂದಿ

    – ಕಾರ್ಮಿಕ ಇಲಾಖೆ ಅಧಿಕಾರಿಗಳ ನಡೆಗೆ ಆಕ್ರೋಶ

    ಬೀದರ್: ಕಾರ್ಮಿಕರಿಗೆ (Labor) ಗೌರವಪೂರ್ವಕವಾಗಿ ನೀಡಬೇಕಾಗಿದ್ದ ಕಾರ್ಮಿಕ ಕಿಟ್‌ಗಳನ್ನು (Labor Kit) ಇಲಾಖಾ ಸಿಬ್ಬಂದಿ ಕಚೇರಿಯ ಮಹಡಿಯಿಂದ ಮನಬಂದಂತೆ ಎಸೆದಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.

    ಕಾರ್ಮಿಕರ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನೀಡಬೇಕಿದ್ದ ಕಿಟ್‌ಗಳನ್ನು ಕಟ್ಟಡದ ಮೇಲಿಂದ ಸಿಬ್ಬಂದಿ ಎಸೆದಿದ್ದಾರೆ. ಆ ಕಿಟ್‌ಗಳನ್ನು ಕ್ಯಾಚ್ ಹಿಡಿಯಲು ಬಡಪಾಯಿ ಕಾರ್ಮಿಕರು ನಿಂತಿರುವ ವೀಡಿಯೋ ಸೆರೆಹಿಡಿಯಲಾಗಿದೆ. ಆದರೆ ಕಾರ್ಮಿಕರನ್ನು ಬೇಕಾಬಿಟ್ಟಿ ಕಾಯಿಸಿ, ಸತಾಯಿಸಿ ಮನಬಂದಂತೆ ಕಿಟ್‌ಗಳನ್ನು ಎಸೆದಿರುವ ಸಿಬ್ಬಂದಿಯ ಮಹಾ ನಿರ್ಲಕ್ಷ್ಯ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಘೋಷಣೆ – ಯುವಕನ ಬಂಧನ

    ಸೋಮವಾರ ಅಧಿಕಾರಿಗಳು ಕಿಟ್‌ಗಳನ್ನು ಕೊಡುವುದಾಗಿ ಹೇಳಿ ಕಾರ್ಮಿಕ ಹಾಗೂ ಕಾರ್ಮಿಕ ಮಹಿಳೆಯರನ್ನು ರಾತ್ರಿ 10 ಗಂಟೆಯ ವರೆಗೆ ಕಾಯಿಸಿ ಸತಾಯಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಕೂಡಾ ಕಾರ್ಮಿಕರಿಗೆ ಕಿಟ್‌ಗಳನ್ನು ಸರಿಯಾಗಿ ನೀಡದೇ ಮನಬಂದಂತೆ ಎಸೆದಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಪ್ಯಾನ್‌ – ಆಧಾರ್‌ ಕಾರ್ಡ್‌ ಲಿಂಕ್‌; ಜೂನ್‌ 30 ರವರೆಗೆ ಅವಧಿ ವಿಸ್ತರಣೆ

  • ಸಚಿವ ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ

    ಸಚಿವ ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ

    ಹುಬ್ಬಳ್ಳಿ: ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ಸಚಿವ ಜಗದೀಶ್ ಶೆಟ್ಟರ್ ಅವರ ಮಗ ಸರ್ಕಾರದ ಆಹಾರ ಕಿಟ್ ವಿತರಣೆ ಮಾಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಹೌದು, ಯಾವುದೇ ಚುನಾಯಿತ ಪ್ರತಿನಿಧಿ ಅಲ್ಲದಿದ್ದರು ಕೂಡ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿರುವುದು ಟೀಕೆಗೆ ಗುರಿಯಾಗಿದೆ. ಅಲ್ಲದೇ ಯಾವುದೇ ಚುನಾಯಿತ ವ್ಯಕ್ತಿ ಆಗಿಲ್ಲದಿದ್ದರು ಕೂಡ ತಂದೆಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

    ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡಲು ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಗೆ ಅವಕಾಶ ಕೊಟ್ಟವರು ಯಾರು? ಸಚಿವರು ಮಾಡಬೇಕಾದ ಕಾರ್ಯವನ್ನು ಅವರ ಪುತ್ರ ಮಾಡಿದ್ಯಾಕೆ ಅನ್ನೋ ಅನುಮಾನ ಹುಟ್ಟುಹಾಕಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ತಂದೆಯ ಬದಲಾಗಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಸ್ಪರ್ಧೆ ಮಾಡುವ ಉದ್ದೇಶದಿಂದ ಈಗಿನಿಂದಲೇ ಚುನಾವಣಾ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

    ಒಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ತಂದೆಯ ಹೆಸರಿನಲ್ಲಿ ಮಗ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಜರುಗಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

  • 5,600 ರೂ. ನೀಡಿ 16 ಜನ್ರನ್ನು ಕಿತ್ತು ಹಾಕಿದ್ರು – ಸರ್ಕಾರಕ್ಕೆ ಮಹಿಳಾ ಟೆಕ್ಕಿಯ ನೋವಿನ ಪತ್ರ

    5,600 ರೂ. ನೀಡಿ 16 ಜನ್ರನ್ನು ಕಿತ್ತು ಹಾಕಿದ್ರು – ಸರ್ಕಾರಕ್ಕೆ ಮಹಿಳಾ ಟೆಕ್ಕಿಯ ನೋವಿನ ಪತ್ರ

    – ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ
    – ಕಾರ್ಮಿಕ ಇಲಾಖೆಗೆ ಪತ್ರ ಬರೆದ ಟೆಕ್ಕಿ
    – ಅಮೆರಿಕನ್ ಕಂಪನಿಯಲ್ಲಿದ್ದ ಉದ್ಯೋಗಿಗಳು

    ಬೆಂಗಳೂರು: ರಾಷ್ಟ್ರದ ಐಟಿ ರಾಜಧಾನಿಯಂದೇ ಪ್ರಸಿದ್ಧಿ ಗಳಿಸಿರುವ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಲಾಕ್‍ಡೌನ್ ಜಾರಿಯಲ್ಲಿರುವ ಪರಿಣಾಮ ಐಟಿ ಕಂಪನಿಗಳು ತನ್ನ ಸಿಬ್ಬಂದಿಗೆ ‘ವರ್ಕ್ ಫ್ರಂ ಹೋಮ್’ ಮಾಡಲು ಸೂಚಿಸಿದೆ. ಆದರೆ ಇತ್ತೀಚೆಗೆ ‘ವರ್ಕ್ ಫ್ರಂ ಹೋಮ್’ ಮಾಡುತ್ತಿದ್ದ ಟೆಕ್ಕಿಗಳಿಗೆ ಕಂಪನಿಯೊಂದು ಶಾಕ್ ನೀಡಿದ್ದು, ಯಾವುದೇ ಕಾರಣ ನೀಡದೇ ಟೆಕ್ಕಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

    ಹೀಗೆ ಕೆಲಸ ಕಳೆದುಕೊಂಡು ಕಂಗೆಟ್ಟಿದ್ದ ಮಹಿಳಾ ಟೆಕ್ಕಿಯೊಬ್ಬರು ಪತ್ರವನ್ನು ಟ್ವೀಟ್ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡು, ಕಾರ್ಮಿಕ ಇಲಾಖೆಯ ಸಹಾಯವನ್ನು ಕೋರಿದ್ದಾರೆ. ಕಾಡುಗೋಡಿ ನಿವಾಸಿ ದೀಪಾ ವೆಂಕಟೇಶ್ ರೆಡ್ಡಿ ಎಂಬವರು ಪತ್ರವನ್ನು ಟ್ವೀಟ್ ಮಾಡಿ ಸಹಾಯ ಕೇಳಿದ್ದಾರೆ.

    ಲಾಕ್‍ಡೌನ್ ಅವಧಿಯಲ್ಲಿ ನಮ್ಮನ್ನು ವಿನಾಕಾರಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಉದ್ಯೋಗ, ಸಂಬಳವಿಲ್ಲದೆ ನಾವು ಹೇಗೆ ಬದುಕಬೇಕು? ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರಿಗೆ ಟ್ಯಾಗ್ ಮಾಡಿ ಟೆಕ್ಕಿ ಟ್ವೀಟ್ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಸಾಂಕ್ರಾಮಿಕ ಪಿಡುಗು ಕಾಡುತ್ತಿರುವ ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವ ಬಗ್ಗೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ನಾನು ಬೆಳ್ಳಂದೂರು ರಸ್ತೆ ಎಕೋಸ್ಪೇಸ್‍ನಲ್ಲಿರುವ ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಮತ್ತು ನನ್ನ ಬ್ಯಾಚ್‍ನಲ್ಲಿದ್ದ 15 ಮಂದಿಯನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿದೆ. ಸಾಂಕ್ರಾಮಿಕ ಪಿಡುಗು ಇರುವ ಸಂಕಷ್ಟ ಸ್ಥಿತಿಯಲ್ಲಿ ಅನುಸರಿಸಬೇಕಾದ ಅಗತ್ಯಕ್ರಮವನ್ನು ಕಂಪನಿ ಅನುಸರಿಸಿಲ್ಲ.

    https://twitter.com/mani1972ias/status/1248464753892061186

    ಕಾರಣವಿಲ್ಲದೇ ಕೆಲಸದಿಂದ ತೆಗೆದು ಹಾಕಿದ್ದಲ್ಲದೇ ಎಲ್ಲಾ ಟೆಕ್ಕಿಗಳಿಗೂ ಕಂಪನಿ ಒಂದೇ ರೀತಿ ಮಾನದಂಡ ಅನುಸರಿಸಿದೆ. ಎಲ್ಲರಿಗೂ 5,600 ರೂ. ಫೈನಲ್‌ ಸೆಟ್ಲ್‌ಮೆಂಟ್‌ ಮೊತ್ತವನ್ನು ನೀಡಿ, ರಿಲೀವಿಂಗ್ ಲೆಟರ್, ಫುಲ್ ಅಂಡ್ ಫೈನಲ್‌ ಸೆಟ್ಲ್‌ಮೆಂಟ್‌ ಲೆಟರ್ ಅನ್ನು ಕಂಪನಿ ಇ-ಮೇಲ್ ಮಾಡಿದೆ. ಎಲ್ಲಾ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಕಷ್ಟದ ವೇಳೆ ಆಹಾರ, ವಸತಿ ನೋಡಿಕೊಂಡು ಬದುಕುವುದು ಕಷ್ಟ. ನಮ್ಮ ಬ್ಯಾಚ್‍ನಲ್ಲಿದ್ದ 16 ಮಂದಿ ಮಾತ್ರ ಕೆಲಸ ಕಳೆದುಕೊಂಡಿದ್ದೇವೆ. ಉಳಿದ 5 ಮಂದಿ ಇನ್ನೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಸಹಾಯ ಮಾಡಿ ನ್ಯಾಯ ಕೊಡಿಸಿ ಎಂದು ಟೆಕ್ಕಿ ಪತ್ರದಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಕಾರ್ಮಿಕ ಇಲಾಖೆ ಪ್ರತಿಕ್ರಿಯೆ ಏನು?
    ಟೆಕ್ಕಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರು, ನಿಮ್ಮದು ಐಟಿ ಕಂಪನಿ ಆಗಿದ್ದರೆ ನೀವು ಕಾರ್ಮಿಕ ವರ್ಗಕ್ಕೆ ಸೇರುವುದಿಲ್ಲ. ನಿಮ್ಮ ಸಂಸ್ಥೆಯ ಒಪ್ಪಂದ ಪ್ರಕಾರ ನೀವು ನಡೆದುಕೊಳ್ಳಬೇಕಾಗುತ್ತದೆ. ಆದರೆ ಸ್ಥಳೀಯ ಕಾರ್ಮಿಕ ಅಧಿಕಾರಿಗೆ ಈ ಬಗ್ಗೆ ತಿಳಿಸಿ, ಅವರು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸೂಚಿಸಿದ್ದಾರೆ. ಅಲ್ಲದೆ ಕಾರ್ಮಿಕ ಸಹಾಯವಾಣಿಗೆ ಟ್ಯಾಗ್ ಮಾಡಿ ಟೆಕ್ಕಿ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದಾರೆ.

    ಇತ್ತ ಜನಸ್ನೇಹಿ ಕರ್ನಾಟಕ ಟೆಕ್ಕಿಯ ಕಷ್ಟಕ್ಕೆ ಓಗೊಟ್ಟು ಟ್ವೀಟ್ ಮಾಡಿ, ಕಾರ್ಮಿಕ ಇಲಾಖೆಯ ಸಹಾಯವಾಣಿ(9333333684)ಯಿಂದ ಪ್ರತ್ಯುತ್ತರ ಬಂದಿದ್ದು, ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗೆ ದೂರು ಮುಟ್ಟಿಸಲಾಗಿದೆ. ಕಾರ್ಮಿಕ ಸಹಾಯವಾಣಿ ಟೆಕ್ಕಿಯನ್ನು ಸಂಪರ್ಕಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿ, ಕಾರ್ಮಿಕ ಇಲಾಖೆಯ ಲಿಂಕ್ (https://twitter.com/Karmika_Sahaya) ಹಾಕಿ ಟ್ವೀಟ್ ಮಾಡಿದೆ.

    ಟೆಕ್ಕಿ ಟ್ವೀಟ್‍ಗೆ ಅನೇಕರು ಸ್ಪಂಧಿಸುತ್ತಿದ್ದು, ಸರಣಿ ಟ್ವೀಟ್‍ಗಳನ್ನು ಮಾಡುತ್ತಿದ್ದಾರೆ. ಈ ಪ್ರಕರಣದಿಂದ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಕೊರೊನಾ ವೈರಸ್ ಬಿಸಿ ಐಟಿ ಕಂಪನಿಗಳಿಗೆ ತಟ್ಟಿ ಉದ್ಯೋಗ ಕಡಿತ ಆರಂಭವಾಗಿದೆಯೇ? ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಂಪನಿಗಳು ಟೆಕ್ಕಿಗಳನ್ನು ವಜಾಗೊಳಿಸುತ್ತಿದೆಯೇ? ಐಟಿ-ಬಿಟಿ ಉದ್ಯೋಗಿಗಳ ಕಷ್ಟಕ್ಕೆ ಕಾರ್ಮಿಕ ಇಲಾಖೆ ಬಳಿ ಉತ್ತರವಿಲ್ಲವೇ? ಐಟಿ ಉದ್ಯೋಗಿಗಳು ಕಾರ್ಮಿಕ ಎಂದು ಇಲಾಖೆ ಪರಿಗಣಿಸುವುದಿಲ್ಲವೇ? ಎಂಬ ಹತ್ತು ಹಲವು ಪ್ರಶ್ನೆಗಳು ಸದ್ಯ ಭಾರೀ ಚರ್ಚೆಗೀಡಾಗಿದೆ.

  • ಟಚ್ ಮಾಡ್ಬೇಡ: ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಿಂದ ಬಿಜೆಪಿ ಶಾಸಕನಿಗೆ ಅವಾಜ್

    ಟಚ್ ಮಾಡ್ಬೇಡ: ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಿಂದ ಬಿಜೆಪಿ ಶಾಸಕನಿಗೆ ಅವಾಜ್

    ಹುಬ್ಬಳ್ಳಿ: ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್, ಬಿಜೆಪಿ ಶಾಸಕ ಅರವಿಂದ ಬೆಲ್ಲದ್‍ಗೆ ಆವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಇಎಸ್‍ಐ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಕಾರ್ಯಕ್ರಮದಲ್ಲಿ ಆದಿತ್ಯ ಬಿಸ್ವಾಸ್ ಶಾಸಕರಿಗೆ ಅವಾಜ್ ಹಾಕಿದ್ದಾರೆ. ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರ್ತಾಯಿದ್ದಾರೆ ಸೈಡ್ ಸರಿಯುವಂತೆ ಬಿಜೆಪಿ ಶಾಸಕ ಅರವಿಂದ ಬೆಲ್ಲದವರು ಆದಿತ್ಯ ಬಿಸ್ವಾಸ್ ಅವರಿಗೆ ಭುಜ ಹಿಡಿದು ಸರಿಸಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಿಸ್ವಾಸ್ ಟಚ್ ಮಾಡಬೇಡ ಅಂತ ಏರು ಧ್ವನಿಯಲ್ಲಿ ಹೇಳಿದ್ದಾರೆ. ಆಗ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅರವಿಂದ ಬೆಲ್ಲದ್ ಅವರಿಗೆ ಸಮಾಧಾನ ಮಾಡಿದರು. ಈ ವೇಳೆ ಸಂಸದ ಪ್ರಲ್ಹಾದ ಜೋಶಿ ಸೇರಿದಂತೆ ಹಲವು ಗಣ್ಯವ್ಯಕ್ತಿಗಳು ಇದ್ದರು.

    ಇದೇ ವೇಳೆ ಹುಬ್ಬಳ್ಳಿಯಲ್ಲಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಸಂತೋಷ್‍ಕುಮಾರ್ ಗಂಗ್ವಾರ್ ಅವರು ಕೇಂದ್ರ ಸರ್ಕಾರ ಸಕಾರಾತ್ಮಕ ಮಾರ್ಗದಲ್ಲಿ ಕೆಲಸ ಮಾಡುತ್ತಿದೆ. ಅನಾರೋಗ್ಯ ಪೀಡಿತರಿಗೆ ಸೂಕ್ತ ಸಂದರ್ಭದಲ್ಲಿ ಔಷಧೋಪಚಾರ ಸಿಗಬೇಕು. ರಾಜ್ಯ ಸರ್ಕಾರ ಔಷಧ ಮತ್ತು ಸೌಲಭ್ಯಗಳ ಕೊರತೆಯಾದರೆ ಕೂಡಲೇ ಕೇಂದ್ರದ ಗಮನಕ್ಕೆ ತರಬೇಕು. ನಾವು ಕಾರ್ಮಿಕರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದೇವೆ. ಕಾರ್ಮಿಕರ ಹಿತಕ್ಕಾಗಿ ನಾಲ್ಕು ಕೋಡ್‍ಗಳ ಸಮಗ್ರ ಕಾನೂನು ಜಾರಿಗೆ ತರಲಾಗುತ್ತಿದೆ. ದೇಶದ ನಲವತ್ತು ಕೋಟಿ ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಇಎಸ್‍ಐ ಆಸ್ಪತ್ರೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv