Tag: Kylian Mbappe

  • ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

    ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

    ಫ್ರಾನ್ಸ್‌ ಖ್ಯಾತ ಫುಟ್‌ಬಾಲ್‌ ಆಟಗಾರ ಕಿಲಿಯಾನ್‌ ಎಂಬಾಪೆಗೆ (Kylian Mbappe) ಇತ್ತೀಚೆಗೆ ಸೌದಿ ಅರೇಬಿಯಾದ (Saudi Arabia) ಫುಟ್‌ಬಾಲ್‌ ಕ್ಲಬ್‌ ಒಂದು 332 ಮಿಲಿಯನ್‌ ಡಾಲರ್‌ ಅಂದರೆ ಅಂದಾಜು 2,720 ಕೋಟಿ ರೂ. ಸಂಭಾವನೆ ನೀಡಲು ಮುಂದಾಗಿತ್ತು. ಇಷ್ಟೊಂದು ಮೊತ್ತ ಮೂರು, ನಾಲ್ಕು ವರ್ಷಕ್ಕೆ ಅಲ್ಲ. ಕೇವಲ ಒಂದು ಸೀಸನ್‌ಗೆ ಮಾತ್ರ. ಈ ದಾಖಲೆಯ ಡೀಲ್‌ ವಿಷಯ ವಿಶ್ವಾದ್ಯಂತ ಸುದ್ದಿಯಾಯಿತು. ಆದರೆ ಎಂಬಾಪೆ ಇಲ್ಲಿಯವರೆಗೆ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಮುಂದೆ ಸಹಿ ಹಾಕುತ್ತಾರೋ ಗೊತ್ತಿಲ್ಲ. ಡೀಲ್‌ಗಿಂತಲೂ ಮುಖ್ಯವಾಗಿ ಸೌದಿ ಇಷ್ಟೊಂದು ಹಣವನ್ನು ಎಂಬಾಪೆಗೆ ನೀಡಲು ಮುಂದಾಗಿದ್ದು ಯಾಕೆ ಎಂದು ಓದುಗರಾದ ನೀವು ಕೇಳಬಹುದು. ಈ ಪ್ರಶ್ನೆಗೆ ಉತ್ತರ ಸೇರಿದಂತೆ ಕ್ರೀಡೆಗೆ ಇಷ್ಟೊಂದು ಹಣವನ್ನು ಸೌದಿ ಹೂಡಿಕೆ ಮಾಡುತ್ತಿರುವುದು ಯಾಕೆ? ಯಾವ ರೀತಿ ಹೂಡಿಕೆ ಮಾಡುತ್ತಿದೆ? ಹೂಡಿಕೆ ಮಾಡಿದ್ದರಿಂದ ಸೌದಿಗೆ ಏನು ಲಾಭವಾಗಿದೆ? ಮತ್ತು ಭಾರತಕ್ಕೆ ಏನು ಸಂದೇಶ ಈ ವಿಷಯಗಳ ಬಗ್ಗೆ ಕಿರು ವಿವರ ಇಲ್ಲಿದೆ.

    ಸೌದಿ ಶ್ರೀಮಂತ ದೇಶವಾಗಿದ್ದು ಹೇಗೆ?
    ಕಚ್ಚಾ ತೈಲ ಉತ್ಪಾದನೆಯೇ ಸೌದಿಯ ಆರ್ಥಿಕ ಶಕ್ತಿ. ವಿಶ್ವದಲ್ಲೇ ಅತಿ ಹೆಚ್ಚು ತೈಲ (Crude Oil) ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ವಿಶ್ವದ ತೈಲ ನಿಕ್ಷೇಪಗಳು ಪೈಕಿ ವೆನೆಜುವೆಲಾ ಮೊದಲ ಸ್ಥಾನದಲ್ಲಿ ಇದ್ದರೆ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ಒಪೆಕ್‌ ರಾಷ್ಟ್ರಗಳು ಅಂದರೆ ತೈಲ ಉತ್ಪಾದನೆ ಮಾಡುವ ದೇಶಗಳ ಪೈಕಿ ಸೌದಿಯೇ ಲೀಡರ್‌. ಯಾಕೆಂದರೆ ಸೌದಿ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಉತ್ಪಾದನೆ ಮಾಡುತ್ತಿದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನ ಅಂದರೆ ಜಿಡಿಪಿಯಲ್ಲಿ ಕಚ್ಚಾ ತೈಲದ ಪಾಲು 39%.

    ತೈಲದ ಆದಾಯದಿಂದ ಶ್ರೀಮಂತ ದೇಶವಾಗಿ ಹೊರಹೊಮ್ಮಿದರೂ ಸೌದಿ ಅರೇಬಿಯಾ ಈಗ ಸಂಕಷ್ಟದಲ್ಲಿ ಸಿಲುಕಿದೆ. ಸಂಕಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಯಾವುದು ಎಂದರೆ ಅದು ತೈಲ ಬೆಲೆ. ಒಪೆಕ್‌ ರಾಷ್ಟ್ರಗಳು ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆಯನ್ನು 80-90 ಡಾಲರ್‌ ಬೆಲೆಯಲ್ಲೇ ಸ್ಥಿರವಾಗಿಸಲು ಪ್ರಯತ್ನಿಸುತ್ತಿವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಹಿಂದೆ 2008ರಲ್ಲಿ ಆರ್ಥಿಕ ಹಿಂಜರಿತವಾದಾಗ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಕೋವಿಡ್‌ ಸಮಯದಲ್ಲಿ ಭಾರೀ ಇಳಿಕೆಯಾಗಿತ್ತು. ನಂತರ ರಷ್ಯಾ ಉಕ್ರೇನ್‌ (Russia-Ukraine) ಯುದ್ಧದ ಸಮಯದಲ್ಲಿ ತೈಲ ಬೆಲೆ ಭಾರೀ ಏರಿಕೆಯಾಗಿತ್ತು. ಆದರೆ ಈಗ ತೈಲ ಬೆಲೆ ಕಡಿಮೆ ಆಗುತ್ತಿದೆ. ತೈಲ ಬೆಲೆ ಕಡಿಮೆಯಾದರೆ ತೈಲ ಆಮದು ಮಾಡುವ ಭಾರತಕ್ಕೆ ಲಾಭ. ಆದರೆ ಸೌದಿಗೆ ಸಮಸ್ಯೆ ಆಗುತ್ತದೆ. ಯಾಕೆಂದರೆ ಅವರ ಜಿಡಿಪಿಯಲ್ಲಿ ತೈಲದ ಪಾಲು 39%. ತೈಲದ ಪಾಲು 39% ಇದ್ದರೂ ಇದು ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಕಡಿಮೆ ಆಗುತ್ತಿದೆ. ಎಷ್ಟು ಕಡಿಮೆ ಆಗುತ್ತಿದೆ ಎಂದರೆ 2011 ರಲ್ಲಿ ಇದು 45.2% ಇದ್ದರೆ 2016ರಲ್ಲಿ ಇದು 43.7% ಇಳಿಕೆಯಾಗಿತ್ತು. 2021 ರಲ್ಲಿ ಇದು 38.8%ಗೆ ಇಳಿಕೆಯಾಗಿದೆ.

    ತೈಲದ ಬೇಡಿಕೆ ಕಡಿಮೆ ಯಾಕೆ ಆಗುತ್ತಿದೆ ಎನ್ನುವುದಕ್ಕೂ ಕಾರಣವಿದೆ. ವಿಶ್ವದ ಹಲವು ದೇಶಗಳು ಈಗ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಹಾಕಿಕೊಂಡಿದೆ. ಜರ್ಮನಿ 2045, ದಕ್ಷಿಣ ಕೊರಿಯಾ 2050, ಅಮೆರಿಕ 2050, ಚೀನಾ 2060, ಮುಖ್ಯವಾಗಿ ಭಾರತ 2070ಕ್ಕೆ ಗುರಿಯನ್ನು ಹಾಕಿಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡುವ ದೇಶಗಳಾದ ಭಾರತ, ಚೀನಾ, ಅಮೆರಿಕ ಈಗಾಗಲೇ ಈ ಗುರಿಯನ್ನು ತಲುಪಲು ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಕೆಲಸ ಆರಂಭಿಸಿದೆ. ಇದು ತೈಲ ಉತ್ಪಾದನೆ ಮಾಡುವ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಈಗ ಸೌದಿ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.

    ಇಲ್ಲಿಯವರೆಗೆ ಎಷ್ಟು ಹೂಡಿಕೆ ಮಾಡಿದೆ?
    ಕಚ್ಚಾ ತೈಲವನ್ನು ನಂಬಿದರೆ ಭವಿಷ್ಯದಲ್ಲಿ ನಮಗೆ ಭವಿಷ್ಯವಿಲ್ಲ ಎಂಬುದನ್ನು ಈಗಲೇ ಅರಿತ ಸೌದಿ ಕ್ರೀಡೆಗೆ ಈಗ ಭಾರೀ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. ಮೊದಲಿನಿಂದಲೂ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದ ಸೌದಿ ಈಗ ಯಾರು ನಿರೀಕ್ಷೆ ಮಾಡದ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಅರಲ್ಲೂ 2018 ರಿಂದ ಬಹಳ ಆಕ್ರಮಣಕಾರಿಯಾಗಿ ಹೂಡಿಕೆ ಮಾಡಲು ಆರಂಭಿಸಿದೆ.

    ಏಪ್ರಿಲ್‌ 2018 : ಸೌದಿ ಕ್ರೀಡಾ ಸಚಿವಾಲಯ ವರ್ಲ್ಡ್‌ ರೆಸ್ಲಿಂಗ್ ಎಂಟರ್‌ಟೈನ್ಮೆಂಟ್‌ (WWE) ಜೊತೆ ಸಹಿ ಹಾಕಿ ಟೂರ್ನಿಯನ್ನು ಸೌದಿಯಲ್ಲಿ ನಡೆಸಲು ಸಹಿ ಹಾಕಿತು. 10 ವರ್ಷಗಳ ಒಪ್ಪಂದ ಇದಾಗಿದ್ದು ಪ್ರತಿ ವರ್ಷ ಸೌದಿ 100 ಮಿಲಿಯನ್‌ ಡಾಲರ್‌ ಹಣವನ್ನು ಪಾವತಿ ಮಾಡಲಿದೆ.   ಇದನ್ನೂ ಓದಿ: ನೀಲಿ ಬಣ್ಣದ ಜೀನ್ಸ್‌ ಬ್ಯಾನ್‌, ಆತ್ಮಹತ್ಯೆಗೈದ್ರೆ ಕುಟುಂಬಕ್ಕೆ ಶಿಕ್ಷೆ – ಉತ್ತರ ಕೊರಿಯಾದಲ್ಲಿದೆ ವಿಚಿತ್ರ ಕಾನೂನುಗಳು

    ಫೆಬ್ರವರಿ 2020: ಮೊದಲ ಬಾರಿಗೆ ರಿಯಾದ್‌ನಲ್ಲಿ ಸೌದಿ ಕಪ್‌ ಹೆಸರಿನಲ್ಲಿ ಕುದುರೆ ರೇಸ್ ಆರಂಭವಾಗಿದೆ. ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಬರೋಬ್ಬರಿ 20 ಮಿಲಿಯನ್‌ ಡಾಲರ್‌. ಇದು ಸಾರ್ವಕಾಲಿಕ ದಾಖಲೆಯ ಬಹುಮಾನ. ಅತಿ ಹೆಚ್ಚು ಸಂಭಾವನೆ ಪಡೆಯುವ ಕುದುರೆ ರೇಸ್ ಇದಾಗಿದೆ.

    ಜನವರಿ 2021 : ಪ್ರವಾಸೋದ್ಯಮವೇ ಸೌದಿಯ ಮುಖ್ಯ ಆದಾಯಗಳಲ್ಲಿ ಒಂದು. ಈ ಕಾರಣಕ್ಕೆ 3 ವರ್ಷಗಳ ಕಾಲ ಸೌದಿ ಪ್ರವಾಸೋದ್ಯಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲು ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನಲ್‌ ಮೆಸ್ಸಿ ಜೊತೆ 25 ಮಿಲಿಯನ್‌ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

    ಅಕ್ಟೋಬರ್‌ 2021 :  ಸೌದಿ ಅರೇಬಿಯಾದ ಪಬ್ಲಿಕ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ 400 ಮಿಲಿಯನ್‌ ಡಾಲರ್‌ಗೆ ಇಂಗ್ಲೆಂಡಿನ ಪ್ರಸಿದ್ಧ ನ್ಯೂ ಕಾಸಲ್‌ ಯುನೈಟೆಡ್‌ ಫುಟ್‌ಬಾಲ್‌ ತಂಡವನ್ನು ಖರೀದಿಸಿದೆ.

    ಡಿಸೆಂಬರ್‌ 2021: ಸೌದಿ ಅರೇಬಿಯಾದ ಮೊದಲ ಫಾರ್ಮುಲಾ 1 ಕಾರ್‌ ರೇಸ್‌ ಜೆಡ್ಡಾದಲ್ಲಿ ನಡೆಯಿತು. ಸೌದಿ ಅರೇಬಿಯಾದ ರಾಷ್ಟ್ರೀಯ ತೈಲ ಕಂಪನಿ ಸೌದಿ ಅರಾಮ್ಕೋ ಇದರ ಮುಖ್ಯ ಪ್ರಾಯೋಜಕತ್ವ ವಹಿಸಿತ್ತು. ಈಗ ಇದು ಸೌದಿ ಗ್ರಾಂಡ್‌ ಪ್ರಿಕ್ಸ್‌ ಎಂದೇ ಪ್ರಸಿದ್ಧಿ ಪಡಿದಿದೆ.

    ಜುಲೈ 2022: ಫಾರ್ಮುಲಾ 1 ಆಯೋಜನೆ ಮಾಡುತ್ತಿರುವ ಸೌದಿ ಒಂದು ಫ್ರಾಂಚೈಸಿಯನ್ನೇ ಖರೀದಿಸಿದೆ. ಫಾರ್ಮುಲಾ 1 ಫ್ರಾಂಚೈಸಿಯಾಗಿರುವ ಆಸ್ಟನ್ ಮಾರ್ಟಿನ್ ನಿಂದ 17% ಪಾಲನ್ನು ಸೌದಿಯ ಪಬ್ಲಿಕ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ ಖರೀದಿಸಿದೆ.

    ಡಿಸೆಂಬರ್‌ 2022: ಜಾಗತಿಕ ಫುಟ್‌ಬಾಲ್‌ ಸೂಪರ್‌ಸ್ಟಾರ್‌, ಪೋರ್ಚುಗಲ್‌ನ ಕ್ರಿಸ್ಟಿಯನ್‌ ರೊನಾಲ್ಡೋ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ತೊರೆದು ಸೌದಿಯ ಅಲ್-ನಾಸ್ರ್ ತಂಡವನ್ನು ಸೇರಿದ್ದಾರೆ. ಈ ಡೀಲ್‌ ಎಷ್ಟು ಗೊತ್ತೆ ಬರೋಬ್ಬರಿ 600 ಮಿಲಿಯನ್‌ ಡಾಲರ್‌. ರೂಪಾಯಿಯಲ್ಲಿ ಹೇಳುವುದಾದರೆ ಅಂದಾಜು 1,800 ಕೋಟಿ ರೂ. ಇದು ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದಿದ್ದು ಅತಿ ದೊಡ್ಡ ಡೀಲ್‌ ಎನಿಸಿಕೊಂಡಿದೆ. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್‌’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?

    ಜೂನ್‌ 2023: ಅರ್ಜೆಂಟೀನಾ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿಗೆ ಬರೋಬ್ಬರಿ 4,100 ಕೋಟಿ ರೂ. ನೀಡಲು ಸೌದಿಯ ಆಲ್‌-ಹಿಲಾಲ್‌ ಮುಂದೆ ಬಂದಿತ್ತು. ಆದರೆ ಮೆಸ್ಸಿಯೂ ಈ ಆಫರ್‌ ತಿರಸ್ಕರಿಸಿದ್ದರು.

    ಏಪ್ರಿಲ್‌, 2023: WWE, ಕುದುರೆ ರೇಸ್‌, ಫಾರ್ಮುಲಾ 1, ಫುಟ್‌ಬಾಲ್‌ ಮೇಲೆ ಕೋಟಿಗಟ್ಟಲೇ ಹಣವನ್ನು ಸುರಿದಿರುವ ಸೌದಿ ಕ್ರಿಕೆಟ್‌ ಮೇಲೂ ಕಣ್ಣು ಹಾಕಿತ್ತು. ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆರಂಭಿಸಲು ಮುಂದಾಗಿತ್ತು. ಈ ಸಂಬಂಧ ಭಾರತದ ಬಿಸಿಸಿಐ ಜೊತೆಯೂ ಮಾತುಕತೆ ನಡೆಸಿತ್ತು. ಭಾರತ ಮತ್ತು ಪಾಕಿಸ್ತಾನ ಆಟಗಾರರನ್ನು ಸೇರಿಸಿ ಲೀಗ್‌ ಮಾಡಿದರೆ ಸೂಪರ್‌ ಹಿಟ್‌ ಆಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿತ್ತು. ಆದರೆ ಬಿಸಿಸಿಐ ಭಾರತದ ಆಟಗಾರರನ್ನು ಈ ಲೀಗ್‌ಗೆ ಕಳುಹಿಸಲು ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಸದ್ಯ ಸೌದಿಯ ಈ ಒಂದು ಕನಸು ಈಗಲೂ ಕನಸಾಗಿಯೇ ಉಳಿದಿದೆ.

    ಕ್ರೀಡೆಯ ಮೇಲೆ ಹೂಡಿಕೆ ಹೇಗೆ?
    ಸೌದಿಯ ಕ್ಲಬ್‌ಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಭಾರತದಲ್ಲಿ ನಡೆಯುವ ಐಪಿಎಲ್‌ ಬಗ್ಗೆ ತಿಳಿದುಕೊಳ್ಳೋಣ. ಐಪಿಎಲ್‌ ಫ್ರಾಂಚೈಸಿಯಲ್ಲಿ ಸರ್ಕಾರದ ಪಾಲು ಇರುವುದಿಲ್ಲ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌ , ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿದಂತೆ ಎಲ್ಲಾ ತಂಡಗಳ ಮಾಲೀಕತ್ವ ಇರುವುದು ಖಾಸಗಿ ವ್ಯಕ್ತಿಗಳ ಕೈಗಳಲ್ಲಿ. ಆದರೆ ಸೌದಿಯಲ್ಲಿ ಹೀಗಿಲ್ಲ. ಉದಾಹರಣೆಗೆ ಎಂಬಾಪೆಗೆ 2,720 ಕೋಟಿ ರೂ ಡೀಲ್‌ಗೆ ಮುಂದಾಗಿದ್ದ ಅಲ್‌-ಹಿಲಾಲ್‌ ಕ್ಲಬ್‌ನಲ್ಲಿ ಪಬ್ಲಿಕ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ 75% ಷೇರನ್ನು ಹೊಂದಿದರೆ ಉಳಿದವರ ಪಾಲು 25% ಅಷ್ಟೇ.  ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

    ಈ ಫಂಡ್‌ ಅನ್ನು ಸ್ಥಾಪಿಸಿದವರು ಯಾರು ಅಂದರೆ ಸೌದಿಯ ಹಿಂದಿನ ರಾಜ ಫೈಸಲ್ ಬಿನ್ ಅಬ್ದುಲ್‌ ಅಜೀಜ್ ಅಲ್ ಸೌದ್. ಸೌದಿ ಅರೇಬಿಯಾ ಸರ್ಕಾರದ ಪರವಾಗಿ ಹಣವನ್ನು ಹೂಡಿಕೆ ಮಾಡುವ ಉದ್ದೇಶದಿಂದ 1971ರಲ್ಲಿ ಈ ಫಂಡ್‌ ಸ್ಥಾಪಿಸಲಾಗಿದೆ. ರಾಷ್ಟ್ರದ ಆರ್ಥಿಕತೆಗೆ ಪೂರಕವಾಗುವ ಯೋಜನೆಗಳಿಗೆ ಹಣಕಾಸಿನ ಬೆಂಬಲವನ್ನು ಈ ನಿಧಿ ಒದಗಿಸುತ್ತದೆ. ಸದ್ಯ ಒಟ್ಟು 700 ಶತಕೋಟಿ ಡಾಲರ್ ಅಂದಾಜು ಆಸ್ತಿಯನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ಸಾರ್ವಭೌಮ ಸಂಪತ್ತಿನ ನಿಧಿಗಳಲ್ಲಿ ಇದು ಒಂದಾಗಿದೆ. ಈಗ ನಿಧಿಯ ಸಂಪೂರ್ಣ ನಿಯಂತ್ರಣವನ್ನು ಸೌದಿ ರಾಜಮೊಹಮ್ಮದ್ ಬಿನ್ ಸಲ್ಮಾನ್ ಹೊಂದಿದ್ದಾರೆ.

    ಸೌದಿಗೆ ಏನು ಲಾಭ?
    ಎಲ್ಲರಿಗೂ ಸರ್ಕಾರಿ ಕೆಲಸ ನೀಡುವುದು ಸರ್ಕಾರದ ಕೆಲಸವಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶ ನೀಡುವುದು ಸರ್ಕಾರದ ಕೆಲಸ. ಈ ಕಾರಣಕ್ಕೆ ತೈಲವನ್ನು ಹೊರತು ಪಡಿಸಿ ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಸರ್ಕಾರ ವಿಷನ್‌ 2030 ರೂಪಿಸಿದ್ದು ಇದರ ಭಾಗವಾಗಿ ಸೌದಿ ಕ್ರೀಡೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದಾಗಿ ದೇಶದಲ್ಲಿ ಉದ್ಯೋಗ, ಪ್ರವಾಸೋದ್ಯಮವನ್ನು ಉತ್ತೇಜನ ಸಿಗುತ್ತದೆ. ಸೌದಿ ಅರೇಬಿಯಾದ ಒಟ್ಟು ಆಂತರಿಕ ಉತ್ಪನ್ನಕ್ಕೆ (GDP) ಕ್ರೀಡೆಗಳ ಕೊಡುಗೆಯು 2016 ಮತ್ತು 2019 ರ ನಡುವೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.

    ವರ್ಷಪೂರ್ತಿ ಒಂದೊಂದು ದೊಡ್ಡ ಕ್ರೀಡಾಕೂಟವನ್ನು ಆಯೋಜನೆ ಮಾಡಿದರೆ ಲಕ್ಷಾಂತರ ಮಂದಿ ವಿದೇಶಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಕೇವಲ ಒಂದು ದಿನಕ್ಕೆ ಮಾತ್ರ ವಿದೇಶಿಗರು ಬರುವುದಿಲ್ಲ. ಪ್ರವಾಸ ಮಾಡಲೆಂದೇ ಬರುತ್ತಾರೆ. ಇದರಿಂದಾಗಿ ವಿಮಾನ ಕ್ಷೇತ್ರಕ್ಕೆ ಮಾತ್ರವಲ್ಲದೇ ಟೂರಿಸಂ ಅಭಿವೃದ್ಧಿಯಾಗುತ್ತದೆ. ಹೋಟೆಲ್‌, ಟ್ಯಾಕ್ಸಿ, ಹೀಗೆ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುತ್ತದೆ. ಹಣದ ವ್ಯವಹಾರ ಹೆಚ್ಚಾದರೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತದೆ.

     

    ಭಾರತಕ್ಕೆ ಏನು ಸಂದೇಶ?
    ಸೌದಿಯಂತೆ ಭಾರತವೂ ಕ್ರೀಡೆಯ ಮೇಲೆ ಹೂಡಿಕೆ ಮಾಡಬಹುದು. ಸದ್ಯ ಕ್ರಿಕೆಟ್‌ ಒಂದೇ ಭಾರತದಲ್ಲಿ ಫೇಮಸ್‌ ಆಗಿದೆ. ಆದರೆ ಕ್ರಿಕೆಟಿನಷ್ಟೇ ಫುಟ್‌ಬಾಲ್‌ ಮತ್ತು ಇತರ ಕ್ರೀಡೆಗಳಿಗೆ ಅಭಿಮಾನಿಗಳು ಇದ್ದಾರೆ. ಇತರ ಕ್ರೀಡೆಗಳಿಗೆ ಪ್ರೋತ್ಸಾಹದ ಕೊರತೆ ಕಾಣುತ್ತಿದೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ವಿದೇಶಿ ಆಟಗಾರರು ಭಾರತಕ್ಕೆ ಬರಬಹುದು. ಹೇಗೆ ಸೌದಿ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುವ ಟೂರಿಸಂ ಅಭಿವೃದ್ಧಿ ಮಾಡುತ್ತದೋ ಅದೇ ರೀತಿ ಭಾರತದಲ್ಲೂ ರಾಜ್ಯಗಳು ಉತ್ತೇಜನ ನೀಡಿದರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಯುರೋಪ್‌ ದೇಶಗಗಳು ಬಿಡಿ ನಮ್ಮ ಸಮೀಪದ ಶ್ರೀಲಂಕಾ, ಥಾಯ್ಲೆಂಡ್‌ಗೆ ಪ್ರವಾಸೋದ್ಯಮವೇ ಅವರ ಆದಾಯದ ಮೂಲ. ಕ್ರೀಡೆಯ ಜೊತೆ ಪ್ರವಾಸಿ ಸ್ಥಳಗಳನ್ನು ನಾವು ಅಭಿವೃದ್ಧೀ ಮಾಡಿದರೆ ಹೋಟೆಲ್‌, ಟ್ಯಾಕ್ಸಿ, ಮೆಟ್ರೋ, ಅಂಗಡಿಗಳಿಗೆ ಆದಾಯ ಬರುತ್ತದೆ. ಜನರಿಗೆ ಉದ್ಯೋಗ ಸಿಗುತ್ತದೆ. ಎಲ್ಲದರ ಪರಿಣಾಮ ಸರ್ಕಾರದ ಬೊಕ್ಕಸ ತುಂಬುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಷನ್‌ ಪ್ಲ್ಯಾನ್‌ ಮಾಡಿ ಕೆಲಸ ಮಾಡಬೇಕಿದೆ.

    – ಅಶ್ವಥ್‌ ಸಂಪಾಜೆ‌


     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್

    ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್

    ಬ್ಯೂನಸ್ ಐರಿಸ್: 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ (FIFA World Cup 2022) ಗೆದ್ದ ಅರ್ಜೆಂಟೀನಾ (Argentina) ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಬ್ಯೂನಸ್ ಐರಿಸ್‌ನಲ್ಲಿ 46 ಲಕ್ಷ ಮಂದಿ ಬೀದಿಗಳಲ್ಲಿ ಸಂಭ್ರಮಿಸುತ್ತಾ ವಿಶ್ವ ವಿಜೇತ ಮೆಸ್ಸಿ (Lionel Messi) ಪಡೆಯನ್ನು ಸ್ವಾಗತಿಸಿದ್ದಾರೆ. ಬಸ್ ಟಾಪಲ್ಲಿ ಕುಳಿತು, ನಿಂತು ಕರತಾಡನ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳ ಪ್ರೀತಿಯನ್ನು ಕಣ್ತುಂಬಿಕೊಂಡಿದ್ದಾರೆ.

    ಇದೀಗ ಮ್ಯಾಜಿಕ್ ಮೆಸ್ಸಿ ಕೈಯಲ್ಲಿ ಅರಳಿದ ಟ್ಯಾಟು (lotus Tattoo) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಮೆಸ್ಸಿ ಬಲಗೈನಲ್ಲಿ ಕೇಸರಿ ಬಣ್ಣದಲ್ಲಿ ಬಿಡಿಸಿದ ಟ್ಯಾಟು ಒಂದು ಬಿಜೆಪಿ ಪಕ್ಷದ ಚಿನ್ಹೆಯನ್ನೇ ಹೋಲುವಂತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದು ಈಗ ಭಾರತೀಯರ ಗಮನ ಸೆಳೆದಿದೆ. `ಮೆಸ್ಸಿ ಗೆಲುವು ಕೂಡಾ ಬಿಜೆಪಿ (BJP) ಕೈಯಲ್ಲಿದೆ’ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 2ನೇ ಟೆಸ್ಟ್ ಆರಂಭಕ್ಕೂ ಮುನ್ನ ಗಾಯಗೊಂಡ ಕ್ಯಾಪ್ಟನ್ ರಾಹುಲ್ – ಟೀಂ ಇಂಡಿಯಾಗೆ ಪೂಜಾರ ಸಾರಥಿ?

    ವಿಜಯೋತ್ಸವದಲ್ಲಿ ತಪ್ಪಿದ ದುರಂತ:
    ಇನ್ನೂ ಅರ್ಜೆಂಟೀನಾ ಸಂಭ್ರಮಿಸುತ್ತಿದ್ದ ಈ ಹೊತ್ತಲ್ಲೇ ಮೆಸ್ಸಿ ಪಡೆ ಭಾರೀ ಅವಘಡದಿಂದ ಪಾರಾಗಿದೆ. ಬಸ್ ಮೇಲ್ಭಾಗದಲ್ಲಿ ಕುಳಿತು ಚಲಿಸುವಾಗ ವಿದ್ಯುತ್ ತಂತಿಯೊಂದ್ರಿಂದ ಸ್ವಲ್ಪದ್ರಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ

    ಓರ್ವ ಆಟಗಾರನ ಕ್ಯಾಪ್ ವಿದ್ಯುತ್ ತಂತಿಗೆ ತಗುಲಿ ಕೆಳಗೆ ಬಿದ್ದಿದೆ. ಇನ್ನೂ ಮೆಸ್ಸಿ ಪಡೆ ತೆರಳ್ತಿದ್ದ ಓಪನ್ ಟಾಪ್ ಬಸ್ ಮೇಲೆ ಕೆಲ ಅಭಿಮಾನಿಗಳು ಸೇತುವೆ ಮೇಲಿಂದ ಜಿಗಿದಿದ್ದಾರೆ. ಕೆಲವರು ಚಲಿಸ್ತಿದ್ದ ಬಸ್ ಹತ್ತಲು ಪ್ರಯತ್ನಿಸಿದ್ದಾರೆ. ಲಕ್ಷಾಂತರ ಮಂದಿ ಅಭಿಮಾನಿಗಳಿಂದಾಗಿ ಒಂದು ಹಂತದಲ್ಲಿ ಬಸ್ ಮುಂದಕ್ಕೆ ಚಲಿಸೋದೇ ಕಷ್ಟವಾಗಿತ್ತು. ಇದ್ರಿಂದಾಗಿ ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಲಾಯ್ತು.

    ಮೆಸ್ಸಿ ಪಡೆಯನ್ನು ಹೆಲಿಕಾಪ್ಟರ್ ಮೂಲಕ ಫುಟ್ಬಾಲ್ ಸಂಘದ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. ವಿಜಯೋತ್ಸವದ ಮೆರವಣಿಗೆ ಅರ್ಧಕ್ಕೆ ಮೊಟಕಾಗಿದ್ದಕ್ಕೆ ಫುಟ್ಬಾಲ್ ಸಂಘ ಅಭಿಮಾನಿಗಳ ಕ್ಷಮೆ ಕೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಫಿಫಾ: ಮೆಸ್ಸಿ ಸೇರಿದಂತೆ ಕ್ರೀಡಾಪಟುಗಳ ಸಾರಿಗೆ ವ್ಯವಸ್ಥೆ ಮೇಲ್ವಿಚಾರಣೆ ವಹಿಸಿದ್ದು ಬೆಂಗಳೂರು ಮಹಿಳೆ

    ಫಿಫಾ: ಮೆಸ್ಸಿ ಸೇರಿದಂತೆ ಕ್ರೀಡಾಪಟುಗಳ ಸಾರಿಗೆ ವ್ಯವಸ್ಥೆ ಮೇಲ್ವಿಚಾರಣೆ ವಹಿಸಿದ್ದು ಬೆಂಗಳೂರು ಮಹಿಳೆ

    ಬೆಂಗಳೂರು: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ (FIFA World Cup2022) ಅದ್ಧೂರಿ ತೆರೆಬಿದ್ದಿದೆ. ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಇದು ವಿಶ್ವದ ಜನರ ನೆನಪಾಗಿ ಉಳಿಯಲಿದೆ.

    ಚಾಂಪಿಯನ್ ಆದ ಅರ್ಜೆಂಟಿನಾದ (Argentina) ಅಬ್ಬರ, ಕೊನೆಯ ಕ್ಷಣದ ರೋಚಕತೆ, ಮೆಸ್ಸಿಯ (Lionel Messi) ಕೋಟ್ಯಂತರ ಅಭಿಮಾನಿಗಳು ಇನ್ನೂ ಅದೇ ಗುಂಗಿನಲ್ಲಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಯ್ತು! – ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿಟ್ಟ ಮೆಸ್ಸಿ

    ಇನ್ನೂ ವಿಶ್ವದ ಗಮನ ಸೆಳೆದ ಕಾಲ್ಚೆಂಡು ಜಾತ್ರೆಯಲ್ಲಿ ಅನೇಕ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಕೇವಲ ನುರಿತರಿಗೆ ಮಾತ್ರ ತಾತ್ಕಾಲಿಕ ಉದ್ಯೋಗ ಸಿಗುತ್ತೆ. ಫಿಫಾ ವಿಶ್ವಕಪ್ ವೇಳೆ ತಾತ್ಕಲಿಕ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹುತೇಕರು ಕನಸು ಕಂಡಿರ್ತಾರೆ, ಕಸರತ್ತು ಮಾಡ್ತಾರೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಅನಾಯಾಸವಾಗಿ ಫುಟ್ಬಾಲ್ ವಿಶ್ವಕಪ್ ನಲ್ಲಿ ಕೆಲಸ ಮಾಡುವ ಅವಕಾಶ ದಕ್ಕಿತ್ತು.

    ಹೌದು. ಕೋಟ್ಯಂತರ ಜನರ ಆರಾಧ್ಯ ಮೆಸ್ಸಿಯಿಂದ ಹಿಡಿದು ಇಡೀ ವಿಶ್ವಕಪ್ ನಲ್ಲಿ ಪಾಲ್ಗೊಂಡ ಫುಟ್ಬಾಲ್ ಟೀಮ್ ಗಳ ಸಾರಿಗೆ ವ್ಯವಸ್ಥೆಯ ಮೇಲ್ವಿಚಾರಣಾ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದು ಬೆಂಗಳೂರಿನ ಮಹಿಳೆ ಶೈನಿ. ಹಾಟ್ ಲೈನ್ ಅಧಿಕಾರಿಯಾಗಿರುವ ಬೆಂಗಳೂರಿನ ಶೈನಿ ಕತಾರ್‌ನ (Qatar) ಫಿಫಾದಲ್ಲಿ ಕ್ರೀಡಾಪಟುಗಳನ್ನು ಹೈ ಸೆಕ್ಯೂರಿಟಿ ಮೂಲಕ ಕ್ರೀಡಾಂಗಣಕ್ಕೆ ಹಾಗೂ ಅಲ್ಲಿಂದ ಹೋಟೆಲ್‌ಗೆ ಕರೆದೊಯ್ಯುವ ಜವಾಬ್ದಾರಿ ವಹಿಸಿಕೊಂಡಿದ್ದರು. ಇದನ್ನೂ ಓದಿ: ಅಭಿಮಾನಿಗಳಿಗೆ ಮತ್ತೆ ಗುಡ್‌ನ್ಯೂಸ್ ಕೊಟ್ಟ ಮ್ಯಾಜಿಕ್ ಮೆಸ್ಸಿ – ಸದ್ಯಕ್ಕಿಲ್ಲ ನಿವೃತ್ತಿ

    ಇದೊಂದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಕ್ರೀಡಾಪಟುಗಳ ಸಾರಿಗೆ ವ್ಯವಸ್ಥೆಯಲ್ಲಿ ಹಾಗೂ ಸುರಕ್ಷತೆಯಲ್ಲಿ ಕೊಂಚವೂ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಬೇಕಾಗುತ್ತೆ. ಅನಿರೀಕ್ಷಿತವಾಗಿ ಮೊದಲ ಬಾರಿಗೆ ಈ ಜವಾಬ್ದಾರಿ ಬಂದಿದ್ದು ಖುಷಿ ತಂದಿದೆ ಅಂತಾ ಶೈನಿ ಸಂಭ್ರಮ ಹಂಚಿಕೊಂಡಿದ್ದಾರೆ. ಶೈನಿ ಕತಾರ್ ನಲ್ಲಿ ಈ ಹಿಂದೆ ಖಾಸಗಿ ಸಂಸ್ಥೆಯಲ್ಲಿಯೂ ಉದ್ಯೋಗ ನಿರ್ವಹಿಸಿದ್ದರು. ಹೀಗಾಗಿ ಈ ಬಾರಿ ವಿಶ್ವಕಪ್ ವೇಳೆ ಕಾರ್ಯನಿರ್ವಹಿಸಲು ಆಫರ್ ಬಂದಿತ್ತು. ಫಿಫಾದಲ್ಲಿ ಕರ್ತವ್ಯ ನಿರ್ವಹಿಸಿ ಶೈನಿ ಫುಲ್ ಖುಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಭಿಮಾನಿಗಳಿಗೆ ಮತ್ತೆ ಗುಡ್‌ನ್ಯೂಸ್ ಕೊಟ್ಟ ಮ್ಯಾಜಿಕ್ ಮೆಸ್ಸಿ – ಸದ್ಯಕ್ಕಿಲ್ಲ ನಿವೃತ್ತಿ

    ಅಭಿಮಾನಿಗಳಿಗೆ ಮತ್ತೆ ಗುಡ್‌ನ್ಯೂಸ್ ಕೊಟ್ಟ ಮ್ಯಾಜಿಕ್ ಮೆಸ್ಸಿ – ಸದ್ಯಕ್ಕಿಲ್ಲ ನಿವೃತ್ತಿ

    ಕತಾರ್: ವಿಶ್ವಕಪ್ (FIFA World Cup 2022) ನಂತರ ಲಿಯೋನೆಲ್ ಮೆಸ್ಸಿ (Lionel Messi) ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಹೇಳ್ತಾರೆ ಎಂಬ ಸುದ್ದಿ ಹಬ್ಬಿತ್ತು. ಮೆಸ್ಸಿ ಕೂಡ ವಿಶ್ವಕಪ್ ಪಂದ್ಯವೇ ನನ್ನ ಕೊನೆಯ ಪಂದ್ಯ ಎನ್ನುತ್ತಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ರು. ಈ ಬಗ್ಗೆ ಮೆಸ್ಸಿ ಸ್ಪಷ್ಟೀಕರಣ ನೀಡಿದ್ದಾರೆ.

    ನನ್ನ ವೃತ್ತಿ ಜೀವನವನ್ನು ಇಲ್ಲಿಗೇ ಮುಗಿಸೋಣ ಅಂತಾ ಭಾವಿಸಿದ್ದೆ. ಇಲ್ಲಿಯವರೆಗೂ ನನಗೆ ದಕ್ಕದೇ ಇದ್ದಿದ್ದು ಇದೊಂದೇ ಆಗಿತ್ತು. ಇನ್ಮೇಲೆ ನಾನು ಏನೂ ಕೇಳಲ್ಲ. ನಾನು `ಕೊಪಾ ಅಮೆರಿಕ’ ಕಪ್ ಗೆದ್ದಿದ್ದೇನೆ. ಈ ವಿಶ್ವಕಪ್‌ಗಾಗಿ ತೀವ್ರವಾಗಿ ಹೋರಾಡಿದೆ. ನನ್ನ ವೃತ್ತಿ ಜೀವನದ ಕೊನೆಯಲ್ಲಿ ಇದನ್ನು ಗೆದ್ದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಯ್ತು! – ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿಟ್ಟ ಮೆಸ್ಸಿ

    ನಾನು ಫುಟ್ಬಾಲ್ ಕ್ರೀಡೆಯನ್ನ ತುಂಬಾ ಪ್ರೀತಿಸುತ್ತೇನೆ. ವಿಶ್ವ ಚಾಂಪಿಯನ್ ಆಗಿ ಇನ್ನಷ್ಟು ಆಟ ಆಡೋಣ ಅಂತಾ ಇದ್ದೀನಿ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ಈ ಕ್ರೆಡಿಟ್ ನನ್ನೊಬ್ಬನದ್ದೇ ಅಲ್ಲ. ಇಡೀ ತಂಡದ್ದು ಎಂದು ಮೆಸ್ಸಿ ತಿಳಿಸಿದ್ದಾರೆ. ಈ ಮೂಲಕ ಸದ್ಯಕ್ಕಿಲ್ಲ ನಿವೃತ್ತಿ ಎಂದು ಮೆಸ್ಸಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 10 ನಂಬರ್ ಜೆರ್ಸಿ ತಂದ ಅದೃಷ್ಟ – ಅಂದು ಸಚಿನ್‍, ಇಂದು ಮೆಸ್ಸಿಗಾಗಿ ವಿಶ್ವಕಪ್

    Live Tv
    [brid partner=56869869 player=32851 video=960834 autoplay=true]

  • ಫಿಫಾ ಫೈನಲ್ – ಮೆಸ್ಸಿ Vs ಎಂಬಾಪೆ ನಡುವೆ ಕಾಲ್ಚೆಂಡಿನಾಟದ ಕ್ಲೈಮ್ಯಾಕ್ಸ್‌ ಫೈಟ್

    ಫಿಫಾ ಫೈನಲ್ – ಮೆಸ್ಸಿ Vs ಎಂಬಾಪೆ ನಡುವೆ ಕಾಲ್ಚೆಂಡಿನಾಟದ ಕ್ಲೈಮ್ಯಾಕ್ಸ್‌ ಫೈಟ್

    ಕತಾರ್: ಅರಬ್ಬರ ನಾಡಲ್ಲಿ ಬಹಳ ಅದ್ದೂರಿಯಾಗಿ ಆರಂಭಗೊಂಡಿದ್ದ ಫಿಫಾ ವಿಶ್ವಕಪ್‍ಗೆ (FIFA World Cup final 2022) ಇಂದು ತೆರೆ ಬೀಳಲಿದೆ. ಇಂದು ರಾತ್ರಿ ಅರ್ಜೆಂಟಿನಾ (Argentina) ಹಾಗೂ ಫ್ರಾನ್ಸ್ (France) ನಡುವಿನ ರೋಚಕ ಫೈನಲ್  ಹಣಾಹಣಿಯೊಂದಿಗೆ ಕಾಲ್ಚೆಂಡಿನಾಟ ಕ್ಲೈಮ್ಯಾಕ್ಸ್‌ ಕಾಣಲಿದ್ದು, ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

    ಫೈನಲ್‍ನಲ್ಲಿ ಅರ್ಜೆಂಟಿನಾದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಮತ್ತು ಫ್ರಾನ್ಸ್‌ನ ಯಂಗ್ ಫೈಯರ್ ಕಿಲಿಯಾನ್ ಎಂಬಾಪೆ (Kylian Mbappe) ನಡುವಿನ ಕಾದಾಟವಾಗಿ ಮಾರ್ಪಾಡಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಒಂದು ಕಡೆ ಹಾಲಿ ಚಾಂಪಿಯನ್ ಫ್ರಾನ್ಸ್ ಆದರೆ, ಇನ್ನೊಂದೆಡೆ ಮಾಜಿ ಚಾಂಪಿಯನ್ ಅರ್ಜೆಂಟಿನಾ ಮೂರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಹೋರಾಟ ನಡೆಸಲಿದೆ. ಇದನ್ನೂ ಓದಿ: ಭಾರತಕ್ಕೆ 188 ರನ್‌ಗಳ ಗೆಲುವು – ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ

    ಕತಾರ್‌ನ ಲುಸೈಲ್ ಮೈದಾನ 80,000 ಪ್ರೇಕ್ಷಕರಿಂದ ತುಂಬಿ ತುಳುಕಲಿದ್ದು, ಅಭಿಮಾನಿಗಳ ಹರ್ಷೋದ್ಘಾರದೊಂದಿಗೆ ಫೈನಲ್ ಫೈಟ್ ನಡೆಯಲಿದೆ. ಎರಡು ತಂಡಗಳು ಬಲಿಷ್ಠ ಹೋರಾಟದ ಮೂಲಕ ಸೋಲು ಗೆಲುವಿನ ಸಮ್ಮಿಲನದೊಂದಿಗೆ ಫೈನಲ್ ಹಂತಕ್ಕೆ ತಲುಪಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ – ಫೈನಲ್‍ಗೂ ಮುನ್ನ ಫ್ರಾನ್ಸ್ ಆಟಗಾರರಿಗೆ ಕಾಡುತ್ತಿದೆ ವೈರಸ್!

    ಅರ್ಜೆಂಟಿನಾ ಲೀಗ್ ಹಂತದಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತು ಹೊರಬೀಳುವ ಸ್ಥಿತಿಯಲ್ಲಿತ್ತು. ಆ ಬಳಿಕ ನಡೆದಿದ್ದು, ಮೆಸ್ಸಿ ಮ್ಯಾಜಿಕ್‌ ಹಾಗಾಗಿ ಪುಟಿದೆದ್ದ ಅರ್ಜೆಂಟಿನಾ ಫೈನಲ್ ವರೆಗೂ ಬಂದಿದೆ. ಇನ್ನೊಂದೆಡೆ ಸ್ಟಾರ್ ಆಟಗಾರರು ಗಾಯಗೊಂಡು ತಂಡ ತೊರೆದರೂ ತಂಡದಲ್ಲಿದ್ದ ಇತರ ಆಟಗಾರರು ಫ್ರಾನ್ಸ್‌ನ ಸ್ಟಾರ್‌ಗಳಾಗಿ ಗುರುತಿಸಿಕೊಂಡು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಟದೊಂದಿಗೆ ತಂಡವನ್ನು ಫೈನಲ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತಕ್ಕೆ ಅಂಧರ ವಿಶ್ವಕಪ್

    ಮೆಸ್ಸಿ, ಎಂಬಾಪೆ ನಡುವೆ ಗೋಲ್ಡನ್ ಬೂಟ್ ಕಾದಾಟ
    ಒಂದು ಕಡೆ ಫ್ರಾನ್ಸ್ ಮತ್ತು ಅರ್ಜೆಂಟಿನಾ ಪ್ರಶಸ್ತಿಗಾಗಿ ಕಾದಾಟ ನಡೆಸಿದರೆ, ಇನ್ನೊಂದೆಡೆ ಗೋಲ್ ವೀರರಾದ ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್ ಪ್ರಶಸ್ತಿಗಾಗಿ (ಹೆಚ್ಚು ಗೋಲು ಬಾರಿಸಿದ ಆಟಗಾರನಿಗೆ ನೀಡುವ ಪ್ರಶಸ್ತಿ) ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಇಬ್ಬರೂ ತಲಾ 5 ಗೋಲು ಬಾರಿಸಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲಿ ಯಾರು ಹೆಚ್ಚು ಗೋಲು ಬಾರಿಸುತ್ತಾರೆ ಅವರ ಮಡಿಲಿಗೆ ಗೋಲ್ಡನ್ ಬೂಟ್ ಸೇರಲಿದೆ.

    ಈ ಬಾರಿ ಫ್ರಾನ್ಸ್ ಗೆದ್ದರೆ, ಎಂಬಾಪೆಗೆ 2ನೇ ಪ್ರಶಸ್ತಿ ಆಗಲಿದ್ದು, ಅರ್ಜೆಂಟಿನಾ ಗೆದ್ದರೆ, ಮೆಸ್ಸಿಗೆ ಚೊಚ್ಚಲ ಫಿಫಾ ವಿಶ್ವಕಪ್ ಎತ್ತಿಹಿಡಿಯುವಂತಾಗುತ್ತದೆ. ಈಗಾಗಲೇ ತಂಡಗಳೆರಡೂ ತಲಾ 2 ಬಾರಿ ಪ್ರಶಸ್ತಿ ಗೆದ್ದರೂ ಅರ್ಜೆಂಟಿನಾ ಸ್ಟಾರ್ ಮೆಸ್ಸಿಗೆ ಈವರೆಗೆ ಫಿಫಾ ವಿಶ್ವಕಪ್ ಎತ್ತಿ ಹಿಡಿಯುವ ಅದೃಷ್ಟ ಸಿಕ್ಕಿರಲಿಲ್ಲ. ಇದೀಗ ಅವಕಾಶ ಕೂಡಿ ಬಂದಿದ್ದು, ಈ ಬಾರಿ ಪ್ರಶಸ್ತಿ ಜಯಿಸಿ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯವನ್ನು ಸ್ಮರಣೀಯವಾಗಿಸಲು ಮೆಸ್ಸಿ ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

    ಈ ಹಿಂದಿನ ಅಂಕಿಅಂಶ:
    ಅರ್ಜೆಂಟಿನಾ ಮತ್ತು ಫ್ರಾನ್ಸ್ ತಂಡಗಳು ಈವರೆಗೆ 12 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಅರ್ಜೆಂಟಿನಾ ಆರು ಪಂದ್ಯಗಳನ್ನು ಗೆದ್ದಿದೆ. ಫ್ರಾನ್ಸ್ ಮೂರರಲ್ಲಿ ಗೆದ್ದರೆ, ಉಳಿದ ಮೂರು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಎರಡು ತಂಡಗಳು ಇಲ್ಲಿಯವರೆಗೆ ಫಿಫಾ ವಿಶ್ವಕಪ್‍ನಲ್ಲಿ ಮೂರು ಬಾರಿ ಆಡಿವೆ. ಅರ್ಜೆಂಟಿನಾ ಎರಡು ಗೆಲುವುಗಳನ್ನು ಪಡೆದರೆ, ಫ್ರಾನ್ಸ್ ಒಂದು ಬಾರಿ ಗೆದ್ದಿದೆ.

    ಅರ್ಜೆಂಟಿನಾ 1930 ರಲ್ಲಿ 1-0 ಮತ್ತು 1978 ರಲ್ಲಿ 2-1 ರಲ್ಲಿ ಫ್ರಾನ್ಸ್ ಅನ್ನು ಸೋಲಿಸಿತು. ಆ ಬಳಿಕ 2018ರ ವಿಶ್ವಕಪ್‍ನಲ್ಲಿ ಫ್ರಾನ್ಸ್ 4-3 ಅಂತರದಿಂದ ಅರ್ಜೆಂಟಿನಾವನ್ನು ಸೋಲಿಸಿತ್ತು. ಇದೀಗ ಮತ್ತೊಮ್ಮೆ ಎದುರುಬದುರಾಗುತ್ತಿದೆ.

    ಗೆದ್ದವರಿಗೆ 347 ಕೋಟಿ ರೂ.
    ಫಿಫಾ ವಿಶ್ವಕಪ್ ಪ್ರಶಸ್ತಿ ಮೊತ್ತ ದುಬಾರಿಯಾಗಿದ್ದು, ವಿಶ್ವಕಪ್ ಗೆದ್ದ ತಂಡಕ್ಕೆ 42 ಮಿಲಿಯನ್ ಡಾಲರ್ (347 ಕೋಟಿ ರೂ.) ಸಿಗಲಿದೆ, ರನ್ನರ್ ಅಪ್ ತಂಡಕ್ಕೆ 30 ಮಿಲಿಯನ್ ಡಾಲರ್ (248 ಕೋಟಿ ರೂ.) ಬಹುಮಾನ ಮೊತ್ತ ಸಿಗಲಿದೆ.

    ಇಂದು ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಪಂದ್ಯ ನಡೆಯಲಿದ್ದು, ಫುಟ್‍ಬಾಲ್ ಪ್ರಿಯರು ಎರಡು ಶ್ರೇಷ್ಠ ತಂಡಗಳ ನಡುವಿನ ರೋಚಕ ಹಣಾಹಣಿ ನೋಡಲು ಈಗಾಗಲೇ ಸಜ್ಜಾಗುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]