ಬಿಷ್ಕೆಕ್: ಕಿರ್ಗಿಸ್ತಾನ್‌ನಲ್ಲಿರುವ (Kyrgyzstan) ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಯುತ್ತಿದೆ. ಅಲ್ಲಿರುವ ಭಾರತೀಯ ನಾಗರಿಕರಿಗೆ ಮನೆಯೊಳಗೆ ಇರುವಂತೆ ಭಾರತ ಒತ್ತಾಯಿಸಿದೆ.
ಹಲವಾರು ಪಾಕಿಸ್ತಾನಿ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ನಲ್ಲಿ ಗುಂಪು ಹಿಂಸಾಚಾರದಲ್ಲಿ ಗಾಯಗೊಂಡ ನಂತರ ಈ ಸಲಹೆಯನ್ನು ನೀಡಲಾಗಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ರಾಯಭಾರ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಸೌದಿಯಲ್ಲಿ ನಡೆಯಿತು ಸ್ವಿಮ್ ಸೂಟ್ ಫ್ಯಾಶನ್ ಶೋ!
Statement issued by the Ministry of Foreign Affairs of the Kyrgyz Republic on the current incidents in Bishkek. pic.twitter.com/vt1FEwGVka
— India in Kyrgyz Republic (@IndiaInKyrgyz) May 18, 2024
‘ನಾವು ನಮ್ಮ ವಿದ್ಯಾರ್ಥಿಗಳೊಂದಿಗೆ (Indian Students) ಸಂಪರ್ಕದಲ್ಲಿದ್ದೇವೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ. ಆದರೆ ವಿದ್ಯಾರ್ಥಿಗಳು ಸದ್ಯಕ್ಕೆ ಮನೆಯೊಳಗೆ ಇರಲು ಮತ್ತು ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸಲಹೆ ನೀಡಲಾಗಿದೆ. ಸಹಾಯವಾಣಿ ಸಂಖ್ಯೆ 0555710041 ಸಂಪರ್ಕಿಸಬಹುದು’ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ದಾಳಿಯಲ್ಲಿ ಮೂವರು ಪಾಕಿಸ್ತಾನಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ ಅಧಿಕೃತವಾಗಿ ಯಾವುದೇ ಸಾವಿನ ವರದಿ ಇನ್ನೂ ಬಂದಿಲ್ಲ ಎಂದು ಸರ್ಕಾರ ಹೇಳಿದೆ.
ಮೇ 13 ರಂದು ಕಿರ್ಗಿಜ್ ಮತ್ತು ಈಜಿಪ್ಟ್ ವಿದ್ಯಾರ್ಥಿಗಳ ನಡುವಿನ ಹೊಡೆದಾಟದ ವೀಡಿಯೋಗಳು ಶುಕ್ರವಾರ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಪಾಕಿಸ್ತಾನ ರಾಯಭಾರ ಕಚೇರಿ ತಿಳಿಸಿದೆ.
ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿದ್ಯಾರ್ಥಿಗಳು ವಾಸಿಸುವ ಬಿಷ್ಕೆಕ್‌ನಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯಗಳ ಹಾಸ್ಟೆಲ್‌ಗಳನ್ನು ಗುಂಪು ಗುರಿಯಾಗಿಸಿತ್ತು. ದಾಳಿಯಲ್ಲಿ ಯಾವುದೇ ಭಾರತೀಯ ವಿದ್ಯಾರ್ಥಿಗಳು ಗಾಯಗೊಂಡಿಲ್ಲ.
ಸಮರ್‌ಕಂಡ್: ಉಜ್ಬೇಕಿಸ್ತಾನ ಶಾಂಘೈ ಸಹಕಾರ ಸಂಘಟನೆ (SCO) ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ, ಪುಟಿನ್ (Vladimir Putin) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
#WATCH | I know about your position on the conflict in Ukraine & also about your concerns. We want all of this to end as soon as possible. We will keep you abreast of what is happening there: Russian President Putin during a bilateral meet with PM Modi
ಬಳಿಕ ಪ್ರತಿಕ್ರಿಯಿಸಿದ ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್, ಕಳೆದ ಫೆಬ್ರುವರಿಯಲ್ಲಿ ಪ್ರಾರಂಭವಾದ ಉಕ್ರೇನ್ (Ukraine) ವಿರುದ್ಧದ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ಬಯಸಿದ್ದೇನೆ. ಈ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತದ ಕಳವಳ ಅರ್ಥವಾಗುತ್ತಿದೆ. ಉಕ್ರೇನ್‌ನಲ್ಲಿನ ಸಂಘರ್ಷದ ಬಗ್ಗೆ ನಿಮ್ಮ ನಿಲುವು, ನಿಮ್ಮ ಕಾಳಜಿಗಳು ನನಗೆ ಅರ್ಥವಾಗುತ್ತಿದೆ. ಇದನ್ನು ಆದಷ್ಟು ಬೇಗ ಕೊನೆಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
ಎದುರಾಳಿ ತಂಡ, ಉಕ್ರೇನ್ ನಾಯಕತ್ವ, ಸಂಧಾನ ಪ್ರಕ್ರಿಯೆಯನ್ನು ತಿರಸ್ಕರಿಸುವುದಾಗಿ ಘೋಷಿಸಿತು ಮತ್ತು ಯುದ್ಧಭೂಮಿಯಲ್ಲಿ ಮಿಲಿಟರಿ ವಿಧಾನಗಳ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಬಯಸುವುದಾಗಿ ಹೇಳಿದೆ ಎಂದು ಪುಟಿನ್ ತಿಳಿಸಿದ್ದಾರೆ.
#WATCH | Prime Minister Narendra Modi and Uzbekistan President Shavkat Mirziyoyev hold a meeting in Samarkand, Uzbekistan on the sidelines of the SCO Summit.
SCO ಅಧ್ಯಕ್ಷ ಸ್ಥಾನ ಭಾರತಕ್ಕೆ ಹಸ್ತಾಂತರ: ಉಜ್ಬೇಕಿಸ್ತಾನ ಎಸ್‌ಸಿಒ ಅಧ್ಯಕ್ಷ ಸ್ಥಾನವನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಯಿತು. ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ಸಮರ್ಕಂಡ್‌ನಲ್ಲಿ 22ನೇ ಎಸ್‌ಸಿಒ ಶೃಂಗಸಭೆ ಅಧ್ಯಕ್ಷತೆ ವಹಿಸಿದ್ದರು. 2023ರಲ್ಲಿ ಭಾರತ ಎಸ್‌ಸಿಒ ಶೃಂಗಸಭೆ ಆಯೋಜಿಸುತ್ತದೆ. ಈ ಜವಾಬ್ದಾರಿಯುತ ಕಾರ್ಯಕ್ರಮ ಅನುಷ್ಠಾನದಲ್ಲಿ ಭಾರತಕ್ಕೆ ಸಹಾಯ ಮಾಡಲು ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಉಜ್ಬೇಕಿಸ್ತಾನ ವಿದೇಶಾಂಗ ಸಚಿವ ವ್ಲಾಡಿಮಿರ್ ನೊರೊವ್ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪ್ರಧಾನಿ ಮೋದಿ ಅವರನ್ನು ಕಿರ್ಗಿಸ್ತಾನದ ಅಧ್ಯಕ್ಷ ಸೂರನ್ಬೆ ಜೀನ್ಬೆಕುವ್ ಅವರು ಸ್ವತಃ ತಾವೇ ಛತ್ರಿ ಹಿಡಿದು ಸ್ವಾಗತಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಒಕ್ಕೂಟ (ಎಸ್.ಸಿ.ಒ.) ಶೃಂಗಸಭೆಗಾಗಿ ಕಿರ್ಗಿಸ್ತಾನದ ಬಿಶ್ಕೆಕ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷ ಸೂರುನ್ಬೆ ಜೀನ್ಬೆಕುವ್ ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ನರೇಂದ್ರ ಮೋದಿಯವರಿಗೆ ಸ್ವತಃ ಛತ್ರಿ ಹಿಡಿದಿರುವ ಘಟನೆ ನಡೆದಿದೆ.
ನರೇಂದ್ರ ಮೋದಿಯವರು ಬಿಶ್ಕೆಕ್ ಗೆ ಆಗಮಿಸಿದ ವೇಳೆ ಕಿರ್ಗಿಸ್ತಾನ್ ಅಧ್ಯಕ್ಷ ಜೀನ್ಬೆಕುವ್ ಖುದ್ದು ತಾವೇ ಬಂದು ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ಮಳೆ ಆರಂಭವಾಗಿದ್ದು, ಆಗ ಭದ್ರತಾ ಸಿಬ್ಬಂದಿಯ ಬದಲಾಗಿ ಸ್ವತಃ ಅಧ್ಯಕ್ಷರೇ ಛತ್ರಿ ಹಿಡಿದು ಮೋದಿಯವರನ್ನು ಸ್ವಾಗತಿಸಿದ್ದಾರೆ.
ನರೇಂದ್ರ ಮೋದಿ ಅವರು ಕಳೆದ ವಾರ ಶ್ರೀಲಂಕಾಗೆ ಭೇಟಿ ನೀಡಿದ ಸಂದರ್ಭದಲ್ಲೂ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸ್ವತಃ ತಾವೇ ಕೊಡೆ ಹಿಡಿದು ತಮ್ಮನ್ನು ಹಾಗೂ ಮೋದಿಯವರನ್ನು ಮಳೆಯಿಂದ ರಕ್ಷಿಸಿಕೊಂಡಿದ್ದರು. ಈಗ ಮತ್ತೆ ಕಿರ್ಗಿಸ್ತಾನದ ಅಧ್ಯಕ್ಷ ಸೂರನ್ಬೆ ಜೀನ್ಬೆಕುವ್ ಅವರು ಕೂಡ ಸ್ವತಃ ತಾವೇ ಛತ್ರಿ ಹಿಡಿದು ಸ್ವಾಗತ ಮಾಡಿದ್ದಾರೆ.
ಕಿರ್ಗಿಸ್ತಾನದ ಶಾಂಘೈ ಸಹಕಾರ ಒಕ್ಕೂಟ (ಎಸ್.ಸಿ.ಒ.) ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎಸ್.ಸಿ.ಒ ಸದಸ್ಯ ರಾಷ್ಟ್ರಗಳು ಪರಸ್ಪರ ಸಹಕಾರ ನೀಡಬೇಕು. ಅಲ್ಲದೆ ಈ ಎಲ್ಲಾ ರಾಷ್ಟ್ರಗಳು ಸೇರಿ ಪ್ರಾದೇಶಿಕ ಉಗ್ರ ನಿಗ್ರಹ ಒಕ್ಕೂಟವನ್ನು ರಚನೆ ಮಾಡಿಕೊಳ್ಳಬೇಕು. ಉಗ್ರವಾದದ ವಿರುದ್ಧ ಹೋರಾಟಕ್ಕೆ ಎಲ್ಲಾ ರಾಷ್ಟ್ರಗಳು ಸಂಕುಚಿತ ಮನೋಭಾವ ಬಿಟ್ಟು ಒಗ್ಗೂಡಬೇಕು ಎಂದು ಹೇಳಿದ್ದರು.
ಈ ದುನಿಯಾ ವಿಚಿತ್ರ ಕಣ್ರೀ. ಇಲ್ಲಿ ಕಂಡು ಕೇಳರಿಯದ ಘಟನೆಗಳು ನಡೆಯುತ್ತದೆ. ಸಂಪ್ರದಾಯ, ಆಚರಣೆಗಳಿಗೆ ಲೆಕ್ಕವೇ ಇಲ್ಲ. ಇಂಥದ್ದೇ ಒಂದು ಕುತೂಹಲಕಾರಿ ಆಚರಣೆ ಬಗ್ಗೆ ಹೇಳುತ್ತಾ ಹೋದ್ರೆ ಮೊದಲಿಗೆ ನಮಗೆ ಕಾಣುವುದೇ ಕಿರ್ಗಿಸ್ತಾನ. ಕಿರ್ಗಿಸ್ಥಾನಿಗರ ಸಂಪ್ರದಾಯಗಳ ಪಟ್ಟಿ ಕೇಳಿದ್ರೆ ನೀವು ಒಂದು ಕ್ಷಣ ಬೆಚ್ಚಿ ಬೀಳುವುದು ಪಕ್ಕಾ. ಅಂದ ಹಾಗೆ ಚೈನಾದ ಪಕ್ಕದಲ್ಲಿ ಇರುವ ರಾಷ್ಟ್ರವೇ ಈ ಕಿರ್ಗಿಸ್ಥಾನ.
ಇಲ್ಲಿ ಬಹಳ ವಿಭಿನ್ನವಾಗಿ ಮದುವೆ ನಡೆಯುತ್ತದೆ. ನೀವಿದನ್ನು ಮೆಂಟಲ್ ಮ್ಯಾರೇಜ್ ಅಂತಾನೂ ಕರೆಯಬಹುದು. ಅಂದ ಹಾಗೆ ಇದು ಇಂದು ನಿನ್ನೆ ಕಥೆಯಲ್ಲ. ಕಾನೂನನ್ನು ಉಲ್ಲಂಘನೆ ಮಾಡುತ್ತೇವೆ ಅನ್ನೋ ಜನ ಇದನ್ನು ಒಂದು ಸಂಪ್ರದಾಯದ ರೀತಿಯಲ್ಲಿ ಇಂದಿಗೂ ಅನುಸರಿಸಿಕೊಂಡು ಬಂದಿದ್ದಾರೆ. ಅದೇನು ಸಂಪ್ರದಾಯವೋ ಗೊತ್ತಿಲ್ಲ. ಆದ್ರೆ, ಇಲ್ಲಿ ಬಲಿಯಾಗ್ತಿರೋರು ಮಾತ್ರ ಹುಡುಗೀರು ಅನ್ನುವುದೇ ಚಿಂತೆ. ಇಲ್ಲಿ ಈಗಲೂ 40% ಜನ ಮಹಿಳೆಯರು ಕಿಡ್ನಾಪ್ ಆಗಿ ಮದುವೆ ಆದವರೇ ಇದ್ದಾರೆ ಅಂದರೆ ನಂಬಲೇಬೇಕು. ಅದೆಲ್ಲ ಬಿಡಿ, ಇಲ್ಲಿ ಹುಡುಗಿಯರು ಕಿಡ್ನಾಪ್ ಹೇಗಾಗ್ತಾರೆ ಅನ್ನುವುದೇ ಇಂಟ್ರೆಸ್ಟಿಂಗ್ ಮ್ಯಾಟರು. ಇಲ್ಲಿನ ಜನ ಈ ರೀತಿಯ ಮದುವೆಯನ್ನು ಅಲ ಕಚ್ಚು ಅಂತಾ ಕರೆಯುತ್ತಾರೆ.
ನಮ್ಮಲ್ಲಿ ತಮಾಷೆಗೆ ಒಂದು ಮಾತು ಹೇಳುವುದನ್ನು ಕೇಳಿರುತ್ತೀರಿ. ಮದುವೆಗೆ ಎಲ್ಲಾ ತಯಾರಾಗಿದೆ. ಆದ್ರೆ, ಹುಡುಗಿ ಮಾತ್ರ ಇನ್ನೂ ಸಿಗಲಿಲ್ಲ ಅಂತಾ. ಕಿರ್ಗಿಸ್ಥಾನದಲ್ಲಿ ಮಾತ್ರ ಅದೇ ಮಾತು ನಿಜವಾಗಿದೆ. ಮೊದಲು ಮದುವೆಗೆ ಬೇಕಾದ ಸಾಮಾಗ್ರಿಗಳನ್ನೆಲ್ಲಾ ತರುತ್ತಾರೆ. ವಧುವಿಗೆ ಬಟ್ಟೆ, ವರನಿಗೆ ಬಟ್ಟೆ, ಒಡವೆ ಆದ ಮೇಲೆ ಮದುವೆ ಊಟವನ್ನೂ ತಯಾರಿಸಲಾಗುತ್ತದೆ. ನೆಂಟರಿಷ್ಟರನ್ನೂ ಕರೆಯುತ್ತಾರೆ. ಮಂಟಪಕ್ಕೆ ಬರೋವವರೆಗೂ ಹುಡುಗಿ ಯಾರು ಅನ್ನುವುದು ಹುಡುಗನ ಮನೆಯವರಿಗಾಗಲೀ, ಬಂಧುಗಳಿಗಾಗಲೀ ಅಥವಾ ಸ್ವತಃ ಕಿಡ್ನಾಪ್ ಆಗೋ ಹುಡುಗಿಗಾಗಲೀ ಗೊತ್ತಿರುವುದಿಲ್ಲ. ಇಷ್ಟೆಲ್ಲಾ ತಯಾರಿ ಆದಮೇಲೆ ಹುಡುಗಿಯನ್ನು ಕಿಡ್ನಾಪ್ ಮಾಡಿಕೊಂಡು ಬರಲು ಒಂದು ತಂಡ ರೆಡಿಯಾಗುತ್ತದೆ.
ಹೀಗೆ ಹೋಗುವ ತಂಡ ನೇರವಾಗಿ ರಸ್ತೆಗೆ ಇಳಿಯುತ್ತದೆ. ಅಲ್ಲೇನಾದ್ರೂ ಚೆನ್ನಾಗಿರುವ ಹುಡುಗಿ ಕಂಡು ಇವರಿಗೆ ಇಷ್ಟ ಆಯ್ತೋ ಅಷ್ಟೇ. ಅವಳ ಮದ್ವೆಗೆ ಇವರೇ ಮುಹೂರ್ತ ಫಿಕ್ಸ್ ಮಾಡುತ್ತಾರೆ. ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ನೇರವಾಗಿ ಮನೆಗೆ ಕರೆದುಕೊಂಡು ಬರುತ್ತಾರೆ. ಅಲ್ಲಾಗಲೇ ಹುಡುಗಿಯ ಬರುವಿಕೆಗಾಗಿ ಕಾಯುತ್ತಿದ್ದ ಮನೆಯವರಿಗೆ ಅಂತೂ ಹುಡುಗಿ ಸಿಕ್ಕಳಲ್ಲಾ ಅನ್ನೋ ಸಂತೋಷ. ಆದ್ರೆ ಹುಡುಗಿ ಮಾತ್ರ ಬಲಿಪೀಠಕ್ಕೆ ಸಿದ್ಧಗೊಂಡಿರೋ ಕುರಿಯ ಹಾಗೆ ಆಗಿರುತ್ತಾಳೆ. ಮನೆಗೆ ತಲುಪಿದ ತಕ್ಷಣ ಅವಳ ತಲೆ ಮೇಲೊಂದು ಬಟ್ಟೆ ಹಾಕಿದ್ರೆ ಮುಗೀತು. ಅದು ಮದ್ವೆಯ ಮೊದಲ ಹಂತ. ಹುಡುಗನ ಮನೆಯಲ್ಲಿರುವ ಹೆಂಗಸರೆಲ್ಲಾ ಒಟ್ಟಾಗಿ ಸೇರಿಕೊಂಡು ಹುಡುಗಿಯನ್ನು ರೆಡಿ ಮಾಡಲು ಶುರು ಮಾಡುತ್ತಾರೆ. ಅವಳು ಎಷ್ಟೇ ಕೊಸರಾಡಿದ್ರೂ ಕೂಗಾಡಿದ್ರೂ ಊಹೂಂ ನೋ ಯೂಸ್.
ಇಷ್ಟೆಲ್ಲಾ ಡ್ರಾಮಾ ಒಂದು ಕಡೆ ಆಗುತ್ತಾ ಇದ್ರೆ, ಇನ್ನೊಂದು ಕಡೆ ವೆರೈಟಿ ವೆರೈಟಿ ಭಕ್ಷ್ಯ ಭೋಜನಗಳನ್ನು ತಯಾರು ಮಾಡಿಕೊಂಡಿರುತ್ತಾರೆ. ಸಣ್ಣದಾದ ಟೆಂಟ್ ಒಳಗೆ ಹುಡುಗನ ಕಡೆಯವರು ಊಟದ ತಯಾರಿ ಮಾಡುತ್ತಾ ಮದುವೆಯ ಮುಂದಿನ ತಯಾರಿಯಲ್ಲಿ ತೊಡಗುತ್ತಾರೆ. ಊಟ ಮಾಡುವ ಸ್ಥಳಕ್ಕೆ ವಧುವನ್ನು ಕರೆದುಕೊಂಡು ಬರುವುದಕ್ಕೆ ಎಲ್ಲಾ ಸಿದ್ಧತೆ ಮಾಡುತ್ತಾರೆ. ವರನ ಕಡೆಯವರು ನೂರೋ ಇನ್ನೋರೋ ಜನ ಇರುತ್ತಾರೆ. ಹೀಗಾಗಿ ವಧುವಿಗೆ ತಪ್ಪಿಸಿಕೊಳ್ಳೋ ಮಾರ್ಗವೂ ಅಲ್ಲಿ ಇರುವುದಿಲ್ಲ. ನಾನು ಬೇರೆಯವರನ್ನು ಇಷ್ಟ ಪಡುತ್ತಿದ್ದೇನೆ ಅಂತಾ ಹುಡುಗಿ ಕಿರುಚ್ತಾ ಹೇಳಿದ್ರೂ, ಇಲ್ಲಿ ನಾವು ಹೇಳಿದಷ್ಟು ನೀನು ಕೇಳಬೇಕು ಅನ್ನೋದಾಗಿ ವರನ ಕಡೆಯವರಿಂದ ಹುಕುಂ ಬರುತ್ತದೆ.
ಕಿರ್ಗಿಗಳ ಈ ಥರಹದ ಕಿರಿಕ್ ಗೆ ಜಾತಿ ಧರ್ಮದ ಹಂಗಿಲ್ಲ. ಕುಲ ಗೋತ್ರ ಅನ್ನುವುದು ಗೊತ್ತೇ ಇಲ್ಲ. ಕಾನೂನು ಕಟ್ಟಳೆಗಳು ಇವರಿಗಂತೂ ಬಿಲ್ ಕುಲ್ ಅಪ್ಲೈ ಆಗುವುದಿಲ್ಲ. ಒಂದರ್ಥದಲ್ಲಿ ಇವರು ಕಾನೂನಿಗೆ ಬೆಲೆ ಕೊಡುವುದಿಲ್ಲ. ಅಷ್ಟಕ್ಕೂ ಇವ್ರು ಕಿಡ್ನಾಪ್ ಮಾಡುವುದಕ್ಕೆ ಹಾಕುವ ಸ್ಕೆಚ್ ನೀವೇನಾದ್ರೂ ನೋಡಿದರೆ ದಂಗಾಗಿಬಿಡುತ್ತೀರಿ. ಮದುವೆಯ ಒಂದು ತಿಂಗಳ ಮೊದಲೇ ಕಿಡ್ನಾಪ್ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು, ಯಾರೆಲ್ಲಾ ಹೋಗಬೇಕು ಅನ್ನುವುದರ ಬಗ್ಗೆ ಗಹನವಾಗಿ ಚರ್ಚೆ ಮಾಡುತ್ತಾರೆ.
2007ರಲ್ಲಿ ಈ ಸಂಪ್ರದಾಯದ ಬಗ್ಗೆ ಒಂದು ಸಿನಿಮಾ ತೆರೆ ಕಂಡಿದೆ. ಕಿರ್ಗಿಗಳ ವಿಚಿತ್ರ ಮದುವೆ ಬಗ್ಗೆ ಬಂದಿರುವ ಸಿನಿಮಾ ಅದು. ಒಂದೇನು ಇಲ್ಲಿ ಆಗಿರೋ ಮದುವೆಗಳ ಸಂಖ್ಯೆ ನೋಡಿದರೆ ಲೈಫ್ ಲಾಂಗ್ ಕುಳಿತು ಸಿನಿಮಾ ನೋಡಬಹುದು ಬಿಡಿ. ಇನ್ನೂ ಒಂದು ವಿಷಯ ಗೊತ್ತಿದೆಯಾ..? ಸಾಮಾನ್ಯವಾಗಿ ನಾವು ಮದುವೆ ಆಗೋ ಮೊದಲೇ ಹುಡುಗಿ ಮನೆಗೆ ಹೋಗಿ ಮದುವೆ ಬಗ್ಗೆ ಮಾತುಕತೆ ಮಾಡುತ್ತೇವೆ. ಆದ್ರೆ ಇಲ್ಲಿ ಮಾತ್ರ ಮದುವೆ ಆದಮೇಲೆ, ಕ್ಷಮಿಸಿ, ನಿಮ್ಮ ಹುಡುಗಿಯನ್ನು ನಾವೇ ಕಿಡ್ನಾಪ್ ಮಾಡಿ ಮದುವೆ ಮಾಡಿಸಿದೆವು ಅನ್ನುತ್ತಾರೆ. ಇದನ್ನು ಕೇಳಿದ ಹುಡುಗಿ ಮನೆಯವರು ಮನಸಾರೆ ಒಪ್ಪಿದ್ರೆ ಸರಿ. ಇಲ್ಲ ಅಂದ್ರೆ ಬಾಗಿಲು ದಢಾರ್ ಅಂತಾ ಮುಚ್ಚಲಾಗುತ್ತದೆ. ಹುಡುಗಿ ಹೋದ್ರೆ ಹೋಗ್ಲಿ ನಾವಂತೂ ರಾಜಿ ಆಗುವುದಿಲ್ಲ ಅನ್ನುವುದನ್ನು ಸ್ಪಷ್ಟಪಡಿಸುತ್ತಾರೆ.
ಇನ್ನೂ ಒಂದು ವಿಷಯ ಏನಂದರೆ, ದಾರಿ ಮಧ್ಯೆ ನಿಂತು ನೀನು ನನ್ನನ್ನು ವಿವಾಹವಾಗುತ್ತೀಯಾ ಅಂತಾ ಕೇಳಿದ ತಕ್ಷಣ ಸರಿ ಅಂತಾ ಒಪ್ಪಿಕೊಂಡರೆ ಆಕೆಯ ಬಗ್ಗೆ ಅನುಮಾನ ಮೂಡುತ್ತದಂತೆ. ಒಂದು ವೇಳೆ, ಇಲ್ಲ ನಾನು ಆಗುವುದೇ ಇಲ್ಲ ಅಂತಾ ಪ್ರತಿಭಟಿಸಿದರೆ ಆಕೆ ಮುಗ್ಧೆ ಹಾಗೂ ಒಳ್ಳೆಯವಳು ಅಂತಾ ನಿರ್ಧರಿಸುತ್ತಾರಂತೆ. ವಿವಾಹ ಅನ್ನುವುದು ಎರಡು ಮನಸ್ಸುಗಳು ಒಪ್ಪಿ ಆಗುವುದಾದರೂ, ಇಲ್ಲಿ ಮಕ್ಕಳ ಆಟದ ರೀತಿ ಆಗಿಬಿಟ್ಟಿದೆ.
ಇನ್ನು ಕಿಡ್ನಾಪ್ ಮಾಡಿ ಮದುವೆ ಆದ್ಮೇಲೆ ಹುಡುಗ ತನ್ನ ಮನದನ್ನೆಯನ್ನು ಅಜ್ಞಾತ ಸ್ಥಳಕ್ಕೆ ಹನಿಮೂನ್ ಗೂ ಕರೆದುಕೊಂಡು ಹೋಗುತ್ತಾನೆ. ಆದಷ್ಟು ಅವಳ ಮನಸ್ಸಿಗೆ ಇಷ್ಟ ಆಗುವ ಹಾಗೆ ನಡೆದುಕೊಳ್ಳಲು ಶುರುಮಾಡುತ್ತಾನೆ. ಪಾಪ, ಬೆಕ್ಕಿಗೆ ಆಟ ಆದ್ರೆ ಇಲಿಗೆ ಪ್ರಾಣ ಸಂಕಟ ಆದ ಹಾಗಿದೆ ಹುಡುಗಿ ಸ್ಥಿತಿ. ಇನ್ನು ಕೆಲವೊಮ್ಮೆ ಹುಡುಗಿ ಒಪ್ಪಿದರೆ, ಮದುವೆಯ ನಂತರದ ಸಮಾರಂಭಗಳು ಭರ್ಜರಿಯಾಗಿ ನಡೆಯುತ್ತದೆ. ಭರ್ಜರಿ ಊಟ ಅಂದರೆ, ಬಾಡೂಟ. ಕುರಿಯನ್ನು ಕೊಂದು ಮಾಂಸದ ಅಡುಗೆ ತಯಾರಿಸ್ತಾರೆ.
ಕಿರ್ಗಿಸ್ಥಾನದ ಹಿರಿಯರು ಹೇಳುವ ಪ್ರಕಾರ ಪುರಾತನ ಮಾನಾಸ್ ಹೀರೋಗಳು ಇಂತಹಾ ಒಂದು ಸಂಪ್ರದಾಯಕ್ಕೆ ನಾಂದಿ ಹಾಡಿದರಂತೆ. ಹುಡುಗಿಯನ್ನ ಕಿಡ್ನಾಪ್ ಮಾಡುವುದು ಹಲವಾರು ದೇಶಗಳಲ್ಲಿ ಕ್ರೈಂ ಅಂತಾ ಪರಿಗಣಿಸಲಾಗುತ್ತದೆ. ಆದರೆ,ಇತ್ತೀಚಿನ ದಿನಗಳಲ್ಲಿ ಕಿರ್ಗಿಸ್ಥಾನಿಗಳು ಅಕ್ಷರಸ್ಥರಾಗುತ್ತಿರುವುದರಿಂದ ಅಲ್ಲಿ ಇಂತಹಾ ಸಂಪ್ರದಾಯಗಳನ್ನು ಕೇವಲ ಸಾಂಕೇತಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹಾ ಮದುವೆಗಳು ಎಷ್ಟರ ಮಟ್ಟಿಗೆ ಡೇಂಜರಸ್ ಆಯ್ತು ಅಂದರೆ, ಕ್ರಿಮಿನಲ್ ಚಟುವಟಿಕೆಗಳಲ್ಲಿ ಇದ್ದ ಹುಡುಗರು, ಬಡ ಹುಡುಗರು ದುಡ್ಡಿಗಾಗಿ ಹುಡುಗಿಯರನ್ನು ಕಿಡ್ನಾಪ್ ಮಾಡೋದಕ್ಕೆ ಶುರು ಮಾಡಿದರು. ಈ ಥರಹದ ಕಿಡ್ನಾಪ್ ಗಳಿಂದಾಗಿ ಹುಡುಗಿಯರು ಶಿಕ್ಷಣ ಪಡೆಯಲು ಅಥವಾ ಹೊರಗೆ ಬಂದು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕಲು ಶುರು ಮಾಡಿದರು. ಏನೇ ಆಗಲಿ ಒಬ್ಬ ಹುಡುಗನಿಗೆ ಒಬ್ಬ ಹುಡುಗಿ ಅಂತಾ ಬ್ರಹ್ಮ ನಿರ್ಧರಿಸುತ್ತಾನಂತೆ. ಆದರೆ, ಕಿರ್ಗಿಸ್ಥಾನದಂತಹಾ ಪ್ರದೇಶಗಳಲ್ಲಿ ಮಾತ್ರ ಹಣೆ ಬರಹ ಬರೆಯಬೇಕಾದ ಬ್ರಹ್ಮ ಮದ್ವೆ ವಿಷ್ಯದಲ್ಲಿ ಹುಡುಗಿಯರಿಗೆ ಶ್ಯಾನೆ ಮೋಸ ಮಾಡಿಬಿಟ್ಟ ಅಲ್ವಾ?