Tag: Laapataa Ladies

  • ‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ- ಟೀಕಿಸಿದ ನೆಟ್ಟಿಗರು

    ‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ- ಟೀಕಿಸಿದ ನೆಟ್ಟಿಗರು

    ಟ ಆಮೀರ್ ಖಾನ್ (Aamir Khan) ಮಾಜಿ ಪತ್ನಿ ಕಿರಣ್ ರಾವ್ (Kiran Rao) ನಿರ್ದೇಶಿಸಿದ್ದ ‘ಲಾಪತಾ ಲೇಡಿಸ್’ (Laaapata Ladies) ಚಿತ್ರ 2024ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ ಕೇಳಿ ಬಂದಿದೆ. ಈ ಚಿತ್ರದ ಕಥೆ ಓರಿಜಿನಲ್ ಅಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಇದನ್ನೂ ಓದಿ:ಏ.16ಕ್ಕೆ ಕಾದಿದೆ ಕಿಚ್ಚನಿಂದ ಬಿಗ್‌ ಸರ್ಪ್ರೈಸ್-‌ ಸುದೀಪ್‌ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್‌ ಫಿದಾ

    ‘ಲಾಪತಾ ಲೇಡಿಸ್’ ಚಿತ್ರ ಕಳೆದ ವರ್ಷ ಭಾರೀ ಸಂಚಲನ ಮೂಡಿಸಿದ್ದ ಸಿನಿಮಾ. ಭಾರತದಿಂದ ಆಸ್ಕರ್ ರೇಸ್‌ಗೂ ಈ ಚಿತ್ರ ಅಧಿಕೃತವಾಗಿ ಆಯ್ಕೆ ಆಗಿತ್ತು. ಆದರೆ ಕಡೆಯ ಸುತ್ತಿನಲ್ಲಿ ಆಯ್ಕೆ ಆಗಲು ವಿಫಲವಾಗಿತ್ತು. ಇಷ್ಟೆಲ್ಲಾ ಈ ಚಿತ್ರಕ್ಕೆ ಪ್ರಶಂಸೆ ಸಿಕ್ಕಿರೋ ಬೆನ್ನಲ್ಲೇ ಭಾರೀ ಟೀಕೆಗಳು ಕೇಳಿ ಬರುತ್ತಿವೆ. ಅರೇಬಿಕ್ ಭಾಷೆಯ 2019ರ ‘ಬುರ್ಕಾ ಸಿಟಿ’ ಕಿರುಚಿತ್ರವನ್ನು ಕದ್ದು ‘ಲಾಪತಾ ಲೇಡಿಸ್’ ಚಿತ್ರ ಮಾಡಲಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರಿಂದ ಭಾರೀ ಚರ್ಚೆ ನಡೆಯುತ್ತಿದೆ.

    ಬುರ್ಕಾ ಧರಿಸಿದ್ದ ಕಾರಣದಿಂದ ತನ್ನ ಪತ್ನಿಯನ್ನು ಕರೆದುಕೊಂಡು ಹೋಗುವ ಬದಲು ಬೇರೆ ಮಹಿಳೆಯನ್ನು ಮನೆಗೆ ಕರೆದುಕೊಂಡು ಬರುವ ಕಥೆಯನ್ನು ‘ಬುರ್ಕಾ ಸಿಟಿ’ (Burqa City) ಕಿರುಚಿತ್ರದಲ್ಲಿ ತೋರಿಸಲಾಗಿದೆ. ಇದೇ ಕಥೆಯ ಎಳೆಯನ್ನು ಇಟ್ಟುಕೊಂಡು ‘ಲಾಪತಾ ಲೇಡಿಸ್’ ಚಿತ್ರದಲ್ಲಿಯೂ ತೋರಿಸಲಾಗಿದೆ ಎಂದು ಚಿತ್ರತಂಡದ ಮೇಲೆ ನೆಟ್ಟಿಗರು ದೂರಿದ್ದಾರೆ. ಇದನ್ನೂ ಓದಿ:ಗೋಲ್ಡ್ ರಾಣಿಗೆ ಮತ್ತೆ ಶಾಕ್ ಕೊಟ್ಟ ಪತಿ – ವಿಚ್ಛೇದನಕ್ಕೆ ಅರ್ಜಿ

    ಆಮೀರ್ ಖಾನ್ ನಿರ್ಮಾಣದ ‘ಲಾಪತಾ ಲೇಡೀಸ್’ ತೆರೆಗೆ ಬಂದಾಗ ನಾಯಕ-ನಾಯಕಿಯ ಪಾತ್ರಗಳ ಜೊತೆಯಲ್ಲಿ ರವಿಕಿಶನ್ ಅವರ ಪಾತ್ರ ಗಮನ ಸೆಳೆದಿತ್ತು. ಇವರದ್ದು ಇಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ರವಿಕಿಶನ್ ಅವರ ಪಾತ್ರವನ್ನೇ ಹೋಲುವಂತಹ ಪೊಲೀಸ್ ಪಾತ್ರವು ಕೂಡ ‘ಬುರ್ಕಾ ಸಿಟಿ’ ಕಿರುಚಿತ್ರದಲ್ಲಿ ಕೂಡ ಇದೆ. ಹಾಗಾಗಿ ಈ ಚಿತ್ರವನ್ನು ಕಾಪಿ ಮಾಡಿದ್ದಾರೆ ಎಂದೇ ನೆಟ್ಟಿಗರು ಟೀಕೆ ಮಾಡ್ತಿದ್ದಾರೆ.

    ಆದರೆ ಈ ಕಥೆ ಕದ್ದ ಆರೋಪಕ್ಕೆ ನಿರ್ದೇಶಕಿ ಕಿರಣ್ ರಾವ್ ಆಗಲಿ, ಆಮೀರ್ ಖಾನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಸ್ಪಷ್ಟನೆ ನೀಡ್ತಾರಾ‌ ಎಂದು ಕಾಯಬೇಕಿದೆ.

  • Oscar 2025: ಆಸ್ಕರ್‌ ಅಂಗಳಕ್ಕೆ ಧುಮುಕಿದ ಆಮೀರ್‌ ಖಾನ್‌ ನಿರ್ಮಾಣದ ‘ಲಾಪತಾ ಲೇಡಿಸ್’ ಚಿತ್ರ

    Oscar 2025: ಆಸ್ಕರ್‌ ಅಂಗಳಕ್ಕೆ ಧುಮುಕಿದ ಆಮೀರ್‌ ಖಾನ್‌ ನಿರ್ಮಾಣದ ‘ಲಾಪತಾ ಲೇಡಿಸ್’ ಚಿತ್ರ

    ಸ್ಕರ್ ಅವಾರ್ಡ್‌ ಕಾರ್ಯಕ್ರಮದ ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಸಿಕ್ಕಿದೆ. ಕಿರಣ್ ರಾವ್ ಚೊಚ್ಚಲ ನಿರ್ದೇಶನದ ಬಾಲಿವುಡ್ ಸಿನಿಮಾ ‘ಲಾಪತಾ ಲೇಡಿಸ್’ (Laapataa Ladies) ಚಿತ್ರ 2025ರ ಆಸ್ಕರ್‌ಗೆ (Oscar 2025) ನಾಮ ನಿರ್ದೇಶನಗೊಂಡಿದೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಮತ್ತೆ ಬಾತ್‌ರೂಮ್ ರೀಲ್ಸ್ ಶೇರ್ ಮಾಡಿದ ನಿವೇದಿತಾ ಗೌಡ

    ಆಮೀರ್‌ ಖಾನ್‌ ನಿರ್ಮಾಣದ ಮತ್ತು ಕಿರಣ್‌ ರಾವ್‌ ನಿರ್ದೇಶನದ ‘ಲಾಪತಾ ಲೇಡಿಸ್‌’ ಚಿತ್ರವು ಭಾರತವನ್ನು ಪ್ರತಿನಿಧಿಸಿ ಆಸ್ಕರ್‌ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಇದರ ಜೊತೆಗೆ 29 ಸಿನಿಮಾಗಳು 2025ರ ಆಸ್ಕರ್‌ ರೇಸ್‌ನಲ್ಲಿವೆ. ಹನುಮಾನ್‌, ಕಲ್ಕಿ 2898 ಎಡಿ, ಅನಿಮಲ್ ಸಿನಿಮಾ, ಗುಡ್‌ ಲಕ್‌, ಆರ್ಟಿಕಲ್‌ 370, ಆಟ್ಟಂ, ಆಡುಜೀವಿತಂ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿವೆ.

    ಕಳೆದ ವರ್ಷ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್‌ ಪ್ರಶಸ್ತಿ ಲಭಿಸಿತ್ತು.