Tag: laal singh chaddha

  • 32 ವರ್ಷಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಓಪನ್

    32 ವರ್ಷಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಓಪನ್

    ಶ್ರೀನಗರ: 32 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಮಲ್ಟಿಪ್ಲೆಕ್ಸ್ (Multiplex) ಚಿತ್ರಮಂದಿರಗಳು (Cinema Halls) ಉದ್ಘಾಟನೆಗೊಂಡಿದ್ದು, ಇದೇ ಸೆಪ್ಟೆಂಬರ್ 20 ರಿಂದ ಆಮೀರ್ ಖಾನ್ ನಟನೆಯ ಲಾಲ್‌ಸಿಂಗ್ ಚಡ್ಡಾ (Laal Singh Chaddha) ಸಿನಿಮಾದೊಂದಿಗೆ ಪ್ರದರ್ಶನ ಆರಂಭವಾಗಲಿದೆ.

    ಜಮ್ಮು ಮತ್ತು ಕಾಶ್ಮೀರದ ಸರ್ಕಾರದ ಯುವ ಸಬಲೀಕರಣ (Youth Empowerment Department) ಇಲಾಖೆ ಹಾಗೂ ಜಿಲ್ಲಾಡಳಿದ ಸಹಯೋಗದೊಂದಿಗೆ ಚಿತ್ರಮಂದಿರಗಳನ್ನು ಸ್ಥಾಪನೆ ಮಾಡುವ ವಿವಿಧೊದ್ದೇಶ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದರ ಭಾಗವಾಗಿ ಇದೇ ಸೆಪ್ಟೆಂಬರ್ 20ರಿಂದಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿ ಪ್ರದರ್ಶನ ಆರಂಭಿಸಲಾಗುತ್ತಿದೆ. ಇದನ್ನೂ ಓದಿ: ಬೇಬಿ ಬಂಪ್‌ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ಬಿಪಾಶಾ ಬಸು

    ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಅವರಿಂದು ದಕ್ಷಿಣ ಕಾಶ್ಮೀರದ ಅವಳಿ ಜಿಲ್ಲೆಗಳಾದ ಪುಲ್ವಾಮಾ (Pulwama) ಮತ್ತು ಶೋಪಿಯಾನ್‌ನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಉದ್ಘಾಟಿಸಿದರು. ಅಲ್ಲದೇ ಇಲ್ಲಿನ ಅನಂತನಾಗ್, ಶ್ರೀನಗರ, ಬಂಡಿಪೋರಾ, ಗಂದರ್‌ಬಾಲ್, ದೋಡಾ, ರಾಜೌರಿ, ಪೂಂಚ್, ಕಿಶ್ತ್ವಾರ್ ಮತ್ತು ರಿಯಾಸಿ ಜಿಲ್ಲೆಗಳಲ್ಲೂ ಚಿತ್ರಮಂದಿರಗಳು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ಬಳಿಕ ಮಾತನಾಡಿದ ಮನೋಜ್ ಸಿನ್ಹಾ (Manoj Sinha), ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಹೊಸ ಚಿತ್ರಮಂದಿರಗಳು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಜೊತೆಗೆ ಯುವಕರಿಗೆ ಸಿನಿಮಾ ತರಬೇತಿ ಹಾಗೂ ವಿಚಾರ ಸಂಕಿರಣಗಳಿಗೆ ಸ್ಥಳಾವಕಾಶ ಒದಗಿಸಿದಂತೆಯೂ ಆಗುತ್ತದೆ. ಅದಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    1980ರ ದಶಕದಲ್ಲಿ ಸುಮಾರು 12 ಚಿತ್ರಮಂದಿರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಭಯೋತ್ಪಾದಕರ ಬೆದರಿಕೆಗಳಿಂದ ಅವುಗಳ ಕಾರ್ಯ ಸ್ಥಗಿತಗೊಂಡಿತು. 1990ರ ದಶಕದ ಉತ್ತರಾರ್ಧದಲ್ಲಿ ಅಧಿಕಾರಿಗಳು ಕೆಲವು ಚಿತ್ರಮಂದಿರಗಳನ್ನು ಪುನರಾರಂಭಿಸಲು ಪ್ರಯತ್ನಿಸಿದರು. ಆದರೆ 1999ರಲ್ಲಿ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿ ಆ ಪ್ರಯತ್ನಕ್ಕೂ ಕಲ್ಲು ಹಾಕಿತು. ಇದೀಗ ಮತ್ತೆ ಚಿತ್ರಮಂದಿರಗಳು ತಲೆ ಎತ್ತುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಮುಂಬೈ: ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನವೇ `ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನೂ ರಿಲೀಸ್ ಮಾಡುತ್ತಿರುವುದಕ್ಕೆ ಅಮೀರ್ ಖಾನ್ ಕೆಜಿಎಫ್‍ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್‍ಗೆ ಟೆಕ್ಟ್ಸ್ ಮೆಸೇಜ್ ಮಾಡಿ ಕ್ಷಮೆ ಕೇಳಿದ್ದಾರೆ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಮೀರ್, ನಾನು ಬೇರೆಯವರನ್ನು ಅತಿಕ್ರಮಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸೃಷ್ಟಿ ಆಗುವುದನ್ನು ದ್ವೇಷಿಸ್ತೇನೆ. ಆದರೆ ನಾನು ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಏಪ್ರಿಲ್ 14ರಂದು ಬೈಸಾಖಿ ದಿನ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎಂದು ಭಾವಿಸಿದ್ದೆ. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕ ಪ್ರಶಾಂತ್‌ ನೀಲ್ ಮತ್ತು ಯಶ್ ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್!

    ಬೈಸಾಖಿ ದಿನ ನನ್ನ ಸಿನಿಮಾ ಬಿಡುಗಡೆಯಾದರೆ ಸೂಕ್ತ ಎಂದು ಅವರಿಗೆ ತಿಳಿಸಿದೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರ ಸಿನಿಮಾ ರಿಲೀಸ್ ಇದ್ದರೂ ಅದೇ ನೀವು ಸಿನಿಮಾ ಬಿಡುಗಡೆ ಮಾಡಿ ಎಂದು ನನಗೆ ಹೇಳಿದರು. ಅವರ ಸ್ಪಂದನೆ ನನಗೆ ಇಷ್ಟ ಆಯಿತು. ನನ್ನ ಯೋಚನೆಗೆ ಯಶ್ ತುಂಬಾನೇ ಬೆಂಬಲವಾಗಿ ನಿಂತರು ಎಂದು ಅಮೀರ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ಸಾಮಾನ್ಯವಾಗಿ ಅಮೀರ್ ಖಾನ್ ಸಿನಿಮಾಗಳು ಕ್ರಿಸ್‍ಮಸ್ ರಜೆಗೆ ರಿಲೀಸ್ ಆಗುತ್ತಿತ್ತು. ಆದರೆ ಕ್ರಿಸ್‍ಮಸ್ ಬದಲು ಏಪ್ರಿಲ್‍ನಲ್ಲಿ ಕೆಜಿಎಫ್ ಜೊತೆಗೆ ರಿಲೀಸ್ ಆಗುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೋವಿಡ್ ಕಾರಣದಿಂದ ಕ್ರಿಸ್‍ಮಸ್‍ಗೆ ರಿಲೀಸ್ ಮಾಡುವುದು ಬೇಡ ಎಂದು ಲಾಲ್ ಸಿಂಗ್ ಚಡ್ಡಾ ಸಿನಿಮಾ ತಂಡ ನಿರ್ಧರಿಸಿತ್ತು. ಈ ನಡುವೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾರ್ಚ್ 14ಕ್ಕೆ ಮೊದಲು ಮುಗಿಯುವುದು ಕಷ್ಟವಾಗಿತ್ತು. ಹೀಗಾಗಿ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಮಾಡೋಣ ಎಂದು ಲಾಲ್‍ಸಿಂಗ್ ಚಡ್ಡಾ ಸಿನಿಮಾ ತಂಡ ನಿರ್ಧರಿಸಿದೆ.

  • ಕೆಜಿಎಫ್ 2, ಲಾಲ್ ಸಿಂಗ್ ಚಡ್ಡಾ ಒಂದೇ ದಿನ ರಿಲೀಸ್

    ಕೆಜಿಎಫ್ 2, ಲಾಲ್ ಸಿಂಗ್ ಚಡ್ಡಾ ಒಂದೇ ದಿನ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹು ನೀರಿಕ್ಷತ ಸಿನಿಮಾ ಕೆಜಿಎಫ್ 2 ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಒಂದೇ ದಿನ ತೆರೆ ಮೇಲೆ ಬರುತ್ತವೆ ಎನ್ನುವ ಮೂಲಕವಾಗಿ ಸುದ್ದಿಯಾಗಿದೆ.

    ಕೆಜಿಎಫ್ 2 ಚಿತ್ರ ಮತ್ತು ಲಾಲ್ ಸಿಂಗ್ ಚಡ್ಡಾ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತಿದ್ದು, ಎರಡೂ ಚಿತ್ರಗಳ ನಡುವೆ ಪೈ ಪೋಟಿ ಆಗುವುದು ನಿಸ್ಛಯವಾಗಿದೆ. ಕೆಜಿಎಫ್ 2, ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗಲಿರುವುದು ವಿಶೇಷ. ಮುಂದಿನ ವರ್ಷ ಏಪ್ರಿಲ್ 14 ರಂದು ತೆರೆ ಮೇಲೆ ಬರುವುದಾಗಿ 2 ಸಿನಿಮಾ ತಂಡಗಳು ಘೋಷಿಸಿದೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

    ದೊಡ್ಡ ಸ್ಟಾರ್ ನಟರ ಚಿತ್ರಗಳು ಒಟ್ಟಿಗೆ ಬಿಡುಗಡೆ ಆಗುವುದು ದೊಡ್ಡ ವಿಷಯವೇನಲ್ಲ. ಕೆಲವೊಮ್ಮೆ ಜೊತೆ ಜೊತೆಯಲ್ಲೇ ಬಿಡುಗಡೆ ಆದ ಎರಡು ದೊಡ್ಡ ಚಿತ್ರಗಳೂ ದೊಡ್ಡ ಹಿಟ್ ಆದ ಉದಾಹರಣೆಗಳೂ ಸಾಕಷ್ಟಿವೆ. ಸಿನಿಮಾ ಅಭಿಮಾನಗಳು ಯಾರ ಕೈ ಹಿಡಿಯಲಿದ್ದಾರೆ ಎನ್ನುವದು ಮಾತ್ರ ಮುಂದಿನ ವರ್ಷ ಏಪ್ರಿಲ್ 14 ರಂದು ತಿಳಿಯಲಿದೆ.

    ಕರೀನಾ ಕಪೂರ್ ಅವರು ತಮ್ಮ ಸಿನಿಮಾ ಲಾಲ್ ಸಿಂಗ್ ಚಡ್ಡಾ ಚಿತ್ರದ ಹೊಸ ರಿಲೀಸ್ ದಿನಾಂಕವನ್ನು ಖುಷಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಹೊಸ ಪೋಸ್ಟರ್ ಸಹ ಶೇರ್ ಮಾಡಿದ್ದಾರೆ. ಅಮೀರ್ ಖಾನ್ ಅಭಿನಯದ ಈ ಚಿತ್ರ ಬಿಡುಗಡೆ ಆದಾಗ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಪ್ರಮುಖ ಥಿಯೇಟರ್‌ಗಳಿಗೆ ಬರುತ್ತದೆ. ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಕೆಜಿಎಫ್ ಸಿನಿಮಾ ಕೂಡಾ ಅಂದೇ ತೆರೆ ಮೇಲೆ ಬರಲಿದೆ.