Tag: L.R.Shivaramegowda

  • ಮಂಡ್ಯದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್

    ಮಂಡ್ಯದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್

    ಮಂಡ್ಯ: ಚುನಾವಣೆ ಬಳಿಕ ಮಂಡ್ಯದಲ್ಲಿ ಆಣೆ ಪ್ರಮಾಣ ಪಾಲಿಟಿಕ್ಸ್ ಮುಂದುವರಿದಿದ್ದು, ನಾಗಮಂಗಲ ಕ್ಷೇತ್ರದ ಜೆಡಿಎಸ್ (JDS) ಪರಾಜಿತ ಅಭ್ಯರ್ಥಿ ಸುರೇಶ್ ಗೌಡ (Suresh Gowda) ರನ್ನು ಆಣೆ ಪ್ರಮಾಣಕ್ಕೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಆಹ್ವಾನಿಸಿದ್ದಾರೆ.

    ಕಾಂಗ್ರೆಸ್ (Congress) ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ನನ್ನ ಸೋಲು ಆಯ್ತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರಿಂದ ಸುರೇಶ್ ಗೌಡರನ್ನ ಪ್ರಮಾಣಕ್ಕೆ ಎಲ್.ಆರ್.ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ. ನಾಗಮಂಗಲ ಕ್ಷೇತ್ರ (Nagamangala Constituency) ದಲ್ಲಿ ಜೆಡಿಎಸ್ ಸೋಲಿಸೋದಕ್ಕೆ ಶಿವರಾಮೇಗೌಡ ಒಳ ಒಪ್ಪಂದ ಮಾಡಿಕೊಂಡಿದ್ರು, ಮೂರು ವರ್ಷದಿಂದ ಕುತಂತ್ರ ನಡೆಯುತ್ತಿತ್ತು. ನನ್ನನ್ನ ಸೋಲಿಸೋದಕ್ಕಾಗಿಯೇ ಶಿವರಾಮೇಗೌಡ್ರು ಪತ್ನಿಯನ್ನ ಬಿಜೆಪಿಯಿಂದ ಕಣಕ್ಕಿಳಿಸಿ ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಲಾಯಿತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರು.

    ಸುರೇಶ್ ಗೌಡ ಆರೋಪಕ್ಕೆ ಎಲ್.ಆರ್.ಶಿವರಾಮೇಗೌಡ ಕೆಂಡಾಮಂಡಲವಾಗಿದ್ದು, ನಾನು ನಮ್ಮ ಅಪ್ಪನಿಗೆ ಹುಟ್ಟಿರೋದು, ಸುರೇಶ್ ಗೌಡನ ಅಪ್ಪನಿಗಲ್ಲ. ಗೆಲ್ಲೋದಕ್ಕಾಗಿಯೇ ನನ್ನ ಪತ್ನಿಯನ್ನ ಚುನಾವಣೆಯಲ್ಲಿ ಬಿಜೆಪಿ (BJP) ಯಿಂದ ಸ್ಪರ್ಧೆ ಮಾಡಿಸಿದ್ದೆ. ಆದರೆ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಶಿವರಾಮೇಗೌಡ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?

    ಜೆಡಿಎಸ್ ಸೋಲಿಸಲು ನಾನು ಚಲುವರಾಯಸ್ವಾಮಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ ಆರೋಪ ಮಾಡಿರುವ ಸುರೇಶ್ ಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ. ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಪ್ರಮಾಣ ಮಾಡುತ್ತೇನೆ. ಅವರೇ ದಿನಾಂಕವನ್ನ ನಿಗದಿ ಮಾಡಲಿ, ಇಲ್ಲ ನನಗೆ ಹೇಳಿದ್ರೂ ಡೇಟ್ ಫಿಕ್ಸ್ ಮಾಡ್ತೀನಿ. ತಾಕತ್ತಿದ್ರೆ ಆಣೆ ಪ್ರಮಾಣಕ್ಕೆ ಬರಲಿ ಎಂದು ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ.

  • ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ಬಗ್ಗೆ ಮಾತನಾಡಬಾರದು: ಶಿವರಾಮೇಗೌಡ

    ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ಬಗ್ಗೆ ಮಾತನಾಡಬಾರದು: ಶಿವರಾಮೇಗೌಡ

    ಮಂಡ್ಯ: ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಸಹಾನೂಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿಚಾರವಾಗಿ ಹೆಚ್ಚು ಮಾತನಾಡಬಾರದು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಮೂಲದಿಂದ ಬೆಳೆದು ಬಂದವರು. ಸಿದ್ದರಾಮಯ್ಯ ಅವರಿಗೆ ಸಿಟ್ಟು ಜಾಸ್ತಿ, ನಮ್ಮ ಕುಮಾರಸ್ವಾಮಿ ಅವರು ಸುಮ್ಮನೆ ಇರದೇ ಜಾಡಿಸಿ ಬಿಡುತ್ತಾರೆ. ಅಣ್ಣ ತಮ್ಮಂದಿರ ಜಗಳದಂತೆ ಇಬ್ಬರ ಜಗಳ ನಡೆಯುತ್ತಲೇ ಇರುತ್ತದೆ. ಸಿದ್ದರಾಮಯ್ಯ ಒಳ್ಳೆಯ ವಾಗ್ಮಿ, ಜನಪರ ಆಡಳಿತ ಕೊಡುವ ಶಕ್ತಿ ಇರುವ ಮನುಷ್ಯ. ನಮ್ಮ ಜೆಡಿಎಸ್ ಬಗ್ಗೆ ಅವರಿಗೆ ಸಾಫ್ಟ್ ಕಾರ್ನರ್ ಇರಬೇಕು. ಉಂಡ ಮನೆ, ಬೆಳೆದ ಮನೆ ಇವೆಲ್ಲನ್ನು ನೋಡಿಕೊಳ್ಳಬೇಕು. ಹಾಗಾಗಿ ಜೆಡಿಎಸ್ ಬಗ್ಗೆ ಸಹಾನುಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ವಿಚಾರದಲ್ಲಿ ಹೆಚ್ಚಿಗೆ ಮಾತನಾಡಬಾರದು ಎಂದು ಇಬ್ಬರು ಮಾಜಿಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ

    ಎರಡು ರಾಷ್ಟ್ರೀಯ ಪಕ್ಷಗಳು ದೊಂಬರಾಟದಲ್ಲಿ ಮುಳುಗೋಗಿವೆ. ಮೇ ವೇಳೆಗೆ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಕಾಂಗ್ರೆಸ್‍ನಿಂದ ಬಿಜೆಪಿಗೆ 15 ಮಂದಿ ಬರುತ್ತಾರೆ ಅಂತ ಬೆಳಗಾವಿ ಸಾಹುಕಾರರು ಹೇಳುತ್ತಾರೆ. ಬಿಜೆಪಿಯಿಂದ ಕಾಂಗ್ರೆಸ್‍ಗೆ 25 ಮಂದಿ ಬರುತ್ತಾರೆ ಎನ್ನುವುದನ್ನು ಸಹ ನೋಡಿದ್ದೇವಿ. ಯಾರ್ಯಾರು ಯಾವ ಯಾವ ಪಕ್ಷಕ್ಕೆ ಹೋಗುತ್ತಾರೆ ಅನ್ನೋದು ಇನ್ನು 6 ತಿಂಗಳು ಗೊತ್ತಾಗಲ್ಲ. 6 ತಿಂಗಳ ಬಳಿಕ ಹೋಗುವವರು ಬರುವವರು ಗೊತ್ತಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಕಾಂಗ್ರೆಸ್, ಜೆಡಿಎಸ್‍ನಿಂದ ವ್ಯಾಪಾರ ಮಾಡಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ವ್ಯಾಪಾರ ಮುಗಿದ ಮೇಲೆ ಏನ್ ಮಾಡುತ್ತಾರೆ ನೋಡಬೇಕು. ಮೇ ವೇಳೆಗೆ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ. ಬಿಜೆಪಿಯವರು ಹೈಜಾಕರ್ ಸಿಸ್ಟಮ್ ಇದ್ದಂಗೆ, ಯಾರನ್ನು ಬೇಕಾದರೂ ಹೈಜಾಕ್ ಮಾಡುತ್ತಾರೆ. ಇಂಡಿಯಾದ ಜನರನ್ನೇ ಹೈಜಾಕ್ ಮಾಡಿದ್ದಾರೆ. ನರೇಂದ್ರ ಮೋದಿಗೆ ಇಂಡಿಯಾ ಜನರನ್ನು ಹೇಗೆ ಮಾರ್ಕೆಟ್ ಮಾಡಬೇಕು ಅಂತ ಫಸ್ಟ್ ಲಾಸ್ ಆಗೆ ತಿಳಿದುಕೊಂಡಿದ್ದಾರೆ. ಬಿಜೆಪಿಯಲ್ಲಿ ಒಳಗಿನಿಂದ ಒಳಗೆ ಅಲ್ಲೋಲ, ಕಲ್ಲೋಲಗಳು ನಡೆಯುತ್ತಿವೆ. ಅದನ್ನು ಮುಚ್ಚಿಕೊಳ್ಳಲು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಏನು ಎನ್ನುವುದು ತಿಳಿಯುತ್ತದೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬಾರದಿತ್ತು ಎಂದು ತಿಳಿಸಿದ್ದಾರೆ.

  • ಡ್ರಗ್ಸ್ ದಂಧೆಕೋರರಗಿಗೆ ರಾಜಕಾರಿಣಿಗಳ ಸಪೋರ್ಟ್: ಶಿವರಾಮೇಗೌಡ

    ಡ್ರಗ್ಸ್ ದಂಧೆಕೋರರಗಿಗೆ ರಾಜಕಾರಿಣಿಗಳ ಸಪೋರ್ಟ್: ಶಿವರಾಮೇಗೌಡ

    -ನಾಗಮಂಗಲದಲ್ಲೂ ಡ್ರಗ್ಸ್ ಮಾರಾಟ

    ಮಂಡ್ಯ: ಸ್ಯಾಂಡಲ್‍ವುಡ್ ಅಥವಾ ಬೆಂಗಳೂರಿಗೆ ಮಾತ್ರ ಡ್ರಗ್ಸ್ ದಂಧೆ ಸಿಮೀತವಾಗಿಲ್ಲ. ಡ್ರಗ್ಸ್ ದಂಧೆ ಗ್ರಾಮೀಣ ಭಾಗಗಳಿಗೆ ತಲುಪಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲೂ ಡ್ರಗ್ಸ್ ದೊರೆಯತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

    ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಶಿವರಾಮೇಗೌಡ, ಡ್ರಗ್ಸ್ ಮಾಫಿಯಾದಲ್ಲಿ ಬೆಂಗಳೂರು ಹಾಗೂ ಸ್ಯಾಂಡಲ್‍ವುಡ್ ಒಂದು ಕಡೆಯಾದ್ರೆ, ಗ್ರಾಮೀಣ ಭಾಗ ಇನ್ನೊಂದು ಕಡೆಯಾಗಿದೆ. ಗ್ರಾಮೀಣ ಭಾಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಯುವಕರು ಇದರಿಂದ ಹಾಳಾಗುತ್ತಿದ್ದಾರೆ. ಇದೆಲ್ಲವನ್ನು ಕಂಡರೂ ಕಾಣದಂತೆ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೆ. ನಾಗಮಂಗಲದಲ್ಲೂ ಡ್ರಗ್ಸ್ ಮಾರಾಟ ಜೋರಾಗಿ ನಡೆಯುತ್ತಿದೆ ಎಂದಿದ್ದಾರೆ.

    ಸ್ಯಾಂಡಲ್‍ವುಡ್ ಈ ಮಟ್ಟಕ್ಕೆ ಆಗಿರೋದು ದುರ್ದೈವದ ಸಂಗತಿಯಾಗಿದೆ. ಈ ಹಿಂದೆ ಮಹಾನ್ ನಟರು ಇದ್ದ ಸ್ಯಾಂಡಲ್‍ವುಡ್‍ನಲ್ಲಿ ಈ ರೀತಿಯ ಚಟುವಟಿಕೆಗಳು ನಡೆದಿರೋದು ನಿಜಕ್ಕೂ ಬೇಸರದ ಸಂಗತಿ. ಬೆಂಗಳೂರಿನ ಕಲ್ಯಾಣ ನಗರದ ನನ್ನ ಶಾಲೆಯ ರಸ್ತೆಯಲ್ಲಿ ನೈಜೀರಿಯಾ, ಸೌಥ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದ್ರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಈ ಡ್ರಗ್ಸ್ ದಂಧೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಾತ್ರವಲ್ಲ ಕಳೆದ 20 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ಆದ್ರೆ ಇದೀಗ ಹಂತ ಹಂತವಾಗಿ ದೊಡ್ಡ ಪ್ರಮಾಣಕ್ಕೆ ಈ ದಂಧೆ ವ್ಯಾಪಿಸಿದೆ. ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲವಿದೆ. ಪ್ರಭಾವಿಗಳ ಬೆಂಬಲದಿಂದ ಇಷ್ಟರ ಮಟ್ಟಿಗೆ ಈ ದಂಧೆ ವ್ಯಾಪಿಸಿದೆ. ಇದಲ್ಲದೇ ಗೋವಾ, ಶ್ರೀಲಂಕಾಗಳಿಗೆ ಕರೆದುಕೊಂಡು ಹೋಗಿ ಇಸ್ಪೀಟ್ ಆಟ ಆಡಿಸಲಾಗುತ್ತಿದೆ ಹಾಗೂ ತೋಟದ ಮನೆಗಳಲ್ಲಿ ರೇವ್ ಪಾರ್ಟಿಗಳು ನಡೆಯುತ್ತಿವೆ. ಇಂತಹ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮವಹಿಸಬೇಕಾಗಿದೆ ಎಂದು ಶಿವರಾಮೇಗೌಡ ಆಗ್ರಹಿಸಿದ್ದಾರೆ.

  • ಜೆಡಿಎಸ್ ವಿರುದ್ಧ ಅಂಬಿ ಅಭಿಮಾನಿಯ ಆಕ್ರೋಶ- ವಿಡಿಯೋ ವೈರಲ್

    ಜೆಡಿಎಸ್ ವಿರುದ್ಧ ಅಂಬಿ ಅಭಿಮಾನಿಯ ಆಕ್ರೋಶ- ವಿಡಿಯೋ ವೈರಲ್

    ಮಂಡ್ಯ: ನಟಿ ಸುಮಲತಾ ಗೌಡ್ತಿ ಅಲ್ಲ ಎಂಬ ಎಂಎಲ್‍ಸಿ ಕೆ.ಟಿ ಶ್ರೀಕಂಠೇಗೌಡ ಅವರ ಹೇಳಿಕೆ ಸದ್ಯ ಅಂಬರೀಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಜೆಡಿಎಸ್ ಪಕ್ಷದ ವಿರುದ್ಧ ಅಂಬಿ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.

    ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ ಈಗಾಗಲೇ ಮಂಡ್ಯದಲ್ಲಿ ಅಂಬಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಅಲ್ಲದೆ ಕಳೆದ ಎರಡು ದಿನಗಳಿಂದ ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ ಅಂಬಿ ಅಭಿಮಾನಿಗಳು ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೂಡ ಮಾಡಿದ್ದಾರೆ. ಈ ಪ್ರತಿಭಟನೆ ಹಾಗೂ ಗಲಾಟೆಗಳ ಬೆನ್ನಲ್ಲೇ ಮಂಡ್ಯದಲ್ಲಿ ಅಂಬರೀಶ್ ಅವರ ಅಭಿಮಾನಿಯೋರ್ವ ಜೆಡಿಎಸ್ ಪಕ್ಷ ಹಾಗೂ ಶ್ರೀಕಂಠೇಗೌಡರ ವಿರುದ್ಧ 5 ನಿಮಿಷ 27 ಸೆಕೆಂಡ್ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ನಾನು ಕೂಡ ಜೆಡಿಎಸ್ ಕಾರ್ಯಕರ್ತ ಎನ್ನುತ್ತ ಕೆ.ಟಿ.ಶ್ರೀಕಂಠೇಗೌಡ, ಎಲ್.ಆರ್ ಶಿವರಾಮೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಂಬರೀಶಣ್ಣ ಕರ್ನಾಟಕದ ಜನರ ಮನಸ್ಸಿನಲ್ಲಿದ್ದಾರೆ. ಅವರು ಇಂದು ನಮ್ಮ ಮಧ್ಯೆ ಇಲ್ಲ ಎಂದು ಅವರ ಕುಟುಂಬದ ಬಗ್ಗೆ ಮಾತನಾಡುತ್ತೀರಾ? ಮಂಡ್ಯ ಕ್ಷೇತ್ರದ ಸಂಸದರಾಗಿ ನಿಮಗೆ ನಾಚಿಯಾಗಬೇಕು ಎಂದಿದ್ದಾರೆ.

     

    ಅಲ್ಲದೆ ಅಂಬರೀಶ್ ಅವರ ಬಗ್ಗೆ ಮಾತನಾಡುತ್ತೀರಲ್ಲ, ನೀವು ಮಂಡ್ಯ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೆ ಅನಿತಾ ಕುಮಾರಸ್ವಾಮಿ, ನಿಖಿಲ್, ಪ್ರಜ್ವಲ್ ಸೇರಿದಂತೆ ದೇವೇಗೌಡರ ಕುಟುಂಬದವರ ವಿರುದ್ಧ ಹರಿಹಾಯ್ದಿರುವ ಅಂಬಿ ಅಭಿಮಾನಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜಿಎಸ್ ಡೀಮ್ಡ್ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಸರ್ಕಾರದಿಂದ ಸಹಾಯ: ಸಿಎಂ

    ಬಿಜಿಎಸ್ ಡೀಮ್ಡ್ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಸರ್ಕಾರದಿಂದ ಸಹಾಯ: ಸಿಎಂ

    ಬೆಂಗಳೂರು: ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ಶಿಕ್ಷಣ ಸಂಸ್ಥೆಯನ್ನಾಗಿ ಘೋಷಣೆ ಮಾಡುವುದಕ್ಕೆ ಅವಶ್ಯವಿರುವ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

    ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿಜಿಎಸ್ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಸಮೂಹದ 11ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಉತ್ಸವ-2018ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ವಿಶ್ವವಿದ್ಯಾಯವನ್ನಾಗಿ ಘೋಷಣೆ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲೂ ಉತ್ತಮ ಗುಣಮಟ್ಟವ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಆದ್ದರಿಂದ ಪೋಷಕರಿಗೆ ಏನೇ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಂತೆ ಕರೆ ನೀಡಿದರು.

    ಕೇಂದ್ರ ಸಾಂಖ್ಯಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಕೊಡುಗೆ ಅಪಾರವಾದದ್ದು. ಪರಿಸರ ಸಂರಕ್ಷಣೆ, ಶಿಕ್ಷಣ, ಆರೋಗ್ಯ, ಧಾರ್ಮಿಕ ಜಾಗೃತಿ ಮೂಡಿಸುವ ಮೂಲಕ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗದರ್ಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ನೂತನ ಸಂಸದ ಎಲ್.ಆರ್. ಶಿವರಾಮೇಗೌಡ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಇಲ್ಲಿ ವ್ಯಾಸಂಗ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸುವ ಮಟ್ಟಕ್ಕೆ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ ಎಂದು ಶ್ಲಾಘಿಸಿದರು.

    ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ತೆರೆ ಮೇಲೆ ಹೀರೋ ಆಗಲು ಚಲನಚಿತ್ರಗಳೇ ಬೇಕಾಗಿಲ್ಲ. ನಿಜ ಜೀವನದಲ್ಲೂ ಸಮಾಜ ಸೇವೆ ಮಾಡುವ ಮೂಲಕ ಹೀರೋ ಆಗಬಹುದು ಎಂದರು.

    ಬಿಜಿಎಸ್ ಉತ್ಸವದಲ್ಲಿ ಯಕ್ಷಗಾನ, ಕೂಚುಪುಡಿ, ಭರತನಾಟ್ಯ, ಹುಲಿವೇಶ ಸೇರಿಂದತೆ ಇನ್ನಿತರ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಬಿಜಿಎಸ್ ಶಿಕ್ಷಣ ಸಂಸ್ಥೆ ಕೊಡಮಾಡುವ ಸೇವಾ ರತ್ನ ಪ್ರಶಸ್ತಿಯನ್ನು ಎಸ್‍ಜೆಬಿಯ ಪ್ರಾಂಶುಪಾಲ ಪುಟ್ಟರಾಜು ಹಾಗೂ ಕೆ.ಎಸ್. ಕುಮಾರಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಎಸ್‍ಜೆಬಿ, ಬಿಜಿಎಸ್ ಗ್ರೂಫ್ ಆಫ್ ಇನ್‍ಸ್ಟಿಟ್ಯೂಷನ್ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶನಾಥ ಸ್ವಾಮೀಜಿ, ಚಿತ್ರ ನಟ ಪ್ರಜ್ವಲ್ ದೇವರಾಜ್, ಎಂಸಿಐ ಬೋರ್ಡ್ ಆಫ್ ಗವರ್ನರ್ ನಿರ್ದೇಶಕ ಮತ್ತು ಸದಸ್ಯ ಡಾ. ಬಿ.ಎನ್. ಗಂಗಾಧರ್, ಗ್ಲೋಬಲ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರ್ದೇಶಕ ಡಾ. ರವೀಂದ್ರನಾಥ್ ಕೆ., ಚಿತ್ರ ನಿರ್ಮಾಪಕ ಮಂಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕಿದ್ರು ಶಿವರಾಮೇಗೌಡ!

    ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹಾಕಿದ್ರು ಶಿವರಾಮೇಗೌಡ!

    ಮಂಡ್ಯ: ಜಿಲ್ಲೆಯಲ್ಲಿ ಇದೀಗ ಕಣ್ಣೀರಿನ ಪಾಲಿಟಿಕ್ಸ್ ಆರಂಭವಾಗಿದೆ. ಮಂಡ್ಯ ಲೋಕಸಭಾ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡ ಅವರು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.

    ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಹಿಂದೆ ನಡೆದ ಪತ್ರಕರ್ತನ ಗಂಗಾಧರ ಮೂರ್ತಿ ಕೊಲೆ ಪ್ರಕರಣ ನೆನೆದು ಕಣ್ಣೀರು ಹಾಕಿದ್ದಾರೆ. ಪತ್ರಕರ್ತನ ಕೊಲೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಬಂದಿತ್ತು. ಆರೋಪ ಕೇಳಿ ಬಂದ ಬಳಿಕ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ದೇವರೇ ನನಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ನಿಮಗೆ ಗೊತ್ತು. ಬೇರೆಯವರಿಗೆ ಗೊತ್ತಿಲ್ಲ. ಆದರೆ ನಾನು ನಿರಪರಾಧಿ ಎಂಬುದು ಆನಂತರ ಸಾಬೀತಾಯ್ತು. ಆದರೂ ಕೂಡ ಈಗ ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಲೇ ಸೇರಿದ್ದ ಜನರ ಮುಂದೆ ಅತ್ತುಬಿಟ್ಟರು.

    ಇಂದು ಕುಮಾರಸ್ವಾಮಿ ಅವರು ಶಿವರಾಮೇ ಗೌಡ ಅವರಿಗೆ ಅಧಿಕಾರವಿಲ್ಲ, ಅವರಿಗೆ ಅಧಿಕಾರಿ ಕೊಡಿಸಬೇಕು ಅಂತ ಆಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿಕೊಡೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಯಾವತ್ತೂ ಯಾರ ಜೇಬಿಗೂ ಕೈ ಹಾಕಿಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ ಅಂತ ಅವರು ತಿಳಿಸಿದ್ರು.

    ಕುಡುಕನಲ್ಲಿ ಮನವಿ:
    ಶಿವರಾಮೇಗೌಡರು ಮಾತನಾಡುವಾಗ ಕುಡುಕನೊಬ್ಬ ಪದೇ ಪದೇ ಮಧ್ಯೆ ಮಾತನಾಡುತ್ತಿದ್ದನು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡರು ಕುಡುಕನಲ್ಲಿ, ನಿನ್ನ ದಮ್ಮಯ್ಯ ಕಣೋ ಕಾಲಿಗೆ ಬೀಳುತ್ತೇನೆ ಕುಳಿತುಕೋ.. ಅಂತ ಜೋರಾಗಿ ಗದರಲಾಗದೇ ಸುಮ್ಮನಿರುವಂತೆ ಬೇಡಿಕೊಂಡ ಪ್ರಸಂಗ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಅಂದ್ರೆ ಎಚ್‍ಡಿಡಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಬಣ್ಣಿಸಿದ ಶಿವರಾಮೇಗೌಡ!

    ಜೆಡಿಎಸ್ ಅಂದ್ರೆ ಎಚ್‍ಡಿಡಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಬಣ್ಣಿಸಿದ ಶಿವರಾಮೇಗೌಡ!

    ಮಂಡ್ಯ: ಜೆಡಿಎಸ್ ಅಂದರೆ ಎಚ್.ಡಿ.ದೇವೇಗೌಡ ಕೃಪಾಪೋಷಿತ ನಾಟಕ ಮಂಡಳಿ, ನಾವು ಅದರ ಸದಸ್ಯರು ಎಂದು ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.

    ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ನನ್ನು ಮಂಡ್ಯ ಕ್ಷೇತ್ರ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದವರು ಮಂಡ್ಯದಿಂದ ಸ್ಪರ್ಧೆಗೆ ಇಳಿದರೆ ನಾನು ಸ್ಥಾನ ಬಿಟ್ಟುಕೊಟ್ಟು, ಸ್ವಾಗತಿಸುತ್ತೇನೆ. ಆದರೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಪ್ರಜ್ವಲ್ ರೇವಣ್ಣ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಯದಿದ್ದರೆ ನನಗೆ ಅವಕಾಶ ಕೊಡಲಿ ಎಂದು ಕೇಳಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಎಲ್ಲವನ್ನು ತ್ಯಾಗ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪಕ್ಷದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಹೊಂದಾಣಿಕೆ ಸಾಧ್ಯವೋ ಅಲ್ಲಿ ಎರಡು ಪಕ್ಷಗಳ ನಾಯಕರು ಸೇರಿ ಚರ್ಚೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.