Tag: Kyle Jamieson

  • ಪಂದ್ಯ ಆರಂಭಕ್ಕೂ ಮುನ್ನ ಶ್ರೇಯಸ್‌ಗೆ All The Best ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

    ಪಂದ್ಯ ಆರಂಭಕ್ಕೂ ಮುನ್ನ ಶ್ರೇಯಸ್‌ಗೆ All The Best ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

    ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಉಸಿರು ಅಂದ್ರೆ ಅದು ವಿರಾಟ್‌ ಕೊಹ್ಲಿ. ಯಾವುದೇ ಪಂದ್ಯವಿದರಲಿ ತಮ್ಮನ್ನು ಕೆಣಕಿದ್ರೆ ಸುಮ್ಮನೆ ಬಿಡದ ಕೊಹ್ಲಿ (Virat Kohli), ಪ್ರತಿಭಾನ್ವಿತ ಆಟಗಾರರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಲೂ ಇರುತ್ತಾರೆ. ಅದೇ ರೀತಿ ಇಂದು ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೂ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

    ಇದು ಫೈನಲ್‌ ಪಂದ್ಯ, ಟ್ರೋಫಿಗಾಗಿ 18 ವರ್ಷಗಳಿಂದ ನಡೆಯುತ್ತಿರುವ ಸಂಗ್ರಾಮ, ಪಂಜಾಬ್‌ ಕಿಂಗ್ಸ್‌ ತಂಡವೇ ಇಲ್ಲಿ ಎದುರಾಳಿ ಇದೆಲ್ಲವೂ ಗೊತ್ತಿದ್ದರೂ ಕಲ್ಮಶವಿಟ್ಟುಕೊಳ್ಳದ ಕೊಹ್ಲಿ ಶ್ರೇಯಸ್‌ ಅಯ್ಯರ್‌ (Shreyas Iyer) ಅವರಿಗೆ ʻಆಲ್‌ ದಿ ಬೆಸ್ಟ್‌ʼ ಹೇಳಿ ಕ್ರೀಡಾಸ್ಪೋರ್ತಿ ಮೆರೆದಿದ್ದಾರೆ. ಇದು ಕೊಹ್ಲಿ ಅವರ ಹೃದಯವಂತಿಕೆಗೆ ಮತ್ತೊಂದು ಸಾಕ್ಷಿಯಾಗಿದೆ. ಇದನ್ನೂ ಓದಿ: For The First Time ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ – ಇಂದಿನ ಲಕ್‌ ಹೇಗಿದೆ?

    ಸಾಮಾನ್ಯ ಹುಡುಗ ಇಂದು ಕ್ರಿಕೆಟ್‌ ಲೋಕ್‌ ಕಿಂಗ್‌
    ಇಂದು ಕ್ರಿಕೆಟ್‌ ಲೋಕದ ಕಿಂಗ್‌, ಆರ್‌ಸಿಬಿ ಎಂಬ ಮಹಾ ಕೋಟೆ ಕಟ್ಟಿದ ಸಾಮ್ರಾಟ ಎಂದು ಮೆರೆದಾಡುತ್ತಿರುವ ಕೊಹ್ಲಿ ತಂಡಕ್ಕೆ ಎಂಟ್ರಿ ಕೊಟ್ಟಾಗ ಜಸ್ಟ್ 19ರ ಹರೆಯದ ಹುಡುಗ ಅಷ್ಟೇ. ಆಕಸ್ಮಿಕವಾಗಿ ಐಪಿಎಲ್‌ನಲ್ಲಿ ಬೆಂಗಳೂರು ತಂಡಕ್ಕೆ ಸೇರಿದ ಅವನು, ನಂತರದ ದಿನಗಳಲ್ಲಿ ಚರಿತ್ರೆಯನ್ನ ಬರೆದ. ಸಾಮಾನ್ಯನಾಗಿ ಬಂದಾತ ಕಿಂಗ್ ಆಗಿ ಮೆರೆದ. ರನ್ ಮೆಷಿನ್ ಕಿಂಗ್ ಕೊಹ್ಲಿ (Virat Kohli) ರಾಜನಾಗಿ ಮೆರೆದರೂ ಅದೊಂದು ಕೊರಗು 18 ವರ್ಷಗಳಿಂದ ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಕಾಡುತ್ತಲೇ ಇತ್ತು. ಈಗ ಆ ಕೊರಗನ್ನು ನೀಗಿಸುವ ಅವಕಾಶ ಮತ್ತೆ ಕೂಡಿ ಬಂದಿದೆ. ಅದೇನೆ ಇರಲಿ ಈ ಬಾರಿಯಾದರೂ 18 ವರ್ಷಗಳ ವನವಾಸ ತಪ್ಪಿಸುವಂತೆ ಅಭಿಮಾನಿಗಳಿ ಹರಕೆ ಹೊತ್ತಿದ್ದಾರೆ. ಇದನ್ನೂ ಓದಿ: RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

    ಆರ್‌ಸಿಬಿ ಪ್ಲೇಯಿಂಗ್-11
    ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್.

    ಪಂಜಾಬ್ ಪ್ಲೇಯಿಂಗ್-11
    ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್, ನೆಹಲ್ ವಧೇರ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ವಿಜಯ್ ಕುಮಾರ್ ವೈಶಾಕ್, ಅಜ್ಮತುಲ್ಲಾ ಒಮರ್ಜೈ, ಕೈಲ್ ಜೆಮಿಸನ್, ಯಜುವೇಂದ್ರ ಚಹಲ್, ಅರ್ಷ್‌ದೀಪ್‌ ಸಿಂಗ್‌. ಇದನ್ನೂ ಓದಿ: Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ

  • IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    IPL-2023 – ಗಾಯದಿಂದಾಗಿ ಪಂದ್ಯಗಳಿಂದ ಹೊರಗುಳಿಯಲಿರುವ ಐದು ಆಟಗಾರರು

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 16 ನೇ ಆವೃತ್ತಿ ಮಾ.31 ರಂದು ಪ್ರಾರಂಭವಾಗಲಿದೆ. ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಮೇ 28 ರಂದು ಫೈನಲ್ ಪಂದ್ಯ ನಡೆಯಲಿದ್ದು, ಟೂರ್ನಿಯ ಆರಂಭಕ್ಕೂ ಮುನ್ನ, ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿಯಲಿರುವ 5 ಆಟಗಾರ ಪಟ್ಟಿ ಇಲ್ಲಿದೆ.

    ಜಸ್ಪ್ರೀತ್ ಬುಮ್ರಾ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಬುಮ್ರಾ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದು ಮುಂಬರುವ ಐಪಿಎಲ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    ರಿಷಬ್ ಪಂತ್: ಕಾರು ಅಪಘಾತದಿಂದ ಪಂತ್, ತೀವ್ರಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಪಂತ್ (Rishabh Pant) ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

    ಜಾನಿ ಬೈರ್‍ಸ್ಟೋವ್: ಐಪಿಎಲ್ ಅತ್ಯಂತ ಪ್ರಭಾವಶಾಲಿ ಬ್ಯಾಟರ್‌ಗಳಲ್ಲಿ ಒಬ್ಬರಾದ ಬೈರ್‍ಸ್ಟೋವ್ (Jonny Bairstow), ಕಾಲು ಮುರಿತದಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಪಂಜಾಬ್ ಕಿಂಗ್ಸ್ ಅವರ ಬದಲಿಗೆ ಮ್ಯಾಟ್ ಶಾರ್ಟ್ ಅವರನ್ನು ಆಯ್ಕೆಮಾಡಿಕೊಂಡಿದೆ.

    KKR

    ಕೈಲ್ ಜೆಮಿಸನ್: ಬೆನ್ನಿನ ಗಾಯದಿಂದ ಶಸ್ತ್ರಚಿಕಿತ್ಸೆಗೊಳಗಾದ ಜೆಮಿಸನ್ (Kyle Jamieson) ನಾಲ್ಕು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ಸಿಎಸ್‍ಕೆ ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಾಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ.

    ಶ್ರೇಯಸ್ ಅಯ್ಯರ್: ಬೆನ್ನುನೋವಿನಿಂದಾಗಿ ಶ್ರೇಯಸ್ ಅಯ್ಯರ್ (Shreyas Iyer) ಹೊರಗುಳಿದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್‍ನ ಇವರ ಸ್ಥಾನವನ್ನು ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವರನ್ನು ತುಂಬಲಿದ್ದಾರೆ. ಇದನ್ನೂ ಓದಿ: ಪ್ರಾಕ್ಟೀಸ್‌ ಟೈಮ್‌ನಲ್ಲಿ ಧೋನಿ ಸಿಕ್ಸರ್‌ ಸುರಿಮಳೆ – ಹುಚ್ಚೆದ್ದು ಕುಣಿದ ಫ್ಯಾನ್ಸ್‌

  • ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

    ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು

    ಮುಂಬೈ: ಐಪಿಎಲ್ ಮಿನಿ ಹರಾಜು (IPL Auction 2023) ಮುಗಿದಿದೆ. ಫ್ರಾಂಚೈಸ್‍ಗಳು ತಮಗೆ ಬೇಕಾಗಿದ್ದ ಆಟಗಾರರನ್ನು ಖರೀದಿಸಿದ್ದಾರೆ. ಈ ನಡುವೆ 2021ರ ಹರಾಜಿನಲ್ಲಿ ಬರೋಬ್ಬರಿ 15 ಕೋಟಿ ರೂ. ನೀಡಿ ಕೈಲ್ ಜೇಮಿಸನ್‍ರನ್ನು (Kyle Jamieson) ಆರ್​ಸಿಬಿ ಖರೀದಿಸಿತ್ತು. ಆ ಬಳಿಕ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತ್ತು. ಇದೀಗ ಚೆನ್ನೈ ಕೇವಲ 1 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ.

    27 ವರ್ಷದ ಜೇಮಿಸನ್ ನ್ಯೂಜಿಲೆಂಡ್ ಪರ ಆಡುವ ಆಲ್‍ರೌಂಡರ್ ಆಟಗಾರ. 2022ರ ಹರಾಜಿನಲ್ಲಿ ಭಾರೀ ಬೇಡಿಕೆ ಹೊಂದಿದ್ದ ಜೇಮಿಸನ್‍ರನ್ನು 15 ಕೋಟಿ ರೂ. ನೀಡಿ ಆರ್​ಸಿಬಿ ಖರೀದಿತ್ತು. ಆದರೆ ಜೇಮಿಸನ್ ಆರ್​ಸಿಬಿ ಪರ ಪ್ಲಾಫ್ ಆದರು. ಹಾಗಾಗಿ ಈ ಬಾರಿ ಮಿನಿ ಹರಾಜಿಗೆ ಬಿಟ್ಟುಕೊಟ್ಟಿತು. ನಿನ್ನೆ ನಡೆದ ಹರಾಜಿನಲ್ಲಿ ಜೇಮಿಸನ್ 1 ಕೋಟಿ ರೂ. ಮೂಲಬೆಲೆ ಹೊಂದಿದ್ದರು. ಈ ಮೂಲಬೆಲೆಗೆ ಚೆನ್ನೈ ಜೇಮಿಸನ್‍ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್

    2021ರ ಐಪಿಎಲ್‍ನಲ್ಲಿ ಜೇಮಿಸನ್ ಆರ್​ಸಿಬಿ ಪರ 9 ಪಂದ್ಯವಾಡಿದ್ದು, ಕೇವಲ 9 ವಿಕೆಟ್ ಮತ್ತು 65 ರನ್ ಬಾರಿಸಿ ನಿರಾಸೆ ಮೂಡಿಸಿದ್ದರು. ಇದೀಗ ಚೆನ್ನೈ ಪಡೆ ಸೇರಿಕೊಂಡಿರುವ ಜೇಮಿಸನ್ ಪ್ರದರ್ಶನ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಮಿನಿ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ ಬೆನ್‍ಸ್ಟೋಕ್ಟ್‌ರನ್ನು 16.25 ಕೋಟಿ ರೂ. ನೀಡಿ ಖರೀದಿಸಿದರೆ, ಆ ಬಳಿಕ ಜೇಮಿಸಿನ್‍ಗೆ 1 ಕೋಟಿ ರೂ. ಮತ್ತು ಅಜಿಂಕ್ಯಾ ರಹಾನೆಗೆ 50 ಲಕ್ಷ ರೂ. ನೀಡಿ ಖರೀದಿಸಿರುವುದು ಹೆಚ್ಚಿನ ಮೊತ್ತವಾಗಿದೆ. ಇದನ್ನೂ ಓದಿ: RCB ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ

    Live Tv
    [brid partner=56869869 player=32851 video=960834 autoplay=true]

  • ಕೊಹ್ಲಿಗೆ ಡ್ಯೂಕ್ ಬಾಲ್ ಹಾಕಲು ನಿರಾಕರಿಸಿದ ಕೈಲ್ ಜೇಮಿಸನ್

    ಕೊಹ್ಲಿಗೆ ಡ್ಯೂಕ್ ಬಾಲ್ ಹಾಕಲು ನಿರಾಕರಿಸಿದ ಕೈಲ್ ಜೇಮಿಸನ್

    ಡೆಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ತಂಡದ ಸದಸ್ಯ ಕೈಲ್ ಜೇಮಿಸನ್ ಅಭ್ಯಾಸದ ವೇಳೆ ಡ್ಯೂಕ್ ಬಾಲ್ ಹಾಕಲು ನಿರಾಕರಿಸಿದ್ದಾರೆ. ಇದು ಇದೀಗ ಬಾರಿ ಸುದ್ದಿಯಾಗುತ್ತಿದೆ.

    14ನೇ ಆವೃತ್ತಿಯ ಐಪಿಎಲ್‍ನಲ್ಲಿ ಭಾಗವಹಿಸಿರುವ ನ್ಯೂಜಿಲೆಂಡ್ ತಂಡದ ಆಲ್‍ರೌಂಡರ್ ಕೈಲ್ ಜೇಮಿಸನ್ ಆರ್​ಸಿಬಿ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಆರ್​ಸಿಬಿ ತಂಡದ ಅಭ್ಯಾಸದ ವೇಳೆ ವಿರಾಟ್, ಜೇಮಿಸನ್ ಅವರೊಂದಿಗೆ ಡ್ಯೂಕ್ ಬಾಲ್ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಜೇಮಿಸನ್ ನಾನು ಯಾವುದೇ ಕಾರಣಕ್ಕೂ ಡ್ಯೂಕ್ ಬಾಲ್ ಮಾತ್ರ ಹಾಕುವುದಿಲ್ಲ ಎಂದು ವಿರಾಟ್ ಮನವಿಯನ್ನು ತಿರಸ್ಕರಿಸಿದ್ದಾರೆ.

    ಡ್ಯೂಕ್ ಬಾಲ್ ಎಂದರೇನು?
    ಕ್ರಿಕೆಟ್ ಆಡುವ ಹಲವು ದೇಶಗಳಲ್ಲಿ ಬೇರೆ ಬೇರೆ ಬಾಲ್‍ಗಳನ್ನು ಬಳಸಲಾಗುತ್ತದೆ. ಟೆಸ್ಟ್ ಕ್ರಿಕೆಟ್‍ನಲ್ಲಿ ಬೇರೆ ಬೇರೆ ದೇಶಗಳು ಮೂರು ಮಾದರಿಯ ಬಾಲ್‍ಗಳನ್ನು ಬಳಸುತ್ತದೆ ಅದರಲ್ಲಿ ಸಾನ್ಸ್ ಪರೀಲ್ ಗ್ರೀನ್‍ಲ್ಯಾಂಡ್ಸ್(ಎಸ್‍ಜಿ) ಕುಕಬುರಾ ಸ್ಪೋರ್ಟ್ ಮತ್ತು ಡ್ಯೂಕ್ ಬಾಲ್ ಎಂಬ ಮೂರು ಮಾದರಿಯ ಬಾಲ್‍ನ್ನು ಬಳಸಲಾಗುತ್ತದೆ. ಅದರಲ್ಲಿ ಭಾರತದಲ್ಲಿ ಸಾನ್ಸ್ ಪರೀಲ್ ಗ್ರೀನ್‍ಲ್ಯಾಂಡ್ಸ್ ಬಾಲ್ ಬಳಸಿದರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ  ಕುಕಬುರಾ ಸ್ಪೋರ್ಟ್ ಬಾಲ್ ಬಳಸಲಾಗುತ್ತದೆ. ಇಂಗ್ಲೆಂಡ್ ಮತ್ತು ವೆಸ್ಟ್ಇಂಡಿಸ್‍ನಲ್ಲಿ ಅತೀ ಹೆಚ್ಚು ಡ್ಯೂಕ್ ಬಾಲ್ ಬಳಸಲಾಗುತ್ತದೆ. ಈ ಮೂರು ಮಾದರಿಯ ಬಾಲ್‍ಗಳಲ್ಲಿ 6 ಲೈನ್‍ಗಳ ಸ್ಟಿಚ್‍ಗಳು ಇರುತ್ತವೆ ಇವುಗಳನ್ನು ಕೈಗಳಿಂದ ಮತ್ತು ಮಷಿನ್ ಮೂಲಕ ಸ್ಟಿಚ್ ಮಾಡಲಾಗುತ್ತದೆ. ಡ್ಯೂಕ್ ಬಾಲ್‍ಗಳನ್ನು ಕೈಗಳಿಂದ ಸ್ಟಿಚ್ ಮಾಡಲಾಗುತ್ತಿದ್ದು, ಇದು ವೇಗಿಗಳಿಗೆ ಹೆಚ್ಚು ನೆರವಾಗುತ್ತದೆ ಮತ್ತು ಈ ಬಾಲ್ ಹೆಚ್ಚು ಸ್ವಿಂಗ್ ಆಗುತ್ತದೆ.

    ವಿರಾಟ್ ಮನವಿ ತಿರಸ್ಕಿರಿಸಿರುವ ಜೇಮಿಸನ್ ಅವರ ಗುಟ್ಟನ್ನು ತಂಡದ ಇನ್ನೋರ್ವ ಆಟಗಾರ ಡೇನಿಯಲ್ ಕ್ರಿಶ್ಚಿಯನ್ ಬಿಚ್ಚಿಟ್ಟಿದ್ದು, ಜೇಮಿಸನ್ ಮುಂಬರುವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಹೌದು ಈ ಬಾರಿಯ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯಲಿದೆ ಈ ವೇಳೆ ಇವರಿಬ್ಬರು ಕೂಡ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ ಡ್ಯೂಕ್ ಬಾಲ್ ಬಳಸಲಾಗುತ್ತದೆ. ಹಾಗಾಗಿ ಜೇಮಿಸನ್ ಇದೀಗ ಕೊಹ್ಲಿಗೆ ಡ್ಯೂಕ್ ಬಾಲ್ ಹಾಕಿದರೆ ಮುಂದಿನ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಕ್ಕೂ ಮುನ್ನ ತನ್ನ ಡ್ಯೂಕ್ ಬಾಲ್ ಎಸೆತವನ್ನು ಸರಿಯಾಗಿ ಕೊಹ್ಲಿ ಪರಿಚಯ ಮಾಡಿಕೊಂಡರೆ ತಂಡಕ್ಕೆ ಹಿನ್ನಡೆ ಎಂಬ ಕಾರಣಕ್ಕೆ ಬಾಲ್ ಮಾಡಲು ನಿರಾಕರಿಸಿದ್ದಾರೆ ಎಂದು ಕ್ರಿಶ್ಚಿಯನ್ ತಿಳಿಸಿದ್ದಾರೆ.