Tag: Laal Salaam

  • ರಜನಿ ನಟನೆಯ ‘ಲಾಲ್‍ ಸಲಾಂ’ಗೆ ಮಿಶ್ರ ಪ್ರತಿಕ್ರಿಯೆ

    ರಜನಿ ನಟನೆಯ ‘ಲಾಲ್‍ ಸಲಾಂ’ಗೆ ಮಿಶ್ರ ಪ್ರತಿಕ್ರಿಯೆ

    ಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಸಿನಿಮಾದಲ್ಲಿ ರಜನಿ ಸಖತ್ ಸ್ಟೈಲೀಶ್ ಆಗಿ ಕಂಡಿದ್ದಾರೆ. ಖಡಕ್ ಡೈಲಾಗ್ ಹೊಡೆದಿದ್ದಾರೆ. ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ, ಅಂದುಕೊಂಡಷ್ಟು ಚಿತ್ರಕ್ಕೆ ಮೊದಲ ದಿನ ಪ್ರತಿಕ್ರಿಯೆ ನೀಡಿಲ್ಲ.  ಮೊದಲ ದಿನ ಗಳಿಕೆ (Box Office) ನಾಲ್ಕುವರೆ ಕೋಟಿ ಎಂದು ಅಂದಾಜಿಸಲಾಗಿದೆ.

    ಜೈಲರ್’ ಅಭೂತಪೂರ್ವ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಲಾಂ’ (Lal Salaam) ರಿಲೀಸ್ ಆಗುತ್ತಿರುವುದಕ್ಕೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ನಿರ್ದೇಶಿಸಿದ್ದಾರೆ. ಸ್ಪೋರ್ಟ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಘ್ನೇಶ್, ಲಿವಿಂಗ್ಸ್ಟನ್, ಸೆಂಥಿಲ್, ಜೀವಿತಾ, ಕೆ.ಎಸ್. ರವಿಕುಮಾರ್ ಮತ್ತು ತಂಬಿ ರಾಮಯ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

    ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಲಾಲ್ ಸಲಾಂ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಗೆ ಮಾಂತ್ರಿಕ ಎ. ಆರ್. ರೆಹಮಾನ್  ಸಂಗೀತ ಸಂಯೋಜನೆ, ವಿಷ್ಣು ರಂಗಸಾಮಿ ಛಾಯಾಗ್ರಹಣ ಮತ್ತು ಬಿ. ಪ್ರವೀಣ್ ಭಾಸ್ಕರ್ ಸಂಕಲನ ಒಳಗೊಂಡಿದೆ.

     

    ಲಾಲ್‌ ಸಲಾಂ ಚಿತ್ರವನ್ನು ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್‌ ನಿರ್ಮಿಸಿದ್ದು, ತಮಿಳುನಾಡಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಹಕ್ಕನ್ನು ರೆಡ್ ಜೈಂಟ್ ಸಂಸ್ಥೆ ಪಡೆದುಕೊಂಡಿದೆ. ಕನ್ನಡ, ತೆಲುಗು, ಹಿಂದಿ ಜತೆಗೆ ಮಲಯಾಳಂನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಿದೆ. ಅಂದಹಾಗೇ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಇದು 3ನೇ ಸಿನಿಮಾ.

  • ರಜನಿ ಅಭಿಮಾನಿಗಳಿಗೆ ನಿರಾಸೆ : ಸಂಕ್ರಾಂತಿಗೆ ಬರ್ತಿಲ್ಲ ‘ಲಾಲ್ ಸಲಾಂ’

    ರಜನಿ ಅಭಿಮಾನಿಗಳಿಗೆ ನಿರಾಸೆ : ಸಂಕ್ರಾಂತಿಗೆ ಬರ್ತಿಲ್ಲ ‘ಲಾಲ್ ಸಲಾಂ’

    ‘ಜೈಲರ್’ ಅಭೂತಪೂರ್ವ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಲಾಂ’ (Laal Salaam) . ಈ ಚಿತ್ರವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ನಿರ್ದೇಶಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ತರುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದ್ರೀಗ ಲಾಲ್ ಸಲಾಂ ಬಿಡುಗಡೆ ಪೋಸ್ಟ್ ಪೋನ್ ಆಗಿದೆ.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಂಕ್ರಾಂತಿ ಹಬ್ಬಕ್ಕೆ ತಲೈವಾ ಸಿನಿಮಾ ಎಂಟ್ರಿ ಕೊಡಬೇಕಿತ್ತು. ಆದ್ರೀಗ ಫೆಬ್ರವರಿ 9ರಂದು ಲಾಲ್ ಸಲಾಂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸ್ಪೋರ್ಟ್ ಡ್ರಾಮಾ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಘ್ನೇಶ್, ಲಿವಿಂಗ್ಸ್ಟನ್, ಸೆಂಥಿಲ್, ಜೀವಿತಾ, ಕೆ.ಎಸ್. ರವಿಕುಮಾರ್ ಮತ್ತು ತಂಬಿ ರಾಮಯ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

    ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಕೂಡ ಲಾಲ್ ಸಲಾಂ ಸಿನಿಮಾದ ಭಾಗವಾಗಿದ್ದಾರೆ. 2022 ನವೆಂಬರ್ ನಲ್ಲಿ ಟೈಟಲ್ ರಿವೀಲ್ ಮಾಡಲಾಯಿತು. ಆ ನಂತರ 2023ರ ಮಾರ್ಚ್ ನಲ್ಲಿ ಶೂಟಿಂಗ್ ಆರಂಭ ಮಾಡಲಾಯಿತು. ಆಗಸ್ಟ್ 2023ರಲ್ಲಿ ಚಿತ್ರೀಕರಣ ಮುಕ್ತಾಯವಾಗಿತು. ಲಾಲ್ ಸಲಾಂ ಸಿನಿಮಾಗೆ ಮಾಂತ್ರಿಕ ಎ. ಆರ್. ರೆಹಮಾನ್  ಸಂಗೀತ ಸಂಯೋಜನೆ, ವಿಷ್ಣು ರಂಗಸಾಮಿ ಛಾಯಾಗ್ರಹಣ ಮತ್ತು ಬಿ. ಪ್ರವೀಣ್ ಭಾಸ್ಕರ್ ಸಂಕಲನ ಒಳಗೊಂಡಿದೆ.

    ಲಾಲ್‌ ಸಲಾಂ ಚಿತ್ರವನ್ನು ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ನ ಸುಭಾಸ್ಕರನ್‌ ನಿರ್ಮಿಸಿದ್ದು, ತಮಿಳುನಾಡಿನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಹಕ್ಕನ್ನು ರೆಡ್ ಜೈಂಟ್ ಸಂಸ್ಥೆ ಪಡೆದುಕೊಂಡಿದೆ. ಕನ್ನಡ, ತೆಲುಗು, ಹಿಂದಿ ಜತೆಗೆ ಮಲಯಾಳಂನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೇ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಇದು 3ನೇ ಸಿನಿಮಾ.

  • ರಜನಿ ನಟನೆಯ ಮತ್ತೊಂದು ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ರಜನಿ ನಟನೆಯ ಮತ್ತೊಂದು ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ಜೈಲರ್ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ರಜನಿ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ (Release) ಸಿದ್ಧವಾಗಿದೆ. ಲಾಲ್ ಸಲಾಂ ಹೆಸರಿನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸ್ವತಃ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಜನಿಕಾಂತ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದ್ದು, ಈ ಚಿತ್ರದಲ್ಲಿ ರಜನಿಕಾಂತ್ (Rajinikanth) ಕೂಡ ಪಾತ್ರ ಮಾಡಿದ್ದಾರೆ.  ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ (Lal Salam) ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀದಿದ್ದಾರೆ. ಮೊನ್ನೆಯಷ್ಟೇ ಈ  ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ

    ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜಿನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಭರ್ಜರಿಯಾಗಿ ನಡೆದಿತ್ತು.

     

    1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಲಾಲ್ ಸಲಾಂ’ ಶೂಟಿಂಗ್ ಮುಗಿಸಿದ ಐಶ್ವರ್ಯಾ ರಜನಿಕಾಂತ್

    ‘ಲಾಲ್ ಸಲಾಂ’ ಶೂಟಿಂಗ್ ಮುಗಿಸಿದ ಐಶ್ವರ್ಯಾ ರಜನಿಕಾಂತ್

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರ ಐಶ್ಯರ್ಯಾ (Aishwarya Rajinikanth) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲಾಲ್ ಸಲಾಂ’ ಸಿನಿಮಾದ ಬಹುತೇಕ ಶೂಟಿಂಗ್ (Shooting) ಮುಗಿದಿದೆ. ಕೊನೆಯ ದಿನದ ಚಿತ್ರೀಕರಣ ಮುಗಿಸಿದ ಐಶ್ವರ್ಯಾ ತಮ್ಮ ತಂಡದ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದ್ದು, ಈ ಚಿತ್ರದಲ್ಲಿ ರಜನಿಕಾಂತ್ (Rajinikanth) ಕೂಡ ಪಾತ್ರ ಮಾಡಿದ್ದಾರೆ.  ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ (Lal Salam) ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀದಿದ್ದಾರೆ. ಮೊನ್ನೆಯಷ್ಟೇ ಈ  ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಆಗಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜಿನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದರು. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಭರ್ಜರಿಯಾಗಿ ನಡೆದಿತ್ತು.

     

    1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]