Tag: L2: Empuraan

  • L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

    L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

    – 2022ರ ದಾಳಿಗೆ ಸಂಬಂಧಿಸಿದಂತೆ ನೋಟಿಸ್

    ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ಬ್ಲಾಕ್‌ ಬಸ್ಟರ್‌ ಸಿನಿಮಾ ಎಲ್‌2: ಎಂಪುರಾನ್‌ (L2: Empuraan) ವಿವಾದದ ಸುಳಿಯಲ್ಲಿ ಸಿಲುಕಿದ ಬೆನ್ನಲ್ಲೇ ಇದೀಗ ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ (Prithviraj Sukumaran) ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ ಎಂದು ವರದಿಯಾಗಿದೆ.

    ಒಂದು ದಿನದ ಹಿಂದಷ್ಟೇ ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಚೆನ್ನೈ ಮತ್ತು ಕೊಚ್ಚಿಯಲ್ಲಿರುವ ಶ್ರೀ ಗೋಕುಲಂ ಚಿಟ್ಸ್ ಮತ್ತು ಫೈನಾನ್ಸ್‌ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ವಿದೇಶಿ ವಿನಿಮಯದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಅನುಮಾನದಡಿ ಗೋಪಾಲನ್ ಅವರ ವಿಚಾರಣೆಯನ್ನು ಮಾಡಿದ್ದರು. ಈ ಬೆನ್ನಲ್ಲೇ ನಿರ್ದೇಶಕ ಪೃಥ್ವಿರಾಜ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ.

    ಮಾರ್ಚ್ ಕೊನೆಯ ವಾರದಲ್ಲಿ ಅಂದ್ರೆ ಚಿತ್ರ ಬಿಡುಗಡೆಯಾದ 2-3 ದಿನದಲ್ಲಿಯೇ ಪೃಥ್ವಿರಾಜ್‌ಗೆ ಐಟಿ ಇಲಾಖೆ ನೋಟಿಸ್ ನೀಡಿದ್ದು ಈ ಹಿಂದೆ ಪೃಥ್ವಿರಾಜ್ ನಿರ್ಮಾಣದ ಚಿತ್ರಗಳ ಆದಾಯದ ಕುರಿತು ಲೆಕ್ಕವನ್ನು ನೀಡುವಂತೆ ಕೇಳಿದೆ. ಏಪ್ರಿಲ್‌ ಅಂತ್ಯದೊಳಗೆ ಕಳೆದ ಮೂರು ಸಿನಿಮಾಗಳ ಸಂಭಾವನೆಯ ಲೆಕ್ಕ ನೀಡುವಂತೆ ಗಡುವು ನೀಡಿದೆ ಎಂದು ವರದಿಗಳು ತಿಳಿಸಿವೆ.

    2022ರ ದಾಳಿಗೆ ಸಂಬಂಧಿಸಿದಂತೆ ನೋಟಿಸ್‌
    ಡಿಸೆಂಬರ್ 2022ರಲ್ಲಿ ಮಲಯಾಳಂ ಚಿತ್ರರಂಗದ ಅನೇಕ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ವಂಚನೆ, ವಿದೇಶಗಳಲ್ಲಿನ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯನ್ನು ಅನೇಕರು ಮಾಡಿದ್ದಾರೆ ಎಂದು ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಪೃಥ್ವಿರಾಜ್ ಸುಕುಮಾರನ್ ಮನೆ ಮತ್ತು ಕಚೇರಿಯನ್ನು ಕೂಡ ಆಗ ಪರಿಶೀಲಿಸಿದ್ದರು. ಆ ತನಿಖೆಯ ಮುಂದುವರೆದ ಭಾಗವಾಗಿ ಈಗ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಐಟಿ ಇಲಾಖೆ ಇನ್ನೊಮ್ಮೆ ನೋಟಿಸ್ ಕಳುಹಿಸಿದೆ ಎಂದು ತಿಳಿದುಬಂದಿದೆ.

    ಇತ್ತೀಚೆಗಷ್ಟೇ ಎಂಪುರಾನ್‌ ಚಿತ್ರದ ಭಾರೀ ವಿವಾದಕ್ಕೀಡಾಗಿತ್ತು. ಗುಜರಾತ್‌ ಗಲಭೆಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ 24 ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿತ್ತು.

  • L2: Empuraan | 17 ದೃಶ್ಯಗಳಿಗೆ ಕತ್ತರಿ – ಅಭಿಮಾನಿಗಳಿಗೆ ಕ್ಷಮೆಯಾಚಿಸಿದ ಮೋಹನ್‌ ಲಾಲ್‌

    L2: Empuraan | 17 ದೃಶ್ಯಗಳಿಗೆ ಕತ್ತರಿ – ಅಭಿಮಾನಿಗಳಿಗೆ ಕ್ಷಮೆಯಾಚಿಸಿದ ಮೋಹನ್‌ ಲಾಲ್‌

    – ಗುಜರಾತ್‌ ಗಲಭೆ ಉಲ್ಲೇಖ – ವಿವಾದದ ಸುಳಿಯಲ್ಲಿ ಎಂಪುರಾನ್‌

    ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ L2: ಎಂಪುರಾನ್ (L2: Empuraan) ಸಿನಿಮಾ ತೆರೆ ಕಂಡ 3ನೇ ದಿನವೇ ವಿವಾದ ಸುಳಿಯಲ್ಲಿ ಸಿಲುಕಿದೆ. ಇದರಿಂದ ಎಚ್ಚೆತ್ತ ಚಿತ್ರತಂಡ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ. ಈ ಬೆನ್ನಲ್ಲೇ ನಾಯಕ ನಟ ಮೋಹನ್‌ ಲಾಲ್‌ (Mohan Lal) ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.

    ಹೌದು. ಮಾರ್ಚ್ 27ರಂದು ತೆರೆ ಕಂಡ ಮೋಹನ್ ಲಾಲ್, ಪೃಥ್ವಿರಾಜ್‌ ಸುಕುಮಾರನ್‌ (Prithviraj Sukumaran) ಅಭಿನಯದ ಎಲ್2: ಎಂಪುರಾನ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ ಆದ 2ನೇ ದಿನದಲ್ಲಿ 100 ಕೋಟಿ ಬಾಚಿಕೊಂಡಿದ್ದು, ಬಾಕ್ಸ್‌ ಆಫೀಸ್‌ ಸೇರಿದೆ. ಸದ್ಯ ಈ ಸಿನಿಮಾದಲ್ಲಿ 2002ರ ಗುಜರಾತ್ ಗಲಭೆಯನ್ನು (2002 Gujarat Riots) ಉಲ್ಲೇಖ ಮಾಡಲಾಗಿದೆ. ಜೊತೆಗೆ ಈ ಘಟನೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋಹನ್‌ ಲಾಲ್‌ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.

    L2: ಎಂಪುರಾನ್ ಚಿತ್ರದಿಂದ ಅಭಿಮಾನಿಗಳಿಗೆ ಉಂಟಾದ ನೋವಿಗೆ ನಾನು ಕ್ಷಮೆ ಕೋರುತ್ತೇನೆ. ಕೆಲ ದೃಶ್ಯಗಳಲ್ಲಿ ಗುಜರಾತ್‌ ಗಲಭೆಯ ಉಲ್ಲೇಖ ಮಾಡಲಾಗಿದೆ ಎಂಬ ಕಾರಣಕ್ಕೆ ಚಿತ್ರತಂಡವು 17 ದೃಶ್ಯಗಳನ್ನು ತೆಗೆದುಹಾಕಲು ನಿರ್ಧರಿಸಿದೆ.

    ಲೂಸಿಫರ್‌ನ 2ನೇ ಭಾಗವಾದ ಎಂಪುರಾನ್ ಚಿತ್ರದಲ್ಲಿ ಹೊರಹೊಮ್ಮಿದ ಕೆಲವು ರಾಜಕೀಯ, ಸಾಮಾಜಿಕ ವಿಷಯಗಳು ನನ್ನ ಅನೇಕ ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಕಲಾವಿದನಾಗಿ ನನ್ನ ಯಾವುದೇ ಚಲನಚಿತ್ರಗಳು ರಾಜಕೀಯ ಚಳವಳಿ, ಪರಿಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷ ಭಾವನೆ ಮೂಡಿಸದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಹಾಗಾಗಿ ಎಂಪುರಾನ್‌ ತಂಡದ ಪರವಾಗಿ ನನ್ನ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಈ ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಹಾಗಾಗಿ ಧಕ್ಕೆ ತರುವ ಕೆಲ ದೃಶ್ಯಗಳನ್ನು ತೆಗೆದುಹಾಕಲು ತಂಡ ನಿರ್ಧರಿಸಿದೆ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಆರೋಪ ಏನು?
    L2: ಎಂಪುರಾನ್‌ ಚಿತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗುಜರಾತ್‌ ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳನ್ನು ಪ್ರಯೋಗಿಸಲಾಗಿದೆ. ಈ ದೃಶ್ಯಗಳಲ್ಲಿ ಗುಜರಾತ್‌ ಗಲಭೆಯನ್ನು ತಿರುಚಲಾಗಿದೆ ಹಾಗೂ ಬಾಬಾ ಬಜರಂಗಿ ಹೆಸರನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಚಿತ್ರತಂಡ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ. ನಿರ್ದೇಶಕ, ನಟ-ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಸಹ ಇದಕ್ಕೆ ಒಪ್ಪಿದ್ದಾರೆ ಅಂತ ತಿಳಿದುಬಂದಿದೆ.

    ರಾಜೀವ್‌ ಚಂದ್ರಶೇಖರ್‌ ಅಸಮಾಧಾನ
    ಸದ್ಯ ಚಿತ್ರತಂಡದ ವಿರುದ್ಧ ಬಿಜೆಪಿ ಪ್ರತಿಭಟನೆ ಕೈಬಿಟ್ಟಿದ್ದರೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನು ಲೂಸಿಫರ್ ಚಿತ್ರ ನೋಡಿದ್ದೇನೆ ಮತ್ತು ಅದನ್ನು ಇಷ್ಟಪಟ್ಟಿದ್ದೇನೆ. ನಾನು ಎಂಪುರಾನ್ ಚಿತ್ರವನ್ನು ಲೂಸಿಫರ್‌ನ ಮುಂದುವರಿದ ಭಾಗ ಎಂದು ಕೇಳಿದಾಗ ನೋಡುತ್ತೇನೆ ಎಂದು ಹೇಳಿದ್ದೆ. ಆದ್ರೆ ಈಗ ಚಿತ್ರದ ನಿರ್ಮಾಪಕರು ಸ್ವತಃ ಚಲನಚಿತ್ರದಲ್ಲಿ 17 ತಿದ್ದುಪಡಿಗಳನ್ನು ಮಾಡಿದ್ದಾರೆ ಮತ್ತು ಚಲನಚಿತ್ರವನ್ನು ಮರು-ಸೆನ್ಸಾರ್ಶಿಪ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿದೆ. ಮೋಹನ್‌ಲಾಲ್ ಅಭಿಮಾನಿಗಳು ಮತ್ತು ಇತರ ವೀಕ್ಷಕರನ್ನು ತೊಂದರೆಗೀಡುಮಾಡುವ ವಿಷಯಗಳು ಚಿತ್ರದಲ್ಲಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಚಲನಚಿತ್ರವನ್ನು ಚಲನಚಿತ್ರವಾಗಿ ನೋಡಬೇಕು. ಅದನ್ನು ಇತಿಹಾಸವಾಗಿ ನೋಡಲಾಗುವುದಿಲ್ಲ. ಅಲ್ಲದೇ, ಸತ್ಯವನ್ನು ತಿರುಚಿ ಕಥೆಯನ್ನು ನಿರ್ಮಿಸಲು ಪ್ರಯತ್ನಿಸುವ ಯಾವುದೇ ಚಲನಚಿತ್ರವು ವಿಫಲಗೊಳ್ಳುತ್ತದೆ. ಹಾಗಾಗಿ, ನಾನು ಲೂಸಿಫರ್‌ನ ಈ ಸೀಕ್ವೆಲ್ ಅನ್ನು ನೋಡುತ್ತೇನೆಯೇ? ಖಂಡಿತಾ ಇಲ್ಲ. ಈ ರೀತಿಯ ಚಲನಚಿತ್ರ ನಿರ್ಮಾಣದಿಂದ ನಾನು ನಿರಾಶೆಗೊಂಡಿದ್ದೇನೆ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ

    L2: Empuraan | ವಿವಾದ ಸುಳಿಯಲ್ಲಿ ಬ್ಲಾಕ್‌ಬಸ್ಟರ್‌ ಸಿನಿಮಾ – 17 ದೃಶ್ಯಗಳಿಗೆ ಕತ್ತರಿ

    ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohan Lal) ಅಭಿನಯದ ಎಲ್‌2: ಎಂಪೂರನ್‌ (L2: Empuraan) ಸಿನಿಮಾ ತೆರೆ ಕಂಡ ಮೂರೇ ದಿನಕ್ಕೆ ವಿವಾದದ ಸುಳಿಯಲ್ಲಿ ಸಿಲುಕಿದೆ. ಎರಡೇ ದಿನದಲ್ಲಿ 100 ಕೋಟಿ ಕ್ಲಬ್‌ ಸೇರಿರುವ ಈ ಸಿನಿಮಾ 3ನೇ ದಿನ ವಿವಾದಕ್ಕೆ ಸಿಲುಕಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ.

    ಹೌದು. ಮಾರ್ಚ್‌ 27ರಂದು ತೆರೆ ಕಂಡ ಮೋಹನ್‌ ಲಾಲ್‌ ಅಭಿನಯದ ಎಲ್‌2: ಎಂಪೂರನ್‌ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ 2002ರ ಗುಜರಾತ್‌ ಗಲಭೆಯ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಇಂದು ಯುಗಾದಿ ಹಬ್ಬ, ನಾಳೆ ರಂಜಾನ್‌ ಹಬ್ಬದ ಹಿನ್ನೆಲೆ ರಜೆ ಇರುವ ಕಾರಣ, ಹೊಸ ಆವೃತ್ತಿಯನ್ನು ಮಂಗಳವಾರ ಸೆನ್ಸಾರ್‌ ಮಂಡಳಿಗೆ ನೀಡಲಾಗುವುದು. ಬುಧವಾರದ ಒಳಗೆ ಎಲ್ಲ ಚಿತ್ರಮಂದಿರಗಳಲ್ಲಿ ಹೊಸ ಆವೃತ್ತಿ ತಲುಪಲಿದೆ ಎಂದು ಚಿತ್ರತಂಡ ಹೇಳಿದೆ. ಇದನ್ನೂ ಓದಿ: L2 Empuraan: ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಬಾಚಿದ ಮೋಹನ್‌ ಲಾಲ್‌

    mohan lal

    ‌ಚಿತ್ರದಲ್ಲಿರುವ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು, ವಿರೋಧಿ ಬಾಬಾ ಬಜರಂಗಿ ಹೆಸರನ್ನು ಬದಲಾಯಿಸಲಾಗುವುದು ಮತ್ತು ಜೊತೆಗೆ ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗುವುದು ಚಿತ್ರತಂಡ ಪ್ರಕಟಿಸಿದೆ. ನಿರ್ದೇಶಕ, ನಟ-ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಸಹ ಇದಕ್ಕೆ ಒಪ್ಪಿದ್ದಾರೆ ಅಂತ ತಿಳಿದುಬಂದಿದೆ. ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ: ವಿನಯ್ ಫಸ್ಟ್ ರಿಯಾಕ್ಷನ್

    MOHANLAL

    ಕೇಂದ್ರ ಸಚಿವ ಭಾರೀ ನಿರಾಸೆ:
    ಸದ್ಯ ಚಿತ್ರತಂಡದ ವಿರುದ್ಧ ಬಿಜೆಪಿ ಪ್ರತಿಭಟನೆ ಕೈಬಿಟ್ಟಿದ್ದರೂ ಬಿಜೆಪಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಭಾರೀ ನಿರಾಸೆ ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಸಿನಿಮಾ ಸಕ್ಸಸ್‌ಗೆ ಪ್ರಾರ್ಥಿಸಲ್ಲ: ಸೀಕ್ರೆಟ್ ಬಿಚ್ಚಿಟ್ಟ ಸಲ್ಮಾನ್ ಖಾನ್

    mohan lal 1

    ನಾನು ಲೂಸಿಫರ್ ಚಿತ್ರ ನೋಡಿದ್ದೇನೆ ಮತ್ತು ಅದನ್ನು ಇಷ್ಟಪಟ್ಟಿದ್ದೇನೆ. ನಾನು ಎಂಪುರಾನ್ ಚಿತ್ರವನ್ನು ಲೂಸಿಫರ್‌ನ ಮುಂದುವರಿದ ಭಾಗ ಎಂದು ಕೇಳಿದಾಗ ನೋಡುತ್ತೇನೆ ಎಂದು ಹೇಳಿದ್ದೆ. ಆದ್ರೆ ಈಗ ಚಿತ್ರದ ನಿರ್ಮಾಪಕರು ಸ್ವತಃ ಚಲನಚಿತ್ರದಲ್ಲಿ 17 ತಿದ್ದುಪಡಿಗಳನ್ನು ಮಾಡಿದ್ದಾರೆ ಮತ್ತು ಚಲನಚಿತ್ರವನ್ನು ಮರು-ಸೆನ್ಸಾರ್ಶಿಪ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿದೆ. ಮೋಹನ್‌ಲಾಲ್ ಅಭಿಮಾನಿಗಳು ಮತ್ತು ಇತರ ವೀಕ್ಷಕರನ್ನು ತೊಂದರೆಗೀಡುಮಾಡುವ ವಿಷಯಗಳು ಚಿತ್ರದಲ್ಲಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಚಲನಚಿತ್ರವನ್ನು ಚಲನಚಿತ್ರವಾಗಿ ನೋಡಬೇಕು. ಅದನ್ನು ಇತಿಹಾಸವಾಗಿ ನೋಡಲಾಗುವುದಿಲ್ಲ. ಅಲ್ಲದೇ, ಸತ್ಯವನ್ನು ತಿರುಚಿ ಕಥೆಯನ್ನು ನಿರ್ಮಿಸಲು ಪ್ರಯತ್ನಿಸುವ ಯಾವುದೇ ಚಲನಚಿತ್ರವು ವಿಫಲಗೊಳ್ಳುತ್ತದೆ. ಹಾಗಾಗಿ, ನಾನು ಲೂಸಿಫರ್‌ನ ಈ ಸೀಕ್ವೆಲ್ ಅನ್ನು ನೋಡುತ್ತೇನೆಯೇ? ಖಂಡಿತಾ ಇಲ್ಲ. ಈ ರೀತಿಯ ಚಲನಚಿತ್ರ ನಿರ್ಮಾಣದಿಂದ ನಾನು ನಿರಾಶೆಗೊಂಡಿದ್ದೇನೆ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • L2 Empuraan: ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಬಾಚಿದ ಮೋಹನ್‌ ಲಾಲ್‌

    L2 Empuraan: ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಬಾಚಿದ ಮೋಹನ್‌ ಲಾಲ್‌

    ಮೋಹನ್‌ ಲಾಲ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಎಲ್ 2 ಎಂಪುರಾನ್’ (L2: Empuraan) ಮಾ.27ರಂದು ರಿಲೀಸ್ ಆಗಿದೆ. ಬಿಡುಗಡೆಯಾಗಿ ಎರಡೇ ದಿನಕ್ಕೆ 100 ಕೋಟಿ ರೂ. ಗಳಿಗೆ ಮಾಡಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಚಿತ್ರತಂಡವೇ ಅಧಿಕೃತವಾಗಿ ತಿಳಿಸಿದೆ. ಇದನ್ನೂ ಓದಿ:‘ಕ್ರಿಶ್‌ 4’ ಚಿತ್ರಕ್ಕೆ ಹೃತಿಕ್ ರೋಷನ್ ಆ್ಯಕ್ಷನ್ ಕಟ್

    ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohan Lal), ನಟಿ ಮಂಜು ವಾರಿಯರ್, ನಟ ಟೊವಿನೋ ಥಾಮಸ್ ನಟಿಸಿರುವ ಈ ಸಿನಿಮಾ ಗೆಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತದೆ. ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಈ ಚಿತ್ರವು ಈಗ 100 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದನ್ನೂ ಓದಿ:ಗೆಲುವಿನ ನಿರೀಕ್ಷೆಯಲ್ಲಿ ಸಲ್ಮಾನ್ ಖಾನ್- ರಶ್ಮಿಕಾ ಜೊತೆಗಿನ ‘ಸಿಕಂದರ್’ ಚಿತ್ರ ನಾಳೆ ರಿಲೀಸ್‌

     

    View this post on Instagram

     

    A post shared by Aashirvad Cinemas (@aashirvadcine)

    ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿ ನಟಿಸಿರುವ ‘ಎಲ್ 2 ಎಂಪುರಾನ್’ ಇಂದು ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಲೂಸಿಫರ್’ ಸೀಕ್ವೆಲ್ ಆಗಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿತ್ತು. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಮೂಡಿ ಬಂದಿದೆ. ಈ ಚಿತ್ರಕ್ಕೆ ಸ್ಯಾಂಡಲ್‌ವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್÷್ಸ ಸಾಥ್ ನೀಡಿದೆ. ಕರ್ನಾಟಕದಾದ್ಯಂತ ಹೊಂಬಾಳೆ ಫಿಲಂಸ್ ಸಂಸ್ಥೆಯ ವಿಜಯ್ ಕಿರಗಂದೂರ್ `ಎಲ್ 2 ಎಂಪುರಾನ್’ ಚಿತ್ರವನ್ನು ಬಿಡುಗಡೆ ಮಾಡಿದೆ.

    ಈ ಚಿತ್ರದಲ್ಲಿ ಸ್ಟೀಫನ್ ನೆಡುಂಪಲ್ಲಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ತಾರಾಬಳಗದಲ್ಲಿದ್ದಾರೆ.

     

    View this post on Instagram

     

    A post shared by Aashirvad Cinemas (@aashirvadcine)

    ಈ ಚಿತ್ರಕ್ಕೆ ಕಥೆ ಮುರಳಿ ಗೋಪಿ ಬರೆದಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜನೆ ಮಾಡಿದ್ರೆ, ಸುಜಿತ್ ವಾಸುದೇವ್ ಅವರ ಛಾಯಾಗ್ರಹಣವಿದೆ. ಸುರೇಶ್ ಬಾಲಾಜೆ ಮತ್ತು ಜಾರ್ಜ್ ಪಯಸ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಇನ್ನೂ 2019ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ‘ಲೂಸಿಫರ್’ ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡಿದ್ದರು.