Tag: Labhu Ram

  • ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ – ಯಾರಿಗೆ ಯಾವ ಪದಕ ಸಿಕ್ಕಿದೆ?

    ರಾಜ್ಯದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ – ಯಾರಿಗೆ ಯಾವ ಪದಕ ಸಿಕ್ಕಿದೆ?

    ಬೆಂಗಳೂರು: ಗಣರಾಜ್ಯೋತ್ಸದ (Republic Day) ಹಿನ್ನೆಲೆ ಪ್ರತಿ ವರ್ಷದಂತೆ ನೀಡುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (President’s Police Medal)ಹಾಗೂ ಪೊಲೀಸ್ ಶ್ಲಾಘನೀಯ ಸೇವಾ ಪದಕ ವಿಜೇತರ ಪಟ್ಟಿ ಪ್ರಕಟವಾಗಿದೆ.

    ಈ ಬಾರಿ ರಾಜ್ಯದ 20 ಜನ ಪೊಲೀಸ್ (Police) ಅಧಿಕಾರಿ ಮತ್ತು ಸಿಬ್ಬಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿಐಡಿ ಎಡಿಜಿಪಿ ಕೆ.ವಿ ಶರತ್ ಚಂದ್ರ (KV Sharath Chandra) ರಾಷ್ಟ್ರಪತಿಯವರ ಸೇವಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್ (Labhu Ram) ಅವರಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ಸಿಕ್ಕಿದೆ. ಇದನ್ನೂ ಓದಿ: ಮತದಾನ ಅಧಿಕಾರ ಮಾತ್ರವಲ್ಲ, ಕರ್ತವ್ಯವೂ ಹೌದು: ಗೆಹ್ಲೋಟ್

    ಪೊಲೀಸ್ ಶ್ಲಾಘನೀಯ ಸೇವಾ ಪದಕ
    ಪೊಲೀಸ್ ಪ್ರಧಾನ ಕಚೇರಿಯ ಡಿವೈಎಸ್ಪಿ ಎಸ್.ನಾಗರಾಜು, ಕರ್ನಾಟಕ ಕಾನೂನು ಪ್ರಾಧಿಕಾರದ ಡಿವೈಎಸ್ಪಿಗಳಾದ ಪಿ ವೀರೆಂದ್ರ ಕುಮಾರ್ ಹಾಗೂ ಪಿ.ಪ್ರಮೋದ್ ಕುಮಾರ್, ಕರ್ನಾಟಕ ಲೋಕಾಯುಕ್ತದ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಆರ್ ಪಾಟೀಲ್, ಎಸ್.ಟಿ‌.ಎಫ್ ಎನ್‌ಕ್ರೋಚ್ಮೆಂಟ್ ಡಿವೈಎಸ್ಪಿ ದೀಪಕ್, ನಗರ ವಿಶೇಷ ವಿಭಾಗದ ಡಿವೈಎಸ್ಪಿ ವಿಜಯ್.ಎಚ್, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್‌ ಬಿ.ಎಸ್.ಮಂಜುನಾಥ್, ಅಶೋಕನಗರ ಸಂಚಾರಿ‌ ಠಾಣಾ ಇನ್ಸ್‌ಪೆಕ್ಟರ್‌ ರಾವ್ ಗಣೇಶ್ ಜನಾರ್ಧನ್, ದಾವಣಗೆರೆ ಸಂಚಾರ ವಿಭಾಗದ ಸರ್ಕಲ್ ಇನ್ಸ್‌ಪೆಕ್ಟರ್‌ ಆರ್.ಪಿ.ಅನಿಲ್, ಬೆಂಗಳೂರು ನಗರ ಸಂಚಾರ ಮತ್ತು ಯೋಜನಾ ವಿಭಾಗದ ಇನ್ಸ್‌ಪೆಕ್ಟರ್‌ ಮನೋಜ್ ಹೋವಳೆ, ಬೆಂಗಳೂರು ಕೆಎಸ್ಆರ್‌ಪಿ ಇನ್ಸ್‌ಪೆಕ್ಟರ್‌ ಬಿ.ಟಿ.ವರದರಾಜು,

    ಬೆಂಗಳೂರು ಕೆಎಸ್ಆರ್‌ಪಿ ಎಆರ್‌ಎಸ್‌ಗಳಾದ ಟಿ.ಎ.ನಾರಾಯಣ್ ರಾವ್, ಎಸ್.ಎಸ್.ವೆಂಕಟರಮಣ ಗೌಡ, ಎಸ್.ಎಂ.ಪಾಟೀಲ್, ಸಿಐಡಿಯ ಹೆಡ್ ಕಾನ್ಸ್‌ಟೇಬಲ್ ಪ್ರಸನ್ನ ಕುಮಾರ್, ತುಮಕೂರು ಸಂಚಾರ ಪಶ್ಚಿಮ ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್ ಪ್ರಭಾಕರ್ ಎಚ್, ಬೆಂಗಳೂರು ಎಸ್.ಸಿ.ಆರ್.ಬಿಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಡಿ.ಸುಧಾ, ಸಿಟಿ ಕಂಟ್ರೋಲ್ ರೂಮ್ ಹೆಡ್ ಕಾನ್ಸ್‌ಟೇಬಲ್ ಟಿ.ಆರ್.ರವಿ ಕುಮಾರ್‌ ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k