ಅಹಮದಾಬಾದ್: ಇಡೀ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ (RCB) ಟ್ರೋಫಿ ಗೆದ್ದ ಖುಷಿಯಲ್ಲಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೇಡಿಕೆ ಈಡೇರಿಸಿದ ದೇವರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಆರ್‌ಸಿಬಿ ಅಭಿಮಾನಿಗಳ ಸಾಮ್ರಾಜ್ಯ ಕಟ್ಟಿದ ಕೊಹ್ಲಿಗೂ ಧನ್ಯವಾದ ಹೇಳ್ತಿದ್ದಾರೆ. ಈ ನಡುವೆ ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಕೊಹ್ಲಿ (Virat Kohli) ಉತ್ತರಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸದ್ಯಕ್ಕೆ ನಿವೃತ್ತಿ ಇಲ್ಲ ಎನ್ನುವ ಗುಡ್‌ನ್ಯೂಸನ್ನೂ ಕೊಟ್ಟಿದ್ದಾರೆ.
ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ
ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
ಬಳಿಕ ಕಪ್ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.
ಅಹಮದಾಬಾದ್: ನನ್ನ ಹೃದಯ ಬೆಂಗಳೂರಿಗಾಗಿ… ನನ್ನ ಆತ್ಮ ಬೆಂಗಳೂರಿಗಾಗಿ… ನಾನು ಐಪಿಎಲ್ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ…. ಐಪಿಎಲ್ ಟ್ರೋಫಿ ಗೆದ್ದ ಬಳಿಕ ಅಭಿಮಾನಿಗಳ (RCB Fans) ಕೋಟೆ ಕಟ್ಟಿದ ಸಾಮ್ರಾಟ ವಿರಾಟ್ ಕೊಹ್ಲಿ (Virat Kohli) ಅವರು ಹೇಳಿದ ಮಾತುಗಳಿವು.
ಚುಟುಕು ಸಂದರ್ಶನದಲ್ಲಿ ಮಾತನಾಡುತ್ತಾ… ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಹೇಳಿದ್ದರಲಲ್ದೇ… ನನ್ನ ಹೃದಯ, ಆತ್ಮ ಎರಡೂ ಬೆಂಗಳೂರಿಗಾಗಿಯೇ.. ಐಪಿಎಲ್ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ ಎಂದು ಭಾವುಕವಾಗಿ ನುಡಿದರು.
ಮುಂದುವರೆದು… ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ.
ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
ಬಳಿಕ ಕಪ್ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಚಾಂಪಿಯನ್ ಕಿರೀಟವನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ 17 ವರ್ಷ, 6,256 ದಿನಗಳು, 90,08,640 ನಿಮಿಷಗಳ ಕಾಯುವಿಕೆಗೆ ಅಂತ್ಯಹಾಡಿದೆ. 18 ವರ್ಷಗಳನ್ನೂ ಪೂರೈಸಿರುವ ವಿಶ್ವದ ಶ್ರೀಮಂತ ಟೂರ್ನಿಯಲ್ಲಿ ಈವರೆಗೆ ಯಾವೆಲ್ಲಾ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿವೆ? ಇದುವರೆಗೂ ಟ್ರೋಫಿ ಗೆಲ್ಲದ ತಂಡ ಯಾವುದು? ಎಂಬ ವಿವರ ಇಲ್ಲಿದೆ…
ಪ್ರಸ್ತುತ ಆಡುತ್ತಿರುವ ತಂಡಗಳು ಮತ್ತು ನಿಷ್ಕ್ರಿಯ ತಂಡಗಳು ಸೇರಿ ಒಟ್ಟು 15 ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆಡಿವೆ ಮತ್ತು ಆಡುತ್ತಿವೆ. ಆದರೆ ಟ್ರೋಫಿ ಗೆದ್ದಿರುವ ತಂಡಗಳು ಮಾತ್ರ 8 ಮಾತ್ರ. ಉಳಿದಂತೆ ಪ್ರಸ್ತುತ ಆಡುತ್ತಿರುವ 3 ಸೇರಿ ಒಟ್ಟು 8 ತಂಡಗಳು (ನಿಷ್ಕ್ರಿಯ ತಂಡಗಳು ಸೇರಿ) ಪ್ರಶಸ್ತಿ ಜಯಿಸಿಲ್ಲ ಎಂಬಹುದು ಗಮನಾರ್ಹ.
18ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಚೊಚ್ಚಲ ಕಿರೀಟ
2008ರಲ್ಲಿಂದಲೂ ʻಈ ಸಲ ಕಪ್ ನಮ್ದೇʼ ಅನ್ನೋ ಘೋಷವಾಕ್ಯದೊಂದಿಗೆ ಕಣಕ್ಕಿಳಿಯುತ್ತಿದ್ದ ಆರ್‌ಸಿಬಿ, ಈ ಬಾರಿಯೂ ಅದೇ ಉತ್ಸಾಹದಲ್ಲಿತ್ತು. ಅಭಿಮಾನಿಗಳ ನಿರೀಕ್ಷೆಯಂತೆ ಕೊನೆಗೂ 18ನೇ ಆವೃತ್ತಿಯ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಚಾಂಪಿಯನ್ಸ್
2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತು. ಚುಟುಕು ಪಂದ್ಯಾವಳಿಗೆ ಹುಮ್ಮಸು ತುಂಬಿದ್ದ ಈ ಟೂರ್ನಿಯ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ರಾಜಸ್ಥಾನ್ ರಾಯಲ್ಸ್ ಚೊಚ್ಚಲ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಶೇನ್ ವಾರ್ನ್ ತಂಡದ ನಾಯಕತ್ವ ವಹಿಸಿದ್ದರು.
2009ರಲ್ಲಿ ಡೆಕ್ಕನ್ ಚಾರ್ಜಸ್‌ಗೆ ಕಿರೀಟ
2009ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಆಗಲೇ ಜನಮನ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪದಾರ್ಪಣೆ ಮಾಡಿದ 2ನೇ ಆವೃತ್ತಿಯಲ್ಲೇ ಫೈನಲ್ ತಲುಪಿತ್ತು. ಆದ್ರೆ ಫೈನಲ್‌ನಲ್ಲಿ ಆಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿದ್ದ ಡೆಕ್ಕನ್ ಚಾರ್ಜಸ್ ತಂಡದ ವಿರುದ್ಧ ಸೋತು ನಿರಾಸೆ ಅನುಭವಿಸಿತು. 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಡೆಕ್ಕನ್ ಪ್ರಶಸ್ತಿ ಗೆದ್ದುಕೊಂಡಿತು.
5 ಬಾರಿ ಚೆನ್ನೈ ʻಸೂಪರ್ʼ ಚಾಂಪಿಯನ್
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹೊರತುಪಡಿಸಿದ್ರೆ ಅತಿಹೆಚ್ಚು ಬಾರಿ ಚಾಂಪಿಯನ್ಸ್ ಪಟ್ಟ ಧಕ್ಕಿಸಿಕೊಂಡ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್. ಇದರ ಖ್ಯಾತಿಯೂ ಸಹ ಚೆನ್ನೈ ತಂಡದ ಜೀವಾಳವೇ ಆಗಿರುವ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಅವರಿಗೆ ಸಲ್ಲುತ್ತದೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010, 2011, 2018, 2021, 2023ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಋತುರಾಜ್ ಗಾಯಕ್ವಾಡ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮುಂಬೈಗೂ 5 ಬಾರಿ ಕಿರೀಟ:
ಚೆನ್ನೈ ಸೂಪರ್ ಕಿಂಗ್ಸ್ ತಂಡದಂತೆ ಮುಂಬೈ ಇಂಡಿಯನ್ಸ್ ಸಹ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2013, 2015, 2017, 2019, 2020ರಲ್ಲಿ ಪ್ರಶಸ್ತಿ ಗೆದ್ದಿದೆ. ಪ್ರಸ್ತುತ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿದ್ದಾರೆ.
ಹಾಲಿ ಚಾಂಪಿಯನ್ ಕೆಕೆಆರ್‌ಗೆ 3 ಬಾರಿ ಪಟ್ಟ:
2024ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಲಿ ಚಾಂಪಿಯನ್ಸ್ ಆಗಿದೆ. 2012, 2014 ಗೌತಮ್ ಗಂಭೀರ್ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿದ್ದ ಕೆಕೆಆರ್, 2024 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದೆ ವಿಶೇಷವೆಂದ್ರೆ ಆಗಲೂ ಕೆಕೆಆರ್‌ಗೆ ಮೆಂಟರ್ ಆಗಿದ್ದು ಗೌತಮ್ ಗಂಭೀರ್ ಅವರೇ. ಅಜಿಂಕ್ಯ ರಹಾನೆ ಪ್ರಸ್ತುತ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಸನ್ ರೈಸರ್ಸ್ 2016ರ ಚಾಂಪಿಯನ್
2016ರ ರೋಚಕ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ರೋಚಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 8 ರನ್‌ಗಳಿಂದ ಸೋಲಿಸಿತ್ತು. ಅಂದು ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿದ್ದರು.
ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಟೈಟಾನ್ಸ್
ಇನ್ನೂ 2022ರಲ್ಲಿ ಟೂರ್ನಿಯಲ್ಲಿ ಆಗಷ್ಟೇ ಪದಾರ್ಪಣೆ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿಗೆ ಮುತ್ತಿಟ್ಟಿತು. ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರಶಸ್ತಿ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿತ್ತು.
ಈವರೆಗೆ 11 ವರ್ಷಗಳ ಬಳಿಕ 2ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ನಿಷ್ಕ್ರಿಯಗೊಂಡ ತಂಡಗಳ ಪೈಕಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಪುಣೆ ವಾರಿಯರ್ಸ್, ಗುಜರಾತ್ ಲಯನ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ತಂಡಗಳು ಟ್ರೋಫಿ ಗೆದ್ದಿಲ್ಲ.
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ವೇಳೆ ವಿರಾಟ್ ಕೊಹ್ಲಿ (Virat Kohli) ಅವರು, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಅವರೊಡನೆ ʻಈ ಸಲ ಕಪ್ ನಮ್ದುʼ ಎಂದು ಹೇಳಿಸಿದ ಕ್ಷಣ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತು.
ಹೌದು. 20ನೇ ಓವರ್‌ನ 2ನೇ ಎಸೆತವನ್ನು ಮೇಡಿನ್ ಮಾಡುತ್ತಿದ್ದಂತೆ ಆರ್‌ಸಿಬಿಗೆ ಗೆಲುವು ಪಕ್ಕಾ ಎಂದು ಗೊತ್ತಾಯಿತು. ಇದು ತಿಳಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಗಳಗಳನೆ ಅಳಲು ಶುರು ಮಾಡಿದ್ದರು. 18 ವರ್ಷಗಳ ನೆನಪನ್ನು ಒಮ್ಮೆಲೆ ನೆನೆದು ಭಾವುಕರಾದರು. ಅಲ್ಲದೇ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಹಳೆಯ ಟೀಮ್‌ಮೆಟ್ ಎಬಿಡಿ ವಿಲಿಯರ್ಸ್ ಮಗುವಿನಂತೆ ಓಡಿ ಬಂದು ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು. ಇದೇ ವೇಳೆ ಪತ್ನಿ ಅನುಷ್ಕಾ ಶರ್ಮಾ ಸಹ ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು ಇದು ಅಭಿಮಾನಿಗಳನ್ನೂ ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿತ್ತು. ಇದನ್ನೂ ಓದಿ: IPL 2025; ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಎದ್ದು ಕುಣಿದು ಕುಪ್ಪಳಿಸಿದ ಬ್ರಿಟನ್ ಮಾಜಿ ಪ್ರಧಾನಿ
18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ ಆರ್‌ಸಿಬಿ ಅಭಿಮಾನಿಗಳ ಕೋಟೆಯ ಸಾಮ್ರಾಟ ಬೆಂಗಳೂರನ್ನು ಮರೆಯಲ್ಲಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ… ಕಪ್ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಇದನ್ನೂ ಓದಿ: IPL Champions | 18 ವರ್ಷದಲ್ಲಿ ಆರ್‌ಸಿಬಿಯ ಟಾಪ್ ದಾಖಲೆಗಳ ಬಗ್ಗೆ ನೀವು ತಿಳಿಯಲೇಬೇಕು..
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಐಪಿಎಲ್ ಟ್ರೋಫಿ ಗೆದ್ದ ತಂಡ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ಮೊದಲ ಐಪಿಎಲ್‌ನಲ್ಲಿ ಗೆದ್ದ ತಂಡಕ್ಕೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. ಅದು ಈಗ 20 ಕೋಟಿ ರೂಪಾಯಿಗೆ ಬಂದು ನಿಂತಿದೆ. ಇದು ಪ್ರಶಸ್ತಿ ಮೊತ್ತ ಮಾತ್ರ, ಇದರ ಜೊತೆ ಐಪಿಎಲ್ ಗೆದ್ದ ತಂಡಕ್ಕೆ ಹಣದ ಹೊಳೆಯೇ ಹರಿದು ಬರುತ್ತದೆ. ಜೊತೆಗೆ ಆರಂಭದಿಂದಲೂ ಈ ಆವೃತ್ತಿಯಲ್ಲಿ ರನ್ ಹೊಳೆ ಹರಿಸಿದ ಹಾಗೂ ಮಾರಕ ದಾಳಿಯಿಂದ ವಿಕೆಟ್ ಉರುಳಿಸಿ ಪಂದ್ಯದ ಫಲಿತಾಂಶವನ್ನೇ ಬುಡಮೇಲು ಮಾಡಿದ ಬೌಲರ್‌ಗಳೂ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಪಡೆಯುವ ಮೂಲಕ ಲಕ್ಷ ಲಕ್ಷ ಬಹುಮಾನವನ್ನ ಬಾಚಿಕೊಂಡಿದ್ದಾರೆ. ಈ ಪೈಕಿ ಕಳೆದ 18 ಆವೃತ್ತಿಗಳಲ್ಲಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ವಿನ್ನರ್‌ಗಳ ಪಟ್ಟಿಯನ್ನ ನೋಡುವುದಾದ್ರೆ….
ಆರೆಂಜ್ ಕ್ಯಾಪ್ ವಿನ್ನರ್ಸ್
ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ವಿನ್ನರ್ಸ್:
2025 – ಗುಜರಾತ್ ಟೈಟಾನ್ಸ್ – ಸಾಯಿ ಸುದರ್ಶನ್ – 759 ರನ್
2024 -ಆರ್‌ಸಿಬಿ – ವಿರಾಟ್ ಕೊಹ್ಲಿ – 741 ರನ್
2023 – ಗುಜರಾತ್ ಟೈಟಾನ್ಸ್ – ಶುಭಮನ್ ಗಿಲ್ – 890 ರನ್
2022 – ರಾಜಸ್ಥಾನ್ ರಾಯಲ್ಸ್ – ಜೋಸ್ ಬಟ್ಲರ್ – 863 ರನ್
2021 – ಚೆನ್ನೈ ಸೂಪರ್‌ಕಿಂಗ್ಸ್ – ಋತುರಾಜ್ ಗಾಯಕ್ವಾಡ್ – 635 ರನ್
2020 – ಕಿಂಗ್ಸ್ ಪಂಜಾಬ್ – ಕೆ.ಎಲ್ ರಾಹುಲ್ – 670 ರನ್
2019 – ಸನ್ ರೈಸರ್ಸ್ ಹೈದರಾಬಾದ್ – ಡೇವಿಡ್ ವಾರ್ನರ್ – 692 ರನ್
2018 – ಸನ್ ರೈಸರ್ಸ್ ಹೈದರಾಬಾದ್ – ಕೇನ್ ವಿಲಿಯಮ್ಸನ್ – 735 ರನ್
2017 – ಸನ್ ರೈಸರ್ಸ್ ಹೈದರಾಬಾದ್ – ಡೇವಿಡ್ ವಾರ್ನರ್ – 641 ರನ್
2016 – ರಾಯಲ್ ಚಾಲೆಂಜರ್ಸ್ ಬೆಂಗಳೂರು – ವಿರಾಟ್ ಕೊಹ್ಲಿ – 973 ರನ್
2015 – ಸನ್ ರೈಸರ್ಸ್ ಹೈದರಾಬಾದ್ – ಡೇವಿಡ್ ವಾರ್ನರ್ – 562 ರನ್
2014 – ಕೋಲ್ಕತ್ತಾ ನೈಟ್‌ರೈಡರ್ಸ್ – ರಾಬಿನ್ ಉತ್ತಪ್ಪ – 660 ರನ್
2013 – ಚೆನ್ನೈ ಸೂಪರ್ ಕಿಂಗ್ಸ್ – ಮೈಕಲ್ ಹಸ್ಸಿ – 733 ರನ್
2012 – ಆರ್‌ಸಿಬಿ – ಕ್ರಿಸ್ ಗೇಲ್ – 733 ರನ್
2011 – ಆರ್‌ಸಿಬಿ – ಕ್ರಿಸ್ ಗೇಲ್ – 608 ರನ್
2010 – ಮುಂಬೈ ಇಂಡಿಯನ್ಸ್ – ಸಚಿನ್ ತೆಂಡೂಲ್ಕರ್ – 618 ರನ್
2009 – ಸಿಎಸ್‌ಕೆ – ಮ್ತಾಥ್ಯೂ ಹೇಡನ್ – 572 ರನ್
2008 – ಕಿಂಗ್ಸ್ ಪಂಜಾಬ್ – ಶಾನ್ ಮಾರ್ಷ್ – 616 ರನ್
ಅಹಮದಾಬಾದ್: ಅಭಿಮಾನಿಗಳು ಕಳೆದ 18 ವರ್ಷಗಳಿಂದ ಹಂಬಲಿಸುತ್ತಿದ್ದ ಐಪಿಎಲ್ ಟ್ರೋಫಿಯನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಗೆದ್ದಿದೆ. 18ನೇ ಆವೃತ್ತಿಯಲ್ಲೇ ಟ್ರೋಫಿ ಗೆದ್ದು, 18ರ ನಂಟನ್ನು ಮುಂದುವರಿಸಿದೆ. ಮಂಗಳವಾರ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಬರೋಬ್ಬರಿ 20 ಕೋಟಿ ಬಹುಮಾನವನ್ನೂ ಬಾಚಿಕೊಂಡಿದೆ. ಆದ್ರೆ ಕಳೆದ 18 ವರ್ಷಗಳಲ್ಲಿ ಇಂದಿಗೂ ಸಹ ಯಾರೂ ಮುರಿಯದ ಒಂದಿಷ್ಟು ದಾಖಲೆಗಳನ್ನು ಆರ್‌ಸಿಬಿ ತಂಡದ ಆಟಗಾರರು ಮಾಡಿದ್ದಾರೆ. ಅವುಗಳ ಪಟ್ಟಿಯನ್ಜೊಮ್ಮೆ ನೋಡಿಬಿಡೋಣ ಬನ್ನಿ…
ಒಂದೇ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಟಾಪ್-5 ಪ್ಲೇಯರ್ಸ್
* ಕ್ರಿಸ್ ಗೇಲ್ – 2013ರಲ್ಲಿ – 175 ರನ್ – 66 ಎಸೆತ
* ಬ್ರೆಂಡನ್ ಮೆಕಲಂ – 2008ರಲ್ಲಿ – 158 ರನ್ – 73 ಎಸೆತ
* ಅಭಿಷೇಕ್ ಶರ್ಮಾ – 2025 – 141,
* ಕ್ವಿಂಟನ್ ಡಿಕಾಕ್ – 2022 ರಲ್ಲಿ – 140 ರನ್ – 70 ಎಸೆತ
* ಎಬಿ ಡಿವಿಲಿಯರ್ಸ್ – 2015 ರಲ್ಲಿ – 133 ರನ್ – 59 ಎಸೆತ
ಐಪಿಎಲ್ ಇತಿಹಾಸದಲ್ಲಿ ಹೆಚ್ಚು ರನ್ ಗಳಿಸಿದ ಟಾಪ್-5 ದೈತ್ಯ ಬ್ಯಾಟರ್ಸ್
* ವಿರಾಟ್ ಕೊಹ್ಲಿ – 8,661 ರನ್ – 267 ಪಂದ್ಯ
* ರೋಹಿತ್ ಶರ್ಮಾ – 7,046 ರನ್ – 272 ಪಂದ್ಯ
* ಶಿಖರ್ ಧವನ್ – 6,769 ಪಂದ್ಯ – 222 ಪಂದ್ಯ
* ಡೇವಿಡ್ ವಾರ್ನರ್ – 6,565 ರನ್ – 184 ಪಂದ್ಯ
* ಸುರೇಶ್ ರೈನಾ – 5,528 ರನ್ – 264 ಪಂದ್ಯ
ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್-5 ಸಿಕ್ಸರ್ ವೀರರು
* ಕ್ರಿಸ್ ಗೇಲ್ – 357 ಸಿಕ್ಸರ್ – 142 ಪಂದ್ಯ
* ರೋಹಿತ್ ಶರ್ಮಾ – 302 ಸಿಕ್ಸರ್ – 272 ಪಂದ್ಯ
* ವಿರಾಟ್ ಕೊಹ್ಲಿ – 291 ಸಿಕ್ಸರ್ – 266 ಒಂದ್ಯ
* ಎಂ.ಎಸ್ ಧೋನಿ – 264 ಸಿಕ್ಸರ್ – 278 ಪಂದ್ಯ
* ಎಬಿಡಿ ವಿಲಿಯರ್ಸ್ – 251 ಸಿಕ್ಸರ್ – 154 ಪಂದ್ಯ
ಒಂದೇ ಆವೃತ್ತಿಯಲ್ಲಿ ವೈಯಕ್ತಿಕ ಗರಿಷ್ಠ ರನ್ ಹೊಳೆ ಹರಿಸಿದವರು
* 2016 – ರಾಯಲ್ ಚಾಲೆಂಜರ್ಸ್ ಬೆಂಗಳೂರು – ವಿರಾಟ್ ಕೊಹ್ಲಿ – 973 ರನ್
* 2023 – ಗುಜರಾತ್ ಟೈಟಾನ್ಸ್ – ಶುಭಮನ್ ಗಿಲ್ – 890 ರನ್
* 2022 – ರಾಜಸ್ಥಾನ್ ರಾಯಲ್ಸ್ – ಜೋಸ್ ಬಟ್ಲರ್ – 863 ರನ್
* 2025 – ಗುಜರಾತ್ ಟೈಟಾನ್ಸ್ – ಸಾಯಿ ಸುದರ್ಶನ್ – 759 ರನ್
* 2024 -ಆರ್‌ಸಿಬಿ – ವಿರಾಟ್ ಕೊಹ್ಲಿ – 741 ರನ್
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ಮೊದಲ ಐಪಿಎಲ್‌ನಲ್ಲಿ ಗೆದ್ದ ತಂಡಕ್ಕೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. ಅದು ಈಗ 20 ಕೋಟಿ ರೂಪಾಯಿಗೆ ಬಂದು ನಿಂತಿದೆ. ಇದು ಪ್ರಶಸ್ತಿ ಮೊತ್ತ ಮಾತ್ರ, ಇದರ ಜೊತೆ ಐಪಿಎಲ್ ಗೆದ್ದ ತಂಡಕ್ಕೆ ಹಣದ ಹೊಳೆಯೇ ಹರಿದು ಬರುತ್ತದೆ.
ಗೆದ್ದ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ (Prize Money) ಇದ್ದರೆ, ರನ್ನರ್ ಅಪ್ ಆದ ತಂಡಕ್ಕೆ 13 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಬಹುಮಾನಕ್ಕಿಂತ ಹೆಚ್ಚಿನ ಹಣಕ್ಕೆ ಹಲವು ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಿವೆ. ಬಹುಮಾನ ಹಲವು ಮಾರ್ಗದ ಮೂಲಕ ಹಣವನ್ನು ಸಂಪಾದಿಸುತ್ತವೆ. ಅದರಲ್ಲೂ ಐಪಿಎಲ್ ಗೆದ್ದ ತಂಡ ಸ್ವಲ್ಪ ಜಾಸ್ತಿಯೇ ಹಣವನ್ನು ಗಳಿಸಲಿದೆ. ಈ ಮಧ್ಯೆ ಕೆಲವರು ವೈಯಕ್ತಿಕ ಪ್ರಶ್ತಿಗಳನ್ನೂ ಬಾಚಿಕೊಂಡಿದ್ದಾರೆ. ಅವುಗಳ ಪಟ್ಟಿಯನ್ನೊಮ್ಮೆ ನೋಡಿಬಿಡೋಣ…
ಪ್ರಶಸ್ತಿ ವಿಜೇತರು ಮತ್ತು ಬಹುಮಾನ ಪಡೆದ ಲಿಸ್ಟ್ ಇಲ್ಲಿದೆ..
ಚಾಂಪಿಯನ್ಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 20 ಕೋಟಿ ರೂ.
ರನ್ನರ್ಸ್ ಅಪ್ – ಪಂಜಾಬ್ ಕಿಂಗ್ಸ್ – 12.5 ಕೋಟಿ ರೂ.
ಆರೆಂಜ್ ಕ್ಯಾಪ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಪರ್ಪಲ್ ಕ್ಯಾಪ್ – ಪ್ರಸಿದ್ಧ್ ಕೃಷ್ಣ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ – ಸೂರ್ಯಕುಮಾರ್ ಯಾದವ್ (ಮುಂಬೈ ಇಂಡಿಯನ್ಸ್) – 15 ಲಕ್ಷ ರೂ.
ಆವೃತ್ತಿಯ ಸೂಪರ್ ಸ್ಟ್ರೈಕರ್ – ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 10 ಲಕ್ಷ ರೂ. + ಟಾಟಾ ಕರ್ವ್
ಹೆಚ್ಚಿನ ಡಾಟ್ ಬಾಲ್ – ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಉದಯೋನ್ಮುಖ ಆಟಗಾರ (ಎಮರ್ಜಿಂಗ್ ಪ್ಲೇಯರ್) – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಫ್ಯಾಂಟಸಿ ಕಿಂಗ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಸೂಪರ್ ಸಿಕ್ಸರ್ಸ್ – ನಿಕೋಲಸ್ ಪೂರನ್ (ಲಕ್ನೋ ಸೂಪರ್ ಜೈಂಟ್ಸ್) – 10 ಲಕ್ಷ ರೂ.
ಸಿರೀಸ್‌ನಲ್ಲಿ ಅತಿಹೆಚ್ಚು ಫೋರ್ಸ್ – ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 10 ಲಕ್ಷ ರೂ.
ಕ್ಯಾಚ್ ಆಫ್ ದಿ ಸೀಸನ್ – ಕಮಿಂಡು ಮೆಂಡಿಸ್ (ಸನ್‌ರೈಸರ್ಸ್ ಹೈದರಾಬಾದ್) – 10 ಲಕ್ಷ ರೂ.
ಫೇರ್‌ಪ್ಲೇ ಪ್ರಶಸ್ತಿ – ಚೆನ್ನೈ ಸೂಪರ್ ಕಿಂಗ್ಸ್ – 10 ಲಕ್ಷ ರೂ.
ಪಿಚ್ ಮತ್ತು ಗ್ರೌಂಡ್ – ಡಿಡಿಸಿಎ (ಡೆಲ್ಲಿ ಕ್ಯಾಪಿಟಲ್ಸ್ ಹೋಮ್ ಗ್ರೌಂಡ್) – 50 ಲಕ್ಷ ರೂ.
ಆರ್‌ಸಿಬಿ vs ಪಂಜಾಬ್ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದವರು ಇವರೇ…
ಪಂದ್ಯ ಶ್ರೇಷ್ಠ ಪ್ರಶಸ್ತಿ – ಕೃನಾಲ್ ಪಾಂಡ್ಯ (ರಾಯಲ್ ಚಾಲೆಂಜರ್ಸ್ ಬೆಂಗಳೂರು) – 5 ಲಕ್ಷ ರೂ.
ಸೂಪರ್ ಸ್ಟ್ರೈಕರ್ – ಜಿತೇಶ್ ಶರ್ಮಾ – 1 ಲಕ್ಷ ರೂ.
ಅತಿ ಹೆಚ್ಚು ಡಾಟ್ ಬಾಲ್ಸ್ – ಕೃನಾಲ್ ಪಾಂಡ್ಯ – 1 ಲಕ್ಷ ರೂ.
ಅತಿ ಹೆಚ್ಚು ಫೋರ್‌ಗಳು – ಪ್ರಿಯಾಂಶ್ ಆರ್ಯ – 1 ಲಕ್ಷ ರೂ.
ಫ್ಯಾಂಟಸಿ ಕಿಂಗ್ – ಶಶಾಂಕ್ ಸಿಂಗ್ – 1 ಲಕ್ಷ ರೂ.
ಅತಿ ಹೆಚ್ಚು ಸಿಕ್ಸರ್ಸ್ – ಶಶಾಂಕ್ ಸಿಂಗ್ – 1 ಲಕ್ಷ ರೂ.
ಮೀಡಿಯಾ ರೈಟ್ಸ್‌ನಲ್ಲಿ ಪಾಲು
ಐಪಿಎಲ್ ತಂಡಗಳು ತಮ್ಮ ಆದಾಯದ ಗಣನೀಯ ಭಾಗವನ್ನು ಲೀಗ್‌ನ ಮೀಡಿಯಾ ರೈಟ್ಸ್‌ನಿಂದ ಅಂದ್ರೇ ಪ್ರಸಾರದ ಹಕ್ಕುಗಳಿಂದ ಗಳಿಸುತ್ತವೆ. 2023 ರಿಂದ 2027ರ ಐದು ಐಪಿಎಲ್‌ನ ಮೀಡಿಯಾ ರೈಟ್ಸ್ ಅನ್ನು ಬಿಸಿಸಿಐ ಬರೋಬ್ಬರಿ 48,390 ಕೋಟಿ ರೂ.ಗೆ ಮಾರಾಟ ಮಾಡಿದೆ. ಈ ಆದಾಯದಲ್ಲಿ ಸರಿ ಸುಮಾರು 45% ಪಾಲು ಫ್ರಾಂಚೈಸಿಗಳ ಪಾಲಾಗಲಿದೆ. ಈ ಆದಾಯವನ್ನ ತಂಡದ ಪ್ರದರ್ಶನ, ಎಷ್ಟು ಫಾಲೋವರ್ಸ್ ಅನ್ನು ಹೊಂದಿದೆ ಎನ್ನುವುದರ ಮೇಲೆ ವಿತರಿಸಲಾಗುತ್ತದೆ. ಲೀಗ್‌ನಲ್ಲೇ ಹೊರಬಿದ್ದ ತಂಡಗಳಿಗೆ ಕಡಿಮೆ ಆದಾಯ ಬಂದ್ರೆ, ಫ್ಲೇಆಫ್ ಹಂತದಲ್ಲಿ ಅಭಿಯಾನ ಮುಗಿಸಿದ ತಂಡಗಳು ಅದಕ್ಕಿಂತ ಸ್ವಲ್ಪ ಹೆಚ್ಚು ಪಾಲನ್ನು ಪಡೆಯಲಿವೆ. ಈ ಆದಾಯದಲ್ಲಿ ವಿಜೇತ ತಂಡವೇ ಹೆಚ್ಚಿನ ಪಾಲನ್ನು ಪಡೆಯಲಿದೆ ಎಂದು ಹೇಳಲಾಗಿದೆ.
ಸ್ಪಾನ್ಸರ್‌ಶಿಪ್ ಮತ್ತು ಬ್ರಾಂಡ್ ಪಾಲು!
ಇನ್ನೂ ಜೆರ್ಸಿ ಸ್ಪಾನ್ಸರ್‌ಶಿಫ್, ಟೈಟಲ್ ಸ್ಪಾನ್ಸರ್‌ಶಿಪ್ ಹಾಗೂ ಡಿಜಿಟಲ್ ಪಾರ್ಟನರ್ಸ್ ಸೇರಿ ಹಲವು ವಿಚಾರಕ್ಕೆ ಕಂಪನಿಗಳ ಜೊತೆ ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿರುತ್ತದೆ. ಗೆದ್ದ ಬೆನ್ನಲ್ಲೇ ತಂಡದ ಮೌಲ್ಯ ಕೂಡ ವೃದ್ಧಿಯಾಗಲಿದ್ದು, ಹೆಚ್ಚಿನ ಹಣ ಹರಿದುಬರಲಿದೆ. ಮೈದಾನದಲ್ಲಿನ ಯಶಸ್ಸು ತಂಡದ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತದೆ.
ಬೆಂಗಳೂರು: 17 ವರ್ಷ, 6,256 ದಿನಗಳು, 90,08,640 ನಿಮಿಷಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ (RCB Champions) ಆಗಿ ಹೊರಹೊಮ್ಮಿದೆ. ಹೀಗಾಗಿ ಬೆಂಗಳೂರಿನಲ್ಲೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ನಿನ್ನೆಯಿಂದಲೂ ಆರ್‌ಸಿಬಿ ಅಭಿಮಾನಿಗಳು ರಾಜ್ಯಾದ್ಯಂತ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ್ದರು. ಎಲ್ಲಿಲ್ಲದ ದೇವರಿಗೂ ಹರಕೆ ಹೊತ್ತಿದ್ದರು. ಅದರಂತೆ ಅಭಿಮಾನಿ ದೇವ್ರುಗಳ ಕನಸು ನನಸಾಗಿದೆ. ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. ಈ ಖುಷಿ ತಡೆಯಲಾಗದೇ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಅದರ ಒಂದು ಝಲಕ್‌ಗಾಗಿ ವಿಡಿಯೋ ನೋಡಿ…
ಅಹಮದಾಬಾದ್: ಕೋಟ್ಯಂತರ ಅಭಿಮಾನಿಗಳ (RCB Fans) ಪ್ರಾರ್ಥನೆ ಕೊನೆಗೂ ನೆರವೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. 17 ವರ್ಷಮ, 6,256 ದಿನಗಳು, 90,08,640 ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಇತಿಹಾಸ ಪುಟ ಸೇರಿಕೊಂಡಿದೆ. ಹಾಗಿದ್ರೆ, ಕಳೆದ 17 ಆವೃತ್ತಿಗಳಲ್ಲಿ ಕಂಡ ಏಳು ಬೀಳಿನ ಕಥೆಯನ್ನು ನೋಡೋಣ….
ಚೊಚ್ಚಲ ಆವೃತ್ತಿಯಲ್ಲಿ ಹೀನಾಯ ಸೋಲು:
2008ರ ಚೊಚ್ಚಲ ಐಪಿಎಲ್ (IPL 2025) ಆವೃತ್ತಿಯಲ್ಲಿ 8 ತಂಡಗಳು ಮಾತ್ರ ಭಾಗವಹಿಸಿದ್ದವು. ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗ ವಿಜಯ್ ಮಲ್ಯಾ ಮಾಲೀಕತ್ವದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು, ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. ಚುಟುಕು ಕ್ರಿಕೆಟ್‌ಗೆ ಆಗಷ್ಟೇ ಚಾಲನೆ ಸಿಕ್ಕಿದ್ದರಿಂದ ಆರ್‌ಸಿಬಿ ಅಷ್ಟೇನು ಜನಪ್ರಿಯತೆ ಗಳಿಸಿರಲಿಲ್ಲ.
ಫೈನಲ್‌ನಲ್ಲಿ ವಿರೋಚಿತ ಸೋಲು
2009ರ ಆವೃತ್ತಿಯಲ್ಲೂ 8 ತಂಡಗಳು ಭಾಗವಹಿಸಿದ್ದವು. 2ನೇ ಆವೃತ್ತಿಯಲ್ಲಿ ಆರ್‌ಸಿಬಿ ಪುಟಿದೆದ್ದಿತ್ತು. 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಆಗ ಎಲಿಮಿನೇಟರ್ ಪಂದ್ಯ ಇರಲಿಲ್ಲ, 2 ಸೆಮಿಫೈನಲ್ ಪಂದ್ಯಗಳು ಮಾತ್ರ ಇದ್ದವು. ಮೊದಲ ಸೆಮಿಫೈನಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್), ಹೈದರಾಬಾದ್ ಡೆಕ್ಕನ್ ಚಾರ್ಜಸ್ ಕಾದಾಟ ನಡೆಸಿದ್ರೆ, 2ನೇ ಸೆಮಿಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೆಣಸಾಡಿತ್ತು. ಈ ವೇಳೆ ಸೆಮಿಸ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಟ್ರೋಫಿ ಗೆಲ್ಲುವ ಕನಸೂ ಕಮರಿತ್ತು.
3ನೇ ಸ್ಥಾನಕ್ಕೆ ತೃಪ್ತಿ
2010ರ ಐಪಿಎಲ್ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜನಪ್ರಿಯತೆ ಗಳಿಸಿತ್ತು. ಈ ಆವೃತ್ತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದ್ರೂ, ಮೊದಲ ಸೆಮಿಫೈನಲ್‌ನಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ 35 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿತ್ತು. ಆದ್ರೆ ಡೆಲ್ಲಿ ವಿರುದ್ಧ ಗೆದ್ದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಚೆನ್ನೈ ವಿರುದ್ಧ ಎರಡೆರಡುಬಾರಿ ಸೋಲು
2011ರ ಆವೃತ್ತಿ ಆರ್‌ಸಿಬಿ ಪಾಲಿಗೆ ಅತ್ಯಂತ ರೋಚಕ ಘಟ್ಟ. ಲೀಗ್ ಸುತ್ತಿನಲ್ಲಿ 14ರಲ್ಲಿ 9 ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಈ ವೇಳೆಗೆ ಪ್ಲೇ ಆಫ್ ಸ್ವರೂಪ ಸಂಪೂರ್ಣ ಬದಲಾಗಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆಗ 2ನೇ ಕಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಆರ್‌ಸಿಬಿ ಪುನಃ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್‌ಗಳಿಂದ ಸೋಲು ಕಂಡಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು.
ಆರ್‌ಸಿಬಿ ಪಾಲಿಗೆ ಕಹಿ:
2012ರ ಐಪಿಎಲ್ ಆವೃತ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಅಭಿಮಾನಿಗಳ ಪಾಲಿಗೆ ಕಹಿಯಾಗಿತ್ತು. ಏಕೆಂದರೆ ಈ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿತ್ತು. 16 ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಲಾ 8 ಪಂದ್ಯ ಗೆದ್ದು 17 ಅಂಕ ಪಡೆದುಕೊಂಡಿದ್ದವು. ಆದ್ರೆ ನೆಟ್‌ರನ್‌ರೇಟ್ ಕೊರತೆಯಿಂದ ಆರ್‌ಸಿಬಿ ಪ್ಲೇ ಆಫ್‌ನಿಂದ ಹೊರಗುಳಿಯಿತು. ಚೆನ್ನೈಗೆ ಗಿಫ್ಟ್ ಸಿಕ್ಕಿತು. ಆದ್ರೆ ಫೈನಲ್ಲಿ ಕೆಕೆಆರ್ ಸಿಎಸ್‌ಕೆ ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಲೀಗ್‌ನಲ್ಲೇ ಹೊರಬಿದ್ದ ಬೆಂಗಳೂರು ಬಾಯ್ಸ್
2013ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. 16 ಪಂದ್ಯಗಳ ಪೈಕಿ 9 ಪಂದ್ಯ ಗೆದ್ದು 18 ಅಂಕ ಗಳಿಸಿದ್ರೂ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಈ ಆವೃತ್ತಿಯಲ್ಲಿ 2ನೇ ಬಾರಿಗೆ ಚೆನ್ನೈ – ಮುಂಬೈ 2ನೇ ಬಾರಿಗೆ ಮುಖಾಮುಖಿಯಾಗಿದ್ದವು. ಮುಂಬೈ 23 ರನ್‌ಗಳಿಂದ ಗೆದ್ದು ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಧಕ್ಕಿಸಿಕೊಂಡಿತ್ತು.
ಸತತ ಹೀನಾಯ ಸೋಲು
2014ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿದ್ದ ಆರ್‌ಸಿಬಿ ಪ್ಲೇ ಆಫ್ ಸಮೀಪವೂ ಸುಳಿಯಲಿಲ್ಲ. ಅರಂಭಿಕ 2 ಪಂದ್ಯಗಳನ್ನು ಗೆದ್ದು ಶುಭಾರಂಭ ಕಂಡಿದ್ದ ಆರ್‌ಸಿಬಿ ಬಳಿಕ ಸತತ ಹೀನಾಯ ಸೋಲುಗಳನ್ನು ಅನುಭವಿಸಿತು. 14 ಪಂದ್ಯಗಳಲ್ಲಿ ಕೇವಲ 5 ಪಂದ್ಯ ಗೆದ್ದ ಆರ್‌ಸಿಬಿ 8 ತಂಡಗಳ ಪೈಕಿ 7ನೇ ಸ್ಥಾನಕ್ಕೆ ಕುಸಿದು, ಲೀಗ್‌ನಲ್ಲೇ ಮಕಾಡೆ ಮಲಗಿತು. ಈ ಆವೃತ್ತಿಯಲ್ಲಿ ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್‌ರೈಡರ್ಸ್ ಗೆದ್ದು 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಬೆಂಗಳೂರಿಗೆ ಸಿಹಿ-ಕಹಿ
2015ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಆರ್‌ಸಿಬಿಗೆ ಟ್ರೋಫಿ ಗೆಲ್ಲುವ ಕನಸು ನಿರಾಸೆಯಾಯಿತು. ಏಕೆಂದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 71 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಬೆಂಗಳೂರು ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ 3 ವಿಕೆಟ್‌ಗಳ ವಿರೋಚಿತ ಸೋಲು ಕಂಡು ನಿರಾಸೆ ಅನುಭವಿಸಿತು. ಈ ಆವೃತ್ತಿಯಲ್ಲಿ 3ನೇ ಬಾರಿಗೆ ಮುಂಬೈ – ಚೆನ್ನೈ ಫೈನಲ್‌ನಲ್ಲಿ ಮುಖಾಮುಖಿಯಾಗಿತ್ತು. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 41 ರನ್‌ಗಳಿಂದ ಪಂದ್ಯ ಗೆದ್ದು 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
8 ರನ್‌ಗಳಿಂದ ಕೈತಪ್ಪಿದ ಟ್ರೋಫಿ
2016 ಐಪಿಎಲ್ ಆವೃತ್ತಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಗೆದ್ದು ಫೈನಲ್ ತಲುಪಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಆದ್ರೆ ಚೇಸಿಂಗ್ ಮಾಡಿದ್ದ ಆರ್‌ಸಿಬಿ ಕ್ರಿಸ್‌ಗೇಲ್ ಮತ್ತು ಕಿಂಗ್ ಕೊಹ್ಲಿ ಆರ್ಭಟದ ಹೊರತಾಗಿ 8 ರನ್‌ಗಳ ವಿರೋಚಿತ ಸೋಲು ಅನುಭವಿಸಿತು. ಆಗ ಸನ್ ರೈಸರ್ಸ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.
ಅಡ್ರೆಸ್‌ಗಿಲ್ಲದಂತೆ ಮಕಾಡೆ ಮಲಗಿತ್ತು ಬೆಂಗಳೂರು
ಪ್ರತಿ ಬಾರಿಯಂತೆ 2017ರ ಆವೃತ್ತಿಯಲ್ಲೂ ʻಈ ಸಲ ಕಪ್ ನಮ್ದೇʼ ಎಂಬ ಧ್ಯೇಯದೊಂದಿಗೆ ಆರ್‌ಸಿಬಿ ಕಣಕ್ಕಿಳಿದಿತ್ತು. ಈ ಆವೃತ್ತಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಕ್ರಿಸ್‌ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಶೇನ್ ವಾಟ್ಸನ್, ಕೆ.ಎಲ್ ರಾಹುಲ್ ಅವರಂತಹ ದಿಗ್ಗಜ ಬ್ಯಾಟರ್‌ಗಳಿದ್ದರೂ ಹೀನಾಯ ಸೋಲುಗಳು ಅನುಭವಿಸಿತು. 14ರಲ್ಲಿ ಕೇವಲ 3 ಪಂದ್ಯಗಳನ್ನ ಗೆದ್ದು ಕೊನೆಯ ಸ್ಥಾನದೊಂದಿಗೆ ಹೊರನಡೆಯಿತು. ಈ ಆವೃತ್ತಿಯ ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಗೆದ್ದು ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಯಿತು.
2018ರಲ್ಲಿ ವಿಫಲ ಪ್ರಯತ್ನ
ರಣಕಲಿಗಳ ಬ್ಯಾಟಿಂಗ್ ಪಡೆಯೊಂದಿಗೆ ಟ್ರೋಫಿ ಗೆಲ್ಲಲೇಬೇಕೆಂಬ ಛಲದೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿಗೆ 2018ರ ಆವೃತ್ತಿಯಲ್ಲೂ ನಿರಾಸೆಯಾಯಿತು. ಈ ಆವೃತ್ತಿಯಲ್ಲೂ 8 ತಂಡಗಳಷ್ಟೇ ಭಾಗವಹಿಸಿದ್ದವು. ಜಿದ್ದಾಜಿದ್ದಿ ಹೋರಾಟದ ಹೊರತಾಗಿಯೂ ವಿರೋಚಿತ ಸೋಲುಗಳಿಂದಲೇ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. 14 ಪಂದ್ಯಗಳಲ್ಲಿ ಕೇವಲ 6 ಪಂದ್ಯ ಗೆದ್ದು 6ನೇ ಸ್ಥಾನ ಪಡೆಯುವ ಮೂಲಕ ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.
2019ರಲ್ಲೂ ಹೀನಾಯ ಸೋಲು
ಅಭಿಮಾನಿಗಳ ಘೋಷಣೆಯಂತೆ ʻಈ ಸಲ ಕಪ್ ನಮ್ದೇʼ ಎನ್ನುವ ಉತ್ಸಾಹದಲ್ಲಿದ್ದ ಆರ್‌ಸಿಬಿ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 5 ಪಂದ್ಯ ಮಾತ್ರ. 8 ತಂಡಗಳು ಪಾಲ್ಗೊಂಡಿದ್ದ ಈ ಆವೃತ್ತಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನ ಬಿಟ್ಟು ಮೇಲೇಳಲೇ ಇಲ್ಲ. ಇನ್ನೂ ಈ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಸಮಬಲ ಎದುರಾಳಿಗಳ ನಡುವೆ ರೋಚಕ ಕಾದಾಟ ನಡೆದಿತ್ತು. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಮುಂಬೈ ವಿರುದ್ಧ 1 ರನ್‌ನಿಂದ ಸೋತಿತ್ತು. ಮುಂಬೈ ಇಂಡಿಯನ್ಸ್ ಟ್ರೋಫಿ ಎತ್ತಿಹಿಡಿಯಿತು.
2020ರಲ್ಲಿ ಪ್ಲೇ ಆಫ್‌ನಲ್ಲಿ ʻಎಲಿಮಿನೇಟ್ʼ
2020ರ ಐಪಿಎಲ್ ಆವೃತ್ತಿಯಲ್ಲೂ ʻಈ ಸಲ ಕಪ್ ನಮ್ದೇʼ ಅನ್ನೋ ಧ್ಯೇಯದೊಂದಿಗೇ ಆರ್‌ಸಿಬಿ ಅಖಾಡಕ್ಕಿಳಿದಿತ್ತು. ಈ ಆವೃತ್ತಿಯಲ್ಲಿ ಒಟ್ಟು 8 ಫ್ರಾಂಚೈಸಿಗಳು ಪಾಲ್ಗೊಂಡಿದ್ದವು. ಲೀಗ್ ಸುತ್ತಿಮ ಮುಕ್ತಾಯದ ವೇಳೆಗೆ 14 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಪಡೆದಿದ್ದ ಆರ್‌ಸಿಬಿ ನಾಲ್ಕನೇ ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿತು. ಆದ್ರೆ, ಸನ್ ರೈಸರ್ಸ್ ಹೂದರಾಬಾದ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಹೀನಾಯ ಸೋಲಿ ಅನುಭವಿಸಿ ಹೊರ ನಡೆಯಿತು. ಈ ಆವೃತ್ತಿಯಲ್ಲಿ ಮುಂಬೈ ಡೆಲ್ಲಿ ವಿರುದ್ಧ ಫೈನಲ್‌ನಲ್ಲಿ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು.
2021ರಲ್ಲಿ ಮತ್ತೆ ಹೀನಾಯ ಸೋಲು
2021ರ ಆವೃತ್ತಿಯಲ್ಲಿ 18 ಅಂಕಗಳೊಂದಿಗೆ 3ನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಇಯಾನ್ ಮಾರ್ಗನ್ ನಾಯಕತ್ವದ ಕೆಕೆಆರ್ ವಿರುದ್ಧ ಸೋಲಿನೊಂದಿಗೆ ಹೊರಬಿದ್ದಿತು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆದ್ದುಕೊಂಡಿತು. ವಿಶ್ವದಾದ್ಯಂತ ಕೋವಿಡ್ ಉಲ್ಬಣಗೊಂಡಿದ್ದರಿಂದ ಈ ಆವೃತ್ತಿಯನ್ನು ಕೆಲ ದಿನಗಳ ವರೆಗೆ ಸ್ಥಗಿತಗೊಳಿಸಲಾಗಿತ್ತು.
2022 – ಕ್ವಾಲಿಫೈಯರ್-2ನಲ್ಲಿ ರಾಜಸ್ಥಾನ್ ಕೊಕ್ಕೆ
2022ರ ಆವೃತ್ತಿಯಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನವನ್ನೇ ನೀಡಿತ್ತು. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರ ಭರ್ಜರಿ ಶತಕದ ನೆರವಿನಿಂದ ಆಗಷ್ಟೇ ಪದಾರ್ಪಣೆ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿತ್ತು. ಆದ್ರೆ ಕ್ವಾಲಿಫೈಯರ್-2ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತು. 2022ರಲ್ಲೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿತು.
2023: ಲೀಗ್ ಸುತ್ತಿನಲ್ಲೇ ಹೊರಬಿದ್ದ ಬೆಂಗಳೂರು ಬಾಯ್ಸ್
ಪ್ರಶಸ್ತಿ ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ 2023ರ ಆವೃತ್ತಿಯಲ್ಲಿ ಭಾರೀ ನಿರಾಸೆ ಅನುಭವಿಸಿತ್ತು. ಈ ಆವೃತ್ತಿಯಲ್ಲಿ ತಂಡಗಳ ಅಂಖ್ಯೆ 10ಕ್ಕೇರಿತ್ತು. ಲೀಗ್‌ನಲ್ಲಿ 14ರಲ್ಲಿ 7 ಪಂದ್ಯ ಗೆದ್ದಿದ್ದ ಆರ್‌ಸಿಬಿ 14 ಅಂಕ ಗಳಿಸುವ ಮೂಲಕ 6ನೇ ಸ್ತಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಆವೃತ್ತಿಯ ರೋಚಕ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತು.
2024: ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಎಲಿಮಿನೇಟ್
ʻಇದು ಆರ್‌ಸಿಬಿಯ ಹೊಸ ಅಧ್ಯಾಯʼ ಎನ್ನುವ ಹೊಸ ಘೋಷ ವಾಕ್ಯದೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಕೌಟ್ ಕದನದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆದ್ರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರ ನಡೆಯಿತು. ಈ ಆವೃತ್ತಿಯಲ್ಲಿ ಪ್ರಬಲ ಪಡೆ ರಚಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಟ್ರೋಫಿ ಗೆದ್ದು ಬೀಗಿತು.
ಅಹಮದಾಬಾದ್: ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.
2009, 2011, 2016ರ ಫೈನಲ್ ಪಂದ್ಯಗಳಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದ್ದ ಆರ್‌ಸಿಬಿ 4ನೇ ಬಾರಿ ಫೈನಲ್ ಕಂಟಕದಿಂದ ಮುಕ್ತಿ ಪಡೆದಿದೆ. ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. 4ನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಟ್ರೋಫಿ ಎತ್ತುವಲ್ಲಿ ಸಫಲವಾದ ಆರ್‌ಸಿಬಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಐಪಿಎಲ್ (IPL 2025) ಇತಿಹಾಸ ಪುಟ ಸೇರಿದೆ.
191 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಶುಭಾರಂಭವನ್ನೇ ಪಡೆದಿತ್ತು. ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 43 ರನ್‌ಗಳ ಜೊತೆಯಾಟ ನೀಡಿತ್ತು, ಪವರ್ ಪ್ಲೇ ಮುಗಿಯುತ್ತಿದ್ದಂತೆ ರನ್ ವೇಗ ಕಡಿತಗೊಂಡಿತು. ಈ ನಡುವೆ ಪ್ರಭ್ ಸಿಮ್ರನ್, ಶ್ರೇಯಸ್ ಅಯ್ಯರ್ ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ ಆರ್‌ಸಿಬಿ ಗೆಲುವಿಗೆ ಪುಷ್ಠಿ ನೀಡಿತು. ಕೊನೆಯಲ್ಲಿ ಶಶಾಂಕ್ ಸಿಂಗ್ ಅವರ ಏಕಾಂಗಿ ಹೋರಾಟ ಕೂಡ ವ್ಯರ್ಥವಾಯಿತು.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ತಲಾ 2 ವಿಕೆಟ್, ಯಶ್ ದಯಾಳ್, ಜೋಶ್ ಹೇಜಲ್ವುಡ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತ್ತು. ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ಪವರ್ ಪ್ಲೇನಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ನಿಧಾನಗತಿಯ ಬ್ಯಾಟಿಂಗ್ ಶುರು ಮಾಡಿತು. ಅಲ್ಲದೇ ಒಂದೆಡೆ ರನ್ ಕಲೆಹಾಕುತ್ತಿದ್ದ ಆರ್‌ಸಿಬಿ ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಿತ್ತು. ಕ್ಷಣಕ್ಷಣಕ್ಕೂ ಅಭಿಮಾನಿಗಳ ಎದೆಬಡಿತ ಹೆಚ್ಚಾಗುತ್ತಿತ್ತು.
ಮೊದಲ ವಿಕೆಟ್‌ಗೆ ಸಾಲ್ಟ್ – ಕೊಹ್ಲಿ ಜೋಡಿ 18 ರನ್, 2ನೇ ವಿಕೆಟ್‌ಗೆ ಮಯಾಂಕ್ ಅಗರ್ವಾಲ್ 38 ರನ್, 3ನೇ ವಿಕೆಟಿಗೆ ಕೊಹ್ಲಿ-ರಜತ್ ಪಾಟಿದಾರ್ ಜೋಡಿ 27 ಎಸೆತಗಳಲ್ಲಿ ಸ್ಫೋಟಕ 40 ರನ್, 4ನೇ ವಿಕೆಟಿಗೆ ಕೊಹ್ಲಿ-ಲಿವಿಂಗ್‌ಸ್ಟೋನ್ ಜೋಡಿ 35 ರನ್ ಜೊತೆಯಾಟ ನೀಡಿತ್ತು. ಆದ್ರೆ 6ನೇ ವಿಕೆಟಿಗೆ ಜಿತೇಶ್ ಶರ್ಮಾ ಹಾಗೂ ಲಿವಿಂಗ್‌ಸ್ಟೋನ್ ಜೋಡಿ 12 ಎಸೆತಗಳಲ್ಲಿ ಸ್ಫೋಟಕ 36 ರನ್ ಜೊತೆಯಾಟ ನೀಡಿತ್ತು. ಇವರಿಬ್ಬರ ಸಿಕ್ಸರ್, ಬೌಂಡರಿ ಆಟ ಕೂಡ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಆದರೆ ಇವರಿಬ್ಬರ ಆಟಕ್ಕೂ ಪಂಜಾಬ್ ಬೌಲರ್‌ಗಳು ಬ್ರೇಕ್ ಹಾಕಿದ್ರು.
ಕೈಲ್ ಜೆಮಿಸನ್ ಬೌಲಿಂಗ್ ವೇಳೆ ಲಿವಿಂಗ್‌ಸ್ಟೋನ್ ಎಲ್‌ಬಿಡಬ್ಲ್ಯೂಗೆ ಪೆವಿಲಿಯನ್‌ಗೆ ತುತ್ತಾಗಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ಕನ್ನಡಿಗ ವಿಜಯ್ ಕುಮಾರ್ ವೈಶಾಕ್‌ನ ಮಾರಕ ದಾಳಿಗೆ ಜಿತೇಶ್ ಶರ್ಮಾ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು. ಇದು ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಕನಸಿಗೆ ಭಾರೀ ಹೊಡೆತ ನೀಡಿತು. ಕೊನೆಯಲ್ಲಿ ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 190 ರನ್ ಗಳಿಸಿತು.
ಪಂಜಾಬ್ ಪರ ಅರ್ಷ್‌ದೀಪ್ ಸಿಂಗ್, ಕೈಲ್ ಜೆಮಿಸನ್ ತಲಾ ಮೂರು ವಿಕೆಟ್ ಕಿತ್ತರೆ, ಅಜ್ಮತುತ್ತ ಒಮರ್ಝೈ, ವಿಜಯ್ ಕುಮಾರ್ ವೈಶಾಕ್, ಚಹಲ್ ತಲಾ ಒಂದು ವಿಕೆಟ್ ಕಿತ್ತರು.