ಚಿತ್ರದುರ್ಗ: ಮಲದ ಗುಂಡಿಗಿಳಿದ (Septic Tank) ಕಾರ್ಮಿಕನೋರ್ವ (Labor) ಉಸಿರುಗಟ್ಟಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ಪಟ್ಟಣದಲ್ಲಿ ನಡೆದಿದೆ.
ಚಳ್ಳಕೆರೆ ಪಟ್ಟಣದಲ್ಲಿ ಡಿ.18ರಂದು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಳ್ಳಕೆರೆಯ ಗಾಂಧಿನಗರ ಬಡಾವಣೆಯ ರಂಗಸ್ವಾಮಿ (48) ಮೃತ ಕಾರ್ಮಿಕನೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಳ್ಳಾರಿ| ಆಕಸ್ಮಿಕ ಬೆಂಕಿಗೆ ಮೂರು ಅಂಗಡಿಗಳು ಭಸ್ಮ
ಈ ಸಂಬಂಧ ಡಿ.23ರ ರಾತ್ರಿ ಚಳ್ಳಕೆರೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ನೀರಿನ ತೊಟ್ಟಿಯಲ್ಲಿ ಮುಳುಗಿ ಕಾರ್ಮಿಕ ಸಾವೆಂದು ತಿಳಿಸಲಾಗಿತ್ತು. ಈ ವೇಳೆ ಸಫಾಯಿ ಕರ್ಮಚಾರಿಗಳ ಸೇವಾ ಸಮಿತಿಯಿಂದ ಡಿಸಿ ಕಚೇರಿಗೆ ದೂರು ಸಲ್ಲಿಸಿ, ತನಿಖೆಗೆ ಆಗ್ರಹಿಸಿದ ಪರಿಣಾಮ ನಗರಸಭೆ ಕಂದಾಯ ನಿರೀಕ್ಷಕ ಗುರುಪ್ರಸಾದ್ ಸ್ಥಳ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದಲ್ಲಿ (Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (Rescue operation) ಇಂದಿಗೆ (ಶುಕ್ರವಾರ) 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ.
ಸಿಲ್ಕ್ಯಾರಾ ಸುರಂಗದ ಕಡೆಯಿಂದ ಅಮೆರಿಕನ್ ಆಗುರ್ ಯಂತ್ರವನ್ನು ಬಳಸಿ ಕೊರೆಯುವ ಕೆಲಸ ನಡೆಯುತ್ತಿತ್ತು. ರಕ್ಷಣಾ ತಂಡ ಇಲ್ಲಿಯವರೆಗೆ ಸುಮಾರು 46.8 ಮೀ. ವರೆಗೆ ಕೊರೆದಿದ್ದಾರೆ. ಆದರೆ ಗುರುವಾರ ತಡರಾತ್ರಿ ಮತ್ತೊಂದು ತಾಂತ್ರಿಕ ಅಡಚಣೆ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೊರೆಯುವ ಯಂತ್ರವನ್ನು ದುರಸ್ತಿಗೊಳಿಸಲು ಕೆಲವು ಗಂಟೆ ತೆಗೆದುಕೊಳ್ಳುತ್ತದೆ. ಬೇರೆ ಯಾವುದೇ ಸಮಸ್ಯೆ ಉಂಟಾಗದಿದ್ದರೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಶೂಟಿಂಗ್‌ಗೆ ಅವಕಾಶ
13 ದಿನಗಳಿಂದ ಸುರಂಗದೊಳಗೆ ಸಿಲುಕಿ ಪರದಾಡುತ್ತಿರುವ 41 ಕಾರ್ಮಿಕರನ್ನು ಇಂದು ಹೊರತರುವ ನಿರೀಕ್ಷೆಯಿದೆ. ಅಂಬುಲೆನ್ಸ್‌ಗಳು, ವೈದ್ಯರ ತಂಡ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದಾರೆ. ಕಾರ್ಮಿಕರಿಗೆ ನೀರು, ಆಹಾರ ವಿತರಿಸಲು ಪೈಪ್ ಅನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ
ಡೆಹ್ರಾಡೂನ್: ʻʻಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ, ಸಮಯಕ್ಕೆ ಸರಿಯಾಗಿ ಊಟ ಮಾಡಿ, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ…ʼʼ ಕಳೆದ 10 ದಿನಗಳಿಂದ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರೊಬ್ಬರು (Labor) ತಮ್ಮ ತಾಯಿಗೆ ತಲುಪಿಸಿದ ಭಾವುಕ ಸಂದೇಶ ಇದಾಗಿತ್ತು.
ಸಿಲ್ಕಿಯಾರ ಸುರಂಗದೊಳಗೆ (Silkyara Tunnel) ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರ ಕಳುಹಿಸಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇದೇ ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನ ಸುರಂಗದೊಳಗೆ ಕಳುಸಿದ್ದು, ಕಾರ್ಮಿಕರ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ. ಸ್ವಲ್ಪ ಸಮಯದ ನಂತ್ರ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗಿದ್ದು, ಇದರಿಂದ ಕಾರ್ಮಿಕರ ರಕ್ಷಣೆಗೆ ಬಹುತೇಕ ಪರಿಹಾರ ಸಿಕ್ಕಂತಾಗಿದೆ. ಇದನ್ನೂ ಓದಿ: ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್-ಎ-ತೊಯ್ಬಾ ಬ್ಯಾನ್ ಮಾಡಿದ ಇಸ್ರೇಲ್
ರಕ್ಷಣಾ ತಂಡದ ಅಧಿಕಾರಿಗಳು ಸುರಂಗದಲ್ಲಿ ಸಿಲುಕಿಕೊಂಡವರೊಂದಿಗೆ ಸಂವಹನ ನಡೆಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ವೇಳೆ ಸುರಂಗದಲ್ಲಿ ಸಿಲುಕಿದ ಕಾರ್ಮಿಕರಲ್ಲಿ ಒಬ್ಬರಾದ ಜೈದೇವ್, ಮೇಲ್ವಿಚಾರಕರೊಂದಿಗೆ ಮಾತನಾಡುತ್ತಾ ತನ್ನ ಹೇಳಿಕೆಯನ್ನ ರೆಕಾರ್ಡ್ ಮಾಡುವಂತೆ ಕೇಳಿಕೊಂಡಿದ್ದಾರೆ. ಬಳಿಕ ಹೇಳಿಕೆಯನ್ನು ತನ್ನ ತಾಯಿಗೆ ತಲುಪಿಸುವಂತೆ ಕೋರಿಕೊಂಡಿದ್ದಾರೆ. ಮೇಲ್ವಿಚಾರಕರು ಕಾರ್ಮಿಕನ ಹೇಳಿಕೆ ರೆಕಾರ್ಡ್ ಮಾಡುತ್ತಿದ್ದಂತೆ, ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ ಸಮಯಕ್ಕೆ ಸರಿಯಾಗಿ ಊಟ ಮಾಡಿ ಆರೋಗ್ಯ ನೋಡಿಕೊಳ್ಳಿ ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ಬಳಿಕ ಮೇಲ್ವಿಚಾರಕರು ಚಿಂತಿಸಬೇಡಿ ಶೀಘ್ರದಲ್ಲೇ ಸ್ಥಳಾಂತರಿಸುವುದಾಗಿ ಅಭಯ ನೀಡಿದ್ದಾರೆ.
ಸದ್ಯ ರಕ್ಷಣಾ ಅಧಿಕಾರಿಗಳು ವಾಕಿ ಟಾಕೀಸ್ ಮೂಲಕ ಕೆಲ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. ಸೆರೆಹಿಡಿಯಲಾದ ವೀಡಿಯೋದಲ್ಲಿ ರಕ್ಷಣಾ ಅಧಿಕಾರಿಗಳು ಕಾರ್ಮಿಕರಿಗೆ ಕ್ಯಾಮೆರಾ ಮುಂದೆ ಬರುವಂತೆ ಕೇಳಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ಮೊಬೈಲ್, ಚಾರ್ಜರ್‌ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.
ಡೆಹ್ರಾಡೂನ್: ಕಳೆದ 10 ದಿನಗಳಿಂದ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದೊಳಗೆ (Tunnel) ಸಿಲುಕಿರುವ ಕಾರ್ಮಿಕರ ಮೊದಲ ವೀಡಿಯೋವನ್ನು (Video) ರಕ್ಷಣಾ ಅಧಿಕಾರಿಗಳು ಸೆರೆಹಿಡಿದಿದ್ದಾರೆ.
ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರವನ್ನು ಕಳುಹಿಸಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇದೇ ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನು ಸುರಂಗದೊಳಗೆ ಕಳುಸಿದ್ದು, ಕಾರ್ಮಿಕರ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
#WATCH | Uttarkashi (Uttarakhand) Tunnel Rescue | Inside visuals of the tunnel as the rescue operation continues.
ರಕ್ಷಣಾ ಅಧಿಕಾರಿಗಳು ವಾಕಿ ಟಾಕೀಸ್ ಮೂಲಕ ಕೆಲ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. ಸೆರೆಹಿಡಿಯಲಾದ ವೀಡಿಯೋದಲ್ಲಿ ರಕ್ಷಣಾ ಅಧಿಕಾರಿಗಳು ಕಾರ್ಮಿಕರಿಗೆ ಕ್ಯಾಮೆರಾ ಮುಂದೆ ಬರುವಂತೆ ಕೇಳಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ಮೊಬೈಲ್, ಚಾರ್ಜರ್‌ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.
ಕಾರ್ಮಿಕರು ಸುರಂಗದೊಳಗೆ ಸಿಲುಕಿದಾಗಿನಿಂದ ಅವರಿಗೆ ಸೇವಿಸಲು ಪೈಪ್ ಮೂಲಕ ಒಣ ಹಣ್ಣುಗಳನ್ನು ಮಾತ್ರವೇ ಕಳುಹಿಸಲಾಗಿತ್ತು. ಕಳೆದ ರಾತ್ರಿ ಗಾಜಿನ ಬಾಟಲಿಗಳಲ್ಲಿ ಕಿಚಡಿಯನ್ನು ತುಂಬಿ ಕಳುಹಿಸಲಾಗಿದೆ. ಈ ಮೂಲಕ 10 ದಿನಗಳ ಬಳಿಕ ಕಾರ್ಮಿಕರಿಗೆ ಬಿಸಿ ಊಟ ದೊರಕಿದಂತಾಗಿದೆ.
ನಿರ್ಮಾಣ ಹಂತದಲ್ಲಿರುವ ಈ ಸುರಂಗ ಚಾರ್ ಧಾಮ್ ಯೋಜನೆಯ ಭಾಗವಾಗಿದೆ. ಇದು ಹಿಂದೂ ಯಾತ್ರಾ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಸಂಪರ್ಕವನ್ನು ಕಲ್ಪಿಸುವ ಯೋಜನೆಯಾಗಿದೆ. ಇದನ್ನೂ ಓದಿ: ಸತ್ತೇ ಹೋಗಿದ್ದೇನೆ ಎಂದು ಬಿಂಬಿಸಿ ತಲೆಮರೆಸಿಕೊಂಡಿದ್ದ ರೌಡಿ ಬಂಧನ
ಚೆನ್ನೈ: ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗೆ ವಿಸ್ತರಿಸಿದ್ದ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ 2023 ಅನ್ನು (Factories Amendment Act 2023) ಕಾರ್ಮಿಕರ (Labor) ಹಿತದೃಷ್ಟಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡಿನ (Tamil Nadu) ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin) ಸೋಮವಾರ ಹೇಳಿದ್ದಾರೆ.
ಮೇ ಡೇ ಪಾರ್ಕ್‌ನಲ್ಲಿ ಮೇ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಕಾರ್ಖಾನೆಗಳ ತಿದ್ದುಪಡಿ ಕಾಯಿದೆ 2023, ಕೈಗಾರಿಕೆಗಳಿಗೆ ದಿನಕ್ಕೆ 12 ಗಂಟೆ ಎಂದರೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಗಳವರೆಗೆ ಇದ್ದ ಕೆಲಸದ ಸಮಯವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಮಿಕರ ಕಲ್ಯಾಣ ದೃಷ್ಟಿಯಿಂದ ನಾವು ಯಾವುದೇ ಪರಿಸ್ಥಿತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗಾರಿಕೆಗಳು ಬೆಳೆಯಬೇಕು ಮತ್ತು ಕಾರ್ಮಿಕರ ಏಳಿಗೆಯಾಗಬೇಕು. ನಾನು ಎಂದಿಗೂ ಮಣಿಯುವುದನ್ನು ಅವಮಾನ ಎಂದು ಪರಿಗಣಿಸಲ್ಲ. ನಾನು ಅದನ್ನು ಹೆಮ್ಮೆಯ ವಿಷಯ ಎಂದು ಪರಿಗಣಿಸಿದ್ದೇನೆ. ಏಕೆಂದರೆ ಶಾಸನವನ್ನು ಖಚಿತಪಡಿಸಿಕೊಳ್ಳಲು ಹಾಗೂ ಮಸೂದೆಯನ್ನು ಹಿಂಪಡೆಯಲು ಧೈರ್ಯ ಬೇಕಾಗುತ್ತದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಹುಚ್ಚ ಅಲ್ಲ ಅರೆಹುಚ್ಚ – ಮತ್ತೆ ನಾಲಗೆ ಹರಿಬಿಟ್ಟ ಯತ್ನಾಳ್
ಏಪ್ರಿಲ್ 21 ರಂದು ತಮಿಳುನಾಡು ವಿಧಾನಸಭೆಯು ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ 2023 ಅನ್ನು ಅಂಗೀಕರಿಸಿತು. ಇದು ರಾಜ್ಯದಾದ್ಯಂತ ಕಾರ್ಖಾನೆಗಳಲ್ಲಿನ ಉದ್ಯೋಗಿಗಳಿಗೆ 12 ಗಂಟೆಗಳವರೆಗೆ ಕಡ್ಡಾಯ ಕೆಲಸದ ಸಮಯವನ್ನು ವಿಸ್ತರಿಸಿತ್ತು. ಆದರೆ ಈ ಕಾಯ್ದೆ ವಿರುದ್ಧ ಹಲವು ವಿಪಕ್ಷಗಳು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿರುವ ಹಿನ್ನೆಲೆ ಕಾರ್ಮಿಕರ ಹಿತದೃಷ್ಟಿಯಿಂದ ಇದನ್ನು ಹಿತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಭಾರತದ ಪ್ರಗತಿಗೆ ಗುಜರಾತ್ ವಿಶೇಷ ಕೊಡುಗೆ ನೀಡಿದೆ – ರಾಹುಲ್ ಗಾಂಧಿ
ಬೀದರ್: ಕಾರ್ಮಿಕರಿಗೆ (Labor) ಗೌರವಪೂರ್ವಕವಾಗಿ ನೀಡಬೇಕಾಗಿದ್ದ ಕಾರ್ಮಿಕ ಕಿಟ್‌ಗಳನ್ನು (Labor Kit) ಇಲಾಖಾ ಸಿಬ್ಬಂದಿ ಕಚೇರಿಯ ಮಹಡಿಯಿಂದ ಮನಬಂದಂತೆ ಎಸೆದಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.
ಕಾರ್ಮಿಕರ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಜವಾದ ಫಲಾನುಭವಿಗಳಿಗೆ ನೀಡಬೇಕಿದ್ದ ಕಿಟ್‌ಗಳನ್ನು ಕಟ್ಟಡದ ಮೇಲಿಂದ ಸಿಬ್ಬಂದಿ ಎಸೆದಿದ್ದಾರೆ. ಆ ಕಿಟ್‌ಗಳನ್ನು ಕ್ಯಾಚ್ ಹಿಡಿಯಲು ಬಡಪಾಯಿ ಕಾರ್ಮಿಕರು ನಿಂತಿರುವ ವೀಡಿಯೋ ಸೆರೆಹಿಡಿಯಲಾಗಿದೆ. ಆದರೆ ಕಾರ್ಮಿಕರನ್ನು ಬೇಕಾಬಿಟ್ಟಿ ಕಾಯಿಸಿ, ಸತಾಯಿಸಿ ಮನಬಂದಂತೆ ಕಿಟ್‌ಗಳನ್ನು ಎಸೆದಿರುವ ಸಿಬ್ಬಂದಿಯ ಮಹಾ ನಿರ್ಲಕ್ಷ್ಯ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಘೋಷಣೆ – ಯುವಕನ ಬಂಧನ
ಸೋಮವಾರ ಅಧಿಕಾರಿಗಳು ಕಿಟ್‌ಗಳನ್ನು ಕೊಡುವುದಾಗಿ ಹೇಳಿ ಕಾರ್ಮಿಕ ಹಾಗೂ ಕಾರ್ಮಿಕ ಮಹಿಳೆಯರನ್ನು ರಾತ್ರಿ 10 ಗಂಟೆಯ ವರೆಗೆ ಕಾಯಿಸಿ ಸತಾಯಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಕೂಡಾ ಕಾರ್ಮಿಕರಿಗೆ ಕಿಟ್‌ಗಳನ್ನು ಸರಿಯಾಗಿ ನೀಡದೇ ಮನಬಂದಂತೆ ಎಸೆದಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಪ್ಯಾನ್ – ಆಧಾರ್ ಕಾರ್ಡ್ ಲಿಂಕ್; ಜೂನ್ 30 ರವರೆಗೆ ಅವಧಿ ವಿಸ್ತರಣೆ
ಚಿಕ್ಕೋಡಿ: ಕಾಮಗಾರಿ ಮಾಡುತ್ತಿದ್ದ ವೇಳೆ ಕರೆಂಟ್ ತಗುಲಿ ಇಬ್ಬರು ಕಾರ್ಮಿಕರು (Labor) ಮೃತಪಟ್ಟಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದ್ದು, ಈ ದುರಂತಕ್ಕೆ ಹೆಸ್ಕಾಂ (Hescom) ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನಮಂತ ಮಗದುಮ್(34) ಹಾಗೂ ಅಶೋಕ್ ಮಾಳಿ(36) ಮೃತ ದುರ್ದೈವಿಗಳು. ಹನಮಂತ ಹಾಗೂ ಅಶೋಕ್ ಇಬ್ಬರು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಕವಾಗಿದ್ದರು. ಮೃತ ಹನಮಂತ ಹಾಗೂ ಅಶೋಕ್ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳಾಗಿದ್ದರು.
ಬಳ್ಳಿಗೇರಿ ಗ್ರಾಮದಿಂದ ದೇವನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಕಾಮಗಾರಿ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಈ ಇಬ್ಬರು ಕಾರ್ಮಿಕರು ವಿದ್ಯುತ್ ಕಂಬ ಏರಿ ದುರಸ್ತಿ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗಂಡಸರ ಸುದ್ದಿ ನನಗೆ ಬೇಡಪ್ಪ – ಅಶ್ವಥ್ ನಾರಾಯಣಗೆ ಡಿಕೆಶಿ ತಿರುಗೇಟು
ಘಟನೆಗೆ ಸಂಬಂಧಿಸಿ ಅಲ್ಲಿನ ಸ್ಥಳೀಯರು ಸ್ಟೇಷನ್ ಆಪರೇಟರ್ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ:ಪರೀಕ್ಷಾ ನಿಯಮ ಪಾಲಿಸದ 2 ಪರೀಕ್ಷಾ ಕೇಂದ್ರ ರದ್ದು
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆಯಲ್ಲಿ ತಿಂಗಳ ಅವಧಿಯಲ್ಲಿ ಇಬ್ಬರು ಕಾಡಾನೆಗೆ ಬಲಿಯಾಗಿರುವುದು ಸ್ಥಳೀಯರ ಆಕ್ರೋಶದ ಕಟ್ಟೆಯೊಡೆದಿದೆ. ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದ ಜನರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ದಶಕದಲ್ಲಿ ಹತ್ತಕ್ಕೂ ಹೆಚ್ಚು, ತಿಂಗಳಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹಾಗಾಗಿ ಇಂದು ಮೂಡಿಗೆರೆ ತಾಲೂಕಿನ ಜನ ಅರಣ್ಯ ಇಲಾಖೆ ಮೇಲೆ ಅಕ್ಷರಶಃ ಕೆಂಡಾಮಂಡಲರಾಗಿದ್ದರು. ಆಗಸ್ಟ್ 15ರಂದು ದನ ಹುಡುಕುತ್ತಿದ್ದ ವ್ಯಕ್ತಿ ಹಾಗೂ ನಿನ್ನೆ ತೋಟದಿಂದ ಬರುತ್ತಿದ್ದ 45 ವರ್ಷದ ವ್ಯಕ್ತಿಯನ್ನ ಆನೆ ಬಲಿ ಪಡೆದಿತ್ತು. ಪ್ರತಿ ಬಾರಿ ಆನೆ ದಾಳಿಯಾದಾಗಲೂ ಅಧಿಕಾರಿಗಳು ನಮ್ಮ ಮೂಗಿಗೆ ತುಪ್ಪ ಸವರುತ್ತಾರೆ ಎಂದು ಸ್ಥಳೀಯರ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ಇಂದು ಮೃತದೇಹವನ್ನ ಅರಣ್ಯ ಇಲಾಖೆ ಬಾಗಿಲಲ್ಲಿ ಇಟ್ಟು ಈ ಸಾವಿಗೆ ಅಧಿಕಾರಿಗಳೇ ಕಾರಣ. ಇದು ಅಧಿಕಾರಿಗಳು ಮಾಡಿದ ಕೊಲೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಮನಸ್ಸೋ ಇಚ್ಛೆ ಲಾಠಿ ಬೀಸಿದ್ದಾರೆ.
ಪ್ರತಿ ಬಾರಿ ಮೂಗಿಗೆ ತುಪ್ಪ ಸವರುತ್ತಿದ್ದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಕ್ಷರಶಃ ಕೆಂಡಾಮಂಡಲರಾಗಿದ್ದರು. ಮೃತ ದೇಹವನ್ನ ಅರಣ್ಯ ಇಲಾಖೆ ಬಾಗಿಲಲ್ಲಿ ಇಟ್ಟು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು-ಅರಣ್ಯಾಧಿಕಾರಿಗಳು ಹಾಗೂ ಸ್ಥಳಿಯರು ಮಧ್ಯೆ ತೀವ್ರ ವಾಕ್ಸಮರ ಉಂಟಾಗಿತ್ತು. ಸ್ಥಳಿಯರು ಪೊಲೀಸ್ ಜೀಪನ್ನೇ ಪಲ್ಟಿ ಮಾಡಿ, ಅರಣ್ಯ ಇಲಾಖೆ ಗೇಟ್ ಮುರಿಯಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮನಸ್ಸೋ ಇಚ್ಛೆ ಲಾಠಿ ಬೀಸಿದ್ದಾರೆ. ಒದೆ ತಿಂದರೂ ಸ್ಥಳಿಯರು ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ.
ಪ್ರತಿ ಬಾರಿ ಆನೆ ಇದೆ ಎಂದು ಫೋನ್ ಮಾಡಿದರೆ, ಗಂಟೆ ಬಿಟ್ಟು ಬರುವ ಅಧಿಕಾರಿಗಳು ಎರಡು ಪಟಾಕಿ ಸಿಡಿಸಿ ಹೋಗುತ್ತಾರೆ. ಅವರು ಮತ್ತೆ ಬರುವುದು ಮತ್ತೆ ಆನೆ ಬಂದಾಗಲೇ ಎಂದು ಅಧಿಕಾರಿಗಳ ವಿರುದ್ಧ ರೆಬಲ್ ಆಗಿದ್ದರು. ಆನೆಯನ್ನ ಸೆರೆ ಹಿಡಿಯುವಂತೆ ನೂರಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನ ಮಾತ್ರ ಮೇಲಿಂದ ಮೇಲೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶಿತರಾಗಿದ್ದರು. ಮೂಡಿಗೆರೆ ತಾಲೂಕಿನ ಕುಂದೂರು, ಸಾರಗೋಡು, ಗುತ್ತಿಹಳ್ಳಿ, ಊರಬಗೆ, ಕೋಗಿಲೆ, ಗೌಡಹಳ್ಳಿ, ದೇವವೃಂದ, ಬೈರಾಪುರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಸಮಸ್ಯೆ ಮಿತಿ ಮೀರಿದೆ. ಆನೆಗಳು ಹಳ್ಳಿಗೆ ಬರುತ್ತಿವೆ. ಬೆಳೆಗಳು ಒಂದೂ ಉಳಿಯುತ್ತಿಲ್ಲ. ಜನ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆರಾಮಾಗಿದ್ದಾರೆ ಎಂದು ಅಧಿಕಾರಿಗಳ ಮೇಲೆ ಕೆಂಡಕಾರುತ್ತಾ ಮೂಡಿಗೆರೆ ಆರ್‌ಎಫ್‌ಓ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಅಧಿಕಾರಿಗಳು-ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ಉಂಟಾಗಿ ಲಾಠಿಚಾರ್ಜ್ ನಡೆಸಿದ್ದಾರೆ.
ಒಟ್ಟಾರೆ ಸ್ಥಳೀಯರು ಆನೆ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗಲೇ ಅಧಿಕಾರಿಗಳು ಕ್ರಮಕೈಗೊಂಡರೆ ಏನೂ ಆಗುತ್ತಿರಲಿಲ್ಲ. ಪ್ರಾಣವೂ ಉಳಿಯೋದು, ಬೆಳೆಯೂ ಉಳಿಯೋದು. ಆದರೆ ಅಧಿಕಾರಿಗಳ ಆಯ್ತು… ಮಾಡೋಣ…. ಬರೋಣ… ಓಡಿಸೋಣ… ನೋಡೋಣ… ಎಂಬ ಸಿದ್ಧ ಉತ್ತರ ಇಂದು ಸ್ಥಳೀಯರನ್ನ ಈ ರೀತಿ ಕೆರಳಿಸಿತ್ತು. ಈಗಾಗಲೇ ಹಿಂಡು-ಹಿಂಡು ಕಾಡನೆಗಳು ಮಲೆನಾಡಲ್ಲಿ ಲಗ್ಗೆ ಇಟ್ಟಿವೆ. ಕೂಡಲೇ ಅವುಗಳನ್ನ ಸ್ಥಳಾಂತರಿಸದಿದ್ದರೆ ಇವತ್ತು ಅರ್ಧಕ್ಕೆ ಬಿಟ್ಟಿರುವ ಕೆಲಸವನ್ನ ಮುಂದಿನ ದಿನಗಳಲ್ಲಿ ಪೂರ್ತಿ ಮಾಡುತ್ತೇವೆ ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಬಸ್ – 7 ಮಂದಿಗೆ ಗಾಯ, ತಪ್ಪಿದ ಭಾರೀ ಅನಾಹುತ
Live Tv
[brid partner=56869869 player=32851 video=960834 autoplay=true]
ಮಡಿಕೇರಿ: ಕೆಲಸಕ್ಕೆಂದು ಬಂದ ಹೊರ ರಾಜ್ಯಗಳ ಕಾರ್ಮಿಕರಿಂದಲೇ ದರೋಡೆ ಪ್ರಕರಣಗಳು ಶಾಂತಿಪ್ರಿಯ ಜಿಲ್ಲೆ ಕೊಡಗಿನಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮನೆ ದರೋಡೆ ಮಾಡಿದ್ದ ಅಸ್ಸಾಂ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮೇಕೂರು ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಎಂಬುವರ ಮನೆ ದರೋಡೆ ನಡೆಸಿದ್ದ ಅಸ್ಸಾಂ ಮೂಲದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಜೂ.12ರಂದು ಮನೆಗೆ ಸಾಮಾಗ್ರಿ ತರಲೆಂದು ಪತ್ನಿಯ ಜೊತೆ ಪಾಲಿಬೆಟ್ಟಕ್ಕೆ ತೆರಳಿದ್ದರು. ಮನೆ ಸಾಮಗ್ರಿ ಖರೀದಿಸಿ ಮಧ್ಯಾಹ್ನದ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯವರಿಗೆ ಶಾಕ್ ಕಾದಿತ್ತು. ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕಪಾಟಿನಲ್ಲಿದ್ದ ಆರಭರಣಗಳೆಲ್ಲ ಮಾಯವಾಗಿದ್ದವು. ಮನೆಯಲ್ಲಿದ್ದ ಅಂದಾಜು 9-10 ಲಕ್ಷ ರೂ. ವೆಚ್ಚದ ಚಿನ್ನಾಭರಣಗಳನ್ನು ಖದೀಮರು ದೋಚಿ ಪರಾರಿಯಾಗಿದ್ದರು. ಮನೆ ಕಳ್ಳತನದ ಬಗ್ಗೆ ಪೊಲೀಸರಿಗೆ ಮನೆ ಮಾಲೀಕ ಸುಬ್ಬಯ್ಯ ದೂರು ನೀಡಿದ್ದರು.
ಸುಬ್ಬಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳಿಗಾಗಿ ತಂಡ ಮಾಡಿಕೊಂಡು ಹುಡುಕಾಟ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ಒಂದಷ್ಟು ಜನರ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ ಕಳ್ಳರು ಕರ್ನಾಟಕದವರಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದವರೂ ಜಿಲ್ಲೆಗೆ ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಬಂದವರೆಂದು ತಿಳಿದ ಪೊಲೀಸರು ಕೂಡಲೇ ಕಾರ್ಯಪ್ರವೃತರಾಗಿ ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಕಳುಹಿಸಿದ್ದಾರೆ. ಇಬ್ಬರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿದರೆ, ಇನ್ನಿಬ್ಬರು ಆರೋಪಿಗಳು ಪಾರಾರಿಯಾಗಿದ್ದಾರೆ.
ಕುರ್ಬನ್ ಅಲಿ, ಮಹಿರುದ್ದೀನ್ ಅಲಿ ಬಂಧಿತ ಆರೋಪಿಗಳು. ಇದೀಗ ಇಬ್ಬರನ್ನು ಬಂಧಿಸಿರುವ ಪೊಲೀಸರು ಇವರ ಬಳಿ ಇದ್ದ 11,70,000 ರೂ. ಮೌಲ್ಯದ 247.1 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಇವರೊಂದಿಗೆ ಇದ್ದ ಇನ್ನಿಬ್ಬರು ತಲೆಮರಿಸಿಕೊಂಡಿದ್ದು, ಅವರಿಗಾಗಿ ಕೊಡಗು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ:ಶಿವಸೇನೆ ಬಾಳಾಸಾಹೇಬ್ ಎಂದು ಹೆಸರಿಟ್ಟುಕೊಂಡ ರೆಬೆಲ್ ಶಾಸಕರ ಗುಂಪು
ಜಿಲ್ಲೆಯಲ್ಲಿ ಮೊದಲೇನು ಹೆಚ್ಚಿನ ಕಳ್ಳತನವಾಗಲಿ ದರೋಡೆ ಪ್ರಕರಣವಾಗಲಿ ನಡೆಯುತ್ತಿರಲಿಲ್ಲ. ಆದರೆ ಇದೀಗ 10 ಕೊಲೆ, ದರೋಡೆ ಪ್ರಕರಣಗಳು ನಡೆದಲ್ಲಿ 7/8 ಪ್ರಕರಣದಲ್ಲಿ ಅಸ್ಸಾಂ ಮೂಲದವರೆ ಇರುತ್ತಾರೆ. ಮನೆ ತೋಟದ ಕೆಲಸಕ್ಕೆ ಹೋಗಿ ಅಲ್ಲಿನ ಜನರ ಚಲನವಲನಗಳನ್ನು ನೋಡಿಕೊಂಡು ಯಾರು ಇಲ್ಲದ ಸಮಯದಲ್ಲಿ ಮನೆಗಳಿಗೆ ಕನ್ನಹಾಕಿ ಊರು ಬಿಟ್ಟು ತಮ್ಮೂರು ಸೇರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ಡದೊಂದು ಅಪಾಯ ಎದರಾಗುವ ಮುನ್ನ ನಾವೇ ಎಚ್ಚೆತುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಜಿಲ್ಲಾಡಳಿತ ಪೊಲೀಸ್ ಇಲಾಖೆ ತೋಟದ ಮಾಲೀಕರಿಗೆ ನಿಮ್ಮ ತೋಟದ ಅಸ್ಸಾಂ ಕಾರ್ಮಿಕರ ವಿವರವನ್ನು ನೀಡುವಂತೆ ಹೇಳಿದ್ರು ಕೂಡ ಕ್ಯಾರೆ ಎನ್ನುತ್ತಿಲ್ಲ. ಇನ್ನಾದರೂ ಹೊರ ರಾಜ್ಯದ ಕಾರ್ಮಿಕರಿಂದ ಅಪಾಯ ಎದುರಾಗುವ ಮುನ್ನ ಕೊಡಗಿನ ಜನತೆಯೆ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ದೊಡ್ಡದೊಂದು ಅಪಾಯದ ಸುಳಿಯಲ್ಲಿ ಸಿಲುಕುವುದರಲ್ಲಿ ಎರಡು ಮಾತ್ತಿಲ್ಲ. ಇದನ್ನೂ ಓದಿ:ಕುಟುಂಬ ರಾಜಕಾರಣ ಮಾಡೋರಿಗೆ ಮಹಾರಾಷ್ಟ್ರದಲ್ಲಿ ತಕ್ಕ ಪಾಠವಾಗಿದೆ: ಪ್ರತಾಪ್ ಸಿಂಹ
ಜೈಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 9 ಮಂದಿಯ ಗುಂಪು ಕಾರ್ಮಿಕನೊಬ್ಬರನ್ನು ರಾಡ್ ಮತ್ತು ದೊಣ್ಣೆಗಳಿಂದ ಹೊಡೆದು ಅವರ ಕಾಲುಗಳ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದಿರುವ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.
ಚಂದಾ ಕಾ ತಾಲಾಬ್ ನಿವಾಸಿ ಸುಖಲಾಲ್ ಗುರ್ಜರ್ (40) ಕೊಲೆಗಿಡಾದ ವ್ಯಕ್ತಿ. ಸುಖಲಾಲ್ ಅವರು ಸರ್ಕಾರದ ಗ್ರಾಮೀಣ ಉದ್ಯೋಗ ಯೋಜನೆ (ಎಮ್‍ಜಿಎನ್‍ಆರ್‍ಇಜಿಎ) ಅಡಿಯಲ್ಲಿ ಕಾರ್ಮಿಕರಾಗಿದ್ದರು. ಅರಣ್ಯ ಹುಲ್ಲುಗಾವಲು ಜಾಗವನ್ನು ಆಕ್ರಮಿಸಿಕೊಳ್ಳುವ ಬಗ್ಗೆ ಗುರ್ಜರ್ ಕೆಲವು ಗ್ರಾಮಸ್ಥರೊಂದಿಗೆ ವಿವಾದವನ್ನು ಹೊಂದಿದ್ದರು. ಈ ಹಿನ್ನೆಲೆ ಅವರು ಭಾನುವಾರ ಬೆಳಗ್ಗೆ ತನ್ನ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ಏಳು ತಿಂಗಳ ಹಿಂದೆ ಎರಡು ಕಡೆ ಜಗಳವಾಗಿ ಅವರ ಮೂಳೆ ಮುರಿದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಷಯ ತಿಳಿದ ನಂತರ ಕುಟುಂಬ ಸದಸ್ಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಟಾದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ.
ಒಂಬತ್ತು ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿಗಳನ್ನು ಗುಜರಾಜ್ ಗುರ್ಜರ್ ಮತ್ತು ಭೋಜರಾಜ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಉಳಿದ ಆರೋಪಿಗಳನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.